ಇಂದಿನ ಮಾಹಿತಿ ತಂತ್ರಜ್ಞಾನದ ವಿಶ್ವದಲ್ಲಿ ಕಡಿಮೆ ವೇಳೆಯಲ್ಲಿ ಹೆಚ್ಚು ಕೆಲಸ ಮಾಡಬಲ್ಲಂತಹ ಅತಿ ವೇಗ ಮತ್ತು ನಿಖರವಾದ ಸಿ.ಎನ್.ಸಿ. ಮಶಿನ್ ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗ CAD/CAM ನ ಬಳಕೆಯು ಹೆಚ್ಚುತ್ತಿದೆ. ಅಲ್ಲದೇ ಇದರಿಂದ ಮುಂದಿನ ಎರಡು ರೀತಿಗಳಲ್ಲಿ ಸಿ.ಎನ್.ಸಿ. ನಿಯಂತ್ರಣದ ಪ್ರೊಗ್ರಾಮ್ ಗಳನ್ನು ತಯಾರಿಸಲಾಗುತ್ತದೆ, ಎಂಬುದು ತಮಗೆ ತಿಳಿದಿರುವ ವಿಷಯವೇ ಸರಿ.
1. ಮ್ಯಾನ್ಯುವಲ್ ಪ್ರೊಗ್ರಾಮ್ ಇನ್ ಪುಟ್ : ಇದರಲ್ಲಿ ಪ್ರೊಗ್ರಾಮರ್ ಅವನ ನಿಪುಣತೆಗೆ ಅನುಸಾರವಾಗಿ ಸ್ವಂತ ವಿಚಾರ ಮಾಡಿಯೇ ಪ್ರೊಗ್ರಾಮ್ ಬರೆಯುತ್ತಾನೆ ಮತ್ತು ಮಶಿನ್ ನ ಕಂಟ್ರೋಲ್ ಸಿಸ್ಟಮ್ ನಲ್ಲಿ ಸೇರಿಸುತ್ತಾನೆ.
2. ಕಂಪ್ಯೂಟರ್ ನ ಸಹಾಯದಿಂದ ಉತ್ಪಾದನೆ (ಕಂಪ್ಯೂಟರ್ ಎಡೆಡ್ ಮ್ಯಾನ್ಯುಫ್ಯಾಕ್ಚರಿಂಗ್, CAM) ಇದರಲ್ಲಿ ಒಂದು ಅತ್ಯಾಧುನಿಕವಾದ ಸಾಫ್ಟ್ ವೇರ್ ಮೂಲಕ ಯಂತ್ರಭಾಗಗಳ ಮಾಡೆಲ್ ತಯಾರಿಸಲಾಗುತ್ತದೆ. ಇದರ ನಂತರ ಅದಕ್ಕೆ ಯಂತ್ರಣೆಯನ್ನು ಮಾಡಲು ಬೇಕಾಗಿರುವ ಡಾಟಾ ಪೂರೈಸಿ ಕಂಪ್ಯೂಟರ್ ಮೂಲಕ ಕೆಲವು ಕ್ಯಾಲ್ಕ್ಯುಲೇಶನ್ ಮಾಡಲಾಗುತ್ತದೆ ಮತ್ತು ಪ್ರೊಗ್ರಾಮ್ ತಯಾರಿಸಲಾಗುತ್ತದೆ.
ಈ ಎರಡೂ ರೀತಿಗಳೂ ಪ್ರಚಲಿತವಾಗಿವೆ. ಅಲ್ಲದೇ ಎಲ್ಲ ಸಿ.ಎನ್.ಸಿ.ಯನ್ನು ಬಳಸುವವರು ಇದೇ ರೀತಿಯಲ್ಲಿ ಬಳಸುತ್ತಿದ್ದರು. ಹಾಗೆ ನೋಡಿದಲ್ಲಿ ಮ್ಯಾನ್ಯುವಲ್ ಪ್ರೊಗ್ರಾಮ್ ಇನ್ ಪುಟ್ ರೀತಿಯಲ್ಲಿ ಅನೇಕ ರೀತಿಯ ಗಣನೆಯನ್ನು ಮಾಡಬೇಕಾಗುತ್ತದೆ. ಇದಕ್ಕೋಸ್ಕರ ತುಂಬಾ ಸಮಯವು ಬೇಕಾಗುತ್ತದೆ. ಅಲ್ಲದೇ ಒಂದು ಚಿಕ್ಕ ತಪ್ಪು ಕೂಡಾ ಅಪಾಯವನ್ನೊಡ್ಡಬಲ್ಲದು ಮತ್ತು ಇದರಿಂದಾಗಿ ಮಶಿನ್ ನಲ್ಲಿ ಅಪಘಾತಗಳಾಗುವ ಸಾಧ್ಯತೆ ಇರುತ್ತದೆ.
ಕೋಷ್ಟಕ ಕ್ರ. 1 : ವೇರಿಯೇಬಲ್ ನ ವಿಧಗಳು
ಮ್ಯಾಜಿಕ್ (ಮ್ಯಾಕ್ರೋ) ಪ್ರೊಗ್ರಾಮ್ ಈ ಕೆಲಸವನ್ನು ಹೆಚ್ಚು ಸುಲಭವಾಗಿ ಹೇಗೆ ನಿರ್ವಹಿಸುತ್ತದೆ ಮತ್ತು ಪ್ರೊಗ್ರಾಮ್ ನಲ್ಲಿ ಮ್ಯಾಕ್ರೋ ವೇರಿಯೇಬಲ್ ಬಳಸಿ ಕಡಿಮೆ ಸಮಯದಲ್ಲಿ ಸುಲಭವಾದ ಪ್ರೊಗ್ರಾಮ್ ಹೇಗೆ ತಯಾರಿಸಬಹುದು, ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ನಾವು ಮಾಡೋಣ. ಮ್ಯಾಜಿಕ್ ಪ್ರೊಗ್ರಾಮ್ ಅಂದರೆ ಮ್ಯಾಕ್ರೊ ಪ್ರೊಗ್ರಾಮ್ ಆಗಿರುತ್ತದೆ.
ಮ್ಯಾಕ್ರೊ ಪ್ರೊಗ್ರಾಮಿಂಗ್
ಮ್ಯಾಕ್ರೊ ಪ್ರೊಗ್ರಾಮಿಂಗ್ ಇದು ಪ್ರೊಗ್ರಾಮಿಂಗ್ ತಂತ್ರದ ಒಂದು ಭಾಗವಾಗಿದೆ. ಈ ಮಾನದಂಡವನ್ನು ಸಿ.ಎನ್.ಸಿ. ಪ್ರೊಗ್ರಾಮಿಂಗ್ ಪದ್ಧತಿಯಲ್ಲಿ ಹೆಚ್ಚು ಶಕ್ತಿ ಮತ್ತು ಪ್ಲೆಕ್ಸಿಬಿಲಿಟಿಯನ್ನು ನಿರ್ಮಿಸಲು ಹೆಚ್ಚುವರಿ ನಿಯಂತ್ರಣೆ ಮತ್ತು ವೈಶಿಷ್ಟ್ಯಗಳನ್ನು ಲಭ್ಯವಾಗಿರಿಸುತ್ತದೆ. ಎಲ್ಲ ಸಿ.ಎನ್.ಸಿ. ಸಿಸ್ಟಮ್ ಗೋಸ್ಕರ ಮ್ಯಾಕ್ರೊ ಪ್ರೊಗ್ರಾಮಿಂಗ್ ಒಂದು ಭಾಷೆಗೆ ಆಧರಿಸಿರುವ ಪದ್ಧತಿಯಾಗಿದೆ. ಸಿ.ಎನ್.ಸಿ. ಸಿಸ್ಟಮ್ ನಲ್ಲಿ ಸಾಮಾನ್ಯವಾಗಿ C++ ಅಥವಾ ವಿಜ್ಯುವಲ್ ಬೆಸಿಕ್ ಇಂತಹ ಉಚ್ಚಮಟ್ಟದ ಭಾಷೆ, ಅವುಗಳ ಅನೇಕ ವಿಧಗಳು ಮತ್ತು ಡೆರಿವೆಟಿವ್ ಬಳಸಲಾಗುತ್ತದೆ. ವಿವಿಧ ಕಂಪ್ಯೂಟರ್ ಅಪ್ಲಿಕೇಶನ್ ಗಳಿಗೋಸ್ಕರ ಅಥವಾ ಅತ್ಯಾಧುನಿಕ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲು ಕಂಪ್ಯೂಟರ್ ಸಾಫ್ಟ್ ವೇರ್ ವ್ಯವಸಾಯಗಾರರು ಅದನ್ನು ಎಲ್ಲೆಡೆಯಲ್ಲಿಯೂ ಬಳಸುತ್ತಾರೆ.
ಫಾನುಕ್ ಮ್ಯಾಕ್ರೋ ಇದು ಕೇವಲ ಕಟ್ಟುನಿಟ್ಟಾದ ವ್ಯಾಖ್ಯೆ ಇರುವ ಭಾಷೆಯಾಗಿದ್ದು, ಇದರ ಹೊರತಾಗಿ ಅದು ಕೇವಲ ಸಿ.ಎನ್.ಸಿ. ಮಶಿನ್ ನಲ್ಲಿ ವಿಶೇಷ ಕಾರಣಗಳಿಗೋಸ್ಕರ (ಸ್ಪೆಶಲ್ ಪರ್ಪಸ್) ಬಳಸಲಾಗುವ ಒಂದು ಸಾಫ್ಟ್ ವೇರ್ ಆಗಿರುತ್ತದೆ. ಆದರೂ ಕೂಡಾ ಸಿ.ಎನ್.ಸಿ. ಮ್ಯಾಕ್ರೋ ಪ್ರೊಗ್ರಾಮ್ ಪ್ರಗತಿಪರ ಕಂಪ್ಯೂಟರ್ ಭಾಷೆಗಳಲ್ಲಿ ಕಂಡುಬರುವ ಅನೇಕ ವೈಶಿಷ್ಟ್ಯಗಳನ್ನು ಬಳಸುತ್ತಾರೆ.
ವೈಶಿಷ್ಟ್ಯಗಳು
ಫಾನುಕ್ ಮ್ಯಾಕ್ರೋದಲ್ಲಿ ಈ ಮುಂದಿನ ವೈಶಿಷ್ಟ್ಯಗಳು ಇರುತ್ತವೆ.
1. ಅಂಕ ಗಣಿತ ಮತ್ತು ಬೀಜ ಗಣಿತ ಇವುಗಳಿಗೆ ಆಧರಿಸಿರುವ ಗಣನೆ.
2. ತ್ರಿಕೋನದ ಆಯಾಮಗಳಿಗೆ ಆಧರಿಸಿರುವ ಗಣನೆ.
3. ವೇರಿಯೇಬಲ್ ಮಾಹಿತಿಯ ಸಂಗ್ರಹ
4. ಲಾಜಿಕಲ್ ಆಪರೇಶನ್
5. ಲೂಪಿಂಗ್
6. ಕೊರತೆಗಳ ಪರೀಕ್ಷೆ
7. ಅಲಾರ್ಮ್ ಜನರೇಶನ್
8. ಇನ್ ಪುಟ್ ಮತ್ತು ಔಟ್ ಪುಟ್ ಮತ್ತು ಇನ್ನಿತರ ಅನೇಕ ವೈಶಿಷ್ಟ್ಯಗಳು.
ಕೋಷ್ಟಕ ಕ್ರ. 3 : ಮ್ಯಾನ್ಯುವಲ್ ಮತ್ತು ಮ್ಯಾಕ್ರೊ ಪ್ರೊಗ್ರಾಮ್
1. ಸಿ.ಎನ್.ಸಿ. ಮಶಿನ್ ಮತ್ತು ಕಂಟ್ರೋಲ್ : ಕಂಟ್ರೋಲ್ ಆಪರೇಶನ್ ಪ್ರೊಗ್ರಾಮಿಂಗ್
2. ಯಂತ್ರಣೆಯ ಕೌಶಲ್ಯ : ಯಂತ್ರಣೆಯನ್ನು ಹೇಗೆ ಮಾಡಬೇಕು?
3. ಮೂಲಭೂತ ಗಣಿತದ ಕೌಶಲ್ಯ : ಗಣನೆ, ಸೂತ್ರಗಳು
4. ಪ್ರೊಗ್ರಾಮ್ ರಚನೆಯನ್ನು ಅಭಿವೃದ್ಧಿ ಪಡಿಸುವ ನಿಪುಣತೆ : ಸೌಲಭ್ಯ ಮತ್ತು ಅನುಕೂಲತೆ.
5. ಆಫ್ ಸೆಟ್ ಮತ್ತು ಟೂಲ್ ನ ಕಾಂಪೆನ್ಶೇಶನ್ ಅಪ್ಲಿಕೇಶನ್ ಕೌಶಲ್ಯ : ವಿವಿಧ ಹೊಂದಾಣಿಕೆಗಳು.
6. ಫಿಕ್ಸ್ಡ್ ಸೈಕಲ್ : ಅವುಗಳ ಕೆಲಸದ ಅನುಷ್ಠಾನ ಹೇಗೆ ಆಗುತ್ತದೆ, ಎಂಬುದರ ಕುರಿತು ವಿಸ್ತಾರವಾದ ಮಾಹಿತಿ.
7. ಮಲ್ಟಿನೆಸ್ಟಿಂಗ್ ಪದ್ಧತಿಯನ್ನು ಆಳವಡಿಸಿರುವ ಸಬ್-ಪ್ರೊಗ್ರಾಮ್.
8. ಸಿಸ್ಟಮ್ ಪ್ಯಾರಾಮೀಟರ್, ಅವುಗಳ ಧ್ಯೇಯ ಮತ್ತು ಕಾರ್ಯಗಳು.
ಸಿ.ಎನ್.ಸಿ. ಕಸ್ಟಮ್ ಮ್ಯಾಕ್ರೊ ಪ್ರೊಗ್ರಾಮರ್ ಯಶಸ್ಸನ್ನು ಪಡೆಯುವಲ್ಲಿ ಕಂಪ್ಯೂಟರ್ ಭಾಷೆಗಳ ಅಲ್ಪಸ್ವಲ್ಪ ತಿಳಿವಳಿಕೆಯೂ ಸಾಕಾಗುತ್ತದೆ. ಈ ಹಿಂದೆ ಉಲ್ಲೇಖಿಸಿರುವ ವಿಜ್ಯುವಲ್ ಬೇಸಿಕ್, C++, ಓಲ್ಡ್ ಪಾಸ್ಕಲ್ ಡೆಲ್ಫೀ, ಲಿಸ್ಪ್ ಟೀ-ಇನ್, ಆಟೊಕ್ಯಾಡ್ ಮತ್ತು ಇನ್ನಿತರ ಅನೇಕ ಭಾಷೆಗಳ ಜ್ಞಾನ, ಮ್ಯಾಕ್ರೊ ನ ಕಲಿಕೆಯಲ್ಲಿ ದೃಢವಾದ ತಳಹದಿಯನ್ನು ನಿರ್ಮಿಸುತ್ತವೆ.
G ಕೋಡ್ ಮತ್ತು M ಕೋಡ್ ಕುರಿತು ಗಹನ ಜ್ಞಾನ ಇರುವುದಂತೂ ಮೂಲಭೂತವಾದ ಅಗತ್ಯತೆಯಾಗಿದೆ. ಸಬ್-ಪ್ರೊಗ್ರಾಮ್ ನಲ್ಲಿ ಉನ್ನತ ಜ್ಞಾನವಿರುವುದೂ ಅತ್ಯಂತ ಆವಶ್ಯಕವಾಗಿದೆ. ಸಬ್-ಪ್ರೊಗ್ರಾಮ್ ಇದೊಂದು ಮ್ಯಾಕ್ರೊ ಅಭಿವೃದ್ಧಿಯ ಮೊದಲನೆಯ ವೈಚಾರಿಕ ಹಂತವಾಗಿದೆ.
ನಮ್ಮಲ್ಲಿ ಮ್ಯಾಕ್ರೊ ಪರ್ಯಾಯವನ್ನು ಇನ್ ಸ್ಟಾಲ್ ಮಾಡಲಾಗಿದೆಯೇ, ಎಂಬುದನ್ನು ಪರಿಶೀಲಿಸಿರಿ.
ಈಗ ತಮಗೆ ಮ್ಯಾಕ್ರೊ ಅಂದರೆ ಏನು ಎಂದು ತಿಳಿಯದಿದ್ದರೂ ಕೂಡಾ ನಾವು ಬಳಸುತ್ತಿರುವ ನಿಯಂತ್ರಣೆಯ ವ್ಯವಸ್ಥೆಯಲ್ಲಿ (ಕಂಟ್ರೋಲ್ ಸಿಸ್ಟಮ್) ಮ್ಯಾಕ್ರೊ ಪರ್ಯಾಯವನ್ನು ಇನ್ ಸ್ಟಾಲ್ ಮಾಡಲಾಗಿದೆಯೇ ಇಲ್ಲವೇ, ಎಂಬುದನ್ನು ನಾವು ಮ್ಯಾಕ್ರೊ ಪ್ರೊಗ್ರಾಮ್ ಬರೆಯುವ ಮುಂಚೆಯೇ ತಿಳಿದುಕೊಳ್ಳುವುದು ಅತ್ಯಾವಶ್ಯಕವಾಗಿದೆ. ಇದನ್ನು ಹುಡುಕಲು ಒಂದು ಸುಲಭವಾದ ದಾರಿ ಇದೆ ಮತ್ತು ಇದಕ್ಕೋಸ್ಕರ ಯಾವುದೇ ವಿಶೇಷ ರೀತಿಯ ಪ್ರೊಗ್ರಾಮ ನ ಆವಶ್ಯಕತೆ ಇರುವುದಿಲ್ಲ. ಸಿ.ಎನ್.ಸಿ. ಮಶಿನ್ ಗೆ MDI (ಮ್ಯಾನ್ಯುವಲ್ ಡಾಟಾ ಇನ್ ಪುಟ್) ಮೋಡ್ ನಲ್ಲಿ ಸೆಟ್ ಮಾಡಿರಿ ಮತ್ತು ಈ ಮುಂದಿನ ಕಮಾಂಡ್ ಟೈಪ್ ಮಾಡಿರಿ. #101 = 1
ನಾವು ಸೈಕಲ್ ಸ್ಟಾರ್ಟ್ ಬಟನ್ ಒತ್ತಿದಾಗ ಎರಡರಲ್ಲಿ ಒಂದು ಸಾಧ್ಯತೆ ಉದ್ಭವಿಸಬಲ್ಲದು. ಒಂದು ವೇಳೆ ಕಂಟ್ರೋಲ್ ಸಿಸ್ಟಮ್ ಕಂಟ್ರೋಲ್ (?) ಅಥವಾ ಎರರ್ ಈ ಸ್ಥಿತಿಯನ್ನು ತೋರಿಸದೇ ಸಿಂಟ್ಯಾಕ್ಸ್ ನ ಕಮಾಂಡ್ ಸ್ವೀಕರಿಸುತ್ತಿದ್ದಲ್ಲಿ, ಮ್ಯಾಕ್ರೊ ಪರ್ಯಾಯವು ಇನ್ ಸ್ಟಾಲ್ ಆಗಿದೆ, ಎಂಬುದೇ ಇದರ ಅರ್ಥ. ಆದರೆ ಒಂದು ವೇಳೆ ಕಂಟ್ರೋಲ್ ಸಿಸ್ಟಮ್ ಅಲಾರ್ಮ್ ಸಂದೇಶ (ಹೆಚ್ಚಾಗಿ ‘ಸಿಂಟ್ಯಾಕ್ಸ್ ನಲ್ಲಿ ತೊಡಕು’ ಅಥವಾ ‘ಅಡ್ರೆಸ್ ಸಿಕ್ಕಿಲ್ಲ’ ಎಂಬ ಸಂದೇಶವಿರುತ್ತದೆ) ನೀಡುತ್ತಿದ್ದಲ್ಲಿ ಆ ಕಂಟ್ರೋಲರ್ ನಲ್ಲಿ ಮ್ಯಾಕ್ರೋ ಪರ್ಯಾಯವನ್ನು ಇನ್ ಸ್ಟಾಲ್ ಮಾಡಲಾಗಿಲ್ಲ. ಮೇಲಿನ ಉದಾಹರಣೆಯಲ್ಲಿ ತೋರಿಸಿದಂತೆ ಡಾಟಾ ಅಳವಡಿಸಲಾಗಿದೆ, ಎಂಬುದನ್ನು ಖಾತರಿ ಪಡಿಸಿಕೊಳ್ಳಿರಿ. ಅದರಲ್ಲಿ # ಈ ಚಿಹ್ನೆಯನ್ನು ಅಳವಡಿಸಲಾಗಿರಬೇಕು. ಇದರಂತೆ ವೇರಿಯೇಬಲ್ ಮತ್ತು ಅದರ ಮೌಲ್ಯವು ಸರಿಯಾಗಿರಬೇಕು. ಅದರಲ್ಲಿ ಸ್ಪೇಸ್ ಅಥವಾ ಇನ್ನಿತರ ಯಾವುದೇ ರೀತಿಯ ತಪ್ಪು ಇರಬಾರದು. ನಾವು ಮ್ಯಾಕ್ರೊನ ಉಪಲಬ್ಧತೆಯನ್ನು ಪರಿಶೀಲಿಸುವ ಒಂದು ನೇರವಾದ ದಾರಿಯನ್ನು ತೋರಿಸಿದ್ದೇವೆ. # ಈ ಚಿಹ್ನೆಗೆ ವೇರಿಯೇಬಲ್ ಎಂದು ಹೇಳುತ್ತಾರೆ.
ಮ್ಯಾಕ್ರೊ ವೇರಿಯೇಬಲ್ ನ ವಿಧಗಳು
ಕೋಷ್ಟಕ ಕ್ರ. 1 ರಲ್ಲಿ ತೋರಿಸಿರುವ ಮ್ಯಾಕ್ರೊ ವೇರಿಯೇಬಲ್ ಎಲ್ಲ ಫಾನುಕ್ ಪದ್ಧತಿಗಳಲ್ಲಿ (ಮಾಡೆಲ್ಸ್) ಕಾರ್ಯಾನುಷ್ಠಾನವನ್ನು ಮಾಡುತ್ತದೆ. ಅವುಗಳನ್ನು ಒಟ್ಟು 4 ಭಾಗಗಳಲ್ಲಿ ವಿಂಗಡಿಸಲಾಗುತ್ತದೆ.
ಮ್ಯಾಕ್ರೊ ವೇರಿಯೇಬಲ್ ಇದು ಅವರ ಪ್ರಾರಂಭದ ಅಸೈನ್ ಮೆಂಟ್ ನಲ್ಲಿ ಮತ್ತು ಮ್ಯಾಕ್ರೊ ಬಾಡಿಯಲ್ಲಿರುವ ಅವರ ಬಳಕೆಯಲ್ಲಿ ಕಸ್ಟಮ್ ಮ್ಯಾಕ್ರೊಜ್ ನ ಎಲ್ಲಕ್ಕಿಂತಲೂ ಮಹತ್ತರವಾದ ವೈಶಿಷ್ಟವಾಗಿದೆ. ಕಸ್ಟಮ್ ಮ್ಯಾಕ್ರೋ ಇದು ವೇರಿಯೇಬಲ್ ಗೆ ಆಧರಿಸಿರುತ್ತದೆ. ಆದ್ದರಿಂದ ವೇರಿಯೇಬಲ್ ಏನು ಎಂಬುದರ ಕುರಿತು ಸಂಕ್ಷಿಪ್ತವಾಗಿ ಅರಿತುಕೊಳ್ಳವುದು ಅತ್ಯಗತ್ಯವಾಗಿದೆ. ವೇರಿಯೇಬಲ್ ನ ವ್ಯಾಖ್ಯೆಯನ್ನು ಗಣಿತದ ಭಾಷೆಯಲ್ಲಿ ಈ ಮುಂದಿನಂತೆ ಮಾಡಬಹುದಾಗಿದೆ. ವೇರಿಯೇಬಲ್ ಇದೊಂದು ಗಣಿತದಲ್ಲಿರುವ ಆಯಾಮವಾಗಿದೆ. ಅದು ಅದಕ್ಕೆ ನಿರ್ಧರಿಸಿರುವ ಹಂತದಲ್ಲಿ ಮತ್ತು ಸ್ವರೂಪದಲ್ಲಿ (ರೇಂಜ್ ಮತ್ತು ಫಾರ್ಮೆಟ್) ಯಾವುದೇ ಮೌಲ್ಯವನ್ನು ನೀಡಬಲ್ಲದು.
ಗಣನೆ, ಲೂಪ್, ಫಂಕ್ಷನ್, ಬೂಲಿಯನ್ ಮತ್ತು ಫಾರ್ಮೆಟ್ ಕೋಷ್ಟಕ ಕ್ರ. 2 ರಲ್ಲಿ ನೀಡಲಾಗಿದೆ.
ಕೋಷ್ಟಕ ಕ್ರ. 2 ರಲ್ಲಿ ತೋರಿಸಿದಂತೆ ಪ್ರೊಗ್ರಾಮ್ ಮ್ಯಾಕ್ರೋಜ್ ಬಳಸಿ ಫಾರ್ಮೆಟ್ ಬರೆಯಬಹುದಾಗಿದೆ. ಇದನ್ನು ಬಳಸಿ ಅನೇಕ ಬಾರಿ ವಿವಿಧ ಗಣನೆ, ಲೂಪ್ ಮತ್ತು ಸುಸಂಗತವಾದ ಕೆಲಸಗಳನ್ನು ಮಾಡಬಹುದಾಗಿದೆ.
ಮ್ಯಾನ್ಯುವಲ್ ಪ್ರೊಗ್ರಾಮ್ ಮತ್ತು ಮ್ಯಾಕ್ರೊ ಪ್ರೊಗ್ರಾಮ್ ನ ಹೋಲಿಕೆ ಮತ್ತು ಮ್ಯಾಕ್ರೊ ಪ್ರೊಗ್ರಾಮ್ ನ ಲಾಭಗಳು
ಪ್ರೊಗ್ರಾಮ್ A1 ಎಂಬುದಾಗಿ ತೋರಿಸಿರುವ ಸಿ.ಎನ್.ಸಿ. ಲೇಥ್ ನಲ್ಲಿ 15 ಮಿ.ಮೀ. ರಫ್ ಫೇಸಿಂಗ್ ಗೋಸ್ಕರ (ಚಿಕ್ರ ಕ್ರ. 1) ತಗಲುವ ಮ್ಯಾನ್ಯುವಲ್ ಫೇಸಿಂಗ್ ಪ್ರೊಗ್ರಾಮ್ 74 ಬ್ಲಾಕ್ ನದ್ದಾಗಿದೆ. ಅದರಲ್ಲಿ ಬರವಣಿಗೆಯು ಹೆಚ್ಚು ಇದೆ ಮತ್ತು ಅದಕ್ಕೆ ಬೇಕಾಗುವ ಸೈಕಲ್ ಟೈಮ್ ಕೂಡಾ ಹೆಚ್ಚಾಗಿದೆ. ಹೋಲಿಕೆಯಲ್ಲಿ ಮ್ಯಾಕ್ರೊ ಪ್ರೊಗ್ರಾಮ್ ನಲ್ಲಿ (ಪ್ರೊಗ್ರಾಮ್ B1) ಸ್ವಲ್ಪ ಗಣನೆಯನ್ನು ಮಾಡಿ ಲೂಪ್ ತಯಾರಿಸಿ ಅದೇ ಕೆಲಸವನ್ನು ಕಡಿಮೆ ಬರವಣಿಗೆಯಿಂದ ಮತ್ತು ಕಡಿಮೆ ಸೈಕಲ್ ಟೈಮ್ ನಲ್ಲಿ ಮಾಡುವುದು ಸಾಧ್ಯ. ಇಷ್ಟೇ ಅಲ್ಲದೇ, ಈ ಪ್ರೊಗ್ರಾಮ್ ನಲ್ಲಿರುವ 4 ರಿಂದ 5 ಪಂಕ್ತಿಗಳಲ್ಲಿ ಅಲ್ಪ-ಸ್ವಲ್ಪ ಬದಲಾವಣೆಗಳನ್ನು ಮಾಡಿ ಅದನ್ನು ಇನ್ನೊಂದು ಯಂತ್ರಭಾಗಕ್ಕೂ ಬಳಸುವುದು ಸಾಧ್ಯ. ಹೊಸ ಪ್ರೊಗ್ರಾಮ್ ನಲ್ಲಿ ವಿಸ್ತಾರವಾದ ಬರವಣಿಕೆಯನ್ನು ಮಾಡುವ ಬದಲಾಗಿ ಈ ಪ್ರೊಗ್ರಾಮ್ ಕಾಪಿ ಮಾಡಿ ಅದರಲ್ಲಿರುವ ಕೆಲವೇ ಪಂಕ್ತಿಗಳಲ್ಲಿ ಸುಧಾರಣೆಯನ್ನು ಮಾಡಿ ಇದೇ ಫೇಸಿಂಗ್ ಪ್ರೊಗ್ರಾಮ್ ಇನ್ನೊಂದು ಯಂತ್ರಭಾಗಗಳಲ್ಲಿ ಬಳಸಬಲ್ಲೆವು. ಕೇವಲ ಬೇರೆಬೇರೆ ಆಕಾರದ ಅಳತೆಗಳನ್ನು ಅದರಲ್ಲಿ ನೀಡಿ ತಕ್ಷಣವೇ ಹೊಸ ಪ್ರೊಗ್ರಾಮ್ ತಯಾರಿಸಬಹುದಾಗಿದೆ. ಇದೇ ಫೇಸಿಂಗ್ ಪ್ರೊಗ್ರಾಮ್ ನ ಒಂದು ಉದಾಹರಣೆಯಾಗಿದೆ.
ಇದೇ ರೀತಿಯಲ್ಲಿ ಎಲ್ಲ ವಿವಿಧ ಕೆಲಸಗಳಿಗೋಸ್ಕರ ಈ ಫಂಕ್ಷನ್ ನಲ್ಲಿ ಸ್ವಲ್ಪ ಗಣನೆ ಮತ್ತು ಲೂಪ್, ಫಾರ್ಮೆಟ್ ಮತ್ತು ಫಂಕ್ಷನ್ ಜೋಡಿಸಿ ಕಡಿಮೆ ಪ್ರಮಾಣದ ಬರವಣಿಗೆಯಲ್ಲಿಯೇ ಕೆಲಸವನ್ನೇ ಮಾಡಬಹುದಾಗಿದೆ. ಮೇಲಿನ ಮ್ಯಾಕ್ರೊ ಪ್ರೊಗ್ರಾಮ್ ನಲ್ಲಿ ಕೇವಲ #110, #111, #112 ಮತ್ತು #113 ಇವುಗಳಲ್ಲಿ ಬದಲಾವಣೆ ಮಾಡಿ ವಿವಿಧ ಯಂತ್ರಭಾಗಗಳಿಗೆ ಇದೇ ಫೇಸಿಂಗ್ ಪ್ರೊಗ್ರಾಮ್ ನಿಂದ ಯಂತ್ರಣೆಯನ್ನು ಮಾಡಬಹುದಾಗಿದೆ.
ಕೋಷ್ಟಕ ಕ್ರ. 4 ರಲ್ಲಿ ನೀಡಿರುವ ಹೋಲಿಕೆ ಮತ್ತು ಮ್ಯಾಕ್ರೊ ಪ್ರೊಗ್ರಾಮ್ ನ ಲಾಭಗಳನ್ನು ವೀಕ್ಷಿಸಿದ ನಂತರ ನಾವು ಮ್ಯಾಕ್ರೊ ಪ್ರೊಗ್ರಾಮ್ ಗೆ ಮ್ಯಾಜಿಕ್ ಪ್ರೊಗ್ರಾಮ್ ಎಂಬುದಾಗಿಯೂ ಹೇಳಬಲ್ಲೆವು.
ಕೋಷ್ಟಕ ಕ್ರ. 4 : ಮ್ಯಾನ್ಯುವಲ್ ಮತ್ತು ಮ್ಯಾಕ್ರೊ ಪ್ರೊಗ್ರಾಮ್ ನ ಹೋಲಿಕೆ
ಮುನ್ನೆಚ್ಚರಿಕೆ
1. ಮ್ಯಾಕ್ರೊ ಪ್ರೊಗ್ರಾಮ್ ತಯಾರಿಸಲು ಅಥವಾ ಅದನ್ನು ಬಳಸಲು ಅದನ್ನು ಮುಂಚಿತವಾಗಿ ಅರಿತುಕೊಳ್ಳುವುದು ಅತ್ಯಾವಶ್ಯಕವಾಗಿದೆ.
2. ಮಶಿನ್ ಪ್ಯಾರಾಮೀಟರ್ ಅರಿತುಕೊಂಡ ನಂತರವೇ ಅದರಲ್ಲಿ ಬದಲಾವಣೆಗಳನ್ನು ಮಾಡಿರಿ.
3. ಮ್ಯಾಕ್ರೊ ಪ್ರಾರಂಭಿಸುವ ಮುಂಚೆ ಅದನ್ನು ಸೂಕ್ತ ರೀತಿಯಲ್ಲಿ ತಿಳಿದುಕೊಳ್ಳಿರಿ ಮತ್ತು ಯಾರೊಬ್ಬ ಸಲಹೆಗಾರರಿಂದ ತಮ್ಮಲ್ಲಿರುವ ಮ್ಯಾಕ್ರೊ ಪ್ರೊಗ್ರಾಮ್ ಪರಿಶೀಲಿಸಿಕೊಳ್ಳಿರಿ.
4. ಮ್ಯಾಕ್ರೊ ನಲ್ಲಿ ಗಣನೆಯನ್ನು ಮಾಡುವಾಗ ಜಾಗರೂಕತೆಯನ್ನು ವಹಿಸಿ.
5. ತಮ್ಮಲ್ಲಿರುವ ಮಶಿನ್ ನ ನಿರ್ಮಾಪಕರ ಸಲಹೆಯನ್ನು ಪಡೆಯಿರಿ. ಅವರಿಂದ ಮ್ಯಾಕ್ರೊ ಕುರಿತು ಕೇಳಿರಿ ಮತ್ತು ಅವರಿಂದ ಅದರ ಕುರಿತು ತಿಳಿದುಕೊಳ್ಳಿರಿ.
ನಾವು ಮುನ್ನೆಚ್ಚರಿಕೆಯನ್ನು ವಹಿಸಿ ಉಚ್ಚಮಟ್ಟ ಮ್ಯಾಜಿಕ್ (ಮ್ಯಾಕ್ರೊ) ಪ್ರೊಗ್ರಾಮ್ ಬರೆಯಬಲ್ಲೆವು.
9662417334
prajeshjolapara@gmail.com
ಪ್ರಜೇಶ್ ಆರ್. ಜೋಲಾಪರಾ ಇವರಿಗೆ ಸಿ.ಎನ್.ಸಿ. ಪ್ರೊಗ್ರಾಮಿಂಗ್ ಮತ್ತು ಯಂತ್ರಣೆಯಲ್ಲಿ 10 ವರ್ಷ ಕಾಲಾವಧಿಯ ಅನುಭವವಿದೆ. ಪ್ರಸ್ತುತ ಅವರು ಪ್ಯಾರಾಮೌಂಟ್ ಪಿಸ್ಟನ್ (ಜಾಮ್ ನಗರ್, ಗುಜರಾತ್) ಎಂಬಲ್ಲಿ ಸಿ.ಎನ್.ಸಿ. ಮಶಿನ್ ಶಾಪ್ ಇನ್ ಚಾರ್ಜ್ ಎಂಬ ಹುದ್ದೆಯಲ್ಲಿ ಕಾರ್ಯನಿರತರಾಗಿದ್ದಾರೆ.