ಫಿನಿಶಿಂಗ್ ನಲ್ಲಿ ಸುಧಾರಣೆ

30 Apr 2021 22:20:12
ಸಿ.ಎನ್.ಸಿ. ಲೇಥ್ ಅಥವಾ ವಿ.ಎಮ್.ಸಿ. ಮಿಲ್ಲಿಂಗ್ ಮಶಿನ್ ನಲ್ಲಿ ಯಾವುದೇ ಕಾರ್ಯವಸ್ತುಗಳ ಯಂತ್ರಣೆಯನ್ನು ನಿರ್ವಹಿಸುವಾಗ ಮುನ್ನೆಚ್ಚರಿಕೆ ವಹಿಸುವಂತಹ ಅನೇಕ ಮೂಲಭೂತ ಅಂಶಗಳಿವೆ. ಜಾಮೆಟ್ರಿಕಲ್ ಆಯಾಮಗಳು (ಡೈಮೆನ್ಶನ್ಸ್), ಸರ್ಫೇಸ್ ಫಿನಿಶ್, ಫ್ಲ್ಯಾಟ್ ನೆಸ್ (ಸಮತಟ್ಟುತನ) ಇಂತಹ ಯಂತ್ರಭಾಗಗಳಿಗೆ ಉಚ್ಚ ಗುಣಮಟ್ಟದ ಪ್ಯಾರಾಮೀಟರ್ ಪಡೆಯುವುದರೊಂದಿಗೆ ಅಸೆಂಬ್ಲಿಯಲ್ಲಿ ಇನ್ನಿತರ ಯಂತ್ರಭಾಗಗಳೊಂದಿಗೆ ಸುಯೋಗ್ಯವಾಗಿ ಜೋಡಣೆಯೊಂದಿಗೂ ಈ ಅಂಶಗಳ ಮಹತ್ವಪೂರ್ಣವಾದ ಸಂಬಂಧವಿದೆ.
 
ಅನೇಕ ಬಾರಿ ಉಚ್ಚಮಟ್ಟದ ಸರ್ಫೇಸ್ ನೊಂದಿಗೆ ಸಂಬಂಧವನ್ನು ಪಡೆಯುವಲ್ಲಿ ಸೂಕ್ತವಾಗಿರುವ ಸರ್ಫೇಸ್ ಫಿನಿಶ್ ಅತ್ಯಾವಶ್ಯಕವಾಗಿರುತ್ತದೆ. ಹಾಗೆಯೇ ಎರಡು ಬಟಿಂಗ್ ಸರ್ಫೇಸ್ ನಲ್ಲಿರುವ ದೂರವನ್ನು ತಡೆಯಲು ಮತ್ತು ಅಸೆಂಬ್ಲಿಯಲ್ಲಿ ಸರಿಹೊಂದಿಸಲ್ಪಡುವ ಇತರ ಯಂತ್ರಭಾಗಗಳ ನಷ್ಟವನ್ನು ತಡೆಯುವುದೂ ಅಗತ್ಯದ್ದಾಗಿರುತ್ತದೆ.
ಒಬ್ಬ ಗ್ರಾಹಕರಲ್ಲಿ ಫಿಕ್ಸ್ಚರ್ ಭಾಗಗಳ ಉತ್ಪಾದನೆ ಮತ್ತು ಅಸೆಂಬ್ಲಿಯಲ್ಲಿ ಸಂಭವಿಸಿದ ಸಮಸ್ಯೆಗಳನ್ನು ನೀಗಿಸಲಾಯಿತು. ಅವರಲ್ಲಿ ಫಿಕ್ಚ್ಸರ್ ಗೆ ಆವಶ್ಯಕವಾದ ಅನೇಕ ವಿಧದ ಮಟೀರಿಯಲ್ ಗಳ ಯಂತ್ರಣೆಯನ್ನು ಮಾಡಲಾಗುತ್ತದೆ. ಈ ಫಿಕ್ಚ್ಸರ್ ಗಳನ್ನು ಅವರು ಏರೋಸ್ಪೇಸ್ ಕಂಪನಿಗಳಿಗೆ ಒದಗಿಸುತ್ತಾರೆ. ಈ ಫಿಕ್ಸ್ಚರ್ ಗಳನ್ನು ಬಳಸಿ ಯಂತ್ರಣೆ ಮಾಡಲಾಗುವಂತಹ ಏರೋಸ್ಪೇಸ್ ಉದ್ಯಮದಲ್ಲಿ ಯಂತ್ರಭಾಗಗಳಲ್ಲಿರುವ ಟಾಲರನ್ಸ್ ತುಂಬಾ ಕಡಿಮೆ ಇರುತ್ತದೆ. ಈ ಯಂತ್ರಭಾಗಗಳ ಗಾತ್ರವನ್ನು ನಿರ್ದೋಷವಾಗಿ ಪಡೆಯುವಲ್ಲಿ ಫಿಕ್ಸ್ಚರ್ ನ ಯಂತ್ರಣೆಯನ್ನೂ ಕಡಿಮೆ ಟಾಲರನ್ಸ್ ಮತ್ತು ಉಚ್ಚಮಟ್ಟದ ಫಿನಿಶಿಂಗ್ ನೊಂದಿಗೆ ನಿರ್ವಹಿಸುವುದು ಅತ್ಯಾವಶ್ಯಕವಾಗಿದೆ. ಫಿಕ್ಸ್ಚರ್ ನ ಬೇಸ್ ಪ್ಲೇಟ್ ಮಿಶ್ರಲೋಹಗಳ ಸ್ಟೀಲ್ ನಲ್ಲಿರುವ ಭಾಗವನ್ನು ಗ್ಯಾಸ್ ಕಟಿಂಗ್ ಮಾಡಿ ತಯಾರಿಸಲಾಗುತ್ತದೆ. ಬೇಸ್ ಪ್ಲೇಟ್ ನಲ್ಲಿ ಅವಶ್ಯಕವಾದ ಕಠಿಣತೆಯು ಹೆಚ್ಚೆಂದರೆ ಸುಮಾರು 450 BHN ಇತ್ತು.
  
 
1_1  H x W: 0 x
ಯಂತ್ರಭಾಗವನ್ನು ಚಿತ್ರ ಕ್ರ. 1 ರಲ್ಲಿ ತೋರಿಸಲಾಗಿದೆ. ಗ್ಯಾಸ್ ಕಟಿಂಗ್ ಆಪರೇಶನ್ ನ ಸಹಾಯದಿಂದ ಪ್ಲೇಟ್ ಕತ್ತರಿಸಲಾಗುತ್ತದೆ. ಇದರಿಂದಾಗಿ ಮಟೀರಿಯಲ್ ನ ಕಠಿಣತೆಯು ಹೆಚ್ಚುತ್ತದೆ. ಇಂತಹ ಪ್ಲೇಟ್ ಗಳ ಯಂತ್ರಣೆಗೆ ಹೆಚ್ಚು ಟಫ್ ಗ್ರೇಡ್ ಮತ್ತು ಉಟ್ಟಮಟ್ಟದಲ್ಲಿರುವ ಮಧ್ಯಮ (ಮೀಡಿಯಮ್) ತೀಕ್ಷ್ಣವಾಗಿರುವ ಜಾಮೆಟ್ರಿಯನ್ನು ಆಯ್ಕೆ ಮಾಡುವುದು ಅಗತ್ಯವಾಗಿದೆ. ಕಾರಣ ಒರಟಾದ (ರಫ್) ಸರ್ಫೇಸ್ ನಲ್ಲಿ ಯಂತ್ರಣೆಯನ್ನು ಮಾಡಿ ಉಚ್ಚಮಟ್ಟದ ಫಿನಿಶ್ ಪಡೆಯಬೇಕು. ಇದೇ ಕಾರಣದಿಂದಾಗಿ ಯಂತ್ರಣೆಯನ್ನು ಎರಡು ಪಾಸ್ ನಲ್ಲಿ ಮಾಡಲಾಗುತ್ತದೆ. ಪ್ಲೇಟ್ ನ ದಪ್ಪವು ಕಡಿಮೆ (32 ಮಿ.ಮೀ.) ಇರುವುದು ಇನ್ನೊಂದು ಇದರಲ್ಲಿ ಅಡಗಿರುವ ಅಂಶವಾಗಿತ್ತು. ಪ್ಲೇಟ್ ನ ಉದ್ದ 300 ಮಿ.ಮೀ. ಇತ್ತು. ಇದರಿಂದಾಗಿ ಫೇಸ್ ಯಂತ್ರಣೆಯಲ್ಲಿ ಪ್ಲೇಟ್ ಬಗ್ಗುವ ಸಾಧ್ಯತೆಯಿತ್ತು. ಹೆಚ್ಚು ಯಂತ್ರಣೆಯ ವೇಗ ಮತ್ತು ಕಡಿಮೆ ಫೀಡ್ ರೇಟ್ ಇರುವಾಗ ಮಟೀರಿಯಲ್ ಇನ್ನಷ್ಟು ಕಠಿಣವಾಗುತ್ತದೆ. ಇದರಿಂದಾಗಿ ಸರ್ಫೇಸ್ ಫಿನಿಶ್ ಮತ್ತು ತಯಾರಾಗಿರುವ ಪ್ಲೇಟ್ ನ ಗುಣಮಟ್ಟ ಹಾಳಾಗುವ ಸಾಧ್ಯತೆ ಇರುತ್ತದೆ.
ಪ್ರಸ್ತುತ ಪ್ರಕ್ರಿಯೆ ವಿವರಗಳನ್ನು ಕೋಷ್ಟಕದಲ್ಲಿ ನೀಡಲಾಗಿದೆ. ಕೆಲಸದ ವಿವರಗಳು ಈ ಕೆಳಗಿನಂತಿವೆ.
ಪ್ರಮುಖ ಕೆಲಸ : ಫೇಸ್ ಮಿಲ್ಲಿಂಗ್
ಯಂತ್ರಭಾಗ : ಫಿಕ್ಸ್ಚರ್ ಪ್ಲೇಟ್ (ಬೇಸ್ ಪ್ಲೇಟ್)
ಮಟೀರಿಯಲ್ : ಮಿಶ್ರ ಲೋಹಗಳ ಸ್ಟೀಲ್ ಗ್ಯಾಸ್ ಕಟ್ ಪ್ಲೇಟ್
(32 ಮಿ.ಮೀ. ದಪ್ಪ)
ಕಠಿಣತೆ : 400-450 BHN
ಪ್ರಸ್ತುತ ಕೆಲಸ : ಫಿನಿಶ್ ಮಿಲ್ಲಿಂಗ್
ಮಶಿನ್ : VMC BT40

2_1  H x W: 0 x
 
ಸದ್ಯಕ್ಕೆ ಎಂಟು ಮೂಲೆಗಳಿರುವ -ve ಡಬಲ್ ಸೈಡ್ ಇನ್ಸರ್ಟ್ ಬಳಸಲಾಗುತ್ತವೆ ಮತ್ತು ಅದರಲ್ಲಿ 5 ಇನ್ಸರ್ಟ್ ಪಾಕೇಟ್ ಗಳೊಂದಿಗೆ D80 ವ್ಯಾಸದ 45° ಅಪ್ರೋಚ್ ಕೋನ ಇರುವ ಕಟರ್ ಇದೆ. -ve ಇನ್ಸರ್ಟ್ ಮತ್ತು 45° ಯ ಅಪ್ರೋಚ್ ಕೋನದಿಂದಾಗಿ (ಉಚ್ಚಮಟ್ಟದ ಅಕ್ಷೀಯ ಭಾರವು) ಉಂಟಾಗುತ್ತದೆ. ಇದರಿಂದಾಗಿ ಪ್ಲೇಟ್ ನ ಸರ್ಫೇಸ್ ಫಿನಿಶ್ ನಲ್ಲಿ ಪರಿಣಾಮವುಂಟಾಗುತ್ತದೆ. ಹಾಗೆಯೇ ಪ್ಲೇಟ್ ನ ದಪ್ಪ ಕಡಿಮೆ ಮತ್ತು ಉದ್ದ ಹೆಚ್ಚು ಇರುವುದರಿಂದ ಪ್ಲೇಟ್ ಬಗ್ಗುತ್ತದೆ. ಯಂತ್ರಣೆಯ ವೇಗ ಹೆಚ್ಚು ಮತ್ತು ಫೀಡ್ ರೇಟ್ ಕಡಿಮೆ, ಇದ್ದಲ್ಲಿ ಅದರ ಪರಿಣಾಮವು ಟೂಲ್ ನ ಬಾಳಿಕೆಯಲ್ಲಿ ಬೀರುತ್ತದೆ.
 
ಪ್ರಸ್ತುತ ರೀತಿಯಲ್ಲಿ 45° ಅಪ್ರೋಚ್ ಕೋನವಿರುವ ಕಟರ್ ನಿಂದಾಗಿ ಅಕ್ಷೀಯ ಭಾರವು ಗರಿಷ್ಠ ಇರಬಲ್ಲದು. ತೆಳ್ಳಗಿನ ಪ್ಲೇಟ್ ನ ಯಂತ್ರಣೆಯ ಕೆಲಸವನ್ನು ನಿರ್ವಹಿಸಬೇಕಾಗಿದೆ. ಆದ್ದರಿಂದ ಕಾರ್ಯವಸ್ತುವಿನ ಭಾರವೂ ಕಡಿಮೆ ಇದೆ. ಅಕ್ಷೀಯ ಬಲ ಹೆಚ್ಚು ಇದ್ದಲ್ಲಿ ಅದು ಬಾಗುವ ಸಾಧ್ಯತೆ ಇರುತ್ತದೆ. ಇದರ ಕುರಿತು ಅಭ್ಯಾಸ ಮಾಡಿದ ನಂತರ 90° ಅಪ್ರೋಚ್ ಕೋನ ಇರುವ ಕಟರ್ ಬಳಸಲು ಸೂಚಿಲಾಯಿತು. ಕಾರಣ ಇದರಲ್ಲಿ ಅಕ್ಷೀಯ ಬಲ ಕಡಿಮೆ ಮತ್ತು ರೇಡಿಯಲ್ ಬಲ ಹೆಚ್ಚು ಇರುವುದರಿಂದ ಸರ್ಫೇಸ್ ನಲ್ಲಿ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ.
 
4_1  H x W: 0 x
ಹೊಸದಾದ ಸುಧಾರಿತ ಪ್ರಕ್ರಿಯೆಯಲ್ಲಿ 5 ಪೆಕೇಟ್ ಮತ್ತು 45° ಅಪ್ರೋಚ್ ಕಟರ್ ನ ಜಾಗದಲ್ಲಿ, 6 ಪೊಕೇಟ್ ಮತ್ತು 90° ಅಪ್ರೋಚ್ ಕಟರ್ ಆಯ್ಕೆ ಮಾಡಲಾಯಿತು. ಇದರೊಂದಿಗೆ ಫೀಡ್ ರೇಟ್ ಕೂಡಾ ಹೆಚ್ಚಿಸಲಾಯಿತು. ಕಾರಣ ಈ ಇನ್ಸರ್ಟ್ ನಲ್ಲಿ ಬೃಹದಾಕಾರದ ವೈಪರ್ ಬದಿ ಇದೆ, ಅದು ಉಚ್ಚ ಫೀಡ್ ರೇಟ್ ನಲ್ಲಿಯೂ ಚ್ಯಾಟರಿಂಗ್ ಮಾಡದೆಯೂ ಫಿನಿಶ್ ನೀಡುವಲ್ಲಿ ಸಹಕರಿಸುತ್ತದೆ. ಇನ್ನೊಂದು ಮಹತ್ವದ ಅಂಶವೆಂದರೆ ಇನ್ಸರ್ಟ್ ನಲ್ಲಿ ಉಚ್ಚಮಟ್ಟದ +ve ರೇಕ್ ಇರುವ ತೀಕ್ಷ್ಣವಾದ ಕಟಿಂಗ್ ಚೂಪುತನವಿದೆ. ಇದರಿಂದಾಗಿ ಕಟಿಂಗ್ ಭಾರವಲ್ಲದೇ, ವಿಶೇಷವಾಗಿ ಅಕ್ಷೀಯ ಭಾರವೂ ಕಡಿಮೆಯಾಗುತ್ತದೆ. 90° ಅಪ್ರೋಚ್ ನಿಂದಾಗಿ ಪ್ಲೇಟ್ ಬಾಗುವುದನ್ನೂ ತಡೆಯಬಹುದು. ಸೆಟಪ್ ಮತ್ತು ಯಂತ್ರಭಾಗವು ದುರ್ಬಲವಾಗಿರುವುದರಿಂದ ಯಂತ್ರಣೆಯ ವೇಗವನ್ನು ಕಡಿಮೆ ಮಾಡಬಲ್ಲ ಮತ್ತು ಭಾರವನ್ನು ಸಹಿಸುವಲ್ಲಿ ಸಹಕರಿಸಬಲ್ಲ ಹೆಚ್ಚು ಟಫ್ ಗ್ರೇಡ್ ಆಯ್ಕೆ ಮಾಡಲಾಯಿತು.
ಲಾಭಗಳು
• ಸುಧಾರಿತ ಪ್ಯಾರಾಮೀಟರ್, ಇನ್ಸರ್ಟ್, ಅಪ್ರೋಚ್ ಕೋನ ಮತ್ತು ಕಟರ್ ಬಳಸಿದ್ದರಿಂದ ಗ್ರಾಹಕರು ಯಂತ್ರಭಾಗ ಮತ್ತು ಸರ್ಫೇಸ್ ಫಿನಿಶ್ (ಮೌಲ್ಯವು 1.6 Ra ಆಗುತ್ತದೆ) ಇವುಗಳ ಅಪೇಕ್ಷಿಸಿರುವ ಗುಣಮಟ್ಟವನ್ನು ಪಡೆಯಬಲ್ಲೆವು. ಹಳೆಯ ರೀತಿಯಲ್ಲಿ ಒಂದೇ ಸರ್ಫೇಸ್ ನಲ್ಲಿ ಅದು 1.6 ರಿಂದ 3.2 ತನಕ ಬದಲಾಗುತ್ತಿತ್ತು. ಈಗ ಎಲ್ಲೆಡೆ 1.6 ಮೌಲ್ಯವು ಲಭಿಸುತ್ತದೆ.
• ಇನ್ಸರ್ಟ್ ನ ಪ್ರತಿಯೊಂದು ಎಡ್ಜ್ ಗಳ ಬಾಳಿಕೆಯು ಶೇಕಡಾ 150 ಪಟ್ಟು ಹೆಚ್ಚಾಯಿತು.
• ಪ್ರತಿಯೊಂದು ಯಂತ್ರಭಾಗದ ಬೆಲೆಯು ಶೇಕಡಾ 74 ರಷ್ಟು ಕಡಿಮೆಯಾಯಿತು.
• ಉಚ್ಚಮಟ್ಟದ ಸರ್ಫೇಸ್ ಫಿನಿಶ್ ಇರುವುದರಿಂದ ಈ ಪ್ಲೇಟ್ ಅಸೆಂಬ್ಲಿಯಲ್ಲಿ ಸೂಕ್ತ ರೀತಿಯಲ್ಲಿ ಬಳಸಲಾಯಿತು.
9579352519
vijay_purohit@rediffmail.com
ವಿಜೇಂದ್ರ ಪುರೋಹಿತ್ ಇವರು ಟೂಲಿಂಗ್ ತಜ್ಞರಾಗಿದ್ದಾರೆ. ಅವರಿಗೆ ಮಶಿನ್ ಟೂಲ್ ಮತ್ತು ಕಟಿಂಗ್ ಟೂಲ್ ಡಿಸೈನ್ ನಲ್ಲಿ ಸುಮಾರು 25 ವರ್ಷಗಳಿಗಿಂತಲೂ ಹೆಚ್ಚು ಕಾಲಾವಧಿಯ ಅನುಭವವಿದೆ.
Powered By Sangraha 9.0