ಕೂಲಂಟ್ ಪ್ರವಾಹವಿರುವ ಟೂಲ್ ಹೋಲ್ಡರ್

19 May 2021 14:19:02
ಇಂದಿನ ದಿನಗಳಲ್ಲಿ ಔದ್ಯೋಗಿಕ ಕ್ಷೇತ್ರದೊಂದಿಗೆ ಅಲ್ಲಿರುವ ಯಂತ್ರಣೆಯ ರೀತಿಯಲ್ಲಿಯೂ ಅನೇಕ ಬದಲಾವಣೆಗಳಾಗಿವೆ. ತಮ್ಮಲ್ಲಿರುವ ಯಂತ್ರಣೆಯ ಉದ್ಯಮವನ್ನು ವಾಹನೋದ್ಯೋಗದೊಂದಿಗೆ ವಿಮಾನೋದ್ಯೋಗ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಪಟ್ಟ ಉದ್ಯಮ ಮತ್ತು ವೈದ್ಯಕೀಯ ಉದ್ಯಮಗಳಲ್ಲಿಯೂ ಬೃಹತ್ ಪ್ರಮಾಣದಲ್ಲಿ ನಿರ್ವಹಿಸಲಾಗುತ್ತಿದೆ. ವಾಹನೋದ್ಯೋಗದಲ್ಲಿಯೂ ಅಲ್ಯುಮಿನಿಯಮ್ ಮಟೀರಿಯಲ್ ನ ಯಂತ್ರಣೆಯ ಕಡೆಗೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ. ಅದರ ಭಾರವು ತುಂಬಾ ಕಡಿಮೆ ಇರುವುದೇ ಇದರ ಕಾರಣವಾಗಿದೆ.
 

1_1  H x W: 0 x 
 
ಸುಪರ್ ಅಲೈಸ್ ಮಟೀರಿಯಲ್ ಯಂತ್ರಣೆಗೋಸ್ಕರ ತುಂಬಾ ಕಠಿಣವಾಗಿರುತ್ತದೆ. ಯಂತ್ರಣೆಯಲ್ಲಿ ಈ ಮಟೀರಿಯಲ್ ಕನಿಷ್ಠ ಪ್ರಮಾಣದ ಉಷ್ಣತೆಯನ್ನು ತನ್ನೆಡೆಗೆ ಸೆಳೆಯುತ್ತದೆ. ಅಲ್ಲದೇ ಗರಿಷ್ಠ ಉಷ್ಣತೆಯನ್ನು ಆ ಟೂಲ್ ಗಳ ಅಥವಾ ಇನ್ಸರ್ಟ್ ಗಳೆಡೆಗೆ ಮುಂದೂಡುತ್ತದೆ. ಉಷ್ಣತೆಯು ನೇರವಾಗಿ ಟೂಲ್ ಗಳಲ್ಲಿ ಬಂದಿರುವುದರಿಂದ ಟೂಲ್ ನ ಬಾಳಿಕೆಯು ಕಡಿಮೆಯಾಗಿ ಡೈಮೆನ್ಶನಲ್ ನಿಖರತೆಯೂ ಲಭಿಸುವುದಿಲ್ಲ.
ಇದಕ್ಕೆ ಉಪಾಯವನ್ನು ಸೂಚಿಸುವಲ್ಲಿ ಟಂಗಾಲಾಯ್ ಇವರು ಕ್ಲ್ಯಾಂಪಿಂಗ್ ನಲ್ಲಿ ಸುಧಾರಿತ ಆವೃತ್ತಿಯನ್ನು ಪ್ರಸ್ತುತ ಪಡಿಸಿದರು. ನಾವು ಜೆಟ್ ಟರ್ನಿಂಗ್ (ಚಿತ್ರ ಕ್ರ. 1) ಎಂಬುದಾಗಿ ಇದನ್ನು ಹೆಸರಿಸಿದ್ದೇವೆ. ಇದರಲ್ಲಿ ಡಬಲ್ ಕ್ಲ್ಯಾಂಪ್ ಟರ್ನಿಂಗ್ ಮತ್ತು ಥ್ರೂ ಕೂಲಂಟ್ ಕ್ಷಮತೆಯೊಂದಿಗೆ ಎಕ್ಸಟರ್ನಲ್ ಥ್ರೆಡಿಂಗ್ ಟೂಲ್ ಹೋಲ್ಡರ್ ಇವುಗಳು ಒಳಗೊಂಡಿವೆ.
  
ಈ ಟೂಲ್ ಹೋಲ್ಡರ್ ಗಳಿಂದ ಲಭಿಸುವ ಎರಡು ಲಾಭಗಳು ಈ ಮುಂದಿನಂತಿವೆ.
1. ಸುಪರ್ ಅಲಾಯ್ ಮಟೀರಿಯಲ್ ಯಂತ್ರಣೆಯನ್ನು ಮಾಡುವಾಗ ಕನಿಷ್ಠ ಉಷ್ಣಾಂಶದ ನಿರ್ಮಿತಿ. ಯಂತ್ರಣೆಯ ಬಿಂದುವಿನಲ್ಲಿ ಕನಿಷ್ಠ ಉಷ್ಣಾಂಶವು ಇರುವುದರಿಂದ ಟೂಲ್ ಗಳ ಬಾಳಿಕೆಯು ತನ್ನಷ್ಟಕ್ಕೆ ವೃದ್ಧಿಸುತ್ತದೆ.
2. ಉಚ್ಚಮಟ್ಟದ ಡೈಮೆನ್ಶನಲ್ ನಿಖರತೆ ಮತ್ತು ಫಿನಿಶ್ ಲಭಿಸುತ್ತದೆ.
ಡಬಲ್ ಕ್ಲ್ಯಾಂಪಿಂಗ್ ಕುರಿತಾದ ವಿಚಾರ
ಡಬಲ್ ಕ್ಲ್ಯಾಂಪಿಂಗ್ ನಲ್ಲಿ P ಟೈಪ್ ಕ್ಲ್ಯಾಂಪಿಂಗ್ ಮಾಡಲಾಗಿರುತ್ತದೆ. ಇದನ್ನು ಲಿವರ್ ಕ್ಲ್ಯಾಂಪ್ ಎಂದು ಕರೆಯಲಾಗುತ್ತದೆ. M ಟೈಪ್ ಕ್ಲ್ಯಾಂಪಿಂಗ್ ಇದು ಕೇವಲ ಮೇಲ್ಭಾಗವನ್ನು ಹಿಡಿದಿಡುತ್ತದೆ. ಡಬಲ್ ಕ್ಲ್ಯಾಂಪಿಂಗ್ ನಲ್ಲಿ ಇನ್ಸರ್ಟ್ ನಲ್ಲಿ ಮೇಲ್ಭಾಗದಿಂದ ಮತ್ತು ಒಳ ಭಾಗದಿಂದ, ಈ ರೀತಿ ಎರಡೂ ಬದಿಗಳಲ್ಲಿ ಕ್ಲ್ಯಾಂಪ್ ಸ್ಕ್ರೂಗಳ ಸಹಾಯದಿಂದ ಕ್ಲ್ಯಾಂಪಿಂಗ್ ಮಾಡಲಾಗುತ್ತದೆ. ಕ್ಲ್ಯಾಂಪ್ ಸ್ಕ್ರೂ ಇನ್ಸರ್ಟ್ ಗೆ ಮೇಲ್ಭಾಗದಿಂದ ಕೆಳಗೆ ಒತ್ತುತ್ತದೆ. ಟೂಲ್ ಹೋಲ್ಡರ್ ಗಳ ಒಳ ಬದಿಯಲ್ಲಿ ಒಂದು ವೇಜ್ ಇರುತ್ತದೆ. ಈ ವೇಜ್ ಗಳಲ್ಲಿ ಇನ್ಸರ್ಟ್ ನ ಕೆಲವು ಭಾಗವು (ಎಕ್ಸಟೆಂಡೆಡ್ ಪೋರ್ಶನ್) ದೃಢವಾಗಿ ಅಳವಡಿಸಲ್ಪಡುತ್ತದೆ. ಅಂದರೆ ಒಳ ಮತ್ತು ಮೇಲ್ಭಾಗ, ಈ ಎರಡೂ ಬದಿಗಳಲ್ಲಿ ಇನ್ಸರ್ಟ್, ಟೂಲ್ ಹೋಲ್ಡರ್ ನಲ್ಲಿ ದೃಢವಾಗಿ ಹಿಡಿದಿಡಲ್ಪಡುತ್ತದೆ. ಇದರಿಂದಾಗಿ ಇದನ್ನು ಡಬಲ್ ಕ್ಲ್ಯಾಂಪಿಂಗ್ ಸಿಸ್ಟಮ್ ಎಂಬುದಾಗಿ ಕರೆಯಲಾಗಿದೆ.
ಕೂಲಂಟ್ ನ ಪ್ರವಾಹದ ವ್ಯವಸ್ಥೆ
ಚಿತ್ರ ಕ್ರ. 2 ರಲ್ಲಿ ತೋರಿಸಿದಂತೆ ಕ್ಲ್ಯಾಂಪ್ ನ ಮುಂಭಾಗದಲ್ಲಿ ಒಂದು ಮತ್ತು ಇನ್ಸರ್ಟ್ ನ ಕೆಳಗೆ ಟೂಲ್ ಹೋಲ್ಡರ್ ನಲ್ಲಿ ಒಂದು, ಹೀಗೆ ಎರಡು ರಂಧ್ರಗಳನ್ನು ಕೂಲಂಟ್ ನ ಪ್ರವಾಹಕ್ಕೋಸ್ಕರ ನೀಡಲಾಗಿದೆ. ಕ್ಲ್ಯಾಂಪ್ ನಲ್ಲಿರುವ ರಂಧ್ರದಿಂದ ಹೊರಬರುವ ಕೂಲಂಟ್ ಮತ್ತು ಟೂಲ್ ಹೋಲ್ಡರ್ ನಲ್ಲಿರುವ ರಂಧ್ರದಿಂದ ಹೊರ ಬರುವ ಕೂಲಂಟ್, ಇವು ಎರಡೂ ಬದಿಗಳಲ್ಲಿ ಹೊರ ಬರುವ ಕೂಲಂಟ್ ಒಂದಕ್ಕೊಂದು ಕ್ರಾಸ್ ಆಗುವಲ್ಲಿ (ಕ್ರಾಸ್ ಸೆಕ್ಷನ್ ಪಾಯಿಂಟ್) ಕಟಿಂಗ್ ಟೂಲ್ ನ ಕಟಿಂಗ್ ಎಡ್ಜ್ ಇರುತ್ತದೆ. ಈ ಕಟಿಂಗ್ ಎಡ್ಜ್ ನಲ್ಲಿ ಎರಡೂ ಬದಿಗಳಲ್ಲಿ ಕೂಲಂಟ್ ಹೆಚ್ಚು ಒತ್ತಡದಿಂದ ಬಿಡಲಾಗುತ್ತದೆ. ಇದರಿಂದಾಗಿ ಕಡಿಮೆ ಉಷ್ಣಾಂಶದೊಂದಿಗೆ ಚಿಪ್ ತುಂಡಾಗುವ ಕೆಲಸವೂ ತುಂಬಾ ಸುಲಭವಾಗಿ ಆಗುತ್ತದೆ. ಹೆಚ್ಚು ಒತ್ತಡದ ಕೂಲಂಟ್ ನ ಪ್ರವಾಹದಿಂದಾಗಿ ಯಂತ್ರಣೆಯನ್ನು ಮಾಡುವಾಗ ತಯಾರಾಗುವ ಚಿಪ್ ಕಟಿಂಗ್ ಬಿಂದುವಿನಿಂದ ಮತ್ತು ಯಂತ್ರಭಾಗಗಳಿಂದ ದೂರಕ್ಕೆ ಎಸೆಯಲ್ಪಡುತ್ತವೆ. ಸಾಮಾನ್ಯವಾಗಿ ಯಂತ್ರಣೆಯನ್ನು ಮಾಡುತ್ತಿರುವಾಗ ಕೂಲಂಟ್ ನ ಒತ್ತಡ 5-7 ಬಾರ್ ನಷ್ಟು ಇರುತ್ತದೆ. ಜೆಟ್ ಟರ್ನಿಂಗ್ ನಲ್ಲಿ ಅದು ಸುಮಾರು 15-20 ಬಾರ್ ಇರುತ್ತದೆ.
 
 2_1  H x W: 0 x
 
ಸಾಮಾನ್ಯವಾದ ಮಶಿನ್ ನಲ್ಲಿ ಟೂಲ್ ಹೋಲ್ಡರ್ ಗೆ ಕೂಲಂಟ್ ಪಂಪ್ ನ ಕೊಳವೆಯೊಂದಿಗೆ ಜೋಡಿಸಲಾಗುತ್ತದೆ. ಟೂಲ್ ಹೋಲ್ಡರ್ ನಲ್ಲಿ ಬಂದಿರುವ ಕೂಲಂಟ್ ಕ್ಲ್ಯಾಂಪ್ ಮತ್ತು ಇನ್ಸರ್ಟ್ ಕೆಳಗೆ ಇರುವ ರಂಧ್ರದಿಂದ ಇನ್ಸರ್ಟ್ ನ ತುದಿಯ ಹತ್ತಿರ ಹೊರಗೆ ಬರುತ್ತದೆ. ಮಶಿನ್ ನಲ್ಲಿ ಟೂಲ್ ಹೋಲ್ಡರ್ ಟರೇಟ್ ನಲ್ಲಿ ಅಳವಡಿಸುವಾಗ ಹೋಲ್ಡರ್ ಗೆ ಕೂಲಂಟ್ ಪಂಪ್ ನಿಂದ ಬಂದಿರುವ ಕೊಳವೆಯೊಂದಿಗೆ ಜೋಡಿಸಲಾಗುತ್ತದೆ. ಡಬಲ್ ಕ್ಲ್ಯಾಂಪಿಂಗ್ ರಚನೆಯಲ್ಲಿ ಟೂಲ್ ಹೋಲ್ಡರ್ ನ ಕ್ಲ್ಯಾಂಪ್ ನ ಕೆಳಗೆ ಮತ್ತು ಹಿಂಭಾಗದಲ್ಲಿ ಟ್ಯೂಬ್ ಕನೆಕ್ಷನ್ (ಚಿತ್ರ ಕ್ರ. 3) ನೀಡಲಾಗಿದೆ. ಇದರಿಂದ ಕೂಲಂಟ್ ಪೂರೈಸಲಾಗುತ್ತದೆ.

4_1  H x W: 0 x 
 
ಚಿಪ್ ಹೊರಗೆ ತೆಗೆಯುವುದು
ಯಾವಾಗಲೂ ಮಾಡುತ್ತಿರುವ ಯಂತ್ರಣೆಯ ರೀತಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡದೇ (ಪ್ಯಾರಾಮೀಟರ್, ಯಂತ್ರಭಾಗಗಳು, ಮಶಿನ್) ಕೇವಲ ಕೂಲಂಟ್ ಪ್ರವಾಹ ಇರುವ ಟೂಲ್ ಹೋಲ್ಡರ್ ಬದಲಾಯಿಸುವುದರಿಂದ ಟೂಲ್ ಗಳ ಆಯುಷ್ಯದಲ್ಲಿ ಶೇಕಡಾ 30 ರಷ್ಟು ವ್ಯತ್ಯಾಸವಾಗುತ್ತದೆ.
ಉದಾಹರಣೆ
ನಮ್ಮ ಗ್ರಾಹಕರೊಬ್ಬರು ಅವರಲ್ಲಿರುವ ಮಝಾಕ್ ಕಂಪನಿಯ ಸಿ.ಎನ್.ಸಿ. ಮಶಿನ್ ನಲ್ಲಿ ಅಡಾಪ್ಟರ್ ಸ್ಲೀವ್ ನ ಯಂತ್ರಣೆಯನ್ನು ಮಾಡುತ್ತಿದ್ದರು. 28-32 HRC ಕಠಿಣತೆ ಇರುವ C30/C20 ಮಟೀರಿಯಲ್ ನ ಅಡಾಪ್ಟರ್ ಸ್ಲೀವ್ ನಲ್ಲಿ OD ಟರ್ನಿಂಗ್ ಎಂಬ ಆಪರೇಶನ್ ಮಾಡಬೇಕಾಗಿತ್ತು. ಯಂತ್ರಣೆಯನ್ನು ಮಾಡುತ್ತಿರುವಾಗ ನಾವು ಗ್ರಾಹಕರಿಗೆ ಸೂಚಿಸಿದಂತೆ ಕೂಲಂಟ್ ನ ಒತ್ತಡವು 15 ಬಾರ್ ಅಳವಡಿಸಲಾಗಿತ್ತು. ಈ ಹಿಂದೆ ಇನ್ನೊಂದು ಟೂಲ್ ಬಳಸಿ ಗ್ರಾಹಕರು ಅವರಲ್ಲಿ ಯಂತ್ರಣೆಯನ್ನು ಮಾಡುತ್ತಿದ್ದರು. ಆದರೆ ಅದರಲ್ಲಿ ಸರ್ಫೇಸ್ ಫಿನಿಶ್ ಮತ್ತು ಚಿಪ್ ಬ್ರೇಕಿಂಗ್ ನಲ್ಲಿ ಸಮಸ್ಯೆಗಳು ಕಂಡುಬರುತ್ತಿದ್ದವು. ಗ್ರಾಹಕರು ನಮ್ಮಲ್ಲಿ ವಿಚಾರಿಸಿದಾಗ ನಾವು ಅವರಿಗೆ ಜೆಟ್ ಟರ್ನಿಂಗ್ ನ ಪರ್ಯಾಯವನ್ನು ನೀಡಿದೆವು.
ಗ್ರಾಹಕನು ಜೆಟ್ ಟರ್ನಿಂಗ್ ಟೂಲ್ ಹೋಲ್ಡರ್ ಬಳಸಿ ಯಂತ್ರಣೆಯನ್ನು ಮಾಡಿದ್ದರಿಂದ ಅಡಾಪ್ಟರ್ ಸ್ಲೀವ್ ನ ಸರ್ಫೇಸ್ ಫಿನಿಶ್ ನಲ್ಲಿ ಸುಧಾರಣೆ ಆಯಿತು, ಅಲ್ಲದೇ ಇದರ ಹೊರತಾಗಿ ಚಿಪ್ ಬ್ರೇಕಿಂಗ್ ಕೂಡಾ ಸುಧಾರಿಸಿತು. ಟೂಲ್ ಗಳ ಆಯುಷ್ಯ ಶೇಕಡಾ 30 ರಷ್ಟು (ಕೋಷ್ಟಕ ಕ್ರ. 1) ವೃದ್ಧಿಸಿತು.

3_1  H x W: 0 x
Powered By Sangraha 9.0