ಮೂಲೆಗಳ ನಿರ್ದೋಷವಾದ ಯಂತ್ರಣೆ

01 Mar 2021 10:16:47
ಸಿ.ಎನ್.ಸಿ. ಮಶಿನ್ ನಲ್ಲಿ ಕಾರ್ಯವಸ್ತುಗಳ ಚೂಪಾಗಿರುವ ಮೂಲೆಗಳ (ಶಾರ್ಪ್ ಕಾರ್ನರ್) ಯಂತ್ರಣೆಯನ್ನು ಮಾಡಲು ಕೇವಲ ಪ್ರೊಗ್ರಾಮ್ ಮಾಡಿ ಮತ್ತು ಅದನ್ನು ರನ್ ಮಾಡಿದಲ್ಲಿ ಚೂಪಾಗಿರುವ ಮೂಲೆಗಳು ಲಭ್ಯವಾಗುವುದಿಲ್ಲ. ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಚೂಪಾಗಿರುವ ಮೂಲೆಗಳಿಗೋಸ್ಕರ ಟೂಲ್ ಪಾಥ್ ಪ್ರೊಗ್ರಾಮ್ A-B-C ಈ ಮುಂದಿನಂತೆ ಮಾಡಬೇಕು. ಟೂಲ್ ಮೊದಲಾಗಿ A ಯಿಂದ B ಯ ತನಕ ಹೋಗುತ್ತದೆ. ನಂತರ B ಯಿಂದ C ತನಕ ಹೋಗುತ್ತದೆ. ಆದರೆ ಪ್ರತ್ಯಕ್ಷವಾಗಿ ಮಶಿನ್ ನಲ್ಲಿ ಉಂಟಾಗುವ ಚಟುವಟಿಕೆಗಳ ಅಕ್ಷವು ತಕ್ಷಣ ನಿಲ್ಲುವುದಿಲ್ಲ. ಅದು ನಿಧಾನವಾಗಿ ನಿಲ್ಲುತ್ತದೆ. ಚಿತ್ರ ಕ್ರ. 1 ರಲ್ಲಿ Y ಅಕ್ಷ ಸಂಪೂರ್ಣವಾಗಿ ನಿಲ್ಲುವ ಮುಂಚೆಯೇ X ಅಕ್ಷದ ಚಲನೆಯ ಪ್ರಾರಂಭವಾಗುತ್ತದೆ. ಇದರಿಂದಾಗಿ ಕಾರ್ಯವಸ್ತುವಿನಲ್ಲಿ ಯಾವ ಜಾಗದಲ್ಲಿ ಚೂಪಾಗಿರುವ ಮೂಲೆಗಳು ಬೇಕಾಗಿವೆಯೋ, ಅಲ್ಲಿ ವರ್ತುಲಾಕಾರದ ಆಕಾರವು ತಯಾರಾಗುತ್ತದೆ.
ಚೂಪಾಗಿರುವ ತುದಿಗಳನ್ನು ನಿರ್ಮಿಸಲು G09 ಕಮಾಂಡ್ ಬಳಸಬಹುದು. ಈ ಮುಂದಿನ ಪ್ರೊಗ್ರಾಮ್ ವೀಕ್ಷಿಸಿರಿ.

1_1  H x W: 0 x 
 
G91 G01 X100 Y100
ಈ ಲೈನ್ ಕಾರ್ಯಗತವಾಗುವಾಗ ಕಾರ್ಯವಸ್ತುವಿನಲ್ಲಿ ಚೂಪಾಗಿರುವ ಮೂಲೆಗಳು ಲಭಿಸುವುದಿಲ್ಲ. ಕಾರಣ Y ಮೋಟರ್ ನಿಲ್ಲುವ ಮುಂಚೆ X ಮೋಟರ್ ಶುರು ಆಗುತ್ತದೆ. ಈಗ ಮುಂದಿನ ಲೈನ್ ನೋಡಿರಿ. ಇದರಲ್ಲಿ G09 ಬಳಸಲಾಗಿದೆ.
G91 G09 X100 Y100
G09 ಈ ಕಮಾಂಡ್ ಮೊದಲ Y ಮೋಟರ್ ನಿಲ್ಲಿಸುತ್ತದೆ. ಅದರ ನಂತರ X ಮೋಟರ್ ಪ್ರಾರಂಭವಾಗುತ್ತದೆ. ಈ ರೀತಿ ಮಾಡಿದ್ದರಿಂದ ತಮಗೆ ಬೇಕಾಗಿರುವ ಚೂಪಾಗಿರುವ ಮೂಲೆಯು ಸಿಗುತ್ತದೆ.
ಸೂಚನೆ : G09 ಬಳಸುವುದರಿಂದ ಸೈಕಲ್ ಟೈಮ್ ಹೆಚ್ಚುತ್ತದೆ.
• G09 ಯಾವ ಬ್ಲಾಕ್ ನಲ್ಲಿ ಪ್ರೊಗ್ರಾಮ್ ಮಾಡಲಾಗಿದೆಯೇ, ಆ ಬ್ಲಾಕ್ ನಲ್ಲಿ ಮಾತ್ರ ಎಕ್ಟಿವ್ ಆಗಿರುತ್ತದೆ.
• ಚೂಪಾಗಿರುವ ಮೂಲೆಗಳು ಬೇಕಾಗಿರುವಲ್ಲಿ G09 ಬಳಸುವುದು ಹೆಚ್ಚು ಲಾಭಕಾರಿಯಾಗಿರುತ್ತದೆ (ಚಿತ್ರ ಕ್ರ. 2)
 
1_1  H x W: 0 x
 
ಪ್ರೊಗ್ರಾಮ್ ಫಾರ್ಮೆಟ್
G09 X/U.. Z/W-D/R.FESB..M.
G10 ಕೋಡ್ ಫಾನುಕ್
ಸಿ.ಎನ್.ಸಿ. ಮಶಿನ್ ಪ್ರೊಗ್ರಾಮೆಬಲ್ ಆಫ್ ಸೆಟ್ ಸೆಟಿಂಗ್
ಹೆಚ್ಚಿನ ಎಲ್ಲ ಸಿ.ಎನ್.ಸಿ. ನಿಯಂತ್ರಕಗಳಲ್ಲಿ ಟೂಲ್ ಆಫ್ ಸೆಟ್ ಸೆಟಿಂಗ್ ಮತ್ತು ಝೀರೋ ಆಫ್ ಸೆಟ್ ಸೆಟಿಂಗ್ (ವರ್ಕ್ ಶಿಫ್ಟ್ ವ್ಯಾಲ್ಯೂ, ಮಶಿನ್ ಝೀರೋ ಆಫ್ ಸೆಟ್ ವ್ಯಾಲ್ಯೂ ಮುಂತಾದವುಗಳು) ಮುಂದಿನ ಪುಟದಲ್ಲಿ ನೀಡಲಾಗಿರುತ್ತವೆ. ಸಿ.ಎನ್.ಸಿ. ಪ್ರೊಗ್ರಾಮ್ ನಿಂದ ಪ್ರೊಗ್ರಾಮರ್ ವ್ಯಾಲ್ಯೂ ಸೇರಿಸಬಲ್ಲನು. ಆದರೆ ಫಾನುಕ್ ನಿಯಂತ್ರಕದಲ್ಲಿ G10 ಎಂಬ ಸ್ವತಂತ್ರ G ಕೋಡ್ ಈ ಕೆಲಸಕ್ಕೋಸ್ಕರ ನೀಡಲಾಗಿರುತ್ತದೆ. ಇದಕ್ಕೆ ಪ್ರೊಗ್ರಾಮೆಬಲ್ ಆಫ್ ಸೆಟ್ ಸೆಟಿಂಗ್ ಎಂದು ಹೇಳಲಾಗುತ್ತದೆ.
ಸಿ.ಎನ್.ಸಿ. ಲೇಥ್ ಅಥವಾ ಮಿಲ್ಲಿಂಗ್ ಮಶಿನ್ ನಲ್ಲಿ ಎರಡು ವಿಧದ ಆಫ್ ಸೆಟ್ ಸೆಟಿಂಗ್ ಮಾಡುವುದು ಸಾಧ್ಯ.
1. ಟೂಲ್ ಅಥವಾ ಕಟರ್ ಆಫ್ ಸೆಟ್ ಸೆಟಿಂಗ್
2. ವರ್ಕ್ ಶಿಫ್ಟ್ ಸೆಟಿಂಗ್
G10 ಬಳಸಿ ಈ ಎರಡೂ ವಿಧದ ಕೆಲಸಗಳನ್ನು ನಿರ್ವಹಿಸಬಹುದು.
ಫಾನುಕದಲ್ಲಿ P00 – ಅಂದರೆ ವರ್ಕ್ ಶಿಫ್ಟ್ ವ್ಯಾಲ್ಯೂ ಸೆಟ್ ಮಾಡಬೇಕಾಗಿದೆ. ಇದು ನಿಯಂತ್ರಕಕ್ಕೆ ತಿಳಿಯುತ್ತದೆ. X ಅಕ್ಷದ ವ್ಯಾಲ್ಯೂ ಸಾಮಾನ್ಯವಾಗಿ ಸೊನ್ನೆ ಎಂಬುದಾಗಿ ನಿರ್ಧರಿಸಲಾಗುತ್ತದೆ (ಸೆಟ್ ಮಾಡಲಾಗುತ್ತದೆ). ಹಾಗೆಯೇ Z ಅಕ್ಷ ಅಕ್ಷದ ವ್ಯಾಲ್ಯೂ ಅಂದರೆ ಮಶಿನ್ ಝೀರೋ ಪಾಯಿಂಟ್ ನಿಂದ ಕಾರ್ಯವಸ್ತು ಝೀರೋ ಪಾಯಿಂಟ್ ನ ತನಕದ ದೂರ. ಈ ದೂರವನ್ನೇ ವರ್ಕ್ ಶಿಫ್ಟ್ ಅಥವಾ ಝೀರೋ ಆಫ್ ಸೆಟ್ ಎಂಬುದಾಗಿ ಕರೆಯಲಾಗುತ್ತದೆ.
ಪ್ರೊಗ್ರಾಮ್
N10 G10 P00 X0 Z 200
ಈ ಲೈನ್ ನಲ್ಲಿ ಅಕ್ಷದ ವ್ಯಾಲ್ಯೂ ಝೀರೋ ಇದೆ ಮತ್ತು ಅಕ್ಷದ ವ್ಯಾಲ್ಯೂ ಮಶಿನ್ ಝೀರೋ ಪಾಯಿಂಟ್ ನಿಂದ 200 ಮಿ.ಮೀ.ಇದೆ.
G10 ಬಳಸಿ ಟೂಲ್ ವೇರ್
ಪ್ರೊಗ್ರಾಮ್
N10 G10 P1 U0.02 W0.02
ಇದರಲ್ಲಿ P ಯ ಮುಂದೆ ಹೋಗುವ ಅಂಕೆಯಲ್ಲಿ ಟೂಲ್ ಬದಲಾಯಿಸಬೇಕಾಗಿರುವ ಟೂಲ್. ಇದರ G10 ಕೋಡ್ ನಿಂದಾಗಿ ನೀಡಿರುವ ವ್ಯಾಲ್ಯೂ, ಟೂಲ್ ವೇರ್ ಆಫ್ ಸೆಟ್ ನಲ್ಲಿ ಅಳವಡಿಸಲಾಗುತ್ತದೆ.
P1 : ವರ್ಕ್ ಶಿಫ್ಟ್ ವ್ಯಾಲ್ಯೂ ಟೂಲ್ ನಂಬರ್ 1 ಕ್ಕೆ ಬದಲಾಯಿಸಬೇಕು. ವ್ಯಾಲ್ಯೂ U ಮತ್ತು W ಅಡ್ರೆಸ್ ಈ ಮುಂದೆ ನೀಡಲಾಗಿದೆ.

3_1  H x W: 0 x
ಟೂಲ್ ಆಫ್ ಸೆಟ್ ಸೆಟಿಂಗ್ ಅಥವಾ ಟೂಲ್ ಜಾಮೆಟ್ರಿ
ಆಫ್ ಸೆಟಿಂಗ್ ಫಾನುಕದಲ್ಲಿರುವ G10 ಬಳಸಿ
G10 ನಿಂದ ಟೂಲ್ ಆಫ್ ಸೆಟ್ ಸೆಟಿಂಗ್ ಮಾಡಬಹುದಾಗಿದೆ. ಒಂದು ವೇಳೆ ಟೂಲ್ ನಂಬರ್ 8 ರ ಟೂಲ್ ಆಫ್ ಸೆಟ್ ಸೆಟಿಂಗ್ ಮಾಡಬೇಕಾಗಿದ್ದಲ್ಲಿ, 10,000 ನಲ್ಲಿ 8 ಕೂಡಿಸಿದಾಗ 10,000+8=10,008 ಆಗುತ್ತದೆ.
ಪ್ರೊಗ್ರಾಮ್
N10 G10 P10,008 X 95 Z54
(10,000 ಈ ವ್ಯಾಲ್ಯೂ ಫಾನುಕ ನಿಯಂತ್ರಕದಿಂದ ನಿರ್ಧರಿಸಲಾಗಿದೆ. P 10,000 ಅಂದರೆ ಟೂಲ್ ಜಾಮೆಟ್ರಿ ಆಫ್ ಸೆಟಿಂಗ್/ ಟೂಲ್ ಆಫ್ ಸೆಟ್ ಸೆಟಿಂಗ್ ನಲ್ಲಿ ವ್ಯಾಲ್ಯೂ ಅಳವಡಿಸವುದು. ಈ ಮುಂದೆ ಕಂಡುಬರುವ ಅಂಕೆಗಳು ಯಾವ ಟೂಲ್ ಕುರಿತು ಈ ವ್ಯಾಲ್ಯೂ ಸೇರಿಸಬೇಕೋ, ಆ ಟೂಲ್ ನ ನಂಬರ್ ಆಗಿರುತ್ತದೆ).
G15/ G16 ಪೋಲರ್ ಕೋಆರ್ಡಿನೆಟ್ ಕಮಾಂಡ್
G15 ಮತ್ತು G16 ತಿಳಿದುಕೊಳ್ಳುವ ಮುಂಚೆ ಪೋಲರ್ ಮತ್ತು ಕಾರ್ಟೇಶಿಯನ್ ಕೊಆರ್ಡಿನೆಟ್ ಅಂದರೆ ಏನು ಎಂಬುದನ್ನು ತಿಳಿದುಕೊಳ್ಳೋಣ.
ಈ ತನಕ ಕೇವಲ ಕಾರ್ಟೇಶಿಯನ್ ಕೊಆರ್ಡಿನೆಟ್ ನಲ್ಲಿ ಕೆಲಸ ಮಾಡಲಾಗಿದೆ. ಇದರಲ್ಲಿ X, Y, Z ಅಕ್ಷದ ಮುಂದೆ ನೀಡಿರುವ ದೂರವನ್ನು ಪಾರ್ಟ್ ಝೀರೋ (ಎಬ್ ಸಲ್ಯೂಟ್ ಕೊಆರ್ಡಿನೆಟ್) ಅಥವಾ ಪ್ರಸ್ತುತ ಪೋಸಿಶನ್ ನಿಂದ ನೀಡಲಾಗಿರುತ್ತದೆ. ಹೆಚ್ಚಾಗಿ G ಕೋಡ್ ಪ್ರೊಗ್ರಾಮಿಂಗ್ ಕಾರ್ಟೇಶಿಯನ್ ಕೊಆರ್ಡಿನೆಟ್ ಬಳಸಿ ಮಾಡಲಾಗುತ್ತದೆ. ಆದರೆ ಹಲವಾರು ರೀತಿಯ ಅಡಚಣೆಗಳಿರುವಾಗ ಪೋಲರ್ ಕೊಆರ್ಡಿನೆಟ್ ಬಳಸಿದಾಗಿ ಅಡಚಣೆಗಳು ದೂರವಾಗುತ್ತವೆ. ಈ ರೀತಿಯಲ್ಲಿ ಕೋನ ಮತ್ತು ಓರಿಜಿನಲ್ ನಿಂದ ಇರುವ ದೂರ ಇವೆರಡೂ ಅಂಶಗಳು ಮಹತ್ವದ್ದಾಗಿರುತ್ತವೆ. ನಿಯಂತ್ರಕದ ವಿಧದಿಂದ ಎಬ್ ಸಲ್ಯೂಟ್ ಝೀರೋ ಅಥವಾ ಕರಂಟ್ ಪೋಸಿಶನ್ ಓರಿಜಿನ್ ನ ಆಯ್ಕೆ ಮಾಡುವುದು ಸಾಧ್ಯ. (ಚಿತ್ರ ಕ್ರ. 3).

4_1  H x W: 0 x 
ಇದರಲ್ಲಿ X ಮತ್ತು Y ಅಕ್ಷವಿದ್ದು ಮುಂದಿನ ಅಂಕೆಗಳಿಂದ ಒರಿಜಿನ್ ಗೆ ಇರುವ ದೂರವನ್ನು ತೋರಿಸುತ್ತವೆ. X = 10, Y = 10 ಆದ್ದರಿಂದ ಪಾಯಿಂಟ್ P ಯ ಕೊಆರ್ಡಿನೆಟ್ X10 ಮತ್ತು Y10 ಎಂದಾಗುತ್ತದೆ. P (10,0) ಈ ರೀತಿಯಿಂದ ಅದರಲ್ಲಿ ಬರೆಯಲಾಗುತ್ತದೆ.
ಪೋಲರ್ ಕೊಆರ್ಡಿನೆಟ್ ಬಳಸುವಾಗ ಕೋನ (θ) ಡಿಗ್ರಿಯಲ್ಲಿ ತೋರಿಸಲಾಗುತ್ತದೆ. ಆದರೆ ದೂರ R ಅಕ್ಷರದಿಂದ ತೋರಿಸಲಾಗುತ್ತದೆ. ಚಿತ್ರ ಕ್ರ. 4 ರಲ್ಲಿ R = 10 ಮತ್ತು θ = 30° ಇರುತ್ತದೆ. ಆದ್ದರಿಂದ P ಪಾಯಿಂಟ್ ನ ಪೋಲರ್ ಕೊಆರ್ಡಿನೆಟ್ P (10,30°) ಎಂದಾಗುತ್ತದೆ.
ಕಾರ್ಟೇಶಿಯನ್ ನಿಂದ ಪೋಲರ್ ಮತ್ತು ಪೋಲರ್ ನಿಂದ ಕಾರ್ಟೇಶಿಯನ್ ಇದರಲ್ಲಿ G ಕೋಡ್ ಬಳಸಿ ಸಹಜವಾಗಿ ಬದಲಾವಣೆಗಳನ್ನು ಮಾಡುವುದು ಸಾಧ್ಯ.
G16 : ಸ್ವಿಚ್ ಟೂ ಪೋಲರ್
G15 : ಸ್ವಿಚ್ ಟೂ ಕಾರ್ಟೇಶಿಯನ್


6_1  H x W: 0 x
 
ಮಹತ್ವದ ಸೂಚನೆ : ಪ್ರೊಗ್ರಾಮ್ ನಲ್ಲಿ ಆವಶ್ಯಕತೆಗೆ ತಕ್ಕಂತೆ G90 ಅಥವಾ G91 ಇದರಲ್ಲಿ ಒಂದು ಕಮಾಂಡ್ ಸೇರಿಸಬೇಕಾಗುತ್ತದೆ.
G90 : ಎಬ್ ಸಲ್ಯೂಟ್ ಡೈಮೆನ್ಶನಿಂಗ್
G91 :ಇನ್ಕ್ರಿಮೆಂಟಲ್ ಡೈಮೆನ್ಶನಿಂಗ್
ಪೋಲರ್ ಕೋಆರ್ಡಿನೆಟ್ ಬಳಸಲಾಗುವುದಿಲ್ಲ. ಆದರೆ ಯಾವುದೇ ಸಮಸ್ಯೆಗಳು ಪೋಲರ್ ಕೊಆರ್ಡಿನೆಟ್ ಬಳಸಿ ಸಹಜವಾಗಿ ಪರಿಹರಿಸಲಾಗುತ್ತದೆ. ಉದಾಹರಣೆ, ಬೋಲ್ಟ್ ಸರ್ಕಲ್ ತಯಾರಿಸುವುದಾದಲ್ಲಿ ಅದರ ತ್ರಿಜ್ಯ 8’’ ಇದೆ ಮತ್ತು ಅದರಲ್ಲಿ ಸಮಾನವಾದ ದೂರದಲ್ಲಿ 6 ರಂಧ್ರಗಳನ್ನು ಮಾಡಬೇಕಾಗಿದೆ. (ಚಿತ್ರ ಕ್ರ. 5)
03000 (G15, G16 ಪೋಲರ್ ಕೊಆರ್ಡಿನೆಟ್ ಉದಾಹರಣೆ)
N1G20
G0 G40 G49 G50 G80 G94 G90
N2 G17
N3 G00 X 0 Y 05800 M03 (ಸೆಂಟರ್ ಪಾಯಿಂಟ್)
N4 G43 Z1.0 H01 M08
N5 G16 (ಪೋಲರ್ ಕೊಆರ್ಡಿನೆಟ್ ಆನ್)
N6 G99 G81 X 8 Y0 R0.1 Z-0.163 F3.0
N7 X8 Y60.0
N8 X8 Y120
N9 X 8 Y180°
N10 X8 Y 240
N11 X8 Y 300
N12 G15 (ಪೋಲರ್ ಕೊಆರ್ಡಿನೆಟ್ ಆಫ್)
N13 G80 M09
M14 G91 G28 Z0M05
N15 G28 X0 Y0
N16 M30
%
ಮೇಲಿನ ಪ್ರೊಗ್ರಾಮ್ ರೋಲರ್ ಕೋರ್ಡಿನೇಟ್ ಬಳಸದೇ ಮಾಡುವುದಾದಲ್ಲಿ ಕ್ಯಾಲ್ಕ್ಯುಲೇಟರ್ ನಿಂದ ಮತ್ತು ತ್ರಿಕೋನದ ಆಯಾಮಗಳನ್ನು ಬಳಸಿ ಪ್ರತಿಯೊಂದು ರಂಧ್ರದ ಕೊಆರ್ಡಿನೆಟ್ ಪಡೆಯುವುದು ಅತ್ಯಾವಶ್ಯಕವಾಗಿದೆ. ಇದರಲ್ಲಿ ತುಂಬಾ ಸಮಯವು ವ್ಯರ್ಥವಾಗುತ್ತದೆ. ಹಾಗೆಯೇ ಕ್ಯಾಲ್ಕ್ಯುಲೇಶನಲ್ಲಿ ತಪ್ಪಾಗುವ ಸಾಧ್ಯತೆ ಇರುತ್ತದೆ. ತಪ್ಪಾದಲ್ಲಿ ಎಲ್ಲ ಯಂತ್ರಭಾಗಗಳು ನಿರರ್ಥಕವಾಗುವ ಅಪಾಯವು ಉದ್ಭವಿಸುತ್ತದೆ.
ನಿಯಂತ್ರಕದಲ್ಲಿ ಪೋಲರ್ ಕೊಆರ್ಡಿನೆಟ್ ನ ವ್ಯವಸ್ಥೆ ಇದ್ದಲ್ಲಿ ಸಹಜವಾಗಿ ಮತ್ತು ನಿರ್ದೋಷವಾದ ಯಂತ್ರಭಾಗವು ತಯಾರಾಗಬಲ್ಲದು, ಎಂಬ ಅಂಶವು ಮೇಲಿನ ಪ್ರೊಗ್ರಾಮ್ ನಿಂದ ಗಮನಕ್ಕೆ ಬರಬಲ್ಲದು.
ಮೇಲಿನ ಪ್ರೊಗ್ರಾಮ್ ನಲ್ಲಿ ಮೊದಲ ಹಂತದಲ್ಲಿ ಸುರಕ್ಷಿತವಾದ ಪ್ರಾರಂಭದ ಸ್ಥಿತಿಯನ್ನು ನಿರ್ಧರಿಸಲಾಗಿದೆ.
G40 : ಟೂಲ್ ನೋಸ್ ತ್ರಿಜ್ಯ (ರೇಡಿಯಸ್) ಆಫ್ ಸೆಟ್ ಕ್ಯಾನ್ಸಲ್
G49 : ಟೂಲ್ ಲೇಥ್ ಆಫ್ ಸೆಟ್
G50 : ಸ್ಕೇಲಿಂಗ್ ಫಂಕ್ಷನ್ ಕ್ಯಾನ್ಸಲ್
G80 : ಫಿಕ್ಸ್ ಸೈಕಲ್ ಕ್ಯಾನ್ಸಲ್
G94 : ಯಂತ್ರಣೆಯ ಸೈಕಲ್
G90 : ಎಬ್ ಸಲ್ಯೂಟ್
G00 ಬಳಸಿ ಸೆಂಟರ್ ಪಾಯಿಂಟ್ (0,0) ಅಳವಡಿಸಲಾಗಿದೆ.
N5 ಬ್ಲಾಕ್ ನಲ್ಲಿ ಪೋಲರ್ ಕೊಆರ್ಡಿನೆಟ್ ಪ್ರಾರಂಭಿಸಲಾಗಿದೆ. ಮುಂದಿನ ಲೈನ್ ಗೆ G81 ಕಮ್ ಸೈಕಲ್ ಪ್ರಾರಂಭಿಸಲಾಗಿದೆ. X8 Y0 ಇದು ಪೋಲರ್ ಕೊಆರ್ಡಿನೆಟ್ ಆಗಿದೆ. ಇದರಲ್ಲಿ X ಇದು ಒರಿಜಿನಲ್ ನಿಂದ 8’’ ದೂರದಲ್ಲಿದೆ. ಆದರೆ Y (0°) ಇದೆ. ಆದ್ದರಿಂದ ಓರಿಜಿನ್ (X0, Y0) ಇದಾಗಿದೆ. G90 ಎಬ್ ಸಲ್ಯೂಟ್ ಕೊಆರ್ಡಿನೆಟ್ ಬಳಸಿ (0,0) ಇದು ಒರಿಜಿನ್ ಆಗಿದೆ. ಒಂದರ ನಂತರ ಇನ್ನೊಂದು ಹೀಗೆ ಪ್ರತಿಯೊಂದು ರಂಧ್ರದ 8 ಇಂಚು ದೂರವನ್ನು ಇಟ್ಟು 60°, 120°, 180°, 240°, 300° ಯಲ್ಲಿ Y ಅಕ್ಷವನ್ನು ಅಳವಡಿಸಲಾಗುತ್ತದೆ.
ಈ ರೀತಿಯಲ್ಲಿ ಯೋಗ್ಯವಾದ ಪ್ರೊಗ್ರಾಮ ಮಾಡಿ ಕಾರ್ಯವಸ್ತುಗಳ ಚೂಪಾಗಿರುವ ತುದಿಗಳನ್ನು ತಯಾರಿಸಬಹುದಾಗಿದೆ.
Powered By Sangraha 9.0