ಈ ಹಿಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗಿರುವ ಲೇಖನದಲ್ಲಿ ಬ್ಯಾಲೆನ್ಸ್ ಶೀಟ್ ನ ಮಾದರಿಯನ್ನು ನೀಡಿಲಾಗಿತ್ತು. ಪಾವತಿಸುವಿಕೆಗಳು ಮತ್ತು ಆಸ್ತಿಪಾಸ್ತಿ ಇವೆರಡರಲ್ಲಿಯೂ ತೋರಿಸಲಾಗಿರುವ ವಿವಿಧ ಲೆಜರ್ ಅಕೌಂಟ್ ಗಳ ಪ್ರಸ್ತುತಿಯನ್ನು ಅವುಗಳ ಗ್ರೂಪ್ ತಯಾರಿಸಿ ವಿಶಿಷ್ಟ ಶೀರ್ಷಿಕೆಯಲ್ಲಿ ಒಂದು ಫಾರ್ಮೆಟ್ ನಲ್ಲಿ ಮಾಡಲಾಗಿದೆ, ಎಂಬುದನ್ನು ನಾವು ತಿಳಿದುಕೊಂಡೆವು. ಯಾವ್ಯಾವ ಶೀರ್ಷಿಕೆಗಳಲ್ಲಿ ಮತ್ತು ಯಾವ್ಯಾವ ವಿಚಾರಗಳಿಗೆ ಆಧರಿಸಿ ಆ ಪ್ರಸ್ತುತಿಯನ್ನು ಮಾಡಲಾಗಿದೆ, ಎಂಬುದರ ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳಲಿದ್ದೇವೆ.
ಸೂಚನೆ : ಬ್ಯಾಲೆನ್ಸ್ ಶೀಟ್ ನ ಕೋಷ್ಟಕವನ್ನು ಸಪ್ಟೆಂಬರ್ 2021 ತಿಂಗಳ ‘ಲೋಹಕಾರ್ಯ’ದ ಸಂಚಿಕೆಯಲ್ಲಿ ಓದಿರಿ.
ಈ ಕುರಿತು ವಿಶೇಷವಾಗಿ ಗಮನಕ್ಕೆ ಬರುವ ಅಂಶವೆಂದರೆ, ಪಾವತಿಸುವಿಕೆ ಮತ್ತು ಆಸ್ತಿಪಾಸ್ತಿಗಳು. ಈ ಎರಡರ ಕುರಿತು ವ್ಯವಹಾರದಲ್ಲಿ ಅವುಗಳ ಸ್ಥಾನಮಾನವು ಎಷ್ಟು ಕಾಲಾವಧಿಗೋಸ್ಕರ ಇರಬಲ್ಲದು ಎಂಬ ಪ್ರಮುಖ ಅಂಶವನ್ನು ನೀಡಲು ಮೊದಲ ವರ್ಟಿಕಲ್ ಭಾಗದಲ್ಲಿ ದೀರ್ಘ ಕಾಲಾವಧಿಗೋಸ್ಕರ ನಗದಿಯು ವ್ಯವಸಾಯಕ್ಕೆ ಪಾವತಿಸುವಿಕೆಯ ಸ್ವರೂಪದಲ್ಲಿ ಲಭಿಸಿದೆ, ಎಂದು ಮೊದಲಾಗಿ ತೋರಿಸಲಾಗಿದೆ. ಅದರ ನಂತರ ಸ್ವಲ್ಪ ಕಾಲಾವಧಿಗೋಸ್ಕರ ಬಳಸಲು ಯಾವ ಮೊತ್ತವು ವ್ಯವಹಾರಕ್ಕೆ ಪಾವತಿಸುವಿಕೆಯ ಸ್ವರೂಪದಲ್ಲಿ ಲಭಿಸಿವೆಯೋ, ಅವುಗಳನ್ನು ಕರಂಟ್ ಪಾವತಿಸುವಿಕೆಯ ಶೀರ್ಷಿಕೆಯಲ್ಲಿ ತೋರಿಸಲಾಗಿವೆ. ಅದೇ ರೀತಿಯಲ್ಲಿ ಆಸ್ತಿ-ಪಾಸ್ತಿಗಳನ್ನು ಇನ್ನೊಂದು ವರ್ಟಿಕಲ್ ಭಾಗದಲ್ಲಿ ದೀರ್ಘ ಕಾಲಾವಧಿಗೋಸ್ಕರ ವ್ಯವಹಾರದಲ್ಲಿ ಯಾವ ಆಸ್ತಿಪಾಸ್ತಿಗಳು ಇರಬಲ್ಲವೋ ಅವುಗಳನ್ನು ಮೊತ್ತಮೊದಲಾಗಿ ತೋರಿಸಲಾಗಿದೆ. ಅದರ ನಂತರ ಕಡಿಮೆ ಕಾಲಾವಧಿಗೋಸ್ಕರ ಯಾವ ಆಸ್ತಿಪಾಸ್ತಿಗಳಲ್ಲಿ ವ್ಯವಹಾರದಿಂದ ಬಂಡವಾಳವನ್ನು ಹೂಡಲಾಗಿದೆಯೋ, ಇಂತಹ ಎಲ್ಲ ಆಸ್ತಿಪಾಸ್ತಿಗಳನ್ನು ಕರಂಟ್ ಅಸೆಟ್ಸ್ ಎಂಬ ಶೀರ್ಷಿಕೆಯಲ್ಲಿ ತೋರಿಸಲಾಗಿದೆ.
ಪಾವತಿಸುವಿಕೆಗಳಿರಲಿ ಅಥವಾ ಆಸ್ತಿಪಾಸ್ತಿಗಳಿರಲಿ, ಎಷ್ಟು ಕಾಲಾವಧಿಗೆ ಎಂಬ ಅಂಶವು ವ್ಯವಹಾರದಲ್ಲಿ ಇರುತ್ತದೆ, ಇದು ಬ್ಯಾಲೆನ್ಸ್ ಶೀಟ್ ನಲ್ಲಿ ಪ್ರಸ್ತುತ ಪಡಿಸಲಾಗಿರುವ ಪ್ರಮುಖ ಅಂಶವಾಗಿದೆ. ಈ ಅಂಶಗಳಿಗೆ ಅನುಸಾರವಾಗಿ ಎಲ್ಲಕ್ಕಿಂತಲೂ ಹೆಚ್ಚು ಕಾಲಾವಧಿಗೋಸ್ಕರ ವ್ಯವಹಾರದಲ್ಲಿರುವ ಪಾವತಿಸುವಿಕೆಗಳ ಅಂಕೆ-ಸಂಖ್ಯೆಗಳನ್ನು ಪಾವತಿಸುವಿಕೆಯ ಭಾಗದಲ್ಲಿ ಮೊದಲಾಗಿಯೇ ತೋರಿಸಲಾಗುತ್ತದೆ. ಅದರ ನಂತರ ಕಾಲಾವಧಿಯ ಇಳಿತದ ಕ್ರಮಕ್ಕೆ ಅನುಸಾರವಾಗಿ ಇನ್ನಿತರ ಪಾವತಿಸುವಿಕೆಗಳನ್ನು ತೋರಿಸಲಾಗುತ್ತದೆ.
ಯಾವ ಪಾವತಿಸುವಿಕೆಗಳು ವ್ಯವಹಾರದಲ್ಲಿ ಎಲ್ಲಕ್ಕಿಂತಲೂ ಹೆಚ್ಚು ಸಮಯಕ್ಕೋಸ್ಕರ ಇರಬಲ್ಲವು ಇದನ್ನು ಹೇಳುವುದು ಸುಲಭವಾಗಿದೆ. ವ್ಯವಹಾರದ ಮಾಲಿಕರು ಯಾರಾಗಿದ್ದಾರೆಯೋ, ಅವರು ವ್ಯವಹಾರದಲ್ಲಿ ಹೂಡಿರುವ ಹಣ ಅಂದರೆ ಬಂಡವಾಳ, ವ್ಯವಹಾರವು ನಡೆಯುವಷ್ಟು ಕಾಲ ಹಿಂತಿರುಗಿಸಲಾಗುವುದಿಲ್ಲ. ಇದರ ಕಾರಣವೆಂದರೆ ಮಾಲಿಕರಿಂದ ವ್ಯವಹಾರದಲ್ಲಿ ಬಂಡವಾಳ ಹೂಡಲ್ಪಡದಿದ್ದಲ್ಲಿ ಇನ್ನಿತರರು ಅಥವಾ ವ್ಯವಹಾರದಲ್ಲಿ ಸಂಬಂಧ ಇಲ್ಲದಿದ್ದವರು ಯಾರಲ್ಲಿ ಭರವಸೆಯನ್ನಿಟ್ಟು ಸಾಲದ ಸ್ವರೂಪದಲ್ಲಿ ನೀಡಿರುವ ಹಣವನ್ನು ಬಂಡವಾಳವೆಂಬುದಾಗಿ ವ್ಯವಹಾರಕ್ಕೆ ನೀಡಬಲ್ಲರೇ, ಇದೊಂದು ಗಂಭೀರ ಪ್ರಶ್ನೆ. ಹೊರಗಿನ ವ್ಯಕ್ತಿ ಮತ್ತು ಸಂಸ್ಥೆಯು ತಾವು ಪಾವತಿ ಮಾಡಬೇಕಾಗಿರುವ ಮೊತ್ತಗಳನ್ನು ಪಾವತಿಸದಿದ್ದಲ್ಲಿ ಮಾಲಿಕರು ವ್ಯವಹಾರದಿಂದ ಬಂಡವಾಳವನ್ನು ತೆಗೆಯಲು ನಿರ್ಬಂಧಿಸಬಲ್ಲರು. ಕಂಪನಿಗಳ ಕುರಿತು ಹೇಳುವುದಾದಲ್ಲಿ ಕಂಪನಿಗಳ ಕಾನೂನುಗಳ ಪ್ರಕಾರ ಇನ್ನಿತರ ಎಲ್ಲ ರೀತಿಯ ಪಾವತಿಸುವಿಕೆಗಳನ್ನು ಪಾವತಿಸದೇ ಕಂಪನಿಯ ಶೇರ್ ಹೋಲ್ಡರ್ ಇವರು ಹೂಡಿರುವ ಬಂಡವಾಳವನ್ನು ಕೆಲವು ಅಪವಾದಗಳನ್ನು ಬಿಟ್ಟು ಹಿಂತಿರುಗಿಸುವುದು ಅಸಾಧ್ಯ. ಅರ್ಥಾತ್ ಬಂಡವಾಳದ ಮರುಪಾವತಿಸುವಿಕೆಯು ವ್ಯವಹಾರದ ಕೊನೆಯಲ್ಲಿ ಮಾಡಬಹುದು. ಹಡಗು ಸಮುದ್ರದಲ್ಲಿ ಮುಳುಗುವ ಪರಿಸ್ಥಿತಿಯು ಉದ್ಭವಿಸಿದಲ್ಲಿ ಹಡಗಿನ ಚಾಲಕ ಮತ್ತು ಇನ್ನಿತರ ಪ್ರಯಾಣಿಕರನ್ನು ಮತ್ತು ಹಡಗಿನಲ್ಲಿರುವ ಸಿಬ್ಬಂಧಿಯನ್ನು ‘ಲೈಫ್ ಬೋಟ್’ನಲ್ಲಿ ಕುಳಿತಿದ್ದಾರೆಯೇ, ಎಂಬುದರ ಕುರಿತು ಖಾತರಿ ಮಾಡುತ್ತಾನೆ. ನಂತರವೇ ತಾನು ಹಡಗನ್ನು ಬಿಟ್ಟು ಅವನೂ ‘ಲೈಫ್ ಬೋಟ್’ನಲ್ಲಿ ಕುಳಿತುಕೊಳ್ಳುತ್ತಾನೆ. ಅದರಂತೆಯೇ ವ್ಯವಸಾಯದ ಮುಖಂಡನೂ ಎಲ್ಲರಿಗೂ ಮರುಪಾವತಿಸಬೇಕಾಗಿರುವ ಮೊತ್ತಗಳನ್ನು ಪಾವತಿಸದೇ ತನ್ನ ಬಂಡವಾಳವನ್ನು ವ್ಯವಹಾರದಿಂದ ಹಿಂತಿರುಗಿ ಪಡೆಲಾರೆನು, ಎಂಬ ಅರಿವು ಅವನಿಗಿರುತ್ತದೆ. ಅಂದರೆ ಮಾಲಿಕರು ವ್ಯವಹಾರದಲ್ಲಿ ಹೂಡಿರುವ ಬಂಡವಾಳಕ್ಕೆ ಅನುಗುಣವಾಗಿ ವ್ಯವಹಾರದಲ್ಲಿ ಉದ್ಭವಿಸುವ ಪಾವತಿಸುವಿಕೆಗಳು, ವ್ಯವಹಾರದಲ್ಲಿ ದೀರ್ಘ ಕಾಲ ಉಳಿಯುತ್ತದೆ, ಅದಕ್ಕೋಸ್ಕರವೇ ಬ್ಯಾಲೆನ್ಸ್ ಶೀಟ್ ನಲ್ಲಿ ಪಾವತಿಸುವಿಕೆಗಳನ್ನು ವರ್ಟಿಕಲ್ ಭಾಗದಲ್ಲಿ ಎಲ್ಲಕ್ಕಿಂತಲೂ ಮೊದಲಾಗಿಯೇ ತೋರಿಸಲಾಗುತ್ತದೆ. ಆಸ್ತಿಪಾಸ್ತಿಗಳ ಇನ್ನೊಂದು ಕಾಲಮ್ ನಲ್ಲಿಯೂ ಎಲ್ಲಕ್ಕಿಂತಲೂ ದೀರ್ಘಾವಧಿಗೆ ಯಾವ ಆಸ್ತಿಪಾಸ್ತಿಗಳು (ಅಸೆಟ್ಸ್) ಉಳಿಯುವ ಸಾಧ್ಯತೆ ಇದೆಯೋ, ಅವುಗಳನ್ನು ಅಗ್ರ ಕ್ರಮಾಂಕದಲ್ಲಿ ತೋರಿಸಲಾಗುತ್ತದೆ. ಅದರ ನಂತರ ಕಾಲಾವಧಿಯ ಇಳಿತದ ಕ್ರಮದಲ್ಲಿ ಇನ್ನಿತರ ಎಲ್ಲ ಆಸ್ತಿಪಾಸ್ತಿಗಳನ್ನು ತೋರಿಸಲಾಗುತ್ತದೆ. ಪಾವತಿಸುವಿಕೆಗಳ ಕುರಿತು ಹೇಳುವುದಾದರೆ, ಮಾಲಿಕರು ಹೂಡಿರುವ ಬಂಡವಾಳವು ಹೇಗೆ ಎಲ್ಲಕ್ಕಿಂತಲೂ ದೀರ್ಘಾವಧಿಯಲ್ಲಿ ವ್ಯವಹಾರದಲ್ಲಿ ಉಳಿಯುವ ಪಾವತಿಸುವಿಕೆ ಆಗಿರುತ್ತದೆ. ಹಾಗೆಯೇ ಅಸ್ತಿಪಾಸ್ತಿಗಳಲ್ಲಿ ರಿಯಲ್ ಎಸ್ಟೇಟ್ ಸ್ವರೂಪದ ಅಸೆಟ್ಸ್ ಗಳಿದ್ದಲ್ಲಿ, ಅಂದರೆ ಜಮೀನು, ಕಟ್ಟಡಗಳು ಮುಂತಾದವು ವ್ಯವಹಾರದಲ್ಲಿ ದೀರ್ಘ ಕಾಲಾವಧಿಯ ತನಕ ಉಳಿಯುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ದೀರ್ಘಾವಧಿಯ ಆಸ್ತಿಪಾಸ್ತಿಗಳು ಎಲ್ಲಕ್ಕಿಂತಲೂ ಮೊದಲ ಸ್ಥಾನದಲ್ಲಿರುತ್ತವೆ. ವ್ಯವಹಾರದಲ್ಲಿ ತಳವೂರಿ ನಿಲ್ಲುವ ಕಾಲಾವಧಿಯ ಮಾನದಂಡಗಳಿಗೆ ಅನುಸಾರವಾಗಿ ದೀರ್ಘಾವಧಿ ಮತ್ತು ಕಡಿಮೆ ಅವಧಿ ಎಂಬುದಾಗಿ ಕರಂಟ್ ವಿಧದ ಆಸ್ತಿಪಾಸ್ತಿ ಮತ್ತು ಪಾವತಿಸುವಿಕೆಯ ವಿಂಗಡಣೆಯನ್ನು ಮಾಡಲಾಗುತ್ತದೆ. ಈ ರೀತಿಯಲ್ಲಿ ವಿಂಗಡಿಸುತ್ತಿರುವಾಗ ಅಕೌಂಟಿಂಗ್ ನ ನಿಯಮಗಳಿಗೆ ಅನುಸಾರವಾಗಿ ಒಂದು ವರ್ಷಕ್ಕಿಂತ ಹೆಚ್ಚು ಕಾಲಾವಧಿಗೋಸ್ಕರ ವ್ಯವಹಾರದಲ್ಲಿ ಇರಬಲ್ಲ ಆಸ್ತಿಪಾಸ್ತಿ ಮತ್ತು ಪಾವತಿಸುವಿಕೆಗಳನ್ನು ದೀರ್ಘಾವಧಿಯಲ್ಲಿ ವರ್ಗೀಕರಿಸಲಾಗುತ್ತದೆ. ಆದಕ್ಕಿಂತ ಕಡಿಮೆ ಕಾಲಾವಧಿಯ ಆಸ್ತಿಪಾಸ್ತಿ ಮತ್ತು ಪಾವತಿಸುವಿಕೆಗಳನ್ನು ಕರಂಟ್ ಗುಂಪಿನಲ್ಲಿ ಸೇರ್ಪಡಿಸಲಾಗುತ್ತದೆ. ಅದೇ ಸಮಯದಲ್ಲಿ ಯಾವುದೇ ಆಸ್ತಿಪಾಸ್ತಿಯು ವ್ಯವಹಾರದಲ್ಲಿ ಸೇರ್ಪಡೆಯಾದಾಗ ಅಥವಾ ಯಾವುದೊಂದು ರೀತಿಯ ಪಾವತಿಸುವಿಕೆಯು ಉದ್ಭವಿಸಿದಲ್ಲಿ ಆಗ ಒಂದೇ ವರ್ಷದ ಮಾನದಂಡ ಎಂಬುದಾಗಿ ಪರಿಗಣಿಸಲಾಗುತ್ತದೆ. ಅಂದರೆ ಯಾರೊಬ್ಬ ಪೂರೈಕೆಗಾರನು ಅನೇಕ ವರ್ಷಗಳ ಕಾಲಾವಧಿಯಲ್ಲಿ ಕ್ರೆಡಿಟ್ ನಲ್ಲಿ ವಸ್ತುಗಳನ್ನು ಪೂರೈಸುತ್ತಿದ್ದರೂ ಕೂಡಾ ಅದರ ಲೆಜರ್ ಅಕೌಂಟ್ ಕರಂಟ್ ಪಾವತಿಸುವಿಕೆಯ ಶೀರ್ಷಿಕೆಯಲ್ಲಿ ಅಳವಡಿಸಲಾಗುತ್ತದೆ. ಅದಕ್ಕೆ ಕಾರಣವೆಂದರೆ, ಅವನ ಅಕೌಂಟ್ ನಲ್ಲಿ ಉಂಟಾಗಿರುವ ಪ್ರತಿಯೊಂದು ಪಾವತಿಸುವಿಕೆಗಳು ಅವನಿಂದ ಬಂದಿರುವ ಬಿಲ್ ಗಳಿಂದಲೇ ಮೂಡಿಬಂದಿರುತ್ತವೆ ಮತ್ತು ಬಿಲ್ ನ ತಾರೀಕಿನ ನಂತರ ಆದಷ್ಟು ಬೇಗ ಅದರ ಪೆಮೆಂಟ್ ಮಾಡುವುದು ವ್ಯವಹಾರದಲ್ಲಿ ಕಡ್ಡಾಯವಾಗಿರುತ್ತದೆ. ಪೂರೈಕೆಗಾರರ ಯಾವುದೇ ಬಿಲ್ ಒಂದು ವರ್ಷಕ್ಕಿಂತ ಹೆಚ್ಚು ಕಾಲಾವಧಿಯಲ್ಲಿ ಪೆಮೆಂಟ್ ಗೋಸ್ಕರ ತಡೆಯಲಾಗುವುದಿಲ್ಲ ಮತ್ತು ಬ್ಯಾಲೆನ್ಸ್ ಶೀಟ್ ತಯಾರಿಸುವ ದಿನ ಅವನ ಅಕೌಂಟ್ ನಲ್ಲಿರುವ ಮೊತ್ತವನ್ನು ಪಾವತಿಸುವಿಕೆಗಳು ಎಂಬುದಾಗಿ ಕಾಣಬಲ್ಲವು, ಅದರ ಪೆಮೆಂಟ್ ಬ್ಯಾಲೆನ್ಸ್ ಶೀಟ್ ನ ತಾರೀಕಿನಿಂದ ಒಂದು ವರ್ಷದೊಳಗೆ ಕೊಡುವುದನ್ನು ಅಪೇಕ್ಷಿಸಲಾಗಿದೆ. ಮುಂದಿನ ಬ್ಯಾಲೆನ್ಸ್ ಶೀಟ್ ನ ತಾರೀಕಿನ ತನಕ ಆ ಬಿಲ್ ಗಳ ಮರುಪಾವತಿಯನ್ನು ಮಾಡದಿರುವುದರಿಂದ ಕರಂಟ್ ಪಾವತಿಸುವಿಕೆಯ ಶೀರ್ಷಿಕೆಯಡಿಯಲ್ಲಿ ಅವುಗಳು ಕಂಡುಬರುತ್ತವೆ. ಇದೇ ರೀತಿಯಲ್ಲಿ ಗ್ರಾಹಕರು, ಮಶಿನ್, ಸ್ಟಾಫ್ ಅಡ್ವಾನ್ಸ್ ಈ ರೀತಿಯ ಇನ್ನಿತರ ಎಲ್ಲ ಅಕೌಂಟ್ ಗಳ ವರ್ಗೀಕರಣವನ್ನು ದೀರ್ಘಾವಧಿಯ ಮತ್ತು ಕರಂಟ್ ಎಂಬ ವಿಧದಲ್ಲಿ ವಿಂಗಡಿಸಲಾಗುತ್ತದೆ.
ಆಸ್ತಿಪಾಸ್ತಿಗಳ ಕುರಿತು ಹೇಳುವುದಾದಲ್ಲಿ ಮೇಲಿನ ಮಾನದಂಡಗಳಿಗೆ ಅನುಸಾರವಾಗಿ ಪ್ರಮುಖವಾಗಿ ಎರಡು ರೀತಿಯಲ್ಲಿ ವಿಂಗಡಿಸಬಹುದು. ಒಂದೆಂದರೆ ವ್ಯವಹಾರದಲ್ಲಿ ದೀರ್ಘಾವಧಿಗೋಸ್ಕರ ಉಪಯೋಗಿಸಲಾಗುವ ಸ್ಥಿರ ಆಸ್ತಿಪಾಸ್ತಿಗಳು ಅಂದರೆ ಫಿಕ್ಸ್ಡ್ ಅಸೆಟ್ಸ್ (ಉದಾಹರಣೆ, ಜಮೀನು, ಕಟ್ಟಡಗಳು, ಮಶಿನ್ ಪೆಟಂಟ್ ಮುಂತಾದವುಗಳು). ಬ್ಯಾಲೆನ್ಸ್ ಶೀಟ್ ನ ಮಾದರಿಯಲ್ಲಿ ಈ ಆಸ್ತಿಪಾಸ್ತಿಗಳನ್ನು ಸಂದರ್ಭ ಕ್ರಮಾಂಕ 5 ರಲ್ಲಿ ತೋರಿಸಲಾಗಿದೆ. ಈ ರೀತಿಯ ದೀರ್ಘಾವಧಿಯ ಆಸ್ತಿಪಾಸ್ತಿಗಳನ್ನು ಉಪಯೋಗಿಸಿ ವ್ಯವಹಾರದ ಟರ್ನ್ ಓವರ್ ವೃದ್ಧಿಸಲು ಆಸ್ತಿಪಾಸ್ತಿಗಳು ಅತ್ಯಾವಶ್ಯಕವಾಗಿರುತ್ತವೆ. ಈ ರೀತಿಯ ಎಲ್ಲ ಕರಂಟ್ ಆಸ್ತಿಪಾಸ್ತಿಗಳು ಅಂದರೆ ಕರಂಟ್ ಅಸೆಟ್ಸ್ (ದಿನ ನಿತ್ಯದ ಖರ್ಚಿಗೆ ಬೇಕಾಗುವ ನಗದು, ಕಚ್ಚಾ ವಸ್ತುಗಳು, ಉತ್ಪಾದನೆಯ ಪ್ರಕ್ರಿಯೆಯಲ್ಲಿರುವ ಸಿದ್ಧವಾಗದಿರುವ ವಸ್ತುಗಳು, ತಯಾರಾಗಿರುವ ವಸ್ತುಗಳು, ಸಾಲ ರೂಪದಲ್ಲಿ ವಸ್ತುಗಳ ಮಾರಾಟವನ್ನು ಮಾಡಿದ್ದರಿಂದ ಗ್ರಾಹಕರಿಂದ ಮರಳಿ ಪಡೆಯಬೇಕಾಗಿರುವ ಬಿಲ್ ಗಳ ಮೊತ್ತ ಮುಂತಾದವುಗಳು). ಇದನ್ನು ಮಾದರಿ ಬ್ಯಾಲೆನ್ಸ್ ಶೀಟ್ ನಲ್ಲಿ ಆಸ್ತಿಪಾಸ್ತಿಗಳ ಸಂದರ್ಭ ಕ್ರಮಾಂಕ 10 ರಲ್ಲಿ ತೋರಿಸಲಾಗಿವೆ. ನಾವು ಈ ಹಿಂದೆ ನೋಡಿದಂತೆ ಯಾವ ಆಸ್ತಿಪಾಸ್ತಿಗಳು ವ್ಯವಹಾರಕ್ಕೆ ಸಿಗುತ್ತವೆಯೋ, ಅವುಗಳನ್ನು ಪಡೆಯುವಲ್ಲಿ ವ್ಯವಹಾರಕ್ಕೆ ಅಷ್ಟೇ ಮೊತ್ತದ ಪಾವತಿಸುವಿಕೆಯು ಮಾಲಿಕರು ಮತ್ತು ಇತರರಿಗೂ ಉದ್ಭವಿಸುತ್ತವೆ. ಮಶಿನ್ ಖರೀದಿಸಲು ಟರ್ಮ್ ಲೋನ್ ಪಡೆಯಲಾಗುತ್ತದೆ, ಪೂರೈಕೆಗಾರರಿಂದ ಸಾಲದ ರೂಪದಲ್ಲಿ ವಸ್ತುಗಳನ್ನು ಖರೀದಿಸಲಾಗುತ್ತದೆ. ಹಾಗೆಯೇ ಗ್ರಾಹಕರಿಂದ ಆರ್ಡರ್ ಪೂರ್ತಿಗೊಳಿಸಲು ಅಡ್ವಾನ್ಸ್ ಪಡೆದಿರಲಾಗಿರುತ್ತದೆ, ಇಂತಹ ಸಾಧ್ಯತೆ ಇರುತ್ತದೆ. ಈ ಎಲ್ಲ ರೀತಿಯ ಖರೀದಿಯ ಕುರಿತಾದ ಪಾವತಿಸುವಿಕೆಯ ಮೊತ್ತಗಳನ್ನು ದೀರ್ಘಾವಧಿ ಮತ್ತು ಕರಂಟ್ ವಿಧದಲ್ಲಿ ವಿಂಗಡಿಸಲಾಗುತ್ತದೆ. ಇದನ್ನು ಮಾದರಿ ಬ್ಯಾಲೆನ್ಸ್ ಶೀಟ್ ನಲ್ಲಿ ಸಂದರ್ಭ ಕ್ರಮಾಂಕ 1 ರಿಂದ 3 ರ ತನಕ ತೋರಿಸಲಾಗಿದೆ. ಹಾಗೆಯೇ ಸಂದರ್ಭ ಕ್ರಮಾಂಕ 4 ರಲ್ಲಿ ಕರಂಟ್ ಪಾವತಿಸುವಿಕೆಗಳನ್ನೂ ಸೇರ್ಪಡಿಸಲಾಗಿದೆ.
ಬ್ಯಾಲೆನ್ಸ್ ಶೀಟ್ ನಲ್ಲಿ ದೀರ್ಘಾವಧಿ ಮತ್ತು ಕರಂಟ್ ಈ ಎರಡು ವರ್ಗೀಕರ ಮಾಡುವಲ್ಲಿ ಪ್ರಮುಖವಾಗಿ ಎರಡು ಕಾರಣಗಳಿವೆ. ಒಂದೆಂದರೆ ಕರಂಟ್ ಅಸೆಟ್ಸ್, ಕರಂಟ್ ಪಾವತಿಸುವಿಕೆಗಳಿಗಿಂತ ಹೆಚ್ಚು ಮೊತ್ತದಲ್ಲಿರುವುದು ಸಾಮಾನ್ಯವಾಗಿ ಯಾವುದೇ ರೀತಿಯ ವ್ಯವಹಾರಗಳಿಗೆ ಅತ್ಯಾವಶ್ಯಕವೆಂಬುದಾಗಿ ತಿಳಿಯಲಾಗುತ್ತದೆ. ಈ ಎರಡರಲ್ಲಿಯೂ ಇರುವ ವ್ಯತ್ಯಾಸವೆಂದರೆ, ಅದಕ್ಕೋಸ್ಕರ ಬಳಸಲಾಗಿರುವ ಹಣವನ್ನು ಮಾಲಿಕರು ವ್ಯವಹಾರದಲ್ಲಿ ಹೂಡಿರುವ ಬಂಡವಾಳದಿಂದಲೇ ನೀಡಲಾಗುತ್ತದೆ. ಬಂಡವಾಳದ ಈ ಭಾಗವನ್ನು ನಗದಿ ರನಿಂಗ್ ಕ್ಯಾಪಿಟಲ್ ಎಂಬುದಾಗಿ ಹೇಳಲಾಗುತ್ತದೆ. ಬ್ಯಾಲೆನ್ಸ್ ಶೀಟ್ ನಲ್ಲಿರುವ ಈ ವಿಂಗಡಣೆಯಿಂದಾಗಿ ವ್ಯವಹಾರದಲ್ಲಿ ಮಾಲಿಕರು ಹೂಡಿರುವ ರನಿಂಗ್ ಕ್ಯಾಪಿಟಲ್ ಗೋಸ್ಕರ ಎಷ್ಟು ಹಣವನ್ನು ಹೂಡಲಾಗಿದೆ, ಎಂಬುದು ಗಮನಕ್ಕೆ ಬರುತ್ತದೆ.
ಇನ್ನೊಂದು ಅಂಶವೆಂದರೆ, ದೀರ್ಘಾವಧಿಯ ಆಸ್ತಿಪಾಸ್ತಿಗಳು ಈ ದೀರ್ಘಾವಧಿಯ ಪಾವತಿಸುವಿಕೆಗಳು ಮತ್ತು ಹೂಡಿರುವ ಬಂಡವಾಳವು ವ್ಯವಹಾರದಲ್ಲಿ ತೊಡಗಬೇಕು, ಎಂಬುದನ್ನು ಅಪೇಕ್ಷಿಸಲಾಗಿದೆ. ಕ್ಯಾಶ್ ಕ್ರೆಡಿಟ್ ನ ಮಿತಿಯನ್ನು (ಲಿಮಿಟ್) ಬಳಸಿ ಮಶಿನ್ ಖರೀದಿಸಿದಲ್ಲಿ ವರ್ಷದ ಕೊನೆಯಲ್ಲಿ ಕ್ರೆಡಿಟ್ ಹಿಂತಿರುಗಿಸುವ ಸ್ಥಿತಿ ಉದ್ಭವಿಸುವಾಗ ಮಶಿನ್ ನಿಂದ ಲಭಿಸಿರುವ ಒಂದು ವರ್ಷದ ಆದಾಯವು ಅಷ್ಟು ಮೊತ್ತವನ್ನು ಹಿಂತಿರುಗಿಸುವಲ್ಲಿ ಅಸಮರ್ಥವಾಗಬಲ್ಲದು. ಅಲ್ಲದೇ ವ್ಯವಹಾರದಲ್ಲಿ ಹಣಕಾಸಿನ ಅಡಚಣೆಗಳನ್ನು ಎದುರಿಸಬೇಕಾಗುವ ಸಾಧ್ಯತೆ ಉದ್ಭವಿಸಬಲ್ಲದು. ಬ್ಯಾಲೆನ್ಸ್ ಶೀಟ್ ನಲ್ಲಿರುವ ವಿಂಗಡಣೆಯಿಂದ ಯಾವುದೇ ರೀತಿಯ ಮರುಪಾವತಿಸುವಿಕೆಗಳು, ಯಾವ ವಿಧದ ಆಸ್ತಿಪಾಸ್ತಿಗಳನ್ನು ಪಡೆಯಲು ಬಳಸಲಾಗಿದೆ, ಎಂಬುದು ಗಮನಕ್ಕೆ ಬರುತ್ತದೆ. ಬ್ಯಾಲೆನ್ಸ್ ಶೀಟ್ ನಲ್ಲಿರುವ ಈ ಸಾಮಾನ್ಯವಾದ ವಿಂಗಡಣೆಯನ್ನು ತಿಳಿದುಕೊಂಡ ನಂತರ ಅದರಲ್ಲಿರುವ ಪ್ರತಿಯೊಂದು ಶೀರ್ಷಿಕೆಯ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.
9822475611
mbabhyankar@gmail.com
ಮುಕುಂದ ಅಭ್ಯಂಕರ್ ಇವರು ಚಾರ್ಟರ್ಡ್ ಅಕೌಂಟಂಟ್ ಆಗಿದ್ದಾರೆ. ಕಳೆದ 30 ವರ್ಷಗಳ ಕಾಲಾವಧಿಯಲ್ಲಿ ಅವರು ಅನೇಕ ಕಂಪನಿಗಳ ಲೆಕ್ಕ ಪರಿಶೋಧನೆಯ (ಆಡಿಟ್) ಮತ್ತು ಹಣಕಾಸಿನ ಚಟುವಟಿಕೆಗಳ ಕುರಿತಾದ ಆಗುಹೋಗುಗಳ ವಿಶ್ಲೇಷಣೆಯ ಕೆಲಸವನ್ನು ಮಾಡುತ್ತಿದ್ದಾರೆ.