ವಿಶ್ವದಲ್ಲಿ ‘ಮಹಿಳೆಯರೇ ನಡೆಸುವ’ ಅತಿದೊಡ್ಡ ಇಲೆಕ್ಟ್ರಿಕಲ್ ಸ್ಕೂಟರ್ ಪ್ಲಾಂಟ್ - ‘ಓಲಾ’ ಕಂಪನಿಯಿಂದ ಪ್ರಾರಂಭ

Lohkarya - Udyam Prakashan    09-Oct-2021
Total Views |
 
electric scooter plant_1&
 
ಪುಣೆ : ಒಂದು ಕೋಟಿ ಇಲೆಕ್ಟ್ರಿಕ್ ಟೂ-ವೀಲರ್ ಉತ್ಪಾದನೆಯ ಸಾಮರ್ಥ್ಯವುಳ್ಳ, ಮಹಿಳೆಯರಿಂದಲೇ ನಡೆಸಲಾಗುವ ಪ್ಲಾಂಟ್ ‘ಓಲಾ’ ಈ ಕಂಪನಿಯು ಪ್ರಾರಂಭಿಸಲಿದೆ. “ಸಂಪೂರ್ಣ ಕ್ಷಮತೆಯುಳ್ಳ ಈ ಕಂಪನಿಯಲ್ಲಿ ಉತ್ಪಾದನೆಯ ಕೆಲಸಕ್ಕೆ ಆರಂಭವಾಗಲಿದ್ದು ಸುಮಾರು 10 ಸಾವಿರ ಮಹಿಳೆಯರ ನೇಮಕಾತಿಯನ್ನು ತನ್ನ ಫ್ಯಾಕ್ಟರಿಯಲ್ಲಿ ಮಾಡಲಾಗುತ್ತದೆ,” ಎಂಬುದಾಗಿ ಕಂಪನಿಯ ಅಧಿಕೃತ ಬ್ಲಾಗ್ ನಲ್ಲಿ ಕಂಪನಿಯ ಸಹ-ಸಂಸ್ಥಾಪಕರಾದ ಶ್ರೀ. ಭಾವೀಶ್ ಅಗ್ರವಾಲ್ ಇವರು ಈ ಕುರಿತು ತಿಳಿಸಿದ್ದಾರೆ.
“ಕಂಪನಿಯು ಮೊದಲನೇ ತಂಡದ ನೇಮಕಾತಿಯನ್ನು ಈ ವಾರದಲ್ಲಿ ಮಾಡಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕಂಪನಿಯು 10 ಸಾವಿರ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ನೀಡಿ ಪೂರ್ಣ ಕ್ಷಮತೆಯಿಂದ ನಿರ್ಮಿತಿಯನ್ನು ಪ್ರಾರಂಭಿಸಲಿದೆ. ‘ಓಲಾ’ ಕಂಪನಿ ಈ ಪ್ಲಾಂಟ್ ಮಹಿಳೆಯರೇ ಕಾರ್ಯನಿರತರಾಗಿರಬಲ್ಲ ಫ್ಯಾಕ್ಟರಿಯಾಗಿದ್ದು, ಇಡೀ ವಿಶ್ವದಲ್ಲಿಯೇ ಆಟೊಮೋಟಿವ್ ವಲಯದಲ್ಲಿ ಈ ವ್ಯವಸ್ಥೆಯನ್ನು ಕಾರ್ಯಗತಗೊಳಿಸುವ ಮೊತ್ತಮೊದಲ ಕಂಪನಿಯಾಗಿದೆ. ಮಹಿಳೆಯರಿಗೋಸ್ಕರ ಹೆಚ್ಚೆಚ್ಚು ಉದ್ಯೋಗಾವಕಾಶಗಳನ್ನು ನೀಡುತ್ತಿದ್ದು, ದೇಶದಲ್ಲಿ ಆರ್ಥಿಕ ವ್ಯವಹಾರಗಳಿಗೆ ಸದವಕಾಶಗಳನ್ನು ಒದಗಿಸುವ ಮೊತ್ತಮೊದಲ ಕಂಪನಿಯೆಂದು ‘ಓಲಾ’ ಕಂಪನಿಯು ಹೆಮ್ಮೆಗೆ ಪಾತ್ರವಾಗಿದೆ. ಕಂಪನಿಯು ಮಹಿಳೆಯರಿಗೆ ಉನ್ನತ ತರಬೇತಿ ಮತ್ತು ಅವರ ಕುಶಲತೆಯನ್ನು ಅಭಿವೃದ್ಧಿ ಪಡಿಸಲು ಬೃಹತ್ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಿದೆ. ‘ಓಲಾ’ ಕಂಪನಿಯಲ್ಲಿ ಇಲೆಕ್ಟ್ರಿಕ್ ವಾಹನಗಳ ಉತ್ಪಾದನೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಹಿಳೆಯರೇ ವಹಿಸಲಿದ್ದಾರೆ,” ಎಂದು ಶ್ರೀ. ಅಗ್ರವಾಲ್ ಇವರು ತಿಳಿಸಿದ್ದಾರೆ.
“ತಮಿಳುನಾಡಿನಲ್ಲಿ 2,400 ಕೋಟಿ ರೂಪಾಯಿಗಳಷ್ಟು ಬಂಡವಾಳವನ್ನು ಕಳೆದ ವರ್ಷ ಹೂಡುವುದಾಗಿ ‘ಓಲಾ’ ಕಂಪನಿಯು ಘೋಷಿಸಿತ್ತು. ವಿಶ್ವದಲ್ಲಿಯೇ ಸ್ಕೂಟರ್ ಗಳನ್ನು ನಿರ್ಮಿಸುವ ಬಹುದೊಡ್ಡ ಕಂಪನಿಯೆಂದು ಮುನ್ನಡೆಯನ್ನು ಸಾಧಿಸಲಿದೆ. ಪ್ರಾರಂಭದಲ್ಲಿ ವರ್ಷವೊಂದಕ್ಕೆ 10 ಲಕ್ಷ ವಾಹನಗಳ ನಿರ್ಮಿತಿಯನ್ನು ಮಾಡುವ ಯೋಜನೆಯನ್ನು ಕಂಪನಿಯು ಹಮ್ಮಿಕೊಂಡಿರುತ್ತದೆ. ಅದರ ನಂತರ ಈ ಉತ್ಪಾದನೆಯ ಕ್ಷಮತೆಯನ್ನು ಪ್ರತಿವರ್ಷಕ್ಕೆ 20 ಲಕ್ಷದಷ್ಟು ಏರಿಸುವ ವಿಚಾರವಿದ್ದು, ಮಾರುಕಟ್ಟೆಯ ಬೇಡಿಕೆಗೆ ಅನುಸಾರವಾಗಿ ಇದನ್ನು ಕಾರ್ಯಗತಗೊಳಿಸಲಾಗುತ್ತದೆ,” ಎಂಬುದಾಗಿಯೂ ಅವರು ತಿಳಿಸಿದ್ದಾರೆ.