ಪಾರಂಪರಿಕವಾದ ಸಿಲಿಂಡ್ರಿಕಲ್ ಗ್ರೈಂಡಿಂಗ್ ಮಶಿನ್ ನಲ್ಲಿ ಯಾವುದೇ ಕಾರ್ಯವಸ್ತುವಿಗೆ ಕಾಂಟೂರ್ ಆಕಾರದ ಗ್ರೈಂಡಿಂಗ್ ಮಾಡುವುದಾದಲ್ಲಿ ಗ್ರೈಂಡಿಂಗ್ ವೀಲ್ ಗೆ ಆಕಾರವನ್ನು ನೀಡಲು ಅನುರೂಪವಾದ ಕ್ರಶರ್ ಇರಬೇಕಾಗುತ್ತದೆ. ಅಥವಾ ಸಿ.ಎನ್.ಸಿ. ಮಶಿನ್ ನಲ್ಲಿ ಡ್ರೆಸರ್ ಇರಬೇಕಾಗುತ್ತದೆ. ಇದಕ್ಕೋಸ್ಕರ ಕಾರ್ಖಾನೆಯಲ್ಲಿ ಸಿ.ಎನ್.ಸಿ. ಮಶಿನ್ ಅಥವಾ ಸ್ಪೆಶಲ್ ಡ್ರೆಸರ್ ಬೇಕಾಗುತ್ತವೆ. ಆದರೆ ಸಿ.ಎನ್.ಸಿ. ಮಶಿನ್ ನ ಪರ್ಯಾಯವು ತುಂಬಾ ದುಬಾರಿಯಾಗಿರುತ್ತದೆ.
ನಮ್ಮ ಕಂಪನಿಯಲ್ಲಿ ಪಿನ್ ನ (ಚಿತ್ರ ಕ್ರ. 1) ಕೆಲಸವನ್ನು ಮಾಡಲಾಯಿತು. ಇದರಲ್ಲಿ ಕಾಂಟೂರ್ ಗ್ರೈಂಡಿಂಗ್ ಮಾಡುವ ಆವಶ್ಯಕತೆ ಇತ್ತು. ಕಾಂಟೂರ್ ಗ್ರೈಂಡಿಂಗ್ ಮಾಡಲು ನಾವು ಸಿ.ಎನ್.ಸಿ. ಮಶಿನ್ ನ ಪರ್ಯಾಯವನ್ನು ಆಯ್ಕೆ ಮಾಡಿದೆವು. ಆದರೆ ಅದು ತುಂಬಾ ದುಬಾರಿಯಾಗಿದೆ ಎಂಬ ಅಂಶವು ನಮ್ಮ ಗಮನಕ್ಕೆ ಬಂತು. ಆದ್ದರಿಂದ ಉಪಲಬ್ಧವಿರುವ ಪಾರಂಪರಿಕವಾದ ಗ್ರೈಂಡಿಂಗ್ ಮಶಿನ್ ನಲ್ಲಿಯೇ ಇಂತಹ ಎಲ್ಲ ವಿಧದ ಕಾಂಟೂರ್ ಹೇಗೆ ಮಾಡುವುದು ಎಂಬುದರ ಕುರಿತು ನಾವು ವಿಚಾರ ಮಾಡಿದೆವು.
ಗ್ರೈಂಡಿಂಗ್ ವೀಲ್ ಗೆ ಅಪೇಕ್ಷಿಸಿರುವ ಕಾಂಟೂರ್ ಗೆ ಆಕಾರವನ್ನು ನೀಡಲು ಡ್ರೆಸರ್ ವೀಲ್ ನ ಅಕ್ಷಕ್ಕೆ ಒಂದೇ ಸಮಯದಲ್ಲಿ ಸಮಾನಾಂತರವಾಗಿ ಮತ್ತು ಲಂಬವಾಗಿ (ವರ್ಟಿಕಲ್) ತಿರುಗುವುದು ಅತ್ಯಾವಶ್ಯಕವಾಗಿತ್ತು. ಇದಕ್ಕೋಸ್ಕರ ಉಪಲಬ್ಧವಿರುವ ಸಿಲಿಂಡ್ರಿಕಲ್ ಗ್ರೈಂಡಿಂಗ್ ನಲ್ಲಿ ಪ್ರೊಫೈಲ್ ಡ್ರೆಸಿಂಗ್ ಅಟಾಚ್ ಮೆಂಟ್ (ಚಿತ್ರ ಕ್ರ. 2) ಮಾಡುವುದನ್ನು ನಿರ್ಧರಿಸಿದೆವು. ಈ ಅಟಾಚ್ ಮೆಂಟ್ ಮಶಿನ್ ನ ಟೇಬಲ್ ನಲ್ಲಿ ಹಿಡಿಯಲಾಗುತ್ತದೆ. ಇದರಲ್ಲಿ ಎರಡೂ ದಿಕ್ಕುಗಳಿಗೆ ಒಂದೇ ಸಮಯದಲ್ಲಿ ಅಲುಗಾಡುವ ಕಾಂಪೋಸಿಟ್ ಸ್ಲೈಡ್ ಬಳಸಲಾಯಿತು. ಮುಖ್ಯವಾದ ಸ್ಲೈಡ್ ವೀಲ್ ನ ಅಕ್ಷಕ್ಕೆ ಸಮಾನಾಂತರವಾಗಿದ್ದು, ಅದರಲ್ಲಿ ಲಂಬ ಕೋನದಲ್ಲಿ (ವರ್ಟಿಕಲಿ) ಅಲುಗಾಡುವ ಕ್ರಾಸ್ ಸ್ಲೈಡ್ ಅಳವಡಿಸಿದೆವು. ಕ್ರಾಸ್ ಸ್ಲೈಡ್ ನ ಒಂದು ಬದಿಯಲ್ಲಿ ಉಳಿಯ (ಚಿಝಲ್) ಆಕಾರದ ಟ್ರೇಸರ್ ಮತ್ತು ಹಾಗೆಯೇ ಡ್ರೆಸರ್ ಇರುವ ತುಂಡನ್ನು ಅಳವಡಿಸಿದೆವು.
ಈ ತುಂಡಿಗೆ ಸ್ಪ್ರಿಂಗ್ ನಿಂದ ಒತ್ತಡವನ್ನು ನೀಡಲಾಗಿದೆ. ಆದುದರಿಂದ ಟ್ರೆಸರ್ ಕಾರ್ಯವಸ್ತುವಿನ ಪ್ರೊಫೈಲ್ ಗೆ ಅನುಸಾರವಾಗಿ ಮಾಡಿರುವ ಟೆಂಪ್ಲೇಟ್ ನ (ಚಿತ್ರ ಕ್ರ. 3) ಸಂಪರ್ಕದಲ್ಲಿ ನಿರಂತರವಾಗಿರುತ್ತದೆ. ಸಮಾನಾಂತರ ಸ್ಲೈಡ್ ಬಾಲ್ ಸ್ಕ್ರೂ ಗಳ ಸಹಾಯದಿಂದ ಕೈಯಿಂದಲೇ ಹಿಂದೆ-ಮುಂದೆ ಮಾಡಲಾಗುತ್ತದೆ. ಆಗ ಕ್ರಾಸ್ ಸ್ಲೈಡ್ ನಲ್ಲಿ ಅಳವಡಿಸಿರುವ ಟ್ರೇಸರ್, ಸ್ಪ್ರಿಂಗ್ ಗಳ ಒತ್ತಡದಿಂದಾಗಿ ಟೆಂಪ್ಲೇಟ್ ಗೆ ಅನುಸಾರವಾಗಿ ಅಪೇಕ್ಷಿಸಿರುವ ದಾರಿಯಲ್ಲಿ ಚಟುವಟಿಕೆಯನ್ನು ಮಾಡುತ್ತದೆ. ಅದೇ ತುಂಡಿನಲ್ಲಿ ಡ್ರೆಸರ್ ಅಳವಡಿಸಿದ್ದರಿಂದ ಅದು ಟೆಂಪ್ಲೇಟ್ ಪ್ರೊಫೈಲ್ ನಂತೆ ವೀಲ್ ನ ಡ್ರೆಸಿಂಗ್ ಮಾಡುತ್ತದೆ.
ಈ ಕೆಲಸವನ್ನು ಮಾಡಲು 40 ಲಕ್ಷ ರೂಪಾಯಿಗಳಷ್ಟು ಸಿ.ಎನ್.ಸಿ. ಗ್ರೈಂಡಿಂಗ್ ಮಶಿನ್ ಗಳನ್ನು ಖರೀದಿ ಮಾಡದೇ ಕೆಲವಾರು ಸಾವಿರ ಖರ್ಚು ಮಾಡಿ ನಮಗೆ ಬೇಕಾಗಿರುವ ಪ್ರೊಫೈಲ್ ಮಾಡಲಾಯಿತು.