ಫಾರ್ಮ್ ಮತ್ತು ಪ್ರೊಫೈಲ್ ಗೋಸ್ಕರ ಟೂಲ್

12 Sep 2021 12:43:53
ಟರ್ನಿಂಗ್ ಪ್ರಕ್ರಿಯೆಯಲ್ಲಿ ಸಾಮಾನ್ಯ ಯಂತ್ರಣೆಯ ಹೋಲಿಕೆಯಲ್ಲಿ ಫಾರ್ಮ್ ಅಥವಾ ಪ್ರೊಫೈಲ್ ನ ಯಂತ್ರಣೆಯನ್ನು ಮಾಡುವಾಗ ಅದರಲ್ಲಿರುವ ಕ್ಲಿಷ್ಟಕರವಾದ ಜಾಮೆಟ್ರಿಯಿಂದಾಗಿ ಟೂಲ್ ಆಯ್ಕೆ ತುಂಬಾ ಮಹತ್ವದ್ದಾಗಿರುತ್ತದೆ. ಫಾರ್ಮ್ ನಲ್ಲಿ ಅಪೇಕ್ಷಿಸಲಾಗಿರುವ ಆಕಾರವನ್ನು ಪಡೆಯುವಲ್ಲಿ ಆಯಾ ಜಾಗದಲ್ಲಿ ಅಡೆತಡೆಗಳಿಲ್ಲಿದೇ ಸಂಪರ್ಕವಾಗುವುದೇ ಇದರಲ್ಲಿರುವ ಪ್ರಮಾಖ ಸವಾಲಾಗಿದೆ. ಹೊರಗಿನ ಮತ್ತು ಅದರೊಂದಿಗೆ ಒಳ ಸರ್ಫೇಸ್ ನಲ್ಲಿರುವ ಪ್ರೊಫೈಲ್ ಗೆ ಸಕ್ಷಮವಾಗಿ ಯಂತ್ರಣೆಯನ್ನು ಮಾಡಬಲ್ಲ, ವಿಶಿಷ್ಟ ಜಾಮೆಟ್ರಿ ಇರುವ ಟೂಲ್ ಗಳ ಕುರಿತಾದ ಮಾಹಿತಿಯನ್ನು ಈ ಲೇಖನದಲ್ಲಿ ಓದಬಹುದು. 

img1_1  H x W:  
 
ಟರ್ನಿಂಗ್ ನಲ್ಲಿ ಫಾರ್ಮ್ ಎರಡು ವಿಧಗಳಲ್ಲಿ ತಯಾರಿಸಬಹುದು. ಮೊದಲನೆಯದಾಗಿ ಸಿಂಗಲ್ ಪಾಯಿಂಟ್ ಟೂಲ್ ಮೂಲಕ ಯಂತ್ರಣೆ ಮತ್ತು ಎರಡನೆಯದಾಗಿ ನೇರವಾಗಿ ಟೂಲ್ ನ್ನು ಒಳಭಾಗದಲ್ಲಿ ನುಗ್ಗಿಸುವುದು. (ಡೈರೆಕ್ಟ್ ಪ್ಲಂಜಿಂಗ್). ಪ್ಲಂಜಿಂಗ್ ಪ್ರಕ್ರಿಯೆಯಲ್ಲಿ ಯಂತ್ರಭಾಗಗಳಿಗೆ ಬೇಕಾಗಿರುವ ಫಾರ್ಮ್ ತಯಾರಿಸಲು ಇನ್ಸರ್ಟ್ ನಲ್ಲಿ ಅದೇ ರೀತಿಯ ಫಾರ್ಮ್ ಅಭಿವೃದ್ಧಿ ಪಡಿಸಿ ಟೂಲ್ ನಲ್ಲಿ ನೇರವಾಗಿ ಒಳಗೆ ತಳ್ಳಿ ಪ್ಲಂಜಿಂಗ್ ಮಾಡಲಾಗುತ್ತದೆ. ಪ್ಲಂಜಿಂಗ್ ನಿಂದಾಗಿ ಸೈಕಲ್ ಟೈಮ್ ಕಡಿಮೆಯಾಗುತ್ತದೆ. ಬೇಕಾಗಿರುವ ಫಾರ್ಮ್ ತಯಾರಿಸಲು ಯಂತ್ರಣೆಯ ಪ್ರಕ್ರಿಯೆಯಿಂದ ಬೇಕಾಗುವ ಸಮಯವನ್ನು ಹೋಲಿಸಿದಲ್ಲಿ ಪ್ಲಂಜಿಂಗ್ ಪ್ರಕ್ರಿಯೆಗೆ ತುಂಬಾ ಕಡಿಮೆ ಸಮಯವು ಬೇಕಾಗುತ್ತದೆ. ಆದರೆ ಪ್ಲಂಜಿಂಗ್ ಒತ್ತಡ ಮತ್ತು ಯಂತ್ರಣೆಯ ಫೋರ್ಸ್ ಕೂಡಾ ಹೆಚ್ಚುತ್ತದೆ. ಇದನ್ನು ತಡೆಯಲು ಕ್ಲಿಯರನ್ಸ್ ಮತ್ತು ಟೂಲ್ ನ ಜಾಮೆಟ್ರಿಯನ್ನು ಯೋಗ್ಯ ರೀತಿಯಲ್ಲಿ ವಿಕಸಿಸಬೇಕಾಗುತ್ತದೆ.
 

img1_1  H x W:
 
ಚಿತ್ರ ಕ್ರ. 1 : ಸ್ಕ್ರೂ ಆನ್ ವಿಧದ ಇನ್ಸರ್ಟ್
 

ಫಾರ್ಮ್ ನ ವಿಧಗಳು
ಫಾರ್ಮ್ ನಲ್ಲಿ ಒಳ (ಇಂಟರ್ನಲ್) ಮತ್ತು ಹೊರ (ಎಕ್ಸ್ಟರ್ನಲ್) ಫಾರ್ಮ್ ಎಂಬ ಎರಡು ವಿಧಗಳಿವೆ. ಪ್ಲಂಜಿಂಗ್ ಪ್ರಕ್ರಿಯೆಯನ್ನು ಹೆಚ್ಚಾಗಿ ಹೊರ ಪಾರ್ಮ್ ಗೆ ಬಳಸಲಾಗುತ್ತದೆ. ಒಳ ಭಾಗಭಾಗದಲ್ಲಿ ಪ್ಲಂಜಿಂಗ್ ಪ್ರಕ್ರಿಯೆಯನ್ನು ಅಪವಾದಾತ್ಮಕ ಪರಿಸ್ಥಿತಿಯಲ್ಲಿ ಮಾತ್ರ ಬಳಸಲಾಗುತ್ತದೆ. ನಾವು ವಿಕಸಿಸಿರುವ SPGN ಟೂಲ್ ನಲ್ಲಿ (ಚಿತ್ರ ಕ್ರ. 1) ಒಂದು ಬ್ಲ್ಯಾಂಕ್ ನೀಡಲಾಗಿದೆ. ಅದರಲ್ಲಿ ಇನ್ಸರ್ಟ್ ನ ಉದ್ದವನ್ನು (ಇಂಚುಗಳಲ್ಲಿ) CW ತೋರಿಸಲಾಗಿದೆ. ಫಾರ್ಮ್ ನ ಆಕಾರಕ್ಕೆ ಅನುಸಾರವಾಗಿ ಯೋಗ್ಯವಿರುವ ಇನ್ಸರ್ಟ್ ಚುನಾಯಿಸಲಾಗುತ್ತದೆ. ನಿಖರವಾದ ಫಾರ್ಮ್ ತಯಾರಿಸಲು ಇನ್ಸರ್ಟ್ ನಲ್ಲಿ ಹೆಚ್ಚುವರಿ ಮಟೀರಿಯಲ್ ನೀಡಲಾಗಿದೆ. ಈ ಫಾರ್ಮ್ ನಲ್ಲಿ ನಾವು ಬೇರೆಬೇರೆ ರೀತಿಯ ಫಾರ್ಮ್ ಗಳನ್ನು ತಯಾರಿಸಬಲ್ಲೆವು. ಇನ್ಸರ್ಟ್ ನ ಮಟೀರಿಯಲ್ ಕಾರ್ಬೈಡ್ ನದ್ದಾಗಿದ್ದು ಅದರ ಶ್ಯಾಂಕ್ ಸ್ಟೀಲ್ ನಿಂದ ತಯಾರಿಸಲಾಗಿರುತ್ತದೆ. 8 ಮಿ.ಮೀ.ನಿಂದ 25 ಮಿ.ಮೀ. ಉದ್ದದ ತನಕದ ಇನ್ಸರ್ಟ್ ಲಭ್ಯವಿವೆ. ಇದರ ದಪ್ಪವು 0.15” ರಿಂದ 0.25” ಇರುತ್ತದೆ. ಸ್ಟೀಲ್, ಸ್ಟೆನ್ ಲೆಸ್ ಸ್ಟೀಲ್, ಕಾಸ್ಟ್ ಆಯರ್ನ್, ನಾನ್ ಫೇರಸ್ ಮಟೀರಿಯಲ್, ಸುಪರ್ ಅಲಾಯ್ ಮತ್ತು ಹಾರ್ಡ್ ಮಟೀರಿಯಲ್ ನಲ್ಲಿ

ಚಿತ್ರ ಕ್ರ. 2 : PSGM, PSGB ಇನ್ಸರ್ಟ್
 
img2_1  H x W:
 

ಇವುಗಳನ್ನು ಬಳಸಲಾಗುತ್ತದೆ. ಸುಪರ್ ಅಲಾಯ್ ಯಲ್ಲಿ ಯಂತ್ರಣೆಯ ಒತ್ತಡ ಹೆಚ್ಚು ಇರುವುದರಿಂದ ಯಂತ್ರಣೆಯು ಸುಲಭವಾಗಿ ಆಗುವುದಿಲ್ಲ. ಈ ಇನ್ಸರ್ಟ್ ಕೇವಲ ಟರ್ನಿಂಗ್ ಮಶಿನ್ ನಲ್ಲಿಯೇ ಬಳಸಬಲ್ಲೆವು. 7 ರಿಂದ 7.5 kW ಶಕ್ತಿಗಿಂತ ಹೆಚ್ಚು ಶಕ್ತಿ ಇರುವ ಮಶಿನ್ ಈ ರೀತಿಯ ಪ್ಲಂಜಿಂಗ್ ಕೆಲಸಕ್ಕೋಸ್ಕರ ಬಳಸುವುದು ಸೂಕ್ತವಾಗಿದೆ. ಕಾರಣ ಸಂಪೂರ್ಣ ಪ್ಲಂಜಿಂಗ್ ನಲ್ಲಿ ಉಂಟಾಗುವ ಒತ್ತಡವನ್ನು ಸಹಿಸಲು ಹೆಚ್ಚು ಶಕ್ತಿ ಇರುವ ಮಶಿನ್ ಬಳಸುವುದು ಎಂದಿಗೂ ಹಿತಕರವಾಗಿದೆ.

ಚಿತ್ರ ಕ್ರ. 2 ರಲ್ಲಿ ತೋರಿಸಿರುವ ಟೂಲ್ ನಲ್ಲಿ ಚಿಪ್ ಬ್ರೆಕರ್ ಸ್ಪೂನ್ ನೀಡಲಾಗಿದೆ. ಇದರಲ್ಲಿ ಎರಡು ವಿಧಗಳಿವೆ. ಮೊದಲನೆಯದಾಗಿ PSGM ಮತ್ತು ಇನ್ನೊಂದು PSGB. PSGB ಅಂದರೆ ಬ್ಲ್ಯಾಂಕ್. PSGM ಅಂದರೆ ಕೇವಲ ಗ್ರೂವ್ ಗೋಸ್ಕರ ಬಳಸಲಾಗುತ್ತದೆ. ಪ್ರೊಫೈಲ್ ಯಂತ್ರಣೆಯನ್ನು ಮಾಡುವಾಗ PSGB ಇನ್ಸರ್ಟ್ ಬಳಸಲಾಗುತ್ತದೆ.
 
ಕೋಷ್ಟಕ ಕ್ರ. 1 : PSGM, PSGB ಇನ್ಸರ್ಟ್ ನ ಬಳಕೆಗೋಸ್ಕರ ವಿವರಗಳು
 

table01_1  H x  

ಒಳ ಫಾರ್ಮ್
ಸಾಮಾನ್ಯವಾಗಿ ಬೋರಿಂಗ್ ಟೂಲ್ ನಂತೆಯೇ ತಯಾರಿಸಿರುವ ಈ ಪ್ಲಂಜಿಂಗ್ ಟೂಲ್ ಗಳನ್ನು ಚಿತ್ರ ಕ್ರ. 3 ಮತ್ತು 4 ರಲ್ಲಿ ತೋರಿಸಲಾಗಿದೆ. ಇದರಲ್ಲಿ ಕೇವಲ ಟೂಲ್ ಗಳಿಗೆ ಹಿಂದೆ-ಮುಂದೆ ಆಗಬಲ್ಲ ಚಟುವಟಿಕೆಗಳನ್ನು (DMIN) ನೀಡಲಾಗಿದೆ. ಇದರಲ್ಲಿ ಒಂದು ಮಿ.ಮೀ. ವ್ಯಾಸ (CW) ನೀಡಲಾಗಿದ್ದು 5 ಮಿ.ಮೀ.ನ ಪ್ರೊಫೈಲ್ ತಯಾರಿಸಲಾಗಿದೆ. ಈ ಸಂಪೂರ್ಣ ಟೂಲ್ ಸಾಲಿಡ್ ಕಾರ್ಬೈಡ್ ನಲ್ಲಿದ್ದು ಅದು ಇಡಿಯಾಗಿರುತ್ತದೆ. ಇದು ಪ್ರಮುಖವಾಗಿ ಚಿಕ್ಕ ಯಂತ್ರಭಾಗಗಳಿಗೋಸ್ಕರ ಬಳಸಲಾಗುತ್ತದೆ. ಚಿಕ್ಕ ಯಂತ್ರಭಾಗಗಳ ಒಳಗೆ ಒಂದು ವೇಳೆ ಪ್ರೊಫೈಲ್ ತಯಾರಿಸುವುದಾದಲ್ಲಿ ಇಂಡೆಕ್ಸೆಬಲ್ ಟೂಲ್ ಬಳಸಲಾಗುವುದಿಲ್ಲ. ಇದಕ್ಕೋಸ್ಕರ ಇದರಲ್ಲಿ ನಾವು ಸಂಪೂರ್ಣ ಕಾರ್ಬೈಡ್ ನ ಟೂಲ್ ಗಳನ್ನು ಬಳಸುತ್ತೇವೆ. ಈ ಟೂಲ್ ನ ಸಹಾಯದಿಂದ ಪ್ರೊಫೈಲಿಂಗ್ ಮಾಡುವುದರೊಂದಿಗೆ ಬೋರಿಂಗ್, ಥ್ರೆಡಿಂಗ್, ಗ್ರೂವಿಂಗ್ ಕೂಡಾ ಮಾಡುವುದು ಸಾಧ್ಯವಾಗಿದೆ. ಪ್ರೊಫೈಲ್ ನಲ್ಲಿ ಟೂಲ್ ನೇರವಾಗಿ ಪ್ಲಂಜ್ ಮಾಡಲಾಯಿತು, ಆದರೆ ಕೇವಲ ವ್ಯಾಸದಷ್ಟೇ ಪ್ರೊಫೈಲ್ ತಯಾರಿಸಬಹುದು. ಆದರೆ ಒಂದು ವೇಳೆ 5 ಮಿ.ಮೀ. ವ್ಯಾಸದ ಪ್ರೊಫೈಲ್ ಮಾಡುವುದಾದಲ್ಲಿ ಟೂಲ್ ನ ಚಟುವಟಿಕೆಯನ್ನು ಮಾಡಿ ಅದರ ಪ್ರೊಫೈಲ್ ಮಾಡಬಹುದು. ಆ ಕೆಲಸವನ್ನು ಆ ಆಕಾರದ ಟೂಲ್ ಬಳಸಿಯೂ ಒಂದೇ ಪ್ಲಂಜ್ ನಲ್ಲಿ ಮಾಡುವುದು ಸಾಧ್ಯವಾಗಿದೆ. (ಗ್ರೂವಿಂಗ್ ನಲ್ಲಿ ಮಾಡಿದಂತೆ). ಆದರೆ ಒಂದು ವೇಳೆ ಹೆಚ್ಚು ಉದ್ದದ ಟೂಲ್ ಇದ್ದಲ್ಲಿ ಅದರಲ್ಲಿ ಒತ್ತಡವನ್ನು ನೀಡುವುದು ಅಸಾಧ್ಯ ಮತ್ತು ಆ ಟೂಲ್ ತುಂಡಾಗಬಹುದು. ಕಾರಣ ಈ ಟೂಲ್ ತುಂಬಾ ಚಿಕ್ಕ ಟೂಲ್ ಆಗಿರುತ್ತದೆ.
 

img3_1  H x W:   img4_1  H x W:
               
                                  ಚಿತ್ರ ಕ್ರ. 3                                                                        ಚಿತ್ರ ಕ್ರ. 4

ಈ ಟೂಲ್ ಗೆ ನಾವು ಥ್ರೂ ಕೂಲಂಟ್ ಹೋಲ್ ನೀಡಿದ್ದೇವೆ. ಇದಕ್ಕೆ ಮಶಿನ್ ನಲ್ಲಿ ಅಳವಡಿಸಬಲ್ಲ ಒಂದು ಸ್ಲೀವ್ ಇರುತ್ತದೆ. ಮಶಿನ್, ಸ್ಲೀವ್ ಮತ್ತು ಟೂಲ್ ಇವುಗಳಿಂದ ಕೂಲಂಟ್ ಸಾಗಿಸಲಾಗುತ್ತದೆ. ಕೂಲಂಟ್ ನ ಒತ್ತಡವು ಎಷ್ಟು ಹೆಚ್ಚಾಗಿರುತ್ತದೆಯೋ, ಅಷ್ಟೇ ಹೆಚ್ಚು ಸುಲಭವಾಗಿ ಚಿಪ್ ಹೊರಗೆ ತೆಗೆಯುವುದು ಸುಲಭವಾಗುತ್ತದೆ.

ಈ ಟೂಲ್ ನ ಜಾಮೆಟ್ರಿ ಸ್ಟ್ಯಾಂಡರ್ಡ್ ಆಗಿರುತ್ತದೆ. ಆದರೆ ಒಂದು ವೇಳೆ ಥ್ರೆಡಿಂಗ್ ಇದ್ದಲ್ಲಿ ಅದರಂತೆಯೇ ಟೂಲ್ ಗೆ ಥ್ರೆಡ್ ಗಳ ಆಕಾರವನ್ನು ನೀಡಲಾಗಿರುತ್ತದೆ. ಹೀಗೆ ಇಲ್ಲದಿದ್ದಲ್ಲಿ ನಾವು ಸ್ಟ್ಯಾಂಡರ್ಡ್ ತ್ರಿಜ್ಯದ ಟೂಲ್ ಅಳವಡಿಸುತ್ತೇವೆ. ಈ ಒಂದೇ ಟೂಲ್ ನಿಂದ ಬ್ಯಾಕ್ ಫೇಸಿಂಗ್, ಬೋರಿಂಗ್ ಮತ್ತು ಚ್ಯಾಂಫರ್, ಟರ್ನಿಂಗ್ ಮತ್ತು ಒಳ ವ್ಯಾಸ ಮಾಡುವಂತಹ ಪ್ರಕ್ರಿಯೆಯನ್ನು ಮಾಡುವುದು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಟೂಲ್ ನ ಜಾಮೆಟ್ರಿ ಅಭಿವೃದ್ಧಿ ಪಡಿಸಿ ನೀಡಲಾಗಿದೆ. ಇದರ ಉದ್ದ 15 ಮಿ.ಮೀ. ಹಾಗೆಯೇ ಇದಕ್ಕೆ 30 ಅಂಶಗಳ ಕೋನ ನೀಡಲಾಗಿದೆ. JBR R ಈ ಟೂಲ್ ಒಳ ಭಾಗದಲ್ಲಿ ಥ್ರೆಡ್ ಮಾಡಲು, ಆದರೆ JBB R ಈ ಟೂಲ್ ಒಳ ಭಾಗದಲ್ಲಿ ಥ್ರೆಡ್ ಗಳನ್ನು ಮಾಡಲು ಬಳಸಲಾಗುತ್ತದೆ. ಇದಕ್ಕೂ ಥ್ರೂ ಕೂಲಂಟ್ ನೀಡಲಾಗಿದೆ.
 
ಚಿತ್ರ ಕ್ರ. 5 : DTA ಟೂಲ್
 

img5_1  H x W:  
 

DTA ಟೂಲ್ (ಚಿತ್ರ ಕ್ರ. 5) ಕೇವಲ ಅಲ್ಯುಮಿನಿಯಮ್ ಗೋಸ್ಕರ ಅಭಿವೃದ್ಧಿ ಪಡಿಸಿದ ಟೂಲ್ ಆಗಿದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಅಲಾಯ್ ವೀಲ್ ನ ಬೇರೆಬೇರೆ ಫಾರ್ಮ್ ಗಳನ್ನು ತಯಾರಿಸಲು ಈ ಟೂಲ್ ಬಳಸಲಾಗುತ್ತದೆ. ಇದರಲ್ಲಿ 6 ಮಿ.ಮೀ. ಮತ್ತು 8 ಮಿ.ಮೀ.ನ ವ್ಯಾಸ ನೀಡಲಾಗಿದೆ. ಇದು ಕೋಟೆಡ್ ಇನ್ಸರ್ಟ್ ಆಗಿದ್ದು ಇದರಲ್ಲಿ ವಿವಿಧ ಗ್ರೇಡ್ ಗಳು ಲಭ್ಯವಿವೆ. ಆದ್ದರಿಂದ ಈ ಇನ್ಸರ್ಟ್ ನ್ನು ಅನೇಕ ಮಟೀರಿಯಲ್ ಗೋಸ್ಕರ ಬಳಸಬಹುದಾಗಿದೆ. ಇದಕ್ಕೂ ಕೂಡಾ ಥ್ರೂ ಕೂಲಂಟ್ ನೀಡಲಾಗಿದೆ. ಇದರಿಂದಾಗಿ ಚಿಪ್ ಇನ್ಸರ್ಟ್ ನ ಹತ್ತಿರ ಅಂಟಿಕೊಂಡು ನಿಲ್ಲುವುದಿಲ್ಲ. ಇದನ್ನು ಪ್ರಮುಖವಾಗಿ ಅಲ್ಯುಮಿನಿಯಮ್ ವೀಲ್ ನ ಪ್ರೊಫೈಲಿಂಗ್ ಗೋಸ್ಕರ ಬಳಸಲಾಗುತ್ತದೆ.

ಕೋಷ್ಟಕ ಕ್ರ. 2 : ಯೋಗ್ಯ ಟೂಲ್ ಬಳಸಿ ಲಭಿಸುವ ಲಾಭಗಳನ್ನು ತೋರಿಸುವ ಕೋಷ್ಟಕ
 

table02_1  H x  
 
DTA ಲೇಪನ (ಕೋಟಿಂಗ್) ಮಾಡದಿರುವ ಇನ್ಸರ್ಟ್ ಅಲ್ಯುಮಿನಿಯಮ್ ಗೋಸ್ಕರ ಬಳಸುತ್ತಾರೆ. ಇದರಿಂದಾಗಿ ಟೂಲ್ ನ ಎಡ್ಜ್ ಗಳು ಎಷ್ಟು ಚೂಪು ಮಾಡುತ್ತೇವೋ (ಶಾರ್ಪ್) ಅಷ್ಟು ಒಳ್ಳೆಯದು. ಲೇಪನ ಮಾಡಿದ ನಂತರ ಆ ಎಡ್ಜ್ ಸ್ವಲ್ಪ ಮೊಂಡಾಗುತ್ತದೆ. ಇದರಿಂದಾಗಿ ಈ ಟೂಲ್ ಗೆ ಲೇಪನ ಮಾಡಲಾಗುವುದಿಲ್ಲ. ಅದನ್ನು ಗ್ರೈಂಡ್ ಮಾಡಿ ನೇರವಾಗಿಯೇ ಬಳಸಲಾಗುತ್ತದೆ. ಇದರಿಂದಾಗಿ ಮಟೀರಿಯಲ್ ಇದಕ್ಕೆ ಅಂಟಿಕೊಳ್ಳುವುದಿಲ್ಲ. ಈ ಟೂಲ್ 800 ರಿಂದ 1000 ಮೀಟರ್/ ನಿಮಿಷ ಈ ಉಚ್ಚ ಪ್ಯಾರಾಮೀಟರ್ ನಲ್ಲಿ ನಡೆಯಬಲ್ಲದು. ಇದರಿಂದಲೂ ಮಟೀರಿಯಲ್ ಅಂಟಿಕೊಳ್ಳುವ ಸಾಧ್ಯತೆಯು ಕಡಿಮೆ ಇರುತ್ತದೆ.

ಉದಾಹರಣೆ (ಕೋಷ್ಟಕ ಕ್ರ. 2) :
ಯಂತ್ರಭಾಗಗಳ ವಿವರಗಳು : ಅಲಾಯ್ ವೀಲ್
ಮಟೀರಿಯಲ್ : ಅಲ್ಯುಮಿನಿಯಮ್
ಪ್ರಕ್ರಿಯೆಯ ವಿಧ : 15° ಪ್ರೊಫೈಲ್ ಯಂತ್ರಣೆ
ಮಶಿನ್ ಮತ್ತು ಟೂಲ್ ಗಳ ವಿಧ : ಫೆಮ್ಕೊ
ದೃಢತನ : ಒಳ್ಳೆಯದು
ಕೂಲಂಟ್ ನ ವಿಧ : WET ವಾಟರ್ ಸೊಲ್ಯುಬಲ್
ಕೂಲಂಟ್ ನ ಪದ್ಧತಿ : ಹೊರ - ಫ್ಲಡ್

9769444547
info@tungaloyindia.com
ಜಯ್ ಶಾಹ ಇವರು ಟಂಗಾಲಾಯ್ ಇಂಡಿಯಾ ಪ್ರೈ.ಲಿ. ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರಿಗೆ ಈ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳ ಅನುಭವವಿದೆ.

 
Powered By Sangraha 9.0