ಆಧುನಿಕ ಯಂತ್ರಣೆಯು ತಂತ್ರಜ್ಞಾನ/ ವ್ಯವಸ್ಥೆ ಸಾಮಾನ್ಯವಾಗಿ ಬ್ಯಾಚ್ ನಲ್ಲಿ ಉತ್ಪಾದನೆಯನ್ನು ಮಾಡುವ ಪದ್ಧತಿಗೆ ಅವಲಂಬಿಸಿರುತ್ತದೆ. ಗ್ರಾಹಕರನ್ನು ತಮ್ಮೆಡೆಗೆ ಸೆಳೆಯುವಲ್ಲಿ ವೈವಿಧ್ಯತೆ ಇರುವ ಮಾಡೆಲ್ಸ್ ಮತ್ತು ಬೇರೆಬೇರೆ ವೈಶಿಷ್ಟ್ಯಗಳನ್ನು ನೀಡುವುದೇ, ಇದರಲ್ಲಿರುವ ಪ್ರಮುಖ ಗುರಿಯಾಗಿದೆ. ಹಾಗೆ ನೋಡಿದಲ್ಲಿ ಯಾವುದೇ ಕಾರ್ಖಾನೆಯಲ್ಲಿರುವ ಸೆಟಪ್ ನಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ, ಇದು ನಿರಂತರವಾಗಿ ನಡೆಯುವ ವಿಚಾರ. ಆದರೂ ಕೂಡಾ ಉತ್ಪಾದಕತೆಯನ್ನು ಉಚ್ಚಮಟ್ಟದಲ್ಲಿ ಹೇಗೆ ಮಾಡಬಹುದು, ಎಂಬುದಕ್ಕಾಗಿ ನಿರಂತರವಾಗಿ ಪ್ರಯತ್ನವನ್ನು ಮಾಡಲಾಗುತ್ತದೆ.
ಕ್ವಿಕ್ ಚೇಂಜ್ ಓವರ್ ವ್ಯವಸ್ಥೆಯನ್ನು ಅವಲಂಬಿಸುವುದು, ಇದೇ ಇದಕ್ಕೋಸ್ಕರ ಸರ್ವೋತ್ಕೃಷ್ಟ ಉಪಾಯವಾಗಿದೆ. ಇದರಲ್ಲಿ ಕಾರ್ಯವಸ್ತು ನೇರವಾಗಿ ಅಥವಾ ಫಿಕ್ಚ್ಸರ್ ನ ಸಹಾಯದಿಂದ ಕ್ಲ್ಯಾಂಪ್ ಮಾಡಲಾಗುತ್ತದೆ.
ಚಿತ್ರ ಕ್ರ. 1 : ಕ್ಲ್ಯಾಂಪಿಂಗ್ ಮತ್ತು ಡಿ-ಕ್ಲ್ಯಾಂಪಿಂಗ್
ಎ.ಎಮ್.ಎಫ್. (ಎಂಡ್ರಿಯಾಜ್ ಮಾಯರ್, ಜರ್ಮನಿ) ಈ ಕಾರ್ಯವಸ್ತುವನ್ನು ಹಿಡಿಯಬಲ್ಲ ಟೂಲ್ ಗಳನ್ನು ತಯಾರಿಸುವ ವಲಯದಲ್ಲಿ ಹೆಸರಾಂತ ಆದ್ಯ ಪ್ರವರ್ತಕರಾಗಿದ್ದಾರೆ. ಅಲ್ಲದೇ ಅವರ ಉತ್ಪಾದನೆಗಳ ಒಂದು ವಿಸ್ತಾರವಾದ ಶ್ರೇಣಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ‘ಝೀರೋ ಪಾಯಿಂಟ್ ಕ್ಲ್ಯಾಂಪಿಂಗ್’ ಇದು ಅವರ ಒಂದು ಅಸಾಮಾನ್ಯ ಉತ್ಪಾದನೆಯಾಗಿದೆ. ಇದರಿಂದಾಗಿ ಸೆಟಪ್ ಮಾಡುವಾಗ ಮಶಿನ್ ನಲ್ಲಿ ವ್ಯರ್ಥವಾಗುವ ಸಮಯದ ಉಳಿತಾಯವಾಗುತ್ತದೆ. ರಿಪಿಟ್ಯಾಬಿಲಿಟಿಯಲ್ಲಿರುವ ಉಚ್ಚಮಟ್ಟದ ನಿಖರತೆ, ಸೆಟಪ್ ನಲ್ಲಿರುವ ದೃಢತೆ ಮತ್ತು ದೀರ್ಘಕಾಲದ ಬಾಳಿಕೆ ಇದೇ ಈ ವ್ಯವಸ್ಥೆಯ ವೈಶಿಷ್ಟ್ಯಗಳಾಗಿವೆ.
ಝೀರೋ ಪಾಯಿಂಟ್ ಅಂದರೆ ಏನು?
ಇದೊಂದು ಝೀರೋ ತೊಡಕುಗಳು ಅಥವಾ ಝೀರೋ ಎರರ್ ಮಾಡುವ ವ್ಯವಸ್ಥೆಯಾಗಿದೆ.
ನಮ್ಮಲ್ಲಿ ಮಾಡಲಾಗುವ ಉತ್ಪಾದನೆಯಲ್ಲಿ ಫಿಕ್ಸ್ಚರ್ ಮತ್ತು ಕಾರ್ಯವಸ್ತು ಇವುಗಳಲ್ಲಿ ಬದಲಾವಣೆಗಳನ್ನು ಮಾಡಲು ಎಷ್ಟು ಸಮಯ ಬೇಕಾಗುತ್ತದೆಯೋ, ಅಷ್ಟೇ ಸಮಯದಲ್ಲಿ ಆ ಬದಲಾವಣೆಗಳನ್ನು ಮಾಡಲು ಇರುವ ಇದೊಂದು ವ್ಯವಸ್ಥೆಯಾಗಿದೆ. ಇದರಿಂದಾಗಿ ಮಶಿನ್ ನಲ್ಲಿ ಸೆಟಪ್ ಗೆ ಬೇಕಾಗುವ
ಸಮಯ ಮತ್ತು ಹಣದಲ್ಲಿಯೂ ಉಳಿತಾಯವಾಗುತ್ತದೆ.
ಇದರ ಕ್ರಿಯೆಯು ಹೇಗೆ ನಡೆಯುತ್ತದೆ?
ಇದರಲ್ಲಿ ಕ್ಲ್ಯಾಂಪಿಂಗ್ ಇದು ಮಾತ್ರ ಸಂಪೂರ್ಣವಾಗಿ ಮಲ್ಟಿಪಲ್ ಬಾಲ್ ಕ್ಲ್ಯಾಂಪಿಂಗ್ ಮತ್ತು ದೃಢವಾದ ಡಿಸೈನ್ ಇರುವ ವ್ಯವಸ್ಥೆಯಾಗಿದೆ. ಡಿ-ಕ್ಲ್ಯಾಂಪಿಂಗ್ ಗೋಸ್ಕರ ಹೈಡ್ರಾಲಿಕ್ ಅಥವಾ ನ್ಯುಮ್ಯಾಟಿಕ್ ಇಂತಹ ಹೊರ ಫೀಡ್ ನ ಆವಶ್ಯಕತೆ ಇರುತ್ತದೆ. ಹಿಡಿಯಲು 105 ಕಿ.ಗ್ರಾಂ. ನ್ಯೂಟನ್ ನಷ್ಟು ಫೋರ್ಸ್ ಲಭ್ಯವಿರುತ್ತದೆ.
ಕ್ಲ್ಯಾಂಪಿಂಗ್
ಹೊರಗಿನಿಂದ ನೀಡಲಾಗುವ ಒತ್ತಡವು ನಿಂತು ಹೋದಲ್ಲಿ ಪಿಸ್ಟನ್ ನ ಕೆಳಗಿರುವ ಸ್ಪ್ರಿಂಗ್ ಗಳು ಪೂರ್ವ ಸ್ಥಿತಿಯಲ್ಲಿ ಮತ್ತೆ ಬರುತ್ತವೆ ಮತ್ತು ಪಿಸ್ಟನ್ ಮೇಲೆ ತಳ್ಳುತ್ತವೆ. ಇದರಿಂದಾಗಿ ಬಾಲ್ಸ್ ಗಳು ಒಳಗೆ ತಳ್ಳಲ್ಪಡುತ್ತವೆ ಮತ್ತು ಕ್ಲ್ಯಾಂಪಿಂಗ್ ಮಾಡಲಾಗುತ್ತದೆ. (ಚಿತ್ರ ಕ್ರ. 1).
ಡಿ-ಕ್ಲ್ಯಾಂಪಿಂಗ್
ಹೊರಗಿನಿಂದ ನೀಡಲಾಗಿರುವ ಆಯಿಲ್ ಅಥವಾ ಗಾಳಿಯ ಒತ್ತಡದಿಂದಾಗಿ ಪಿಸ್ಟನ್ ಸ್ಪ್ರಿಂಗ್ ನ ದಿಕ್ಕಿನಲ್ಲಿ ಕೆಳಗೆ ಒತ್ತಲ್ಪಡುವಾಗ ಕ್ಲ್ಯಾಂಪಿಂಗ್ ನ ಬಾಲ್ಸ್ ಹೊರಗೆ ತಳ್ಳಲ್ಪಡಬಲ್ಲವು. ಈ ಪರಿಸ್ಥಿತಿಯಲ್ಲಿ ಫಿಕ್ಸ್ಚರ್ ಅಥವಾ ಕಾರ್ಯವಸ್ತುವಿನ ಜೋಡಿಸಲಾಗಿರುವ ನಿಪ್ಪಲ್ ಹೊರಗೆ ಬರಬಲ್ಲದು ಮತ್ತು ಕಾರ್ಯವಸ್ತುವಿನ ಡಿ-ಕ್ಲ್ಯಾಂಪಿಂಗ್ ಆಗುತ್ತದೆ. (ಚಿತ್ರ ಕ್ರ. 1).
ಝೀರೋ ಪಾಯಿಂಟ್ ವ್ಯವಸ್ಥೆಯಲ್ಲಿರುವ ರಚನೆ ಕ್ಲ್ಯಾಂಪಿಂಗ್ ಮೊಡ್ಯುಲ್
ಹೆಚ್ಚು ನಿಖರವಾಗಿ ತಯಾರಿಸಿರುವ ಕ್ಲ್ಯಾಂಪಿಂಗ್ ಮೊಡ್ಯುಲ್ “ಝೀರೋ ಪಾಯಿಂಟ್’ ವ್ಯವಸ್ಥೆಯಲ್ಲಿ ಕಾರ್ಯವಸ್ತು ಅಥವಾ ಫಿಕ್ಸ್ಚರ್ ಬೇಕಾಗುವಷ್ಟೇ ದೃಢ ಮತ್ತು ಸುರಕ್ಷಿತವಾಗಿ ಹಿಡಿಯಲಾಗುತ್ತದೆ, ಎಂಬ ಖಾತರಿ ಇರುತ್ತದೆ. ಎಳೆಯುವುದು, ಮುಚ್ಚುವುದು ಮತ್ತು ಹಿಡಿಯಲು ಬೇಕಾಗಿರುವ ಅತ್ಯಾವಶ್ಯಕವಾದ ಫೋರ್ಸ್ ಲಭ್ಯವಿರುವುದರಿಂದ ಇದು ಮೊಡ್ಯುಲ್ ಯಾವುದೇ ವಿಧದ ಕೆಲಸಗಳಿಗೋಸ್ಕರ ಉಪಯುಕ್ತವಾಗುತ್ತದೆ (ಚಿತ್ರ ಕ್ರ. 2).
ಚಿತ್ರ ಕ್ರ. 2
1. ಲ್ಯಾಟರಲ್ ಮತ್ತು ಎಳೆಯುವ ಫೋರ್ಸ್ ನ ಯಾವುದೇ ಪರಿಣಾಮವಾಗದಿರುವ, 5 ಮೈಕ್ರಾನ್ ನ ಒಳ ನಿಖರತೆಯಲ್ಲಿ ಸಮತಟ್ಟಾದ ಮತ್ತು ಸಮಾನಾಂತರ ಹಿಡಿತವನ್ನು ಪಡೆಯಲು, ಸ್ಟೆನ್ ಲೆಸ್ ಸ್ಟೀಲ್ ನ ಹಾರ್ಡನಿಂಗ್ ಮತ್ತು ಗ್ರೈಂಡಿಂಗ್ ಮಾಡಿರುವ ನಿಖರವಾದ ಸರ್ಫೇಸ್.
2. ಹಾರ್ಡನ್ಡ್ ಪಿಸ್ಟನ್ – ವಿಶ್ವಾಸಪಾತ್ರ ಮತ್ತು ನಿರಂತರವಾದ ಹಿಡಿತಕ್ಕೋಸ್ಕರ ಫಾರ್ಮ್ ಫಿಟ್ ಮತ್ತು ಸೆಲ್ಫ್ ಲಾಕಿಂಗ್ ನ ಇಂಟಿಗ್ರೇಶನ್ ಮಾಡಿರುವುದು.
3. ಆಪ್ಟಿಮೈಜ್ಡ್ ಪವರ್ ಟ್ರಾನ್ಸ್ ಮಿಶನ್ ಗೋಸ್ಕರ ನಿಖರವಾದ, ಸವೆತವನ್ನು ತಡೆಯಬಲ್ಲ ಮತ್ತು ಸ್ಪಂದನವನ್ನು ತಡೆಯಬಲ್ಲ ಬಾಲ್ಸ್.
4. ಬಾಲ್ ನ ಸ್ಟೆನ್ ಲೆಸ್ ಸ್ಟೀಲ್ ನಲ್ಲಿರುವ ಆಧಾರ – ಧೂಳು ಮತ್ತು ದ್ರವದಿಂದ ಕ್ಲ್ಯಾಂಪಿಂಗ್ ಮೊಡ್ಯುಲ್ ನ ರಕ್ಷಣೆಯನ್ನು ಮಾಡುತ್ತದೆ.
5. ಎಳೆತವನ್ನು ನೀಡುವುದು, ಮುಚ್ಚುವುದು ಮತ್ತು ಹಿಡಿತದ ಗರಿಷ್ಠ ಬಲಕ್ಕೋಸ್ಕರ ದೃಢವಾದ ಸ್ಪ್ರಿಂಗ್ ಪ್ಲೇಟ್.
6. ಇಂಟಿಗ್ರೆಟೆಡ್ ಏರ್ ಜೆಟ್ ನೊಂದಿಗೆ ಮೊಡ್ಯುಲ್ ಫ್ಲೋರ್.
ಎ. ಕ್ಲ್ಯಾಂಪಿಂಗ್ ಮೊಡ್ಯುಲ್ ನ ಆಳವು 22 ಮಿ.ಮೀ.ನಷ್ಟು ಕಡಿಮೆ ಇರುವುದರಿಂದ ಬೆಸ್ ಪ್ಲೇಟ್ ನ ಎತ್ತರವು 28 ಮಿ.ಮೀ. ನಷ್ಟು ಕಡಿಮೆ ಇರಬಲ್ಲದು. (ಬ್ಲೋ ಔಟ್ ಹೊರತಾಗಿ 24 ಮಿ.ಮೀ.)
ಚಿತ್ರ ಕ್ರ. 3
ಕ್ಲ್ಯಾಂಪಿಂಗ್ ನಿಪ್ಪಲ್
ಮಶಿನ್ ಟೇಬಲ್ ಮತ್ತು ಫಿಕ್ಚ್ಸರ್ ಅಥವಾ ಕಾರ್ಯವಸ್ತು ಇವುಗಳನ್ನು ಜೋಡಿಸಬಲ್ಲ ಕ್ಲ್ಯಾಂಪಿಂಗ್ ನಿಪ್ಪಲ್ (ಚಿತ್ರ ಕ್ರ. 3) ಇದು ಈ ವ್ಯವಸ್ಥೆಯಲ್ಲಿರುವ ಅತ್ಯಂತ ಮಹತ್ವದ ಘಟಕವಾಗಿದೆ. ಇದರಿಂದಾಗಿ ನಿಖರವಾಗಿ ಸ್ಥಾನವನ್ನು ನಿರ್ಧರಿಸಲಾಗುತ್ತದೆ. ಹಾಗೆಯೇ ದೃಢವಾದ ಸುರಕ್ಷೆಯ ಹಿಡಿವೂ ಸಿಗುತ್ತದೆ. ಕಾರ್ಯವಸ್ತುವಿನಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ನಿರ್ಮಾಣವಾಗುವ ಎಲ್ಲ ಬಲಗಳ ಒಟ್ಟು ಪರಿಣಾಮವನ್ನು ಇದೇ ನಿಪ್ಪಲ್ ಮೂಲಕ ಕ್ಲ್ಯಾಂಪಿಂಗ್ ಮೊಡ್ಯುಲ್ ಕಡೆಗೆ ಹಸ್ತಾಂತರಿಸಲಾಗುತ್ತದೆ.
ಝೀರೊ ಪಾಯಿಂಟ್ ಕ್ಲ್ಯಾಂಪಿಂಗ್ ತಂತ್ರಜ್ಞಾನದಿಂದ ಲಭಿಸುವ ಲಾಭಗಳು
• ಮಶಿನ್ ಕೆಲಸ ಮಾಡಲು ಲಭ್ಯವಿರುವ ಕಾಲಾವಧಿಯಲ್ಲಿ ಹೆಚ್ಚಳವಾಗುತ್ತದೆ.
• ಕಾರ್ಯವಸ್ತು ಅಥವಾ ಫಿಕ್ಚ್ಸರ್ ಇವುಗಳಲ್ಲಿರುವ ಬದಲಾವಣೆಗಳು ವೇಗವಾಗಿ ಆಗುತ್ತವೆ.
• ಹೈ ರಿಪಿಟ್ಯಾಬಿಲಿಟಿಯ ಕ್ಷಮತೆ (0.005 ಮಿ.ಮೀ. ಮಿತಿಯಲ್ಲಿ)
• ಎಲ್ಲ ವಿಧದ ಮಶಿನ್ ಗಳಿಗೋಸ್ಕರ ಒಂದೇ ರೀತಿಯ ಇಂಟರ್ ಫೇಸ್
• ಒಂದೇ ಹಂತದಲ್ಲಿ ಸ್ಥಾನದ ನಿರ್ಧಾರ ಮತ್ತು ಕ್ಲ್ಯಾಂಪಿಂಗ್
9359104060
shridhar@amf.de
ಶ್ರೀಧರ ದೇಶಪಾಂಡೆ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಅವರಿಗೆ ವರ್ಕ್ ಹೋಲ್ಡಿಂಗ್ ಕ್ಷೇತ್ರದಲ್ಲಿ 23 ವರ್ಷಗಳಿಗಿಂತಲೂ ಹೆಚ್ಚು ಕಾಲಾವಧಿಯ ಅನುಭವವಿದೆ. ಅವರು ಅನೇಕ ಭಾರತೀಯ ಮತ್ತು ವಿದೇಶದ ಕಂಪನಿಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.