ಸಂಪಾದಕೀಯ

16 Aug 2021 17:13:34

hvfcfd_1  H x W 
 
ಕಳೆದ ಒಂದುವರೆ ವರ್ಷದ ಕಾಲಾವಧಿಯಲ್ಲಿ ಜಾಗತಿಕ ಹಂತದ ಕೆಲಸದ ಸಂಸ್ಕೃತಿಯಲ್ಲಿ ಮೂಲಭೂತ ಬದಲಾವಣೆಗಳಾಗಿರುವುದು ಗಮನಕ್ಕೆ ಬರುತ್ತಿದೆ. ಪ್ರಸ್ತುತ ಬಿತ್ತರಿಸುತ್ತಿರುವ ವಾರ್ತೆಗಳಿಂದ, ಜಗತ್ತಿನಲ್ಲಿ ಗೊಂದಲವನ್ನುಂಟು ಮಾಡಿರುವ ಕೋವಿಡ್ ನ ಪ್ರಭಾವವು ಇನ್ನಷ್ಟು ಇರುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗುತ್ತದೆ. ಈ ಎಲ್ಲ ಬದಲಾವಣೆಗಳಿಂದ ಉತ್ಪಾದನೆಯ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂಪನಿಗಳು ವಿವಿಧ ನೀತಿ, ಪಾತ್ರ ಮತ್ತು ಪದ್ಧತಿಗಳನ್ನು ಕಾರ್ಯಗತಗೊಳಿಸಿ ನಿರ್ಮಿತಿಯಲ್ಲಿ ಕನಿಷ್ಠ ಪ್ರಮಾಣದಲ್ಲಿ ಪರಿಣಾಮ ಬೀರುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ, ಎಂಬ ಅಂಶಗಳು ಗಮನಕ್ಕೆ ಬರುತ್ತಿದೆ. ಉತ್ಪಾದನೆಯ ಗುಣಮಟ್ಟ ಮತ್ತು ಸಂಖ್ಯೆಯು ಅಪೇಕ್ಷಿಸಿರುವ ಹಂತದಲ್ಲಿಯೇ ಕಾಪಾಡಲು ಅತ್ಯಂತ ಮಹತ್ವದ ಘಟಕವೆಂದರೆ, ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲಸಗಾರರು. ಕೋವಿಡ್ ನಿಂದ ಆಗಿರುವ ಸ್ಥಳಾಂತರದಿಂದ ನಿಪುಣ, ನುರಿತ ಕೆಲಸಗಾರರನ್ನು ಉಳಿಸಿಕೊಳ್ಳುವುದು ಕೈಗಾರಿಕೋದ್ಯಮಗಳಲ್ಲಿ ಇರುವ ಬಹು ದೊಡ್ಡ ಸವಾಲು, ಮುಂತಾದ ಅಂಶಗಳು ಉದ್ಯಮಿಗಳೊಂದಿಗೆ ಮಾಡಿರುವ ಮಾತುಕತೆಯಿಂದ ಗಮನಕ್ಕೆ ಬರುತ್ತಿದೆ. ಮಾನವ ಸಂಪನ್ಮೂಲಗಳ ತಜ್ಞರು ಈ ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತಿರುವಾಗ ಪ್ರಮುಖವಾಗಿ 4 ಘಟಕಗಳ ಕುರಿತು ವಿಚಾರ ಮಾಡುತ್ತಿದ್ದಾರೆ.
 
• ಕೆಲಸದ ಗುಣಮಟ್ಟ : ಉತ್ಪಾದನೆಯ ವಲಯದೆಡೆಗೆ ನೋಡುವ ಪಾರಂಪಾರಿಕ ‘3D’ (ಡಾರ್ಕ್, ಡೇಂಜರಸ್ ಮತ್ತು ಡರ್ಟಿ) ಎಂಬ ದೃಷ್ಟಿಕೋನವನ್ನು ಬದಲಾಯಿಸಿ ಅದರ ಹೊರತಾಗಿ ಉತ್ಪಾದನೆಯ ವಲಯದ ಕಡೆಗೆ ‘4C’ (ಕೂಲ್, ಚ್ಯಾಲೆಂಜಿಂಗ್, ಕ್ರಿಯೇಟಿವ್ ಮತ್ತು ಕಟಿಂಗ್ ಎಡ್ಜ್) ಈ ವಿಧದಲ್ಲಿ ವರ್ಣಿಸಲಾಗಿರುವ ವಿಚಾರಗಳೊಂದಿಗೆ ನೋಡಬೇಕು.
• ಕೆಲಸ ಸಂಸ್ಕೃತಿ : ಕಾರ್ಖಾನೆಯಲ್ಲಿ ಪ್ರತಿಯೊಬ್ಬ ಕೆಲಸಗಾರರ ಮನಸ್ಸಿನಲ್ಲಿ ‘ನಮಗೆ ಇಲ್ಲಿ ಯೋಗ್ಯ ರೀತಿಯ ಸನ್ಮಾನವು ಸಿಗುತ್ತಿದೆ,’ ಎಂಬ ಭಾವನೆಯನ್ನು ನಿರ್ಮಿಸುವುದು.
• ಕೂಲಂಕುಷ ವಿಚಾರ : ಕಂಪನಿಯಲ್ಲಿರುವ ಮಾನವ ಸಂಪನ್ಮೂಲಗಳ ಕುರಿತಾದ ಸೌಲಭ್ಯಗಳು ಮತ್ತು ಕಂಪನಿಯಲ್ಲಿ ಮಾಡಲಾಗುವ ಉತ್ಪಾದನೆಗೆ ಅತ್ಯಾವಶ್ಯಕವಾಗಿರುವ ಇನ್ನಿತರ ಘಟಕಗಳಲ್ಲಿ ಸೂಕ್ತ ರೀತಿಯ ಹೊಂದಾಣಿಕೆಯನ್ನು ಕಾಪಾಡುವುದು.
• ಜೀವನೋಪಾಯದ ದಾರಿ : ತಮ್ಮಲ್ಲಿರುವ ಪ್ರತಿಯೊಬ್ಬ ಕೆಲಸಗಾರರಿಗೆ ಅವರ ಜೀವನೋಪಾಯದಲ್ಲಿ ಮುನ್ನುಗ್ಗಲು ಪೂರಕ ವಾತಾವರಣವನ್ನು ಮತ್ತು ಅವಕಾಶಗಳನ್ನು ನೀಡುವುದು.
 
ಈ ನಾಲ್ಕು ಅಂಶಗಳ ಹಿನ್ನೆಲೆಯಲ್ಲಿ ತಮ್ಮಲ್ಲಿರುವ ಲಘು, ಮಧ್ಯಮ ಉದ್ಯಮಿಗಳಲ್ಲಿ ಪ್ರಸ್ತುತ ಲಭಿಸಿರುವ ಆರ್ಡರ್ ಗಳನ್ನು ಉಟ್ಟಗುಣದೊಂದಿಗೆ ಸಮಯಕ್ಕೆ ಸರಿಯಾಗಿ ನೀಡುವುದು, ಇದೇ ಪ್ರಾಥಮಿಕ ಜವಾಬ್ದಾರಿಯಾಗಿದ್ದು, ಇದಕ್ಕೋಸ್ಕರ ಪ್ರಯತ್ನವನ್ನು ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ನುರಿತ ಕೆಲಸಗಾರರ ಕೊರತೆಯಿಂದಾಗಿ ಅನೇಕ ವಿಧದ ಹೆಚ್ಚುವರಿ ಕೆಲಸಗಳನ್ನು ಇನ್ನಿತರ ಲಭ್ಯ ಕೆಲಸಗಾರರಿಂದ ಮಾಡಿಸಿಕೊಳ್ಳುವುದು ಮತ್ತು ನಿರಂತರವಾಗಿ ನುರಿತ ಕೆಲಸಗಾರರ ಹುಡುಕಾಟ, ಇವೆಲ್ಲದರಲ್ಲಿ ಉದ್ಯಮಿಗಳಿಗೆ ಹೆಚ್ಚು ಪ್ರಮಾಣದಲ್ಲಿ ಶ್ರಮ ಮತ್ತು ಸಮಯವನ್ನು ಖರ್ಚು ಮಾಡಬೇಕಾಗುತ್ತದೆ. ಇದರಿಂದಾಗಿ ಉಂಟಾಗುವ ಪರಿಣಾಮವು ಎಲ್ಲರ ಮಾನಸಿಕತೆಯ ಮೇಲೆ ಮತ್ತು ಕಾರ್ಖಾನೆಯಲ್ಲಿ ಮಾಡಲಾಗುವ ಉತ್ಪಾದನೆಯಲ್ಲಿ ಬೀರುತ್ತದೆ. ಈ ರೀತಿಯ ಪರಿಸ್ಥಿತಿಯಿಂದ ದಾರಿಯನ್ನು ಕೆಲಸಗಾರರಿಗೋಸ್ಕರ ಸೂಕ್ತ ರೀತಿಯ ಬಂಡವಾಳವನ್ನು ಹೂಡಿ (ತರಬೇತಿ, ಗೌರವ ಮತ್ತು ವಚನ ಬದ್ಧತೆ) ನುರಿತ ಕೆಲಸಗಾರ ವಿಸ್ತಾರವಾದ ಪ್ರವಾಹವನ್ನು ನಿರ್ಮಿಸುವುದೇ ಪ್ರಭಾವಶಾಲಿಯಾದ ದಾರಿಯಾಗಿದೆ. ಇದರಿಂದಾಗಿ ತಾವು ಕೆಲಸ ನಿರ್ವಹಿಸುತ್ತಿರುವ ಉದ್ಯಮಗಳೆಡೆಗೆ ‘ದಬ್ಬಾಳಿಕೆಗೆ ನಮಸ್ಕಾರ’ ಎಂಬುದಾಗಿ ಪರಿಗಣಿಸದೇ ಕೆಲಸಗಾರರು ‘ಸ್ವಂತ ಇಚ್ಛೆಯಿಂದ ಚುನಾಯಿಸಿದ ಅವಕಾಶ’ ಎಂಬುದಾಗಿ ನೋಡುವಂತಹ ಸ್ಥಿತಿಯು ಉದ್ಭವಿಸುತ್ತದೆ. ಇದರಿಂದಾಗಿ ಎಲ್ಲ ಕೆಲಸಗಾರರು ಒಂದೇ ವಿಚಾರಸರಣಿಯಲ್ಲಿ ಕೆಲಸ ಮಾಡಬಲ್ಲ ತಂಡದ ಸದಸ್ಯರಾಗಿರುವಂತೆ ಕೆಲಸ ಮಾಡಬಲ್ಲರು. ಇದರಿಂದಾಗಿ ಸಹಜವಾಗಿಯೇ ಉತ್ಪಾದನೆಯ ಹೆಚ್ಚಳ, ವ್ಯರ್ಥವಾಗುವ ಸಂಪನ್ಮೂಲಗಳಲ್ಲಿ ಕಡಿತ, ಅನುಪಸ್ಥಿತಿಯಲ್ಲಿ ಕಡಿತ ಮತ್ತು ಅಂತಿಮವಾಗಿ ಉದ್ಯಮಿಗಳ ಉತ್ಪಾದನೆಯ ಕ್ಷಮತೆಯಲ್ಲಿ ಗಣನೀಯ ಹೆಚ್ಚಳ ಆಗಿರುವಂತಹ ಪರಿಣಾಮಗಳು ಕಂಡಬರಬಲ್ಲವು. ಇಂತಹ ಪೋಷಕ ವಾತಾವರಣವನ್ನು ನಿರ್ಮಿಸಲು ಎಲ್ಲಕ್ಕಿಂತಲೂ ಮಹತ್ವದ ಅಂಶವೆಂದರೆ ಕೆಲಸಗಾರರ ತರಬೇತಿ. ಇದರಲ್ಲಿ ಅವರಿಗೆ ಪ್ರಸ್ತುತ ಮಾಡುತ್ತಿರುವ ಕೆಲಸದ ಕುರಿತು ಆಳವಾದ ಮತ್ತು ಶಾಸ್ತ್ರೀಯ ಮಾಹಿತಿಯನ್ನು ನೀಡುವುದರೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ತಂತ್ರಜ್ಞಾನವನ್ನು ಪರಿಚಯಿಸುವುದು, ಈ ಅಂಶಗಳೂ ಒಳಗೊಂಡಿವೆ. ‘ಲೋಹಕಾರ್ಯ’ ಈ ಮಾಸ ಪತ್ರಿಕೆಯ ಮೂಲಕ ನಾವು ಇದೇ ಗುರಿಯನ್ನು ಮುಂದಿಟ್ಟುಕೊಂಡು ಜ್ಞಾನ ಮತ್ತು ಮಾಹಿತಿಯನ್ನು ನೀಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
 
ಕಳೆದ ಸಂಚಿಕೆಯಿಂದ ಯಂತ್ರಣೆಯಲ್ಲಿ ಮಾಡಲಾಗುವ ಒಂದೊಂದು ಪ್ರಕ್ರಿಯೆಯನ್ನು ಆಯ್ಕೆ ಮಾಡಿ ಅದಕ್ಕೆ ಸಂಬಂಧಪಟ್ಟ ಲೇಖನಗಳನ್ನು ಪ್ರಕಟಿಸುತ್ತಿದ್ದೇವೆ. ಈ ಸಂಚಿಕೆಯಲ್ಲಿ ಥ್ರೆಡಿಂಗ್ ಕುರಿತಾದ ಪ್ರಕ್ರಿಯೆಯನ್ನು ವಿಸ್ತಾರವಾಗಿ ಹೇಳಲಾಗಿದೆ. ಥ್ರೆಡ್ ವರ್ಲಿಂಗ್, ಥ್ರೆಡ್ ಗ್ರೈಂಡಿಂಗ್ ಇಂತಹ ಲೋಹಗಳನ್ನು ಕತ್ತರಿಸಿ ಥ್ರೆಡ್ ಗಳನ್ನು ತಯಾರಿಸುವ ಪ್ರಕ್ರಿಯೆಯೊಂದಿಗೆ ಹೆಚ್ಚಾಗಿ ಉತ್ಪಾದನೆಯನ್ನು ಮಾಡುವಲ್ಲಿ ಉಪಯುಕ್ತವಾಗಿರುವ ಥ್ರೆಡ್ ರೋಲಿಂಗ್ ಎಂಬ ಪ್ರಕ್ರಿಯೆಯು ಕುರಿತೂ ಮಾಹಿತಿಯನ್ನು ನೀಡುವ ಲೇಖನವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ. ಕೈಗಾರಿಕೋದ್ಯಮಗಳಲ್ಲಿ ದಿನ ನಿತ್ಯದ ಬಳಕೆಯಲ್ಲಿರುವ ಫಾಸ್ಟನರ್ ನ ತಾಂತ್ರಿಕ ವಿವರಗಳನ್ನು ನೀಡುವ ಲೇಖನವನ್ನೂ ಓದಬಲ್ಲಿರಿ. ಈ ಸಂಚಿಕೆಯಿಂದ ಮಾಪನ ಮತ್ತು ಅಳತೆಗಳ ಕುರಿತಾದ ಅಂಶಗಳನ್ನು ಪ್ರಸ್ತುತ ಪಡಿಸುವ ಸರಣಿ ಲೇಖನಗಳ ಅಂಕಣವನ್ನೂ ಓದುಗರಿಗೆ ನೀಡುತ್ತಿದ್ದೇವೆ. ಓದುಗರು ಖಂಡಿತವಾಗಿಯೂ ಈ ಅಂಕಣವನ್ನು ಮೆಚ್ಚಬಲ್ಲರು, ಎಂಬ ವಿಶ್ವಾಸವಿದೆ. ಈ ಅಂಕಣಗಳೊಂದಿಗೆ ಇಂಜಿನಿಯರಿಂಗ್ ಡ್ರಾಯಿಂಗ್, ಆರ್ಥಿಕ ಯೋಜನೆ, ಸಿ.ಎನ್.ಸಿ. ಪ್ರೊಗ್ರಾಮಿಂಗ್ ಇಂತಹ ಲೇಖನಗಳ ಸರಣಿಯಿಂದಲೂ ತಮಗೆಲ್ಲರಿಗೂ ಅತ್ಯುಪಯುಕ್ತವಾದ ಮಾಹಿತಿಯು ಲಭ್ಯವಾಗಬಲ್ಲದು, ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತೇವೆ.
 
ದೀಪಕ ದೇವಧರ
deepak.deodhar@udyamprakashan.in
Powered By Sangraha 9.0