ಸರ್ಫೇಸ್ ಫಿನಿಶ್ ಕಾಪಾಡುವ ಕಾರ್ಯವಸ್ತುವಿನ ನಿರ್ವಹಣೆ

15 Mar 2021 09:51:48
ತಮ್ಮ ಕಾರ್ಖಾನೆಯಲ್ಲಿ ಎದುರಾಗುವ ಅನೇಕ ರೀತಿಯ ಸಮಸ್ಯೆಗಳಿಗೆ ತಮ್ಮಲ್ಲಿಯೇ ಉಪಾಯವನ್ನು ಹುಡುಕಲಾಗುತ್ತದೆ. ಈ ಸಮಸ್ಯೆ ಉತ್ಪಾದನೆಗೆ ಅಥವಾ ಪ್ರಕ್ರಿಯೆಗೆ ಸಂಬಂಧಪಟ್ಟದ್ದಾಗಿರುತ್ತದೆ. ಸಮಸ್ಯೆ ಎಲ್ಲಿದೆ ಎಂಬುದನ್ನು ಹುಡುಕಿದ ನಂತರ, ಅದಕ್ಕೆ ಉಪಾಯ ಹುಡುಕುವುದೂ ಸುಲಭವಾಗಿರುತ್ತದೆ. ‘ಫ್ಯುಯೆಲ್ ಇನ್ ಸ್ಟ್ರುಮೆಂಟ್ಸ್ ಎಂಡ್ ಇಂಜಿನಿಯರ್ಸ್ ಪ್ರೈ.ಲಿ. (FIE)’ ಈ ಕಂಪನಿಯಲ್ಲಿ ಬೃಹತ್ ಪ್ರಮಾಣದಲ್ಲಿ ಕಾರ್ಯವಸ್ತುಗಳನ್ನು ಉತ್ಪಾದಿಸಲಾಗುತ್ತದೆ. ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯನ್ನು ಮಾಡುತ್ತಿರುವಾಗ ಉದ್ಭವಿಸುವ ಚಿಕ್ಕ-ಪುಟ್ಟ ಸಮಸ್ಯೆಗಳು ಕೂಡಾ ದೊಡ್ಡ ಪರಿಣಾಮವನ್ನುಂಟು ಮಾಡುತ್ತಿದ್ದವು. ಈ ಲೇಖನದಲ್ಲಿ ಇದೇ ರೀತಿಯ ಒಂದೇ ಸಮಸ್ಯೆಯ ಕುರಿತು ಕಾರ್ಖಾನೆಯಲ್ಲಿಯೇ ಉಪಾಯವನ್ನು ಹೇಗೆ ಹುಡುಕಲಾಯಿತು, ಎಂಬುದರ ಕುರಿತು ಮಾಹಿತಿಯನ್ನು ನೀಡಲಾಗಿದೆ.
ಸಮಸ್ಯೆ
FIE ಯಲ್ಲಿ ಅಲ್ಯುಮಿನಿಯಮ್ ನ ಚಿಕ್ಕ (20 ಮಿ.ಮೀ. ವ್ಯಾಸ) ಕಾರ್ಯವಸ್ತುಗಳ ಉತ್ಪಾದನೆಯನ್ನು ಬೃಹತ್ ಪ್ರಮಾಣದಲ್ಲಿ ಮಾಡಲಾಗುತ್ತದೆ. ಈ ಉತ್ಪಾದನೆಯ ವೇಗ ಪ್ರತಿ ಮೂರು ಸೆಕಂಡಿಗೆ ಒಂದು ಕಾರ್ಯವಸ್ತು ಇತ್ತು. ಒಂದು ತಿಂಗಳ ಕಾಲಾವಧಿಯಲ್ಲಿ ಸುಮಾರು 11 ಲಕ್ಷ ಕಾರ್ಯವಸ್ತುಗಳನ್ನು ತಯಾರಿಸುವ ಸಾಮರ್ಥ್ಯ ಈ ಕಂಪನಿಯಲ್ಲಿದೆ. ಇಷ್ಟು ದೊಡ್ಡ ಪ್ರಮಾಣದ ಉತ್ಪಾದನೆಯಾಗುತ್ತಿರುವಾಗ ನಮಗೆ ಅನೇಕ ಚಿಕ್ಕ-ಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಕಾರ್ಯವಸ್ತುಗಳ ಸರ್ಫೇಸ್ ಫಿನಿಶ್ ಕುರಿತಾದ ಸಮಸ್ಯೆಯು ಒಂದಾಗಿತ್ತು.
ಅಲ್ಯುಮಿನಿಯಮ್ ನ ಲೋಹಗಳಲ್ಲಿ ಕೆಲಸ ಮಾಡುತ್ತಿರುವಾಗ ಎದುರಾಗುವ ಗಂಭೀರವಾದ ಸಮಸ್ಯೆ ಅಂದರೆ, ಅಲ್ಯುಮಿನಿಯಮ್ ನಿಂದ ತಯಾರಿಸಿರುವ ಕಾರ್ಯವಸ್ತು ನಿರ್ವಹಿಸುವಾಗ ಅವುಗಳು ಅಂಕು-ಡೊಂಕಾಗುತ್ತವೆ ಅಥವಾ ಹೊಂಡ ಅಥವಾ ಡೆಂಟ್ ಗಳೂ ಉಂಟಾಗುತ್ತಿದ್ದವು.
 
ಹಳೆಯ ರೀತಿ
ನಮ್ಮಲ್ಲಿ 8 ಯಂತ್ರಣೆಯ ಸ್ಥಾನಗಳಿರುವ ರೋಟರ್ ಮಶಿನ್ ನಲ್ಲಿ ಕಾರ್ಯವಸ್ತುಗಳನ್ನು ತಯಾರಿಸಲಾಗುತ್ತದೆ. ಆಟೊ ಫೀಡರ್ ಮೂಲಕ ಮಶಿನ್ ಗೆ ಕಚ್ಚಾ ವಸ್ತುಗಳನ್ನು ಪೂರೈಸಲಾಗುತ್ತದೆ. ಪ್ರತಿ ಮೂರು ಸೆಕಂಡಿಗೆ ಒಂದು ಈ ವೇಗದಲ್ಲಿ ಹೊರಗೆ ಬರುವ ಕಾರ್ಯವಸ್ತುಗಳು ಒಂದು ಬಿನ್ ನಲ್ಲಿ ಒಟ್ಟು ಮಾಡುತ್ತಿರುವಾಗ ಅವುಗಳು ಒಂದಕ್ಕೊಂದು ಅಪ್ಪಳಿಸುತ್ತಿದ್ದವು. ಇದಕ್ಕೆ ಉಪಾಯವೆಂದರೆ, ಕಾರ್ಯವಸ್ತುಗಳನ್ನು ಒಟ್ಟುಮಾಡುವಾಗ ರಬರ್, ಸ್ಪಂಜ್ ಇಂತಹ ಹಲವಾರು ಮೃದುವಾದ ವಸ್ತುಗಳನ್ನು ಈ ಹಿಂದೆಯೂ ಬಳಸಲಾಗುತ್ತಿತ್ತು. ಆದರೆ ಮಶಿನ್ ನಿಂದ ಹೊರಗೆ ಬರುವ ಕಾರ್ಯವಸ್ತುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಉಪಾಯವು ಅಷ್ಟೇನು ಪ್ರಭಾವಶಾಲಿಯಾಗಿಲ್ಲ.
ಹೊಸ ರೀತಿ
ನಿರಂತರವಾಗಿ ಮಾಡಲಾಗುವ ಪ್ರಯತ್ನ ಮತ್ತು ಹೊಸ ಹೊಸ ಪ್ರಯೋಗಗಳಿಂದ ಈ ಸಮಸ್ಯೆಗೆ ಕಂಪನಿಯಲ್ಲಿಯೇ ಸಾಮಾನ್ಯವಾದ ಆದರೆ ಪರಿಣಾಮಕಾರಿಯಾದ ಉಪಾಯವನ್ನು ಹುಡುಕಲಾಯಿತು. ತಯಾರಾಗಿರುವ ಎಲ್ಲ ಕಾರ್ಯವಸ್ತುಗಳನ್ನು ಒಂದು ಬಿನ್ ನಲ್ಲಿ ಒಟ್ಟು ಮಾಡಿ ಇಡಲಾಗುತ್ತಿತ್ತು. ಆ ಬಿನ್ ನಲ್ಲಿ ಮುಂಚಿನಿಂದಲೇ ನೀರು ತುಂಬಿಸಿಡಬೇಕು ಎಂಬುದನ್ನು ನಿರ್ಧರಿಸಲಾಯಿತು. ಇದರಿಂದಾಗಿ ತಯಾರಾಗಿರುವ ಕಾರ್ಯವಸ್ತು, ನೀರಿನಿಂದ ತುಂಬಿರುವ ಬಿನ್ ನಲ್ಲಿ ಬಿದ್ದ ತಕ್ಷಣ (ಚಿತ್ರ ಕ್ರ. 1) ನೀರಿನ ಎಂಟಿ ಫೋರ್ಸ್ ನಿಂದಾಗಿ ಅದು ಕೆಳಗೆ ಬೀಳುವ ವೇಗವು ಕಡಿಮೆಯಾಗುತ್ತದೆ ಮತ್ತು ಈ ಕಾರ್ಯವಸ್ತು ನೀರಿನಲ್ಲಿ ಒಂದೊಂದರ ಮೇಲೆ ನಿಧಾನವಾಗಿ ಬೀಳುತ್ತವೆ. ಕಾರ್ಯವಸ್ತು ಒಂದರ ಹಿಂದೆ ಒಂದು ಹೊರಗೆ ಬೀಳುತ್ತಿರುವಾಗ ಬಿನ್ ನಿರಂತರವಾಗಿ ಉರುಟಾಗಿ ತಿರುಗುವ ವ್ಯವಸ್ಥೆಯನ್ನು ಮಾಡಿದೆವು. ಇದರಿಂದಾಗಿ ಮಶಿನ್ ನಿಂದ ಮೊದಲೇ ಹೊರಗೆ ಬಿದ್ದಿರುವ ಕಾರ್ಯವಸ್ತು ಮತ್ತು ಅದರ ಹಿಂದೆಯೇ ಬರುವ ಇನ್ನೊಂದು ಕಾರ್ಯವಸ್ತು ಒಂದರ ಮೇಲೊಂದು ಬೀಳುವುದಿಲ್ಲ. ಇಂತಹ ತುಂಬಾ ಸೂಕ್ಷ್ಮವಾದ ಸುಧಾರಣೆಯಿಂದಾಗಿ ಕಾರ್ಯವಸ್ತುವಿನ ಸರ್ಫೇಸ್ ಪಿನಿಶ್ ಕುರಿತಾದ ಸಮಸ್ಯೆಯು ಪರಿಣಾಮಕಾರಿಯಾಗಿ ದೂರವಾಯಿತು.
ಲಾಭಗಳು
  
1_1  H x W: 0 x 
 
ಕಾರ್ಯವಸ್ತುಗಳ ರಿಜೆಕ್ಷನ್ ನ ಪ್ರಮಾಣವೂ ಕಡಿಮೆಯಾಯಿತು. ಸುಧಾರಣೆಯ ಮುಂಚೆ ರಿಜೆಕ್ಷನ್ ನ ಪ್ರಮಾಣ ಶೇಕಡಾ ಒಂದರಷ್ಟಿತ್ತು. ಮಾಡಿರುವ ಬದಲಾವಣೆಗಳಿಂದಾಗಿ ಅದು 0.3 ಶೇಕಡಾದಷ್ಟು ಕಡಿಮೆಯಾಯಿತು.
ಯಾವುದೇ ಹೆಚ್ಚುವರಿ ಖರ್ಚು ಮಾಡದೇ, ಉಪಲಬ್ಧವಿದ್ದ ಸಂಪನ್ಮೂಲಗಳನ್ನು ಸೂಕ್ತ ರೀತಿಯಲ್ಲಿ ಬಳಸಿ ಎದುರಾಗುವ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು, ಎಂಬುದು ಈ ಉದಾಹರಣೆಯಿಂದ ಗಮನಕ್ಕೆ ಬಂತು. ಲಘು- ಮಧ್ಯಮ ಕೈಗಾರಿಕೋದ್ಯಮಿಗಳು ಮತ್ತು ನಿರಂತರವಾಗಿ ಪ್ರಯೋಗವನ್ನು ಮಾಡುಲ ಹಂಬಲ ಇಟ್ಟುಕೊಂಡಲ್ಲಿ ಉಚ್ಚಮಟ್ಟದ ಪರಿಣಾಮಗಳು ಲಭಿಸುತ್ತವೆ.

2_1  H x W: 0 x 
 
Powered By Sangraha 9.0