ಟರ್ನಿಂಗ್ ನಲ್ಲಿ ಎರಡು ಅಕ್ಷಗಳು ಮತ್ತು ಸ್ಪಿಂಡಲ್ ಇಂತಹ ಕಾಂಬಿನೇಶನ್ ಗಳಿರುತ್ತವೆ. ಹಾರಿಝಾಂಟಲ್ Z ಅಕ್ಷ ಮತ್ತು ಅದಕ್ಕೆ ವಿರುದ್ಧವಾಗಿ X ಅಕ್ಷವಿರುತ್ತದೆ. ಸಾಮಾನ್ಯವಾದ ಒಂದು ರೇಖೆಯಲ್ಲಿರುವ ಟರ್ನಿಂಗ್ ನೊಂದಿಗೆ ಆರ್ಕ್ ಅಥವಾ ತ್ರಿಜ್ಯವಿರುವ ಕಾರ್ಯವಸ್ತುಗಳ ಯಂತ್ರಣೆಯನ್ನು ಮಾಡುವುದೂ ಸಾಧ್ಯವಿದೆ.
ಚಿತ್ರ ಕ್ರ. 1
ಈ ಕೆಳಗಿನ ಉದಾಹರಣೆಯಲ್ಲಿ ಕಾರ್ಯವಸ್ತುವಿನಲ್ಲಿರುವ ವಿವಿಧ ತ್ರಿಜ್ಯಗಳ ಯಂತ್ರಣೆಯನ್ನು ಟರ್ನಿಂಗ್ ಮಶಿನ್ ನಲ್ಲಿ ಯಾವ ರೀತಿಯಲ್ಲಿ ಮಾಡಬೇಕು, ಎಂಬುದನ್ನು ತೋರಿಸಲಾಗಿದೆ. ಮೊದಲನೆಯ ಉದಾಹರಣೆಯಲ್ಲಿ ಮೂರು R5 ಆರ್ಕ್ ರೇಡಿಯಸ್, ಆದರೆ R10 ನ ಒಂದು ಆರ್ಕ್ ತ್ರಿಜ್ಯ (ಚಿತ್ರ ಕ್ರ. 1) ಇವುಗಳ ಯಂತ್ರಣೆಯನ್ನು ಮಾಡುವಾಗ ಅನೇಕ ಸವಾಲುಗಳಿರುತ್ತವೆ. ಉದಾಹರಣೆ 2 ರಲ್ಲಿ R6 ಆರ್ಕ್ ಕರ್ವ್ಹ್ ಮತ್ತು ಚ್ಯಾಂಫರ್ (ಚಿತ್ರ ಕ್ರ. 2) ಮಾಡಬೇಕಾಗಿದೆ. ಅದಕ್ಕೋಸ್ಕರ ಪ್ರೊಗ್ರಾಮ್, ಕಮಾಂಡ್ ಮತ್ತು ಸ್ವಷ್ಟೀಕರಣ ಈ ರೀತಿಯಲ್ಲಿ ಈ ಮುಂದೆ ನೀಡಲಾಗಿದೆ.
ಕೋಷ್ಟಕ ಕ್ರ. 1
ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಯಂತ್ರಭಾಗಕ್ಕೆ ಅನೇಕ ಜಾಗದಲ್ಲಿ ಆರ್ಕ್ ಕರ್ವ್ಹ್ ಮಾಡಲು ಆರ್ಕ್ ತ್ರಿಜ್ಯದ ಮಾಪನಗಳಲ್ಲಿ ಯಂತ್ರಣೆಯನ್ನು ಮಾಡಬೇಕಾಗಿದೆ. ಈ ಯಂತ್ರಭಾಗಗಳ ದೊಡ್ಡ ವ್ಯಾಸವು 80 ಮಿ.ಮೀ. ಇದ್ದು ಚಿಕ್ಕ ವ್ಯಾಸವು 30 ಮಿ.ಮೀ. ಇದೆ.
R5 ರ 3 ಆರ್ಕ್ ತ್ರಿಜ್ಯಗಳಿಗೆ ಮತ್ತು R10 ರ 1 ಆರ್ಕ್ ತ್ರಿಜ್ಯಕ್ಕೆ ಯಂತ್ರಣೆಯನ್ನು ಮಾಡಬೇಕಾಗಿದೆ. ಅದಕ್ಕೋಸ್ಕರ ಬೇಕಾಗಿರುವ ಪ್ರೊಗ್ರಾಮ್ ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿದೆ.
ಚಿತ್ರ ಕ್ರ. 2 ರಲ್ಲಿ ತೋರಿಸಿರುವ ಯಂತ್ರಭಾಗಗಳ ಒಂದು ಬದಿಯಲ್ಲಿ ವ್ಯಾಸವು 38 ಮಿ.ಮೀ. ಇದ್ದು ಇನ್ನೊಂದು ಬದಿಯ ವ್ಯಾಸವು 18 ಮಿ.ಮೀ. ಇದೆ. 18 ಮಿ.ಮೀ. ವ್ಯಾಸದ ಬದಿಯಲ್ಲಿ R6 ತ್ರಿಜ್ಯದಲ್ಲಿ ಯಂತ್ರಣೆಯನ್ನು ಮಾಡಬೇಕಾಗಿದೆ. ಮಧ್ಯಭಾಗದಲ್ಲಿ 36 ಮಿ.ಮೀ.
ವ್ಯಾಸವಿದ್ದು ಅಲ್ಲಿ ಚ್ಯಾಂಫರ್ ಮಾಡಬೇಕಾಗಿದೆ. ಇದಕ್ಕೋಸ್ಕರದ ಪ್ರೊಗ್ರಾಮ್ ಕೋಷ್ಟಕ ಕ್ರ. 2 ರಲ್ಲಿ ನೀಡಲಾಗಿದೆ.
ಚಿತ್ರ ಕ್ರ. 2
8625975219
sheetalcomp@yahoo.com
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಇದರ ಕುರಿತು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ಈ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.