ಚಾಲಿತ (ಡ್ರಿವನ್) ಟೂಲ್ ಹೋಲ್ಡರ್

06 May 2021 14:00:12

1_1  H x W: 0 x 
ಈ ಹಿಂದೆ ಸಿ.ಎನ್.ಸಿ. ಲೇಥ್ ನಲ್ಲಿ ಕೇವಲ ಟರ್ನಿಂಗ್ ಪ್ರಕ್ರಿಯೆಯನ್ನೇ ಮಾಡಲಾಗುತ್ತಿತ್ತು. ಅಲ್ಲದೇ ಮಶಿನಿಂಗ್ ಸೆಂಟರ್ ಡ್ರಿಲ್ಲಿಂಗ್ ಮತ್ತು ಮಿಲ್ಲಿಂಗ್ ಗೋಸ್ಕರ ಬಳಸಲಾಗುತ್ತಿತ್ತು. ಕಾಲಕ್ರಮೇಣ ಅದರಲ್ಲಿ ಬದಲಾವಣೆಗಳಾಗುತ್ತಾ ಟರ್ನ್ ಮಿಲ್ ಸೆಂಟರ್ ಎಂಬ ಮುಂದಿನ ಪ್ರಕ್ರಿಯೆಯು ಪ್ರಾರಂಭಗೊಂಡಿತು. ಲೇಥ್ ನಲ್ಲಿ ಡ್ರಿವನ್ ಟೂಲ್ ಹೋಲ್ಡರ್ ಬಳಸಿ ಡ್ರಿಲ್ಲಿಂಗ್, ಮಿಲ್ಲಿಂಗ್ ಇಂತಹ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ. ಇದರಲ್ಲಿ ಎಲ್ಲ ರೀತಿಯ ಕೆಲಸಗಳನ್ನು ಒಂದೇ ಸೆಟಪ್ ನಲ್ಲಿ ಮಾಡುವುದು ಸಾಧ್ಯ. ಸೆಟಪ್ ನ ಸಂಖ್ಯೆಯು ಕಡಿಮೆ ಇರುವುದರಿಂದ ಹೆಚ್ಚು ಪ್ರಮಾಣದಲ್ಲಿ ನಿಖರತೆಯು ಲಭಿಸುತ್ತದೆ. ಒಂದೇ ಸೆಟಪ್ ನಲ್ಲಿ ಸಂಪೂರ್ಣ ಫಿನಿಶ್ ಪ್ರಕ್ರಿಯೆಯಾಗುತ್ತದೆ. ನಂತರ ಟ್ವಿನ್ ಸ್ಪಿಂಡಲ್ ಅಥವಾ ಸಬ್ ಸ್ಪಿಂಡಲ್, ಟರ್ನ್ ಮಿಲ್ ಸ್ಪಿಂಡಲ್ ನೊಂದಿಗೆ ಸಬ್ ಸ್ಪಿಂಡಲ್ (ಚಿತ್ರ ಕ್ರ. 1) ಇಂತಹ ಸುಧಾರಿತ ಆವೃತ್ತಿಗಳು ಲಭ್ಯವಾದವು.
 
2_1  H x W: 0 x
ಈ ತನಕದ ಉತ್ಪಾದನೆಗಳಲ್ಲಿ X ಮತ್ತು Z ಎಂಬ ಎರಡು ಅಕ್ಷಗಳಿದ್ದವು. ಆದರೆ ಈಗ ಅದರಲ್ಲಿ Y ಅಕ್ಷವು ಸೇರ್ಪಡೆಯಾಗಿದೆ. Y ಅಕ್ಷ ಅಂದರೆ ಟರೇಟ್ ಮೇಲೆ-ಕೆಳಗೆ ಅಲುಗಾಡಬಲ್ಲದು. ಅದಕ್ಕೆ Y ಅಕ್ಷದೊಂದಿಗೆ ಟರ್ನ್ ಮಿಲ್ ಸೆಂಟರ್ (ಚಿತ್ರ ಕ್ರ. 2) ಎಂಬುದಾಗಿ ಹೇಳಲಾಗುತ್ತದೆ. ಪ್ರಾರಂಭದಲ್ಲಿ VDI ಎಕ್ಸಿಯಲ್ ಟೂಲ್ ಡಿಸ್ಕ್ ಬಳಕೆಯಲ್ಲಿದ್ದವು. ಅದರ ನಂತರ ರೇಡಿಯಲ್ ಟೂಲ್ ಡಿಸ್ಕ್ ಆವೃತ್ತಿಯು ಬಂತು. ಯಂತ್ರಭಾಗಗಳ ಎರಡೂ ಬದಿಗಳ ಯಂತ್ರಣೆಯನ್ನು ಮಾಡಲು ರೇಡಿಯಲ್ ಟೂಲ್ ಡಿಸ್ಕ್ ಬಳಸಲಾಗುತ್ತಿದೆ.

3_1  H x W: 0 x
 
ಡ್ರಿವನ್ ಟೂಲ್ ಹೋಲ್ಡರ್ ನ ಕೆಲಸದ ರೀತಿ
ಸಿ.ಎನ್.ಸಿ. ಟರ್ನಿಂಗ್ ಸೆಂಟರ್ ನಲ್ಲಿ ಡ್ರಿವನ್ ಟೂಲ್ ಗಳಿಂದಾಗಿ ಟರ್ನಿಂಗ್ ನೊಂದಿಗೆ ಮಿಲ್ಲಿಂಗ್, ಡ್ರಿಲ್ಲಿಂಗ್ ಮತ್ತು ಟ್ಯಾಪಿಂಗ್ ನ ಕೆಲಸಗಳನ್ನು ನಿರ್ವಹಿಸುವುದು ಸುಲಭ ಸಾಧ್ಯವಾಗಿದೆ. ಟೂಲ್ ಡ್ರೈವ್ ಗೋಸ್ಕರ ವಿವಿಧ ಸ್ಟಾಂಡರ್ಡ್ ಗಳಿವೆ. ಅದರಲ್ಲಿ DIN 1809 ಎಂಬ ಸ್ಟಾಂಡರ್ಡ್ ಇದೆ. ಡ್ರಿವನ್ ಟೂಲ್ ನಲ್ಲಿ ಟರೇಟ್ ನಿಂದ ಟೂಲ್ ಗೋಸ್ಕರ ಡ್ರೈವ್ ಬರುತ್ತದೆ. ಅದರ ತುದಿಯಲ್ಲಿ ಟೆನನ್ ನಂತಹ ಭಾಗವಿರುತ್ತದೆ. ಟೆನನ್ ಡ್ರೈವ್ ನ ಕಚ್ಚಿನೊಳಗೆ ಸರಿಯುತ್ತದೆ. ಅಲ್ಲಿ ಟರೇಟ್ ಮೂಲಕ ಡ್ರೈವ್ (ಚಿತ್ರ ಕ್ರ. 3) ನೀಡಲಾಗುತ್ತದೆ. ಈ ಟೂಲ್ ಹೋಲ್ಡರ್ ಟರೇಟ್ ನೊಂದಿಗೆ ಮಾತ್ರ ಬಳಸಲಾಗುತ್ತವೆ. ಅದರ ನಂತರ ಅದಕ್ಕೆ ಡ್ರೈವ್ ನೀಡಬೇಕಾಗುತ್ತದೆ. ಟೂಲ್ ಯಂತ್ರಣೆಯ ಸ್ಥಿತಿಯಲ್ಲಿರುವಾಗ ಟೂಲ್ ಡ್ರೈವ್ ಅದಕ್ಕೆ ಜೋಡಿಸಲಾಗುತ್ತದೆ. ಟರೇಟ್ ನಲ್ಲಿ ಡ್ರಿವನ್ ಟೂಲ್ ಹೋಲ್ಡರ್ ಗೋಸ್ಕರ ಸ್ವತಂತ್ರವಾದ ಡ್ರೈವ್ ಇರುತ್ತದೆ. ಟರೇಟ್ ಇಂಡೆಕ್ಸಿಂಗ್ ಗೆ ಲೇಥ್ ನಲ್ಲಿರುವ ವ್ಯವಸ್ಥೆಯಂತೆ ಅದಕ್ಕೆ ಮೋಟರ್ ಅಳವಡಿಸಲಾಗಿರುತ್ತದೆ. ಉದಾಹರಣೆ, ಲೇಥ್ ನಲ್ಲಿ ಫಾನುಕದ ವ್ಯವಸ್ಥೆ ಇದ್ದಲ್ಲಿ ಅದಕ್ಕೆ
ಫಾನುಕದ ಮೋಟರ್ ಅಳವಡಿಸಲ್ಪಡುತ್ತದೆ. ಈ ಮೋಟರ್ ಲೈವ್ ಟರೇಟ್ ನಲ್ಲಿ ಇಡಲಾಗುತ್ತದೆ.

4_1  H x W: 0 x 
 

5_1  H x W: 0 x 
 
Verein Deutscher Ingenieure (VDI) ಇದು ಜರ್ಮನಿಯಲ್ಲಿರುವ ಇಂಜಿನಿಯರ್ ರ ಸಂಘಟನೆಯಾಗಿದೆ. VDI ಯಲ್ಲಿ ಹೋಲ್ಡಿಂಗ್ ಶ್ಯಾಂಕ್ ನಲ್ಲಿ ಸರೇಶನ್ ಇರುತ್ತದೆ ಮತ್ತು ಅದರಲ್ಲಿ ಒಂದು ಕ್ಲ್ಯಾಂಪ್ ಇರುತ್ತದೆ. ಆ ಕ್ಲ್ಯಾಂಪ್ ಗೆ ವೇಜ್ ರೀತಿಯನ್ನು ಬಳಸಿ ಟೂಲ್ ಹೋಲ್ಡರ್ ಹಿಡಿಯಲಾಗುತ್ತದೆ. ನಂತರ ಬೇಸ್ ಮೌಂಟಿಂಗ್ ಟೈಪ್ (BMT) ಈ ಅವೃತ್ತಿಯನ್ನು ತರಲಾಯಿತು. ಟೂಲಿಂಗ್ ನಲ್ಲಿರುವ ಅಭಿವೃದ್ಧಿ ಪಡಿಸಿರುವ ಆವೃತ್ತಿಯೆಂದು ಗುರುತಿಸಲಾಗಿದೆ. VDI ಹೋಲ್ಡರ್ ನಲ್ಲಿ ವೇಜ್ ರೀತಿಯನ್ನು ಬಳಸಿ ಕ್ಲ್ಯಾಂಪಿಂಗ್ ಮಾಡಲಾಗುತ್ತದೆ. ಹಾಗೆಯೇ BMT ಯಲ್ಲಿ ಮೂರು ಅಥವಾ ನಾಲ್ಕು ಲೊಕೇಶನ್ ಕೀಗಳು ಇರುತ್ತವೆ. ಅಲ್ಲದೇ 4 ಬೋಲ್ಟ್ ಗಳನ್ನು ಬಳಸಿ ಕ್ಲ್ಯಾಂಪಿಂಗ್ (ಚಿತ್ರ ಕ್ರ. 4) ಮಾಡಲಾಗಿರುತ್ತದೆ. BMT ಯಲ್ಲಿ ಕೇವಲ ರೇಡಿಯಲ್ ಡಿಸ್ಕ್ ಇರುತ್ತದೆ. ಮುಖ್ಯ ಸ್ಪಿಂಡಲ್ ಗೆ ಮತ್ತು ಸಬ್-ಸ್ಪಿಂಡಲ್ ಗೆ ಎರಡೂ ಬದಿಗಳಲ್ಲಿ ಆಪರೇಶನ್ ಗೋಸ್ಕರ ಟೂಲ್ ಹೋಲ್ಡರ್ ಅಳವಡಿಸಲಾಗಿರುತ್ತವೆ. ಇದರಲ್ಲಿ ರೇಡಿಯಲ್ ಮತ್ತು ಎಕ್ಸಿಯಲ್ ಇಂತಹ ಎರಡು ವಿಧದ ಲೈವ್ ಟೂಲ್ ಹೋಲ್ಡರ್ ಅಥವಾ ಡಬಲ್ ಸೈಡೆಡ್ ಟೂಲ್ ಹೋಲ್ಡರ್ ಗಳು ಕೂಡಾ ಇರುತ್ತವೆ. ಡಬಲ್ ಸೈಡೆಡ್ ಟೂಲ್ ಹೋಲ್ಟರ್ ನಲ್ಲಿ ಎರಡೂ ಬದಿಗಳಲ್ಲಿ ಟೂಲಿಂಗ್ ಇರುತ್ತದೆ. ಮುಂಭಾಗದಲ್ಲಿರುವ ಟೂಲ್ ಪ್ರಮುಖವಾಗಿ ಸ್ಪಿಂಡಲ್ ಗೋಸ್ಕರ ಕೆಲಸ ನಿರ್ವಹಿಸುತ್ತದೆ, ಹಾಗೆಯೇ ಹಿಂಭಾಗದ ಟೂಲ್ ಸಬ್ ಸ್ಪಿಂಡಲ್ ಗೋಸ್ಕರ ಕೆಲಸ ನಿರ್ವಹಿಸುತ್ತದೆ.
 

6_1  H x W: 0 x
7_1  H x W: 0 x
8_1  H x W: 0 x 
 
9_1  H x W: 0 x
 
BMT ಆವೃತ್ತಿಯು VDI ಗಿಂತ ಹೆಚ್ಚು ದೃಢವಾಗಿರುತ್ತದೆ. ಅದರ ರಿಪಿಟ್ಯಾಬಿಲಿಟಿಯ ಸಾಮರ್ಥ್ಯವು ಉಚ್ಚಮಟ್ಟದ್ದಾಗಿದ್ದು ಅದು 10 ಮೈಕ್ರಾನ್ ಗಳ ರಿಪಿಟ್ಯಾಬಿಲಿಟಿಯಷ್ಟು ಇರುತ್ತದೆ.
ಅದರ ನಂತರದ ಆವೃತ್ತಿಯೆಂದರೆ ಎಂಗ್ಯುಲರ್ ಹೆಡ್. ರೇಡಿಯಲ್ ಅಂದರೆ ಟೂಲ್ ಹೋಲ್ಡರ್ 0 ಅಂಶದಿಂದ 90 ಅಂಶಗಳಷ್ಟು ಕೋನದಲ್ಲಿ (ಎಂಗಲ್) ಸೆಟ್ ಮಾಡಬಹುದಾಗಿದೆ. ಅದಕ್ಕೆ ಎಂಗ್ಯುಲರ್ ಹೆಡ್ ಎಂದು ಕರೆಯುತ್ತಾರೆ. ಕನಿಷ್ಠ 1 ಅಂಶದಷ್ಟು ಮಿತಿಯು ಅದರಲ್ಲಿದೆ. ಎರಡೂ ಬದಿಗಳಲ್ಲಿ +90° ಯಿಂದ -90° ಈ ವ್ಯಾಪ್ತಿಯಲ್ಲಿ ಯಾವುದೇ ಕೋನದ ದಿಕ್ಕಿನಲ್ಲಿ ಟೂಲ್ ತಿರುಗಿಸುವುದು ಸಾಧ್ಯ. ಡ್ರಿವನ್ ಟೂಲ್ ಹೋಲ್ಡರ್ ಬಳಸುವ ಕೆಲವಾರು ರೀತಿಗಳನ್ನು ಈ ಮುಂದೆ ನೀಡಲಾಗಿದೆ.
 
10_1  H x W: 0
 

11_1  H x W: 0  
 
 

12_1  H x W: 0  
 

13_1  H x W: 0  
 
1. OD ಮೌಂಟಿಂಗ್ : ಅಕ್ಷೀಯ ಮಶಿನಿಂಗ್ ಗೋಸ್ಕರ ರೇಡಿಯಲ್ ಡ್ರಿವನ್ ಟೂಲ್ (90º ಟೂಲ್)
2. OD ಮೌಂಟಿಂಗ್ : ರೇಡಿಯಲ್ ಮಶಿನಿಂಗ್ ಗೋಸ್ಕರ ಅಕ್ಷೀಯ ಡ್ರಿವನ್ ಟೂಲ್ (0º ಟೂಲ್)
3. ಫೇಸ್ ಮೌಂಟಿಂಗ್ : ಅಕ್ಷೀಯ ಮಶಿನಿಂಗ್ ಗೋಸ್ಕರ ಅಕ್ಷೀಯ ಡ್ರಿವನ್ ಟೂಲ್ (0º ಟೂಲ್)
14_1  H x W: 0  
 
15_1  H x W: 0  
 
 
4. ಫೇಸ್ ಮೌಂಟಿಂಗ್ : ರೇಡಿಯಲ್ ಮಶಿನಿಂಗ್ ಗೋಸ್ಕರ ರೇಡಿಯಲ್ ಡ್ರಿವನ್ ಟೂಲ್ (90º ಟೂಲ್)
ಅಕ್ಷೀಯ ಮಶಿನಿಂಗ್ ಗೋಸ್ಕರ ರೇಡಿಯಲ್ ಡ್ರಿವನ್ ಟೂಲ್ ನ OD ಮೌಂಟಿಂಗ್
ಎ. ಮಶಿನ್ ಸ್ಪಿಂಡಲ್ ನ ಕುರಿತು ಬಲ ಬದಿಯಲ್ಲಿ ಮತ್ತು ಮೇಲ್ಭಾಗದಲ್ಲಿ ಸ್ಥಾನವಿರುವ ಟರೇಟ್ ಡಿಸ್ಕ್ ನ ಹೊರ ವ್ಯಾಸದಲ್ಲಿ (OD) ಅಳವಡಿಸಲ್ಪಡುವ ರೇಡಿಯಲ್ ಡ್ರಿವನ್ ಟೂಲ್. (90º ಟೂಲ್)

16_1  H x W: 0
 

17_1  H x W: 0  
 
ಬಿ. ಮಶಿನ್ ಸ್ಪಿಂಡಲ್ ನ ಕುರಿತು ಎಡಬದಿಯಲ್ಲಿ ಮತ್ತು ಮೇಲ್ಭಾಗ ಸ್ಥಾನದಲ್ಲಿರುವ ಟರೇಟ್ ಡಿಸ್ಕ್ ನ ಹೊರ ವ್ಯಾಸದಲ್ಲಿ ಅಳವಡಿಸಲ್ಪಡುವ ರೇಡಿಯಲ್ ಡ್ರಿವನ್ ಟೂಲ್. (90º ಟೂಲ್)
ಸಿ. ಮಶಿನ್ ಸ್ಪಿಂಡಲ್ ನ ಕುರಿತು ಬಲಬದಿಯಲ್ಲಿ ಮತ್ತು ಕೆಳಭಾಗದಲ್ಲಿರುವ ಟರೇಟ್ ಡಿಸ್ಕ್ ನ ಹೊರ ವ್ಯಾಸದಲ್ಲಿ ಅಳವಡಿಸಲ್ಪಡುವ ರೇಡಿಯಲ್ ಡ್ರಿವನ್ ಟೂಲ್. (90º ಟೂಲ್)
ಡಿ. ಮಶಿನ್ ಸ್ಪಿಂಡಲ್ ನ ಕುರಿತು ಎಡಬದಿಯಲ್ಲಿ ಮತ್ತು ಕೆಳಭಾಗದಲ್ಲಿರುವ ಟರೇಟ್ ಡಿಸ್ಕ್ ನ ಹೊರ ವ್ಯಾಸದಲ್ಲಿ ಅಳವಡಿಸಲ್ಪಡುವ ರೇಡಿಯಲ್ ಡ್ರಿವನ್ ಟೂಲ್. (90º ಟೂಲ್)
ರೇಡಿಯಲ್ ಮಶಿನಿಂಗ್ ಗೋಸ್ಕರ ರೇಡಿಯಲ್ ಡ್ರಿವನ್ ಟೂಲ್ ನ ಫೇಸ್ ಮೌಂಟಿಂಗ್
ಎ. ಮಶಿನ್ ಸ್ಪಿಂಡಲ್ ನ ಕುರಿತು ಬಲಬದಿಯಲ್ಲಿ ಮತ್ತು ಮೇಲ್ಭಾಗದಲ್ಲಿರುವ ಟರೇಟ್ ಡಿಸ್ಕ್ ನ ಮುಂಭಾಗದಲ್ಲಿ ಅಳವಡಿಸಲ್ಪಡುವ ರೇಡಿಯಲ್ ಡ್ರಿವನ್ ಟೂಲ್. (90º ಟೂಲ್)
ಬಿ. ಮಶಿನ್ ಸ್ಪಿಂಡಲ್ ನ ಕುರಿತು ಎಡಬದಿಯಲ್ಲಿ ಮತ್ತು ಮೇಲ್ಭಾಗದಲ್ಲಿರುವ ಟರೇಟ್ ಡಿಸ್ಕ್ ನ ಮುಂಭಾಗದ್ಲಿ ಅಳವಡಿಸಲ್ಪಡುವ ರೇಡಿಯಲ್ ಡ್ರಿವನ್ ಟೂಲ್. (90º ಟೂಲ್)
ಸಿ. ಮಶಿನ್ ಸ್ಪಿಂಡಲ್ ನ ಕುರಿತು ಬಲಬದಿಯಲ್ಲಿ ಮತ್ತು ಕೆಳಭಾಗದಲ್ಲಿರುವ ಟರೇಟ್ ಡಿಸ್ಕ್ ನ ಮುಂಭಾಗದಲ್ಲಿ ಅಳವಡಿಸಲ್ಪಡುವ ರೇಡಿಯಲ್ ಡ್ರಿವನ್ ಟೂಲ್. (90º ಟೂಲ್)
ಡಿ. ಮಶಿನ್ ಸ್ಪಿಂಡಲ್ ನ ಕುರಿತು ಎಡಬದಿಯಲ್ಲಿ ಮತ್ತು ಕೆಳಭಾಗದಲ್ಲಿರುವ ಟರೇಟ್ ಡಿಸ್ಕ್ ನ ಮುಂಭಾಗದಲ್ಲಿ ಅಳವಡಿಸಲ್ಪಡುವ ರೇಡಿಯಲ್ ಡ್ರಿವನ್ ಟೂಲ್. (90º ಟೂಲ್)
ಡ್ರಿವನ್ ಟೂಲ್ ಹೋಲ್ಡರ್ ಡಿಸೈನ್ ಮಾಡುವಾಗ ಅದು ಯಾವುದೇ ಸ್ಟ್ಯಾಂಡರ್ಡ್ ಮಶಿನ್ ನಲ್ಲಿ ಬಳಸಬಹುದು, ಎಂಬ ವಿಚಾರವನ್ನು ಮಾಡಲಾಗುತ್ತದೆ. BMT ಯಲ್ಲಿ ಮೌಂಟಿಂಗ್ ನ ಜಾಗವನ್ನು ನಿರ್ಧರಿಸಲಾಗಿರುತ್ತದೆ. ಇದರಿಂದಾಗಿ ಯಾವುದೇ ಮಶಿನ್ ಗೆ ಅದನ್ನು ಬಳಸುವುದೂ ಸಾಧ್ಯ. ಅನೇಕ ಮಶಿನ್ ಗಳಲ್ಲಿ ಬಳಸುವಾಗ ಲಭಿಸುವ ವೇಗ ಮತ್ತು ಬಲವು ಎಲ್ಲ ಮಶಿನ್ ಗಳಲ್ಲಿ ಒಂದೇ ರೀತಿ ಇರುವುದಿಲ್ಲ. ಯಾವ ವಿಧದ ಟೂಲ್ ಹೋಲ್ಡರ್ ಗಳನ್ನು ಬಳಸಲಾಗಿದೆ ಎಂಬುದು ಅದರಲ್ಲಿ ಅವಲಂಬಿಸಿರುತ್ತದೆ. ಅದಕ್ಕೆ ಅನುಸಾರವಾಗಿ ಮೋಟರ್ ಬಳಸಲಾಗುತ್ತದೆ. ಬಳಸಿರುವ ಮೋಟರ್ ನ ಸಾಮರ್ಥ್ಯಕ್ಕೆ ಅನುಸಾರವಾಗಿ ಟಾರ್ಕ್ ಲಭ್ಯವಾಗುತ್ತದೆ.
 
ಕೆಲವು ಮಟೀರಿಯಲ್ ಗಳಿಗೆ ಅಥವಾ ಹಲವಾರು ಅಪ್ಲಿಕೇಶನ್ ಗಳಿಗೆ ಆ ಟೂಲ್ ಗೋಸ್ಕರ ಹೆಚ್ಚು ಟಾರ್ಕ್ ನ ಆವಶ್ಯಕತೆ ಇರುವಾಗ ಟೂಲ್ ಹೋಲ್ಡರ್ ನಲ್ಲಿ ಟಾರ್ಕ್ ವೃದ್ಧಿಸಲು ಏನೂ ಮಾಡುವುದು ಅಸಾಧ್ಯ. ನೇರವಾಗಿ ಮಶಿನ್ ನಿಂದಲೇ ಟೂಲ್ ಹೋಲ್ಡರ್ ಗೆ ಡ್ರೈವ್ ಲಭಿಸುತ್ತದೆ. ವೇಗ ಕಡಿಮೆಯಾಗುವಾಗ ಹೆಚ್ಚುವರಿ ಟಾರ್ಕ್ ಲಭಿಸುತ್ತದೆ. ವೇಗ ಹೆಚ್ಚಾದಾಗ ಟಾರ್ಕ್ ಕಡಿಮೆ ಲಭಿಸುತ್ತದೆ. ಮೋಟರ್ ಗೋಸ್ಕರ ಡ್ರೈವ್ ಗೆ ಇರುವ ವೇಗವನ್ನು ಟೂಲ್ ಗೆ ನೀಡಲಾಗುತ್ತದೆ. ಹಲವಾರು ಬಾರಿ ಹೆಚ್ಚುವರಿ ವೇಗವನ್ನು ಕಡಿಮೆ ಮಾಡಿ ಟಾರ್ಕ್ ನೊಂದಿಗೆ ನಿರೀಕ್ಷಿಸುವಾಗ 1:2 ಅನುಪಾತದಲ್ಲಿ ಗಿಯರ್ ಬಳಸಲಾಗುತ್ತದೆ. ಅಂದರೆ ಮಶಿನ್ ಗೆ 100 ಆರ್.ಪಿ.ಎಮ್. ನಷ್ಟು ವೇಗವನ್ನು ನೀಡಿದಲ್ಲಿ ಟೂಲ್ ನಲ್ಲಿ 200 ಆರ್.ಪಿ.ಎಮ್. ವೇಗವು ಲಭಿಸುತ್ತದೆ. ಅಲ್ಯುಮಿನಿಯಮ್ ಇದ್ದಲ್ಲಿ ಈ ಮಟೀರಿಯಲ್ ಗೆ ಗರಿಷ್ಠ ವೇಗದ ಆವಶ್ಯಕತೆ ಇರುತ್ತದೆ. ಇದಕ್ಕೋಸ್ಕರ ಡ್ರೈವ್ ಮೋಟರ್ ನ ಪವರ್ ಹೆಚ್ಚಿಸುವುದು ಸಾಧ್ಯವಿರುವುದಿಲ್ಲ. ಈ ಪರಿಸ್ಥಿತಿಯಲ್ಲಿ ಫೀಡ್ ಅನುಪಾತವನ್ನು 1:2 ರಷ್ಟು ನೀಡಲಾಗುತ್ತದೆ. ಅಲ್ಯುಮಿನಿಯಮ್ ಗೆ ಹೆಚ್ಚು ಟಾರ್ಕ್ ಬೇಕಾಗುವುದಿಲ್ಲ. ಚಿಕ್ಕ ಡ್ರಿಲ್ ಇದ್ದಲ್ಲಿ ಆ ಟೂಲ್ ಅಲ್ಯುಮಿನಿಯಮ್ ನಲ್ಲಿ ಹೆಚ್ಚು ವೇಗದಲ್ಲಿ ನಡೆಯುತ್ತದೆ. ಅದಕ್ಕೆ 1:2 ರಷ್ಟು ಗಿಯರ್ ಅನುಪಾತವೂ ನೀಡಬಲ್ಲೆವು.
ಡ್ರಿವನ್ ಟೂಲ್ ಹೋಲ್ಡರ್ ಕುರಿತಾದ ಮಾಹಿತಿಯನ್ನು www.sphoorti.com ವೆಬ್ ಸೈಟ್ ನಲ್ಲಿ ಪಡೆಯಬಹುದು.
Powered By Sangraha 9.0