ಮಶಿನಿಂಗ್ ಕ್ಲೌಡ್ ಅ್ಯಪ್

15 Mar 2021 10:09:06

ಮಶಿನಿಂಗ್ ಕ್ಲೌಡ್ ಅ್ಯಪ್
ಕಾರ್ಖಾನೆಯ ಕೆಲಸದಲ್ಲಿ ಆಗುವ ನಿರಂತರವಾದ ಬದಲಾವಣೆಗಳಿಗೆ ಸ್ವರೂಪಕ್ಕೆ ಅನುಸಾರವಾಗಿ ಅಥವಾ ಪ್ರಚಲಿತ ಕೆಲಸದಲ್ಲಿ ಸುಧಾರಣೆ ಮಾಡಲು ಟೂಲಿಂಗ್ ಗೆ ಆಪ್ಟಿಮೈಜ್ಡ್ ಪರ್ಯಾಯ ಹುಡುಕುವುದು, ತುಂಬಾ ಸಲ ಕಷ್ಟಕರವಾದ ಮತ್ತು ಸಮಯ ವ್ಯರ್ಥಗೊಳಿಸುವ ಕೆಲಸವಾಗಿದೆ. ಉಪಲಬ್ಧವಿರುವ ಎಲ್ಲ ವಿಧದ ಟೂಲಿಂಗ್ ಕುರಿತು ಮತ್ತು ಅದಕ್ಕೆ ಪೂರಕವಾದ ಇನ್ನಿತರ ಯಂತ್ರಣೆಯ ಕುರಿತು ಮಾಹಿತಿ ಒಂದೇ ಜಾಗದಲ್ಲಿ ಉಪಲಬ್ಧ ಮಾಡಿಕೊಡುವ ‘ಮಶಿನಿಂಗ್ ಕ್ಲೌಡ್ ಅ್ಯಪ್’ ಕುರಿತು ಈ ಲೇಖನದಲ್ಲಿ ವಿಸ್ತಾರವಾದ ಮಾಹಿತಿಯನ್ನು ನೀಡಲಾಗಿದೆ.


ಕಟಿಂಗ್ ಟೂಲ್ ಉತ್ಪಾದಕರು ಮತ್ತು ಅವರ ಗ್ರಾಹಕರಿಗೋಸ್ಕರ ಮಶಿನಿಂಗ್ ಕ್ಲೌಡ್ ಅ್ಯಪ್ ಇದೊಂದು ಇಂಡಸ್ಟ್ರಿ 4.0 ಸ್ವರೂಪದ ಪರಿಹಾರವಾಗಿದೆ. ಕಟಿಂಗ್ ಟೂಲ್ ನಿರ್ಮಾಪಕರಿಂದ ಮಾಡಲಾಗುವ ಉತ್ಪಾದನೆಗಳ ಪರಿಪೂರ್ಣವಾದ ತಿಳುವಳಿಕೆ ಮತ್ತು ಮಾಹಿತಿ (ಡಾಟಾ), ಕಟಿಂಗ್ ಟೂಲ್ ಗಳ ಆಯ್ಕೆಯನ್ನು ಮಾಡುವಂತಹ ಫಾಸ್ಟ್-ಟ್ರ್ಯಾಕಿಂಗ್, ಸಿ.ಎನ್.ಸಿ. ಪ್ರೊಗ್ರಾಮಿಂಗ್, ಸಿಮ್ಯುಲೇಶನ್ ಮತ್ತು ಯಂತ್ರಶಾಲೆಯಲ್ಲಿ ಮಾಡಲಾಗುವ ಎಲ್ಲ ವಿಧದ ಕೆಲಸಗಳನ್ನು ಈ ಅ್ಯಪ್ ನಿರ್ವಹಿಸುತ್ತದೆ. ಮಶಿನಿಂಗ್ ಕ್ಲೌಡ್ ಇದು ಸಿ.ಎನ್.ಸಿ. ಕಟಿಂಗ್ ಟೂಲ್ ಮತ್ತು ಕಾರ್ಯವಸ್ತುಗಳನ್ನು ಹಿಡಿದಿಡಲು (ವರ್ಕ್ ಹೋಲ್ಡಿಂಗ್) ಸಾಮಗ್ರಿಗಳ ಮಾಹಿತಿಯನ್ನು (ಡಾಟಾ) ಸರಬರಾಜು ಮಾಡುವ ಸ್ವತಂತ್ರವಾದ ವ್ಯವಸ್ಥೆಯಾಗಿದೆ. ತಮ್ಮೆಲ್ಲರ ಡೆಸ್ಕಟಾಪ್ ನಲ್ಲಿ ಅನೇಕ ಪೂರೈಕೆಗಾರರಿಂದ ಅವರ ಎಲ್ಲ ಉತ್ಪಾದನೆಗಳ ಕುರಿತು ವಿಸ್ತಾರವಾದ ಮತ್ತು ಹೊಸಹೊಸ ಮಾಹಿತಿಯನ್ನು ಡಿಜಿಟಲ್ ಸ್ವರೂಪದಲ್ಲಿ ಪಡೆಯಬಹುದಾಗಿದೆ. ಅಲ್ಲದೇ ಅದನ್ನು ಒಂದೇ ಮೂಲದಿಂದ ಪಡೆಯಬಹುದಾಗಿದೆ. ಇದು ಕೇವಲ ಕಲ್ಪನೆ ಆಗಿರದೇ ಪ್ರತ್ಯಕ್ಷವಾಗಿ ಸಾಧ್ಯವಾಗಿದೆ. ಸಂಪೂರ್ಣವಾಗಿ ಮತ್ತು ವಿಸ್ತಾರವಾಗಿ ಉತ್ಪಾದನೆಗಳ ಮಾಹಿತಿಯನ್ನು ನೀಡುವುದಲ್ಲದೇ, ಮಶಿನಿಂಗ್ ಕ್ಲೌಡ್ ಒಂದು ಇಂಟಿಗ್ರೇಟೆಡ್ ಟೂಲ್ ಸೆಟ್ ಉಪಲಬ್ಧ ಮಾಡಿಕೊಡುತ್ತದೆ. ಇದರಿಂದ ನಾವು ಸಾಧ್ಯವಿಲ್ಲ ಎಂದೆನಿಸುವ ವೇಗದಲ್ಲಿ ಮತ್ತು ಸಹಜವಾಗಿ ಆ ಮಾಹಿತಿಯನ್ನು ಕೆಲಸದ ಜಾಗದಲ್ಲಿ ಉಪಯೋಗಿಸಬಹುದು. ಕಟಿಂಗ್ ಟೂಲ್ ನ ಮುಂಚೂಣಿಯಲ್ಲಿರುವ ಉತ್ಪಾದಕರಲ್ಲಿರುವ ಉತ್ಪಾದನೆಗಳ ಸಂಪೂರ್ಣ ಮತ್ತು ನಿರಂತರವಾಗಿ ಅಪ್-ಟೂ-ಡೆಟ್ ಮಾಹಿತಿಯ ತನಕ ತಲುಪುವ ಒಂದೇ ಮೂಲವನ್ನು ಮಶಿನಿಂಗ್ ಕ್ಲೌಡ್ ನೀಡುತ್ತದೆ. ಕಟಿಂಗ್ ಟೂಲ್ ನಿರ್ಮಾಪಕರನ್ನು ಮತ್ತು ಅವರ ಕೊನೆಯ ಬಳಕೆಗಾರರನ್ನು ಜೋಡಿಸಿ ಮಶಿನಿಂಗ್ ಕ್ಲೌಡ್, ಉಚ್ಚಮಟ್ಟದ ಟೂಲಿಂಗ್ ಉತ್ಪಾದನೆಗಳನ್ನು ಹುಡುಕುವುದು, ಆಯ್ಕೆ ಮಾಡುವುದು ಮತ್ತು ಅವುಗಳ ಬಳಕೆಯನ್ನು ಉಚ್ಚಮಟ್ಟದಲ್ಲಿ ಹೇಗೆ ಮಾಡಬಹುದು ಎಂಬುದನ್ನು ನಿರ್ಧರಿಸುವಾಗ ಉಂಟಾಗುವ ಕಿರಿಕಿರಿಯನ್ನು ಮತ್ತು ಸಮಯದ ಅಪವ್ಯಯವನ್ನು ಗಮನಕ್ಕೆ ಬರುವಷ್ಟು ಕಡಿಮೆ ಮಾಡುತ್ತದೆ. ಟೂಲ್ ಗಳ ಬಳಕೆ ಮತ್ತು ಜಾಮೆಟ್ರಿ ಇವುಗಳ ಕುರಿತು ಕಟಿಂಗ್ ಟೂಲ್ ಉತ್ಪಾದಕರಿಂದ ಲಭಿಸುವ ವಿಸ್ತಾರವಾದ ಮಾಹಿತಿ ಮತ್ತು ಅಪ್ಲಿಕೇಶನ್ ನ ತಿಳಿವಳಿಕೆಯು ಮಶಿನಿಂಗ್ ಕ್ಲೌಡ್ ದಿಂದ ಸಹಜವಾಗಿ ಲಭ್ಯವಾಗುತ್ತದೆ. ಇದರ ಲಾಭವನ್ನು ಪಡೆದು ಕ್ಯಾಮ್ ವ್ಯವಸ್ಥೆ, ಸಿಮ್ಯುಲೇಶನ್ ಮತ್ತು ಟೂಲ್ ಮ್ಯಾನೆಜ್ ಮೆಂಟ್ ಸಾಫ್ಟ್ ವೇರ್, ಕಟಿಂಗ್ ಟೂಲ್ ಪ್ರೀಸೆಟರ್, ಮಶಿನ್ ಟೂಲ್ ಮತ್ತು ಯಂತ್ರಶಾಲೆಯಲ್ಲಿರುವ ಇನ್ನಿತರ ಉಪಕರಣಗಳನ್ನು ಬಳಸಲು ಸಹಕರಿಸುತ್ತದೆ.
 
ಉತ್ಪಾದನೆಯನ್ನು ಮಾಡುವ ಉದ್ಯಮದಲ್ಲಿ ವಿಶಿಷ್ಟ ಕ್ಷೇತ್ರದ ಕೆಲಸದಲ್ಲಿ ಕಾರ್ಯ ಸಾಮರ್ಥ್ಯದ ವಿನೂತನ ಹಂತವನ್ನು ತಲುಪಲು ಆವಶ್ಯಕವಿರುವ ಡಿಜಿಟಲ್ ಬದಲಾವಣೆಗಳನ್ನು ಮಾಡುವಲ್ಲಿ ಮಶಿನಿಂಗ್ ಕ್ಲೌಡ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕಟಿಂಗ್ ಟೂಲ್, ಮಶಿನ್ ಟೂಲ್, ಕಾರ್ಯವಸ್ತುಗಳನ್ನು ಹಿಡಿಯುವ ಸಾಮಗ್ರಿಗಳು ಮತ್ತು ಸ್ಪೆಶಾಲಿಟಿ ಪ್ರೊಡಕ್ಟ್ ಗಳ ಇಂದಿನ ಜಗತ್ತಿನಲ್ಲಿ ನಿರ್ಮಾಪಕರಿಂದ ಕ್ಲೌಡ್ ಗೆ ಆಧರಿಸಿರುವ ಅಪ್ಲಿಕೇಶನ್ಸ್, ಸಂಪನ್ಮೂಲಗಳು, ಸೇವೆ, ಜ್ಞಾನ ಮತ್ತು ಡಿಜಿಟಲ್ ಉತ್ಪಾದನೆಗಳ ಮಾಹಿತಿಯು ಲಭ್ಯವಾಗಿದ್ದರಿಂದ, ಇಂದು ಮಾಹಿತಿಯಿಂದಲೇ ನಡೆಯುವ ಯಂತ್ರಶಾಲೆಗಳಲ್ಲಿ ಮಾಹಿತಿಯ ಪ್ರಸಾರವು ಸುಲಭ ಮತ್ತು ಸಹಜವಾಗುತ್ತಿದೆ. ಇದರಿಂದಾಗಿ ಕಾರ್ಯಕ್ಷಮತೆಯಲ್ಲಿ ಸುಧಾರಣೆಯಾಗುತ್ತಿದೆ.
ಆಪ್ಟಿಮೈಸ್ಡ್ ಟೂಲಿಂಗ್ ನ ಹುಡುಕಾಟ ಮಾಡುವಾಗ ಮಶಿನಿಂಗ್ ಕ್ಲೌಡ್ ಮೂಲಕ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಪೂರೈಕೆಗಾರರಲ್ಲಿರುವ ಮಾಹಿತಿಯು ಲಭ್ಯವಾಗುವುದರಿಂದ ಮುದ್ರಿತ ಕ್ಯಾಟೆಲಾಗ್, ಟೆಲಿಫೋನ್ ನಲ್ಲಿ ಮಾಡಲಾಗುವ ಮಾತುಕತೆ ಮತ್ತು ಅನೇಕ ವೆಬ್ ಸೈಟ್ ಗಳಲ್ಲಿ ಹುಡುಕಾಟವನ್ನು ಮಾಡುವ ಕೆಲಸವು ಇಲ್ಲದಂತಾಗುತ್ತದೆ. ಹಾಗೆಯೇ ಕ್ಯಾಡ್ ಅಥವಾ ಕ್ಯಾಮ್ ಸಾಫ್ಟ್ ವೇರ್ ನಲ್ಲಿ ಟೂಲಿಂಗ್ ಡಾಟಾ ಕೈಯಿಂದ ಟೈಪ್ ಮಾಡಲು ಶ್ರಮಿಸಬೇಕಾಗುವುದಿಲ್ಲ.

1_1  H x W: 0 x 
 
ಬಳಕೆಗಾರರಿಕೆ ಇದು ಹೇಗೆ ಸಹಾಯಕಾರಿಯಾಗಿದೆ?
• ಮಾಹಿತಿಯನ್ನು ಸಂಗ್ರಹಿಸಲು ಆಪ್ಟಿಮೈಸೇಶನ್.
• ಕ್ಲೌಡ್ ಗೆ ಸಂಬಂಧಪಟ್ಟ ತಂತ್ರಜ್ಞಾನದ ಉಪಯೋಗ.
• ಅಪ್ಲಿಕೇಶನ್ ಗೋಸ್ಕರ ಸೂಕ್ತ ಟೂಲ್ ಗಳ ಆಯ್ಕೆ.
• ಒಂದಕ್ಕಿಂತ ಹೆಚ್ಚು ಕ್ಯಾಟೆಲಾಗ್ ಗಳನ್ನು ಸಂಶೋಧಿಸುವಲ್ಲಿ ಬೇಕಾಗುವ ಸಮಯದಲ್ಲಿ ಕಡಿತ.
• ಟೂಲ್ ಗಳ ಆಯ್ಕೆಗೆ ಆವಶ್ಯಕವಿರುವ ಸಮಯವು ಶೇಕಡಾ 75 ರಷ್ಟು ಕಡಿಮೆ.
• ಯಂತ್ರಣೆಯನ್ನು ಮಾಡುವ ಕ್ಯಾಮ್, ಸಿಮ್ಯುಲೇಶನ್, ಟೂಲ್ ಮ್ಯಾನೆಜ್ ಮೆಂಟ್ ಇವುಗಳ ಕುರಿತಾದ ವಿಸ್ತೃತ ಮಾಹಿತಿ, ಹಾಗೆಯೇ ಯಂತ್ರಶಾಲೆಯಲ್ಲಿರುವ ಸಾಫ್ಟ್ ವೇರ್ ನಲ್ಲಿ ಜಾಮೆಟ್ರಿಕಲ್ ಮಾಹಿತಿಯನ್ನು ನೇರವಾಗಿ ಡೌನ್ ಲೋಡ್ ಮಾಡುವುದು.
ತಕ್ಷಣವೇ ಅಸೆಂಬ್ಲಿಯನ್ನು ತಯಾರಿಸಿರಿ
3D ಮಾಡೆಲ್ ನಿರ್ಮಾಣ : ಉತ್ಪಾದಕರು ಪೂರೈಸಿರುವ ಉತ್ಪಾದನೆಗಳ ಮಾಹತಿಯನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಟೂಲಿಂಗ್ ಅಸೆಂಬ್ಲಿ ತಯಾರಿಸಬಹುದಾಗಿದೆ. 3D ಮಾಡೆಲ್ ಮತ್ತು 2D ಡ್ರಾಯಿಂಗ್ ಡೌನ್ ಲೋಡ್ ಮಾಡುವುದೂ ಸಾಧ್ಯ. ಇದರಿಂದಾಗಿ ಪ್ರೊಗ್ರಾಮಿಂಗ್ ನ ನಿಖರತೆಯಲ್ಲಿ ಸುಧಾರಣೆಯಾಗುತ್ತದೆ ಮತ್ತು ಮಶಿನ್ ನಲ್ಲಿ ಕೆಲಸ ಮಾಡುತ್ತಿರುವಾಗ ಸಂಬಂಧಪಟ್ಟ ಉಪಕರಣಗಳು ಪರಸ್ಪರರ ಮೇಲೆ ಅಪ್ಪಳಿಸುವ ಸಾಧ್ಯತೆಯೂ ಕಡಿಮೆಯಾಗುತ್ತದೆ.
ಮಾಹಿತಿಯನ್ನು ಕಳುಹಿಸುವುದು : ತಮ್ಮಲ್ಲಿರುವ ಕ್ಯಾಮ್ ಸಿಸ್ಟಮ್, ಟೂಲ್ ಮ್ಯಾನೆಜ್ ಮೆಂಟ್ ಮತ್ತು ಸಿಮ್ಯುಲೇಶನ್ ಸಾಫ್ಟ್ ವೇರ್ ಇವುಗಳಲ್ಲಿ ನಿರಂತರವಾಗಿ ಟೂಲಿಂಗ್ ಮಾಹಿತಿಯ ವಿನಿಮಯ ಮಾಡಬಹುದಾಗಿದೆ. ಈ ವ್ಯವಸ್ಥೆಯಿಂದಾಗಿ ಮತ್ತು ಅದರಲ್ಲಿರುವ ನಿರ್ದೋಷತ್ವದಿಂದಾಗಿ ತಮ್ಮ ಕೆಲಸದ ಪ್ರವಾಹದ (ವರ್ಕ್ ಫ್ಲೊ) ಪ್ರಕ್ರಿಯೆಯಲ್ಲಿ ಹಲವಾರು ಗಂಟೆಗಳು ಅಥವಾ ದಿನಗಳ ಉಳಿತಾಯವು ಸಾಧ್ಯ.
ಸಹಕಾರ : ಕೆಲಸ, ಟೂಲ್ ಮತ್ತು ಮಶಿನ್ ಗಳ ಮಾಹಿತಿಯನ್ನು ತಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದು ಸಾಧ್ಯವಿರುವುದರಿಂದ ಕೆಲಸ ನಿರ್ವಹಿಸುವ ತಂಡದಲ್ಲಿ ಪ್ರತಿಯೊಬ್ಬ ಸದಸ್ಯನಿಗೆ ತಮ್ಮ ಕೆಲಸಕ್ಕೋಸ್ಕರ ಹೊಸಹೊಸದಾದ ಟೂಲಿಂಗ್ ಗಳ ತನಕ ತಲುಪುವುದು ಖಂಡಿತವಾಗಿಯೂ ಸಾಧ್ಯವಿದೆ.

ಪ್ರಾಡಕ್ಟಿವಿಟಿ ಟೂಲ್ ಕಿಟ್ ಕೆಲಸದ ಪ್ರವಾಹದ ವೇಗವನ್ನು ವೃದ್ಧಿಸುತ್ತದೆ.
• ಕೆಲಸದ ವ್ಯವಸ್ಥಾಪನೆ (ಜಾಬ್ ಮ್ಯಾನೆಜ್ ಮೆಂಟ್) : ಮಶಿನಿಂಗ್ ಕ್ಲೌಡ್ ನಿಂದ ನೇರವಾಗಿ ಯಾವ ಕೆಲಸವನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ನಿರ್ಧರಿಸಿರಿ, ಶೇಖರಿಸಿರಿ ಮತ್ತು ಅದನ್ನು ಎಲ್ಲರಿಗೂ ಲಭ್ಯ ಮಾಡಿರಿ. ಇವೆಲ್ಲವನ್ನು ಸುರಕ್ಷಿತವಾಗಿ ನಿರ್ವಹಿಸಿರಿ.
• ಸ್ಟ್ಯಾಂಡರ್ಡ್ ಆಗಿರುವ ಟೂಲ್ ಗಳ ಪಟ್ಟಿಗಳನ್ನು ವರದಿಯೆಂದು ಡೌನ್ ಲೋಡ್ ಮಾಡಬಹುದಾಗಿದೆ. ತಮಗೆ ಬೇಕಾದಂತೆ ERP, MES ಅಥವಾ ಇನ್ನಿತರ ಸಾಫ್ಟ್ ವೇರ್ ಅಪ್ಲಿಕೇಶನ್ ನಲ್ಲಿ ಇಂಪೋರ್ಟ್ ಮಾಡಬಹುದಾಗಿದೆ.
• ಬೆಲೆ ಮತ್ತು ಲಭ್ಯತೆ, ಕೊಟೇಶನ್ ಮತ್ತು ಖರೀದಿ ಇಂತಹ ಕೆಲಸಗಳನ್ನು ಆರ್ಟ್-ಟೂ-ಪಾರ್ಟ್ ಟೈಮ್ ಲೈನ್ ನ ವೇಗವನ್ನು ಹೆಚ್ಚಿಸುತ್ತದೆ.
• ಸಂಪೂರ್ಣವಾಗಿ ಆಂತಾರಾಷ್ಟ್ರೀಯ ಮಶಿನಿಂಗ್ ಸಮೂಹಕ್ಕೋಸ್ಕರ ಮುಕ್ತ, ತಟಸ್ಥ, ಎಲ್ಲರಿಗೂ ಲಭಿಸಬಲ್ಲ ವೇದಿಕೆ.
• ಕೆಲಸದ ವ್ಯವಸ್ಥಾಪಕ (ಜಾಬ್ ಮ್ಯಾನೆಜರ್) : ತಮ್ಮ ಟೂಲಿಂಗ್ ಪೇಕೇಜ್ ಭವಿಷ್ಯತ್ಕಾಲಕ್ಕೋಸ್ಕರ ಸಂದರ್ಭವೆಂದು ಮತ್ತು ಬಳಕೆಗೆ ಮಶಿನಿಂಗ್ ಕ್ಲೌಡ್ ನಲ್ಲಿ ಸುರಕ್ಷಿತವಾಗಿ ಕಾಪಾಡಿ ಇಡಲಾಗುತ್ತದೆ. ತಮ್ಮ ಸಂಪೂರ್ಣ ಕೆಲಸ ತಂಡದೊಂದಿಗೆ ಅದನ್ನು ಹಂಚಿಕೊಳ್ಳಿರಿ ಮತ್ತು ಸಹಭಾಗಿಗಳಾಗಿ ಕೆಲಸ ನಿರ್ವಹಿಸಿರಿ. ತಮ್ಮ ಡೆಸ್ಕ್ ಟಾಪ್ ಅಥವಾ ಟ್ಯಾಬ್ ಲೆಟ್ ನಲ್ಲಿ ಎಲ್ಲಿಯೂ ಯಾವಾಗಲೂ ಎಕ್ಸೆಸ್ ಮಾಡಬಹುದಾಗಿದೆ.
• ಲಾಭಗಳು : ತಮ್ಮ ಟೂಲಿಂಗ್ ಪೆಕೇಜ್ ನ ವ್ಯವಸ್ಥಾಪನೆ ಮತ್ತು ಹಂಚಿಕೊಳ್ಳುವಿಕೆಯು ಸುಲಭವಾಗಿ ಆಗುತ್ತದೆ. ಖರೀದಿ, ಪ್ರೊಗ್ರಾಮಿಂಗ್, ಇನ್ವೆಂಟರಿ, ಪ್ರಿ-ಸೆಟಿಂಗ್ ಮತ್ತು ಯಂತ್ರಣೆಗೆ ಸುಲಭವಾದ ಎಕ್ಸೆಸ್.
• ವರದಿ : ಕೆಲಸದ ವರದಿಯು ಪಿಡಿಎಫ್ ಮತ್ತು ಎಕ್ಸೆಲ್ ನಲ್ಲಿ ಲಭಿಸುತ್ತದೆ. ಬಿಲ್-ಆಫ್-ಮಟೀರಿಯಲ್ ನಲ್ಲಿ 3D ಟೂಲ್ ಡ್ರಾಯಿಂಗ್, ಸ್ಪೇರ್ ಪಾರ್ಟ್, ಕಾಲ್ಔಟ್, ವಿವರಣೆಗಳಿಂದ ಕೂಡಿರುವ ಮತ್ತು ಬಳಕೆಯ ಕುರಿತಾದ ಮಾಹಿತಿಯು ಒಳಗೊಂಡಿದೆ.
• ಲಾಭಗಳು : ತಮ್ಮ ಟೂಲಿಂಗ್ ಪೆಕೇಜ್ ನ ಸ್ಪಷ್ಟವಾದ ಡಾಕ್ಯುಮೆಂಟೇಶನ್ ಮಾಡುವುದು.
ಉತ್ಪಾದನೆಗಳ ಮಾಹಿತಿಯನ್ನು ನೇರವಾಗಿ ತಮ್ಮ ಕೆಲಸದ ಜಾಗದಲ್ಲಿಯೇ ಡೌನ್ ಲೋಡ್ ಮಾಡಿರಿ.
• ಕಟಿಂಗ್ ವೇಗ ಮತ್ತು ಫೀಡ್ ರೇಟ್ : ನಿರ್ಮಾಪಕರು ಸೂಚಿಸಿರುವ ಕಟಿಂಗ್ ವೇಗ ಮತ್ತು ಫೀಡ್ ರೇಟ್ ಸಹಜವಾಗಿ ಉಪಲಬ್ಧವಾಗುವುದರಿಂದ ಕಟಿಂಗ್ ವೇಗ ಮತ್ತು ಫೀಡ್ ರೇಟ್ ಹುಡುಕುವ ರೀತಿಯನ್ನು ತೆಗೆಯುತ್ತದೆ, ಅಲ್ಲದೇ ಸಮಯವನ್ನೂ ಉಳಿಸುತ್ತದೆ.
• ISO ಪ್ಲಸ್ : ಸ್ಟ್ಯಾಂಡರ್ಡ್ ಗಳು, ISO 13399, STEP, GTC, DIN 4000 ಮತ್ತು MTC ಕನೆಕ್ಟ್ ಇವುಗಳ ಬಳಕೆ.
• ಲಾಭಗಳು : ನಿರ್ಮಾಪಕರಿಂದ ಉತ್ಪಾದಿಸಲಾಗುವ ಉತ್ಪಾದನೆಗಳ ವಿವರಣೆ, ಬಳಕೆ ಮತ್ತು ಜಾಮೆಟ್ರಿಕಲ್ ಮಾಹಿತಿಯು ಡಿಜಿಟಲ್ ರೂಪದಲ್ಲಿ ಸಹಜವಾಗಿ ಲಭ್ಯವಾಗುತ್ತದೆ.
• ಸಮಯವನ್ನು ಉಳಿಸಲು ಮತ್ತು ನಿರ್ದೋಷತ್ವವನ್ನು ವೃದ್ಧಿಸಲು ಸುಲಭವಾದ ಉಪಾಯಗಳು - ಕೇವಲ ಒಂದೇ ಕ್ಷಣದಲ್ಲಿ ಲಭ್ಯ!
• ತಮಗೆ ಬೇಕಾಗಿರುವ ಟೂಲ್ ಚುನಾಯಿಸಿರಿ.
• ತಮಗೆ ಬೇಕಾಗಿರುವ ಅಸೆಂಬ್ಲಿಯನ್ನು ತಯಾರಿಸಿರಿ.
• ಸ್ಟಾಕ್ ನ ಉಪಲಬ್ಧತೆಯನ್ನು ಸರಿಹೊಂದಾಣಿಸಿ ನೋಡಿರಿ.
• ಕಟಿಂಗ್ ವೇಗ ಮತ್ತು ಫೀಡ್ ರೇಟ್ ನ ಸೂಚನೆಗಳನ್ನು ಪಡೆಯಿರಿ.
• ಡಾಟಾ ಡೌನ್ ಲೋಡ್ ಮಾಡಿರಿ.
• ತಮ್ಮ ಕೆಲಸದ ತಂಡದೊಂದಿಗೆ ಹಂಚಿಕೊಳ್ಳಿರಿ.
ಫೋರ್ಬ್ಸ್ ಅ್ಯಂಡ್ ಕಂಪನಿ ಲಿಮಿಟೆಡ್ ಮತ್ತು ಮಶಿನಿಂಗ್ ಕ್ಲೌಡ್ ಇವರು ಫೋರ್ಬ್ಸ್ ಉತ್ಪಾದನೆಗಳ ಮಾಹಿತಿಯನ್ನು ಕ್ಲೌಡ್ ನಲ್ಲಿ ಉಪಲಬ್ಧ ಮಾಡಿ ಕೊಡಲು ಪಾಲುಗಾರಿಕೆಯನ್ನು ಮಾಡಿದ್ದಾರೆ. ಔದ್ಯೋಗಿಕ ಅಪ್ಲಿಕೇಶನ್ ನಲ್ಲಿರುವ ಥ್ರೆಡಿಂಗ್, ಮಿಲ್ಲಿಂಗ್, ಡ್ರಿಲ್ಲಿಂಗ್ ಮತ್ತು ಡಿಬರಿಂಗ್ ಇಂತಹ ಕೆಲಸಗಳಿಗೋಸ್ಕರ, ಟೋಟೆಮ್ ಎಂಬ ಬ್ರ್ಯಾಂಡ್ ಹೆಸರನ್ನು ಇಟ್ಟುಕೊಂಡು ಫೋರ್ಬ್ಸ್ ಕಂಪನಿಯವರು ತುಂಬಾ ಪ್ರಿಸಿಜನ್ ರೂಪದಲ್ಲಿರುವ ಇಂಜಿನಿಯರಿಂಗ್ ಟೂಲ್ ಗಳ ನಿರ್ಮಿತಿಯನ್ನು ಮಾಡುತ್ತಾರೆ.
ಮಶಿನಿಂಗ್ ಕ್ಲೌಡ್ ಇದು ಕಟಿಂಗ್ ಟೂಲ್, ಸಿ.ಎನ್.ಸಿ. ಮಶಿನ್ ಮತ್ತು ಕಾರ್ಯವಸ್ತುಗಳನ್ನು ಹಿಡಿಯುವ ಸಾಮಗ್ರಿಗಳಿಗೆ ಉತ್ಪಾದನೆಯ ಡಾಟಾ ನೀಡುವಲ್ಲಿ ಇಂಟರ್ ಫೇಸ್ ಆಗಿರುತ್ತದೆ. ಪ್ರಾರಂಭದಲ್ಲಿ ಇದೊಂದು ಅಪ್ಲಿಕೇಶನ್ ಎಂಬುದಾಗಿ ಲಭ್ಯವಾಗುತ್ತದೆ. ಆದರೆ ಯಾವ ಸಂಸ್ಥೆಗಳಲ್ಲಿ ಐಟಿ ನೀತಿಗಳಿಗೆ ಅನುಸಾರವಾಗಿ ಥರ್ಡ್ ಪಾರ್ಟಿ ಸಾಫ್ಟ್ ವೇರ್ ಮತ್ತು ಅಪ್ಲಿಕೇಶನ್ ಡೌನ್ ಲೋಡ್ ಮಾಡಲು ಮನ್ನಣೆ ಇರಲಿಲ್ಲ, ಅವರಿಗೆ ಇದನ್ನು ಬಳಸುವಲ್ಲಿ ಅನೇಕ ವಿಧದ ಅಡಚಣೆಗಳನ್ನು ಎದುರಿಸಬೇಕಾಗುತ್ತಿತ್ತು. ಆದರೂ ಕೂಡಾ ಇತ್ತೀಚೆಗೆ ಪ್ರಾರಂಭಿಸಿರುವ ವೆಬ್ ಸೀರೀಸ್ ನಲ್ಲಿ ಇಂತಹ ಸಮಸ್ಯೆಗಳನ್ನು ನೀಗಿಸಲಾಗಿದೆ.
ಫೋರ್ಬ್ಸ್ ಮತ್ತು ಮಶಿನಿಂಗ್ ಕ್ಲೌಡ್ ಇವರ ಪಾಲುಗಾರಿಕೆಯು ಕ್ಲೌಡ್ ಗೆ ಆಧರಿಸಿರುವ ತಂತ್ರಜ್ಞಾನದ ಸೌಲಭ್ಯವನ್ನು ಬಳಸಬಲ್ಲದು. ಇದರಿಂದಾಗಿ ಅವರಲ್ಲಿರುವ ಕಟಿಂಗ್, ಪರಿಸ್ಥಿತಿಗೆ ಯೋಗ್ಯವಾದಂತಹ ಕಟಿಂಗ್ ಟೂಲ್ ನ್ನು ಶೋಧಿಸಲು ಒಂದಕ್ಕಿಂತ ಹೆಚ್ಚು ಕೆಟ್ಯಾಲಾಗ್ ಅಥವಾ ವೆಬ್ ಸೈಟ್ ನಲ್ಲಿ ಸಂಶೋಧನೆಯನ್ನು ಮಾಡಲು ಗ್ರಾಹಕರ ಆವಶ್ಯಕತೆಯೂ ಸದ್ಯಕ್ಕೆ ಕಡಿಮೆಯಾಗಬಲ್ಲದು ಮತ್ತು ಅವರಲ್ಲಿ ಉತ್ಪಾದನೆಗಳ ನಿರ್ಮಾಣದ ಕೆಲಸಕ್ಕೆ ಉಪಯುಕ್ತವಾದ ಮಾಹಿತಿಯನ್ನು ಸಂಗ್ರಹಿಸುವುದೂ ಸುಲಭವಾಗಬಲ್ಲದು.

ಮಶಿನಿಂಗ್ ಕ್ಲೌಡ್ ನ ಬಳಕೆಸುವವರ ಪ್ರತಿಕ್ರಿಯೆ
ಜಗತ್ತಿನಾದ್ಯಂತ ಇರುವ ನಮ್ಮ ಗ್ರಾಹಕರು ಮಶಿನಿಂಗ್ ಕ್ಲೌಡ್ ಬಳಸುತ್ತಾರೆ. ಇದನ್ನು ಬಳಸಿ ಗ್ರಾಹಕರಿಗೆ ಲಭಿಸುವ ಲಾಭಗಳು ಈ ಕೆಳಗಿನಂತಿವೆ.
• ನಮ್ಮ ಒಬ್ಬ ಬಳಕೆಗಾರರು ಟೂಲ್ ಜಾಮೆಟ್ರಿ, ESPRIT ಯಲ್ಲಿ ರಫ್ತು ಮಾಡುವ ಒಂದು ವಿಶೇಷವಾದ ಫೀಚರ್ ಯಾವಾಗಲೂ ಬಳಸುತ್ತಾರೆ. ಟೂಲ್ ನ ಡೈಮೆನ್ಶನ್ ಪರೀಕ್ಷಿಸಲು ಕೂಡಾ ಇದನ್ನು ಉಪಯೋಗಿಸುತ್ತಾರೆ. ಅವರ ಲೈಬ್ರರಿ ಸುಸಜ್ಜವಾಗಿ ಇರುವುದನ್ನು ಖಾತರಿ ಮಾಡುತ್ತಾರೆ. ಇಲ್ಲದಿದ್ದಲ್ಲಿ ಟೂಲ್ ಜಾಮೆಟ್ರಿಯನ್ನು ತಯಾರಿಸುವುದು ಅವರಿಗೋಸ್ಕರ ಕಠಿಣವಾದ ಕ್ರಿಯೆಯಾಗಿದ್ದು, ಇದರಿಂದ ಸಹಜವಾಗಿ ಗಡಿಬಿಡಿಯಾಗಬಲ್ಲದು.
• ಇನ್ನೊಬ್ಬ ಗ್ರಾಹಕರು ಹೇಳುತ್ತಾರೆ, “ಒಂದು ವೇಳೆ ಯಾವುದೇ ಯಂತ್ರಭಾಗವನ್ನು ನಾವು ತಯಾರಿಸುತ್ತಿದ್ದರೂ ಕೂಡಾ, ನಮ್ಮಲ್ಲಿ ಯಾವುದೇ ರೀತಿಯ ವೈಶಿಷ್ಟ್ಯಪೂರ್ಣವಾಗಿರುವ ಟೂಲ್ ಇದ್ದಲ್ಲಿ, ನಾವು ಅದನ್ನು ಕ್ಲೌಡ್ ನಲ್ಲಿ ಸಂಗ್ರಹಿಸಿರುತ್ತೇವೆ (ಸೇವ್ ಮಾಡುತ್ತೇವೆ). ಆರು ತಿಂಗಳ ನಂತರ ನಮಗೆ ಯಾವುದೊಂದು ಇನ್ಸರ್ಟ್ ಸ್ಕ್ರೂ ಅಥವಾ ಯಾವುದೇ ವಿವರವನ್ನು ಹುಡುಕುವ ಅಗತ್ಯವಿದ್ದಲ್ಲಿ, ಅದನ್ನು ನಾವು ಕ್ಲೌಡ್ ನಿಂದ ಸಹಜವಾಗಿ ಪಡೆಯಬಲ್ಲೆವು ಅಲ್ಲದೇ ಅದನ್ನು ವಿಶ್ಲೇಷಣೆಯೊಂದಿಗೂ ಪಡೆಯಬಲ್ಲೆವು.”
 
• ನಮ್ಮ ಗ್ರಾಹಕರೊಬ್ಪರು ಕಟಿಂಗ್ ಟೂಲ್ ನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಶೇಕಡಾ 60 ರಷ್ಟು ಸಮಯನ್ನು ಉಳಿಸಿದರು. ಈ ಉಳಿಕೆಯು ಕೇವಲ ಸಹಜತೆಯಿಂದ ಅಲ್ಲದೇ ಇಲ್ಲಿ ಪಡೆಯಬಹುದಾದ ಕಟಿಂಗ್ ಕುರಿತಾದ ಸೂಕ್ತ ಮತ್ತು ವಿಸ್ತಾರವಾದ ಮಾಹಿತಿಯ ಲಭ್ಯತೆಯಿಂದ ಸಾಧ್ಯವಾಯಿತು. ವಿಶ್ವಾಸಾರ್ಹವಾದ ಅಪ್ಲಿಕೇಶನ್ ಕೂಡಾ ಇದರ ಪರಿಣಾಮವೆಂಬುದು ಗಮನಾರ್ಹ ಅಂಶ. ಅಸೆಂಬ್ಲಿ ಸರಿಯಾಗಿ ಮಾಡಿಬಹುದು, ಎಂಬುದರ ಕುರಿತು ಅವರಿಗೆ ಖಾತರಿ ಇರುತ್ತದೆ. ಡಿಸೈನ್ ಮಾಡಿರುವ ಯಂತ್ರಭಾಗ ಮತ್ತು ಆಯ್ಕೆ ಮಾಡಿರುವ ಟೂಲ್ ನ ಕಾಪಾಡುವ ಸಾಮರ್ಥ್ಯ, ಶೇರಿಂಗ್ ಮತ್ತು ಸಹಕಾರಕ್ಕೋಸ್ಕರ ಹೆಚ್ಚು ಉಪಯುಕ್ತವಾಗಿದೆ. ಅವರ ಹೇಳಿಕೆಯಂತೆ, “ನನಗೆ ಹೀಗೂ ಅನಿಸುತ್ತದೆ, ಒಂದಕ್ಕಿಂತ ಹೆಚ್ಚು ಉತ್ಪಾದಕರೊಂದಿಗೆ ಕೆಲಸ ಮಾಡುವವರಿಗೆ ಇದೊಂದು ಅತ್ಯಮೂಲ್ಯವಾದ ಸಾಮಗ್ರಿಯಾಗಿದೆ. ಇದರಿಂದ ಮಾಹಿತಿಯನ್ನು ಶೇಖರಿಸುವುದು ಅತ್ಯಂತ ಸುಲಭವಾಗುತ್ತದೆ. ಎಲ್ಲವೂ ಒಂದೇ ಜಾಗದಲ್ಲಿ ಲಭ್ಯವಾಗಿರುವುದು, ನಮಗೆ ಹೆಚ್ಚು ಲಾಭಕಾರಿಯಾಯಿತು. ಕಟಿಂಗ್ ಪ್ಯಾರಾಮೀಟರ್ ಒಂದು ಜಾಗದಲ್ಲಿ ನೋಡಿದಲ್ಲಿ, ಯಂತ್ರಭಾಗಗಳ ಕ್ರಮಾಂಕವನ್ನು ಇನ್ನೊಂದೆಡೆ ಹುಡುಕಬೇಕಾಗುವುದಿಲ್ಲ. ನಮಗೆ ಆವಶ್ಯಕವಿರುವ ಎಲ್ಲ ಅಂಶಗಳು ಒಂದೇ ಜಾಗದಲ್ಲಿ ಸಿಗುತ್ತವೆ.”
 
• ಯಾಮಾಝಾಕಿ ಮಝಾಕ್ ಎಂಬ ಕಂಪನಿಯೊಂದಿಗೆ ನಮ್ಮ ದೃಢ ಸಂಬಂಧಗಳಿರುವ ಪಾಲುಗಾರಿಕೆ ಇದೆ. ಮಝಾಕ್ ಕಂಪನಿಯ ಪ್ರಧಾನ ವ್ಯವಸ್ಥಾಕರು ಹೇಳುತ್ತಾರೆ, “ಮಶಿನಿಂಗ್ ಕ್ಲೌಡ್ ನೊಂದಿಗೆ ಮಾಡಿರುವ ಪಾಲುಗಾರಿಕೆಯಿಂದಾಗಿ ಮಝಾಕ್ ಇವರ ಮಶಿನ್ ಗಳಲ್ಲಿ ಬಳಸಲಾಗುವ ಟೂಲ್ ಹೋಲ್ಡರ್ ಗಳಿಗೆ ಸಂಬಂಧಪಟ್ಟ ಎಲ್ಲ ರೀತಿಯ ತಾಂತ್ರಿಕ ಮಾಹಿತಿಯನ್ನು ನಮ್ಮ ಗ್ರಾಹಕರಿಗೆ ನೀಡುವುದು ಸುಲಭವಾಗಬಲ್ಲದು, ಅಲ್ಲದೇ ಗ್ರಾಹಕರು ಅದರಿಂದ ಅನೇಕ ರೀತಿಯ ಲಾಭಗಳನ್ನು ಪಡೆಯಬಲ್ಲರು.”
 
• ಮಶಿನಿಂಗ್ ಕ್ಲೌಡ್ ಇಂತಹ ಒಂದೇ ಮೂಲವನ್ನು ಬಳಸಿ VERICUT ಬಳಕೆಗಾರರು ಒಂದಕ್ಕಿಂತ ಹೆಚ್ಚು ಮಾರಾಟಗಾರರಿಂದ ಕಟಿಂಗ್ ಟೂಲ್ ನ ನಿಖರವಾದ 3D ಮಾಡೆಲ್ ಮತ್ತು ಉತ್ಪಾದಕರು ಶಿಫಾರಸು ಮಾಡಿರುವ ಫೀಡ್ ರೇಟ್ ಅಥವಾ ಕಟಿಂಗ್ ವೇಗದ ಮಾಹಿತಿಯನ್ನು ಸುಲಲಿತವಾಗಿ ಪಡೆಯಬಲ್ಲರು. VERICUT ನ ಮಶಿನಿಂಗ್ ಕ್ಲೌಡ್ ನೊಂದಿಗಿರುವ ಸಂಬಂಧಗಳಿಂದಾಗಿ ‘ಸ್ಮಾರ್ಟ್’ ಟೂಲ್ ಗಳನ್ನು ಬಳಸಿ ಸಿಮ್ಯುಲೇಶನ್ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಟೂಲ್ ಗಳನ್ನು ತಪ್ಪಾದ ರೀತಿಯಲ್ಲಿ ಅಥವಾ ಅದರ ನಿಗದಿತ ಬಳಕೆಯ ರೇಂಜ್ ನ ಹೊರಗೆ ಬಳಸಲಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪ್ರೊಗ್ರಾಮರ್ ಗೆ ಮುನ್ನೆಚ್ಚರಿಕೆಯನ್ನು ನೀಡಲಾಗುತ್ತದೆ ಮತ್ತು ಫೀಡ್ ರೇಟ್ ನ ಮೌಲ್ಯವನ್ನು ಆಪ್ಟಿಮೈಸ್ ಮಾಡಲು ಸೆಟಪ್ ಮುಂಗಡವಾಗಿಯೇ ಕಾನ್ಫಿಗರ್ ಮಾಡಬಹುದು.
 
ಇನ್ನಷ್ಟು ವಿವರಗಳಿಗೋಸ್ಕರ ಈ ಮುಂದಿನ ಲಿಂಕ್ ಗೆ ಕ್ಲಿಕ್ ಮಾಡಿರಿ.
 
http://www.machiningcloud.com/app/
Powered By Sangraha 9.0