ಇ.ಡಿ.ಎಮ್. ತಂತ್ರ

25 Aug 2021 13:16:11
 
IMG-1_1  H x W:
 
 
 
 
ಆಧುನಿಕ ಉತ್ಪಾದನೆಗಳಿಗೋಸ್ಕರ ಯಂತ್ರಣೆಯಲ್ಲಿರುವ ನಿಖರತೆಯು ಚಿಕ್ಕ ಆಕಾರದ ಜಾಬ್ ನಲ್ಲಿ ಕೆಲಸ ಮಾಡುವ ಕ್ಷಮತೆಯನ್ನು ವೃದ್ಧಿಸುವುದರೊಂದಿಗೆ ಅನಿಯಮಿತ ಆಕಾರದ ಯಂತ್ರಣೆಯನ್ನು ಸುಲಭವಾಗಿ ಮಾಡುವ ಬೇಡಿಕೆಯು ನಿರಂತರವಾಗಿ ಗಮನಕ್ಕೆ ಬರುತ್ತಿದೆ. ಈ ರೀತಿಯ ಬೇಡಿಕೆಗಳನ್ನು ಪೂರ್ತಿಗೊಳಿಸಲು ಮಶಿನ್ ಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ತುಲನೆಯಲ್ಲಿ ಹೊಸ ಇ.ಡಿ.ಎಮ್. (ಇಲೆಕ್ಟ್ರಿಕ್ ಡಿಸ್ಚಾರ್ಜ್ ಮಶಿನ್) ತಂತ್ರದ ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳೋಣ. 

drilling m/c_1   

ಇ.ಡಿ.ಎಮ್. ಡ್ರಿಲ್ಲಿಂಗ್ ಮಶಿನ್

ಇ.ಡಿ.ಎಮ್. ತಂತ್ರಜ್ಞಾನ

 
ಇ.ಡಿ.ಎಮ್. ತಂತ್ರಜ್ಞಾನವನ್ನು ಬಳಸಿ ಡ್ರಿಲ್ಲಿಂಗ್ ಮಾಡಲು ಒಂದು ವಿಶಿಷ್ಟ ಪದ್ಧತಿ ಇದೆ. ಆ ಪದ್ಧತಿಯಿಂದ ಚಿಕ್ಕ ಹಾಗೆಯೇ ಆಳ (ಡೀಪ್) ಡ್ರಿಲ್ಸ್ ತುಂಬಾ ವೇಗವಾಗಿ ಮತ್ತು ನಿಖರವಾಗಿ ಮಾಡಬಹುದಾಗಿದೆ. ಇದರಿಂದಾಗಿ ಸ್ಲಾಟ್ ಮತ್ತು ಇನ್ನಿತರ ಭಾಗಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಈ ತಂತ್ರಜ್ಞಾನದ ಬಳಕೆಯು ಹೆಚ್ಚಾಗುತ್ತಿರುವುದು ಗಮನಕ್ಕೆ ಬರುತ್ತಿದೆ. ಪಾರಂಪಾರಿಕ ಪದ್ಧತಿಯನ್ನು ಬಳಸಿ ಡ್ರಿಲ್ಲಿಂಗ್ ಮಾಡುವಾಗ 1 ಮಿ.ಮೀ.ಗಿಂತ ಕಡಿಮೆ ವ್ಯಾಸದ ಡ್ರಿಲ್ಲಿಂಗ್ ನಲ್ಲಿ ಅಡಚಣೆಗಳು ಉಂಟಾಗುತ್ತವೆ. 0.1 ರಿಂದ 3.0 ಮಿ.ಮೀ. ವ್ಯಾಸದ ತನಕ ಇ.ಡಿ.ಎಮ್.ನ ಪರ್ಯಾಯವು ಹೆಚ್ಚು ಸೂಕ್ತವಾಗುತ್ತದೆ. ಒಮ್ಮೊಮ್ಮೆ 10 ಮಿ.ಮೀ. ತನಕವೂ ಈ ಪದ್ಧತಿಯನ್ನು ಬಳಸಲಾಗುತ್ತದೆ. ಡ್ರಿಲ್ ತುಂಡಾಗುವುದು, ಮೊಂಡಾಗುವುದು ಮತ್ತು ಡ್ರಿಲ್ ಬಿಟ್ ಗೆ ಮತ್ತೆ ಗ್ರೈಂಡಿಂಗ್ ಮಾಡುವುದು ಮುಂತಾದ ಕೆಲಸಗಳನ್ನು ಮಾಡಬೇಕಾಗುವುದಿಲ್ಲ. ಇದರಿಂದಾಗಿ ಬೃಹತ್ ಪ್ರಮಾಣದಲ್ಲಿ ಸಮಯ ಮತ್ತು ಖರ್ಚಿನಲ್ಲಿ ಉಳಿತಾಯವಾಗುತ್ತದೆ. ಇ.ಡಿ.ಎಮ್.ನಿಂದ ತಯಾರಿಸಿರುವ ರಂಧ್ರಗಳ ವ್ಯಾಸಕ್ಕೆ ವರ್ಟಿಕ್ಯಾಲಿಟಿ ಮತ್ತು ಸಿಲಿಂಡ್ರಿಸಿಟಿ ಮೇಲಿಂದ ಕೆಳಗಿನ ತನಕ ತುಂಬಾ ನಿಖರ ಮತ್ತು ಸೂಕ್ಷ್ಮವಾಗಿ ಲಭಿಸುತ್ತದೆ. ಈ ತಂತ್ರದಿಂದಾಗಿ ಕಠಿಣ ಲೋಹಗಳಲ್ಲಿ ಡ್ರಿಲ್ಲಿಂಗ್ ಮಾಡುವುದು ಸಾಧ್ಯ. ಪಾರಂಪಾರಿಕ ಪದ್ಧತಿಯಲ್ಲಿ ಡ್ರಿಲ್ ಮಾಡಿ ಹಾರ್ಡನಿಂಗ್ ಮಾಡಿರುವ ಶೀಟ್ಸ್ ಗಳಲ್ಲಿ ರಂಧ್ರಗಳ ಆಕಾರವು ಬದಲಾಗುತ್ತದೆ. ಈ ರೀತಿಯ ದೋಷವನ್ನು ಇ.ಡಿ.ಎಮ್. ಯಂತ್ರಣೆಯಲ್ಲಿ ತಡೆಯಬಹುದಾಗಿದೆ. ಟಂಗ್ ಸ್ಟನ್, ಟೈಟೇನಿಯಮ್, ಇನ್ಕೋನೇಲ್, ಉಕ್ಕಿನ ಮಿಶ್ರಲೋಹಗಳು, ಮಾಲಿಬ್ಡೆನಮ್ ಇಂತಹ ಕಠಿಣ ಲೋಹಗಳಿಗೆ ಯಂತ್ರಣೆಯನ್ನು ಈ ಪದ್ಧತಿಯಿಂದ ಮಾಡಲಾಗುತ್ತದೆ. ಈ ಹಿಂದೆ ಪಾರಂಪಾರಿಕ ಯಂತ್ರಗಳನ್ನು ಬಳಸಿ ಕಡಿಮೆ ಆಕಾರದ ರಂಧ್ರಗಳನ್ನು ಮಾಡುವುದು ಸಾಧ್ಯವಿರಲಿಲ್ಲ. ಆದರೆ ಪ್ರಸ್ತುತ ಇದು ಸಹಜಸಾಧ್ಯವಾಗಿದೆ. ಯಾವುದೇ ಕಂಡಕ್ಟಿವಿಟಿ ಇರುವ ಮಟೀರಿಯಲ್ ಗಳಲ್ಲಿ ರಂಧ್ರಗಳನ್ನು
ಮಾಡಲು ಈ ತಂತ್ರಜ್ಞಾನದ ಬಳಕೆಯು ದಿನೇದಿನೇ ಹೆಚ್ಚುತ್ತಿದೆ.

ಸ್ಪಾರ್ಕೋನಿಕ್ಸ್ ಇ.ಡಿ.ಎಮ್. ಡ್ರಿಲ್ಲಿಂಗ್ ಮಶಿನ್ ನ ರಚನೆ

  ಇ.ಡಿ.ಎಮ್. ಹೋಲ್ ಡ್ರಿಲರ್ ನ ಪ್ರಮುಖ ಭಾಗಗಳು
 
        · ಸ್ಟೇನ್ ಲೆಸ್ ಸ್ಟೀಲ್ ನ ವರ್ಕ್ ಟೇಬಲ್
        · ತಿರುಗಬಲ್ಲ ಸ್ಪಿಂಡಲ್  
        · ಇಲೆಕ್ಟ್ರೋಡ್ ಹಿಡಿಯಲು ಡ್ರಿಲ್ ಚಕ್
        · ಸಿರಾಮಿಕ್ ಅಥವಾ ರುಬೀ ಗೈಡ್ಸ್
        · ಪವರ್ ಸಪ್ಲೈಯೊಂದಿಗೆ ಕಂಟ್ರೋಲ್ ಪ್ಯಾನೆಲ್

pic-2_1  H x W:
 
 
 
  •  ಡೈ ಇಲೆಕ್ಟ್ರಿಕ್ ಫ್ಲುಯಿಡ್ ಪಂಪ್

 

ಇ.ಡಿ.ಎಮ್.ನಿಂದ ಸೂಕ್ಷ್ಮ ರಂಧ್ರಗಳನ್ನು ಮಾಡಿರುವ ಜಾಬ್

ಇಲೆಕ್ಟ್ರೋಡ್ ನ ವಿಧಗಳು

 

ಒಂದು ರಂಧ್ರ (ಸಿಂಗಲ್ ಹೋಲ್) ಅಥವಾ ಅನೇಕ ರಂಧ್ರಗಳು (ಮಲ್ಟಿ ಹೋಲ್) ಚ್ಯಾನೆಲ್- ಯಾವ ಆಕಾರದ ರಂಧ್ರಗಳನ್ನು ಮಾಡಬೇಕೋ, ಅದಕ್ಕೆ ಅನುಸಾರವಾಗಿ ಇಲೆಕ್ಟ್ರೋಡ್ ನ ವಿಧವನ್ನು ಚುನಾಯಿಸಲಾಗುತ್ತದೆ. 1 ಮಿ.ಮೀ.ಗಿಂತ ಚಿಕ್ಕ ಆಕಾರದ ರಂಧ್ರಗಳಿಗೋಸ್ಕರ ಒಂದು ರಂಧ್ರದ (ಸಿಂಗಲ್ ಹೋಲ್) ಇಲೆಕ್ಟ್ರೋಡ್ ಬಳಸಬೇಕು. 1 ಮಿ.ಮೀ.ಗಿಂತ ದೊಡ್ಡ ಆಕಾರದ ರಂಧ್ರಗಳಿಗೋಸ್ಕರ ಅನೇಕ ರಂಧ್ರಗಳಿರುವ (ಮಲ್ಟಿ ಹೋಲ್) ಇಲೆಕ್ಟ್ರೋಡ್ ಬಳಸಬೇಕು. ಕಾರ್ಯವಸ್ತುಗಳಿಂದ ಇ.ಡಿ.ಎಮ್.ನ ಸಹಾಯದಿಂದ ಸರಿಯಾಗಿ ರಂಧ್ರಗಳನ್ನು ಮಾಡಲು ಇನ್ನೊಂದು ಮಹತ್ವದ ಘಟಕವಿದೆ. ಅದೆಂದರೆ ಹಿತ್ತಾಳೆಯ ಅಥವಾ ತಾಮ್ರದ ಇಲೆಕ್ಟ್ರೋಡ್ ಕೊಳವೆಯ ಒಳವ್ಯಾಸದಿಂದ ಹಾಯುವ ತಂತಿಗಳ ಸಂಖ್ಯೆ. ಮೂಲತಃ ಇಲೆಕ್ಟ್ರೋಡ್ ನಿಂದ ಅಪೇಕ್ಷಿಸಿರುವ ಚಟುವಟಿಕೆಯು ಅದರ ಮಧ್ಯ ಭಾಗದಲ್ಲಿ ಯಾವ ವಿಧದ ರಂಧ್ರವನ್ನು ಮಾಡಲಾಗುತ್ತಿದೆ, ಎಂಬುದರ ಮೇಲೆ ಅವಲಂಬಿಸಿರುತ್ತದೆ. ಕಾರಣ ಬೇರೆಬೇರೆ ಆವಶ್ಯಕತೆಗಳಿಗೋಸ್ಕರ ಬೇರೆಬೇರೆ ವಿಧದ ಒಳ ತಂತಿಗಳನ್ನು ತಯಾರಿಸಲಾಗುತ್ತದೆ. ಮೊದಲನೆಯ ಆವಶ್ಯಕತೆ ಅಂದರೆ ಇಲೆಕ್ಟ್ರೋಡ್ ನ ಮಧ್ಯ ಭಾಗದಿಂದ (ಸೆಂಟರ್) ನೀರು ಅಥವಾ ಕೂಲಂಟ್ ನ ಸಾಗಾಟ. ಇದರಿಂದಾಗಿ ಹಿತ್ತಾಳೆಯ ಅಥವಾ ತಾಮ್ರದ ಕೊಳವೆಯು ಹೆಚ್ಚು ಪ್ರಮಾಣದಲ್ಲಿ ಬಿಸಿಯಾಗುವುದಿಲ್ಲ ಮತ್ತು ಸುಡುವುದಿಲ್ಲ. ಒಂದು ವೇಳೆ ಇಲೆಕ್ಟ್ರೋಡ್ ಹೆಚ್ಚು ಬಿಸಿಯಾದಲ್ಲಿ ಅದು ಮೆತ್ತಗೆಯಾಗಿ ಅಂಕುಡೊಂಕಾಗಬಲ್ಲದು. ಅದರಿಂದಾಗಿ ನೇರವಾಗಿ ಡ್ರಿಲ್ ಅಥವಾ ನಿಖರವಾಗಿ ನಿರಂತರವಾದ ಡ್ರಿಲ್ಲಿಂಗ್ ಆಗಲಾರದು. ಇ.ಡಿ.ಎಮ್. ಇಲೆಕ್ಟ್ರೋಡ್ ಟ್ಯೂಬ್ ಒಂದು ಅಥವಾ ಹೆಚ್ಚು ತಂತಿಗಳಿರಬೇಕು. ಇದೂ ಕೂಡಾ ಮಹತ್ವದ ಅಂಶವಾಗಿದೆ. ಡ್ರಿಲ್ ಮಾಡುತ್ತಿರುವಾಗ ಮಾಡಲಾಗುವ ರಂಧ್ರಗಳು ಆರುಪಾರಾಗಿವೆಯೇ, ಅಥವಾ ಒಂದೇ ಬದಿಯಲ್ಲಿವೆಯೇ (ಬ್ಲೈಂಡ್ ಹೋಲ್) ಎಂಬ ಅಂಶಗಳನ್ನು ನಿರ್ಧರಿಸಬೇಕು. ಕಾರಣ ಒಂದೇ ಬದಿಯಲ್ಲಿ ಮುಚ್ಚಿರುವ ರಂಧ್ರಗಳಿಗೆ ಆರುಪಾರಾಗಿ ಡ್ರಿಲ್ ಮಾಡಲಾಗುವುದರಿಂದ ಸ್ಪರ್ಶವಾಗದೇ ಇರುವ ಮಟೀರಿಯಲ್ ನ ತುಂಡು ಉಳಿಯುತ್ತದೆ.


pic-3_1  H x W: 
pic-4_1  H x W:

ಡ್ರಿಲ್ ಟ್ಯೂಬ್ ಇಲೆಕ್ಟ್ರೋಡ್ಸ್

 

ಬ್ರಾಸ್ ಅಥವಾ ಕಾಪರ್ ಟ್ಯೂಬ್ಯುಲರ್ ಇಲೆಕ್ಟ್ರೋಡ್ಸ್ ಇ.ಡಿ.ಎಮ್. ಡ್ರಿಲ್ಲಿಂಗ್ ನ ಪ್ರಕ್ರಿಯೆಗೋಸ್ಕರ ಅತ್ಯಾವಶ್ಯಕವಾಗಿರುತ್ತದೆ. ಈ ಇಲೆಕ್ಟ್ರೋಡ್ಸ್ 0.1 ಮಿ.ಮೀ.ನ ವ್ಯತ್ಯಾಸದಿಂದ ಲಭಿಸುತ್ತವೆ. (ಉದಾಹರಣೆ, 0.2, 0.3, 0.4 ಮಿ.ಮೀ.ನಿಂದ 3.0 ಮಿ.ಮೀ. ತನಕ) ಸ್ಟ್ಯಾಂಡರ್ಡ್ ಇಲೆಕ್ಟ್ರೋಡ್ ನಲ್ಲಿ ಉದ್ದವು 400 ಮಿ.ಮೀ. ಇರುತ್ತದೆ. ಇಂತಹ ಇಲೆಕ್ಟ್ರೋಡ್ಸ್ ಗಳನ್ನು ಆಮದು ಮಾಡಬೇಕಾಗುತ್ತದೆ. 1.0 ಮಿ.ಮೀ. ತನಕದ ರಂಧ್ರಗಳ ವ್ಯಾಸಕ್ಕೋಸ್ಕರ ಒಂದೇ ರಂಧ್ರವಿರುವ ಇಲೆಕ್ಟ್ರೋಡ್ಸ್ ಸೂಚಿಸಲಾಗಿದೆ. ಎರಡು ಚ್ಯಾನೆಲ್ ಅಥವಾ ಅನೇಕ ರಂಧ್ರಗಳಿರುವ ಇಲೆಕ್ಟ್ರೋಡ್ಸ್ 1.0 ಮಿ.ಮೀ. ಮತ್ತು ಅದಕ್ಕಿಂತ ಹೆಚ್ಚು ವ್ಯಾಸದ ರಂಧ್ರಗಳಿಗೋಸ್ಕರ ಯೋಗ್ಯವಾಗಿದೆ. ಡ್ರಿಲ್ಲಿಂಗ್ ಮಾಡುವಾಗ ಬರುವ ತಂತಿಯು ಅನೇಕ ರಂಧ್ರಗಳಿರುವ ರಚನೆಯಿಂದಾಗಿ ಹೊರ ಬರಲಾರದು, ಆದ್ದರಿಂದ ಅನೇಕ ರಂಧ್ರಗಳ ರಚನೆ ಇರುವ ಇಲೆಕ್ಟ್ರೋಡ್ಸ್ ಗಳನ್ನು ಬಳಸಲಾಗುತ್ತದೆ.

ಇ.ಡಿ.ಎಮ್. ಡ್ರಿಲ್ಲಿಂಗ್ ಪ್ರಕ್ರಿಯೆ

 
ಇದರಲ್ಲಿ ತಾಮ್ರದ ಅಥವಾ ಹಿತ್ತಾಳೆಯ ನಿಖರವಾದ ಆಕಾರದ ಕೊಳವೆಯನ್ನು ಇಲೆಕ್ಟ್ರೋಡ್ ಎಂಬುದಾಗಿ ಬಳಸಲಾಗುತ್ತದೆ. ಈ ಇಲೆಕ್ಟ್ರೋಡ್ ‘Z’ ಅಕ್ಷದಲ್ಲಿ ಇರುವ ಡ್ರಿಲ್ ಚಕ್ ನಲ್ಲಿ ಅಳವಡಿಸಲಾಗುತ್ತದೆ ಮತ್ತು ಕಾರ್ಯವಸ್ತುವಿನ ಮೇಲ್ಭಾಗದಲ್ಲಿ ಒಂದು ಸಿರಾಮಿಕ್ ಅಥವಾ ರುಬಿ ಗೈಡ್ ನ ಸಹಾಯದಿಂದ ಹಿಡಿದಿಡಲಾಗುತ್ತದೆ. ಕಾರ್ಯವಸ್ತುವಿನ ಮೇಲ್ಭಾಗದ ಸರ್ಫೇಸ್ ನ ಅಳತೆಯನ್ನು ಮಾಡಿ ಎಷ್ಟು ಆಳದ ತನಕ ಡ್ರಿಲ್ ಮಾಡುವುದು ಎಂಬುದನ್ನು ನಿರ್ಧರಿಸಲಾಗುತ್ತದೆ. ಇಲೆಕ್ಟ್ರೋಡ್ ಕಾರ್ಯವಸ್ತುವಿನ ಮೇಲ್ಭಾಗದ ಸರ್ಫೇಸ್ ನಲ್ಲಿ ಒರಗಿದಾಗ ‘Z’ ಅಕ್ಷದ ರೀಡಿಂಗ್ ‘0’ ಸೆಟ್ ಮಾಡಲಾಗುತ್ತದೆ.

pic-5_1  H x W:
 
ಡ್ರಿಲ್ಲಿಂಗ್ ಪ್ರಾರಂಭವಾಗುವಾಗ ಇರುವ ಬಿಂದು ಇದೇ ಆಗಿರುತ್ತದೆ. ಇಲೆಕ್ಟ್ರೋಡ್ ತಿರುಗಿಸಲು ಪ್ರಾರಂಭಿಸಲಾಗುತ್ತದೆ. ಕೊಳವೆಯು ಆಕಾರದ ಇಲೆಕ್ಟ್ರೋಡ್ ನಿಂದ ವಿಸರ್ಜಿಸಲು 50 ರಿಂದ 100 ಕಿ.ಗ್ರಾಂ./ ಸ್ಕ್ವೇರ್ ಸೆ.ಮೀ. ಒತ್ತಡದಲ್ಲಿ ನೀರಿನ ದ್ರಾವಣವನ್ನು ಬಿಡಲಾಗುತ್ತದೆ. ಪವರ್ ಸಪ್ಲೈಯಲ್ಲಿರುವ ಆನ್ ಟೈಮ್, ಆಫ್ ಟೈಮ್, ಪೀಕ್ ಕರಂಟ್ ಮತ್ತು ಕ್ಯಾಪ್ಯಾಸಿಟನ್ಸ್ ನ ಪ್ರಮಾಣವನ್ನು ಈ ರೀತಿಯಲ್ಲಿ ಸೆಟ್ ಮಾಡಲಾಗಿರುತ್ತದೆ. ಡಿಸ್ಚಾರ್ಜ್ ಪ್ರಾರಂಭಿಸಿ ಡ್ರಿಲ್ಲಿಂಗ್ ನ ಸೈಕಲ್ ಪ್ರಾರಂಭಿಸಲಾಗುತ್ತದೆ. ಡ್ರಿಲ್ಲಿಂಗ್ ಸೈಕಲ್ ಮುಗಿಸುವಾಗ ಡಿಸ್ಚಾರ್ಜ್ ಮುಗಿಸಲಾಗುತ್ತದೆ ಮತ್ತು ‘Z’ ಅಕ್ಷ ಕಾರ್ಯವಸ್ತುವಿನಿಂದ ಮೇಲೆ ಎತ್ತಲ್ಪಡುತ್ತದೆ.

ಕೋಷ್ಟಕ ಕ್ರ. 1

  •       ಆನ್ ಟೈಮ್ ನಿಂದಾಗಿ ಇಲೆಕ್ಟ್ರೋಡ್ ಮತ್ತು ಕಾರ್ಯವಸ್ತು ಇವುಗಳಲ್ಲಿರುವ ವೋಲ್ಟೇಜ್ ಪಲ್ಸ್      ನ ಸಮಯವನ್ನು ನಿರ್ಧರಿಸಲಾಗುತ್ತದೆ. ಇದರಿಂದಾಗಿ ಅಪೇಕ್ಷಿಸಿರುವ ಕಾರ್ಯಕ್ಷಮತೆ ನೀಡುವ        ಡ್ರಿಲ್ಲಿಂಗ್ ನ ವೇಗವು ಲಭಿಸಬಲ್ಲದು.
  •       ಯೋಗ್ಯ ರೀತಿಯಿಂದ ಆಫ್ ಟೈಮ್ ನ ಆಯ್ಕೆಯನ್ನು ಮಾಡಲಾದಲ್ಲಿ ಮುಂದಿನ ಆನ್ ಟೈಮ್ ಪಲ್ಸ್ ಕಾರ್ಯಗತಗೊಳಿಸಲು ಕಟಿಂಗ್ ಮಾಡುವ ಭಾಗವು ತಯಾರಾಗುತ್ತದೆ.  
  • ಅತ್ಯಂತ ಹೆಚ್ಚು ವಿದ್ಯುತ್ ಪ್ರವಾಹ (ಪೀಕ್ ಕರಂಟ್) ಯೋಗ್ಯ ರೀತಿಯಲ್ಲಿ ಆಯ್ಕೆ ಮಾಡಿದಲ್ಲಿ ಎಲ್ಲಕ್ಕಿಂತಲೂ ಉಚ್ಚಮಟ್ಟದ ಮಟೀರಿಯಲ್, ರಿಮೂವಲ್ ರೇಟ್ ಮತ್ತು ಸರ್ಫೇಸ್ ನಲ್ಲಿಯೂ ಉಚ್ಚಗುಣಮಟ್ಟದ ಫಿನಿಶ್ ಲಭಿಸುತ್ತದೆ.
  • ಕಡಿಮೆ ಸಾಗಾಟದ ಸಾಮರ್ಥ್ಯವುಳ್ಳ ಮಟೀರಿಯಲ್ ನ ಡ್ರಿಲ್ಲಿಂಗ್ ಮಾಡುವಾಗ ಕಪ್ಯಾಸಿಟನ್ಸ್ ಬಳಸಿದಲ್ಲಿ ಕಟಿಂಗ್ ವೊಲ್ಟೇಜ್ ನ ಪಲ್ಸ್ ಗೆ ಆವಶ್ಯಕವಿರುವ ಹೆಚ್ಚುವರಿ ಶಕ್ತಿ (ಪವರ್ ಬೂಸ್ಟ್) ಸಿಗುತ್ತದೆ. ಈ ತಂತ್ರದಿಂದಾಗಿ ಮಟೀರಿಯಲ್ ಹೀಟ್ ಟ್ರೀಟ್ ಮೆಂಟ್ ಗೆ ಕಳುಹಿಸುವ ಆವಶ್ಯಕತೆ ಇರುವುದಿಲ್ಲ. ಪಾರಂಪಾರಿಕ ರೀತಿಯಲ್ಲಿ ಡ್ರಿಲ್ಲಿಂಗ್ ಮಾಡುವಾಗ ಮೊದಲು ಡ್ರಿಲ್ಲಿಂಗ್ ಮಾಡಿ ಅದರ ನಂತರ ಅದು ಹಾರ್ಡನಿಂಗ್ ಗೋಸ್ಕರ ಹೀಟ್ ಟ್ರೀಟ್ ಮೆಂಟ್ ಗೆ ಕಳುಹಿಸಲಾಗುತ್ತದೆ                           
 ಇ.ಡಿ.ಎಮ್. ಡ್ರಿಲ್ಲಿಂಗ್ ಪ್ರಕ್ರಿಯೆ

pic-7_1  H x W:
 

ಈ ಪ್ರಕ್ರಿಯೆಯ ಕುರಿತು ಎಲ್ಲರಿಗೂ ವಿವರಗಳು ತಿಳಿಯಲು ಪ್ರಾರಂಭವಾದ ನಂತರ ಕಠಿಣ ಟೂಲ್ ಸ್ಟೀಲ್, ಟಂಗ್ ಸ್ಟನ್ ಕಾರ್ಬೈಡ್, ಅಲ್ಯುಮಿನಿಯಮ್, ಬ್ರಾಸ್ ಮತ್ತು ಇನ್ಕೋನೇಲ್ ಹೊರತಾಗಿ ಮಟೀರಿಯಲ್ ನಲ್ಲಿ ಪರೀಕ್ಷೆ ಮಾಡಲು ಪ್ರಾರಂಭಿಸಲಾಯಿತು. ಉಚ್ಚ ಪ್ರಮಾಣದ ವೇಗದ ಈ ಡ್ರಿಲ್ಲಿಂಗ್ ನಲ್ಲಿ ಕಚ್ಚುಗಳು ಮತ್ತು ಇನ್ನಿತರ ಉತ್ಪಾದನೆಗಳಲ್ಲಿ ಬಳಸುವ ಪ್ರಮಾಣವು ಹೆಚ್ಚಾಯಿತು. ಉದಾಹರಣೆ, ಏರ್ ವೆಂಟ್ ಹೋಲ್ಸ್, ಇಂಜೆಕ್ಷನ್ ನೋಜಲ್ಸ್, ಆಯಿಲ್ ಡ್ರೇನ್ ಹೋಲ್ಸ್, ಹೈಡ್ರಾಲಿಕ್ ಸಿಲಿಂಡರ್ಸ್, ಕೋರ್ ಪಿನ್ಸ್, ಟರ್ಬೈನ್ ಬ್ಲೇಡ್ಸ್, ಬಾಲ್ ಬೇರಿಂಗ್ಸ್ ಮತ್ತು ಹೆಕ್ಸ್ ನಟ್ಸ್ ನಲ್ಲಿ ಸೇಫ್ಟೀ ವಾಯರ್ ಹೋಲ್ಸ್.

ಡ್ರಿಲ್ಲಿಂಗ್ ಗೋಸ್ಕರ ಬೇಕಾಗುವ ಸಮಯ

 

ರಂಧ್ರಗಳ ಆಕಾರ ಮತ್ತು ಮಟೀರಿಯಲ್ ನ ವಿಧಗಳಿಗೆ ಅನುಸಾರವಾಗಿ ಡ್ರಿಲ್ಲಿಂಗ್ ಗೆ ಬೇಕಾಗುವ ಸಮಯದಲ್ಲಿ ಬದಲಾವಣೆಯಾಗುತ್ತದೆ. ಕೋಷ್ಟಕ ಕ್ರ. 1 ರಲ್ಲಿ ಸಂದರ್ಭಕ್ಕೋಸ್ಕರ ಕೆಲವು ಉದಾಹರಣಗಳನ್ನು ನೀಡಲಾಗಿದೆ. ಕಚ್ಚುಗಳ ಉತ್ಪಾದನೆ ಮಾಡುವಾಗ ಪಾರಂಪಾರಿಕ ಯಂತ್ರಣೆಯ ಹೊರತಾಗಿ ಹೆಚ್ಚು ವೇಗವಾಗಿ ಇ.ಡಿ.ಎಮ್. ಹೋಲ್ ಡ್ರಿಲ್ಲಿಂಗ್ ಏಕೆ ಬಳಸಲಾಯಿತು, ಎಂಬುದನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಿರುವ ಸಮಯದಿಂದ ಗಮನಕ್ಕೆ ಬರಬಲ್ಲದು. ಇದರ ಹೊರತಾಗಿ ಬೇರೆ ಯಾವುದೇ ರೀತಿಯ ಡ್ರಿಲ್ಲಿಂಗ್ ಪ್ರಕ್ರಿಯೆಯನ್ನು ಬಳಸಿ ಕಠಿಣ ಮಟೀರಿಯಲ್ ಗಳಲ್ಲಿ ಕಡಿಮೆ ವ್ಯಾಸದ ಡ್ರಿಲ್ ಮಾಡುವುದು ಕಷ್ಟಕರವಾಗಿರುತ್ತದೆ. ಈ ಡ್ರಿಲ್ ಪ್ರಕ್ರಿಯೆಯಿಂದಾಗಿ ಕನ್ಸುಮೇಬಲ್ ನ ಖರ್ಚು ಕಡಿಮೆಯಾಗುತ್ತದೆ ಮತ್ತು ಟೂಲ್ ತುಂಡಾಗುವ ಸಾಧ್ಯತೆಯೂ ಇರುವುದಿಲ್ಲ. ಇದರಿಂದಾಗಿ ಇ.ಡಿ.ಎಮ್. ಡ್ರಿಲ್ ಪ್ರಕ್ರಿಯೆ ಖಂಡಿತವಾಗಿಯೂ ಸೂಕ್ತ ಪರ್ಯಾಯವಾಗಿದೆ. ಈ ತಂತ್ರದಿಂದಾಗಿ ಮಾಡಿರುವ ರಂಧ್ರಗಳಲ್ಲಿ ಬರ್ ಇರುವುದಿಲ್ಲ. ಇದರಿಂದಾಗಿ ನಂತರ ಪುನಃ ಡಿಬರಿಂಗ್ ಮಾಡುವ ಆವಶ್ಯಕತೆ ಇರುವುದಿಲ್ಲ. ಬೃಹತ್ ಆಕಾರದ ಡ್ರಿಲ್ ಚಕ್ಸ್ ನಿಂದಾಗಿ ಸ್ಟ್ಯಾಂಡರ್ಡ್ ಡ್ರಿಲ್ ರಂಧ್ರಗಳ ರೇಂಜ್ 0.3 ಮಿ.ಮೀ. ನಿಂದ 10 ಮಿ.ಮೀ.ನಷ್ಟು ಇರುತ್ತದೆ. ಈಗ ಇ.ಡಿ.ಎಮ್. ಡ್ರಿಲ್ಲಿಂಗ್ ಮ್ಯಾನ್ಯುವಲ್ ಅಥವಾ ಸಿ.ಎನ್.ಸಿ. ಮಶಿನ್ ನಲ್ಲಿ ಮಾಡಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಪ್ರತಿದಿನವೂ ಸುಧಾರಣೆಗಳು ಆಗುತ್ತಿರುವುದರಿಂದ ಜಾಸ್ತಿ ಕೆಲಸಗಳಿಗೋಸ್ಕರ ಇದನ್ನು ಬಳಸಬಹುದು, ಎಂಬ ಅಂಶವು ಗಮನಕ್ಕೆ ಬರಲಾರಂಭಿಸಿತು. ಸ್ಲಾಟ್ ಮತ್ತು ಭಾಗಗಳನ್ನು ತಯಾರಿಸಲು ಇದೊಂದು ಸಂಪೂರ್ಣವಾಗಿ ಹೊಸದಾದ ರೀತಿಯಾಗಿದೆ.

ಇ.ಡಿ.ಎಮ್. ಡ್ರಿಲ್ಲಿಂಗ್ ಪದ್ಧತಿಯ ಮಾನದಂಡಗಳು 

 

      · ಕಾರ್ಯವಸ್ತುವಿನ ಮಟೀರಿಯಲ್ : ಇನ್ಕೋನೇಲ್, ನಿಮ್ಯಾನಿಕ್, ಟಿಟ್ಯಾನಿಯಮ್, ಸ್ಟೀಲ್,          ಕಾಪರ್, ಟಂಗ್ ಸ್ಟನ್, ಹಾರ್ಡ್ ಸ್ಟೀಲ್, ಕಾರ್ಬೈಡ್ಸ್, ಅಲ್ಯುಮಿನಿಯಮ್ ಅಲಾಯಿಸ್             ಮುಂತಾದ     ವಿದ್ಯುತ್ ವಾಹಕ ಲೋಹಗಳು.

      · ಕಾರ್ಯವಸ್ತುವಿನ ಆಕಾರ : ವರ್ಕ್ ಟೇಬಲ್ ನ ರಚನೆಯು ಮುಚ್ಚಿದ್ದು ಇಲ್ಲದಿರುವುದರಿಂದ     ಯಾವಾಗಲೂ ಬಳಸಲಾಗುವ ಯಂತ್ರ ಗರಿಷ್ಠ 600 ಕ್ರಿ.ಗ್ರಾಂ. ತೂಕದ್ದು ಮತ್ತು 310 ಮಿ.ಮೀ.ಗಿಂತ   ಕಡಿಮೆ ಎತ್ತರವಿರುವ ಕಾರ್ಯವಸ್ತುಗಳಲ್ಲಿ ಕೆಲಸ ಮಾಡಬಲ್ಲದು.

     · ರಂಧ್ರದ ಆಕಾರ/ ವ್ಯಾಸ : ಸ್ಪಾರ್ಕೋನಿಕ್ಸ್ ಸ್ಟ್ಯಾಂಡರ್ಡ್ ಇ.ಡಿ.ಎಮ್. ಡ್ರಿಲ್ ಮಶಿನ್ ನಲ್ಲಿ   ಕನಿಷ್ಠ 0.3 ಮಿ.ಮೀ. ವ್ಯಾಸದ ಡ್ರಿಲ್ ಮಾಡಬಹುದಾಗಿದೆ.

     · ರಂಧ್ರದ ಉದ್ದ/ ಆಳ: 1.5 ಮಿ.ಮೀ.ನಷ್ಟು ವ್ಯಾಸವಿರುವ ಇಲೆಕ್ಟೋರ್ಡ್ ಗೋಸ್ಕರ ಹೆಚ್ಚು   ನಿಖರತೆ ಇರುವ ವ್ಯಾಸ ಮತ್ತು ಆಳ ಇವುಗಳ ಅನುಪಾತವು 1:100 ಇಡಲು ಸೂಚಿಸಲಾಗಿದೆ. 1.6   ಮಿ.ಮೀ.ಗಿಂತ ಹೆಚ್ಚು ಆಕಾರಕ್ಕೆ 300 ಮಿ.ಮೀ.ನ ಡ್ರಿಲ್ಲಿಂಗ್ ಆಳವನ್ನು ಪಡೆಯಬಹುದು.   ಇದಕ್ಕೋಸ್ಕರ 1:200 ಅನುಪಾತವಿರಬೇಕು.

ಇ.ಡಿ.ಎಮ್. ಡ್ರಿಲ್ಲಿಂಗ್ ನ ಲಾಭಗಳು

 

     · ಇ.ಡಿ.ಎಮ್.ನಲ್ಲಿ ಪಾರಂಪಾರಿಕ ಡ್ರಿಲ್ಲಿಂಗ್ ನಲ್ಲಿ ಲಭಿಸಬಲ್ಲ A11 ಟಾಲರನ್ಸ್ ನ ಜಾಗದಲ್ಲಿ 0.3     ರಿಂದ 1 ಮಿ.ಮೀ. ತನಕ D9 ಹಾಗೆಯೇ 1 ಮಿ.ಮೀ. ನಿಂದ 3 ಮಿ.ಮೀ.ತನಕ C11 ಟಾಲರನ್ಸ್ ನಲ್ಲಿ     ಕೆಲಸ ಮಾಡಬಹುದಾಗಿದೆ. ಮಟೀರಿಯಲ್ ನ ಕಠಿಣತೆಯ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ       ಪರಿಣಾಮವುಂಟಾಗುವುದಿಲ್ಲ.

     · ಟಂಗ್ ಸ್ಟನ್ ಕಾರ್ಬೈಡ್, ನಿಮ್ಯಾನಿಕ್, ಇನ್ಕೋನೇಲ್ ಈ ಎಲ್ಲ ರೀತಿಯ ಮಟೀರಿಯಲ್   ಯಂತ್ರಣೆಯನ್ನು ಇ.ಡಿ.ಎಮ್.ನಿಂದ ಸುಲಭವಾಗಿ ಮಾಡಬಹುದು.

     · ತೊಡಕುಗಳುಳ್ಳ ಆಕಾರ ಮತ್ತು ತೆಳ್ಳಗೆ ವಾಲ್ ಥಿಕ್ ನೆಸ್ ಇರುವ ಕಾಂನ್ಫಿಗರೇಶನ್ ಆಕಾರವನ್ನು    ಹಾಳು ಮಾಡದೇ ಕತ್ತರಿಸುವುದು ಸಾಧ್ಯ.         

     · ಇ.ಡಿ.ಎಮ್. ಇದು ಜಾಬ್ ನ ಟೂಲ್ ನೊಂದಿಗೆ ನೇರವಾಗಿ ಸಂಪರ್ಕದಲ್ಲಿ ಬರದೇ ಮತ್ತು   ಬಲವನ್ನು ಬಳಸದೇ ಕೆಲಸ ಮಾಡಬಲ್ಲ ಪ್ರಕ್ರಿಯೆಯಾಗಿರುವುದರಿಂದ ಪಾರಂಪಾರಿಕ   ಯಂತ್ರಣೆಯ ಒತ್ತಡವನ್ನು ಸಹಿಸಲಾರದ ಸೂಕ್ಷ್ಮ ಅಥವಾ ಒಡೆಯಬಲ್ಲ ಭಾಗಗಳಿಗೋಸ್ಕರ   ಹೆಚ್ಚು ಉಪಯುಕ್ತವಾಗಿದೆ.

     · ಇದರಲ್ಲಿ ಯಾವುದೇ ರೀತಿಯ ಬರ್ ಉಳಿಯುವುದಿಲ್ಲ.

     · ಈ ರೀತಿಯಲ್ಲಿ ಕೇವಲ ವಿದ್ಯುತ್ ವಾಹಕ ಮಟೀರಿಯಲ್ ನ ಯಂತ್ರಣೆಯನ್ನು ಮಾಡಲಾಗುತ್ತದೆ. ಇದು ಈ ಪ್ರಕ್ರಿಯೆಯ ಮಿತಿಯಾಗಿದೆ.

ಇ.ಡಿ.ಎಮ್. ಡ್ರಿಲ್ಲಿಂಗ್ ಪ್ರಕ್ರಿಯೆಯಲ್ಲಿರುವ ವೇಗ ಮತ್ತು ಫೀಟ್ ರೇಟ್ 

 

80-100 ಕಿ.ಗ್ರಾಂ./ಸೆಂ.ಮೀ.2 ವೇಗದಿಂದ ಹೆಚ್ಚು ಒತ್ತಡದಲ್ಲಿ ಹರಿಯಬಲ್ಲ ನೀರು, ಈ ಅಂಶವನ್ನು ಇ.ಡಿ.ಎಮ್.ನಲ್ಲಿ ಗಮನದಲ್ಲಿಡಬೇಕಾದ ಪ್ರಮುಖ ಪ್ರಕ್ರಿಯೆಯಾಗಿದೆ. ಡ್ರಿಲ್ಲಿಂಗ್ ಮಟೀರಿಯಲ್ ಮತ್ತು ಡ್ರಿಲ್ ಮಾಡುವ ರಂಧ್ರಗಳ ವ್ಯಾಸ, ಅದರಂತೆಯೇ ಮೋಟರ್ ಫೀಡ್ ಮತ್ತು ವೇಗವನ್ನು ಬದಲಾಯಿಸುವ ಆವಶ್ಯಕತೆ ಇದೆ.

ಸಿರಾಮಿಕ್/ ರುಬಿ ಗೈಡ್ ಇವುಗಳ ಕೆಲಸ ಮತ್ತು ಮಹತ್ವ

 

ಇಲೆಕ್ಟ್ರೋಡ್ ಹೊಂದಿಕೊಳ್ಳುವ ಚಕ್ ಮತ್ತು ವರ್ಕ್ ಟೇಬಲ್ ಇದರಲ್ಲಿರುವ ದೂರ 350 ಮಿ.ಮೀ.ಗಿಂತ ಹೆಚ್ಚು ಇರುತ್ತದೆ. ಇಲೆಕ್ಟ್ರೋಡ್ ನ ವ್ಯಾಸ ಕಡಿಮೆ ಇರುವುದರಿಂದ ಇಲೆಕ್ಟ್ರೋಡ್ ರನ್ ಔಟ್ ಆಗುತ್ತದೆ ಮತ್ತು ಇಲೆಕ್ಟ್ರೋಡ್ ರನ್ ಔಟ್ ಕನಿಷ್ಠ ಪ್ರಮಾಣದಲ್ಲಿ ಅಳವಡಿಸಲು ವಿಶೇಷವಾದ ರುಬಿ ಗೈಡ್ ಅಥವಾ ಸಿರಾಮಿಕ್ ಗೈಡ್ ನಂತಹ ವಿದ್ಯುತ್ ರೋಧಕದ ಆವಶ್ಯಕತೆ ಇರುತ್ತದೆ. ಇದರಿಂದಾಗಿ ಡ್ರಿಲ್ ಮಾಡಿರುವ ರಂಧ್ರಗಳ ವ್ಯಾಸದ ನಿಖರತೆಯು ಹೆಚ್ಚು ಉಚ್ಚಮಟ್ಟದ್ದಾಗಿರುತ್ತದೆ.

ಆಪರೇಟರ್ ವಹಿಸಬೇಕಾದ ಮುತುವರ್ಜಿ

 

      1. ವರ್ಕ್ ಟೇಬಲ್ ನ ಸರ್ಫೇಸ್ ಸ್ವಚ್ಛಗೊಳಿಸಲು ಮತ್ತು ತುಕ್ಕು ಹಿಡಿಯದಂತೆ ಮುತುವರ್ಜಿ     ವಹಿಸಬೇಕು.

      2. ಡ್ರಿಲ್ ಆಪರೇಶನ್ ನಲ್ಲಿ ಬಳಸಲಾಗುವ ನೀರು ಅಥವಾ ಆಯಿಲ್ ಯೋಗ್ಯ ರೀತಿಯಲ್ಲಿ ಫಿಲ್ಟರ್   ಮಾಡಿರಬೇಕು. ಅದು ಸ್ಪಚ್ಛವಿದೆ ಎಂಬುದರ ಕುರಿತು ಖಾತರಿ ವಹಿಸಬೇಕು. ಒಂದು ವೇಳೆ   ಫಿಲ್ಟರೇಶನ್ ಮಾಡುವ ವ್ಯವಸ್ಥೆ ಇರದಿದ್ದಲ್ಲಿ ಡೈ ಇಲೆಕ್ಟ್ರಿಕ್ ನೀರನ್ನು ಮತ್ತೆ ಬಳಸಬಾರದು.

      3. ಗೈಡ್ ಹೋಲ್ಡರ್ ಮತ್ತು ಗೈಡ್ ಇವುಗಳ ಯೋಗ್ಯ ಅಲೈನ್ ಮೆಂಟ್ ಇರುವುದೂ   ಅತ್ಯಾವಶ್ಯಕವಾಗಿದೆ. ಒತ್ತಡ ಮತ್ತು ಬಲವನ್ನು ನೀಡದೇ ರುಬಿ ಗೈಡ್, ಗೈಡ್ ಹೋಲ್ಡಿಂಗ್   ವಿಭಾಗದಲ್ಲಿ ಹಾಕಬೇಕು. ಗೈಡ್ ಹೋಲ್ಡರ್ ನ ಒಳ ಸಿಲಿಂಡ್ರಿಸಿಟಿ ಪ್ರತಿ ಹದಿನೈದು   ದಿನಗಳಿಗೊಮ್ಮೆ  ಪರಿಶೀಲಿಸಬೇಕು.                                                                                                    

 4. ಬಗ್ಗಿರುವ ಅಥವಾ ಬ್ಲಾಕ್ ಇರುವ ಇಲೆಕ್ಟ್ರೋಡ್ ಬಳಸಬಾರದು. ಕಾರಣ ಇದರಿಂದಾಗಿ   ಕೊಳವೆಯಿಂದ ಹರಿಯಬಲ್ಲ ನೀರಿನ ಪ್ರವಾಹದಲ್ಲಿ ಯಾವುದೇ ರೀತಿಯ ಪರಿಣಾಮವು   ಉಂಟಾಗುವುದಿಲ್ಲ.
 

 

9822094669
shailesh@sparkonix.com

ಶೈಲೇಶ್ ಪಟವರ್ಧನ್ ಇವರು ಸ್ಪಾರ್ಕೋನಿಕ್ಸ್ (ಇಂಡಿಯಾ) ಪ್ರೈ.ಲಿ. ಈ ಕಂಪನಿಯ ನಿರ್ದೇಶಕರಾಗಿದ್ದಾರೆ. ಇ.ಡಿ.ಎಮ್. ಮಶಿನ್ ಗಳ ಉತ್ಪಾದನೆಯಲ್ಲಿ ಅವರಿಗೆ 10 ವರ್ಷ ಕಾಲಾವಧಿಯ ಅನುಭವವಿದೆ.

 
 
Powered By Sangraha 9.0