ಸ್ವಿಸ್ ಲೇಥ್ ನ ಉಪಯುಕ್ತತೆ

13 May 2021 14:37:00
ಚಿಕ್ಕ ಆಕಾರದ ಮತ್ತು ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯನ್ನು ಮಾಡುವ ಯಂತ್ರಭಾಗಗಳಿಗೆ ಪಾರಂಪಾರಿಕವಾದ ಅಥವಾ ಸಿ.ಎನ್.ಸಿ. ಲೇಥ್ ಗಿಂತಲೂ ಸ್ಲೈಡಿಂಗ್ ಹೆಡ್ ಅಥವಾ ಸ್ವಿಸ್ ಲೇಥ್ (ಚಿತ್ರ ಕ್ರ. 1) ಹೆಚ್ಚು ಕಾರ್ಯಕ್ಷಮತೆಯುಳ್ಳದ್ದಾಗಿದೆ.
 
1_1  H x W: 0 x
ಸ್ವಿಸ್ ಲೇಥ್ ನಲ್ಲಿ ಕಾರ್ಯವಸ್ತುವನ್ನು ಹಿಡಿಯಲು ಯಂತ್ರರಚನೆ ಅಥವಾ ಕಾಲೇಟ್ ಒಂದೇ ಗೈಡ್ ಬುಶಿಂಗ್ ನ ಹಿಂಭಾಗದಲ್ಲಿ ಅಳವಡಿಸಲಾಗುತ್ತದೆ. ಸ್ವಿಸ್ ಲೇಥ್ ಗೆ ಅನೇಕ ಬಾರಿ ಸ್ವಿಸ್ ಸ್ಕ್ರೂ ಮಶಿನ್, ಸ್ವಿಸ್ ಆಟೊಮ್ಯಾಟಿಕ್ ಲೇಥ್ ಅಥವಾ ಸ್ವಿಸ್ ಟರ್ನಿಂಗ್ ಸೆಂಟರ್ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಬಾರ್ ಸ್ಟಾಕ್ ಹಿಡಿಯಬಲ್ಲ ಯಂತ್ರ ರಚನೆ ಅಥವಾ ಕಾಲೆಟ್, ಲೇಥ್ ಬೆಡ್ ಮತ್ತು ಟೂಲಿಂಗ್ ನ ನೇರವಾದ ಸಂಪರ್ಕದಲ್ಲಿ ಬರಲು ಬಿಡಲಾಗುವುದಿಲ್ಲ. ಇದೇ ಸ್ವಿಸ್ ಲೇಥ್ ಮತ್ತು ಪಾರಂಪಾರಿಕ ಲೇಥ್ ಗಳಲ್ಲಿರುವ ಮಹತ್ವದ ವ್ಯತ್ಯಾಸವಾಗಿದೆ. ಈ ವಿಶಿಷ್ಟ ರೀತಿಯ ಕಾಂನ್ಫಿಗರೇಶನ್ ನಿಂದಾಗಿ ಪಾರಂಪಾರಿಕ ಲೇಥ್ ನ ಹೋಲಿಕೆಯಲ್ಲಿ ಈ ವಿಶಿಷ್ಟ ಮಶಿನ್ ವಿವಿಧ ಲಾಭಗಳನ್ನು ನೀಡುತ್ತದೆ.

2_1  H x W: 0 x
ಸ್ವಿಸ್ ಲೇಥ್ ನ ಕಾರ್ಯಪದ್ಧತಿ
ಪಾರಂಪಾರಿಕ ಲೇಥ್ ನಲ್ಲಿ ಹೆಡ್ ಸ್ಟಾಕ್ ಸ್ಥಿರವಾಗಿರುತ್ತದೆ ಮತ್ತು ಕಾರ್ಯವಸ್ತು ಕಾಲೆಟ್ ಅಥವಾ ಚಕ್ ನಲ್ಲಿ ಹಿಡಿಯಲಾಗುತ್ತದೆ. ಹೋಲ್ಡಿಂಗ್ ಡಿವೈಸ್ ಕಾರ್ಯವಸ್ತುವನ್ನು ಒಂದೇ ಬದಿಯಲ್ಲಿ ಹಿಡಿದು ಮಶಿನ್ ನಲ್ಲಿರುವ ಬರಿದಾದ ಜಾಗದಲ್ಲಿ ಕಂಟೀಲಿವರ್ ನಂತೆ ಮುಕ್ತವಾಗಿ ಬಿಡಲಾಗುತ್ತದೆ ಅಥವಾ ಕಾರ್ಯವಸ್ತುವಿನ ಇನ್ನೊಂದು ತುದಿಗೆ ಟೇಲ್ ಸ್ಟಾಕ್ ಮೂಲಕ ಆಧಾರ ನೀಡಲಾಗುತ್ತದೆ. ಸ್ವಿಸ್ ಮಶಿನ್ ನಲ್ಲಿ (ಚಿತ್ರ ಕ್ರ. 2) ಹೆಡ್ ಸ್ಟಾಕ್ ನ ಚಟುವಟಿಕೆಯಾಗುತ್ತಿರುತ್ತದೆ. ಇದೇ ಇನ್ನಿತರ ಲೇಥ್ ಗಳ ಹೋಲಿಕೆಯಲ್ಲಿ ದೊಡ್ಡ ವ್ಯತ್ಯಾಸ. ಅಂದರೆ ಹೆಡ್ ಸ್ಟಾಕ್ ನ ಯಾವ ಕ್ಷೇತ್ರದಲ್ಲಿ ಚಕಿಂಗ್ ಕಾಲೇಟ್ ಕ್ಲ್ಯಾಂಪ್ ಮಾಡಲಾಗುತ್ತದೆಯೋ, ಅದರಿಂದ ಬಾರ್ ಸ್ಟಾಕ್ ಆರುಪಾರಾಗಿ ಹೋಗುತ್ತದೆ. ನಂತಹ ಆ ಬಾರ್ ಗೈಡ್ ಬುಶಿಂಗ್ ನಿಂದ ಸರಿದು ಟೂಲಿಂಗ್ ನಲ್ಲಿ ಪ್ರವೇಶಿಸುತ್ತದೆ. ಯಂತ್ರಣೆಯನ್ನು ಮಾಡುವಾಗ ಬುಶಿಂಗ್ ಮೂಲಕ ಬಾರ್ ನ ರೇಡಿಯಲ್ ದಿಕ್ಕಿನಲ್ಲಿ ಸ್ಥಾನವನ್ನು ನಿರ್ಧರಿಸಲಾಗುತ್ತದೆ. ಬಾರ್ ತನ್ನೊಂದಿಗೆ ಕರೆದುಕೊಂಡು ಹೋಗಿ Z ದಿಕ್ಕಿನಲ್ಲಿ ಹೆಡ್ ಸ್ಟಾಕ್ ನಿರ್ದೋಷವಾಗಿ ಹಿಂದೆ-ಮುಂದೆ ಚಟುವಟಿಕೆಯನ್ನು ಮಾಡುತ್ತದೆ. ಗ್ಯಾಂಗ್ ಸ್ಲೈಡ್ ನಲ್ಲಿರುವ ಟರ್ನಿಂಗ್ ಟೂಲ್ ಗೈಡ್ ಬುಶಿಂಗ್ ನ ತುಂಬಾ ಹತ್ತಿರ ಬಂದು ಈ ಬಾರ್ ನೊಂದಿಗೆ ಅದನ್ನು ಸಂಪರ್ಕಿಸುತ್ತದೆ. ಬಾರ್ ನ ಚಟುವಟಿಕೆಗಳ ಮೂಲಕ ಯಂತ್ರಣೆಗೋಸ್ಕರ ಬೇಕಾಗುವ ಫೀಡ್ ರೇಟ್ ನೀಡಲಾಗುತ್ತದೆ. ಸ್ಥಿರವಾದ ಸಿಂಗಲ್ ಪಾಯಿಂಟ್ (ಫಿಕ್ಸ್ಡ್ ಸಿಂಗಲ್ ಪಾಯಿಂಟ್) ಟೂಲ್ ಅಥವಾ ಇನ್ನಿತರ ಆವಶ್ಯಕವಿರುವ ಟೂಲ್ ಗಳನ್ನು ಯಾವುದರಲ್ಲಿ ಅಳವಡಿಸಲಾಗಿರುತ್ತದೆಯೋ, ಅಂತಹ ಟೂಲ್ ಹೋಲ್ಡರ್ ಗ್ಯಾಂಗ್ ಸ್ಲೈಡ್ ಗಳನ್ನು ಹಿಂದೆ-ಮುಂದೆ ಮಾಡುತ್ತದೆ. ಗ್ಯಾಂಗ್ ಸ್ಲೈಡ್ ನಲ್ಲಿ ಲೈವ್ ಟೂಲಿಂಗ್ ಕೂಡಾ ಅಳವಡಿಸಲಾಗುತ್ತದೆ. ಅನೇಕ ಮಶಿನ್ ಗಳಲ್ಲಿ ಬ್ಯಾಕ್ ವರ್ಕಿಂಗ್ ಟೂಲ್ ಸ್ಟೇಶನ್ ಮತ್ತು ಸಬ್-ಸ್ಪಿಂಡಲ್ ಗಳಿರುತ್ತವೆ. ಅಲ್ಲದೇ ಹಲವಾರು ಮಶಿನ್ ಗಳಲ್ಲಿ ಹೆಚ್ಚುವರಿ ಟೂಲ್ ಗಳಿರುವ ಟರೇಟ್ ಅಥವಾ ಇನ್ನಿತರ ಹಲವಾರು ವ್ಯವಸ್ಥೆಗಳಿರುತ್ತವೆ.

3_1  H x W: 0 x
ಸ್ವಿಸ್ ಲೇಥ್ ನ ಸಾಮರ್ಥ್ಯ ಮತ್ತು ಲಾಭಗಳು
ಉದ್ದ ಮತ್ತು ವ್ಯಾಸದ ಅನುಪಾತವು ಹೆಚ್ಚು ಇರುವಂತಹ ಕಾರ್ಯವಸ್ತುಗಳ (ಚಿತ್ರ ಕ್ರ. 3) ಯಂತ್ರಣೆಯ ಪ್ರಕ್ರಿಯೆಯಲ್ಲಿ ಡಿಫ್ಲೆಕ್ಷನ್ ಆಗುವ ಸಾಧ್ಯತೆ ಇರುತ್ತದೆ. ಯಂತ್ರಭಾಗಗಳ ಉದ್ದ ಮತ್ತು ವ್ಯಾಸದ ಅನುಪಾತವು 20:1 ರಷ್ಟು ಇದೆ. ಇಂತಹ ಯಂತ್ರಭಾಗಗಳಿಗೆ ಯಂತ್ರಣೆಯನ್ನು ಮಾಡುವ ಸಾಮರ್ಥ್ಯವು ಸ್ವಿಸ್ ಮಶಿನ್ ನಲ್ಲಿದೆ. ಅದರ ಕಾರಣವೆಂದರೆ, ಬಾರ್ ಗೆ ಆಧಾರವನ್ನು ನೀಡುವ ಗೈಡ್ ಬುಶಿಂಗ್ ನಿಂದ ಕೇವಲ ಹಲವಾರು ಮಿಲೀಮೀಟರ್ ದೂರದಲ್ಲಿ ಈ ಯಂತ್ರಣೆಯನ್ನು ಮಾಡಲಾಗುತ್ತದೆ. ಇಷ್ಟು ಸಮೀಪ ಯಂತ್ರಣೆಯನ್ನು ಮಾಡುವಂತಹ ಈ ರೀತಿಯಿಂದಾಗಿ ನಿಖರತೆಯು ವೃದ್ಧಿಸುತ್ತದೆ ಮತ್ತು ಕಾರ್ಯವಸ್ತುವು ಸ್ಥಿರವಾಗುತ್ತದೆ. ಇದರೊಂದಿಗೆ ಟೂಲ್ ನ ಬಾಳಿಕೆಯೂ ಹೆಚ್ಚುತ್ತದೆ. ಈ ವೈಶಿಷ್ಟ್ಯಗಳಿಂದಾಗಿ ನಿಖರವಾದ ಟಾಲರನ್ಸ್ ಇರುವ ಯಂತ್ರಭಾಗಗಳ ಉತ್ಪಾದನೆಯನ್ನು ಸ್ವಿಸ್ ಲೇಥ್ ನಲ್ಲಿ ಸಹಜವಾಗಿ ಮತ್ತು ಉಚ್ಚಮಟ್ಟದ ರಿಪಿಟ್ಯಾಬಿಲಿಟಿಯಿಂದ ಮಾಡುವುದು ಸಾಧ್ಯ. ಇತ್ತೀಚೆಗೆ ಲಭ್ಯವಿರುವ ಸ್ವಿಸ್ ಟರ್ನಿಂಗ್ ಮಶಿನ್ ನಲ್ಲಿ ಉದ್ದದ ಮತ್ತು ತೆಳ್ಳಗಿರುವ ಕಾರ್ಯವಸ್ತುಗಳ ಟರ್ನಿಂಗ್ ಹೊರತಾಗಿ ಇನ್ನೂ ಬೇರೆ ಯಂತ್ರಣೆಯ ಕೆಲಸಗಳನ್ನು ಮಾಡುವ ಸಾಮರ್ಥ್ಯವಿದೆ. ಉದಾಹರಣೆ, ಕ್ರಾಸ್ ಮಿಲ್ಲಿಂಗ್, ಕ್ರಾಸ್ ಡ್ರಿಲ್ಲಿಂಗ್, ಪ್ರೊಫೈಲ್ ಮಿಲ್ಲಿಂಗ್, ಆಳವಾದ ಮತ್ತು ಉದ್ದದ ರಂಧ್ರಗಳ ಡ್ರಿಲ್ಲಿಂಗ್ ಮತ್ತು ಥ್ರೆಡ್ ವರ್ಲಿಂಗ್, ಬ್ಯಾಕ್ ಟರ್ನಿಂಗ್, ಬ್ಯಾಕ್ ಡ್ರಿಲ್ಲಿಂಗ್, ಸಬ್ ಸ್ಪಿಂಡಲ್ ನ ಸಹಾಯದಿಂದ ಸ್ಲಾಟಿಂಗ್ ಇತ್ಯಾದಿ. ಈ ಸಾಮರ್ಥ್ಯದಿಂದಾಗಿ ಕಡಿಮೆ ಡೈಮೆನ್ಶನ್ ಗಳಿರುವ ಕ್ಲಿಷ್ಟ ಯಂತ್ರಭಾಗಗಳಿಗೆ ಯಂತ್ರಣೆಯನ್ನು ಮಾಡುವುದು ನಿಜವಾಗಿಯೂ ಸುಲಭವಾಗಿದೆ.
ಉದಾಹರಣೆ,

4_1  H x W: 0 x 
 
1. ಕ್ಯಾನ್ಸಲಸ್ ಸ್ಕ್ರೂ
ಪಾರಂಪಾರಿಕ ಟರ್ನಿಂಗ್ ಸೆಂಟರ್ ನಲ್ಲಿ ಕ್ಯಾನ್ಸಲಸ್ ಸ್ಕ್ರೂ ನ (ಚಿತ್ರ ಕ್ರ. 4) ಉತ್ಪಾದನೆಯನ್ನು ಮಾಡುವಾಗ ಬಾರ್ ಹಿಡಿಯಲು ವಿಶೇಷವಾದ ಕ್ಯಾಲೇಟ್ ನ ಡಿಸೈನ್ ಮತ್ತು ನಿರ್ಮಿತಿಯನ್ನು ಮಾಡಬೇಕಾಗುತ್ತದೆ. ಕಾನ್ಸೆಂಟ್ರಿಕ್ ಮತ್ತು ರೇಡಿಯಲ್ ಟಾಲರನ್ಸ್ ಪಡೆಯಲು ಬಾರ್ ವಿಶೇಷವಾಗಿರುವ ಸೆಂಟರ್ ನಲ್ಲಿ ಹಿಡಿದಿಡುವುದೂ ಅವಶ್ಯಕವಾಗಿದೆ. ಚಿತ್ರ ಕ್ರ. 4 ರಲ್ಲಿ ಬಾರ್ ನ ಎರಡೂ ತುದಿಗಳಲ್ಲಿ ವಿಶಿಷ್ಟ ಜಾಮೆಟ್ರಿಯಲ್ಲಿ ಯಂತ್ರಣೆಯನ್ನು ಮಾಡುವುದು ಅತ್ಯಾವಶ್ಯಕ ಎಂಬುದನ್ನು ವೀಕ್ಷಿಸಬಹುದು. ಮಶಿನ್ ನ ಸೆಟಪ್ ಅನೇಕ ಬಾರಿ ಬದಲಾಯಿಸಬೇಕಾಗುತ್ತದೆ ಮತ್ತು ಯಂತ್ರಣೆಯಾಗುವಾಗ ಒಂದಕ್ಕಿಂತ ಹೆಚ್ಚು ಸೀಳು ಮತ್ತು ಪಾಸ್ ಗಳನ್ನು ಮಾಡಬೇಕಾಗುತ್ತದೆ, ಇದೇ ಇದರ ಅರ್ಥ. ಸ್ವಿಸ್ ಲೇಥ್ ನಲ್ಲಿ ಕ್ಯಾನ್ಸಲಸ್ ಸ್ಕ್ರೂ ನ ಯಂತ್ರಣೆಯು ಹೆಚ್ಚು ಒಳ್ಳೆಯದಾಗುತ್ತದೆ. ಕಾರಣ ಅದರಲ್ಲಿ ಯಾವುದೇ ವಿಶೇಷ ಹೋಲ್ಡರ್ ಮತ್ತು ವಿಶಿಷ್ಟ ಸೆಂಟರ್ ನ ಅಗತ್ಯವಿರುವುದಿಲ್ಲ. ಮಶಿನ್ ನಲ್ಲಿರುವ ಗೈಡ್ ಬುಶ್ ನಿಂದಾಗಿ ಇದು ಸಹಜ ಸಾಧ್ಯವಾಗುತ್ತದೆ. ಸ್ವಿಸ್ ಮಶಿನ್ ನಲ್ಲಿ ಬ್ಯಾಕ್ ಟರ್ನಿಂಗ್ ಈ ಆಪರೇಶನ್ ಇರುವುದರಿಂದ ಒಂದಕ್ಕಿಂತ ಹೆಚ್ಚು ಸೆಟಪ್ ಮತ್ತು ಸೀಳು ಕೂಡಾ ಅವಶ್ಯಕವಿರುವುದಿಲ್ಲ. ಉತ್ಪಾದನೆಯನ್ನು ಮಾಡುವಾಗ ಹೆಚ್ಚು ಶ್ರಮ ವಹಿಸುವ ಆವಶ್ಯಕತೆ ಇರುವುದಿಲ್ಲ, ಸೈಕಲ್ ಟೈಮ್ ಕಡಿಮೆಯಾಗುತ್ತದೆ ಮತ್ತು ಮಶಿನ್ ಹೆಚ್ಚು ಸಾಮರ್ಥ್ಯದಲ್ಲಿ ನಡೆಯುತ್ತದೆ. ಇದರ ಪರಿಣಾಮವೆಂದರೆ ಉತ್ಪಾದನೆಯು ಹೆಚ್ಚು ಲಾಭಕಾರಿಯಾಗುತ್ತದೆ.
2. ಪೆಡಿಕಲ್ ಸ್ಕ್ರೂ ಹೆಡ್

5_1  H x W: 0 x 
ಕ್ಯಾನ್ಸಲಸ್ ಸ್ಕ್ರೂ ನ ಯಂತ್ರಣೆಯಂತೆ ಪೆಡಿಕಲ್ ಸ್ಕ್ರೂ ಹೆಡ್ ನ ಡ್ರಾಯಿಂಗ್ ನಲ್ಲಿಯೂ ಕ್ಲಿಷ್ಟ ಜಾಮೆಟ್ರಿಯ ಯಂತ್ರಣೆಯನ್ನು ಮಾಡಬೇಕು, ಎಂಬುದನ್ನು ಚಿತ್ರ ಕ್ರ. 5 ರಲ್ಲಿ ತೋರಿಸಲಾಗಿದೆ. ಪಾರಂಪಾರಿಕವಾದ ಟರ್ನಿಂಗ್ ಸೆಂಟರ್ ನಲ್ಲಿ ಇದಕ್ಕೋಸ್ಕರ ಸೆಟಪ್ ಮಾಡಬೇಕಾಗುತ್ತದೆ. ಇದರಿಂದಾಗಿ ಇದರ ಯಂತ್ರಣೆಯ ಸೈಕಲ್ ಟೈಮ್ ಹೆಚ್ಚುತ್ತದೆ. ಇದರಲ್ಲಿ ಮಿಲ್ಲಿಂಗ್, ಸ್ಲಾಟಿಂಗ್, ಡ್ರಿಲ್ಲಿಂಗ್ ಮತ್ತು ಥ್ರೆಡಿಂಗ್ ಪ್ರಕ್ರಿಯೆಗಳು ಇರುತ್ತವೆ. ಸ್ವಿಸ್ ಮಶಿನ್ ಸೆಂಟರ್ ನಲ್ಲಿ ಬ್ಯಾಕ್ ಟರ್ನಿಂಗ್ ಯಂತ್ರಣೆಯನ್ನು ಸಹಜವಾಗಿ ಮಾಡಬಹುದು. ಅಲ್ಲದೇ ಈ ಎಲ್ಲ ಕೆಲಸಗಳನ್ನು ಒಂದೇ ಸೆಟಪ್ ನಲ್ಲಿ ಮಾಡುವುದೂ ಸಾಧ್ಯವಿದೆ. ಸ್ವಿಸ್ ಮಶಿನ್ ನಲ್ಲಿ ಗೈಡ್ ಬುಶ್ ನಿಂದಾಗಿ ಬಾರ್ ಗೆ ಆಧಾರ ನೀಡುವಲ್ಲಿ ತುಂಬಾ ಸಮೀಪದಲ್ಲಿ ಸೀಳನ್ನು ಮಾಡಲಾಗುತ್ತದೆ. ಇದರಿಂದಾಗಿ ಉಟ್ಟಮಟ್ಟದ ನಿಖರವಾದ ಸೀಳನ್ನು ಮಾಡುವುದು ಸಾಧ್ಯ.
3. ಸ್ಟಾಪರ್ ನೊಂದಿಗೆ ವಾಯರ್

6_1  H x W: 0 x 
ಸ್ವಿಸ್ ವಿಧದ ಮಶಿನ್ ಯಾಕೆ ಬಳಸಬೇಕು, ಎಂಬುದರ ಕುರಿತಾದ ಸೂಕ್ತ ಉದಾಹರಣೆಯೆಂದರೆ ಚಿತ್ರ ಕ್ರ. 6 ರಲ್ಲಿ ತೋರಿಸಿರುವ ಯಂತ್ರಭಾಗ. ಚಿತ್ರ ಕ್ರ. 6 ರಲ್ಲಿ ತೋರಿಸಿದಂತೆ ಉದ್ದ ಮತ್ತು ವ್ಯಾಸ ಇವುಗಳ ಅನುಪಾತವು ತುಂಬಾ ಹೆಚ್ಚು ಇದೆ. ಪಾರಂಪಾರಿಕ ಲೇಥ್ ನಲ್ಲಿ ಕಾರ್ಯವಸ್ತುವನ್ನು ಪ್ರಮುಖ ಸ್ಪಿಂಡಲ್ ನ ಕಾಲೇಟ್ ನಲ್ಲಿ ಹಿಡಿಯಲಾಗುತ್ತದೆ. ಈ ಕಾಂಫಿಗರೇಶನ್ ಉದ್ದದ ಕಾರ್ಯವಸ್ತುಗಳಿಗೋಸ್ಕರ ಯೋಗ್ಯವಾಗಿರುವುದಿಲ್ಲ. ಕಾರಣ ಅದರಲ್ಲಿ ಡಿಫ್ಲೆಕ್ಷನ್ (ಬಗ್ಗುವ) ಆಗುವ ಸಾಧ್ಯತೆಯು ಹೆಚ್ಚು ಇರುತ್ತದೆ. ಈ ಪರಿಸ್ಥಿತಿಯಲ್ಲಿ ಬಾರ್ ನ್ನು ಕಾಲೆಟ್ ನಲ್ಲಿ ಹಿಡಿಯುವುದರಿಂದ ಸಾಕಷ್ಟು ಆಧಾರ ಲಭಿಸುವುದಿಲ್ಲ ಮತ್ತು ಟೂಲ್ ಲೋಹಗಳನ್ನು ತುಂಡರಿಸುವಾಗ ಉಂಟಾಗುವ ಬಲದಿಂದಾಗಿ ಕಾರ್ಯವಸ್ತುವು ಬಾಗುಬಲ್ಲದು. ಸ್ವಿಸ್ ಮಶಿನ್ ನ ಕುರಿತು ಹೇಳುವುದಾದರೆ ಬಾರ್ ಫೀಡರ್ ಬಾರ್ ಸ್ಟಾಕ್ ನ್ನು ಗೈಡ್ ಬುಶಿಂಗ್ ನಲ್ಲಿ ಸರಿಸುತ್ತದೆ. ಈ ರೀತಿಯಲ್ಲಿ ಕಟಿಂಗ್ ಟೂಲ್ ಗೈಡ್ ಬುಶ್ ನ ತುಂಬಾ ಸಮೀಪದಲ್ಲಿ ಕಾರ್ಯವಸ್ತುವಿನ ಸಂಪರ್ಕ ಉಂಟಾಗುತ್ತದೆ ಮತ್ತು ನೀಡಿರುವ ಆಧಾರದ ಹೆಚ್ಚು ಹತ್ತಿರ ಯಂತ್ರಣೆಯನ್ನು ಮಾಡಲಾಗುತ್ತದೆ. ಇದರಿಂದಾಗಿ ಕಾರ್ಯವಸ್ತುಗಳಲ್ಲಿ ಯಾವುದೇ ವಿಧದ ಡಿಫ್ಲೆಕ್ಷನ್ ಅಥವಾ ಅಂಕುಡೊಂಕುತನವು ಉಂಟಾಗುವುದಿಲ್ಲ, ಎಂಬುದು ನಿಗದಿಯಾಗುತ್ತದೆ. ಅಲ್ಲದೇ ಬೇಕಾಗಿರುವ ಟಾಲರನ್ಸ್ ಪಡೆಯಲಾಗುತ್ತದೆ.
ಫಲಿತಾಂಶ
ಸ್ವಿಸ್ ಮಶಿನ್ ಬಳಸುವ ಒಲವು ಜಗತ್ತಿನೆಲ್ಲೆಡೆ ವೇಗವಾಗಿ ಹೆಚ್ಚುತ್ತಿದೆ. ಪಾರಂಪಾರಿಕ ಸಿ.ಎನ್.ಸಿ. ಲೇಥ್ ನ ಹೋಲಿಕೆಯಲ್ಲಿ ಸಿ.ಎನ್.ಸಿ. ಸ್ವಿಸ್ ಲೇಥ್ ನಲ್ಲಿರುವ ಉಚ್ಚಮಟ್ಟದ ಕೆಲಸವನ್ನು ನಿರ್ವಹಿಸುವ ಗೈಡ್ ಬುಶಿಂಗ್ ಮತ್ತು ಸುಮಾರು ಸೊನ್ನೆ ಡಿಫ್ಲೆಕ್ಷನ್, ಈ ಎರಡೂ ಅಂಶಗಳು ಯಂತ್ರಣೆಯ ಅನೇಕ ಕೆಲಸಗಳಲ್ಲಿ ಹೆಚ್ಚು ಲಾಭಕಾರಿಯಾಗಿರುತ್ತವೆ.
Powered By Sangraha 9.0