ಚಕ್ ನ ಬಾಳಿಕೆ ಮತ್ತು ಲುಬ್ರಿಕೇಶನ್

27 May 2021 22:11:50
ಚೆನ್ನೈಯಲ್ಲಿರುವ ಗಿಂಡಿ ಮಶಿನ್ ಟೂಲ್ಸ್ ಲಿ. (GMT) ಈ ಕಂಪನಿಯು ಭಾರತೀಯ ಉದ್ಯಮ ಕ್ಷೇತ್ರಕ್ಕೆ ಸುಮಾರು 80,000 ಕ್ಕಿಂತಲೂ ಹೆಚ್ಚು ಚಕ್ ಗಳನ್ನು ಸರಬರಾಜು ಮಾಡಿದೆ. ದೇಶದಾದ್ಯಂತ ಉಚ್ಚಗುಣಮಟ್ಟ ಉತ್ಪಾದನೆಗಳು ಮತ್ತು ಸೇವೆಯನ್ನು ನೀಡುವ ಕಂಪನಿಯೆಂದು ಹೆಸರುವಾಸಿಯಾಗಿದೆ. ಕಂಪನಿಯಲ್ಲಿ ಚಕ್ ಗಳ ಅನೇಕ ಶ್ರೇಣಿಗಳ ಉತ್ಪಾದನೆಯನ್ನು ಬೃಹತ್ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಕೆಲಸ, ಯಂತ್ರಗಳ ರಚನೆ, ಬಳಕೆ ಮತ್ತು ಆಕಾರ ಇವುಗಳಿಗೆ ಅನುಸಾರವಾಗಿ ಈ ಶ್ರೇಣಿಗಳನ್ನು ವರ್ಗೀಕರಿಸಲಾಗುತ್ತದೆ. ಸಿ.ಎನ್.ಸಿ. ಲೇಥ್ ಗೋಸ್ಕರ PHNC ಚಕ್ ಇದು ಈ ಕಂಪನಿಯ ಸ್ಟ್ಯಾಂಡರ್ಡ್ ಉತ್ಪಾದನೆಯಾಗಿದೆ. ಇದರ ಹೊರತಾಗಿ ನಾವು ಗ್ರಾಹಕರ ಆವಶ್ಯಕತೆಗೆ ಅನುಸಾರವಾಗಿ ವಿಶೇಷ ರೀತಿಯ (ಉದಾಹರಣೆ, ಸಿಲಿಂಡ್ರಿಕಲ್ ಆಕಾರವಿಲ್ಲದಿರುವ ಕಾರ್ಯವಸ್ತುಗಳಿಗೆ) ಚಕ್ ಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸುತ್ತೇವೆ. ಹಾಗೆಯೇ ಸ್ಟೆಡಿ ರೇಸ್ಟ್, ಎಕ್ಸ್ ಪಾಂಡಿಂಗ್ ಮ್ಯಾಂಡ್ರೆಲ್ , ಫೇಸ್ ಪ್ಲೇಟ್ ಮತ್ತು ಫೇಸಿಂಗ್ ಹೆಡ್ ಇಂತಹ ಕಾರ್ಯವಸ್ತುಗಳಿಗೆ ಬೇಕಾಗುವ ಇನ್ನಿತರ ವರ್ಕ್ ಹೋಲ್ಡಿಂಗ್ ಗಳನ್ನು ತಯಾರಿಸುತ್ತೇವೆ.
 

zxc_1  H x W: 0 
ಈ ಉದ್ಯಮದಲ್ಲಿ 60 ವರ್ಷಗಳಿಗಿಂತ ಹೆಚ್ಚು ಕಾಲಾವಧಿಯ ಅನುಭವಿರುವುದರಿಂದ ನಮಗೆ ಚಕ್ ನ ಬಳಕೆಯ ಕುರಿತು ವ್ಯಾಪಕವಾದ ಮತ್ತು ಆಳವಾದ ತಿಳಿವಳಿಕೆಯು ಇದೆ. ಚಕ್ ಅಂದರೆ ಮಶಿನ್ ಮತ್ತು ಕಾರ್ಯವಸ್ತು ಇವುಗಳಲ್ಲಿರುವ ಒಂದು ಮಹತ್ತರವಾದ ಸಂಬಂಧದ ಅಂಶವಾಗಿದೆ. ಕಾರ್ಯವಸ್ತುವನ್ನು ಕ್ಲ್ಯಾಂಪ್ ನಲ್ಲಿ ಹಿಡಿದು ಗೋಲಾಕಾರವಾಗಿ ತಿರುಗಿಸುವಾಗ ಆ ಚಕ್ ಜಾ ದಲ್ಲಿ ಅಲುಗಾಡುವುದಿಲ್ಲ ತಾನೇ ಎಂಬುದರ ಕುರಿತು ಗಮನ ಹರಿಸಬೇಕು. ಇನ್ನೊಂದು ಅಂಶವೆಂದರೆ ಅದರ ಮಧ್ಯ ರೇಖೆಯು ಸಂಪೂರ್ಣ ಯಂತ್ರಣೆಯ ರಚನೆಯ ಚೈನ್ ನಲ್ಲಿ ಇನ್ನಿತರ ಭಾಗಗಳ ಸಂದರ್ಭದಲ್ಲಿ ಬದಲಾಗುವುದಿಲ್ಲ ತಾನೇ, ಎಂಬುದನ್ನೂ ನಿರ್ಧರಿಸುವುದು ಅತ್ಯಾವಶ್ಯವಾಗಿರುತ್ತದೆ. ಇದಕ್ಕೋಸ್ಕರ ಮಶಿನ್ ಸ್ಪಿಂಡಲ್ ಮತ್ತು ಡ್ರಾ ಟ್ಯೂಬ್, ಚಕ್ ನ ಅಕ್ಚುಯೇಚರ್ (ಹೈಡ್ರಾಲಿಕ್, ನ್ಯುಮ್ಯಾಟಿಕ್ ಅಥವಾ ಇಲೆಕ್ಟ್ರಿಕಲ್ ಇರಬಹುದು) ಮತ್ತು ಅದರ ಫ್ಲಂಜ್, ಚಕ್ ಮತ್ತು ಅದರ ಫ್ಲಂಜ್ ಇಂತಹ ಮಶಿನ್ ನಲ್ಲಿರುವ ಅನೇಕ ವಿವಿಧ ಗೋಲಾಕಾರವಾಗಿ ತಿರುಗುವಂತಹ ಯಂತ್ರಭಾಗಗಳ ಮಧ್ಯ ರೇಖೆ ಮತ್ತು ಕಾರ್ಯವಸ್ತು ಇವುಗಳ ಯೋಗ್ಯ ರೀತಿಯ ವಿನ್ಯಾಸವನ್ನು ಮಾಡಬೇಕಾಗುತ್ತದೆ. ಇದನ್ನು ಪ್ರತ್ಯಕ್ಷವಾಗಿ ಕಾರ್ಯಗತಗೊಳಿಸುವುದು ಮಾತ್ರ ತುಂಬಾ ಕಷ್ಟಕರವಾಗಿದೆ. ಚಕ್ ನಲ್ಲಿರುವ ಯಂತ್ರಭಾಗಗಳನ್ನು ಚಿತ್ರ ಕ್ರ. 1 ರಲ್ಲಿ ತೋರಿಸಲಾಗಿದೆ. ಯಾವ ಕೆಲಸಗಳಲ್ಲಿ ತುಂಬಾ ನಿಖರತೆಯು ಬೇಕಾಗುತ್ತದೆಯೋ, ಅದಕ್ಕೋಸ್ಕರ ತುಂಬಾ ಟಾಲರನ್ಸ್ ಇರಬಹುದು. ನಿಖರವಾದ ನಿರ್ದೋಷತ್ವ (ಪ್ರಿಸಿಜನ್) ಅಪೇಕ್ಷಿಸಿರುವ ಯಂತ್ರಣೆಯಲ್ಲಿ ಈ ವಿನ್ಯಾಸವು ತುಂಬಾ ಉಚ್ಚಮಟ್ಟದ್ದಾಗಿ ಮತ್ತು ಕಾರ್ಯವಸ್ತುವನ್ನು ಹಿಡಿಯುವ ಸಾಮಗ್ರಿಗಳಿಗೋಸ್ಕರ ನಿಗದಿಸಿರುವ ISO ಸ್ಟ್ಯಾಂಡರ್ಡ್ ಗಳಿಗೆ ಅನುಸಾರವಾಗಿ ಇರುವುದೂ ಅತ್ಯಗತ್ಯವಾಗಿದೆ.
 

sdsf_1  H x W:  
 
ಚಕ್ ಜಾಗಳಿಗೆ ಅಕ್ಚುಯೇಟ್ ಮಾಡಲು ವಿವಿಧ ರೀತಿಯ ಮೆಕ್ಯಾನಿಜಮ್ ವನ್ನು ಬಳಸಲಾಗಿದೆ. ಇದರಿಂದಾಗಿ ಚಕ್ ನ ನಿರ್ವಹಣೆಯನ್ನು ಹೇಗೆ ಮಾಡಬೇಕು, ಎಂಬ ಕುರಿತಾದ ಎಲ್ಲ ಅಂಶಗಳನ್ನು ಒಂದೇ ಲೇಖನದಲ್ಲಿ ನಿರೂಪಿಸುವುದು ಅಸಾಧ್ಯ. ಈ ಲೇಖನದಲ್ಲಿ ಎಲ್ಲ ವಿಧದ ಚಕ್ ಗಳಿಗೋಸ್ಕರ ಉಪಯುಕ್ತವಾಗಿರುವ, ನಿರ್ವಹಣೆಯ ಕುರಿತು ಹಲವಾರು ಅಂಶಗಳ ಬಗ್ಗೆ ಚರ್ಚಿಸಲಾಗಿದೆ. ಬಳಕೆಗಾರರು ಅವರಲ್ಲಿರುವ ವಿಶಿಷ್ಟ ಚಕ್ ಮಾಡೆಲ್ ಗೋಸ್ಕರ ಅದರೊಂದಿಗೆ ನೀಡಲಾಗಿರುವ ನಿರ್ವಹಣೆಯ ಮಾಹಿತಿಯನ್ನು ಹೊಂದಿರುವ ಕೈಪಿಡಿಯಲ್ಲಿರುವ (ಮ್ಯಾನ್ಯುವಲ್) ರೆಫರನ್ಸ್ ನ್ನು ತಿಳಿದುಕೊಳ್ಳುವುದು ಮಾತ್ರ ಸೂಕ್ತ.
 
ಕಾರ್ಯವಸ್ತುವಿನ ರನ್ ಔಟ್ ಕನಿಷ್ಠ ಪ್ರಮಾಣದಲ್ಲಿ ಇದ್ದರೆ ಅದನ್ನು ನಿರ್ಧರಿಸಲು ಬೇಸ್ ಜಾ ನ ಸರಿಯುವಂತಹ ಸರ್ಫೇಸ್ ಮತ್ತು ಚಕ್ ಬಾಡಿ ಇವುಗಳಲ್ಲಿ ಆಪ್ಟಿಮೈಜ್ಡ್ ಫಿಟ್ ಅಳವಡಿಸಿ, ಗ್ರಾಹಕರಿಗೆ ನೀಡುವ ಮುಂಚೆಯೇ ಚಕ್ ನ ಜೋಡಣೆಯನ್ನು (ಅಸೆಂಬ್ಲಿ) ಮಾಡಲಾಗುತ್ತದೆ. ಒಂದೇ ‘T’ ಮತ್ತು ‘T ಸ್ಲಾಟ್’ ಯಂತ್ರಗಳ ರಚನೆಯ ಸಹಾಯದಿಂದ ಬೇಸ್ ಜಾ ಚಕ್ ಬಾಡಿಯಲ್ಲಿ ಅಳವಡಿಸಲಾಗುತ್ತದೆ. ಕಾರ್ಯವಸ್ತುಗಳ ನಿರ್ದೋಷವಾದ ಫಿನಿಶ್ ಗೋಸ್ಕರ ಸರಿಯುವ ಸರ್ಫೇಸ್ ನಲ್ಲಿ ಫಿಟ್ ಇದು ತುಂಬಾ ಮಹತ್ವದ್ದಾಗಿರುತ್ತದೆ. ಜಾ ಗಳಿಗೆ ಚಾಲನೆಯನ್ನು ನೀಡಲು GMT ಯ ಸ್ಟ್ಯಾಂಡರ್ಡ್ ಚಕ್ ನಲ್ಲಿ ವೇಜ್ ಮತ್ತು ವೇಜ್ ಹುಕ್ ಯಂತ್ರಗಳ ರಚನೆಯನ್ನು ನೀಡಲಾಗಿರುತ್ತದೆ. ಬೇಸ್ ಜಾಗಳ ವೇಜ್, ಹುಕ್ ವೇಜ್ ಗಳಲ್ಲಿರುವ ಕಚ್ಚಿನಲ್ಲಿ (ಸ್ಲಾಟ್) ಸಿಲುಕುತ್ತದೆ. ವೇಜ್ ಗಳಿಗೆ ಲಭಿಸುವ ಚಲನೆಯಿಂದಾಗಿ ಜಾ ನ ಒಳಗೆ ಮತ್ತು ಹೊರಗೆ ಚಟುವಟಿಕೆಯಾಗುತ್ತದೆ.
ರೇಡಿಯಲ್ ಫ್ಲೋಟ್

sdsfsdf_1  H x  
 
ಟೇಪರ್ಡ್ ವೇಜ್ ಕಚ್ಚು ಮತ್ತು ಬೇಸ್ ಜಾ ನ (ಮಾಸ್ಟರ್ ಜಾ) ಎಂಗಲ್ ಹುಕ್ ಇವುಗಳಲ್ಲಿರುವ ದೂರ (ಕ್ಲಿಯರನ್ಸ್) ರೇಡಿಯಲ್ ಫ್ಲೋಟ್ (ಚಿತ್ರ ಕ್ರ. 2) ಎಂಬುದಾಗಿ ಕರೆಯುತ್ತಾರೆ. ಹೊಸದಾಗಿ ಅಸೆಂಬಲ್ ಮಾಡಲಾಗಿರುವ ಚಕ್ ನಲ್ಲಿ ಡಿಸೈನ್ ಗಳ ಮಿತಿಗಳಿಗೆ ಅನುಸಾರವಾಗಿ ಉತ್ಪಾದಕರು ಈ ದೂರವನ್ನು ಸೀಮಿತಗೊಳಿಸುತ್ತಾರೆ. ಚಕಿಂಗ್ ಯಂತ್ರ ರಚನೆಯ ಕೆಲಸದ ನಿರ್ವಹಣೆಯ ತತ್ವಗಳ ವಿವಿಧ ಡಿಸೈನ್ ಗಳ ಅಂಶಗಳ ಕುರಿತು ವಿಚಾರ ಮಾಡಿ ಚಕ್ ನ ಕೆಲಸವು ಸುಲಲಿತವಾಗಿ ನಡೆಯಲು ಈ ಅಸೆಂಬ್ಲಿ ಕ್ಲಿಯರನ್ಸ್ ಅತ್ಯಾವಶ್ಯಕವಾಗಿರುತ್ತದೆ. ಚಕ್ ನ ಸೆಲ್ಫ್ ಸೆಂಟರಿಂಗ್ ಮಾಡುವಾಗ ನಿಖರತೆಯಲ್ಲಿ ಇದರಿಂದಾಗಿ ಯಾವುದೇ ರೀತಿಯ ಪರಿಣಾಮವು ಉಂಟಾಗುವುದಿಲ್ಲ. ಕಾರಣ ಮೇಲ್ಭಾಗದಲ್ಲಿರುವ ಜಾ ನ (ಸಾಫ್ಟ್ ಜಾ) ಕಾರ್ಯವಸ್ತುವನ್ನು ಹಿಡಿಯಲು ಬೇಕಾಗಿರುವ ವ್ಯಾಸಕ್ಕೆ ಅನುಸಾರವಾಗಿ ಬೋರಿಂಗ್ ಮಾಡಲಾಗಿರುತ್ತದೆ. ಇದಕ್ಕೋಸ್ಕರ ಮಾರ್ಗಸೂಚಿಯ ಕೈಪಿಡಿಯಲ್ಲಿ (ಇನ್ ಸ್ಟ್ರಕ್ಷನ್ ಮ್ಯಾನ್ಯುವಲ್) ಚಿತ್ರಗಳ ಮೂಲಕ ಸ್ಪಷ್ಟ ಮಾಡಿರುವ ಸಾಫ್ಟ್ ಜಾ ತಯಾರಿಸುವ ತಂತ್ರಗಳಿಗೆ ಅನುಸಾರವಾಗಿ ಒಂದು ಯೋಗ್ಯ ರಿಂಗ್ ಕ್ಲ್ಲಾಂಪ್ ಮಾಡಲಾಗುತ್ತದೆ.
ಎಕ್ಸಿಸ್ ಫ್ಲೋಟ್
ಚಕ್ ಬಾಡಿಯಲ್ಲಿರುವ T ಸ್ಲಾಟ್ ಮತ್ತು ಬೇಸ್ ಜಾ ನ T ಪ್ರೊಫೈಲ್ ಇವುಗಳಲ್ಲಿರುವ ದೂರವನ್ನು ಎಕ್ಸಿಸ್ ಫ್ಲೋಟ್ (ಚಿತ್ರ ಕ್ರ. 3) ಎಂಬುದಾಗಿ ಕರೆಯುತ್ತಾರೆ. ಹೊಸದಾಗಿ ಜೋಡಿಸಿರುವ ಚಕ್ ನಲ್ಲಿ ಈ ಫ್ಲೋಟ್ ಕೆಲವು ದಶಾಂಶ ಮೈಕ್ರಾನ್ ಗಿಂತ ಕಡಿಮೆ ಇರುತ್ತದೆ. ಒಂದು ವೇಳೆ ಈ ಫ್ಲೋಟ್ ಹೆಚ್ಚಾದಲ್ಲಿ ಚಕ್ ನ ನಿಖರತೆಯಲ್ಲಿ ಪರಿಣಾಮ ಬೀರುತ್ತದೆ. ಚಕ್ ಬಾಡಿಯ T ಗೈಡ್ ನಲ್ಲಿ ಬೇಸ್ ಜಾ ನ ಸಂಪರ್ಕವು ಕನಿಷ್ಠ 75% ಇದ್ದಲ್ಲಿ, ಈ ಫ್ಲೋಟ್ ನ ಅಳತೆಯನ್ನು ಮಾಡಬೇಕು. GMT ಯ ನಿರ್ವಹಣಾ ಸೂಚನೆಗಳಿರುವ ಕೈಪಿಡಿಗೆ ಅನುಸಾರವಾಗಿ, ಚಕ್ ನ ನಿಯಮಿತವಾದ ಲುಬ್ರಿಕೇಶನ್ ಮಾಡಲು ಶಿಫಾರಸ್ಸನ್ನು ಮಾಡಲಾಗಿರುವ ಗ್ರೀಸ್ ಬಳಸಿ ಮತ್ತು ಯೋಗ್ಯ ನಿರ್ವಹಣೆಯನ್ನು ಮಾಡಿ, ಚಕ್ ನಲ್ಲಿ ನಿರಂತರವಾದ ಬಳಕೆಯಲ್ಲಿ ಈ ಫ್ಲೋಟ್ ನ್ನು ನಿಯಂತ್ರಿಸುವುದು ಅಗತ್ಯದ್ದಾಗಿದೆ.
ಲುಬ್ರಿಕೇಶನ್ ನ ಅಭಾವದ ಪರಿಣಾಮ

sdsf_1  H x W:  
ಚಿತ್ರ ಕ್ರ. 4 ರಲ್ಲಿ ಒಂದು ಹೊಸದಾಗಿ ಗ್ರೈಂಡ್ ಮಾಡಿರುವ ಜಾ ತೋರಿಸಲಾಗಿದೆ. ಆದರೆ ಲುಬ್ರಿಕೇಶನ್ ನ ಅಭಾವದಿಂದಾಗಿ ನಷ್ಟವಾಗಿರುವ ಜಾ ಚಿತ್ರ ಕ್ರ. 5 ರಲ್ಲಿ ತೋರಿಸಲಾಗಿದೆ. ನಿರಂತರವಾಗಿ ಬಳಸಿದ್ದರಿಂದ ಸರಿಯಬಲ್ಲ ಸರ್ಫೇಸ್ ಮತ್ತು ಚಕ್ ಬಾಡಿ ಇವುಗಳಲ್ಲಿ ಕೂಲಂಟ್ ಮತ್ತು ಸೂಕ್ಷ್ಮವಾದ ಚಿಪ್ ಇವುಗಳು ಪ್ರವೇಶಿಸಿ ಯಂತ್ರಣೆಯನ್ನು ಮಾಡುವಾಗ ಜಾ ಹಾಳಾಗುತ್ತದೆ. ಈ ಚಿಪ್ ನ ಒಳಗಿಂದೊಳಗೆ ಗ್ರೈಂಡಿಂಗ್ ಆಗಿದ್ದರಿಂದ ಜಾ ಮತ್ತು T ಸ್ಲಾಟ್ ನ ಸರ್ಫೇಸ್ ಕೂಡಾ ಹಾಳಾಗುತ್ತದೆ. ಇದನ್ನು ‘ಫ್ರೇಟಿಂಗ್’ ತುಕ್ಕು ಎಂಬುದಾಗಿ ಗುರುತಿಸಲಾಗುತ್ತದೆ. ಆದರೆ ಫಿಟ್ ನ ನಿಖರತೆಯಲ್ಲಿ ಇದರ ಪ್ರಭಾವ ಬೀರುತ್ತದೆ ಅಲ್ಲದೇ ಇದರಿಂದಾಗಿ ಜಾ ನಲ್ಲಿ ‘ಪ್ಲೇ’ ಉಂಟಾಗುತ್ತದೆ. ಅಂದರೆ ಜಾ T ಸ್ಲಾಟ್ ನಲ್ಲಿ ಸಡಿಲವಾಗಿ ಹಿಂದೆ-ಮುಂದೆ ಸರಿಯಲಾರಂಭಿಸುತ್ತದೆ. ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಮುಖ್ಯ ಸ್ಪಿಂಡಲ್ ಮತ್ತು ಕಾರ್ಯವಸ್ತು ಇವುಗಳ ಮಧ್ಯ ರೇಖೆಯಲ್ಲಿರುವ ಆಫ್ ಸೆಟ್ ಇದರಿಂದಾಗಿ ಹೆಚ್ಚುತ್ತದೆ.

sdfx _1  H x W: 
ಜಾ ನ ಸ್ಲೈಡ್ ವೇಯಲ್ಲಿ ಕುಳಿ (ಡಿಂಪಲ್) ಮತ್ತು ಕಚ್ಚು ಇವುಗಳು ಗ್ರೀಸ್ ಶೇಖರಿಸುವ ಜಾಗಗಳಾಗಿವೆ. ಚಿತ್ರ ಕ್ರ. 5 ರಲ್ಲಿ ತೋರಿಸಿದಂತೆ ಹಾಳಾಗಿರುವ ಜಾ ಗಳಲ್ಲಿರುವ ಕುಳಿಗಳು ಮತ್ತು ಕಚ್ಚುಗಳು ಸವೆದಿವೆ. ನಮ್ಮ ಗ್ರಾಹಕರೊಬ್ಬರು ಅನೇಕ ವರ್ಷಗಳ ಕಾಲಾವಧಿಯ ತನಕ ಚಕ್ ಬಳಸಿದ ನಂತರ ನಮಗೆ ಕರೆ ಮಾಡಿ ಚಕ್ ನಲ್ಲಿ ‘ಪ್ಲೇ’ ಇದೆ ಎಂಬ ದೂರನ್ನು ಸಲ್ಲಿಸಿದರು. ಅವರ ದೃಷ್ಟಿಯಲ್ಲಿ ಈ ‘ಪ್ಲೇ’ ಅಂದರೆ ಚಕ್ ಮತ್ತು ಕಾರ್ಯವಸ್ತು ಇವುಗಳ ಮಧ್ಯ ರೇಖೆಯಲ್ಲಿರುವ ಆಫ್ ಸೆಟ್. ಚಕ್ ಕುರಿತಾದ ಸಮಸ್ಯೆಗಳಲ್ಲಿರುವ ಮೂಲಭೂತ ಕಾರಣವೆಂದರೆ, ಲುಬ್ರಿಕೇಶನ್ ಇಲ್ಲದಿರುವುದು. ಲುಬ್ರಿಕೇಶನ್ ನ ಹೊರತಾಗಿ ನಡೆಯಬಲ್ಲ ಚಕ್, ವೇಗವಾಗಿ ಸವೆಯುತ್ತವೆ, ಇಷ್ಟೇ ಅಲ್ಲದೇ ಅದು ಅಸುರಕ್ಷಿತವಾಗಿದೆ. ಯೋಗ್ಯವಾದ ಲುಬ್ರಿಕೇಶನ್ ಇಲ್ಲದಿದ್ದಲ್ಲಿ ಚಕ್ ಹಿಡಿಯುವ ಸಾಮಾನ್ಯವಾದ ಶಕ್ತಿ ಮತ್ತು ನಿಖರತೆಯು ಶೇಕಡಾ 50 ರಷ್ಟು ಕಡಿಮೆಯಾಗುತ್ತದೆ. ಅದರಲ್ಲಿಯೂ ಪ್ಲೇ ಇರಬಹುದು, ಎಂಬ ಅಂಶದಲ್ಲಿ ಆಶ್ಚರ್ಯವಿದೆಯೇ? ಇದರ ಕುರಿತು ಯಾವುದೇ ಕಾರಣಗಳಿರಬಲ್ಲವು. ಉದಾಹರಣೆ, ಅಯೋಗ್ಯವಾದ ಮೌಂಟಿಂಗ್, ಕ್ಷಮತೆಗಿಂತ ಹೆಚ್ಚು ವೇಗದಲ್ಲಿ ಮತ್ತು ಕಾರ್ಯವಸ್ತುಗಳಿಗೆ ಚಕ್ ಬಳಸುವುದು.
ಬೇಸ್ ಜಾ

sddfcv_1  H x W 
 
ಬೇಸ್ ಜಾ, ಇದು ತುಂಬಾ ನಿಖರವಾಗಿಬೇಕು. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳದೇ ಗ್ರಾಹಕರು ಅನೇಕ ಬಾರಿ ಸ್ವಂತದ್ದೇ ಆದ ಬೇಸ್ ಜಾ ತಯಾರಿಸುತ್ತಾರೆ. ಚಿತ್ರ ಕ್ರ. 6 ರಲ್ಲಿ ಗ್ರಾಹಕರು ತಯಾರಿಸಿರುವ ಬೇಸ್ ಜಾ ತೋರಿಸಲಾಗಿದೆ. ಈ ಬೇಸ್ ಜಾ ನಮ್ಮಲ್ಲಿ ರೀಕಂಡಿಶನಿಂಗ್ ಮಾಡಲು ಬಂದಿರುವ ಒಂದು ಚಕ್ ನಲ್ಲಿ ಕಂಡುಬಂತು. ಅದು ಕೇವಲ ತುಕ್ಕು ಹಿಡಿದು ಹಾಳಾಗಿತ್ತು, ಅಲ್ಲದೇ ಯಾರು ಆ ಜಾ ತಯಾರಿಸಿದ್ದರೋ, ಅವರು ಲುಬ್ರಿಕೇಶನ್ ಗೋಸ್ಕರ ಬೇಕಾಗುವ ಎರಡು ಕುಳಿಗಳನ್ನು ಮತ್ತು ಕಚ್ಚುಗಳನ್ನು ತಯಾರಿಸಲಿಲ್ಲ. ಇದು ಡಿಸೈನ್ ನಲ್ಲಿರುವ ವಿಶೇಷವಾದ ವೈಶಿಷ್ಟ್ಯವಾಗಿದೆ. ಕಚ್ಚಿನ ಆಳ ಮತ್ತು ಉದ್ದ ಇವುಗಳ ಟಾಲರನ್ಸ್ ತುಂಬಾ ನಿಖರವಾಗಿ ಇರುತ್ತದೆ. ಗ್ರೀಸ್ ನಿಪ್ಪಲ್ ಕೂಡಾ ಗ್ರೀಸ್ ನ ವಿಶಿಷ್ಟ ಪ್ರಮಾಣ ಮತ್ತು ವಿತರಣೆ ಇವುಗಳಿಗೋಸ್ಕರ ಡಿಸೈನ್ ಮಾಡಲಾಗಿರುತ್ತದೆ. ಜಾ ನಲ್ಲಿ ಕಾರ್ಯವಸ್ತುವನ್ನು ಕ್ಲ್ಯಾಂಪ್ ಮಾಡುವಾಗ ಪ್ಲೇ ಇದ್ದೇ ಇರುತ್ತದೆ, ಇದರಲ್ಲಿ ಆಶ್ಚರ್ಯವೇನಿದೆ. ಹೊರಗಿನ ಪೂರೈಕೆಗಾರರ ಹೊರತಾಗಿ ಮೂಲ ಉತ್ಪಾದಕರಿಂದ ಹೊಸದಾದ ಬೇಸ್ ಜಾ ಖರೀದಿ ಮಾಡಬೇಕು ಎಂಬುದರ ಕುರಿತಾದ ಮಹತ್ವವನ್ನು ಇನ್ನಷ್ಟು ಒತ್ತಾಯಿಸಿ ನಾವು ಹೇಳಲಾರೆವು.
ಚಕ್ ನ ಯೋಗ್ಯರೀತಿಯ ಬಳಕೆ
ಯಾವುದೇ ಉತ್ಪಾದನೆಯಂತೆ, ಚಕ್ ನ ಬಾಳಿಕೆಯು ಉಚ್ಚಮಟ್ಟದಲ್ಲಿ ವೃದ್ಧಿಸಲು ಅದನ್ನು ಬಳಸುವುದು ಇದೇ ಮೊದಲ ಹಂತವಾಗಿದೆ. ಚಕ್ ನ ಯೋಗ್ಯ ಬಳಕೆಯಲ್ಲಿ ಅದರ ನಿಯಮಿತವಾದ ನಿರ್ವಹಣೆಯೂ ಒಳಗೊಂಡಿದೆ. ಚಕ್ ಗೆ ಒಳ್ಳೆಯ ಬಾಳಿಕೆಯನ್ನು ನಿರ್ಧರಿಸಲು ಅದರ ಬಳಕೆಯ ಕುರಿತು ಹಲವಾರು ಸುಲಭವಾದ ಸೂಚನೆಗಳನ್ನು ನೀಡಲಾಗಿದೆ. GMT ತಮ್ಮಗ್ಯಾರಂಟಿ ಕ್ಲ್ಯಾಂಪಿಂಗ್/ ಡೀಕ್ಲ್ಯಾಂಪಿಂಗ್ ಆವರ್ತನೆಯ ಸಂಖ್ಯೆಯಲ್ಲಿ ಬರೆಯುತ್ತದೆ. ಈ ಸಂಖ್ಯೆಗಳನ್ನು ಮಾಡೆಲ್ ಗಳಿಗೆ ಅನುಸಾರವಾಗಿ ಬದಲಾಯಿಸಬಹುದು.
ಚಕ್ ಅಳವಡಿಸುವುದು (ಮೌಂಟ್)
• ಚಕ್ ಎತ್ತುವಾಗ ‘ಐ’ ಬೋಲ್ಟ್ ಬಳಸಬೇಕು. (250 ಮಿ.ಮೀ. ವ್ಯಾಸಕ್ಕಿಂತ ದೊಡ್ಡ ಚಕ್ ಗೆ)
• ಮೌಂಟ್ ಮಾಡುವ ಮುಂಚೆ, ಚಕ್ ನ ವೇಜ್ ಸಂಪೂರ್ಣವಾಗಿ ಕ್ಲ್ಯಾಂಪ್ ಮಾಡಿರುವ ಸ್ಥಿತಿಯಲ್ಲಿರಬೇಕು.
• ಮಶಿನ್ ಸ್ಪಿಂಡಲ್ ನಲ್ಲಿ ಚಕ್ ಯೋಗ್ಯ ರೀತಿಯಲ್ಲಿ ಮೌಂಟ್ ಮಾಡಬೇಕು. ಮಶಿನ್ ಮತ್ತು ಚಕ್ ಎರಡರಲ್ಲಿಯೂ ಸ್ಪಿಂಡಲ್ ನ ರೇಡಿಯಲ್ ಮತ್ತು ಎಕ್ಸಿಸ್ ರನ್ ಔಟ್ ನಿರ್ದಿಷ್ಟ ಮಿತಿಯಲ್ಲಿರಬೇಕು. ಮೌಂಟಿಂಗ್ ನಂತರ ಚಕ್ ಫ್ಲಂಜ್ ನಲ್ಲಿ ಯಾವುದೇ ರೀತಿಯ ಉಬ್ಬು (ಕಾನ್ವೆಕ್ಸ್) ಇರಬಾರದು.
• ಒಂದು ವೇಳೆ ಡ್ರಾ ಬಾರ್ ಅಥವಾ ಡ್ರಾ ಟ್ಯೂಬ್ ಬಳಸಿದ್ದಲ್ಲಿ, ಮೌಂಟ್ ಮಾಡುವಾಗ ಪಿಸ್ಟನ್ ಸಂಪೂರ್ಣವಾಗಿ ಹಿಂದೆ ಸರಿಸಬೇಕು. ಯೋಗ್ಯ ಸಾಮಗ್ರಿಗಳನ್ನು ಬಳಸಿ ಮೇಲ್ಭಾಗದಲ್ಲಿರುವ ಜಾಗವನ್ನು ಯೋಗ್ಯ ರೀತಿಯ ಕ್ಲ್ಯಾಂಪಿಂಗ್ ಟಾರ್ಕ್ ಅಳವಡಿಸಿ ಬಿಗಿ ಮಾಡಬೇಕು.
ಲೇಥ್ ಚಕ್ ಬಳಸುವ ಹಲವಾರು ಮಹತ್ವದ ಅಂಶಗಳು
W : ಈ ಅಗಲವು ಬೇಸ್ ಜಾ ನ ಅಗಲಕ್ಕಿಂದ ಹೆಚ್ಚು ಇರಬಾರದು.
B : ಈ ಅಗಲವು ಕ್ಲ್ಯಾಂಪಿಂಗ್ ವ್ಯಾಸದ ಸುತ್ತಳತೆಯಷ್ಟು ಹೆಚ್ಚಿಸಬಹುದು.
L : ಕ್ಲ್ಲಾಂಪಿಂಗ್ ನ ವ್ಯಾಸಕ್ಕೆ ಅನುಸಾರವಾಗಿ ಉದ್ದವನ್ನು ಬದಲಾಯಿಸಬಹುದು.
D : ಕ್ಲ್ಲಾಂಪಿಂಗ್ ನ ವ್ಯಾಸಕ್ಕೆ ಅನುಸಾರವಾಗಿ ಬದಲಾಯಿಸಬಹುದು.
T : ನೀಡಿರುವ ಚಕ್ ನ ಆಕಾರಕ್ಕೆ ಕಠಿಣವಾದ ಜಾ ನ ಕೈಪಿಡಿಯಲ್ಲಿ ನೀಡಲಾಗಿರುವ ಗರಿಷ್ಠ ನಿಯತಾಂಕಗಳ ದಪ್ಪ.
S : ಬೇಸ್ ಜಾ ಉದ್ದವನ್ನು ಕಾಪಾಡಲು.
E : 20 ಮಿ.ಮೀ.ಗಿಂತ ಹೆಚ್ಚು ಇಲ್ಲ.
ಚಕ್ ನ ಬಳಕೆ

sddfcvsd_1  H x 
 
• ಮೇಲ್ಭಾಗದಲ್ಲಿರುವ ಜಾನ ಓವರ್ ಹ್ಯಾಂಗ್ ಚಕ್ ನ ಸುತ್ತಳತೆಯ 20 ಮಿ.ಮೀ.ಗಿಂತ ಹೆಚ್ಚು ಇರಬಾರದು.
• ಚಿತ್ರ ಕ್ರ. 7 ರಲ್ಲಿ ತೋರಿಸಿದಂತೆ ಮಿತಿಯಲ್ಲಿಯೇ ಮೇಲ್ಭಾಗದ ಜಾ ಜಾಗರೂಕತೆಯಿಂದಲೇ ಡಿಸೈನ್ ಮಾಡಬೇಕು.
• ಕಾರ್ಯವಸ್ತು ಚಕ್ ವ್ಯಾಸದ ಹೊರಗೆ ಹೋಗದಂತಿರಬೇಕು.
• ಉದ್ದದ ಕಾರ್ಯವಸ್ತುಗಳಿಗೆ ಟೇಲ್ ಸ್ಟಾಕ್ ಮತ್ತು ಸ್ಟೆಡಿ ರೆಸ್ಟ್ ಬಳಸಿ ಆಧಾರವನ್ನು ನೀಡಬೇಕು.
• ಚಕ್ ಅದರ ನಿಗದಿತ ವೇಗದ ಮಿತಿಯಲ್ಲಿಯೇ ನಡೆಸಬೇಕು.
• ಡ್ರಾ ಬಾರ್ ನ ಎಳೆಯುವ ಶಕ್ತಿಯು (ಪುಲ್) ನಿಗದಿತ ಮಿತಿಯನ್ನು ದಾಟಬಾರದು.
ಚಕ್ ನ ನಿರ್ವಹಣೆ
ಚಕ್ ಉತ್ಪಾದಕರು ಶಿಫಾರಸು ಮಾಡಿರುವ ಗ್ರೀಸ್ ಮತ್ತು ಗ್ರೀಸ್ ಗನ್ ಬಳಸಿ ಚಕ್ ಗೆ ಒಳ್ಳೆಯ ರೀತಿಯಲ್ಲಿ ಲುಬ್ರಿಕೇಶನ್ ಮಾಡುವುದು, ಅದನ್ನು ಶುಚಿಗೊಳಿಸುವುದು, ಚಕ್ ನ ಆಪ್ಟಿಮೈಜ್ಡ್ ಬಾಳಿಕೆಯನ್ನು ಪಡೆಯುವಲ್ಲಿ ಅತ್ಯಂತ ಮಹತ್ವದ್ದಾಗಿದೆ. ಚಕ್ ಗೆ ಯಾವ ವಿಶಿಷ್ಟ ರೀತಿಯ ಗ್ರೀಸ್ ಯೋಗ್ಯವಾಗಿ ಕೆಲಸ ನಿರ್ವಹಿಸುತ್ತದೆ, ಎಂಬುದನ್ನು ನಿರ್ಧರಿಸಲು GMT ಯು ಸೂಚಿಸಿರುವ ಪರೀಕ್ಷೆಗಳನ್ನು ಮಾಡಲಾಗಿದೆ.
 
ಪ್ರತಿಯೊಂದು ಚಕ್ ನೊಂದಿಗೆ ನೀಡಿರುವ ಮಾರ್ಗಸೂಚಿಯ ಕೈಪಿಡಿಯಲ್ಲಿ ಈ ಪ್ರಕ್ರಿಯೆಯನ್ನು ವಿಸ್ತಾರವಾಗಿ ಸ್ಪಷ್ಟ ಪಡಿಸಲಾಗಿದೆ. ಆದರೂ ಕೂಡಾ ಪ್ರಮುಖವಾದ ಅಂಶಗಳನ್ನು ನಾವು ಇಲ್ಲಿ ಉಲ್ಲೇಖಿಸುತ್ತೇವೆ.
ಕೆಲಸ ನಿರ್ವಹಿಸುವ ಪರಿಸ್ಥಿತಿಯಲ್ಲಿರುವ ಭಿನ್ನತೆಯಿಂದಾಗಿ, ಎಲ್ಲ ವಿಧದ ಚಕ್ ಗಳ ಲುಬ್ರಿಕೇಶನ್ ಮಾಡಲು ಒಂದೇ ನಿಯತಾಂಕಗಳ ರಿಪಿಟ್ಯಾಬಿಲಿಟಿ ಅಥವಾ ವೇಳಾಪಟ್ಟಿಯನ್ನು ಶಿಫಾರಸ್ಸು ಮಾಡುವುದು ಕಠಿಣವಾಗಿದೆ. ಪ್ರತಿಯೊಂದು ಶಿಫ್ಟ್ ನಲ್ಲಿ ಸೂಕ್ತವಾದ ಗ್ರೀಸ್ ಗನ್ ಬಳಸಿ ಒಂದು ಸಲವಾದರೂ ಲುಬ್ರಿಕೇಶನ್ ಮಾಡುವುದು ಕನಿಷ್ಠವಾದ ನಿಯತಾಂಕವಾಗಿದೆ. ಚಕ್ ನಿಂದ ಲಭಿಸುವಂತಹ ಜಾ ನ ನಿಜವಾದ ಶಕ್ತಿ ಲುಬ್ರಿಕೇಶನ್ ನ ಆವಶ್ಯಕತೆಯನ್ನು ನಿರ್ಧರಿಸಿ ನಿರ್ದೇಶಿತ ಮಾಡಬಲ್ಲದು. ಆದರೆ ಒಂದು ವೇಳೆ ಲುಬ್ರಿಕೇಶನ್ ಮಾಡಿದ ನಂತರವೂ ‘ಜಾ’ನ ಶಕ್ತಿಯು ಬೇಕಾದಷ್ಟು ಲಭಿಸದಿದ್ದಲ್ಲಿ, ಚಕ್ ಹೊರಗೆ ತೆಗೆದು ಸಂಪೂರ್ಣವಾಗಿ ಬಿಡಿಸಿ
(ಡಿಸ್ ಮೆಂಟಲ್) ಶುಚಿ ಮಾಡುವುದು ಮತ್ತು ಅದರಲ್ಲಿ ಲುಬ್ರಿಕಂಟ್ ಹಾಕುವುದು ಅತ್ಯಾವಶ್ಯಕವಾಗಿದೆ, ಇದೇ ಅದರ ಅರ್ಥ.
 
GMT ಯ ಎಲ್ಲ ಚಕ್ ಗಳಿಗೆ ಕಾರ್ಖಾನೆಯಲ್ಲಿಯೇ GMT ಯು ಶಿಫಾರಸು ಮಾಡಿರುವ ಗ್ರೀಸ್ ಬಳಸಿ ಲುಬ್ರಿಕೇಶನ್ ಮಾಡಲಾಗುತ್ತದೆ ಮತ್ತು ಬಳಸಲೂ ಸಿದ್ಧವಾಗಿರುತ್ತವೆ. ಕೆಲಸದ ಜಾಗ ಮತ್ತು ಪರಿಸ್ಥಿತಿಯು ಒಂದು ವೇಳೆ ಸಾಕಷ್ಟು ಶುಚಿಯಾಗಿದ್ದಲ್ಲಿ, GMT ಚಕ್ ಬಿಡಿ ಬಿಡಿಯಾಗಿ ಮಾಡಿ ಮತ್ತೆ ಲುಬ್ರಿಕಂಟ್ ಹಾಕದೇ 10,000 ಆವರ್ತನೆಗಳ ತನಕ ನಡೆಸಬಹುದಾಗಿದೆ. ದೀರ್ಘ ಸೇವೆಯ ಬಾಳಿಕೆ ಮತ್ತು ಉಚ್ಚಮಟ್ಟದ ಕಾರ್ಯ ಕ್ಷಮತೆಯನ್ನು ನಿರ್ಧರಿಸಲು, ಪ್ರತಿಯೊಂದು ಚಕ್ ನಿಯಮಿತವಾಗಿ ಬಿಡಿ ಬಿಡಿ ಮಾಡುವುದು, ಶುಚಿಗೊಳಿಸುವುದು ಮತ್ತೆ ಮತ್ತೆ ಲುಬ್ರಿಕಂಟ್ ಹಾಕುವುದು ಮುಂತಾದ ಕೆಲಸಗಳನ್ನು ನಿಗದಿತ ಕಾಲಾವಧಿಯ ನಂತರ ಮಾಡುವುದು ಅತ್ಯಗತ್ಯವಾಗಿದೆ. ಇದರ ರಿಪಿಟ್ಯಾಬಿಲಿಟಿ ಸಂಪೂರ್ಣವಾಗಿ ಕೆಲಸದ ಪರಿಸ್ಥಿತಿಯಲ್ಲಿ ಅವಲಂಬಿಸಿರುತ್ತದೆ. ಅಲ್ಲದೇ ಕೆಲಸದ ಮೊದಲ ಹಲವಾರು ವಾರಗಳ ನಿರ್ದಿಷ್ಟ ಕಾಲಾವಧಿಯಲ್ಲಿ ಪರೀಕ್ಷೆ ಮಾಡಿ ಅದನ್ನು ನಿರ್ಧರಿಸಬಹುದಾಗಿದೆ.
ಲುಬ್ರಿಕಂಟ್ ನ ಅಗತ್ಯವಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಲು ಹಲವಾರು ಮಾನದಂಡಗಳನ್ನು ನಿರ್ದಿಷ್ಟಗೊಳಿಸುವುದು ಅತ್ಯಾವಶ್ಯಕವಾಗಿದೆ. ಇದಕ್ಕೋಸ್ಕರ ಸಾಮಾನ್ಯವಾಗಿ ಈ ಮುಂದಿನ ಸೂಚಿಯಲ್ಲಿ ನೀಡಿರುವ ಘಟಕಗಳ ಕಾಂಬಿನೇಶನ್ ಬಳಸಲಾಗುತ್ತದೆ.
1. ಹೊರ ಭಾಗದಲ್ಲಿರುವ ಕಲ್ಮಶ, ಕೂಲಂಟ್ ಒಳಗೆ ಸೇರಿದೆಯೇ? ಅದರಿಂದ ನಷ್ಟ ಅಥವಾ ಸವೆತವಾಗಿದೆಯೇ? ಎಂಬುದನ್ನು ವಿಜ್ಯುವಲಿ ಪರಿಶೀಲಿಸಬೇಕು.
2. ಆವಶ್ಯಕವಿರುವ ಹಿಡಿತದ ಶಕ್ತಿಯನ್ನು ನಿರ್ಮಿಸಲು ಆಪರೇಟರ್ ಗೆ ಹೈಡ್ರಾಲಿಕ್ ಒತ್ತಡವನ್ನು ಹೆಚ್ಚಿಸಬೇಕಾಗುವುದು (ಡ್ರಾ ಬಾರ್ ಪುಲ್ ಹೆಚ್ಚಿಸಲು).
3. ಜಾ ನಿಂದ ಲಭಿಸುವ ಶಕ್ತಿಯ ಅಳತೆಯನ್ನು ಮಾಡುವುದು.
ಆದರೂ ಕೂಡಾ, ಪ್ರತ್ಯಕ್ಷವಾಗಿ ವ್ಯವಹಾರದಲ್ಲಿ ಏನು ಮಾಡಲಾಗುತ್ತದೆ, ಎಂಬುದರ ಕುರಿತಾದ ಅಭ್ಯಾಸ ಮತ್ತು ಮೇಲಿನ ಅಂಶಗಳಿಗೆ ಸಂಬಂಧಪಟ್ಟ ಸಂಶೋಧನೆಯಿಂದ, GMT ಯು ಲುಬ್ರಿಕೇಶನ್ ನ ರಿಪಿಟ್ಯಾಬಿಲಿಟಿಯ ಕುರಿತು ಸ್ವಲ್ಪ ತಿಳಿವಳಿಕೆಯನ್ನು ಹೊಂದಿದೆ. ಲುಬ್ರಿಕೇಶನ್ ಕುರಿತು ಮುಂದೆ ನೀಡಿರುವ ಮಹತ್ವದ ಅಂಶಗಳ ಅನುಕರಣೆಯನ್ನು ಮಾಡಿದಲ್ಲಿ ಚಕ್ ನಿಂದ ಇನ್ನಷ್ಟು ಹೆಚ್ಚು ಉತ್ಪಾದನೆಯ ಕ್ಷಮತೆಯು ಲಭಿಸಬಲ್ಲದು.
ಲುಬ್ರಿಕೇಶನ್ ನ ಆವರ್ತನೆ
500 ರಿಂದ 1000 ಆವರ್ತನೆಗಳನ್ನು ಪೂರ್ತಿ ಮಾಡುವುದು ಅಥವಾ 8 ರಿಂದ 16 ಗಂಟೆ ಬಳಸಿ,ಇದರಲ್ಲಿ ಯಾವುದು ಮುಂಚೆ ಆಗುತ್ತದೆಯೋ, ಅದರಂತೆ ಚಕ್ ಗೆ ಗ್ರೀಸಿಂಗ್ ಮಾಡುವುದು ಅಗತ್ಯವಾಗಿದೆ.
ಶಿಫಾರಸ್ಸು ಮಾಡಿರುವ ಲುಬ್ರಿಕಂಟ್ ಗ್ರೀಸ್
Altemp QNB-50
Kulber ಗ್ರೀಸ್
OKS-265 ವೈಟ್ ಅಸೆಂಬ್ಲಿ ಗ್ರೀಸ್
Molykote TP-42 ಗ್ರೀಸ್
ಚಕ್ ನಲ್ಲಿ ಹೇಗೆ ಮತ್ತು ಎಲ್ಲಿ ಲುಬ್ರಿಕೇಶನ್ ಮಾಡುವುದು?

sddfcvsdsdf_1   
 
ಶಿಫಾರಸ್ಸು ಮಾಡಿರುವ ಗ್ರೀಸ್ ಗನ್ ಬಳಸಬೇಕು, ಎಂಬುದನ್ನು ಒತ್ತಾಯಿಸಿ ಹೇಳುವುದು ಮಾತ್ರ ಕ್ಷುಲ್ಲಕವಾದ ಅಂಶವೆಂದು ಅನಿಸಬಹುದು. ಆದರೆ ಇನ್ನಿತರ ಎಲ್ಲ ಯಾಂತ್ರಿಕ ವಸ್ತುಗಳಂತೆ ಗ್ರೀಸ್ ಗನ್ ನಲ್ಲಿಯೂ ವೈಶಿಷ್ಟ್ಯಗಳಿರುತ್ತವೆ ಮತ್ತು ಚಕ್ ನ ನಿರ್ವಹಣೆ ಮಾಡಲು ಬಳಸಲಾಗುವಂತಹ ಗ್ರೀಸ್ ಗನ್, ಚಕ್ ನಲ್ಲಿರುವ ಗ್ರೀಸ್ ನಿಪ್ಪಲ್ ಗೆ ಯೋಗ್ಯವಾಗಬಲ್ಲದು ಮತ್ತು ಅದು ಸೂಕ್ತವಾದ ವಿಸ್ಕಾಸಿಟಿಯ ಗ್ರೀಸ್ ನ ವಿತರಣೆ ಮಾಡುವಲ್ಲಿ ಸಕ್ಷಮವಾಗಬಲ್ಲದು. ಇದಕ್ಕೋಸ್ಕರ ಕೇವಲ ಉತ್ಪಾದಕರು ಶಿಫಾರಸು ಮಾಡಿರುವ ಅಥವಾ ಅದಕ್ಕೆ ಸರಿಸಮಾನವಾದ ವೈಶಿಷ್ಟ್ಯಗಳಿರುವ ಗ್ರೀಸ್ ಗನ್ ಬಳಸಬೇಕು. ಬೇಸ್ ಜಾ ಮತ್ತು ಚಕ್ ನ ಸುತ್ತುಮುತ್ತು ನೀಡಿರುವ ಗ್ರೀಸ್ ನಿಪ್ಪಲ್ ನಿಂದಲೇ ಗ್ರೀಸ್ ತುಂಬಿಸಬೇಕು. ಒಮ್ಮೆ ಗ್ರೀಸ್ ತುಂಬಿಸಿದ ನಂತರ ಅದು ಇಡಿ ಸರ್ಫೇಸ್ ನಲ್ಲಿ ಒಂದೇ ರೀತಿಯಲ್ಲಿ ಪಸರಿಸಿದೆಯೇ ಎಂಬುದರ ಕುರಿತು ಖಾತರಿ ಮಾಡಲು ಸಂಪೂರ್ಣ ಸ್ಟ್ರೋಕ್ ನಷ್ಟು ಉದ್ದದ ಜಾ ಒಳಗೆ ಮತ್ತು ಹೊರಗೆ ಅಳವಡಿಸುವುದನ್ನು ಶಿಫಾರಸು ಮಾಡಲಾಗಿದೆ. ಗ್ರೀಸ್ ಗನ್ ನ ನೋಜಲ್ ನಿಪ್ಪಲ್ ನ ಆಕಾರಕ್ಕೆ ಅನುಕೂಲವಾಗಿರುವುದೂ ಇಲ್ಲಿ ಮಹತ್ವದ ಅಂಶವಾಗಿದೆ. ಚಿತ್ರ ಕ್ರ. 8 ರಲ್ಲಿ ವೀಕ್ಷಿಸಿರಿ.
ಮಾನದಂಡಗಳ ಪರೀಕ್ಷೆಯ ಸ್ಥಿತಿಯಲ್ಲಿ ವಿವಿಧ ಲುಬ್ರಿಕಂಟ್
ಗ್ರೀಸ್ ಗೆ ಒಟ್ಟು ಸ್ಟ್ಯಾಟಿಕ್ ಹಿಡಿತದ ಬಲ
ಪರೀಕ್ಷೆ ಮಾಡಿರುವ ಯಾವುದೇ ಗ್ರೀಸ್ ನ ಗುಣಮಟ್ಟವು ಕಡಿಮೆ ಇದೆ, ಎಂಬುದನ್ನು ಇದರಲ್ಲಿ ಸೂಚಿಸಲಾಗಿಲ್ಲ, ಎಂಬುದನ್ನು ಗಮನದಲ್ಲಿಡಬೇಕು. ಆದರೆ GMT ಚಕ್ ಗೆ ಎಲ್ಲಕ್ಕಿಂತಲೂ ಯೋಗ್ಯ ಗ್ರೀಸ್ ಯಾವುದು ಎಂಬುದನ್ನು ಮಾತ್ರ ಇಲ್ಲಿ ಸೂಚಿಸಲಾಗಿದೆ. ಪ್ರತಿಯೊಂದು ಗ್ರೀಸ್ ವಿಶಿಷ್ಟ ಕಾರಣಕ್ಕೆ ಡಿಸೈನ್ ಮಾಡಲಾಗಿರುತ್ತದೆ. ಅನೇಕ ಗ್ರೀಸ್ ಗಳ ಸ್ವಲ್ಪ ಸಮಯದ ನಂತರ ಅಥವಾ ಹೆಚ್ಚು ಉಷ್ಣಾಂಶ ಮತ್ತು ಒತ್ತಡ ಉಂಟಾದ ನಂತರ ತೆಳ್ಳಗೆಯಾಗುತ್ತವೆ. ಬಳಸಿರುವ ಗ್ರೀಸ್, ಚಕ್ ಜಾ ನ ಆಗಾಗ ಸರಿಯುವಂತಹ ಚಟುವಟಿಕೆಗಳಿಂದಾಗಿ ಹಾಳಾಗಬಾರದು ಮತ್ತು ಬಳಸಿದ್ದರಿಂದ ಅಥವಾ ಸ್ವಲ್ಪ ಸಮಯದ ನಂತರ ಅದು ಯಾವುದೇ ರೀತಿಯಲ್ಲಿ ಹಾಳಾಗಬಾರದು ಅಥವಾ ತೆಳ್ಳಗೆ ಉದ್ಭವಿಸಬಾರದು. (OKS-265 ಇದು ವಿಶಿಷ್ಟ ಚಕ್ ಜಾ ಗೋಸ್ಕರ ಡಿಸೈನ್ ಮಾಡಿರುವ ಗ್ರೀಸ್). ಅದಕ್ಕೋಸ್ಕರವೇ ನಿರ್ವಹಣೆಯನ್ನು ಮಾಡುವಾಗ ‘ಸಬ್ ಘೋಡೆ ಬಾರಾ ಟಕೆ’ ಎಂಬ ದೃಷ್ಟಿಕೋನವನ್ನು ಇಟ್ಟುಕೊಳ್ಳದಿರುವುದು ಮಹತ್ವದ್ದಾಗಿದೆ. ಅನೇಕ ಬಾರಿ ನಿರ್ವಹಣೆ ಮಾಡುವ ಕೆಲಸಗಾರರು ಸಹಜವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ ಶ್ರಮ ಮತ್ತು ಬೆಲೆಯನ್ನೂ ಕಡಿಮೆ ಹೇಗೆ ಮಾಡಬಹುದು, ಎಂಬ ವಿಚಾರ ಮಾಡುತ್ತಾರೆ, ಎಂಬುದೂ ಗಮನಕ್ಕೆ ಬರುತ್ತದೆ. ಆದರೆ ಮೂಲಭೂತ ಗುರಿಯನ್ನು ಸಾಧಿಸುವಲ್ಲಿ ಅದು ಸೂಕ್ತವಾದ ದಾರಿಯಲ್ಲ.
ಚಕ್ ಬಿಡಿ ಬಿಡಿ ಮಾಡಲು ಪುನರಾವರ್ತನೀಯತೆ
ಬಳಸಲು ಮೊದಲಾಗಿ 5,000 ದಿಂದ 8,000 ಆವರ್ತನೆಗಳನ್ನು ಪೂರ್ತಿ ಮಾಡಿದ ನಂತರ ಹೊಸ ಚಕ್ ಬಿಡಿ ಮಾಡುವುದು, ಶುಚಿಗೊಳಿಸುವುದು ಮತ್ತು ಅದರಲ್ಲಿ ಲುಬ್ರಕಂಟ್ ತುಂಬಿಸುವುದು ಅವಶ್ಯಕವಾಗಿದೆ. ನಂತರ ಪ್ರತಿ 20,000 ದಿಂದ 25,000 ಆವರ್ತನೆಗಳು ಪೂರ್ತಿ ಮಾಡಿದ ನಂತರ ನಿಯಮಿತವಾಗಿ ಇದೇ ರೀತಿಯಲ್ಲಿ ನಿರ್ವಹಣೆಯ ಕೆಲಸವನ್ನು ಮಾಡಬೇಕು. ಒಂದು ವೇಳೆ ಕಾಸ್ಟ್ ಆಯರ್ನ್ ನಲ್ಲಿ ಯಂತ್ರಣೆಯನ್ನು ಮಾಡಲಾಗುತ್ತಿದ್ದಲ್ಲಿ, ಎಷ್ಟು ಆವರ್ತನೆಗಳಾಗಿವೆ, ಎಂಬದರ ಕುರಿತು ವಿಚಾರ ಮಾಡದೇ ಯಂತ್ರಣೆಯನ್ನು ಮಾಡದೇ ತಿಂಗಳಿಗೊಮ್ಮೆ ಚಕ್ ಬಿಡಿ ಮಾಡಿ ಶುಚಿಗೊಳಿಸಿ ಅದರಲ್ಲಿ ಲುಬ್ರಿಕಂಟ್ ತುಂಬಿಸಬೇಕು.
ನಿರ್ವಹಣೆಯಲ್ಲಿ ಮಾಡಬೇಕಾಗಿರುವ ಮತ್ತು ತಡೆಯಬೇಕಾಗಿರುವ ಹಲವಾರು ಮಹತ್ವದ ಕೆಲಸಗಳು (Do’s & Dont’s)
ಚಕ್ ಮಶಿನ್ ನ ಸ್ಪಿಂಡಲ್ ನಿಂದ ಹೊರ ತೆಗೆಯಲು, ಅದನ್ನು ಬಿಡಿ ಬಿಡಿ ಮಾಡಲು, ಅಲ್ಲದೇ ಅದನ್ನು ಮತ್ತೆ ಜೋಡಿಸಲು ಅದರೊಂದಿಗೆ ನೀಡಿರುವ ವಿಶಿಷ್ಟ ರೀತಿಯ ಉಪಕರಣಗಳನ್ನು ಬಳಸುವುದೂ ಅಷ್ಟೇ ಮಹತ್ವದ್ದಾಗಿದೆ.
1. ಜಾ ಬಿಗಿ ಮತ್ತು ಸಡಿಲ ಮಾಡಲು ಯೋಗ್ಯವಾದ ಎಲನ್ ಕೀ ಯನ್ನು ಬಳಸಬೇಕು.
2. ಸ್ಕ್ರೂ ಬಿಗಿ ಮಾಡಲು ಎಲನ್ ಕೀಯೊಂದಿಗೆ ಪೈಪ್ ಬಳಸಬಾರದು. ಯೋಗ್ಯವಾದ ಟಾರ್ಕ್ ರೇಂಚ್ ಬಳಸಬೇಕು. ಹಾಗೆಯೇ ಪ್ರತಿಯೊಂದು ಚಕ್ ಗೋಸ್ಕರ ಟಾರ್ಕ್ ನ ಯೋಗ್ಯ ಮೌಲ್ಯದ ಸೂಚನೆಗಳನ್ನು ಕೈಪಿಡಿಯಲ್ಲಿ ನೀಡಲಾಗಿರುತ್ತದೆ.
3. ಶುಚಿಗೊಳಿಸಿದ ನಂತರ ಮತ್ತೆ ಅಸೆಂಬ್ಲಿ ಮಾಡುವಾಗ ನೈಲಾನ್ ಅಥವಾ ಪ್ಲಾಸ್ಟಿಕ್ ನ ಸುತ್ತಿಗೆಯನ್ನು ಬಳಸಬೇಕು. ಲೋಹದ ಸುತ್ತಿಗೆಯನ್ನು ಬಳಸಬಾರದು.
4. ಚಕ್ ಶುಚಿಗೊಳಿಸುವಾಗ ಮತ್ತೆ ಅಸೆಂಬ್ಲಿ ಮಾಡುವಾಗ, ಒರೆಸುವಾಗ ಮತ್ತು ಒಣಗಿಸುವಾಗ ದಾರರಹಿತವಾದ ಬಟ್ಟೆ ಅಥವಾ ಗಾಳಿಯನ್ನು ಸಿಂಪಡಿಸಬೇಕು. ಚಕ್ ಶುಚಿಗೊಳಿಸಲು ಬಿಡಿ ಬಿಡಿಯಾಗಿರುವ ಕಾಟನ್ ವೇಸ್ಟ್ ಬಳಸಬಾರದು.
5. ಚಕ್ ಸಂಪೂರ್ಣವಾಗಿ ಶುಚಿಗೊಳಿಸಬೇಕು ಮತ್ತು ಸ್ಟೋರೇಜ್ ಮಾಡುವ ಮುನ್ನ ಅದರಲ್ಲಿ ತುಕ್ಕು ಪ್ರತಿರೋಧಕ (ಅ್ಯಂಟಿರಸ್ಟ್) ರಾಸಾಯನಿಕ ಪದಾರ್ಥವನ್ನು ಹಚ್ಚಬೇಕು.
ಚಕ್ ನೊಂದಿಗೆ ನೀಡಿರುವ ಸೂಚಿಯ ಕೈಪಿಡಿಯಲ್ಲಿ ಚಕ್ ಮೌಂಟ್ ಮಾಡುವುದು, ಹೊರಗೆ ತೆಗೆಯುವುದು, ಶುಚಿಗೊಳಿಸುವುದು ಮತ್ತು ಮತ್ತೆ ಮೌಂಟ್ ಮಾಡುವುದು ಮುಂತಾದ ಸಂಪೂರ್ಣ ವಿವರಗಳನ್ನು ನೀಡಲಾಗಿರುತ್ತದೆ, ಅದನ್ನು ಓದಿಕೊಳ್ಳಬೇಕು.
ಚಕ್ ನ ಇನ್ನಿತರ ವಿಧಗಳು
ನಿರ್ವಹಣೆಯ ಕುರಿತು ಮೇಲೆ ಉಲ್ಲೇಖಿಸಿರುವ ಅಂಶಗಳು ವೇಜ್ ವಿಧದ ಸಿ.ಎನ್.ಸಿ. ಲೇಥ್ ಚಕ್ ಗೋಸ್ಕರವಾಗಿವೆ.
1. ಚಕ್ ಅದರ ನಿರ್ಧಾರಿತ ಪ್ಯಾರಾಮೀಟರ್ ನಲ್ಲಿ ಬಳಸಬೇಕು.
2. ಜಾನ ಸ್ಲೈಡ್-ವೇ ಶುಚಿಯಾಗಿವೆ ಮತ್ತು ಚಕ್ ನ ಒಳಗೆ ಚಿಪ್ ಅಥವಾ ಕಸ ಇಲ್ಲ, ಎಂಬುದನ್ನು ಖಚಿತಪಡಿಸಬೇಕು.
3. ಯೋಗ್ಯ ಗ್ರೀಸ್ ಮತ್ತು ಲುಬ್ರಿಕಂಟ್ ಸಾಮಗ್ರಿ ಬಳಸಿ ನಿಯಮಿತವಾಗಿ ಲುಬ್ರಿಕೇಶನ್ ಮಾಡಬೇಕು. ಲುಬ್ರಿಕೇಶನ್ ನ ರೀತಿ ಮತ್ತು ಲುಬ್ರಿಕೇಶನ್ ಮಾಡುವ ಬಿಂದು ಪ್ರತಿಯೊಂದು ಚಕ್ ನಲ್ಲಿ ಬೇರೆಬೇರೆ ರೀತಿಯಲ್ಲಿ ಇರಬಲ್ಲವು.
 

9_1  H x W: 0 x 
ನಿರ್ವಹಣೆಯನ್ನು ಮಾಡುವಾಗ ಮೇಲಿನ ಮೂರು ಹಂತಗಳ ಒಂದುಗೂಡಿಸುವಿಕೆಯು ಎಲ್ಲ ರೀತಿಯ ಚಕ್ ಗಳಿಗೋಸ್ಕರ ಸಮಾನವಾಗಿರುತ್ತವೆ. ಆದರೆ ಅದರಲ್ಲಿ ಎಕ್ಚ್ಯುಯೇಶನ್ ಯಂತ್ರರಚನೆ ಯಾವುದೇ ಇದ್ದರೂ ಕೂಡಾ, ಈ ಮೂರೂ ಅಂಶಗಳನ್ನು ಎಷ್ಟು ಬಾರಿ ಹೇಳಿದರೂ ಕೂಡಾ ಅದು ಸಾಕು ಎಂದಾಗುವುದಿಲ್ಲ. ಸಾಮಾನ್ಯವಾಗಿ ಗ್ರಾಹಕರಿಗೆ ಕೇವಲ ಜಾ ಮತ್ತು ಸ್ಲೈಡ್-ವೇ ಇದಕ್ಕೆ ಮಾತ್ರ ನಿಯಮಿತವಾಗಿ ಶುಚಿ ಮಾಡುವುದು ಸಾಧ್ಯವಿರುತ್ತದೆ. ಚಕ್ ಬಿಡಿ ಮಾಡುವುದು ಮತ್ತು ನಂತರ ಶುಚಿಗೊಳಿಸುವ ಕೆಲಸವನ್ನು ನುರಿತ ಕೆಲಸಗಾರರಿಂದಲೇ ಮಾಡಿಕೊಳ್ಳಬೇಕಾಗುತ್ತದೆ.

10_1  H x W: 0  
 
ಆದರೂ ಕೂಡಾ ಇದರಲ್ಲಿ ಹಲವಾರು ವಿನಾಯಿತಿಗಳಿರುತ್ತವೆ. ಎಕ್ಸ್ ಪಾಂಡಿಂಗ್ ಮ್ಯಾಂಡ್ರೆಲ್ ನಲ್ಲಿ (ಚಿತ್ರ ಕ್ರ. 9) ಜಾ ಅಥವಾ ಸ್ಲೈಡ್-ವೇ ಇರುವುದಿಲ್ಲ ಮತ್ತು ಈ ಯಂತ್ರರಚನೆಯನ್ನು ಕೇವಲ ಶುಚಿಗೊಳಿಸಬಹುದು.
 

xcv _1  H x W:  
 
ಕೆಲವು ಚಕ್ ಗಳ ಎಕ್ಚ್ಯುಯೇಶನ್ ಯಂತ್ರಗಳ ರಚನೆಯಲ್ಲಿ ವಿಶೇಷವಾದ ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ಗ್ರಿಪ್ ಡೌನ್ ಚಕ್ ನಲ್ಲಿ ಜಾ ಸ್ಪೈಡ್-ವೇ ಇರುವುದಿಲ್ಲ. ಅದರ ಜಾ ಚಕ್ ನ ಫೇಸ್ ನಲ್ಲಿ ಮೌಂಟ್ ಮಾಡಲಾಗಿರುತ್ತವೆ ಮತ್ತು ಅದು ಅಕ್ಷೀಯ ದಿಕ್ಕಿನಲ್ಲಿ ಚಟುವಟಿಕೆಗಳನ್ನು ಮಾಡುತ್ತದೆ. ಈ ಚಕ್ ನಲ್ಲಿ ಜಾ ರಾಡ್ ಮೂಲಕ ನಡೆಯುತ್ತವೆ. ಈ ರಾಡ್ ಗೆ ಚಿತ್ರ ಕ್ರ. 10 ರಲ್ಲಿ ತೋರಿಸಿದಂತೆ ಗ್ರೀಸ್ ನಿಪ್ಪಲ್ ನಿಂದ ನಿಯಮಿತವಾಗಿ ಲುಬ್ರಿಕಂಟ್ ಪೂರೈಸುವುದು ಆವಶ್ಯಕವಾಗಿದೆ.
 

xcvdckdmc_1  H  
 
ಇನ್ನೊಂದು ಉದಾಹರಣೆ, ಚಿತ್ರ ಕ್ರ. 11 ರಲ್ಲಿ ಒಂದು ಬರಿದಾದ ನ್ಯುಮ್ಯಾಟಿಕ್ ಚಕ್ ತೋರಿಸಲಾಗಿದೆ. ಇದರಲ್ಲಿ ಜಾಗೆ ಚಾಲನೆಯನ್ನು ನೀಡಲು ಗಾಳಿಯ ಒತ್ತಡವನ್ನು ಬಳಸಲಾಗುತ್ತದೆ. ಇದಕ್ಕೋಸ್ಕರ ಸ್ವತಂತ್ರವಾದ ಲುಬ್ರಿಕೇಶನ್ ಯುನಿಟ್ ನೀಡಲಾಗುತ್ತದೆ. ಅಲ್ಲದೇ ಅದನ್ನು ಚಕ್ ನ ಹೊರಭಾಗದಲ್ಲಿ ಅಳವಡಿಸಲಾಗುತ್ತದೆ. ಬಳಕೆಗಾರರು ಜಾ ನ ಲುಬ್ರಿಕೇಶನ್ ಮಾಡುವ ಹೊರತಾಗಿ ಗಾಳಿಯ ಕಡೆಗೆ ಗಮನ ಹರಿಸುವುದು ಅಗತ್ಯವಾಗಿದೆ. ಇಲ್ಲದಿದ್ದಲ್ಲಿ ಚಕ್ ನಲ್ಲಿ ಗಾಳಿಯೊಂದಿಗೆ ಆರ್ದ್ರತೆ ಪ್ರವೇಶಿಸಬಲ್ಲದು. FRL (ಫಿಲ್ಟರೇಶನ್, ರೆಗ್ಯುಲೇಶನ್, ಲುಬ್ರಿಕೇಶನ್ ಯುನಿಟ್) ಚಕ್ ನಲ್ಲಿ ಹೊರಗಿನಿಂದ ಅಳವಡಿಸಲಾಗುತ್ತದೆ.

ಗ್ರಾಹಕರಿಗೆ ತರಬೇತಿಯ ಚಟುವಟಿಕೆ ಮತ್ತು ಸೇವೆ
ಗ್ರಾಹಕರ ಕೆಲಸದ ತಂಡಕ್ಕೆ ಅವರ ವಿಶಿಷ್ಟ ಕಾರ್ಯವಸ್ತುಗಳಲ್ಲಿರುವ ಚಕ್ ನ ನಿರ್ವಹಣೆಯನ್ನು ಹೇಗೆ ಮಾಡಬೇಕು, ಎಂಬುದರ ಕುರಿತು ಉಪಯುಕ್ತವಾದ ಮಾಹಿತಿಯು ಲಭಿಸಬಲ್ಲದು. GMT ವತಿಯಿಂದ, ಅವರ ಗ್ರಾಹಕರಿಗೋಸ್ಕರ ಇರುವ ಅಂತರ್ಜಾಲದಲ್ಲಿ, ಮಶಿನ್ ಆಪರೇಟರ್, ಮೇಲ್ವಿಚಾರಕರು ಮತ್ತು ಗುಣಮಟ್ಟದ ನಿಯಂತ್ರಣೆ ಮತ್ತು ನಿರ್ವಹಣೆಯ ಸಿಬ್ಬಂಧಿ ಇಂತಹ ಅಂತಿಮ ಬಳಕೆಗಾರರಿಗೆ ತರಬೇತಿಯನ್ನು ನೀಡಲು ಗ್ರಾಹಕ ತರಬೇತಿ ಕಾರ್ಯಕ್ರಮವನ್ನು (CEP) ಏರ್ಪಡಿಸಲಾಗುತ್ತದೆ.
ಒಂದು ಹೆಚ್ಚುವರಿ ಚಕ್ ಶೇಖರಣೆಯಲ್ಲಿಡಿ
ಇಂದು ಉತ್ಪಾದನೆಯ ಕ್ಷೇತ್ರದಲ್ಲಿ ಉಚ್ಚಮಟ್ಟದ ಸ್ಪಿಂಡಲ್ ವೇಗ, ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮತ್ತು ನಿಖರತೆ ವೃದ್ಧಿಗೊಂಡ ಬೇಡಿಕೆ ಇವುಗಳಿಂದಾಗಿ ಹೆಚ್ಚು ಸವಾಲುಗಳಿರುವ ಪರಿಸ್ಥಿತಿಯು ಇರುತ್ತದೆ. ಆದ್ದರಿಂದ ಯಾವಾಗಲೂ ಒಂದು ಹೆಚ್ಚುವರಿ ಚಕ್ ತಮ್ಮಲ್ಲಿ ಇಡುವುದು ಸೂಕ್ತ.
(ಸೂಚನೆ : ಈ ಲೇಖನ ಆಂಗ್ಲ ಭಾಷೆಯ ಆವೃತ್ತಿಯನ್ನು ಮೂಲ ದಾಖಲೆ ಎಂಬುದಾಗಿ ಸಂದರ್ಭಕ್ಕೋಸ್ಕರ ಪಡೆಯಲಾಗಿದೆ. ಅನುವಾದದಲ್ಲಾದ ಬದಲಾವಣೆಗಳಿಗೆ GMT ಮತ್ತು ಲೇಖಕರು ಯಾವುದೇ ಜವಾಬ್ದಾರಿಯನ್ನು ವಹಿಸುವುದಿಲ್ಲ. ಎಲ್ಲ ಚಿತ್ರಗಳ ಒಡೆತನವು ಗಿಂಡಿ ಮಶಿನ್ ಟೂಲ್ಸ್ ಲಿಮಿಟೆಡ್ ಇವರದ್ದಾಗಿದೆ.)
Powered By Sangraha 9.0