‘ಲೋಹಕಾರ್ಯ’ದ ಮೇ 2021 ರ ಸಂಚಿಕೆಯಲ್ಲಿ ಪ್ರಕಟಿಸಲಾಗಿರುವ ಲೇಖನದಲ್ಲಿ ನಾವು ಇಂಡಸ್ಟ್ರಿ 4.0 ಗೋಸ್ಕರ VDMA ಯಿಂದ (ಜರ್ಮನ್ ಯಾಂತ್ರಿಕ ಉತ್ಪಾದನೆಗಳ ಉದ್ಯಮಗಳ ಸಂಘಟನೆ) ಸೂಚಿಸಲಾಗಿರುವ ಮಾರ್ಗಸೂಚಿಗಳ ಕುರಿತಾದ ವಿಚಾರಗಳನ್ನು ತಿಳಿದುಕೊಂಡೆವು. ಈ ತತ್ವಗಳನ್ನು ಉತ್ಪಾದಿತ ವಸ್ತುಗಳು ಮತ್ತು ಉತ್ಪಾದನೆಯ ಪ್ರಕ್ರಿಯೆ ಈ ಎರಡರಲ್ಲಿಯೂ ನಾಲ್ಕನೇ ಔದ್ಯೋಗಿಕ ಕ್ರಾಂತಿಗೆ ಅನುಸಾರವಾಗಿ ಯಾವ್ಯಾವ ಸುಧಾರಣೆಗಳನ್ನು ಮಾಡಬೇಕು, ಎಂಬುದರ ಕುರಿತು ಸೂತ್ರಬದ್ಧವಾಗಿ ಮತ್ತು ಸಮಗ್ರ ಮಾರ್ಗಸೂಚಿಗಳೆಂದು ಅವಲಂಬಿಸಲಾಗುತ್ತದೆ. ಉತ್ಪಾದನೆ ಮತ್ತು ಉತ್ಪಾದನೆಯ ಪ್ರಕ್ರಿಯೆ ಇವೆರಡರಲ್ಲಿಯೂ ಆರು ತತ್ವಗಳನ್ನು ಮಂಡಿಸಲಾಗಿದೆ. ಈ ತತ್ವಗಳ ಕುರಿತು ಚುಟುಕಾಗಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಉತ್ಪಾದನೆಯ ವಸ್ತುಗಳಿಗಿರುವ ತತ್ವಗಳು
1. ಸೆನ್ಸರ್ ಎಕ್ಚುಯೇಚರ್ ನ ಸೇರ್ಪಡೆ.
2. ಸಂದೇಶದ ಸಾಗಾಣಿಕೆ ಮತ್ತು ಸಂಪರ್ಕದ ಸಾಮರ್ಥ್ಯ.
3. ಮಾಹಿತಿಯ ವಿನಿಮಯ ಮತ್ತು ಶೇಖರಣೆ.
4. ನಿರೀಕ್ಷಣೆ – ಪರೀಕ್ಷೆ – ಅಂದಾಜಿಸುವ ಸಾಮರ್ಥ್ಯ.
5. ಪೂರಕವಾದ ಮಾಹಿತಿಗೆ ಆಧರಿಸಿರುವ ಸೇವೆಗಳು.
6. ಅನೇಕ ವ್ಯವಸಾಯದ ಸ್ವರೂಪಗಳು.
ಉತ್ಪಾದನೆಯ ಪ್ರಕ್ರಿಯೆಗೋಸ್ಕರದ ತತ್ವಗಳು
1. ಮಾಹಿತಿಯ ಪ್ರಕ್ರಿಯೆ
2. ಮಶಿನ್ ನಲ್ಲಿ ಸಂದೇಶದ ಸಾಗಾಣಿಕೆ
3. ಉದ್ಯಮಗಳಲ್ಲಿ ಸಂದೇಶದ ಸಾಗಾಣಿಕೆಯ ವ್ಯವಸ್ಥೆ.
4. ಮಾನವ ಮಶಿನ್ ಗಳ ಪರಸ್ಪರ ಸಂಬಂಧ
5. ಚಿಕ್ಕ ಮತ್ತು ಲಾಭಕಾರಿಯಾದ ಬ್ಯಾಚ್
ಇಂಡಸ್ಟ್ರಿ 4.0 ಗೆ ಅನುಸಾರವಾಗಿ ಯಾವುದೇ ಉದ್ಯಮವು ಈ ತತ್ವಗಳನ್ನು ತಮ್ಮ ಉತ್ಪಾದಿತ ವಸ್ತುಗಳಲ್ಲಿ ಮತ್ತು ಉತ್ಪಾದನೆಯ ಪ್ರಕ್ರಿಯೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತ್ತು ಸೂಕ್ತ ರೀತಿಯಲ್ಲಿ ಸೇರ್ಪಡಿಸಬೇಕು, ಎಂಬುದನ್ನು ಅಪೇಕ್ಷಿಸಲಾಗಿದೆ. ಇದರ ಮೂಲಕ ತಮ್ಮ ಉದ್ಯಮವು ಸಂಪೂರ್ಣವಾಗಿ ಸಾಕಷ್ಟು ಹೆಚ್ಚು ಪ್ರಮಾಣದಲ್ಲಿ ಸುಧಾರಿಸಿ, ಗ್ರಾಹಕರಿಗೆ ಒಲವನ್ನು ನೀಡುವುದಾಗಿ, ಜಾಗತಿಕ ಸ್ತರದ ಸ್ಪರ್ಧೆಯಲ್ಲಿ ಕಾಲೂರಲು ಸಕ್ಷಮ ಮತ್ತು ಹೆಚ್ಚು ಲಾಭಗಳಿಸುವಂತೆಯೂ ಆಗಬಲ್ಲದು. ಈ ಎಲ್ಲ ಲಾಭಗಳನ್ನು ಗರಿಷ್ಠ ಪ್ರಮಾಣದಲ್ಲಿ ಪಡೆಯುವ ನಿಟ್ಟಿನಲ್ಲಿ ಕೇವಲ ಈ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವುದು ಸಾಲದು, ಅವುಗಳನ್ನು ಹೇಗೆ ಕಾರ್ಯಗತಗೊಳಿಸುವುದು ಎಂಬುದಕ್ಕೋಸ್ಕರ ಸೂಚಿಸಿರುವ ಯೋಗ್ಯ ರೀತಿಯನ್ನೂ ಅರಿತುಕೊಳ್ಳುವುದು ಅನಿವಾರ್ಯವಾಗಿದೆ. ಈ ಲೇಖನದಲ್ಲಿ ಇದೇ ಅಂಶ ಮತ್ತು ಅದರಲ್ಲಿ ಹಂತಗಳನ್ನು ನಾವು ವಿಸ್ತಾರವಾಗಿ ತಿಳಿದುಕೊಳ್ಳಲಿದ್ದೇವೆ.
ಇಂಡಸ್ಟ್ರಿ 4.0 ಗೆ ತತ್ವಗಳ ಅನುಷ್ಠಾನ ಪ್ರಕ್ರಿಯೆ
ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಮಾರ್ಗಸೂಚಿಗಳನ್ನು ತಿಳಿದುಕೊಂಡ ನಂತರ ಅವುಗಳನ್ನು ಕಾರ್ಯಗತಗೊಳಿಸಲು ಯಾವ ಐದು ಹಂತಗಳಿರುವ ಪ್ರಕ್ರಿಯೆಯನ್ನು ಸೂಚಿಸಲಾಗಿದೆ. ಈ ಲೇಖನದಲ್ಲಿ ನಾವು ಈ ಐದು ಹಂತಗಳನ್ನು ಚುಟುಕಾಗಿ ತಿಳಿದುಕೊಳ್ಳೋಣ ಮತ್ತು ಅದರ ನಂತರ ಅದರ ವಿಶ್ಲೇಷಣೆಯನ್ನು ಉದಾಹರಣೆಯೊಂದಿಗೆ ಅರಿತುಕೊಳ್ಳೋಣ.
ಇಂಡಸ್ಟ್ರಿ 4.0 ಇದು ತುಂಬಾ ವ್ಯಾಪಕವಾದ ಕಲ್ಪನೆಯಾಗಿದೆ. ಆದ್ದರಿಂದ ಲಘು, ಮಧ್ಯಮ ಮತ್ತು ಬೃಹತ್ ಉದ್ಯಮಗಳು ಇಂಡಸ್ಟ್ರಿ 4.0 ಇದರ ದಿಕ್ಕಿನಲ್ಲಿ ನಿಖರವಾದ ಹೆಜ್ಜೆಗಳನ್ನು ಹಾಗುವಲ್ಲಿ, ಮೊತ್ತಮೊದಲಾಗಿ ಆಯಾ ಉದ್ಯಮದ ಮುಂದಾಳುತನದಲ್ಲಿ ಅದಕ್ಕೋಸ್ಕರದ ಸ್ಪಷ್ಟತೆ ಇರುವುದೂ ಅನಿವಾರ್ಯವಾಗಿದೆ. ಹಾಗಾದಲ್ಲಿ ಮಾತ್ರ ಆಯಾ ಉದ್ಯಮದ ಚಾಲಕರು, ಮಾಲಿಕರು ಮತ್ತು ವ್ಯವಸ್ಥಾಪಕರು ಎಲ್ಲರೂ ಒಟ್ಟುಗೂಡಿ ಈ ಕೆಳಗಿನ ಅಂಶಗಳನ್ನು ಪಾಲಿಸಬಹುದು.
• ತಮ್ಮ ಉದ್ಯಮದ ದೀರ್ಘ ಕಾಲಾವಧಿಯ ನೀತಿಗಳನ್ನು ಮತ್ತು ಗುರಿಯನ್ನು ನಿರ್ಧರಿಸಬಲ್ಲರು.
• ಎಲ್ಲ ವಿಭಾಗಗಳಲ್ಲಿ ಸರ್ವಾನುಮ ಮತ್ತು ಸುಸೂತ್ರತೆಯನ್ನು ಉಂಟುಮಾಡಬಲ್ಲರು.
• ಇಂಡಸ್ಟ್ರಿ 4.0 ಈ ನಿಟ್ಟಿನಲ್ಲಿ ಮುಂದೆ ಸರಿಯಲು ಎಲ್ಲ ರೀತಿಯಲ್ಲಿ ಪ್ರಯತ್ನಗಳಿಗೆ ಸಂಪೂರ್ಣ ಸಹಕಾರವನ್ನು (ಮಾನವ ಸಂಪನ್ಮೂಲ, ಹಣಕಾಸಿನ ದೃಢತೆ, ಕಾರ್ಯತಂತ್ರದ ನಿರ್ಧಾರಗಳು ಇಂತಹ ಎಲ್ಲ ಸ್ತರಗಳಲ್ಲಿ ಸಹಕಾರ) ನೀಡಬಲ್ಲರು.
ಇಂತಹ ಕನಿಷ್ಠ ಅಂಶಗಳನ್ನು ನಿರ್ಧರಿಸಿದ ನಂತರ ಈ ಮುಂದೆ ನೀಡಿರುವ ಐದು ಹಂತಗಳನ್ನು ಅನುಕ್ರಮವಾಗಿ ಮತ್ತು ಸಾಕಷ್ಟು ಪ್ರಯತ್ನದಿಂದ ಸಾಧಿಸುವುದನ್ನು ಅಪೇಕ್ಷಿಸಲಾಗಿದೆ.
1. ಪೂರ್ವ ಸಿದ್ಧತೆ (3-9 ತಿಂಗಳುಗಳು)
ತಮ್ಮ ಉದ್ಯಮಗಳಲ್ಲಿ ಇಂಡಸ್ಟ್ರಿ 4.0 ಗೆ ಅನುಸಾರವಾಗಿ ಸುಧಾರಣೆಗಳನ್ನು ಮಾಡಲು ಅಯಾ ಉದ್ಯಮದಲ್ಲಿ ಎಲ್ಲ ಹಂತಗಳಲ್ಲಿ (ಮಾಲಿಕರು, ಪಾಲುಗಾರರು, ಆಡಳಿತ, ಸಿಬ್ಬಂಧಿ ಮತ್ತು ಕೆಲಸಗಾರರು) ಮತ್ತು ಎಲ್ಲ ವಿಭಾಗಗಳು (ಇಂಜಿನಿಯರಿಂಗ್, ಉತ್ಪಾದನೆ, ಮಾರಾಟ, ಮಾರ್ಕೇಟಿಂಗ್, ಹಣಕಾಸು, ಪೂರೈಕೆಯ ಚೈನ್ ಮುಂತಾದ) ಈ ರೀತಿ ಎಲ್ಲರೂ ಕೂಡಾ ಇಂಡಸ್ಟ್ರಿ 4.0 ಇದರ ಕುರಿತಾದ ಅರ್ಥ, ಅದರಲ್ಲಿರುವ ವಿಚಾರಗಳು ಮತ್ತು ಅದರಲ್ಲಾಗಬಹುದಾದ ಬದಲಾವಣೆಗಳನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕವಾಗಿದೆ. ಈ ಎಲ್ಲ ಘಟಕಗಳ ಕುರಿತಾದ ವಿಚಾರ ಮತ್ತು ಅದಕ್ಕೋಸ್ಕರ ಬಳಸಲಾಗುವಂತಹ ವ್ಯಾಖ್ಯೆಯೂ ಸಮಾನವಾಗಿರಬೇಕು. ಇದಕ್ಕೋಸ್ಕರ ಪ್ರತಿಯೊಂದು ವಿಭಾಗವನ್ನು ಪ್ರತಿನಿಧಿಸುವಂತಹ ಒಂದು ಕೋರ್ ಟೀಮ್ ನಿರ್ಮಿಸುವುದು ಮತ್ತು ಆ ಟೀಮ್ ನಿಂದ ಉದ್ಯಮಗಳಲ್ಲಿ ಇಂಡಸ್ಟ್ರಿ 4.0 ಕುರಿತು ಸಾಕಷ್ಟು ಪ್ರಮಾಣದಲ್ಲಿ ಜಾಗರೂಕತೆಯನ್ನು ಉಂಟುಮಾಡುವುದು, ಮುಂತಾದ ಅಂಶಗಳೇ ಪೂರ್ವಸಿದ್ಧತೆಯಲ್ಲಿ ಅಪೇಕ್ಷಿಸಲಾಗಿದೆ.
2. ಸ್ವಂತ-ಪರೀಕ್ಷಣೆ (3-6 ತಿಂಗಳುಗಳು)
ಈ ಹಂತದಲ್ಲಿ ಉದ್ಯಮಗಳು (ಅಂದರೆ ಇಂಡಸ್ಟ್ರಿ 4.0 ಗೋಸ್ಕರ ಸ್ಥಾಪಿಸಿರುವ ಕೋರ್ ಟೀಮ್) ಒಳ ಮತ್ತು ಹೊರ ಎರಡೂ ಹಂತಗಳಲ್ಲಿ ಸ್ವಂತದ್ದೇ ಆದರ ವಿಶ್ಲೇಷಣೆ ಮಾಡುವುದೂ ಅಪೇಕ್ಷಿಸಲಾಗಿದೆ. ಒಳ ಪರೀಕ್ಷಣೆಯಲ್ಲಿ ತಮ್ಮ ಉದ್ಯಮಗಳಲ್ಲಿರುವ ದೃಢವಾದ ಅಂಶಗಳು, ವಿವಿಧ ವಿಭಾಗಗಳಲ್ಲಿರುವ ಕೌಶಲ್ಯ ಮತ್ತು ಸಾಮರ್ಥ್ಯ, ದುರ್ಬಲವಾದ ಅಂಶಗಳು, ಸುಧಾರಣೆಗಳನ್ನು ಮಾಡುವಲ್ಲಿರುವ ಅವಕಾಶಗಳ ಮತ್ತು ಅದರಲ್ಲಿ ಎದುರಿಸಬೇಕಾದ ಅಡಚಣೆಗಳ ಕುರಿತು ಸಮೀಕ್ಷೆಯನ್ನು ಮಾಡಬೇಕು. SWOT (ತಾಕತ್ತು, ದುರ್ಬಲತೆ, ಅವಕಾಶಗಳು ಮತ್ತು ಸವಾಲುಗಳು) ಈ ರೀತಿಯಲ್ಲಿ ಪರೀಕ್ಷೆಯನ್ನು ಮಾಡುವುದೇ, ಇದೊಂದು ಒಳ ಪರೀಕ್ಷೆಯ ರೀತಿಯಾಗಿದೆ. ಹೊರ ಪರೀಕ್ಷೆಯಲ್ಲಿ ತಮ್ಮ ಉತ್ಪಾದನೆಗಳ ಮಾರ್ಕೇಟ್, ಮಾರಾಟ ಮತ್ತು ಸೇವೆಗಳನ್ನು ಪೂರೈಸುವ ರೀತಿ, ತಮ್ಮೆದುರಿರುವ ಸ್ಪರ್ಧಿಗಳು, ಹೊಸದಾಗಿ ಮೂಡಿರುವ ಅಥವಾ ಭವಿಷ್ಯತ್ಕಾಲದಲ್ಲಿ ಬರಬಲ್ಲ ತಂತ್ರಜ್ಞಾನ ಇಂತಹ ಎಲ್ಲ ಅಂಶಗಳ ಸಮೀಕ್ಷೆಯನ್ನು ಮಾಡಬೇಕು. ಅದಕ್ಕೆ ಅನುಸಾರವಾಗಿ ಇದರ ಕುರಿತು ಬಾಹ್ಯ ಜಗತ್ತಿನಲ್ಲಿರುವ ತಮ್ಮ ಸ್ಥಾನಮಾನಗಳನ್ನು ಮತ್ತು ಮುಂದಿನ 5-10 ವರ್ಷಗಳಲ್ಲಿ ಅಪೇಕ್ಷಿಸಲಾಗುವ ಸ್ಥಿತಿಯ ಕುರಿತಾದ ಅಂದಾಜನ್ನು ಪಡೆಯುವುದೂ ಅಷ್ಟೇ ಅವಶ್ಯಕವಾಗಿದೆ. ಇದಕ್ಕೋಸ್ಕರ ಇಂಡಸ್ಟ್ರಿ 4.0 ಗೋಸ್ಕರದ ಮಾರ್ಗಸೂಚಿ ತತ್ವಗಳ ಆಧಾರದಿಂದಲೂ ತಮ್ಮ ಉದ್ಯಮದ ಸದ್ಯಸ್ಥಿತಿಯನ್ನು ತಿಳಿದುಕೊಳ್ಳುವುದು ಸಾಧ್ಯ. ಅಲ್ಲದೇ ಸ್ಪೈಡರ್ ಚಾರ್ಟ್ ಮಾಧ್ಯಮದಿಂದ ಅದರ ತುಲನಾತ್ಮಕವಾದ ಮಾಪನವನ್ನು ತೋರಿಸುವುದೂ ಸಾಧ್ಯವಿದೆ. ಪ್ರತಿಯೊಂದು ತತ್ವ 0-5 ಮಾಪನಗಳಲ್ಲಿ ಎಲ್ಲಿವೆ ಎಂಬುದರ ಕುರಿತಾದ ಅಂದಾಜನ್ನು ತಿಳಿದುಕೊಂಡು ಇದನ್ನು ಹೋಲಿಸಬಹುದು. (ಚಿತ್ರ ಕ್ರ. 3).
3. ವಿಚಾರ ವಿಮರ್ಷೆ (1-2 ತಿಂಗಳುಗಳು)
ಹಿಂದಿನ ಹಂತದಲ್ಲಿ ಮಾಡಲಾದ ಪರೀಕ್ಷೆಯ ಆಧಾರವನ್ನಿಟ್ಟುಕೊಂಡು ಯಾವ್ಯಾವ ಹೊಸ ವ್ಯವಸಾಯಗಳ ಯೋಜನೆಯನ್ನು ಅವಲಂಬಿಸುವುದು ಆವಶ್ಯಕವಾಗಿದೆ. ಇದಕ್ಕೋಸ್ಕರ ಯಾವ ಸುಧಾರಣೆಗಳು ಆವಶ್ಯಕವಾಗಿವೆ ಮತ್ತು ಇದಕ್ಕೋಸ್ಕರ ಯಾವ್ಯಾವ ಹೊಸ ಹೊಸ ಕಲ್ಪನೆಗಳನ್ನು ಕಾರ್ಯಗತಗೊಳಿಸಬಹುದು, ಎಂಬುದರ ಕುರಿತಾದ ವಿಸ್ತಾರವಾದ ಸಮೀಕ್ಷೆಯನ್ನು ಮಾಡುವುದು ಈ ಹಂತದ ಗುರಿಯಾಗಿದೆ. ಇದಕ್ಕೋಸ್ಕರ ಕೋರ್ ಟೀಮ್ ಮತ್ತು ಇನ್ನಿತರ ಪೂರಕ ಘಟಕಗಳಿಂದ ಒಟ್ಟಾಗಿ ಕುಳಿತುಕೊಂಡು ವಿಚಾರ ಸಂಕೀರಣವನ್ನು ಏರ್ಪಡಿಸಬೇಕು. ಈ ವಿಚಾರ ಸಂಕೀರಣದಲ್ಲಿ ಅನೇಕ ವಿಭಾಗಗಳಲ್ಲಿರುವ ಪ್ರತಿನಿಧಿಗಳು ತಂತಮ್ಮ ವಿಚಾರಗಳನ್ನು ಮತ್ತು ಸಾಧ್ಯವಾದಷ್ಟು ಹೊಸ ಹೊಸ ಕಲ್ಪನೆಗಳನ್ನು ಮಂಡಿಸಿ ಅದರ ಕುರಿತು ಚರ್ಚೆಯನ್ನು ಮಾಡಬೇಕು ಮತ್ತು ತಕ್ಷಣವೇ ಹಾಗೇ ದೀರ್ಘಕಾಲಾವಧಿಗೋಸ್ಕರ ಮಾಡಬೇಕಾದ ಉಪಾಯಗಳ ಪಟ್ಟಿಯನ್ನು ತಯಾರಿಸಬೇಕು. ಅದರೊಂದಿಗೆ ತಮ್ಮ ಉದ್ಯಮವು ಭವಿಷ್ಯತ್ಕಾಲದಲ್ಲಿ ಇಂಡಸ್ಟ್ರಿ 4.0 ಗೆ ಅನುಸಾರವಾಗಿ ವ್ಯವಸಾಯದ ಯಾವ್ಯಾವ ಹೊಸ ಮಾಧ್ಯಮಗಳನ್ನು ಮತ್ತು ರೂಪರೇಖೆಗಳನ್ನು ಬಳಸಲಿವೆ, ಎಂಬುದರ ಪಟ್ಟಿಯನ್ನು ತಯಾರಿಸಬೇಕು. ಉತ್ಪಾದನೆ ಮತ್ತು ಉತ್ಪಾದನೆಯ ಪ್ರಕ್ರಿಯೆ ಇವುಗಳಲ್ಲಿ ಯಾವ ರೀತಿಯ ಸುಧಾರಣೆಗಳನ್ನು ಮಾಡಲು ಮಾರ್ಗಸೂಚಿ ತತ್ವಗಳನ್ನು ನಾವು ತಿಳಿದುಕೊಂಡೆವು. ಅದನ್ನು ಇಲ್ಲ ಉಲ್ಲೇಖಿಸುವುದೂ ಅತ್ಯಾವಶ್ಯಕವಾಗಿದೆ.
4. ಮೌಲ್ಯಮಾಪನ (1-2 ತಿಂಗಳುಗಳು)
ವಿಚಾರ ಸಂಕೀರಣಗಳಲ್ಲಿ ಸೂಚಿಸಿರುವ ಕಲ್ಪನೆಗಳು, ಉಪಾಯ ಮತ್ತು ವ್ಯವಸಾಯದ ಕುರಿತಾದ ಮಾರ್ಗಸೂಚಿಗಳ ಮೌಲ್ಯಮಾಪನವನ್ನು ಮಾಡಿ ಅದರಿಂದ ಪ್ರಾಧಾನ್ಯವಾಗಿ ಮಾಡಬೇಕಾಗಿರುವ ಉಪಾಯಗಳನ್ನು ನಿರ್ಧರಿಸುವುದೇ, ಈ ಹಂತದಲ್ಲಿರುವ ಗುರಿಯಾಗಿದೆ. ಅದಕ್ಕೆ ಅನುಸಾರವಾಗಿ ತಮ್ಮ ಉತ್ಪಾದನೆಗಳು ಮತ್ತು ಉತ್ಪಾದನೆಯ ಪ್ರಕ್ರಿಯೆ ಇವುಗಳಲ್ಲಿ ಪ್ರಾಧಾನ್ಯವಾಗಿ ಮಾಡಬೇಕಾಗಿರುವ ಸುಧಾರಣೆಗಳ ಪಟ್ಟಿಯನ್ನು ಮಾಡಿ ಅದಕ್ಕೋಸ್ಕರದ ವಿಸ್ತಾರವಾದ ಯೋಜನೆಯನ್ನು ಮಾಡಬೇಕು. ಅದರೊಂದಿಗೆ ತಮ್ಮ ಉತ್ಪಾದನೆ ಅಥವಾ ಅದಕ್ಕೆ ಸಂಬಂಧಪಟ್ಟ ಸೇವೆಗಳು, ವಿವಿಧ ರೀತಿಯಲ್ಲಿ ಗ್ರಾಹಕರ ತನಕ ತಲುಪಲು ಯಾವ ದಾರಿಯನ್ನು ಅನುಸರಿಸಬಹುದು, ಎಂಬುದರ ಕುರಿತಾಗಿಯೂ ವಿಸ್ತಾರವಾಗಿ ಅಭ್ಯಾಸವನ್ನು ಈ ಹಂತದಲ್ಲಿ ಮಾಡಬೇಕು. ಈ ರೀತಿಯ ಅಭ್ಯಾಸ ಮತ್ತು ಮೌಲ್ಯಮಾಪನದ ಕೊನೆಯಲ್ಲಿ ಮುಂದಿನ 3, 6 ಮತ್ತು 12 ತಿಂಗಳ ಕಾಲಾವಧಿಯಲ್ಲಿ ಮಾಡಬೇಕಾಗಿರುವ ಅಭಿವೃದ್ಧಿಗಳ ಯೋಜನೆಗಳ ಪ್ರಾಧಾನ್ಯತೆಯನ್ನು ನಿರ್ಧರಿಸುವುದು ಮತ್ತು ಅದರಿಂದ 2-3 ಮಾರ್ಗಸೂಚಿ ಯೋಜನೆಗಳನ್ನು (ಪೈಲಟ್ ಪ್ರೊಜೆಕ್ಟ್) ಆಯ್ಕೆ ಮಾಡುವುದನ್ನು ಅಪೇಕ್ಷಿಸಲಾಗಿದೆ.
5. ಕಾರ್ಯಗತಗೊಳಿಸುವಿಕೆ (3-9 ತಿಂಗಳುಗಳು)
ಇದು ಮಾತ್ರ ಅಂತಿಮವಾದ ಮತ್ತು ತುಂಬಾ ಮಹತ್ವದ ಹಂತವಾಗಿದೆ. ಈ ಹಿಂದಿನ ಹಂತದಲ್ಲಿ ಅಯ್ಕೆ ಮಾಡಲಾಗಿರುವ 2-3 ಮಾರ್ಗಸೂಚಿ ಯೋಜನೆಗಳನ್ನು ಈ ಹಂತದಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳಿಸುವುದು ಸಾಧ್ಯ. ಇಲ್ಲಿ ಕೇವಲ ಕೋರ್ ಟೀಮ್, ಅಲ್ಲದೇ ಕೈಗಾರಿಕೋದ್ಯಮಗಳಲ್ಲಿರುವ ಎಲ್ಲ ವಿಭಾಗಗಳ ಸಿಬ್ಬಂಧಿಗಳು, ಆಡಳಿತ ಮಂಡಳಿ ಮತ್ತು ಅದರೊಂದಿಗೆ ಉದ್ಯಮದಲ್ಲಿರುವ ಚುನಾಯಿತ ಪೂರೈಕೆಗಾರರು, ವಿತರಕರೂ ಕೂಡಾ ಯಾವುದೇ ರೀತಿಯಲ್ಲಿ ಸಹಭಾಗಿಗಳಾಗುತ್ತಾರೆ. ಈ ರೀತಿಯಲ್ಲಿ ಸಹಭಾಗಿಗಳಾಗಿರುವ ಎಲ್ಲರೂ ತಿಳಿದಿರುವ ಮತ್ತು ಅರಿತಿರುವ ಇಂಡಸ್ಟ್ರಿ 4.0 ನ ಕಲ್ಪನೆಗಳನ್ನು ಇದೇ ಹಂತದಲ್ಲಿ ಬಳಕೆಯಾಗಬಲ್ಲದು. ಆದರೆ ಇದರ ಬಳಕೆ ಹೇಗೆ ಮಾಡಬಹುದು ಎಂಬುದರ ಕುರಿತಾದ ಮತ್ತು ಇದರಿಂದ ಯಾವ ಮಾರ್ಗಸೂಚಿಗಳಿರುವ ಯೋಜನೆಗಳು ಮೂಡಿಬರಬಲ್ಲವು. ಈ ಯೋಜನೆಗಳು ಕೇವಲ ತಾಂತ್ರಿಕ ಸುಧಾರಣೆಗಳಿಂದ ಕೂಡಿರುವುಗಳಾಗಿ ಇರಬಲ್ಲವು, ಎಂದು ಹೇಳಲಾಗುವುದಿಲ್ಲ. ಆದರೆ ಮಾರಾಟ, ಪೂರೈಕೆಯ ಚೈನ್ ಮತ್ತು ಹಣಕಾಸು ವಿಭಾಗ ಇಂತಹ ವಿವಿಧ ವಿಭಾಗಗಳಲ್ಲಿ ಸುಧಾರಣೆಗಳನ್ನು ಮಾಡಬಲ್ಲವು. ಇಂತಹ ಮಾರ್ಗಸೂಚಿ ಯೋಜನೆಗಳ ಮಾಧ್ಯಮದಿಂದ ಆಯಾ ಉದ್ಯಮವು ಇಂಡಸ್ಟ್ರಿ 4.0 ಕಡೆಗೆ ನಿರ್ಧಾರಿತ ರೀತಿಯಲ್ಲಿ ಮುನ್ನಡೆಯನ್ನು ಸಾಧಿಸಬಲ್ಲದು.
ಮೇಲಿನ ಐದು ಹಂತಗಳಿಂದ ಮುಂದುವರಿಸಲ್ಪಡುವ ಪ್ರಕ್ರಿಯೆಯು ಅಂದಾಜು ಒಂದರಿಂದ ಎರಡು ವರ್ಷಗಳ ಕಾಲಾವಧಿಯಲ್ಲಿರಬಲ್ಲವು. ಇದರಿಂದಾಗಿ ಅಂತಿಮವಾಗಿ ಹಲವಾರು ನಿಖರವಾದ ಬದಲಾವಣೆಗಳು ಗಮನಕ್ಕೆ ಬರಬಲ್ಲವು.
ಉದಾಹರಣೆ
ಉತ್ಪಾದಿತ ವಸ್ತುಗಳು ಮತ್ತು ಉತ್ಪಾದನೆಯ ಪ್ರಕ್ರಿಯೆ ಇವೆರಡಕ್ಕೂ ಈ ಸುಧಾರಣೆಗಳನ್ನು ಯಾವ ರೀತಿಯಲ್ಲಿ ಪ್ರತ್ಯಕ್ಷವಾಗಿ ಕಾರ್ಯಗತಗೊಳಿಸಬಹುದು ಎಂಬುದರ ಕುರಿತಾದ ಉದಾಹರಣೆಗಳನ್ನು ನೋಡೋಣ. ಇದರಲ್ಲಿ ಮೊದಲ ಉದಾಹರಣೆ ಎಂದರೆ ಇಂಡಸ್ಟ್ರಿ 4.0 ಗೆ ಅನುಸಾರವಾಗಿ ಸುಧಾರಿಸಿರುವ ಉತ್ಪಾದನೆಯ ಪ್ರಕ್ರಿಯೆಯ ಕುರಿತಾಗಿದೆ, ಆದರೆ ಎರಡನೆಯದು ಉತ್ಪಾದನೆಯ ಕುರಿತು.
‘ಕಾರ್ಚರ್’ನ ಇಂಡಸ್ಟ್ರಿ 4.0 ಅಸೆಂಬ್ಲಿ ಲೈನ್
‘ಕಾರ್ಚರ್’ ಇದೊಂದು ಸುಮಾರು 85 ವರ್ಷಗಳಷ್ಟು ಹಳೆಯ ಜರ್ಮನ್ ಕಂಪನಿಯಾಗಿದೆ. ಔದ್ಯೋಗಿಕ, ಗೃಹಬಳಕೆ ಮತ್ತು ವ್ಯವಸಾಯಕ್ಕೋಸ್ಕರದ ಎಲ್ಲ ರೀತಿಯ ಸ್ಪಚ್ಛತೆಗೆ ಬಳಸಲಾಗುವಂತಹ ಯಂತ್ರಗಳನ್ನು ಈ ಕಂಪನಿಯು ತಯಾರಿಸುತ್ತದೆ. ಈ ಕಂಪನಿಯು ಜಗತ್ತಿನೆಲ್ಲೆಡೆ 60 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಸುಮಾರು ಒಂದು ಕೋಟಿಗಿಂತಲೂ ಹೆಚ್ಚು ಯಂತ್ರಗಳನ್ನು ತಯಾರಿಸಿದೆ. ಈ ಹೆಸರಾಂತ ಕಂಪನಿಯು 2018 ರಲ್ಲಿ ಇಂಡಸ್ಟ್ರಿ 4.0 ನ ತತ್ವಗಳಿಗೆ ಅನುಸಾರವಾಗಿ ಅಸೆಂಬ್ಲಿ ಲೈನ್ ಅತ್ಯಾಧುನಿಕವಾಗಿ ಅಭಿವೃದ್ಧಿ ಪಡಿಸಿದ್ದಾರೆ. ಕಾರ್ಚರ್ ಈ ಕಂಪನಿಯು ತಮ್ಮ ಗ್ರಾಹಕರಿಗೆ ಅವರ ಬೇಡಿಕೆಗೆ ತಕ್ಕಂತೆ ಶುಚಿತ್ವವನ್ನು ಮಾಡಬಲ್ಲ ಯಂತ್ರಗಳಲ್ಲಿ ಚಿಕ್ಕ-ಪುಟ್ಟ ಅಂಶಗಳನ್ನು ಕೂಡಾ ಅಭಿವೃದ್ಧಿ ಪಡಿಸಿದ್ದಾರೆ. ಬೇಡಿಕೆಗೆ ಅನುಸಾರವಾಗಿ ಯಂತ್ರಗಳನ್ನು ಪೂರೈಸುತ್ತಿದ್ದಾರೆ. ಇದರಿಂದಾಗಿ ಈ ಕಂಪನಿಯಲ್ಲಿ ನಿರ್ಮಿಸಿರುವ ಯಂತ್ರಗಳಲ್ಲಿ 40,000 ಕ್ಕಿಂತಲೂ ಹೆಚ್ಚು ವಿಧಗಳು ಕಂಡುಬರುತ್ತವೆ. ಪ್ರತಿಯೊಂದು ವಿಧದ ಯಂತ್ರಗಳ ಬೇಡಿಕೆಯು 1000 ದಿಂದ ಬರೇ ಒಂದು ಕೂಡಾ ಇರಬಲ್ಲದು. ಈ ರೀತಿಯ ಬೇಡಿಕೆಯನ್ನು ಪೂರ್ತಿಗೊಳಿಸಲು ಅವರವರಿಗೆ ಬೇಕಾಗಿರುವ ವಿಧದಲ್ಲಿ ಬೇಕಷ್ಟು ಸಂಖ್ಯೆಯಲ್ಲಿ, ಆದರೆ ಪರಿಪೂರ್ಣ ಕಾರ್ಯಸಾಮರ್ಥ್ಯದಿಂದ, ನಿರ್ದೋಷವಾಗಿ ಮತ್ತು ಕ್ಷಿಪ್ರವಾದ ಉತ್ಪಾದನೆಯನ್ನು ಮಾಡಬಲ್ಲ ಅಸೆಂಬ್ಲಿ ಲೈನ್ ಕಾರ್ಚರ್ ಗೆ ಬೇಕಾಗಿತ್ತು. ಇದಕ್ಕೋಸ್ಕರ ಅವರು QR ಕೋಡ್, RFID, ಸ್ವಯಂಚಾಲಿತ ನಿಯಂತ್ರಕ ಮುಂತಾದ ಅತ್ಯಾಧುನಿಕ ತಂತ್ರದ ಮತ್ತು ಕಾನ್ ಬಾನ್, 5S ನಂತಹ ಎಲ್ಲೆಡೆಯಲ್ಲಿ ಮನ್ನಣೆಯನ್ನು ಪಡೆದಿರುವ ಉತ್ಪಾದನೆಯ ಸುಧಾರಣೆಗಳ ರೀತಿಗಳನ್ನು ಅವಲಂಬಿಸಲಾಯಿತು. ಸ್ಟುಟ್ ಗಾರ್ಟ್ ನಲ್ಲಿರುವ ಫ್ರಾನ್ ಹಾಫರ್ ಇನ್ ಸ್ಟಿಟ್ಯೂಟ್ ನ ಸಹಕಾರದಿಂದ ಅವರು ಕೇವಲ ಎರಡು ತಿಂಗಳುಗಳಲ್ಲಿ ಈ ಅತ್ಯಾಧುನಿಕ ಅಸೆಂಬ್ಲಿ ಲೈನ್ ಕಾರ್ಯಗತಗೊಳಿಸಿದೆವು ಮತ್ತು ಅದರಿಂದ ಕಳೆದ ವರ್ಷ ಒಂದು ಕೋಟಿ ಯಂತ್ರಗಳ ಅಸೆಂಬ್ಲಿಯನ್ನು ಯಶಸ್ವಿಯಾಗಿ ಮಾಡಲಾಯಿತು.
1. ಇಲ್ಲಿ ತಯಾರಾಗುವ ಪ್ರತಿಯೊಂದು ಯಂತ್ರಕ್ಕೆ ಬೇರೆಬೇರೆ QR ಕೋಡ್ ನೀಡಲಾಗುತ್ತದೆ. ಮುಂದೆ ತಯಾರಿಸಲಾಗುವ ಪ್ರತಿಯೊಂದು ಯಂತ್ರಗಳ ಎಲ್ಲ ಬಿಡಿಭಾಗಗಳು, ಜೋಡಣೆಯ ಕ್ರಮ, ಜೋಡಣೆಯ ನಂತರ ಮಾಡಲಾಗುವ ಪರೀಕ್ಷೆ ಇಂತಹ ಎಲ್ಲ ವಿವರಗಳನ್ನು ಆಯಾ ಆಯಾ ಕೋಡ್ ನೊಂದಿಗೆ ಸರಿಹೊಂದಾಣಿಕೆಯನ್ನು ಮಾಡಿ ಒಂದು ಕೇಂದ್ರೀಯ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಶೇಖರಿಸಲಾಗುತ್ತದೆ.
2. ಪ್ರತಿಯೊಂದು ಯಂತ್ರದ ಜೋಡಣೆಯನ್ನು ಮಾಡುವಾಗ QR ಕೋಡ್ ಸ್ಕ್ಯಾನ್ ಮಾಡಿ ಅಸೆಂಬ್ಲಿ ಟ್ರಾಲಿಯ ಸಹಾಯದಿಂದ ಆಪರೇಟರ್ ಹಂತಹಂತವಾಗಿ ಮುಂದೆ ಸರಿಯುತ್ತಾನೆ. ಪ್ರತಿಯೊಂದು ಅಸೆಂಬ್ಲಿ ಲೈನ್ ನಲ್ಲಿ ಪ್ರತಿಯೊಂದು ಹಂತದಲ್ಲಿ ಸೂಕ್ತವಾಗಿರುವ ಬಿಡಿಭಾಗಗಳ ಟ್ರೆ ಹಸಿರು ಬಣ್ಣದಿಂದ ತೋರಿಸಲಾಗುತ್ತದೆ. ಆಪರೇಟರ್ ಯೋಗ್ಯವಾದ ಆ ಬಿಡಿ ಭಾಗಗಳ ಜೋಡಣೆಯನ್ನು ಮಾಡಿದಲ್ಲಿ ಆ ಬಣ್ಣಗಳು ನೀಲಿಯಾಗುತ್ತವೆ (ಜೋಡಣೆ ಪೂರ್ತಿ) ಅಥವಾ ಕೆಂಪಾಗುತ್ತವೆ (ಜೋಡಣೆ ಅಪೂರ್ಣ/ ತಪ್ಪಾಗಿ). ಅಲ್ಲದೇ ಯೋಗ್ಯವಾದ ಸೂಚನೆಯನ್ನು ತಕ್ಷಣವೇ ನೀಡುತ್ತದೆ. ಕಾರ್ಚರ್ ಈ ಪ್ರಣಾಳಿಕೆಗೆ ಪಿಕ್ ಬೈ ಲೈಟ್ (ಬೆಳಕಿಗೆ ಅನುಸಾರವಾದ ಆಯ್ಕೆ) ಎಂಬುದಾಗಿ ಕರೆಯಲಾಗುತ್ತದೆ.
3. ಜೋಡಣೆಯ ಕೆಲಸವು ಪೂರ್ತಿಯಾದ ನಂತರ ಪರೀಕ್ಷೆಯ ಕೇಂದ್ರದಲ್ಲಿಯೂ QR ಕೋಡ್ ಗೆ ಅನುಸಾರವಾಗಿ ಸೂಕ್ತವಾದ ಪರೀಕ್ಷೆಯ ರೀತಿಗಳನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಅವುಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸಲಾಗುತ್ತದೆ. (ಚಿತ್ರ ಕ್ರ. 4 ನೋಡಿರಿ).
ಈ ಎಲ್ಲ ರೀತಿಯಿಂದಾಗಿ ಜೋಡಣೆ, ಪರೀಕ್ಷೆ ಇವುಗಳಲ್ಲಿರುವ ಎಲ್ಲ ಹಂತಗಳಿಗೆ ತಗಲುವ ಸಮಯ, ಬಿಡಿ ಭಾಗಗಳಲ್ಲಿ ಕಂಡುಬರುವ ದೋಷಗಳು, ಆಪರೇಟರ್ ಗೆ ಅನುಸಾರವಾಗಿ ಕೆಲಸದಲ್ಲಾಗುವ ಬದಲಾವಣೆಗಳು ಈ ಎಲ್ಲ ಅಂಶಗಳ ನೊಂದಾಣಿಕೆಯನ್ನು ಸ್ವಯಂಚಾಲಿತವಾಗಿ ಮಾಡಲಾಗುತ್ತದೆ. ಈ ಎಲ್ಲ ಮಾಹಿತಿ ಪ್ಯಾಕಿಂಗ್, ಶೇಖರಣೆ, ಸಾರಿಗೆ, ಮಾರಾಟದ ನಂತರದ ಸೇವೆ, ಸಂಶೋಧನೆ, ಹೊಸ ಹೊಸ ನಿರ್ಮಿತಿ ಇಂತಹ ಅನೇಕ ವಿಭಾಗಗಳಿಗೆ ತುಂಬಾ ಉಪಯುಕ್ತವಾಗಿದೆ.
ಇಂಡಸ್ಟ್ರಿ 4.0 ನ ಮಾರ್ಗಸೂಚಿ ನೀತಿಗಳನ್ನು ಗಮನಿಸಿದಲ್ಲಿ ಅನೇಕ ಸುಧಾರಣೆಗಳಾಗಿರುವುದು ಕಂಡುಬರುತ್ತದೆ. ಈ ಉದಾಹರಣೆಯಲ್ಲಿರುವ ಪ್ರಕ್ರಿಯೆ, ಮಶಿನ್ ಮತ್ತು ವಿಭಾಗಗಳಲ್ಲಿರುವ ಸಂದೇಶದ ಸಾಗಾಟ, ಮಾನವ- ಮಶಿನ್ ಇವರಲ್ಲಿರುವ ಪರಸ್ಪರ ಸಂಬಂಧ ಈ ನಾಲ್ಕು ಅಂಶಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ಇದರಿಂದಾಗಿ ಚಿಕ್ಕ ಮತ್ತು ಲಾಭಕಾರಿಯಾದ ಬ್ಯಾಚ್ ಇದು ಮಾತ್ರ ಆರನೇ ಅಂಶವಾಗಿದ್ದು, ಇದರಲ್ಲಿಯೂ ಬದಲಾವಣೆಗಳನ್ನು ಮಾಡುವುದು ಸಾಧ್ಯವಾಗಿದೆ. ಒಂದು ಯಂತ್ರವನ್ನೂ ಅಷ್ಟೇ ಕಾರ್ಯಕ್ಷಮತೆಯಲ್ಲಿ ಉತ್ಪಾದಿಸಬಲ್ಲ ಯಂತ್ರಣೆಯನ್ನು ನಿರ್ಮಿಸಲಾಯಿತು. ಚಿತ್ರ ಕ್ರ. 3 ರಲ್ಲಿ ತೋರಿಸಿದಂತೆ, ಮೊದಲ ಸ್ಪೈಡರ್ ಚಾರ್ಟ್ ನಲ್ಲಿ ಈ ಸುಧಾರಣೆಗಳ ಹೋಲಿಕೆಯನ್ನು ತುಲನಾತ್ಮಕವಾಗಿ ನೀಡಲಾಗಿದೆ.
ಕೆ.ಎಸ್.ಬಿ. ಕ್ಷಮತೆಯಲ್ಲಿ ಅಳತೆಯ ಯಂತ್ರಣೆ
ಕೆ.ಎಸ್.ಬಿ. ಇದೊಂದು ಪಂಪಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾಗಿದೆ. ಗುಣಮಟ್ಟ ಮತ್ತು ಕಾರ್ಯಕ್ಷಮತೆಯುಳ್ಳ ಪಂಪ್ ಗಳನ್ನು ಉತ್ಪಾದಿಸುವುದೇ ಆ ಕಂಪನಿಯ ವೈಶಿಷ್ಟ್ಯ. ಈ ರೀತಿಯ ಉತ್ಪಾದನೆಯನ್ನು ಮಾಡುವಾಗ ಇಂಡಸ್ಟ್ರಿ 4.0 ಗೆ ಅನುಸಾರವಾಗಿ ಸುಧಾರಣೆಗಳನ್ನು ಮಾಡುವ ನಿಟ್ಟಿನಲ್ಲಿ ಕೆ.ಎಸ್.ಬಿ. ಕಂಪನಿಯು ಸುಮಾರು 4 ವರ್ಷಗಳಿಂದ ಸೊನೋಲೈಜರ್ ಎಂಬ ಅಪ್ ಅಭಿವೃದ್ಧಿ ಪಡಿಸಿದೆ. ಅಳವಡಿಸಿರುವ ಅಥವಾ ಬಳಕೆಯಲ್ಲಿರುವ ಪಂಪ್ ಸೆಟ್ ಗಳ ವಿದ್ಯುತ್ ಕಾರ್ಯಸಾಮರ್ಥ್ಯವು ಸಹಜವಾಗಿ ಮತ್ತು ಸುಲಲಿತವಾಗಿ ಅಳತೆ ಮಾಡಲು ಈ ಅಪ್ ಬಳಸಲಾಗುತ್ತದೆ.
1. ಯಾವುದೇ ಪಂಪ್ ಸೆಟ್ ಗಳ ಮಾಹಿತಿಯನ್ನು ಇದರಲ್ಲಿ ತುಂಬಿಸುವುದು ಮತ್ತು ಅದರ ನಂತರ ಅದನ್ನು ಮೊಬೈಲ್ ನಲ್ಲಿ ಮೈಕ್ ನ (ಧ್ವನಿ ವರ್ಧಕ) ಸಹಾಯದಿಂದ ಕೆಲವೇ ಸೆಕಂಡುಗಳ ಕಾಲಾವಧಿಯಲ್ಲಿ ರೆಕಾರ್ಡಿಂಗ್ ಮಾಡಲಾಗುತ್ತದೆ. ಈ ಅಪ್ ಪಂಪ್ ಗಳಲ್ಲಿ ಉಂಟಾಗುವ ಶಬ್ದಗಳ ಪುನರಾವರ್ತನೆಯನ್ನು ರೆಕಾರ್ಡಿಂಗ್ (ಧ್ವನಿ ಮುದ್ರಿತ) ಮಾಡಲಾಗುತ್ತದೆ. ನಂತರ ಅದರಲ್ಲಿ ಉಂಟಾಗಿರುವ ಅಲೆಗಳನ್ನು ವಿಂಗಡಿಸಲಾಗುತ್ತದೆ. ಇಂತಹ ಅಲೆಗಳ ವಿಶ್ಲೇಷಣೆಯನ್ನು ಮಾಡಿ ಅದರ ಕಾರ್ಯಕ್ಷಮತೆಯ ಕುರಿತಾದ ಉಪಯುಕ್ತ ಮಾಹಿತಿಯನ್ನು ತಯಾರಿಸುತ್ತದೆ.
2. ಅದಕ್ಕೋಸ್ಕರ ಇಂಟರ್ ನೆಟ್ ನ ಮಾಧ್ಯಮದಿಂದ ರಿಮೋಟ್ ಸರ್ವರ್ ನೊಂದಿಗೆ ಸಂಪರ್ಕಿಸಲಾಗುತ್ತದೆ.
3. ಈ ರೀತಿಯಲ್ಲಿ ಮಾಡಲಾಗಿರುವ ವಿಶ್ಲೇಷಣೆಯಿಂದ ಆ ಪಂಪ್ ಸೆಟ್ ನ ಕ್ಷಮತೆಯ ಶೇಕಡಾವಾರು ಅಂಕೆ-ಅಂಶಗಳು ಗಮನಕ್ಕೆ ಬರುತ್ತವೆ. ಅದರಲ್ಲಿ ಯಾವ ದೋಷಗಳಿವೆಯೇ, ಇಲ್ಲವೇ, ಮುಂದೆ ಏನಾದರೂ ಅಪಾಯವಿದೆಯೇ ಇಂತಹ ಅನೇಕ ಅಂಶಗಳನ್ನು ತಕ್ಷಣ ಈ ಮಾಹಿತಿಯಿಂದ ಅರಿತುಕೊಳ್ಳಬಹುದು.
ಸಂಕ್ಷಿಪ್ತವಾಗಿ ಹೇಳುವುದಾದರೆ ಈ ಅಪ್ ನಿಂದಾಗಿ ಹಿಂದಿನಿಂದಲೂ ರೂಢಿಯಲ್ಲಿರುವ ಪಂಪ್ ನ ಯಾಂತ್ರಿಕ ಉತ್ಪಾದನೆಯು ಈಗ ‘ಪಂಪ್ + ಸೊನೊಲೈಸರ್ ಅಪ್’ ಎಂಬ ಹೆಚ್ಚು ಸ್ಮಾರ್ಟ್ ಆಗಿದೆ.
ಇಂಡಸ್ಟ್ರಿ 4.0 ಯಲ್ಲಿರುವ ಉತ್ಪಾದಿತ ವಸ್ತುಗಳಿಗಿರುವ ಮಾರ್ಗಸೂಚಿಯ ತತ್ವಗಳಿಗೆ ಅನುಸಾರವಾಗಿ ಈ ಹೊಸ ಉತ್ಪಾದನೆಯಲ್ಲಿ ಆ ಎಲ್ಲ ಆರು ತತ್ವಗಳ ಕುರಿತು ವಿಚಾರ ಮಾಡಿರುವುದು ಗಮನಕ್ಕೆ ಬರುತ್ತದೆ. ಪಂಪ್ ನ್ನು ಅತ್ಯಾಧುನಿಕ ಮೊಬೈಲ್ ಅಪ್ ನಲ್ಲಿ ಅಭಿವೃದ್ಧಿ ಪಡಿಸಿರುವ ಆಧುನಿಕ ಯಂತ್ರಣೆಗೆ ಜೋಡಿಸಿದ್ದರಿಂದ ಇವೆಲ್ಲವೂ ಸಹಜ ಮತ್ತು ಸುಲಭವಾಯಿತು. ಮೊಬೈಲ್ ಸೆಟ್ ನಲ್ಲಿರುವ ಮೈಕ್ ನ ಸೆನ್ಸರ್ ಎಂಬುದಾಗಿ ಅದನ್ನು ಬಳಸಲಾಗುತ್ತದೆ. ಅದರಿಂದ ನಿರ್ಮಾಣವಾಗುವ ಮಾಹಿತಿಯ ವಿಶ್ಲೇಷಣೆ, ಶೇಖರಣೆ ಇಂತಹ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ. ಇದಕ್ಕೋಸ್ಕರ ಮೊಬೈಲ್ ಸೆಟ್ ನ ಸಂದೇಶದ ಸಾಗಾಟ, ಪ್ರಕ್ರಿಯೆ ಮತ್ತು ಶೇಖರಣೆಯ ಸಾಮರ್ಥ್ಯವನ್ನು ಉಪಯೋಗಿಸಲಾಯಿತು. ಈ ಎಲ್ಲವನ್ನು ಪರಿಶೀಲಿಸಿ ಅದಕ್ಕೆ ಬೇಕಾಗಿರುವ ಉಪಾಯಗಳನ್ನು ಸೂಚಿಸುವುದು (ಪಂಪ್ ಕುರಿತು ಇನ್ನಷ್ಟು ಉಪಯುಕ್ತವಾದ ಮಾಹಿತಿಯನ್ನು ಪಡೆಯುವುದು) ಸಾಧ್ಯವಾಯಿತು. ಇದರಿಂದ ಪೂರಕ ಮಾಹಿತಿಗೆ ಆಧರಿಸಿರುವ ಸೇವೆ (ಉದಾಹರಣೆ, ಪಂಪ್ ಗಳ ರಿಮೋಟ್ ನಿರ್ವಹಣೆ, ಸಪೋರ್ಟ್ ಸೆಂಟರ್ ನ ಮಾಧ್ಯಮದಿಂದ ಅಡಚಣೆಗಳನ್ನು ಪರಿಹರಿಸುವುದು) ಮತ್ತು ವಿವಿಧ ವ್ಯವಸಾಯ ಯೋಜನೆ (ಉದಾಹರಣೆ, ಪಂಪ್ ಗಳ ಮಾರಾಟವನ್ನು ಮಾಡದೇ ಅದರ ಬಳಕೆಗೆ ಆಧರಿಸಿರುವ ಮೌಲ್ಯವನ್ನು ಪಡೆಯುವುದು, ಹಳೆಯ ಪಂಪ್ ಗಳನ್ನು ರಿಪೇರಿ ಮಾಡುವುದು) ಇಂತಹ ಅಂಶಗಳನ್ನು ಕೈಗೊಳ್ಳುವುದೂ ಸಾಧ್ಯವಾಗಿದೆ. ಚಿತ್ರ ಕ್ರ. 3 ರಲ್ಲಿ ಇನ್ನೊಂದು ಸ್ಪೈಡರ್ ಚಾರ್ಟ್ ನಲ್ಲಿ ಈ ಸುಧಾರಣೆಗಳನ್ನು ತೋರಿಸಲಾಗಿದೆ.
ಈ ಲೇಖಮಾಲೆಯಲ್ಲಿ ಈ ತನಕದ ಐದು ಲೇಖನಗಳಲ್ಲಿ ಇಂಡಸ್ಟ್ರಿ 4.0 ಯಲ್ಲಿರುವ ಅನೇಕ ಅಂಶಗಳ ಮತ್ತು ತತ್ವಗಳ ಕುರಿತು ಚುಟುಕಾಗಿ, ಆದರೂ ವಿವರವಾದ ಸಮೀಕ್ಷೆಯನ್ನು ಮಾಡುವ ಪ್ರಯತ್ನವನ್ನು ಮಾಡಲಾಯಿತು.
ಹೃಷಿಕೇಶ್ ಬರ್ವೆ ಇವರು ಐ.ಐ.ಟಿ. ಮುಂಬಯಿಯಿಂದ ಇನ್ ಸ್ಟ್ರುಮೆಂಟೇಶನ್, ಸಿಸ್ಟಮ್ ಮತ್ತು ಕಂಟ್ರೋಲ್ ಇದರಲ್ಲಿ ಎಮ್.ಟೆಕ್.
ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಕಂಟ್ರೋಲ್ ಸಿಸ್ಟಮ್, ಆಟೊಮೇಶನ್, ಮ್ಯಾನ್ಯುಫ್ಯಾಕ್ಚರಿಂಗ್ ಸಿಸ್ಟಮ್ ಹಾಗೆಯೇ ಎನರ್ಜಿ ಮ್ಯಾನೆಜ್ ಮೆಂಟ್ ಇಂತಹ ಕ್ಷೇತ್ರಗಳೊಂದಿಗೆ ಸಂಬಂಧಿಸಿರುವ ಸಂಶೋಧನೆ ಮತ್ತು ಪ್ರೊಡಕ್ಷನ್ ನಲ್ಲಿ ಕೆಲಸ ನಿರ್ವಹಿಸಿರುವ 12 ವರ್ಷಗಳ ಕಾಲಾವಧಿಯ ಅನುಭವವನ್ನು ಹೊಂದಿದ್ದಾರೆ.
7875393889
hrushikesh.barve@gslab.com