ಫಾಸ್ಟನರ್ ನ ಪರಿಚಯ : ಸ್ಟ್ಯಾಂಡರ್ಡ್ ಗಳ ಪದ್ಧತಿ

17 Aug 2021 16:16:20
ಅಳತೆಯ ಪದ್ಧತಿಗಳ (ಮೆಜರ್ ಮೆಂಟ್ ಸಿಸ್ಟಮ್) ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಸಂಪೂರ್ಣ ಇತಿಹಾಸದ ಕಾಲದಿಂದಲೂ ನಾವು ಗಮನಿಸಬಲ್ಲೆವು. ಇಂದು ಹೆಚ್ಚಿನ ಔದ್ಯೋಗಿಕ ದೇಶಗಳಲ್ಲಿ ಪ್ರಮುಖವಾಗಿ ಇಂಚು-ಪೌಂಡ್ ಮತ್ತು ಮೆಟ್ರಿಕ್ ಈ ಎರಡೇ ಅಳತೆಯ ಪದ್ಧತಿಗಳನ್ನು ಬಳಸಲಾಗುತ್ತದೆ. ಅಮೇರಿಕಾ ಮತ್ತು ಇನ್ನೂ ಒಂದೆರಡು ದೇಶಗಳನ್ನು ಬಿಟ್ಟು ಜಗತ್ತಿನಾದ್ಯಂತ ಉಳಿದ ಎಲ್ಲ ದೇಶಗಳು ಅವರವರ ರಾಷ್ಟ್ರೀಯ ಮಾನದಂಡಗಳಿಗೆ ಅನುಸಾರವಾಗಿ ಮೆಟ್ರಿಕ್ ಪದ್ಧತಿಯನ್ನು ಬಳಸುತ್ತಿದ್ದಾರೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಸಾರವಾಗಿ ಮೆಟ್ರಿಕ್ ಪದ್ಧತಿಯಲ್ಲಿ ಅನೇಕ ರೀತಿಯ ಬದಲಾವಣೆಗಳಾಗುತ್ತಿವೆ. ಇದಕ್ಕೆ ಸಂಬಂಧಪಟ್ಟ ಅನೇಕ ಹೊಸ ಹೊಸ ದಾರಿಗಳನ್ನು ಹುಡುಕಲಾಗಿದೆ.
ಚಿತ್ರ ಕ್ರ. 1 : ಹೆಕ್ಸ್ ಕ್ಯಾಪ್ ಸ್ಕ್ರೂ
 

fffvgfvfv_1  H  
ಇಂದು, ಅಮೇರಿಕಾದೊಂದಿಗೆ ಎಲ್ಲ ದೇಶಗಳಲ್ಲಿಯೂ ಇಂಟರ್ ನ್ಯಾಶನಲ್ ಸಿಸ್ಟಮ್ ಆಫ್ ಯುನಿಟ್ಸ್ ಅಥವಾ SI ಎಂಬ ಹೆಸರಿನಿಂದ ಗುರುತಿಸಲಾಗುವ ಮೆಟ್ರಿಕ್ ಎಂಬ ಪದ್ಧತಿಯನ್ನು ಬಳಸುವಲ್ಲಿ ಒಂದು ಸಮಾನವಾದ ವಿಚಾರವನ್ನು ಮಾಡಲಾಗಿದೆ. ಪ್ರಸ್ತುತ ಅಮೇರಿಕಾ SI ಮತ್ತು ಇಂಚು-ಪೌಂಡ್ ಈ ಎರಡೂ ಮಾನದಂಡಗಳನ್ನು ಬಳಸುತ್ತಿದೆ. ಈ ಹಿಂದೆ ಇಂಚು-ಪೌಂಡ್ ಬಳಸುತ್ತಿದ್ದ ಹೆಚ್ಚಿನ ದೇಶಗಳು ಈಗ ಹೊಸ ಮಾನದಂಡಗಳಲ್ಲಿ SI ಪದ್ಧತಿಯನ್ನು ಬಳಸುತ್ತಿದ್ದು, ಇಂಚು-ಪೌಂಡ್ ಉತ್ಪಾದನೆಗಳಲ್ಲಿ ಬಳಸಲಾಗುವ ಹಳೆಯ ಮಶಿನ್ ಮತ್ತು ಉಪಕರಣಗಳ ಉಸ್ತುವಾರಿಗೆ ಮಾತ್ರ ಸೀಮಿತವಾಗಿದೆ. ಅಮೇರಿಕಾದಲ್ಲಿರುವ ಅನೇಕ ಉದ್ಯಮಗಳು ಅವರವರ ಕೆಲಸಗಳಲ್ಲಿ ಮೆಟ್ರಿಕ್ ಪದ್ಧತಿಯನ್ನು ಕಾರ್ಯಗತಗೊಳಿಸಿದ್ದಾರೆ.
ಮೆಟ್ರಿಕ್ ಪದ್ಧತಿಯಲ್ಲಿ ಮಾನದಂಡಗಳನ್ನು ಅನುಷ್ಠಾನಗೊಳಿಸುವುದೂ ಒಂದು ಸಮಸ್ಯೆಯಾಗಿದೆ. ಒಂದು ವೇಳೆ ಹೆಚ್ಚಿನ ಎಲ್ಲ ಮೆಟ್ರಿಕ್ ಆಯಾಮಗಳನ್ನು ISO ಮಾನದಂಡಗಳಿಗೆ ಸಂಪೂರ್ಣವಾಗಿ ರೂಪಾಂತರಿಸುವ ಗುರಿಯನ್ನು ಇಟ್ಟುಕೊಂಡಿದ್ದರೂ ಕೂಡಾ ಬಹುತಾಂಶ ಉದ್ಯಮಗಳಲ್ಲಿ ಅವರಲ್ಲಿ ರೂಢಿಯಲ್ಲಿರುವ DIN ಅಥವಾ ಮೆಟ್ರಿಕ್ ಮಾನದಂಡಗಳನ್ನು ANSI ಯಲ್ಲಿ ರೂಪಾಂತರಿಸಿದಾಗ ಲಭಿಸುವ ವೇಗ ಕಡಿಮೆಯಾಗಿದೆ. ಉದಾಹರಣೆ, ಮೆಟ್ರಿಕ್ ಹೆಕ್ಸ್ ಕ್ಯಾಪ್ ಸ್ಕ್ರೂ ಸಾಮಾನ್ಯವಾಗಿ ಮೂರರಲ್ಲಿ ಒಂದು ಮಾನದಂಡವನ್ನು ಅನುಸರಿಸಿ ಉತ್ಪಾದಿಸಲಾಗುತ್ತದೆ.
• DIN 931 (DIN 933 ಪೂರ್ಣ ಥ್ರೆಡ್ ನೊಂದಿಗೆ ಅಂದರೆ ಫುಲ್ ಥ್ರೆಡೆಡ್).
• ISO 4014 (ISO 4017 ಸಂಪೂರ್ಣ ಥ್ರೆಡ್ ನೊಂದಿಗೆ)
• ANSI/ ASME B 18.2.3.1M
ಈ ಮೂರೂ ಮಾನದಂಡಗಳಲ್ಲಿ ತಯಾರಾಗುವಂತಹ ಉತ್ಪಾದನೆಗಳನ್ನು ಒಂದು ಮಾನದಂಡದಿಂದ ಇನ್ನೊಂದು ಮಾನದಂಡಕ್ಕೆ ರೂಪಾಂತರಿಸುವುದು ಸಾಧ್ಯ. ಸೂಚಿಯಲ್ಲಿರುವ ಯಾವುದೇ ಮಾನದಂಡಗಳ ಆಯಾಮಗಳ ಆವಶ್ಯಕತೆಗೆ ಅನುಸಾರವಾಗಿ ಉತ್ಪಾದಿಸಲಾಗಿರುವ ಹೆಕ್ಸ್ ಕ್ಯಾಪ್ ಸ್ಕ್ರೂ ಯಾವುದೇ ಸಂಬಂಧಪಟ್ಟ ಮಾನದಂಡಗಳ ಟಾಲರನ್ಸ್ ಗೆ ಅನುಸಾರವಾಗಿ ಉತ್ಪಾದಿಸಲಾಗಿರುವ ನಟ್ ನೊಂದಿಗೆ ಬಳಸಬಹುದಾಗಿದೆ. ಈ ಮಾನದಂಡಗಳಲ್ಲಿರುವ ಮಹತ್ತರವಾದ ವ್ಯತ್ಯಾಸವೆಂದರೆ M10, M12 ಮತ್ತು M14 ಇವುಗಳ ಷಟ್ಕೋನದ ತುದಿಯಲ್ಲಿ ಎದುರುಬದುರಾಗಿ ಸರ್ಫೇಸ್ ನಲ್ಲಿರುವ ದೂರ.
ಫಾಸ್ಟನರ್ ನ ನಿಖರತೆ ಮತ್ತು ಸಂಪೂರ್ಣ ವರ್ಣನೆಯನ್ನು ತಾಂತ್ರಿಕದೃಷ್ಟಿಯಿಂದ ಹೇಗೆ ಮಾಡಲಾಗುತ್ತದೆ, ಎಂಬುದರ ಕುರಿತಾದ ಒಂದು ಉದಾಹರಣೆಯನ್ನು ಈ ಮುಂದೆ ನೀಡಲಾಗಿದೆ.
ಹೆಕ್ಸ್ ಕ್ಯಾಪ್ ಸ್ಕ್ರೂ DIN 933, M16 x 140 ಪ್ರಾಪರ್ಟಿ ಕ್ಲಾಸ್ 10.9, ಫಾಸ್ಫೆಟೆಡ್/ ಬ್ಲ್ಯಾಕೋಡೈಜಡ್.
ಫಾಸ್ಟನರ್ಸ್ ನ್ನು ವರ್ಣಿಸುವಾಗ ಈ ಮುಂದಿನ ಅಂಶಗಳನ್ನು ಒಳಗೂಡಿಸಬೇಕಾಗುತ್ತದೆ.
1. ಫಾಸ್ಟನರ್ ಅಂದರೆ ಏನು? ಉದಾಹರಣೆ, ಸ್ಟಡ್, ಫುಲ್ ಥ್ರೆಡೆಡ್ ಗಳಿರುವ ಸ್ಟಡ್, ಡಬಲ್ ಎಂಡೆಡ್ ಸ್ಟಡ್, ಷಟ್ಕೋನವಿರುವ ಅರ್ಧದ ತನಕ ಥ್ರೆಡ್ ಗಳಿರುವ ಬೋಲ್ಟ್ (ಹೆಕ್ಸ್ ಹಾಫ್ ಥ್ರೆಡೆಡ್ ಬೋಲ್ಟ್), ಸಾಕೇಟೆಡ್ ಕ್ಯಾಪ್ ಸ್ಕ್ರೂ ಮುಂತಾದವುಗಳು.
2. ಇದಕ್ಕೆ ಅನ್ವಯಿಸಿರುವ ಮಾನದಂಡಗಳು ಯಾವುದು? ಉದಾಹರಣೆ, DIN, ASME, ANSI, ISO, IS, ಜಾಪನೀಜ್ ಸ್ಟ್ಯಾಂಡರ್ಡ್ಸ್ ಇವುಗಳಲ್ಲಿ ಯಾವುದೇ ಇರಬಲ್ಲದು. ಮೇಲೆ ನೀಡಿರುವ ಉದಾಹರಣೆಯಲ್ಲಿ DIN 933 ರಿಂದ ಈ ವಿಧದ ಫಾಸ್ಟನರ್ ಗೋಸ್ಕರ ಬಳಸಲಾಗುವ ಲೋಹಗಳ ಎಲ್ಲ ಗುಣವಿಶೇಷಗಳನ್ನು ನಿಗದಿಸಲಾಗಿರುತ್ತದೆ.
3. ಮಾಪನಗಳ ಗುಣವಿಶೇಷ (ಡೈಮೆನ್ಶನಲ್ ಕರೆಕ್ಟರಿಸ್ಟಿಕ್ಸ್) : ಒಂದು ವೇಳೆ ಮೇಲ್ ಥ್ರೆಡೆಡ್ ಫಾಸ್ಟನರ್ ಇದ್ದಲ್ಲಿ, ಅದರಲ್ಲಿರುವ ಥ್ರೆಡ್ ಗಳ ಆಕಾರ (ಸೈಜ್) ಮತ್ತು ಉದ್ದ (ಲೆಂಗ್ಥ್) ನಮೂದಿಸಲಾಗಿರುತ್ತದೆ. ಒಂದು ವೇಳೆ ಅದು ಫೀಮೇಲ್ ವಿಧದ ಫಾಸ್ಟನರ್ ಇದ್ದಲ್ಲಿ ಕೇವಲ ಥ್ರೆಡ್ ಗಳ ಆಕಾರವನ್ನು ನೀಡಲಾಗಿರುತ್ತದೆ. ಕಾರಣ ಮಾನದಂಡಗಳಲ್ಲಿಯೇ ಅದರ ಕುರಿತಾದ ಉಳಿದ ಮಾಪನಗಳನ್ನು ನೀಡಲಾಗಿರುತ್ತದೆ.
4. ಪ್ರಾಪರ್ಟಿ ಕ್ಲಾಸ್ : ಪ್ರಾಪರ್ಟಿ ಕ್ಲಾಸ್ ಅಂದರೆ, ಮಟೀರಿಯಲ್ ನ ಆವಶ್ಯಕತೆ ಇರುವ ಸ್ಟ್ರೇಂಗ್ಥ್ ಆಗಿರುತ್ತದೆ.
5. ಚುಟುಕಾಗಿ ಹೇಳುವುದಾದಲ್ಲಿ, ಫಾಸ್ಟನರ್ ನ ವರ್ಣನೆಯನ್ನು ತಾಂತ್ರಿಕದೃಷ್ಟಿಯಲ್ಲಿ ಮಾಡುವಾಗ ಈ ಮುಂದಿನ ಅಂಶಗಳನ್ನು ನೀಡುವುದು ಅತ್ಯಾವಶ್ಯಕವಾಗಿದೆ.
1. ಫಾಸ್ಟನರ್ ನ ವಿಧ
2. ಮಟೀರಿಯಲ್ ಗುಣವಿಶೇಷದ ಮಾನದಂಡಗಳು ಅಥವಾ ಪ್ರಾಪರ್ಟಿ ಕ್ಲಾಸ್ ಮಾನದಂಡಗಳು.
3. ಮಾಪನದ ಗುಣವಿಶೇಷ
4. ಫಾಸ್ಟನರ್ ನ ನಾಮಿನಲ್ ಆಕಾರ
5. ಪಿಚ್ ಮತ್ತು ಥ್ರೆಡ್ ಗಳಲ್ಲಿರುವ ಟಾಲರನ್ಸ್
6. ಸರ್ಫೇಸ್ ಟ್ರೀಟ್ ಮೆಂಟ್
ಈ ಎಲ್ಲ ವರ್ಣನೆಗಳನ್ನು ಗಮನಿಸಿ ನಾವು ಪಾಸ್ಟನರ್ ಕುರಿತು ಕೆಲವು ಪ್ರಮುಖ ಅಂಶಗಳ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಇದರಲ್ಲಿ ಪ್ರಪ್ರಥಮವಾದ ಅಂಶವೆಂದರೆ, ಥ್ರೆಡಗಳಲ್ಲಿರುವ ಟಾಲರನ್ಸ್. ಸಾಧಾರಣವಾಗಿ ಯಾವುದೇ ನಟ್, ಬೋಲ್ಟ್ ಅಥವಾ ಸ್ಟಡ್ (ರೆಗ್ಯುರಲ್ ಫಿಟ್ ಎಂಬುದಾಗಿ ಕರೆಯಲಾಗುತ್ತದೆ) ಬಳಸುವಾಗ ಮೇಲ್ ಫಾಸ್ಟನರ್ ಗೆ ಟಾಲರನ್ಸ್ 6g ಮತ್ತು ಫೀಮೆಲ್ ಫಾಸ್ಟನರ್ ಗೆ 6H ಇರುತ್ತದೆ.
 
 
ಮೆಟ್ರಿಕ್ ಮಾನದಂಡಗಳಲ್ಲಿ ಥ್ರೆಡ್ ಗಳಲ್ಲಿರುವ ಟಾಲರನ್ಸ್
ಥ್ರೆಡ್ ಗಳ ಟಾಲರನ್ಸ್, ಒಂದು ಸಂಖ್ಯೆ ಮತ್ತು ಅದರ ನಂತರ ಒಂದು ಅಕ್ಷರ ಬಳಸಿ ತೋರಿಸಲಾಗುತ್ತದೆ. ಸಂಖ್ಯೆ ಟಾಲರನ್ಸ್ ನ ಶ್ರೇಣಿಯನ್ನು ತೋರಿಸುತ್ತದೆ. ಕ್ಯಾಪಿಟಲ್ ಅಕ್ಷರಗಳು ಒಳ ನಟ್ ಗಳ ಟಾಲರನ್ಸ್ ತೋರಿಸುತ್ತವೆ. ಲೋವರ್ (ಚಿಕ್ಕ) ಲಿಪಿಯಲ್ಲಿರುವ ಅಕ್ಷರಗಳು ಹೊರ ಬೋಲ್ಟ್ ಗಳ ಟಾಲರನ್ಸ್ ತೋರಿಸುತ್ತವೆ.
6g ಥ್ರೆಡ್ ಗಳಿಗೆ ಎಲ್ಲೆಡೆ ನಿಯಮಿತವಾಗಿ ಬಳಸಲಾಗುವ ಸ್ಟ್ಯಾಂಡರ್ಡ್ ಟಾಲರನ್ಸ್ ಆಗಿರುತ್ತದೆ. ಫಾಸ್ಟನರ್ ನ ವರ್ಣನೆಯಲ್ಲಿ ಟಾಲರನ್ಸ್ ನೀಡಲಾಗಿರುವುದಿಲ್ಲ, ಆಗ ಅದು 6g ಇದೆ ಎಂಬುದನ್ನು ತಿಳಿಯಲಾಗುತ್ತದೆ. ಇಂಟರ್ ಫೆರನ್ಸ್, ಟೈಟ್ ಅಥವಾ ಲೂಜ್ ಥ್ರೆಡ್ ಗಳಿರುವಾಗ ಅದಕ್ಕೆ ವಿಶೇಷ ಟಾಲರನ್ಸ್ ನೀಡಬೇಕಾಗುತ್ತದೆ. ಉದಾಹರಣೆ, ಪಡೆದಿರುವ ಫಾಸ್ಟನರ್ ನ ವರ್ಣನೆಯಲ್ಲಿ ಟಾಲರನ್ಸ್ ನೀಡಲಾಗಿಲ್ಲ, ಆದ್ದರಿಂದಲೇ ಅದು 6g ಎಂಬುದಾಗಿ ತಿಳಿಯಲಾಗುತ್ತದೆ.
 
 
ಥ್ರೆಡ್ ಗಳು
ಮೆಟ್ರಿಕ್ ಮಾನದಂಡದಲ್ಲಿ ಥ್ರೆಡ್ M ಅಕ್ಷರದಿಂದ ತೋರಿಸಲಾಗುತ್ತದೆ. ಇದರ ಮುಂದಿರುವ ಅಂಕೆಯು ಫಾಸ್ಟನರ್ ನ ನಾಮಿನಲ್ ಡಯಾಮೀಟರ್ ಆಗಿರುತ್ತದೆ. ಅಂದರೆ ಮೇಲಿನ ಉದಾಹರಣೆಯಲ್ಲಿ M16 ರಲ್ಲಿರುವ 16 ಈ ಅಂಕೆಯು ನಾಮಿನಲ್ ಡಯಾಮೀಟರ್ ಆಗಿದೆ. ಇದನ್ನು ಅನೇಕ ಬಾರಿ ಹೊರ ವ್ಯಾಸ (OD) ಎಂಬುದಾಗಿ ತಿಳಿಯಲಾಗುತ್ತದೆ. ಆದರೆ ಅದು ಹೊರ ವ್ಯಾಸ (ಮೇಜರ್ ಡಯಾಮೀಟರ್) ಆಗಿರದೇ ತಾಂತ್ರಿಕದೃಷ್ಟಿಯಲ್ಲಿ ನಾಮಿನಲ್ ಡಯಾಮೀಟರ್ ಆಗಿರುತ್ತದೆ. ಅದರಲ್ಲಿರುವ ಇನ್ನೊಂದು ಮಹತ್ವದ ಭಾಗವೆಂದರೆ ಪಿಚ್. ಪಿಚ್ ನಲ್ಲಿ ಎರಡು ವಿಧಗಳಿವೆ. ಮೊದಲನೆಯದಾಗಿ ಕೋರ್ಸ್ ಪಿಚ್ ಮತ್ತು ಇನ್ನೊಂದು ಫೈನ್ ಪಿಚ್. ಪಿಚ್ ವಿಶೇಷವಾಗಿ ಉಲ್ಲೇಖಿಸದಿದ್ದಲ್ಲಿ ಅದು ಮಾನದಂಡಗಳಿಗೆ ಅನುಸಾರವಾಗಿ ನೀಡಿರುವ ಕೋರ್ಸ್ ಪಿಚ್ ಎಂಬುದಾಗಿ ತಿಳಿಯಲಾಗುತ್ತದೆ. ಫೈನ್ ಪಿಚ್ ಇದ್ದಲ್ಲಿ ಅದರ ಕುರಿತಾದ ಉಲ್ಲೇಖವನ್ನು ವರ್ಣನೆಯಲ್ಲಿ ಮಾಡುವುದು ಅತ್ಯಗತ್ಯವಾಗಿದೆ. ಉದಾಹರಣೆ, M16 ಗೆ 2 ಮಿ.ಮೀ. ಇದು ಸ್ಟ್ಯಾಂಡರ್ಡ್ ಪಿಚ್ ಆಗಿರುತ್ತದೆ. ಸಾಮಾನ್ಯವಾಗಿ ನಾಮಿನಲ್ ಡಯಾಮೀಟರ್ ಮತ್ತು ಪಿಚ್ ನ ಆಧಾರದಲ್ಲಿ ಥ್ರೆಡ್ ಗಳ ವರ್ಣನೆಯನ್ನು ಮಾಡಲಾಗುತ್ತದೆ. ಫೀಮೇಲ್ ಥ್ರೆಡ್ ಮತ್ತು ಮೇಲ್ ಥ್ರೆಡ್ ಇವುಗಳಲ್ಲಿರುವ ಸಂಪರ್ಕ, ಕೋರ್ಸ್ ಪಿಚ್ ಗಿಂತ ಫೈನ್ ಪಿಚ್ ನಲ್ಲಿ ಹೆಚ್ಚು ಇರುತ್ತದೆ. ಇದರಿಂದಾಗಿ ಪೈನ್ ಪಿಚ್ ನ ಸ್ಟ್ರೇಂಗ್ಥ್ ಹೆಚ್ಚು ಇರುತ್ತದೆ. ಸಂಪರ್ಕವು ಹೆಚ್ಚು ಇರುವುದರಿಂದ ಲೀಕೇಜ್ ಪ್ರೂಫ್ ಇರುವಲ್ಲಿ ಫೈನ್ ಪಿಚ್ ಬಳಸಲಾಗುತ್ತದೆ.


fffvgfvfvddfvdfv_1 & 
ಗ್ರಾಫ್ ಕ್ರ. 1 : ಸ್ಟ್ರೆಸ್ ಸ್ಟ್ರೇನ್ ಗ್ರಾಫ್
 
 
ಪ್ರಾಪರ್ಟಿ ಕ್ಲಾಸ್
ಮೇಲಿನ ಉದಾಹರಣೆಯಲ್ಲಿ ಪ್ರಾಪರ್ಟಿ ಕ್ಲಾಸ್ 10.9 ಎಂಬುದನ್ನು ಉಲ್ಲೇಖಿಸಲಾಗಿದೆ. ಈ ಅಂಕೆಗಳಿಂದ ಫಾಸ್ಟನರ್ ನ ಸ್ಟ್ರೆಂಗ್ಥ್ ಎಷ್ಟು ಇರುವುದನ್ನು ಅಪೇಕ್ಷಿಸಲಾಗಿದೆ, ಎಂಬ ಮಾಹಿತಿಯು ಲಭಿಸುತ್ತದೆ. ಉದಾಹರಣೆ, 10.9 ಏನು ತೋರಿಸುತ್ತದೆ? 10 ಕ್ಕೆ (ದಶಮಾಂಶ ಚಿಹ್ನೆಯ ಮೊದಲ ಅಂಕೆಯನ್ನು) 100 ರಿಂದ ಗುಣಿಸಿದಾಗ ಬರುವ ಅಂಕೆ ಅಂದರೆ ಮೆಗಾ ಪಾಸ್ಕಲ್ ನಲ್ಲಿರುವ ಟೆನ್ಸೈಲ್ ಸ್ಟ್ರೆಂಗ್ಥ್ ಆಗಿರುತ್ತದೆ. 10.9 ನ ಬೋಲ್ಟ್ ನ ಕುರಿತು ವಿಚಾರ ಮಾಡಿದಲ್ಲಿ ಅದಕ್ಕೋಸ್ಕರದ ಟೆನ್ಸೈಲ್ ಸ್ಟ್ರೆಂಗ್ಥ್ ಸುಮಾರು 1000 MPa ಇದ್ದಲ್ಲಿ, 9 ಈ ಅಂಕೆಯು ಟೆನ್ಸೈಲ್ ಸ್ಟ್ರೆಂಗ್ಥ್ ನ ತುಲನೆಯಲ್ಲಿ ಯೀಲ್ಡ್ ಸ್ಟ್ರೆಂಗ್ಥ್ ನ ಶೇಕಡಾವಾರನ್ನು ತೋರಿಸುತ್ತದೆ. ಯೀಲ್ಡ್ ಸ್ಟ್ರೆಂಗ್ಥ್ ನ ಗ್ರಾಫ್ ನಲ್ಲಿ, ಯಾವುದೇ ಮಟೀರಿಯಲ್ ನ ಪರೀಕ್ಷೆಯನ್ನು ಮಾಡುವಾಗ ಸ್ಟ್ರೇಂಗ್ಥ್ ಯೀಲ್ಡ್ ಪಾಯಿಂಟ್ ತನಕ ತಲುಪಿದ ನಂತರವೂ ತುಂಡಾಗುವ ಮುಂಚೆ ಸ್ವಲ್ಪ ಪ್ರಮಾಣದಲ್ಲಿ ಸ್ಟ್ರೆಂಗ್ಥ್ ನ ಬಳಕೆಯನ್ನು ಹೆಚ್ಚಾಗಿ ಮಾಡಿರುವುದು ಗಮನಕ್ಕೆ ಬರುತ್ತದೆ. ಗ್ರಾಫ್ ಕ್ರ. 1 ರಲ್ಲಿ ಕರ್ವ್ ಯೀಲ್ಡ್ ಸ್ಟ್ರೇಸ್ ಪಾಯಿಂಟ್ ನ ತನಕ ತಲುಪಿದ ನಂತರ ಅದು ಕೆಳಗೆ ಬಂದು ತುಂಡಾಗುತ್ತದೆ. ಅಂದರೆ ಈ ಉದಾಹರಣೆಯಲ್ಲಿ ತುಂಡಾಗುವ ಸ್ಟ್ರೆಸ್ ಅಲ್ಟಿಮೇಟ್ ಟೆನ್ಸೈಲ್ ಸ್ಟ್ರೆಂಗ್ಥ್ ನ 90% ಇರುತ್ತದೆ. ಯಿಲ್ಡಿಂಗ್ ಆದನಂತರ ಅಂದರೆ ಡೀಫಾರ್ಮೇಶನ್ ಪ್ರಾರಂಭಿಸಿದ ನಂತರ ತುಂಡಾಗುವ ತನಕ ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಡಿಸೈನ್ ಮಾಡುವಾಗ ಅದರ ಉಪಯೋಗವಾಗುತ್ತದೆ. ಪಾಸ್ಟನರ್ ನ ಉಪಯೋಗವನ್ನು ಯಾವ ಕೆಲಸಕ್ಕಾಗಿ ಮಾಡಲಾಗುತ್ತದೆ, ಇದರಲ್ಲಿಯೂ ಯಾವ ಪ್ರಾಪರ್ಟಿ ಕ್ಲಾಸ್ ಬಳಸುವುದು, ಎಂಬುದನ್ನು ನಿರ್ಧರಿಸಲಾಗುತ್ತದೆ.
 

fsgdfsdfsdfv_1   
ಕೋಷ್ಟಕ ಕ್ರ. 1 : ಥ್ರೆಡ್ ಗಳ ವಿಧಗಳು ಮತ್ತು ಅದರ ಸಾಧಾರಣ ಉಪಯೋಗ
 
 
4.6, 4.8, 6.8, 8.8, 10.9, 12.9 ಇದು 6 ಪ್ರಾಪರ್ಟಿ ಕ್ಲಾಸ್ ನಿಯಮಿತವಾಗಿ ಬಳಸಲಾಗುತ್ತದೆ. ಈ 6 ಕ್ಲಾಸ್ ನ ಫಾಸ್ಟನರ್ ಮಾರುಕಟ್ಟೆಯಲ್ಲಿ ನಿಯಮಿತವಾಗಿ ಲಭ್ಯವಿವೆ. 4.6, 4.8 ಮತ್ತು 6.8 ಈ ಮೂರು ಗ್ರೇಡ್, ಲೋ-ಕಾರ್ಬನ್ ಸ್ಟೀಲ್ ನದ್ದಾಗಿದ್ದು ಅವುಗಳ ಸ್ಟ್ರೆಂಗ್ಥ್ ತುಂಬಾ ಕಡಿಮೆ ಇರುತ್ತದೆ. ಇದನ್ನು ಆಡು ಭಾಷೆಯಲ್ಲಿ MS ಎಂಬುದಾಗಿ ಕರೆಯಲಾಗುತ್ತದೆ. 8.8 ಕ್ಲಾಸ್ ಇದು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಬಳಸಲಾಗುವ ಕ್ಲಾಸ್ ಆಗಿದೆ. ಅನೇಕ ವಿಧದ ಪಾಸ್ಟನರ್ ಗಳಲ್ಲಿ ಸುಮಾರು 60% ಫಾಸ್ಟನರ್ 8.8 ಕ್ಲಾಸ್ ನಲ್ಲಿರುತ್ತವೆ. 10.9 ಮತ್ತು 12.9 ಇವೆರಡೂ ಗ್ರೇಡ್ ಅಲಾಯ್ ಸ್ಟೀಲ್ ನದ್ದಾಗಿದ್ದು ಅವುಗಳ ಟೆನ್ಸೈಲ್ ಸ್ಟ್ರೆಂಗ್ಥ್ ತುಂಬಾ ಹೆಚ್ಚು ಇರುತ್ತದೆ. ಅವುಗಳಿಗೆ ಹೈ ಟೆನ್ಸೈಲ್ ಬೋಲ್ಟ್ ಎಂಬುದಾಗಿಯೂ ಕರೆಯಲಾಗುತ್ತದೆ. ಇತ್ತೀಚೆಗೆ 10.9 ನ ಬೋಲ್ಟ್ ಬಳಸುವಲ್ಲಿ ಹೆಚ್ಚು ಒಲವು ಕಂಡುಬರುತ್ತಿದೆ. ಕಾರಣ ನಟ್ ಮತ್ತು ಬೋಲ್ಟ್ ಒಂದೇ ಗ್ರೇಡ್ ನಲ್ಲಿ ಪಡೆಯುವುದಕ್ಕಿಂತ ಬೋಲ್ಟ್ ಹೆಚ್ಚು ಸ್ಟ್ರೇಂಗ್ಥ್ ನದ್ದೇ ಪಡೆಯಬೇಕು, ಎಂಬುದಾಗಿ ಅನೇಕರು ವಿಚಾರ ಮಾಡುತ್ತಿರುವುದು ಕಂಡುಬರುತ್ತಿದೆ. ಕೆಲವೇ ಅಪವಾದಾತ್ಮಕವಾದ ಪರಿಸ್ಥಿತಿಯಲ್ಲಿ ಒಂದು ವೇಳೆ ಅದರಲ್ಲಿರುವ ಒತ್ತಡವು ಹೆಚ್ಚಾದಲ್ಲಿ, ನಟ್ ತುಂಡಾದರೂ ಕೂಡಾ ಬೋಲ್ಟ್ ತುಂಡಾಗಬಾರದು. ಕಾರಣ ಬೋಲ್ಟ್ ತುಂಬಾ ದುಬಾರಿಯಾಗಿರುತ್ತದೆ. ಒತ್ತಡ ಒಂದು ಮಿತಿಗಿಂತ ಮುಂದೆ ಸರಿದಲ್ಲಿ ಬೋಲ್ಟ್ ನ ಡೀಫಾರ್ಮ್ ಆಗಬಲ್ಲದು. ಆದರೆ ಅದು ತುಂಡಾಗಲಾರದು. ಎಕ್ಸೆಸಿಬಿಲಿಟಿ ಅಂದರೆ ಪ್ರವೇಶಿಸುವುದು ಕಠಿಣವಾಗಿರುವಲ್ಲಿ, ಎಲನ್ ಕ್ಯಾಪ್ ಅಥವಾ ಸಾಕೆಟೆಡ್ ಕ್ಯಾಪ್ ಸ್ಕ್ರೂ ಬಳಸಲಾಗುತ್ತದೆ. ಕಾರಣ ಅದರ ಸ್ಟ್ರೆಂಗ್ಥ್ ತುಂಬಾ ಹೆಚ್ಚು ಇರುತ್ತದೆ. ಇವೆಲ್ಲ ಫಾಸ್ಟನರ್ ಗಳು 12.9 ಪ್ರಾಪರ್ಟಿ ಕ್ಲಾಸ್ ನಲ್ಲಿ ಲಭ್ಯವಿರುತ್ತವೆ.
 
 
ಸರ್ಫೇಸ್ ಟ್ರೀಟ್ ಮೆಂಟ್
ಯಾವ ರೀತಿಯ ಸರ್ಫೇಸ್ ಟ್ರೀಟ್ ಮೆಂಟ್ ಆವಶ್ಯಕವಿದೆ, ಎಂಬ ವಿಚಾರವನ್ನು ಫಾಸ್ಟನರ್ ನ ಅಪೇಕ್ಷಿಸಲಾಗಿರುವ ಬಳಕೆಯಲ್ಲಿ ಮಾಡಲಾಗುತ್ತದೆ. ಝಿಂಕ್ ಪ್ಲೆಟೆಡ್ ಯಲೋ ಪ್ಯಾಸಿವೆಶನ್, ಝಿಂಕ್ ಪ್ಲೆಟೆಡ್ ಗ್ರೀನ್ ಪೆಸಿವೆಶನ್, ಕ್ಯಾಡ್ ಮಿಯಮ್ ಪ್ಲೇಟಿಂಗ್, ಟೆಫ್ಲಾನ್ ಕೋಟಿಂಗ್, ಝೈಲಾನ್ ಕೋಟಿಂಗ್ ಈ ವಿಧದ ಪ್ರಕ್ರಿಯೆಗಳು ಉಪಲಬ್ಧವಿವೆ. ಲೇಪನ (ಕೋಟಿಂಗ್) ಈ ಯಂತ್ರಣೆಯು ನಂತರದ ಸರ್ಫೇಸ್ ಟ್ರೀಟ್ ಮೆಂಟ್ ಆಗಿದೆ. ಥ್ರೆಡ್ ಗಳನ್ನು ಮಾಡಿರುವ ಸರ್ಫೇಸ್ ನ ಜಾಮೆಟ್ರಿಕ್ ಗುಣವಿಶೇಷಗಳಲ್ಲಿ ಸರ್ಫೇಸ್ ಟ್ರೀಟ್ ಮೆಂಟ್ ನಿಂದಾಗಿ ಯಾವುದೇ ರೀತಿಯ ಪರಿಣಾಮಗಳಾಗುವುದಿಲ್ಲ. ಫಾಸ್ಟನರ್ ನ ಬಾಳಿಕೆಯನ್ನು ವೃದ್ಧಿಸಲು ಲೇಪನ ಮಾಡಲಾಗುತ್ತದೆ.
 
 
ಮಕರಂದ ದೇಶಪಾಂಡೆ ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಅವರು M ಥ್ರೆಡ್ ಕಂಪನಿಯ ನಿರ್ದೇಶಕರಾಗಿದ್ದಾರೆ. ನಿರ್ಮಿತಿಯ ವಲಯದಲ್ಲಿ ಅವರಿಗೆ ಸುಮಾರು 30 ವರ್ಷಗಳ ಅನುಭವವಿದೆ.
9689943747
info@mthread.in
Powered By Sangraha 9.0