ವ್ಯವಹಾರದ ಲಾಭ ಮತ್ತು ನಷ್ಟ ಹಾಗೆಯೇ ವ್ಯವಹಾರದ ಆಸ್ತಿ-ಪಾಸ್ತಿ ಮತ್ತು ಪಾವತಿಸುವಿಕೆಗಳ ಕುರಿತು ಪ್ರತಿಯೊಂದು ವರ್ಷದಲ್ಲಿ ಪ್ರಸ್ತುತ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಇದಕ್ಕೋಸ್ಕರ ಉದ್ಯಮ ಮತ್ತು ವ್ಯವಹಾರಗಳಲ್ಲಿ ಹಣಕಾಸು ವರ್ಷವು ಮಾರ್ಚಿ 31 ರಂದು ಮುಗಿಯುವಾಗ, ಅಂದು ಮುಗಿದಿರುವ ಹಣಕಾಸು ವರ್ಷದ ಲಾಭ-ನಷ್ಟದ ವರದಿ ಮತ್ತು ಅಂದಿನ ಲೆಕ್ಕಾಚಾರ ಇಂತಹ ಪ್ರಮುಖವಾದ ಆರ್ಥಿಕ ವರದಿಗಳನ್ನು ತಯಾರಿಸಲಾಗುತ್ತದೆ. ಈ ಎರಡು ವರದಿಗಳೆಂದರೆ ಲೆಕ್ಕಾಚಾರವನ್ನು ಬರೆದಿಡುವ ಪುಸ್ತಕಗಳಲ್ಲಿ ಆಯಾ ತಾರೀಕಿನಂದು ಬರೆದಿರುವ ಹಣಕಾಸು ವಿವರಗಳು. ಇಂತಹ ಎಲ್ಲ ಹಣಕಾಸು ವಿವರಗಳನ್ನು ಒಂದು ವಿಶಿಷ್ಟವಾದ ರೀತಿಯಲ್ಲಿ (ಫಾರ್ಮೇಟ್) ಬರೆದಿರುವ ಸಾರಾಂಶವಾಗಿರುತ್ತದೆ. ಲೆಕ್ಕಾಚಾರದ ಪುಸ್ತಕದ ಇಂತಹ ಸಂಕ್ಷಿಪ್ತವಾದ ವಿವರಗಳಿಗೆ ಆಂಗ್ಲ ಭಾಷೆಯಲ್ಲಿ ಫೈನಲ್ ಅಕೌಂಟ್ಸ್ ಎಂಬ ಸಮರ್ಪಕವಾದ ಶಬ್ದವನ್ನು ಬಳಸಲಾಗಿದೆ. ಫೈನಲ್ ಅಕೌಂಟ್ಸ್ ಇದೊಂದು ವ್ಯವಹಾರದಲ್ಲಿ ಲೆಕ್ಕಾಚಾರದ ಒಂದು ಭಾಗವಾಗಿರುತ್ತದೆ. ಇದರಿಂದಾಗಿ ಲೆಕ್ಕಾಚಾರವನ್ನು ಇಡುವಾಗ ಹಲವಾರು ರೀತಿಯ ಕಾಲ್ಪನಿಕ ಅಂಶಗಳು ಮತ್ತು ಪದ್ಧತಿಗಳನ್ನು ಅವಲಂಬಿಸಲಾಗುತ್ತದೆ. ಹಾಗೆಯೇ ಅಕೌಂಟಿಂಗ್ ನಲ್ಲಿರುವ ಮೂಲಭೂತ ಶಾಸ್ತ್ರವನ್ನು ಅವಲಂಬಿಸಿ ಲೆಕ್ಕಾಚಾರವನ್ನು ಇಡಲಾಗುತ್ತದೆ. ಫೈನಲ್ ಅಕೌಂಟ್ಸ್ ಈ ಅಂಶಗಳ ಒಂದು ಭಾಗವಾಗಿದೆ.
ಅಕೌಂಟಿಂಗ್ ಕುರಿತಾದ ಮೂಲಭೂತ ತತ್ವಗಳನ್ನು ಲೆಕ್ಕಾಚಾರದಲ್ಲಿ ಅವಲಂಬಿಸಲಾಗುತ್ತದೆ, ಎಂಬುದನ್ನು ‘ಲೋಹಕಾರ್ಯ’ ಡಿಸೆಂಬರ್ 2020 ರ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೇವೆ. ಪ್ರಸ್ತುತ ಮತ್ತು ಮುಂದಿನ ಸಂಚಿಕೆಗಳಲ್ಲಿ ಯಾವ ಕಾಲ್ಪನಿಕ ಅಂಶಗಳ ಆಧಾರ ಮತ್ತು ಯಾವ ರೀತಿಯಲ್ಲಿ ಲೆಕ್ಕಾಚಾರವನ್ನು ಇಡಲಾಗುತ್ತದೆ, ಎಂಬುದನ್ನು ತಿಳಿದುಕೊಳ್ಳಲ್ಲಿದ್ದೇವೆ. ಅಲ್ಲದೇ ಅಂತಿಮವಾಗಿ ಈ ರೀತಿಯ ಲೆಕ್ಕಾಚಾರದ ಆಧಾರದಲ್ಲಿ ಫೈನಲ್ ಅಕೌಂಟ್ಸ್ ಹೇಗೆ ತಯಾರಿಸಲಾಗುತ್ತದೆ ಮತ್ತು ಅದನ್ನು ಹೇಗೆ ತಿಳಿದುಕೊಳ್ಳಬೇಕು ಎಂಬಿತ್ಯಾದಿ ಅಂಶಗಳ ಕುರಿತು ಚರ್ಚಿಸಲಿದ್ದೇವೆ.
ಈ ಹಿಂದೆ ತಿಳಿದುಕೊಂಡಂತೆ, ಉದ್ಯಮಗಳ ವ್ಯವಹಾರದಲ್ಲಿ ಲೆಕ್ಕಾಚಾರವನ್ನು ಜಗತ್ತಿನೆಲ್ಲೆಡೆ ಸಾಮಾನ್ಯವಾಗಿ ಡಬಲ್ ಎಂಟ್ರಿ ಬುಕ್ ಕೀಪಿಂಗ್ ಎಂಬ ತತ್ವಗಳಿಗೆ ಅನುಸಾರವಾಗಿ ಮಾಡಲಾಗುತ್ತದೆ. ಈ ತತ್ವಗಳನ್ನು ಅನುಸರಿಸಿ ಯಾವುದೇ ವ್ಯವಹಾರಗಳ ಲೆಕ್ಕಾಚಾರವನ್ನು ನೊಂದಾಯಿಸುವಾಗ ಆಯಾ ವ್ಯವಹಾರಗಳಿಂದ ಕನಿಷ್ಠ ಎರಡು ರೀತಿಯ ಅಕೌಂಟಿಂಗ್ ಫಲಿತಾಂಶಗಳಾಗಿವೆ, ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಲೆಕ್ಕಾಚಾರವನ್ನು ಮಾಡಲಾಗುತ್ತದೆ. ಈ ಫಲಿತಾಂಶಗಳು ಹಲವಾರು ರೀತಿಯ ಡೆಬಿಟ್ ಸ್ಪರೂಪದ್ದಾಗಿರುತ್ತವೆ, ಹಾಗೆಯೇ ಕೆಲವು ಕ್ರೆಡಿಟ್ ಸ್ವರೂಪದಲ್ಲಿರುತ್ತವೆ. ಆದರೆ ಯಾವುದೇ ವ್ಯವಹಾರಗಳನ್ನು ನೊಂದಾಯಿಸುವಾಗ ಅದರಲ್ಲಿರುವ ಡೆಬಿಟ್ ಮತ್ತು ಕ್ರೆಡಿಟ್ ಫಲಿತಾಂಶಗಳ ಸೇರಿಕೆಯ ಅಂಕೆ-ಸಂಖ್ಯೆಗಳು ಸರಿಸಮಾನವಾಗಿವೆ ಎಂಬುದರ ಕುರಿತು ಖಾತರಿಯನ್ನು ವಹಿಸಬೇಕಾಗುತ್ತದೆ.
ಅಕೌಂಟಿಂಗ್ ನಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಈ ಕಲ್ಪನೆಗಳಿಗೆ ತುಂಬಾ ಮಹತ್ವವನ್ನು ನೀಡಲಾಗಿದೆ. ಈ ಕಲ್ಪನೆಗಳನ್ನು ಅಕೌಂಟಿಂಗ್ ಶಾಸ್ತ್ರದಲ್ಲಿ ಮೂಲಭೂತ ಸ್ವರೂಪದ ಕಲ್ಪನೆಗಳಾಗಿವೆ, ಎಂದೂ ಹೇಳಬಹುದು. ಆಡು ಭಾಷೆಯಲ್ಲಿ ಕ್ರೆಡಿಟ್ ಈ ಶಬ್ದದ ಅರ್ಥ ಶ್ರೇಯಸ್ಸು. ಅಕೌಂಟಿಂಗ್ ಕುರಿತು ಹೆಚ್ಚು ಮಾಹಿತಿ ಇಲ್ಲದಿರುವವರಿಗೆ ಕ್ರೆಡಿಟ್ ಅಂದರೆ ಒಳ್ಳೆಯ ಭಾಗ ಮತ್ತು ಡೆಬಿಟ್ ಅಂದರೆ ಅದಕ್ಕೆ ವಿರುದ್ಧವಾದ ಅಂಶ ಮತ್ತು ಅದು ಒಳ್ಳೆಯದಲ್ಲ ಎಂಬ ತಪ್ಪು ತಿಳುವಳಿಕೆಯು ಮೂಡಿಬರಬಹುದು. ಅಕೌಂಟಿಂಗ್ ಶಾಸ್ತ್ರದಲ್ಲಿ ಇಂತಹ ಕಲ್ಪನೆಗಳಿಗೆ ಒಳ್ಳೆಯದು ಅಥವಾ ಕೆಟ್ಟದು ಎಂಬ ಅರ್ಥವನ್ನು ನೀಡಲಾಗುವುದಿಲ್ಲ. ಅಕೌಂಟಿಂಗ್ ನಲ್ಲಿ ಹಲವಾರು ನಿಯಮಗಳಿಗೆ ಅನುಸಾರವಾಗಿ ಡೆಬಿಟ್ ಮತ್ತು ಕ್ರೆಡಿಟ್ ಮಾಡುವುದಕ್ಕೋಸ್ಕರ ಸೀಮಿತವಾಗಿರುತ್ತದೆ. ಕನ್ನಡ ಭಾಷೆಯಲ್ಲಿ ಡೆಬಿಟ್ ಗೆ ಪಾವತಿ ಮತ್ತು ಕ್ರೆಡಿಟ್ ಗೆ ಜಮೆ ಎಂಬ ಶಬ್ದಗಳನ್ನು ಬಳಸುತ್ತಾರೆ.
ಅಕೌಂಟಿಂಗ್ ಶಾಸ್ತ್ರಕ್ಕೆ ಅನುಸಾರವಾಗಿ ಡೆಬಿಟ್ ಮತ್ತು ಕ್ರೆಡಿಟ್ ಇವುಗಳ ಅರ್ಥದಂತೆ ಅವುಗಳನ್ನು ಅಕೌಂಟ್ಸ್ ನ ವಿಧಕ್ಕೆ ಅನುಸಾರವಾಗಿ ಡೆಬಿಟ್ ಮಾಡುವುದೋ, ಕ್ರೆಡಿಟ್ ಮಾಡುವುದೋ ಎಂಬುದರ ಕುರಿತು ನಿಯಮಗಳಿವೆ. ಈ ರೀತಿಯ ನಿಯಮಗಳ ಪ್ರಕಾರ ಅಕೌಂಟ್ಸ್ ಯಾವುದೇ ವಿಧದಲ್ಲಿ ಇದ್ದರೂ ಕೂಡಾ ಈ ಕೆಳಗಿನ ನಾಲ್ಕು ವಿಧಗಳಲ್ಲಿ ಒಂದೇ ರೀತಿಯಲ್ಲಿರುತ್ತದೆ.
ಅಕೌಂಟ್ಸ್ ನ ನಾಲ್ಕು ವಿಧಗಳು
1. ಆಸ್ತಿ-ಪಾಸ್ತಿಗಳು (ಅಸೆಟ್ಸ್)
2. ಪಾವತಿಸುವಿಕೆಗಳು (ಲಿಯಾಬಿಲಿಟೀಸ್)
3. ಆದಾಯ
4. ಖರ್ಚು
ಯಾವುದೇ ಅಕೌಂಟ್ ಗಳನ್ನು ವೀಕ್ಷಿಸಿದಲ್ಲಿ ಮೇಲಿನ ಯಾವುದೇ ಒಂದು ಅಂಶದಲ್ಲಿರುವುದು ಕಂಡುಬರುತ್ತವೆ. ಅಂದರೆ ಅಕೌಂಟ್ ನಲ್ಲಿ ವ್ಯವಹಾರದ ಆಸ್ತಿ-ಪಾಸ್ತಿಗಳು ಕಂಡುಬಂದರೂ ಕೂಡಾ ವ್ಯವಹಾರದಲ್ಲಿ ಆ ಅಸ್ತಿ-ಪಾಸ್ತಿಗಳಿಗೆ ಅವಲಂಬಿಸಿದ ಪಾವತಿಸುವಿಕೆಯು ಇರಬಲ್ಲದು ಅಥವಾ ಆದಾಯ ಮತ್ತು ಖರ್ಚು ಕೂಡಾ ಇರಬಲ್ಲದು. ಈ ಅಂಶಗಳ ಹೊರತಾಗಿ ಅಕೌಂಟ್ಸ್ ನಲ್ಲಿ ಯಾವುದೇ ಪದ್ಧತಿಗಳು ಇರಲಾರವು. ಈ ನಾಲ್ಕು ಪದ್ಧತಿಗಳನ್ನು ಮೂರು ವಿಧದಲ್ಲಿ ವರ್ಗೀಕರಿಸಿ ಅಕೌಂಟ್ಸ್ ನ ಅಂತಹ ಪ್ರತಿಯೊಂದು ವರ್ಗೀಕರಣಕ್ಕೆ ಕೆಲವು ವಿಶಿಷ್ಟವಾದ ನಿಯಮಗಳನ್ನು ತಯಾರಿಸಲಾಗಿದೆ.
ಅಕೌಂಟ್ಸ್ ಅಂದರೆ ಲೆಕ್ಕಾಚಾರದ ಖಾತೆಯಲ್ಲಿ, ರಿಯಲ್ ಅಕೌಂಟ್ಸ್, ಪರ್ಸನಲ್ ಅಕೌಂಟ್ಸ್ ಮತ್ತು ನಾಮಿನಲ್ ಅಕೌಂಟ್ಸ್ ಎಂಬ ಮೂರು ವಿಧಗಳಿವೆ. ಮೇಲೆ ತಿಳಿಸಿರುವ ಅಕೌಂಟ್ಸ್ ನ ನಾಲ್ಕು ವಿಧಗಳಲ್ಲಿ ಆದಾಯ ಮತ್ತು ಖರ್ಚು ಎಂಬ ಎರಡು ವಿಧಗಳು ನಾಮಿನಲ್ ಎಂಬ ವಿಭಾಗದಲ್ಲಿವೆ. ಆಸ್ತಿ-ಪಾಸ್ತಿ ಮತ್ತು ಪಾವತಿಸುವಿಕೆಗಳ ವರ್ಗೀಕರಣವನ್ನು ಮಾಡುವಾಗ ಇಂತಹ ಆಸ್ತಿ-ಪಾಸ್ತಿಗಳ ಅಥವಾ ಪಾವತಿಸುವಿಕೆಗಳು ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಸಂಬಂಧಪಟ್ಟದ್ದಾಗಿದ್ದಲ್ಲಿ ಅದನ್ನು ಪರ್ಸನಲ್ ಅಕೌಂಟ್ಸ್ ಎಂಬುದಾಗಿ ಹೇಳಲಾಗುತ್ತದೆ. ಒಂದು ಇದರ ಸಂಬಂಧವು ಜಮೀನು ಮತ್ತು ವಸ್ತುಗಳೊಂದಿಗೆ ಸಂಬಂಧಪಟ್ಟದ್ದಾಗಿದ್ದಲ್ಲಿ ಅದನ್ನು ರಿಯಲ್ ಅಕೌಂಟ್ಸ್ ಎಂಬ ವಿಭಾಗದಲ್ಲಿ ಗುರುತಿಸಲಾಗುತ್ತದೆ.
ಪ್ರತಿಯೊಂದು ವಿಭಾಗದ ಅಕೌಂಟ್ಸ್ ಗಳಲ್ಲಿ ಯಾವಾಗ ಮೊತ್ತವನ್ನು ಡೆಬಿಟ್ ಮಾಡುವುದು ಮತ್ತು ಯಾವಾಗ ಕ್ರೆಡಿಟ್ ಮಾಡುವುದು, ಎಂಬಿತ್ಯಾದಿ ಅಂಶಗಳ ಕುರಿತಾದ ನಿಯಮಗಳ ಮಾಹಿತಿಯನ್ನು ತಿಳಿದುಕೊಳ್ಳೋಣ.
ರಿಯಲ್ ಅಕೌಂಟ್ಸ್ (ನಗದಿ, ಬ್ಯಾಂಕಿನಲ್ಲಿರುವ ಉಳಿಕೆ, ಜಮೀನು, ಮಶಿನರಿ, ಕಚ್ಚಾ ವಸ್ತುಗಳು, ತಯಾರಿಸಿರುವ ವಸ್ತುಗಳು ಮತ್ತು ವಸ್ತುಗಳು ಇಂತಹ ವಿಧದಲ್ಲಿರುವ ಎಲ್ಲ ರೀತಿಯ ಆಸ್ತಿ-ಪಾಸ್ತಿಗಳು)
ಡೆಬಿಟ್ ಅಂದರೆ ತಮಗೆ ಬರಬೇಕಾಗಿರುವುದು ಮತ್ತು ಕ್ರೆಡಿಟ್ ಅಂದರೆ ತಾವು ಕೊಡಬೇಕಾಗಿರುವುದು. ವಸ್ತುಗಳು ಅಥವಾ ಇನ್ನಿತರ ಆಸ್ತಿ-ಪಾಸ್ತಿಗಳು ವ್ಯವಹಾರದಲ್ಲಿ ಸೇರ್ಪಡೆಯಾಗುತ್ತವೆ. ವ್ಯವಹಾರದಲ್ಲಿ ಈ ರೀತಿಯಲ್ಲಿ ಅವುಗಳು ಸೇರ್ಪಡೆಯಾಗುತ್ತಿದ್ದಲ್ಲಿ ಅದರ ನೊಂದಾಣಿಕೆಯನ್ನು ಮಾಡುವಾಗ, ಈ ರೀತಿಯ ಆಸ್ತಿ-ಪಾಸ್ತಿ ಅಥವಾ ವಸ್ತುಗಳನ್ನು ಅಕೌಂಟ್ಸ್ ನಲ್ಲಿ ಆಯಾ ವ್ಯವಹಾರದ ಮೊತ್ತದಲ್ಲಿ ಡೆಬಿಟ್ ಎಂಬುದಾಗಿ ಪರಿಗಣಿಸಿ ನೊಂದಾಯಿಸಲಾಗುತ್ತದೆ. ಇದಕ್ಕೆ ವಿರುದ್ಧವಾದ ಪರಿಸ್ಥಿತಿಯಲ್ಲಿ ಈ ಅಂಶಗಳು ವ್ಯವಹಾರದಲ್ಲಿ ಹೊರಗೆ ಹೋಗುತ್ತಿದ್ದಲ್ಲಿ (ಮಾರಾಟ ಮಾಡಿದ್ದರಿಂದ) ಅದಕ್ಕೆ ಸಂಬಂಧಪಟ್ಟ ವ್ಯವಹಾರಗಳನ್ನು ನೊಂದಾಯಿಸುವಾಗ ಅಕೌಂಟ್ಸ್ ನಲ್ಲಿ ಇದರ ಮೊತ್ತವನ್ನು ಕ್ರೆಡಿಟ್ ಎಂಬುದಾಗಿ ಪರಿಗಣಿಸಲಾಗುತ್ತದೆ.
ಪರ್ಸನಲ್ ಅಕೌಂಟ್ಸ್ (ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಸಂಬಂಧಪಟ್ಟ ಅಕೌಂಟ್ಸ್)
ಪಡೆಯುವವನ ಖಾತೆಯಲ್ಲಿರುವುದು ಡೆಬಿಟ್ ಮತ್ತು ಕೊಡುವವನ ಖಾತೆಯಲ್ಲಿರುವುದು ಕ್ರೆಡಿಟ್ ಈ ಅರ್ಥದೊಂದಿಗೆ ಒಂದು ವೇಳೆ ಯಾರೊಬ್ಬರಿಗೆ ಹಣ, ವಸ್ತು ಅಥವಾ ಸೇವೆ ಇವುಗಳಲ್ಲಿ ಯೂವುದೊಂದನ್ನು ವ್ಯವಹಾರಕ್ಕೆ ಪೂರೈಸಿದಲ್ಲಿ ಸಂಬಂಧಪಟ್ಟ ವ್ಯವಹಾರದ ಮೊತ್ತವನ್ನು ಅವರ ಖಾತೆಯಲ್ಲಿ ಡೆಬಿಟ್ ಮಾಡಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಯಾರೊಬ್ಬರು ಹಣ, ವಸ್ತು ಅಥವಾ ಸೇವೆ ಇವುಗಳಲ್ಲಿ ಯಾವುದೊಂದನ್ನು ವ್ಯವಹಾರದಲ್ಲಿ ಹೂಡಿದ್ದಲ್ಲಿ ಅದಕ್ಕೆ ಸಂಬಂಧಪಟ್ಟ ಮೊತ್ತವನ್ನು ಅದರ ಅಕೌಂಟ್ ನ ಖಾತೆಯಲ್ಲಿ ಕ್ರೆಡಿಟ್ ಮಾಡಲಾಗುತ್ತದೆ. ಮಾಲಿಕರು ವ್ಯವಸಾಯವನ್ನು ಪ್ರಾರಂಭಿಸಲು ರೂಪಾಯಿ 10,000 ದಷ್ಟು ಮೊತ್ತವನ್ನು ವ್ಯವಸಾಯದಲ್ಲಿ ಹೂಡಿರುವ ಉದಾಹರಣೆಯನ್ನು ಈ ಮೊದಲು ತಿಳಿದುಕೊಂಡಿದ್ದೇವೆ. ಇದನ್ನು ಅಕೌಂಟಿಂಗ್ ನ ದೃಷ್ಟಿಯಲ್ಲಿ ವೀಕ್ಷಿಸಿದರೆ ಈ ವ್ಯವಹಾರದ ಸಂಬಂಧವು ಎರಡು ಅಕೌಂಟ್ ಗಳೊಂದಿಗೆ ಉಂಟಾಗಿದೆ ಎಂಬುದು ಗಮನಕ್ಕೆ ಬರುತ್ತಿದೆ. ನಗದು ಖಾತೆ (ಕ್ಯಾಶ್ ಅಕೌಂಟ್) ಮತ್ತು ಮಾಲಿಕರು ಹೂಡಿರುವ ಬಂಡವಾಳ (ಕ್ಯಾಪಿಟಲ್ ಅಕೌಂಟ್) ಎಂಬ ಎರಡು ಅಕೌಂಟ್ ಗಳಾಗಿವೆ. ಅದರಲ್ಲಿ ನಗದಿ ಇದು ವ್ಯವಹಾರದ ಆಸ್ತಿ-ಪಾಸ್ತಿಗಳಲ್ಲಿ ಸೇರ್ಪಡೆಯಾಗುತ್ತದೆ. ಮಾಲಿಕರು ಹೂಡಿರುವ ಬಂಡವಾಳವು ಮಾಲಿಕರಿಗೆ ಸಂಬಂಧಪಟ್ಟಿದ್ದರಿಂದ ಇದನ್ನು ಪರ್ಸನಲ್ ಅಕೌಂಟ್ ಎಂದು ಹೇಳಲಾಗುತ್ತದೆ. ಈ ವ್ಯವಹಾರದ ಅಕೌಂಟಿಂಗ್ ಮಾಡುವಾಗ ಅದಕ್ಕೋಸ್ಕರವೇ ನಗದಿ ಖಾತೆಗೋಸ್ಕರ ರಿಯಲ್ ಎಂಬ ಗುಂಪಿನಲ್ಲಿದೆ. ಬಂಡವಾಳದ ಖಾತೆಗೋಸ್ಕರ ಪರ್ಸನಲ್ ಗುಂಪಿನ ನಿಯಮವನ್ನು ಅನ್ವಯಿಸಿ ಆ ಖಾತೆಯನ್ನು ಡೆಬಿಟ್ ಮಾಡುವುದೋ ಕ್ರೆಡಿಟ್ ಮಾಡುವುದೋ ಎಂಬ ನಿರ್ಧಾರವನ್ನು ತಾವೇ ಮಾಡಬೇಕು.
ರಿಯಲ್ ಅಕೌಂಟ್ ಗಳ ನಿಯಮದಂತೆ ಆಸ್ತಿ-ಪಾಸ್ತಿಗಳು ವ್ಯವಹಾರದಲ್ಲಿ ಸೇರ್ಪಡೆಯಾಗಿದ್ದಲ್ಲಿ ಅಂತಹ ಆಸ್ತಿ-ಪಾಸ್ತಿಗಳ ಖಾತೆಯಲ್ಲಿ ವ್ಯವಹಾರದ ಮೊತ್ತವನ್ನು ಡೆಬಿಟ್ ಮಾಡಲಾಗುತ್ತದೆ. ಈ ಹಿಂದೆ ನೀಡಿರುವ ಉದಾಹರಣೆಯಲ್ಲಿ ರೂಪಾಯಿ 10,000 ದಷ್ಟು ಮೊತ್ತವನ್ನು ಡೆಬಿಟ್ ಮಾಡಲಾಗುತ್ತದೆ. ಅದರೊಂದಿಗೆ ಮಾಲಿಕರ ಬಂಡವಾಳದ ಖಾತೆ ಪರ್ಸನಲ್ ಅಕೌಂಟ್ ನಲ್ಲಿರುವುದರಿಂದ ಮತ್ತು ಆ ಅಕೌಂಟ್ ನ ನಿಯಮಗಳಂತೆ ಮೊತ್ತವನ್ನು ಕೊಡುವವವರಿಗೆ ಆ ವ್ಯವಹಾರದ ಮೊತ್ತವನ್ನು ಕ್ರೆಡಿಟ್ ಮಾಡಬೇಕಾಗಿರುವುದರಿಂದ ಮಾಲಿಕರ ಬಂಡವಾಳದ ಖಾತೆಯಲ್ಲಿ 10,000 ರೂಪಾಯಿಗಳನ್ನು ಕ್ರೆಡಿಟ್ ಮಾಡಲಾಗುತ್ತದೆ. ಈ ರೀತಿಯಲ್ಲಿ ನಗದು ಖಾತೆಯಲ್ಲಿ 10,000 ರೂಪಾಯಿಗಳ ಡೆಬಿಟ್ ಮತ್ತು ಬಂಡವಾಳದ ಖಾತೆಯಲ್ಲಿ ಅಷ್ಟೇ ಮೊತ್ತದ ಕ್ರೆಡಿಟ್ ಸೇರ್ಪಡಿಸಿ ಈ ವ್ಯವಹಾರದ ಡಬಲ್ ಎಂಟ್ರಿಯ ರೀತಿಯಲ್ಲಿ ನೊಂದಣಿಯು ಪೂರ್ತಿಯಾಗುತ್ತದೆ. ಯಾವುದೇ ರೀತಿಯ ಹಣಕಾಸು ವ್ಯವಹಾರಗಳನ್ನು ಇದೇ ರೀತಿಯಲ್ಲಿ ಪ್ರಾಥಮಿಕ ನೊಂದಾಣಿಕೆಯನ್ನು ಲೆಕ್ಕಾಚಾರದ ಪುಸ್ತಕದಲ್ಲಿ ಮಾಡಲಾಗುತ್ತದೆ, ಇದನ್ನು ಅಕೌಂಟ್ ನ ಪರಿಭಾಷೆಯಲ್ಲಿ ಜರ್ನಲ್ ಎಂಟ್ರಿ ಎಂದು ಹೇಳಲಾಗುತ್ತದೆ. ಇಂತಹ ಜರ್ನಲ್ ಎಂಟ್ರಿಯನ್ನು ಈ ಕೆಳಗಿನ ರೀತಿಯಲ್ಲಿ ಜರ್ನಲ್ ರಜಿಸ್ಟರ್ ನಲ್ಲಿ ಬರೆಯಲಾಗುತ್ತದೆ.
ನಾಮಿನಲ್ ಅಕೌಂಟ್ಸ್ (ಆದಾಯ ಮತ್ತು ಖರ್ಚಿನ ಖಾತೆ)
ಎಲ್ಲ ಖರ್ಚು ಮತ್ತು ನಷ್ಟಗಳನ್ನು ಡೆಬಿಟ್ ಖಾತೆನಲ್ಲಿ, ಹಾಗೆಯೇ ಎಲ್ಲ ರೀತಿಯ ಜಮೆ ಮತ್ತು ಲಾಭಗಳನ್ನು ಕ್ರೆಡಿಟ್ ಖಾತೆಯಲ್ಲಿ ಸೇರ್ಪಡಿಸಬೇಕು. ಅಂದರೆ ಯಾವುದೇ ವ್ಯವಹಾರದಿಂದಾಗಿ ಉದ್ಯಮದಲ್ಲಿ ಖರ್ಚು ಮಾಡಲಾಗಿದ್ದಲ್ಲಿ, ಅಥವಾ ಯಾವುದೇ ರೀತಿಯ ನಷ್ಟವಾಗಿದ್ದಲ್ಲಿ ಸಂಬಂಧಪಟ್ಟ ಖರ್ಚಿನ ಖಾತೆಯಲ್ಲಿ ವ್ಯವಹಾರದ ಮೊತ್ತವನ್ನು ಡೆಬಿಟ್ ಮಾಡಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಯಾವುದೇ ವ್ಯವಹಾರದಲ್ಲಿ ಲಾಭವಾದಲ್ಲಿ ಸಂಬಂಧಪಟ್ಟ ಆದಾಯದ ಖಾತೆಯಲ್ಲಿ ವ್ಯವಹಾರದ ಮೊತ್ತವನ್ನು ಕ್ರೆಡಿಟ್ ಮಾಡಲಾಗುತ್ತದೆ. ಉದಾಹರಣೆ, ವ್ಯವಹಾರಕ್ಕೋಸ್ಕರ 500 ರೂಪಾಯಿಗಳ ಸ್ಟೆಷನರಿಯನ್ನು ನಗದಿಯಿಂದ ಖರೀದಿಸಿದ್ದಲ್ಲಿ, ಸ್ಟೇಶನರಿ ಈ ನಾಮಿನಲ್ ಅಕೌಂಟ್ ನಲ್ಲಿ ಖರ್ಚಾಗಿರುವ 500 ರೂಪಾಯಿಗಳನ್ನು ಡೆಬಿಟ್ ಮಾಡಲಾಗುತ್ತದೆ. ಈ ವ್ಯವಹಾರದಲ್ಲಾಗುವ ಇನ್ನೊಂದು ಪರಿಣಾಮವೆಂದರೆ ನಗದಿಯು ವ್ಯವಹಾರದಿಂದ ಹೊರಗೆ ಹೋಗುತ್ತದೆ, ಅದನ್ನು ನೊಂದಾಯಿಸಲು ಕ್ಯಾಶ್ ಅಕೌಂಟ್ ಇರುತ್ತದೆ. ಇದು ರಿಯಲ್ ಅಕೌಂಟ್ ನಲ್ಲಿದೆ. ಇದನ್ನು 500 ರೂಪಾಯಿ ಕ್ರೆಡಿಟ್ ಮಾಡಿ ಜರ್ನಲ್ ಎಂಟ್ರಿ ಪೂರ್ತಿಗೊಳಿಸಲಾಗುತ್ತದೆ. ಇನ್ನೊಂದು ಉದಾಹರಣೆ, ‘ಬಿ’ ಎಂಬ ಗ್ರಾಹಕರಿಗೆ 1000 ರೂಪಾಯಿಗಳಷ್ಟು ಮೊತ್ತದ ವಸ್ತುಗಳನ್ನು ಎರವಲಾಗಿ ಮಾರಾಟ ಮಾಡಿದ್ದಲ್ಲಿ, ಆ ವ್ಯವಹಾರದ ನೊಂದಾಣಿಕೆಯನ್ನು ‘ಬಿ’ ಎಂಬುವರ ಖಾತೆಯು ಪರ್ಸನಲ್ ಅಕೌಂಟ್ ನಲ್ಲಿ ಮಾಡಿದ್ದರಿಂದ ಮತ್ತು ಈ ವ್ಯವಹಾರದಲ್ಲಿ ‘ಬಿ’ ಇವರು ವ್ಯವಹಾರಕ್ಕೆ ವಸ್ತುಗಳನ್ನು ಪೂರೈಸುವವರಾಗಿದ್ದರಿಂದ ಅವರ ಅಕೌಂಟ್ ನಲ್ಲಿ 1000 ರೂಪಾಯಿಗಳನ್ನು ಡೆಬಿಟ್ ಮಾಡಲಾಗುತ್ತದೆ. ಅಂದರೆ ಎಷ್ಟು ಮೊತ್ತವನ್ನು ಅವರಿಂದ ವ್ಯವಹಾರಕ್ಕೆ ಬಳಸಲಾಗುತ್ತದೆಯೋ, ಅಷ್ಟೇ ಮೊತ್ತವನ್ನು ವ್ಯವಹಾರದಲ್ಲಿ ಬಾಕಿ ಎಂಬುದಾಗಿ ತೋರಿಸಲಾಗುತ್ತದೆ. ಈ ರೀತಿಯ ವ್ಯವಹಾರದಲ್ಲಿ ವಸ್ತುಗಳ ಮಾರಾಟವಾಗುವಾಗ ಈ ರೀತಿಯ ಪರಿಣಾಮಗಳು ಉಂಟಾಗುತ್ತದೆ. ಇದರ ನೊಂದಾಣಿಕೆಯನ್ನು ಮಾರಾಟದ ಖಾತೆಯಲ್ಲಿ ಮಾಡಲಾಗುತ್ತದೆ. ಈ ವ್ಯವಹಾರವು ನಾಮಿನಲ್ ಅಕೌಂಟ್ ನಲ್ಲಿದ್ದು ಇದರಿಂದ ಲಭಿಸಿರುವ ಆದಾಯದ ಮೊತ್ತವನ್ನು ಕ್ರೆಡಿಟ್ ಮಾಡಲಾಗುತ್ತದೆ.
ಈ ರೀತಿಯಲ್ಲಿ ಲೆಕ್ಕಾಚಾರದಲ್ಲಿ ಮಾಡಲಾಗುವ ಪ್ರತಿಯೊಂದು ನೊಂದಾಣಿಕೆಗಳು ಡಬಲ್ ಎಂಟ್ರಿ ಎಂಬ ತತ್ವಕ್ಕೆ ಅನುಸಾರವಾಗಿ ಜರ್ನಲ್ ಎಂಟ್ರಿಯಾಗಿರುತ್ತದೆ. ಲೆಕ್ಕಾಚಾರವನ್ನು ದಿನಾಂಕಕ್ಕೆ ಅನುಸಾರವಾಗಿ ಬರೆಯಲಾಗುತ್ತದೆ. ಆದ್ದರಿಂದ ಮೊದಲಾಗಿ ನೊಂದಾಣಿಕೆಯನ್ನು ಲೆಕ್ಕಾಚಾರದ ಪುಸ್ತಕದಲ್ಲಿ ಮಾಡಲಾಗುತ್ತದೆ. ಇಂತಹ ಲೆಕ್ಕಾಚಾರದ ಪುಸ್ತಕವನ್ನು ಜರ್ನಲ್ ರಜಿಸ್ಟರ್ ಎಂಬುದಾಗಿ ಕರೆಯಲಾಗುತ್ತದೆ. ಜರ್ನಲ್ ಇದು ವ್ಯವಹಾರದ ಲೆಕ್ಕಾಚಾರವನ್ನು ಬರೆಯಲು ಬಳಸುವ ಮೊದಲ ಹಂತವಾಗಿದೆ. ದಿನಾಂಕದ ಪ್ರಕಾರ ಪ್ರಾಥಮಿಕ ನೊಂದಾಣಿಕೆಯನ್ನು ಮಾಡಲಾಗುವ ಪುಸ್ತಕಗಳನ್ನು ರಜಿಸ್ಟರ್ ಎಂಬುದಾಗಿ ಕರೆಯಲಾಗಿದೆ.
ಜರ್ನಲ್ ಹೊರತಾಗಿ ಯಾವ ಯಾವ ರಜಿಸ್ಟರ್ ಗಳು ಲೆಕ್ಕಾಚಾರದ ಪುಸ್ತಕಗಳಲ್ಲಿ ಸೇರ್ಪಡೆಯಾಗುತ್ತವೆ, ಎಂಬದನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಹಾಗೆಯೇ ಅನೇಕ ವಿಧದ ರಜಿಸ್ಟರ್ ಗಳಿಂದ ಪ್ರತಿಯೊಂದು ಅಕೌಂಟ್ ನ ಡೆಬಿಟ್ ಮತ್ತು ಕ್ರೆಡಿಟ್ ನ ಫಲಿತಾಂಶಗಳನ್ನು ಲೆಜರ್ ನ ಮೂಲಕ ಹೇಗೆ ಬೇರೆಬೇರೆಯಾಗಿ ಪಡೆಯಲಾಗುತ್ತದೆ. ನಂತರ ಅದನ್ನು ಆಧರಿಸಿ ವರ್ಷದ ಕೊನೆಯಲ್ಲಿ ಫೈನಲ್ ಅಕೌಂಟ್ಸ್ ತಯಾರಿಸಲು ಪ್ರತಿಯೊಂದು ಲೆಜರ್ ಅಕೌಂಟ್ ನಲ್ಲಿ ನೆಟ್ ಉಳಿಕೆ ಎಷ್ಟಿದೆ. ಅದು ಡೆಬಿಟ್ ಆಗಿದೆಯೇ, ಕ್ರೆಡಿಟ್ ಆಗಿದೆಯೇ, ಎಂಬುದನ್ನು ಟ್ರಯಲ್ ಬ್ಯಾಲೆನ್ಸ್ ಮೂಲಕ ಹೇಗೆ ಪ್ರಸ್ತುತ ಪಡಿಸಲಾಗುತ್ತದೆ, ಎಂಬುದನ್ನು ಮುಂದಿನ ಭಾಗದಲ್ಲಿ ತಿಳಿದುಕೊಳ್ಳಲಿದ್ದೇವೆ.
9822475611
mbabhyankar@gmail.com
ಮುಕುಂದ ಅಭ್ಯಂಕರ್ ಇವರು ಚಾರ್ಟರ್ಡ್ ಅಕೌಂಟಂಟ್ ಆಗಿದ್ದಾರೆ. ಕಳೆದ 30 ವರ್ಷಗಳ ಕಾಲಾವಧಿಯಲ್ಲಿ ಅವರು ಅನೇಕ ಕಂಪನಿಗಳ ಲೆಕ್ಕ ಪರಿಶೋಧನೆಯ (ಆಡಿಟ್) ಮತ್ತು ಹಣಕಾಸುಗಳ ಕುರಿತಾದ ಆಗುಹೋಗುಗಳ ವಿಶ್ಲೇಷಣೆಯ ಕೆಲಸವನ್ನು ಮಾಡುತ್ತಿದ್ದಾರೆ.