ಟೂಲ್ ಪ್ರೀಸೆಟರ್

15 Nov 2021 11:37:09
ಮಶಿನ್ ನಲ್ಲಿ ಉತ್ಪಾದನೆಯನ್ನು ಮಾಡುತ್ತಿರುವಾಗ ಪ್ರಾಡಕ್ಟ್ ಗೆ ಯಾವುದೇ ರೀತಿಯಲ್ಲಿ ಹಾನಿ ತಲುಪಬಾರದು, ಎಂಬುದಕ್ಕಾಗಿ ಮುಂಜಾಗ್ರತೆಯನ್ನು ವಹಿಸುವುದು ಮಹತ್ವದ್ದಾಗಿದೆ. ಆ ನಿಟ್ಟಿನಲ್ಲಿ ಮಶಿನ್ ನಲ್ಲಿ ಹಲವಾರು ರೀತಿಯ ಉಪಾಯಗಳನ್ನು ಮಾಡಬೇಕಾಗುತ್ತದೆ. ಟೂಲ್ ಗಳ ಅಳತೆ, ಟೂಲ್ ಗಳ ಸೆಟಿಂಗ್, ಅಂತಿಮ ಉತ್ಪಾದನೆ ಮತ್ತು ಕೆಲಸದ ವೇಗವನ್ನು ವೃದ್ಧಿಸುವುದು ಈ ರೀತಿಯ ಕೆಲಸಗಳಿಗೋಸ್ಕರ ಟೂಲ್ ಪ್ರಿಸೆಟರ್ ಉಪಯುಕ್ತವಾಗಿರುತ್ತವೆ. ಇಂತಹ ಟೂಲ್ ಪ್ರೀಸೆಟರ್ ಗಳ ಕುರಿತು ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ.
 

Tool Precessor_1 &nb 
 
ಪ್ರೀಸೆಟರ್ ಈ ಉಪಕರಣವನ್ನು ಅಳತೆ ಮಾಡಲು ಮತ್ತು ಟೂಲ್ ಆಫ್ ಸೆಟ್ ಸೆಟ್ ಮಾಡಲು ಬಳಸಲಾಗುತ್ತದೆ. ಪ್ರೀಸೆಟರ್ ಇದು ಟೂಲ್ ನಲ್ಲಿ ಆಫ್ ಲೈನ್ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಪಾರಂಪರಿಕ ರೀತಿಯಲ್ಲಿ ಸಾಮಾನ್ಯವಾಗಿ ಸಿ.ಎನ್.ಸಿ. ಮಶಿನ್ ನಲ್ಲಿಯೇ ಟೂಲ್ ನ ಅಳತೆಯನ್ನು ಮಾಡಲಾಗುತ್ತದೆ. ಇದಕ್ಕೆ ತುಂಬಾ ಸಮಯವು ಬೇಕಾಗುತ್ತದೆ ಮತ್ತು ಈ ಕೆಲಸವನ್ನು ಮಾಡುವಾಗ ಉತ್ಪಾದನೆಯನ್ನು ನಿಲ್ಲಿಸಬೇಕಾಗುತ್ತದೆ. ಇದರಿಂದಾಗಿ ಮಶಿನ್ ನ ಡೌನ್ ಟೈಮ್ ಹೆಚ್ಚಾಗುತ್ತದೆ. ಇದರಿಂದಾಗಿ ಕೈಗಾರಿಕೋದ್ಯಮಗಳಿಗೆ ನಷ್ಟವುಂಟಾಗುತ್ತದೆ. ಅದರೆ ಪ್ರೀಸೆಟರ್ ನ ಸಹಾಯದಿಂದ ನಾವು ಕೆಲಸದ ವೇಗವನ್ನು ವೃದ್ಧಿಸಬಲ್ಲೆವು. ಮಶಿನ್ ನಲ್ಲಿ ಪ್ರತ್ಯಕ್ಷವಾಗಿ ಉತ್ಪಾದನೆಯಾಗುತ್ತಿರುವಾಗ ಯಾವುದೇ ರೀತಿಯ ನಷ್ಟವು ಸಂಭವಿಸದೇ ಟೂಲ್ ನ ಅಳತೆಯನ್ನು ಮಾಡಿ ಅದನ್ನು ಪ್ರೀಸೆಟರ್ ನಿಂದ ಸೆಟ್ ಮಾಡಬಲ್ಲೆವು. ಅಲ್ಲದೇ ಮಶಿನ್ ನಿಂದ ಗರಿಷ್ಠ ಪ್ರಮಾಣದ ಉತ್ಪಾದನೆಯನ್ನು ಮಾಡಬಹುದು. ಪ್ರೀಸೆಟರ್ ನ ಉಗಮದ ಮುಂಚೆ ಪಾರಂಪರಿಕ ರೀತಿಯಲ್ಲಿಯೇ ಯಂತ್ರಶಾಲೆಯಲ್ಲಿರುವ ಕೆಲಸಗಾರರು ಟೂಲ್ ನ ಅಳತೆಯನ್ನು ಮಾಡುವಾಗ ಅಥವಾ ಟೂಲ್ ಸೆಟ್ ಮಾಡುವಾಗ 25 ರಿಂದ 30 ಮೈಕ್ರಾನ್ ದಪ್ಪವಿರುವ ಕಾಗದದ ತುಂಡನ್ನು ಬಳಸುತ್ತಿದ್ದರು. ಇದರಿಂದಾಗಿ ಪ್ರತ್ಯಕ್ಷವಾಗಿ ಕಾರ್ಯವಸ್ತುವಿನಲ್ಲಿ ಪರಿವರ್ತನೆಯಾಗುವ ವ್ಯತ್ಯಾಸವು (ಎರರ್) ಕನಿಷ್ಠ 25 ಮೈಕ್ರಾನ್ ಗಳಷ್ಟು ಇರುತ್ತಿತ್ತು. 
 

Tool Precessor 1_1 & 
 
ಚಿತ್ರ ಕ್ರ. 1 : ಟೂಲ್ ಪ್ರೀಸೆಟರ್ 
 
ಪ್ರೀಸೆಟರ್ ನಿಂದಾಗಿ ಈ ಕೆಲಸವನ್ನು ಇಮೇಜ್ ಪ್ರೊಸೆಸಿಂಗ್ ಮಾಡಬಲ್ಲ ಒಂದು ಚಿಕ್ಕ ಮಶಿನ್ ನ ಸಹಾಯದಿಂದ ಮಾಡಬಲ್ಲೆವು. ಈ ಮಶಿನ್ ನಲ್ಲಿ ಟೂಲ್ ನ ಅಳತೆಯನ್ನು ಕನಿಷ್ಠ ಒಂದು ಮೈಕ್ರಾನ್ ತನಕ ನಿಖರವಾಗಿ ಅಳತೆ ಮಾಡಬಲ್ಲ ಕ್ಯಾಮೆರಾ (ಚಿತ್ರ ಕ್ರ. 1) ತಯಾರಿಸಲಾಗಿರುತ್ತದೆ. ಇದರಿಂದಾಗಿ ವ್ಯರ್ಥವಾಗುವ ಸಮಯವನ್ನು ಕಡಿಮೆ ಮಾಡಬಹುದು. ಸೂಕ್ತ ರೀತಿಯಲ್ಲಿ ಸೆಟಿಂಗ್ ಮಾಡುವುದರಿಂದ ಶೇಕಡಾ 100 ರಷ್ಟು ಯೋಗ್ಯ ಮತ್ತು ಉಚ್ಚಗುಣಮಟ್ಟದ ಯಂತ್ರಭಾಗಗಳನ್ನು ತಯಾರಿಸುವುದು ಸಾಧ್ಯ. ಚುಟುಕಾಗಿ ಹೇಳುವುದಾದರೆ ನಿರ್ದೋಷವಾಗಿ ಅಳತೆ ಮಾಡಿ ತಯಾರಿಸಿರುವ ಟೂಲ್, ಮಶಿನ್ ನಲ್ಲಿ ಹೆಚ್ಚಿರುವ ಉತ್ಪಾದನೆಯ ಸಮಯ ಮತ್ತು ಟೂಲ್ ಗೆ ಗರಿಷ್ಠ ಪ್ರಮಾಣದಲ್ಲಿ ಲಭಿಸಿರುವ ಸೇವೆ, ಇಂತಹ ಮೂರು ಮಾಧ್ಯಮಗಳ ಸಹಾಯದಿಂದ ಉದ್ಯಮವನ್ನು ಇನ್ನಷ್ಟು ಲಾಭಕಾರಿಯಾಗಿ ಮಾಡಬಹುದು.

ಟೂಲ್ ನ ಅಳತೆಯ ಗುಣಮಟ್ಟ ಮತ್ತು ಅದರ ವ್ಯವಸ್ಥಾಪನೆಯ ವಿಷಯದ ಕುರಿತು ವಿಚಾರ ಮಾಡಿದಾಗ ಪ್ರೀಸೆಟರ್ ನ ಬಳಕೆಯು ಅನಿವಾರ್ಯವಾಗುತ್ತದೆ. ಯಾವುದೇ ಉದ್ಯಮಿಯು ನಿರಂತರವಾಗಿ ಕೆಲಸದ ರೀತಿಯ ಆವರ್ತನೆಯ ವೇಳೆಯನ್ನು (ಸೈಕಲ್ ಟೈಮ್) ಸುಧಾರಿಸುವುದು, ಮಶಿನ್ ಆಫ್ ಸಮಯವನ್ನು ಕಡಿಮೆ ಮಾಡುವುದು ಮತ್ತು ಕೆಲಸ ರೀತಿಯ ಹಂತವನ್ನು ವೃದ್ಧಿಸುವುದು, ಗುಣಮಟ್ಟದಿಂದ ಕೂಡಿರುವ ಉತ್ಪಾದನೆಯ ನಿರ್ಮಿತಿಯನ್ನು ಮಾಡುವುದರ ಕುರಿತು ಗಮನವನ್ನು ಕೇಂದ್ರೀಕರಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ಉತ್ಪಾದನೆಯಲ್ಲಿ ಉಚ್ಚಗುಣಮಟ್ಟವೇ ಪ್ರತಿಯೊಬ್ಬ ಉತ್ಪಾದಕರ ಅಂತಿಮವಾದ ಗುರಿಯಾಗಿರುತ್ತದೆ. ಅಲ್ಲದೇ ಪ್ರೀಸೆಟರ್ ನ ಸಹಾಯದಿಂದ ಟೂಲ್ ನ ನಿರ್ದೋಷವಾದ ಅಳತೆಯನ್ನು ಮಾಡಿ ಈ ಗುರಿಯ ತನಕ ತಲುವುದು ಸಾಧ್ಯ. 
 
ಟೂಲ್ ಪ್ರೀಸೆಟರ್ ನ ಕೆಲಸ ನಿರ್ವಹಿಸುವ ರೀತಿ

ಪ್ರೀಸೆಟರ್ ನಲ್ಲಿ ಅಳವಡಿಸಲಾಗಿರುವ ಉಚ್ಚಗುಣಮಟ್ಟದ ಕ್ಯಾಮೆರಾಗಳ ಸಹಾಯದಿಂದ ಟೂಲ್ ನಿಂದ ಹಾಯುವ ಬೆಳಕನ್ನು ಹಿಡಿದು ಇಮೇಜ್ ಪ್ರೊಸೆಸಿಂಗ್ ನ ಸಹಾಯದಿಂದ ಕಟಿಂಗ್ ಎಡ್ಜ್ ನ ಅಳತೆಯನ್ನು ನಿರ್ದೋಷವಾಗಿ ಮಾಡಲಾಗುತ್ತದೆ. ಇದಕ್ಕೋಸ್ಕರ ಗ್ರಾಹಕರಿಗೆ ಸಂಪೂರ್ಣವಾಗಿ ಸ್ವಯಂಚಾಲಿತ ಅಥವಾ ಅರ್ಧ ಸ್ವಯಂಚಾಲಿತ ಪ್ರೀಸೆಟರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. 
 

Getting Information throu 
 
ಚಿತ್ರ ಕ್ರ. 2 : QR ಕೋಡ್ ನ ಮೂಲಕ ಮಾಹಿತಿಯನ್ನು ಪಡೆಯುವುದು 
 
ಮಾಹಿತಿಯನ್ನು ಹಸ್ತಾಂತರಿಸಲು (ಡಾಟಾ ಟ್ರಾನ್ಸ್ ಫರ್) ಅನೇಕ ಪರ್ಯಾಯಗಳು ಲಭ್ಯವಿರುತ್ತವೆ. ಉದಾಹರಣೆ, ಯಾವುದೇ ಮಾಹಿತಿಯನ್ನು ಮುಂದೆ ಕಳುಹಿಸಲು ಕಂಪ್ಯೂಟರ್ ಜಾಲವನ್ನು (LAN) ಉಪಯೋಗಿಸಬಹುದು. ಯಾವುದೇ ಟೂಲ್ ನ ಮಾಹಿತಿಯನ್ನು QR ಕೋಡ್ ನ ಸಹಾಯದಿಂದ (ಚಿತ್ರ ಕ್ರ. 2) ಮುಂದೆ ಕಳುಹಿಸುವುದು ಸಾಧ್ಯ. ಹಾಗೆಯೇ RFID (ರೇಡಿಯೊ ಫ್ರಿಕ್ವೆನ್ಸಿ ಐಡಿಂಟಿಫಿಕೇಶನ್) ಬಳಸಿಯೂ ಪ್ರೀಸೆಟರ್ ನಲ್ಲಿರುವ ಮಾಹಿತಿಯನ್ನು ಪ್ರಾಡಕ್ಷನ್ ಮಶಿನ್ ಗೆ ಹಸ್ತಾಂತರಿಸಲಾಗುತ್ತದೆ. ಗ್ರಾಹಕರು ಉತ್ಪಾದನೆಯ ಕೆಲಸ ರೀತಿಯಲ್ಲಿ ಸುಲಭವಾದ ಮಾಹಿತಿಯನ್ನು ಹಸ್ತಾಂತರಿಸುವ ಪರ್ಯಾಯವನ್ನು ಬಳಸುತ್ತಾರೆ.

ಪ್ರೀಸೆಟರ್ ನ ಪ್ರಮುಖ ವೈಶಿಷ್ಟ್ಯಗಳು

• ದೃಢ ಮತ್ತು ಸ್ಥಿರವಾದ ಫ್ರೇಮ್
• ಇಮೇಜ್ ಪ್ರೊಸೆಸಿಂಗ್ ಮಾಡಬಲ್ಲ ತಂತ್ರಜ್ಞಾನ
• ಸೆಟಿಂಗ್ ಮಾಡಬೇಕಾಗಿರುವ ಟೂಲ್ ಹಿಡಿಯಲು ಸ್ಪಿಂಡಲ್
• Z ಮತ್ತು X ಅಕ್ಷಗಳ ಡ್ರೈವ್
• ಪರಿವರ್ತನೆಯಾಗಬಲ್ಲ ಬೆಳಕಿನ ಮೂಲ ಮತ್ತು ಅದರ ಗುಣಮಟ್ಟ

ನಾನ್-ಕಾಂಟ್ಯಾಕ್ಟ್ ಪ್ರೀಸೆಟರ್ ಮತ್ತು ಕಾಂಟ್ಯಾಕ್ಟ್ ರೀತಿಯ ಪ್ರೀಸೆಟರ್ ನ ಹೋಲಿಕೆ

ನಾನ್-ಕಾಂಟ್ಯಾಕ್ಟ್ ವಿಧದ ಪ್ರೀಸೆಟರ್ ಗಳು ಪ್ರಮುಖವಾಗಿ ಪ್ರೊಬ್ ವ್ಯವಸ್ಥೆಯ ಸಹಾಯದಿಂದ ಕೆಲಸ ನಿರ್ವಹಿಸುತ್ತವೆ. ಟೂಲ್ ನ ಕಟಿಂಗ್ ಎಡ್ಜ್ ಪಾಯಿಂಟ್ ಟ್ರೇಸ್ ಮಾಡಲು ಮತ್ತು ಅದರ ಮೂಲಕ ಟೂಲ್ ನ ಎತ್ತರ ಮತ್ತು ವ್ಯಾಸವನ್ನು ನಿರ್ಧರಿಸಲು ಪ್ರೊಬ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಪ್ರೊಬ್ ನ ಕಟಿಂಗ್ ಎಡ್ಜ್ ನೊಂದಿಗೆ ಉಂಟಾಗುವ ಸೂಕ್ಷ್ಮವಾದ ಸಂಪರ್ಕವು ತುಂಬಾ ಮಹತ್ವದ್ದಾಗಿರುವುದರಿಂದ ಅದನ್ನು ನಿಯಂತ್ರಿಸಲ್ಪಟ್ಟ ಹವಾಮಾನದಲ್ಲಿ ಬಳಸಲಾಗುತ್ತದೆ. 
 
ಕಾಂಟ್ಯಾಕ್ಟ್ ರೀತಿಯ ಅಳತೆಯ ವ್ಯವಸ್ಥೆಯು ಪೂರೈಸುವಂತಹ ಬೆಲೆಯಲ್ಲಿ ಲಭ್ಯವಿದ್ದು ದೀರ್ಘ ಕಾಲಾವಧಿಯ ತನಕ ಬಾಳಿಕೆ ಬರುತ್ತವೆ. ಈ ರೀತಿಯ ಅಳತೆಯ ರೀತಿಯನ್ನು ಪಾರಂಪರಿಕವಾದ ರೀತಿಯೆಂದು ಭಾವಿಸಲಾಗುತ್ತದೆ. ಕಾರಣ ಆಪರೇಟರ್ ನ ಕುಶಲತೆಯಲ್ಲಿ ಅದರ ನಿಖರತೆಯು ಅವಲಂಬಿಸಿರುತ್ತದೆ.

ನಾನ್-ಕಾಂಟ್ಯಾಕ್ಟ್ ನಲ್ಲಿ ಪ್ರೀಸೆಟರ್ ನಿಂದ ಪಡೆಯಬಹುದಾದ ಲಾಭವೆಂದರೆ, ಅಳತೆ ಮಾಡುವ ಟೂಲ್ ನಲ್ಲಾಗುವ ಹಾನಿಯು ಸಂಪೂರ್ಣವಾಗಿ ಇಲ್ಲದಂತಾಗುತ್ತದೆ. ಕಾಂಟ್ಯಾಕ್ಟ್ ಪ್ರೀಸೆಟರ್ ಬಳಸುವಾಗ ಚೂಪಾಗಿರುವ ಟೂಲ್ ನ ಬದಿಯಲ್ಲಿ ಯಾವುದೇ ರೀತಿಯ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಉತ್ಪಾದಕತೆಯಲ್ಲಿ ಗುಣಮಟ್ಟದ ಇಳಿತವಾಗಿ ರಿಜೆಕ್ಷನ್ ನ ಪ್ರಮಾಣವು ಹೆಚ್ಚಾಗುತ್ತದೆ. 
 

Measuring tools using pre 
 
ಚಿತ್ರ ಕ್ರ. 3 : ಪ್ರೀಸೆಟರ್ ಬಳಸಿ ಟೂಲ್ ಗಳ ಅಳತೆಯನ್ನು ಮಾಡುವುದು 
 
ಟ್ಯಾಕ್ಟೈಲ್ ಅಳತೆಯ ರೀತಿಗಿಂತ ಆಪ್ಟಿಕ್ ಅಳತೆಯ ರೀತಿಯಲ್ಲಿ ದೃಶ್ಯ ರೂಪದಲ್ಲಿರುವ ಚಿತ್ರಗಳು ಸ್ಪಷ್ಟವಾಗಿ ಕಾಣುತ್ತವೆ ಮತ್ತು ಸುಲಭವಾಗಿ ತಿಳಿಯುತ್ತವೆ. ಚಿತ್ರದಲ್ಲಿ ಪ್ರಕ್ರಿಯೆಯನ್ನು ಮಾಡಬಲ್ಲ ತಂತ್ರಜ್ಞಾನವನ್ನು ಟಾಸ್ಕ್ ಬಟನ್ ನ ಸಹಾಯದಿಂದ ತಿಳಿದುಕೊಳ್ಳಲು ಮತ್ತು ನಿರ್ವಹಿಸಲು ಸುಲಭವಾಗಿರುವ ಇಂಟರ್ ಫೇಸ್ ಉಪಲಬ್ಧ ಮಾಡಿಕೊಡುತ್ತದೆ. ಯಾರೇ ಕೆಲಸಗಾರರು ಸಾಮಾನ್ಯವಾದ ಟೂಲ್ ನ ಅಳತೆಯ ಮತ್ತು ಸೆಟಿಂಗ್ ನ ಕೆಲಸವನ್ನು ಹೆಚ್ಚು ಸುಲಭವಾಗಿ ಮಾಡಬಲ್ಲರು.

ಭವಿಷ್ಯತ್ಕಾಲದಲ್ಲಿ 3D ಸ್ಕ್ಯಾನಿಂಗ್ ಬಳಸಿ ಕಾರ್ಯವಸ್ತು ಮತ್ತು ಟೂಲ್ ಇವುಗಳ 3D ಚಿತ್ರವನ್ನು ಪಡೆದು ಸೆಟಿಂಗ್ ಮಾಡುವುದು ಸಾಧ್ಯವಾಗುವಂತಹ ತಂತ್ರಜ್ಞಾನವನ್ನು ಬಳಸಿ ಕೆಲಸ ಮಾಡಲಾಗಲಿದೆ. ‘ಝೋಲರ್’ನ 3D ಪರೀಕ್ಷೆಯನ್ನು ಮಾಡುವ ಅರು ಅಕ್ಷಗಳಿರುವ ಮಶಿನ್ ಆಪ್ಟಿಕಲ್ ಅಳತೆಯ ನಿಖರತೆಯೊಂದಿಗೆ ಉಚ್ಚಗುಣಮಟ್ಟದ CNC ಸ್ವಯಂಚಾಲನೆಯನ್ನೂ ಮಾಡಿಕೊಡುತ್ತದೆ. 
 
ಪ್ರೀಸೆಟರ್ ನಿಂದ ಉತ್ಪಾದಕತೆಯ ಸ್ತರವನ್ನು ವೃದ್ಧಿಸುವುದು

ಟೂಲ್ ರೂಮ್ ನಲ್ಲಿ ಬ್ರೆಂಡೆಡ್ ಪ್ರೀಸೆಟರ್ ಬಳಸುವುದರಿಂದ ಲಭಿಸುವ ಲಾಭಗಳು ಈ ಕೆಳಗಿನಂತಿವೆ.
• ಮಶಿನ್ ನ ಅನುತ್ಪಾದಕತೆಯ ಸಮಯದಲ್ಲಿ ಉಂಟಾಗಿರುವ ಇಳಿತ.
• ಉತ್ಪಾದನೆಯಲ್ಲಿ ಹೆಚ್ಚಳ
• ಟೂಲ್ ಗಳ ಬಳಕೆಯ ಆಪ್ಟಿಮೈಜೇಶನ್
• ರಿಜೆಕ್ಟೆಡ್ ಭಾಗಗಳಲ್ಲಿ ಇಳಿತ.
• ವೃದ್ಧಿಸಿರುವ ಉತ್ಪಾದನೆಯ ಗುಣಮಟ್ಟ
• ಸಾಮಾನ್ಯವಾಗಿ ಎಲ್ಲ ಹಂತಗಳಲ್ಲಿ ಹೆಚ್ಚಿರುವ ಉತ್ಪಾದಕತೆ 
 

Tool presetter away from  
 
ಚಿತ್ರ ಕ್ರ. 4 : ಮಶಿನ್ ನಿಂದ ದೂರವಿರುವ ಟೂಲ್ ಪ್ರೀಸೆಟರ್ ನಿಂದ
ನೆಟ್ ವರ್ಕ್ ನ ಮೂಲಕ ಮಾಹಿತಿಯನ್ನು ಪಡೆಯುವುದು 
 
ಪ್ರೀಸೆಟರ್ ನಲ್ಲಿರುವ ಅಳತೆಯ ನಿಖರತೆಯಲ್ಲಿ ಪರಿಣಾಮ ಬೀರುವ ಘಟಕಗಳು

ತುಂಬಾ ಹೆಚ್ಚು ಗುಣಮಟ್ಟವಿರುವ ಸ್ಪಿಂಡಲ್ ಮತ್ತು ಟೂಲ್ ಹೋಲ್ಡರ್ ಇದೊಂದು ಮಹತ್ವದ ಘಟಕವಾಗಿದೆ. ಒಂದು ವೇಳೆ ಟೂಲ್ ಯೋಗ್ಯ ರೀತಿಯಲ್ಲಿ ಹಿಡಿಯದಿದ್ದಲ್ಲಿ ಅಳತೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಅದರಿಂದಾಗಿ ಹಲವು ರೀತಿಯ ದುಷ್ಪರಿಣಾಮಗಳು ಉಂಟಾಗುತ್ತವೆ. ತಪ್ಪಾದ ಸೆಟಿಂಗ್ ನಿಂದಾಗಿ ನಷ್ಟ ಅಥವಾ ರಿಜೆಕ್ಷನ್ ಹೆಚ್ಚುತ್ತದೆ. ಇದರ ಹೊರತಾಗಿ ಉತ್ಪಾದನೆಯ ಗುಣಮಟ್ಟ, ಅಳತೆಗೆ ಬಳಸಲಾಗಿರುವ ವಿಶೇಷವಾದ ಕ್ಯಾಮೆರಾ, ಪರಿವರ್ತಿಸಲಾದ ಬೆಳಕಿನ ಮೂಲ ಇಂತಹ ಘಟಕಗಳು ಕೂಡಾ ಅಳತೆಯ ಮತ್ತು ದೃಶ್ಯ ಸ್ವರೂಪದ ಕೆಲಸದ ರೀತಿಯ ಯಶಸ್ಸನ್ನು ತಡೆಯುವಲ್ಲಿ ಅಷ್ಟೇ ಮಹತ್ವದ ಘಟಕಗಳಾಗಿರುತ್ತವೆ. ಬ್ರೆಂಡೆಡ್ ಪ್ರಾಡಕ್ಟ್, ದೃಢವಾದ ಮತ್ತು ಸ್ಥಿರವಾದ ಫ್ರೇಮ್, ಸ್ಪಿಂಡಲ್ ಮತ್ತು ಮಶಿನ್ ನ ಉಚ್ಚಮಟ್ಟದ ಕ್ಯಾಲಿಬ್ರೇಶನ್ ಇವುಗಳೆಲ್ಲವೂ ಪ್ರೀಸೆಟಿಂಗ್ ನ ಮೂಲಭೂತ ಅಂಶವಾಗಿವೆ.

ಯೋಗ್ಯ ಪ್ರೀಸೆಟರ್ ಆಯ್ಕೆಮಾಡಲು ಸಹಾಯಕವಾದ ಮಹತ್ವದ ಅಂಶಗಳೆಡೆಗೆ ನಿರಂತರವಾಗಿ ಗಮನ ಹರಿಸಬೇಕಾಗುತ್ತದೆ. ನಾವೇ ನಮಗೆ ಸೂಕ್ತವಾದ ಮತ್ತು ಮಹತ್ವಪೂರ್ಣವಾದ ಪ್ರಶ್ನೆಗಳನ್ನು ವಿಚಾರಿಸಿಕೊಂಡಾಗ ತಮ್ಮ ಬೇಡಿಕೆಗಳಿಗೆ ಅನುಸಾರವಾಗಿ ಸೂಕ್ತ ರೀತಿಯ ಪರ್ಯಾಯಗಳು ಗಮನಕ್ಕೆ ಬರಬಲ್ಲವು.

ಉತ್ಪಾದನೆಯಲ್ಲಿ ಯಾವ್ಯಾವ ಟೂಲ್ ಗಳನ್ನು ತಾವು ಬಳಸುತ್ತೀರಿ? ತಾವು ಸ್ವಂತವೇ ಟೂಲ್ ಗಳ ಉತ್ಪಾದನೆಯನ್ನು ಮಾಡುತ್ತೀರೋ ಅಥವಾ ತಮ್ಮಲ್ಲಿರುವ ಯಂತ್ರಸಾಮಗ್ರಿಗಳ ಟೂಲ್ ಸೆಟ್ ಮಾಡುವುದಿದೆಯೇ? ತಮ್ಮಲ್ಲಿರುವ ಟೂಲ್ ಗಳಿಗೆ ಯಾವುದೇ ರೀತಿಯ ವಿಶೇಷ ಆಕಾರ ಅಥವಾ ಜಾಮೆಟ್ರಿಗಳಿವೆಯೇ? ಉದಾಹರಣೆ, ಹಾಬ್ ಕಟರ್ಸ್, ಹೆಲಿಕಲ್ ಟೂಲ್ ಅಥವಾ ಶ್ರಿಂಕ್ ಫಿಟ್ ಮಾಡಿ ಅಳವಡಿಸಿರುವ ಟೂಲ್.

ತಮಗೆ ತಮ್ಮಲ್ಲಿರುವ ಪ್ರೀಸೆಟರ್ ಸಿ.ಎನ್.ಸಿ. ಮಶಿನ್ ನ ಸಮೀಪದಲ್ಲಿ ಬೇಕೇ, ತಮ್ಮಲ್ಲಿರುವ ಇನ್ ಸ್ಪೆಕ್ಷನ್ ರೂಮ್ ಹವಾ ನಿಯಂತ್ರಿತವಾಗಿ ಇದೆಯೇ? ಪ್ರೀಸೆಟರ್ ನಲ್ಲಿ ಟೂಲ್ ಗಳನ್ನು ಕೆಲಸಗಾರರೇ ಸೆಟ್ ಮಾಡಬೇಕೇ, ಅಥವಾ ಉತ್ಪಾದನೆಯ ಬೇಡಿಕೆಗಳನ್ನು ಸಂಪೂರ್ಣವಾಗಿ ಸ್ವಯಂಚಾಲಿತವಾದ ಪರ್ಯಾಯದಿಂದಲೇ ನಿರ್ವಹಿಸಲಾಗುತ್ತದೆಯೇ?  
 
ಸಾರಾಂಶ

ಇಂತಹ ಅನೇಕ ಉಪಾಯಗಳನ್ನು ಬಳಸಿ ಬಳಕೆಗಾರರಿಗೆ ಅವರ ಭವಿಷ್ಯತ್ಕಾಲದ ಬೇಡಿಕೆಗಳನ್ನು ಪೂರ್ತಿಗೊಳಿಸುವ ವ್ಯವಸ್ಥೆಯನ್ನು ಮಾಡುವುದು ಸಾಧ್ಯ. ಬ್ರೆಂಡೆಡ್ ಪ್ರೀಸೆಟರ್ ಕೇವಲ ಯಾವುದೊಂದೇ ಮಶಿನ್ ಗೋಸ್ಕರ ಉಪಾಯಗಳನ್ನು ಪೂರೈಸದೇ, ತಮ್ಮ ಸಂಪೂರ್ಣ ಉತ್ಪಾದನೆಯ ಕೆಲಸದ ರೀತಿಯ ಆಪ್ಟಿಮೈಜೇಶನ್ ಮಾಡಲು ಸಹಕರಿಸುತ್ತದೆ. ವಿಶ್ವಾಸಪೂರ್ಣವಾದ ಉತ್ಪಾದನೆಯ ಕೆಲಸದ ರೀತಿ, ಅದರ ಕುರಿತಾದ ಬರವಣಿಗೆ ಮತ್ತು ಟ್ರೆಸೆಬಿಲಿಟಿ ಇವುಗಳು ಗ್ರಾಹಕರ ಪ್ರಸ್ತುತ ನಿಖರವಾದ ಬೇಡಿಕೆಗಳನ್ನು ನೀಗಿಸಲು ಪ್ರೀಸೆಟರ್ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಇಂಡಸ್ಟ್ರಿ 4.0 ಇದು ಕೇವಲ ಬೃಹತ್ ಉದ್ಯಮಗಳಿಗೆ ಸಂಬಂಧಪಟ್ಟದ್ದು ಆಗಿರದೇ, ಲಘು ಮತ್ತು ಮಧ್ಯಮ ಉದ್ಯಮಗಳಿಗೂ ಸ್ಪರ್ಧೆಯಲ್ಲಿ ಕಾಲೂರಿ ನಿಲ್ಲುವುದಾದಲ್ಲಿ ಒಂದು ಅತ್ಯಂತ ಮಹತ್ವದ ಅಂಶವೆಂಬುದೂ ಪ್ರಮುಖವಾದ ವಿಷಯವಾಗಿದೆ. ಬ್ರೆಂಡೆಡ್ ಪ್ರೀಸೆಟರ್ ನ ಸಹಾಯದಿಂದ ಲಘು ಉದ್ಯಮಿಗಳೊಂದಿಗೆ ಯಾರೇ ಬಳಕೆಗಾರರು, ಅವರಲ್ಲಿ ಯೋಗ್ಯವಾಗಿ ಮತ್ತು ನಿರಂತರವಾಗಿ ಸಂಗ್ರಹಿಸಿದ ಮಾಹಿತಿಯ ಆಧಾರದಿಂದ ಸ್ವಯಂಚಾಲನೆಯ ಪ್ರಕ್ರಿಯೆಯನ್ನು ಪ್ರಾರಂಭಿಸಬಲ್ಲರು. ಅಲ್ಲದೇ ಇಂತಹ ವಿಷಯಗಳಲ್ಲಿ ಹೂಡಿರುವ ಬಂಡವಾಳದ ಮರುಪಾವತಿಯು ಕಡಿಮೆ ಕಾಲಾವಧಿಯಲ್ಲಿ ಸಿಗುವುದೂ ಸಾಧ್ಯ. (ಕೋಷ್ಟಕ ಕ್ರ. 1)

ಪ್ರೀಸೆಟರ್ ನಲ್ಲಿ ಟೂಲ್ ನ ಸೆಟಿಂಗ್ ಆಫ್-ಲೈನ್ ರೀತಿಯಲ್ಲಿ ಆಗುತ್ತಿರುವುದರಿಂದ (ಸಿ.ಎನ್.ಸಿ. ಮಶಿನ್ ಟೂಲ್ ಮ್ಯಾಗೆಜಿನ್ ನಲ್ಲಿ ಅಳವಡಿಸುವ ಮೊದಲು) ಮಶಿನ್ ಆಫ್ ಆಗಿರುವ ಸಮಯದಲ್ಲಿ ಉಳಿತಾಯವಾಗುತ್ತದೆ. 
 

A case study_1   
 
ಕೇಸ್ ಸ್ಟಡಿ 
 
ಪುಣೆಯ ಸಮೀಪದಲ್ಲಿರುವ ಭೋಸರಿ ಔದ್ಯೋಗಿಕ ವಲಯದಲ್ಲಿ ಸಂಜಯ ಟೂಲ್ಸ್ ಎಂಬ ಕಂಪನಿಯು ಕಾರ್ಯನಿರತವಾಗಿದೆ. ಈ ಕಂಪನಿಯಲ್ಲಿ ‘ಝೋಲರ್’ ಕಂಪನಿಯ ‘ಸ್ಮೈಲ್ 400’ ಎಂಬ ಟೂಲ್ ಪ್ರೀಸೆಟರ್ ಮಾಡೆಲ್ ಬಳಸಲಾಗುತ್ತದೆ. ಅಲ್ಲಿರುವ ಅಪ್ಲಿಕೇಶನ್ ಇಂಜಿನಿಯರ್ ರವೀಂದ್ರ ಶೇಡಗೆ ಇವರು ಪ್ರೀಸೆಟರ್ ಮಾಡೆಲ್ ಖರೀದಿಸುವಾಗ ಮತ್ತು ನಂತರ ಆ ಮಾಡೆಲ್ ನೀಡಿರುವ ಸರ್ವಿಸ್ ಕುರಿತು ಹೇಳುತ್ತಾರೆ, “ಝೋಲರ್ ಇವರ ಪ್ರೀಸೆಟರ್ ಖರೀದಿಸುವ ಮುಂಚೆ ನಮ್ಮಲ್ಲಿದ್ದ ಟೂಲ್ ಸೆಟ್ ಮಾಡುವ ಉಪಕರಣದಲ್ಲಿ ನಿರ್ದೋಷವಾದ ರೀಡಿಂಗ್ ನೇರವಾಗಿ ಜಾಬ್ ನಲ್ಲಿ ಸಿಗುತ್ತಿರಲಿಲ್ಲ. ಯಾವುದೇ ರೀತಿಯ ವ್ಯತ್ಯಾಸಗಳು ಕಂಡುಬರುತ್ತಿದ್ದವು. ಇದರ ಮುಖ್ಯ ಕಾರಣವೆಂದರೆ ಟೂಲ್ ಪ್ರೀಸೆಟರ್ ನಲ್ಲಿ ಅಳವಡಿಸಿದ ನಂತರ ಉದ್ಭವಿಸುವ ರನ್-ಔಟ್. ಅಲ್ಲದೇ ಉಪಕರಣಗಳಲ್ಲಿ ವಿವಿಧ ಆಕಾರದ ಪ್ರೊಫೈಲ್ ಸೆಟ್ ಮಾಡುವಲ್ಲಿ ಎದುರಿಸಬೇಕಾಗಿದ್ದ ಮಿತಿಗಳು. ಝೋಲರ್ ನ ಪ್ರೀಸೆಟರ್ ನ ಅನೇಕ ವೈಶಿಷ್ಟ್ಯಗಳೂ ನಮ್ಮ ಗಮನವನ್ನುಸೆಳೆದಿದ್ದವು. ಇದಕ್ಕೋಸ್ಕರ ನೇರವಾಗಿ ಝೋಲರ್ ನ 
 

Image Cr. 5_1   
 
ಚಿತ್ರ ಕ್ರ. 5 
 
ಶೋರೂಮ್ ಗೆ ಭೇಟಿ ನೀಡಿ ಅವರಲ್ಲಿರುವ ಉಪಕರಣಗಳಲ್ಲಿ 4-5 ರೀತಿಯ ಟೂಲ್ ಗಳನ್ನು ಸೆಟ್ ಮಾಡಿ ತರಲಾಯಿತು. ಅವುಗಳ ಕಾರ್ಯ ಸಾಮರ್ಥ್ಯವನ್ನು ಪ್ರತ್ಯಕ್ಷವಾಗಿ ಜಾಬ್ ನಲ್ಲಿ ಪರಿಶೀಲಿಸಿದೆವು. ಝೋಲರ್ ಇವರಿಂದಲೂ ಸಕಾರಾತ್ಮಕವಾದ ಪ್ರತಿಕ್ರಿಯೆಯೂ ಲಭಿಸಿತು. ಇದರಿಂದಾಗಿ ಅವರ ಉತ್ಪಾದನೆಗಳಲ್ಲಿ ವಿಶ್ವಾಸವು ಇನ್ನಷ್ಟು ದೃಢವಾಯಿತು. ನಾವು ಝೋಲರ್ ಇವರ ಪ್ರೀಸೆಟರ್ ಖರೀದಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಟೂಲ್ ಪ್ರೀಸೆಟರ್ ಬಳಸಿದ್ದರಿಂದ ಟೂಲ್ ಗಳ ಖರ್ಚಿನಲ್ಲಿ ಶೇಕಡಾ 20 ರಷ್ಟು ಉಳಿತಾಯವಾಯಿತು, ಎಂಬುದನ್ನು ದೃಢಪಡಿಸಲಾಯಿತು. 
 
ಸಂಜಯ್ ಟೂಲ್ಸ್ ನಲ್ಲಿರುವ ಪ್ರೀಸೆಟರ್ ನಲ್ಲಿ ಪರೀಕ್ಷೆ ಮಾಡಲಾಗುವ ಟೂಲ್ ಗಳಲ್ಲಿ ಹಲವಾರು ಪ್ರಾತಿನಿಧಿಕವಾದ ಟೂಲ್ ಗಳನ್ನು ಚಿತ್ರ ಕ್ರ. 5 ರಲ್ಲಿ ನೀಡಲಾಗಿದೆ.

“ಪ್ರೀಸೆಟರ್ ನ ಮೇಲ್ಭಾಗದಲ್ಲಿ ಅಳವಡಿಸಿರುವ 90° ಯಲ್ಲಿ ತಿರುಗುವ ಕ್ಯಾಮೆರಾದಿಂದಾಗಿ ವಿವಿಧ ಪ್ರೊಫೈಲ್ ಗಳಿರುವ ಟೂಲ್ ಗಳ ಪ್ರೊಫೈಲ್ ನ ತಪಾಸಣೆಯನ್ನು ನಿರ್ದೋಷವಾಗಿ ಮಾಡಲಾಗುತ್ತದೆ. ಅಲ್ಲದೇ ಅದರಲ್ಲಿ ಅಳವಡಿಸಿರುವ LED ಯ ಬೆಳಕಿನಿಂದಾಗಿ ಯಾವುದೇ ಟೂಲ್ ಗೆ ರನ್-ಔಟ್ ಇದ್ದಲ್ಲಿ ವ್ಯಾಸದ ಎರಡೂ ಬದಿಗಳ ತಪಾಸಣೆಯನ್ನು ಮಾಡುವುದು ಸುಲಭವಾಗುತ್ತದೆ. ರನ್-ಔಟ್ ನ ಪರೀಕ್ಷೆಯನ್ನು ಮಾಡಲು ಬೇರೆಯೇ ಪ್ರೊಗ್ರಾಮ್ ಪ್ರೀಸೆಟರ್ ನಲ್ಲಿದೆ. ಯಾವುದೇ ಟೂಲ್ ನ ಕ್ಯಾಡ್ ಡ್ರಾಯಿಂಗ್ ಲಭ್ಯವಿದ್ದಲ್ಲಿ ಅದನ್ನು ಸಿಸ್ಟಮ್ ನಲ್ಲಿ ಲೋಡ್ ಮಾಡಬಹುದು ಮತ್ತು ಆ ಡ್ರಾಯಿಂಗ್ ನೊಂದಿಗೆ ನೇರವಾಗಿ ಟೂಲ್ ನ್ನು ಹೋಲಿಸಲಾಗುತ್ತದೆ, ಇದೂ ಒಂದು ಪ್ರಮುಖವಾದ ವೈಶಿಷ್ಟ್ಯವಾಗಿದೆ.” 
 
 
ಸಂಜಯ್ ಟೂಲ್ಸ್ ಗಳಲ್ಲಿ ಬಳಸಲಾಗುವ ಝೋಲರ್ ಕಂಪನಿಯ ಸ್ಲೈಲ್ 400 ಮಾಡೆಲ್ ನಲ್ಲಿ ಒಂದು ಹೊಸದಾದ ಟೂಲ್ ಪರಿಶೀಲಿಸುವ ವಿಡಿಯೋ ತಯಾರಿಸಲಾಯಿತು. ಪ್ರೀಸೆಟರ್ ನ ಒಟ್ಟಾರೆ ಕೆಲಸವನ್ನು ಅರಿತುಕೊಳ್ಳಲು ಪಕ್ಕದಲ್ಲಿ ನೀಡಿರುವ QR ಕೋಡನ್ನು ತಮ್ಮ ಮೊಬೈಲ್ ನಿಂದ ಸ್ಕ್ಯಾನ್ ಮಾಡಿರಿ.

“ಈ ಪ್ರೀಸೆಟರ್ ನಲ್ಲಿ ಟೂಲ್ ಸೆಟ್ ಮಾಡಿದ ನಂತರ ಅದರ ವರದಿಯನ್ನು ತಯಾರಿಸುವ ವ್ಯವಸ್ಥೆಯೂ ಇದೆ. ಅಲ್ಲದೇ ‘ಝೋಲರ್’ ಇವರ ಹೆಸರು ಮುಂಚೂಣಿಯಲ್ಲಿರುವುದರಿಂದ ಈ ವರದಿಯು ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹವಾಗಿದೆ. ನಾವು ಇಂತಹ ವರದಿಯ ರೆಕಾರ್ಡ್ಸ್ ಗಳನ್ನು ನಮ್ಮಲ್ಲಿ ಶೇಖರಿಸಿ ಇಡುವುದರಿಂದ ನಮ್ಮ ಗ್ರಾಹಕರು ನಮ್ಮೊಂದಿಗೆ ವಿಶ್ವಾಸಾರ್ಹ ಸಂಬಂಧವನ್ನು ಇಟ್ಟುಕೊಂಡಿದ್ದಾರೆ.’’ 
 
9923752936
salunkhe@zoller-in.com
ಅಮಿತ್ ಸಾಳುಂಖೆ ಇವರಿಗೆ ಇಂಜಿನಿಯರಿಂಗ್ ಇಂಡಸ್ಟ್ರಿಯಲ್ಲಿ ಸುಮಾರು 15 ವರ್ಷಗಳ ಅನುಭವವಿದೆ. ಅವರು ಪ್ರೀಸೆಟಿಂಗ್ ಅಂಡ್ ಇನ್ ಸ್ಪೆಕ್ಷನ್ ಮಶಿನ್ ನಲ್ಲಿ ಸುಮಾರು 11 ವರ್ಷಗಳ ಕಾಲಾವಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ‘ಝೋಲರ್ ಇಂಡಿಯಾ ಪ್ರೈ.ಲಿ.’ ಕಂಪನಿಯ ಸೌಥ್ ಈಸ್ಟ್ ಏಶಿಯಾ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿದ್ದಾರೆ.
Powered By Sangraha 9.0