ಗ್ರಾಹಕರಿಗೆ ಅನುಸಾರವಾಗಿ ಟೂಲ್ ನಿರ್ಮಿತಿ

09 Jun 2021 12:43:17
ವಿ. ಪಿ. ಇಂಡಸ್ಟ್ರೀಜ್ ಇದೊಂದು ಸ್ವದೇಶದ ಮತ್ತು ವಿದೇಶದ ಮಾರುಕಟ್ಟೆಯಲ್ಲಿ ಅನೇಕ ವಿಧದ ಟೂಲ್ ಗಳನ್ನು ಪೂರೈಸುವಂತಹ ಭಾರತೀಯ ಕಂಪನಿಯಾಗಿದೆ. 2009 ರಲ್ಲಿ ಕೊಲ್ಹಾಪುರದಲ್ಲಿ ನಾವು ಮತ್ತು ನನ್ನ ಸಹೋದ್ಯೋಗಿಯಾದ ವಿಠ್ಠಲ್ ಪೋಳ್ ಈ ಕಂಪನಿಯ ಸ್ಥಾಪನೆಯನ್ನು ಮಾಡಿದೆವು. ಉತ್ಪಾದನೆಯ ಗುಣಮಟ್ಟ, ಸೂಚಿಸಿರುವ ಉಪಾಯಗಳನ್ನು ಶೀಘ್ರ ರೀತಿಯಲ್ಲಿ ಕಾರ್ಯಗತಗೊಳಿಸುವುದು ಮತ್ತು ಅದರಿಂದ ಗ್ರಾಹಕರ ವಿಶ್ವಾಸವನ್ನು ಸಂಪಾದಿಸುವುದು ಮುಂತಾದ ದೃಢವಾದ ಪಾಯದಲ್ಲಿ ಈ ಕಂಪನಿಯು ಸ್ಥಾಪಿಸಲ್ಪಟ್ಟಿದೆ.
ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿ ಟೂಲ್ ತಯಾರಿಸಲು ನಮ್ಮಲ್ಲಿ ಪಾರಂಪಾರಿಕವಾದ ಮಶಿನ್ ನೊಂದಿಗೆ 8 ಸಿ.ಎನ್.ಸಿ. ಗ್ರೈಂಡಿಂಗ್ ಮಶಿನ್ ಗಳ ಸುಸಜ್ಜಿತ ಸೆಟಪ್ ಇದೆ. ವಿಶ್ವಾಸಾರ್ಹವಾದ ಕಚ್ಚಾ ವಸ್ತುಗಳಲ್ಲಿ ನಿರ್ದೋಷವಾದ ಪ್ರಕ್ರಿಯೆಯನ್ನು ಮಾಡಿದಲ್ಲಿ ಗುಣಮಟ್ಟವು ಲಭಿಸುತ್ತದೆ, ಎಂಬ ವಿಶ್ವಾಸವನ್ನು ನಮ್ಮ ಕಂಪನಿಯಲ್ಲಿದೆ. ಆದುದರಿಂದ ನಾವು ನಮ್ಮ ಕೆಲಸಕ್ಕೋಸ್ಕರ ಮುಂದಿನ ಪ್ರಕ್ರಿಯೆಗಳನ್ನು ನಿರ್ಧರಿಸಿದ್ದೇವೆ.
 

sdfvbnbgb_1  H  
 
1. ಅಪ್ಲಿಕೇಶನ್ ಮತ್ತು ಡಿಸೈನ್ ನ ಕೆಲಸದ ತಂಡ, ಟೂಲ್ ನ ಡ್ರಾಯಿಂಗ್ ಅರಿತುಕೊಂಡು ಅದರ ನಿರ್ಮಾಣಕ್ಕೆ ಬೇಕಾಗುಪ ಆವರ್ತನೆಯ ಸಮಯ ಮತ್ತು ಪ್ರತಿ ಟೂಲ್ ಖರ್ಚಿನೊಂದಿಗೆ ಆತ್ಯಾವಶ್ಯಕವಾದ ಪ್ರಕ್ರಿಯೆಯನ್ನು ನಿರ್ಧರಿಸುವುದು.
2. ಟೂಲ್ ನ ಅಂತಿಮ ಡ್ರಾಯಿಂಗ್ ಮತ್ತು ಪ್ರಕ್ರಿಯೆಯನ್ನು ನಿರ್ಧರಿಸಿದ ನಂತರ ಆವಶ್ಯಕ ಗ್ರೇಡ್ ನ ಕಾರ್ಬೈಡ್ ಬಾರ್ ಬಳಸಿ ಉತ್ಪಾದನೆಯನ್ನು ಮಾಡಲಾಗುತ್ತದೆ.
3. ಗುಣಮಟ್ಟದ ನಿಯಂತ್ರಣಾ ವಿಭಾಗದಿಂದ ಟೂಲ್ ಗಳ ಪ್ರತಿಯೊಂದು ಪ್ಯಾರಾಮೀಟರ್ ಅತ್ಯಾಧುನಿಕ ಮಶಿನ್ ನ ಮೂಲಕ ಪರಿಶೀಲಿಸಲಾಗುತ್ತದೆ ಮತ್ತು ಟೂಲ್ ನೊಂದಿಗೆ ಆ ಪರೀಕ್ಷೆಗಳ ಮುದ್ರಿತ ವರದಿಯನ್ನು ನೀಡಲಾಗುತ್ತದೆ.
4. ಟೂಲ್ ನ ಪರಿಚಯವನ್ನು ಪತ್ತೆ ಹಚ್ಚಲು ಅದರಲ್ಲಿ ಲೇಸರ್ ಚಿಹ್ನೆಯನ್ನು ಅಳವಡಿಸಲಾಗಿರುತ್ತದೆ. ಸಾಲಿಡ್ ಕಾರ್ಬೈಡ್ ಸ್ಟ್ಯಾಂಡರ್ಡ್ ಡ್ರಿಲ್, ಎಂಡ್ ಮಿಲ್, ಪ್ರೊಫೈಲ್ ಟೂಲ್, ಸ್ಟ್ಯಾಂಡರ್ಡ್ ಬೋರಿಂಗ್ ಬಾರ್ (ಇಂಟಿಗ್ರಲ್ ಮತ್ತು ಸೈಡ್ ಲಾಕ್ ವಿಧಗಳದ್ದು), ವಿಶೇಷವಾದ ಅಥವಾ ಕಾಂಬಿನೇಶನ್ ಬೋರಿಂಗ್ ಬಾರ್, U ಡ್ರಿಲ್, ಮಿಲ್ಲಿಂಗ್ ಕಟರ್ ಮುಂತಾದವುಗಳ ವಿಶೇಷ ಮತ್ತು ಸ್ಟ್ಯಾಂಡರ್ಡ್ ಎರಡೂ ವಿಧದ ಟೂಲ್, ಆಟೊಮೋಬೈಲ್, ಏರೋಸ್ಪೇಸ್, ಕೃಷಿ ಮತ್ತು ಇಂಜಿನಿಯರಿಂಗ್ ಉದ್ಯಮ ಕ್ಷೇತ್ರದಲ್ಲಿ ಡ್ರಿಲ್ಲಿಂಗ್ ಕುರಿತು ಎಲ್ಲ ಕೆಲಸಗಳಿಗೆ ಲಭ್ಯ ಮಾಡಿಕೊಡಲಾಗುತ್ತದೆ.
 
 
ಗ್ರಾಹಕರ ಅನುಭವ – 1
ಟೂಲಿಂಗ್ ನ ಸ್ವದೇಶೀಕರಣ
 

rtyhj_1  H x W: 
 
ನಮ್ಮ ಒಬ್ಬ ಗ್ರಾಹಕರು ಸಿಲಿಂಡಲ್ ಬೋರ್ ಗೋಸ್ಕರ (ಚಿತ್ರ ಕ್ರ. 1) ಜರ್ಮನಿಯಿಂದ ಆಮದು ಮಾಡಿರುವ 3 ಫ್ಲ್ಯೂಟ್ ಇರುವ ಫ್ಲೇಟ್ ಡ್ರಿಲ್ ಮತ್ತು ಸ್ಟೆಪ್ ರೀಮರ್ ಇಂತಹ ಟೂಲ್ ಬಳಸಲಾಗುತ್ತಿತ್ತು. ಈ ಟೂಲ್ ಗಳನ್ನು ಆಮದು ಮಾಡಲಾಗುತ್ತಿದ್ದರಿಂದ ಕನಿಷ್ಠ 10 ಟೂಲ್ ಗಳ ಬೇಡಿಕೆಯ (ಮಿನಿಮಮ್ ಆರ್ಡರ್ ಕ್ವಾಂಟಿಟಿ, ಎಮ್. ಓ. ಯೂ.) ನೊಂದಣಿಯನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ಗ್ರಾಹಕರಲ್ಲಿ ಟೂಲ್ ನ ಶೇಖರಣೆಯು (ಇನ್ವೆಂಟರಿ) ಹೆಚ್ಚಾಗುತ್ತಿತ್ತು. ಆಮದು ಮಾಡಿರುವ ಟೂಲ್ ಗಳ ಪ್ಯಾರಾಮೀಟರ್ 175 ರಿಂದ 200 ಮೀ./ಸುತ್ತು ಫೀಡ್ ರೇಟ್ ಇರುತ್ತಿತ್ತು. ಸರ್ಫೇಸ್ ನಲ್ಲಿ ಕೋರ್ ರಂಧ್ರದ ಹೊರತಾಗಿ ಫ್ಲೇಟ್ ಡ್ರಿಲ್ ಕೆಲಸವನ್ನು ನೀರ್ವಹಿಸುತ್ತಿತ್ತು. ಟೂಲ್ ಗಳ ಬಾಳಿಕೆ ಮತ್ತು ಯಂತ್ರಣೆಯ ಪ್ಯಾರಾಮೀಟರ್ ಈ ಕುರಿತು ಗ್ರಾಹಕರು ಆಮದು ಮಾಡಿರುವ ಟೂಲ್ ಗಳ ಕೆಲಸದ ಕುರಿತು ಸಂತೋಷವನ್ನು ವ್ಯಕ್ತಪಡಿಸಿದರು. ಆದರೆ ಬೆಲೆ, ಎಮ್.ಓ.ಯೂ.ಗೆ ಆಧರಿಸಿರುವ ಆರ್ಡರ್ ಮತ್ತು ಇದರಿಂದಾಗಿ ವೃದ್ಧಿಸುತ್ತಿರುವ ಶೇಖರಣೆ ಈ ಕುರಿತು ಗ್ರಾಹಗರು ಸಮಾಧಾನವಾಗಿರಲಿಲ್ಲ. ಈ ಕುರಿತು ಚರ್ಚೆಯನ್ನು ಮಾಡಿದ ನಂತರ ನಾವು ಅವರಿಗೆ ಪರೀಕ್ಷೆಗೋಸ್ಕರ ಒಂದು ಫ್ಲ್ಯೂಟ್ ನ ಫ್ಲೇಟ್ ಡ್ರಿಲ್ ನೀಡಲಾಯಿತು ಮತ್ತು ಮೊದಲ ಆವರ್ತನೆಯಲ್ಲಿ ಅದನ್ನು ಡ್ರಿಲ್ ಸದ್ಯಕ್ಕೆ ಬಳಸುತ್ತಿರುವ ಪ್ಯಾರಾಮೀಟರ್ ನಲ್ಲಿಯೇ ಯೋಗ್ಯ ರೀತಿಯಲ್ಲಿ ನಡೆಯುತ್ತದೆ. ಆಮದು ಮಾಡಿರುವ ಟೂಲ್ ಗಳ ಬಾಳಿಕೆಯ ಹೋಲಿಕೆಯಲ್ಲಿ ಈ ಟೂಲ್ ಗಳ ಬಾಳಿಕೆಯು 80 ಶೇಕಡಾ ಇತ್ತು. ಎರಡನೇ ಪರೀಕ್ಷೆಯ ಸಮಯದಲ್ಲಿ ನಾವು ಫ್ಲೇಟ್ ಡ್ರಿಲ್ ನಲ್ಲಿರುವ ಕೂಲಂಟ್ ಗೋಸ್ಕರ ಇರುವಂತಹ, ಯಾವಾಗಲೂ ಬಳಸುತ್ತಿರುವ ಒಂದು ರಂಧ್ರದ ಜಾಗದಲ್ಲಿ 3 ರಂಧ್ರಗಳನ್ನು ನೀಡಲಾಗಿದೆ. ಫೇಸ್ ನಲ್ಲಿ ತೆರೆಯಲ್ಪಡುವ ಈ ಮೂರೂ ರಂಧ್ರಗಳಿಂದಾಗಿ ಚಿಪ್ ಹರಿಯುವುದು ಸುಧಾರಿಸಿರುವುದರಿಂದ ನಮಗೆ ಫೀಡ್ ರೇಟ್ ನಲ್ಲಿ 15 ಶೇಕಡಾ ಹೆಚ್ಚಳ ಮಾಡಲಾಯಿತು. ಈ ಪರೀಕ್ಷೆಯಲ್ಲಿ ನಮಗೆ ಆಮದು ಮಾಡಿರುವ ಟೂಲ್ ಗಳ ಬಾಳಿಕೆಯನ್ನು ಹೋಲಿಸಿದಲ್ಲಿ 25 ಶೇಕಡಾ ಹೆಚ್ಚು ಆಯುಷ್ಯವು ಲಭಿಸುತ್ತದೆ. ಇದರ ಹೊರತಾಗಿ ಕೂಲಂಟ್ ನ ಹೆಲಿಕಲ್ 3 ರಂಧ್ರಗಳಿಂದಾಗಿ ಟೂಲ್ ಗಳಿಗೆ 4 ಸಲ ರಿಗ್ರೈಂಡಿಂಗ್ ಮಾಡಿ ಬಳಸಲಾಯಿತು. ಇದೇ ರೀತಿಯಲ್ಲಿ ಸ್ಟೆಪ್ ರೀಮರ್ ಕುರಿತಾಗಿ ನಮಗೆ ಅಪೇಕ್ಷಿತ ಟೂಲ್ ನ ಬಾಳಿಕೆಯೊಂದಿಗೆ ಉಚ್ಚಮಟ್ಟದ ಮಾಪನವನ್ನು ನಿಯಂತ್ರಿಸಲಾಯಿತು. ರೀಮರ್ ನ ಕುರಿತು ನಾವು ಮೂರು ಬಾರಿ ರಿಗ್ರೈಂಡಿಂಗ್ ಮಾಡಿ ಹೊಸ ರೀಮರ್ ನಷ್ಟು ಕೆಲಸವನ್ನು ನಿರ್ವಹಿಸಿ ತೋರಿಸಿದೆವು.
 
 
kujghf_1  H x W
 
 
ಕಳೆದ ಮೂರು ವರ್ಷಗಳಿಂದ ನಾವು ಈ ಗ್ರಾಹಕರಿಗೆ ನಿಯಮಿತವಾಗಿ ಫ್ಲೇಟ್ ಡ್ರಿಲ್ ಮತ್ತು ರೀಮರ್ ನ (ಚಿತ್ರ ಕ್ರ. 2) ಪೂರೈಕೆಯನ್ನು ಮಾಡುತ್ತಿದ್ದೇವೆ. ಇದರಿಂದಾಗಿ ಗ್ರಾಹಕರಿಗೆ ಪ್ರತಿಯೊಂದು ಯಂತ್ರಭಾಗಗಳ ಬೆಲೆಯಲ್ಲಿ 25 ಶೇಕಡಾ ಲಾಭವಾಯಿತು. ಇದರೊಂದಿಗೆ ನಮ್ಮ ರೀಕಂಡಿಶನಿಂಗ್ ನ ಪೂರ್ವಸಿದ್ಧತೆಯ ಸೇವೆಯಿಂದಾಗಿ ಶೇಖರಣೆಯು ಕಡಿಮೆಯಾಯಿತು ಮತ್ತು ಹೊಸ ಟೂಲ್ ಗಳಿಗೋಸ್ಕರ ಕೇವಲ 3 ಟೂಲ್ ಗಳಷ್ಟು ಕನಿಷ್ಠ ಪ್ರಮಾಣದ ಬೇಡಿಕೆಯ ನೊಂದಣಿಯನ್ನು ಮಾಡುವುದು ಸಾಧ್ಯವಾಯಿತು.
 
oikujhg_1  H x
 
ಗ್ರಾಹಕರ ಅನುಭವ 2
ಟೂಲಿಂಗ್ ನ ಸರ್ವಾಂಗೀಣ ಉಪಾಯಗಳು
ಏರೋಸ್ಪೇಸ್ ಕ್ಷೇತ್ರದಲ್ಲಿ ಬೇಕಾಗುವ ಯಂತ್ರಭಾಗಗಳ ಯಂತ್ರಣೆಯ ಕೆಲಸವನ್ನು ನಿರ್ವಹಿಸುವ ನಮ್ಮ ಒಬ್ಬ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರವನ್ನು ಈ ಕೆಳಗಿನಂತೆ ನೀಡಲಾಗಿದೆ.
ಅಲ್ಯುಮಿನಿಯಮ್ 7075T ಈ ಮಟೀರಿಯಲ್ ನಲ್ಲಿ ಉರುಟಾದ ಟೂಲ್ (ಚಿತ್ರ ಕ್ರ. 3) ಬಳಸಿ ಕೆಲಸವನ್ನು ನಿರ್ವಹಿಸುತ್ತಿರುವಾಗ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಮಶಿನ್ ಟೂಲ್ ಮ್ಯಾಗೆಝನ್ ನಲ್ಲಿರುವ ಟೂಲ್ ಪಾಕೇಟ್ ನ ಸಂಖ್ಯೆಯಲ್ಲಿ ಮಿತಿಗಳಿರುವುದರಿಂದ ನಮಗೆ ಕನಿಷ್ಠ ಟೂಲ್ ಗಳನ್ನು ಬಳಸಿ ಕೆಲಸವನ್ನು ಪೂರ್ತಿಗೊಳಿಸುವಂತಹ ಸವಾಲು ಇತ್ತು. ಇದರ ಹೊರತಾಗಿ ವಿಶೇಷ ಕೋಟಿಂಗ್ ಪ್ರಕ್ರಿಯೆಯ ನಂತರ ಯಂತ್ರಣೆ ಮಾಡಿರುವ ಯಂತ್ರಭಾಗಗಳ ಅಳತೆಗಳನ್ನು ಡ್ರಾಯಿಂಗ್ ನೊಂದಿಗೆ ಇರುವ ಹೊಂದಾಣಿಕೆಯನ್ನು ತೋರಿಸುತ್ತಿರಲಿಲ್ಲ.
 
 
ಗ್ರಾಹಕರ ಇಂಜಿನಿಯರಿಂಗ್ ತಂಡದೊಂದಿಗೆ ಯಂತ್ರಭಾಗಗಳಲ್ಲಿರುವ ಸೂಕ್ಷ್ಮತೆಯ ಅಭ್ಯಾಸ ಮಾಡಿದ ನಂತರ ನಾವು ಆವಶ್ಯಕವಿರುವ ಟೂಲ್ ಗಳ ಸೂಚಿಯನ್ನು ತಯಾರಿಸಿದೆವು. ಒಂದೇ ಟೂಲ್ ನಲ್ಲಿ ಸಾಧ್ಯವಾದಷ್ಟೇ ಕಾಂಬಿನೇಶನ್ ಅಳವಡಿಸುವ ಪ್ರಯತ್ನವನ್ನು ಮಾಡಲಾಯಿತು. ಇದರ ನಂತರ ವಿಶೇಷ ರೀತಿಯ ಕೋಟಿಂಗ್ ಪ್ರಕ್ರಿಯೆ ಮುಂಚೆ ಯಂತ್ರಭಾಗಗಳ ರೀಮಿಂಗ್ ರಂಧ್ರದ ವ್ಯಾಸವನ್ನು ನಿರ್ಧರಿಸಲಾಯಿತು. ಟೂಲ್ ಗಳ ವಿವರವಾದ ಲೇಔಟ್ ತಯಾರಿಸಲಾಯಿತು. ಅಲ್ಲದೇ ಇದರಲ್ಲಿ ಒಂದೇ ವಿಚಾರವನ್ನು ಮಾಡಿದ ನಂತರ ಉತ್ಪಾದನೆಯನ್ನು ಪ್ರಾರಂಭಿಸಲಾಯಿತು. ಈ ಟೂಲಿಂಗ್ ನಲ್ಲಿ 2 ರಿಂದ 3 ಜೋಡಣೆಗಳಿರುವ ಸ್ಟೆಪ್ ಡ್ರಿಲ್ ಮತ್ತು ಗಾತ್ರವನ್ನು ನಿಖರವಾಗಿ ನಿಯಂತ್ರಿಸುವ ಇರುವ ರೀಮರ್ ಇತ್ತು.
 

ruyhtgfdd_1  H  
 
ಯೋಗ್ಯವಾದ ಕಾರ್ಬೈಡ್ ರಾಡ್, ನಿರ್ದೋಷವಾದ ಜಾಮೆಟ್ರಿ ಮತ್ತು ಲೇಪನ ಇರುವ ಎಲ್ಲ ಟೂಲ್ ಒಂದೇ ವಾರದಲ್ಲಿ ಗ್ರಾಹಕರೆಡೆಗೆ ಕಳುಹಿಸಲಾಯಿತು. ಟೂಲ್ ನ ಸಂಖ್ಯೆಯನ್ನು ಕಡಿಮೆ ಮಾಡಲು ಒಂದೇ ಟೂಲ್ ನಲ್ಲಿ ಅಪ್ಟಿಮೈಜ್ ಸಂಖ್ಯೆಯನ್ನು ಹೊಂದಾಣಿಕೆಯನ್ನು ಮಾಡಲಾಯಿತು. ಇದರಿಂದಾಗಿ ನೀಡಿರುವ ಟೂಲ್ ಮ್ಯಾಗೆಝಿನ್ ನಲ್ಲಿ ಟೂಲ್ ಗಳಿಗೆ ಎಲ್ಲ ರೀತಿಯ ಅಸೆಂಬ್ಲಿ ತಯಾರಿಸುವುದು ಸಾಧ್ಯವಾಯಿತು ಮತ್ತು ರೀಮರ್ ನ ಗಾತ್ರದಲ್ಲಿ ಬೇಕಾಗುವ ಸ್ಪೆಸಿಫಿಕೇಶನ್ ಗಳನ್ನು ಸರಿಹೊಂದಾಯಿಸಲಾಯಿತು. ಯಂತ್ರಣೆಯನ್ನು ಮಾಡುತ್ತಿರುವಾಗ ವ್ಯಾಸದ ಅಳತೆಯು ನಿಖರವಾಗಿ ಸೆಟ್ ಮಾಡಲಾಯಿತು ಮತ್ತು ಅದರ ನಂತರ ಲೇಪನವನ್ನು ಮಾಡಲಾಯಿತು. ಇದರಿಂದಾಗಿ ಲೇಪನದ ನಂತರ ಯಂತ್ರಭಾಗಗಳ ಅಳತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವು ಕಂಡುಬಂದಿಲ್ಲ.
 
 
ಮಹೇಶ್ ಝೋರೆ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ವಿ. ಪಿ. ಇಂಡಸ್ಟ್ರೀಜ್ ಕಂಪನಿಯಲ್ಲಿ ಪಾಲುದಾರರಾಗಿದ್ದಾರೆ. ಟೂಲಿಂಗ್ ಕ್ಷೇತ್ರದಲ್ಲಿ ಅವರಿಗೆ 20 ವರ್ಷ ಕಾಲಾವಧಿಯ ಅನುಭವವಿದೆ.
9922950200
mb.zore@vpindustries.co.in
Powered By Sangraha 9.0