ಟೂಲ್ ಗಳ ಮಾಪನ ಮತ್ತು ತಪಾಸಣೆ

20 Jan 2021 12:21:26

ಸಿ.ಎನ್.ಸಿ. ಮಶಿನ್ ನಲ್ಲಿ ಮಾಡಲಾಗುವ ಪ್ರತಿಯೊಂದು ಯಂತ್ರಣೆಯ ಕೆಲಸವನ್ನು ಕಾರ್ಯವಸ್ತುವಿಗೆ ಸೆಟಪ್ ಮಾಡುವುದರೊಂದಿಗೆ ಪ್ರಾರಂಭಿಸಲಾಗುತ್ತದೆ. ಟೂಲ್ ನ ಸೆಟಿಂಗ್ ಮಾಡುವುದೇ ಇದರಲ್ಲಿ ಎಲ್ಲಕ್ಕಿಂತಲೂ ಮಹತ್ವದ ಮತ್ತು ಸಮಯವನ್ನು ವ್ಯರ್ಥ ಮಾಡುವಂತಹ ಅಂಶವಾಗಿದೆ. ಇದರಲ್ಲಿ ಟೂಲ್ ಗಳ ಉದ್ದ ಹಾಗೆಯೇ ಆಫ್ ಸೆಟ್ ಸೆಟಪ್ ಮಾಡುವುದು ಮತ್ತು ರನ್ಔಟ್ ನ ಪರಿಶೀಲನೆಯನ್ನು ಮಾಡುವುದು, ಇವೆರಡೂ ತುಂಬಾ ಮಹತ್ವದ ಕೆಲಸಗಳಾಗಿವೆ.
 
ಮಶಿನಿಂಗ್ ಸೆಂಟರ್ ನಲ್ಲಿ ಯಂತ್ರಣೆಯನ್ನು ಮಾಡುತ್ತಿರುವಾಗ ಟೂಲ್ ನ ಮಾಪನವನ್ನು ಮಶಿನ್ ನ ಹೊರಗೆ (ಆಫ್ ಲೈನ್) ನಿಖರವಾಗಿ ಮಾಡುವುದೇ, ಟೂಲ್ ಪ್ರಿಸೆಟರ್ ಉಪಕರಣಗಳಲ್ಲಿರುವ ಮೂಲಭೂತ ಕಲ್ಪನೆಯಾಗಿದೆ. ಮಶಿನ್ ನಲ್ಲಿ ನಿರ್ದೋಷವಾದ ಯಂತ್ರಣೆಯನ್ನು ಮಾಡಲು ಟೂಲ್ ನ ನಿಖರತೆಯೂ ಮಹತ್ವದ್ದಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ಒಂದು ಕೆಲಸ ಪೂರ್ತಿಯಾದ ನಂತರ ಇನ್ನೊಂದು ಟೂಲ್ ಅಳವಡಿಸುವಾಗ ಅದರ ಸೆಟಿಂಗ್ ಮಶಿನ್ ನಲ್ಲಿಯೇ ಮಾಡುವುದಾದಲ್ಲಿ ಈ ಪ್ರಕ್ರಿಯೆಗೆ ಹೆಚ್ಚು ಸಮಯ ಬೇಕಾಗುತ್ತದೆ ಅಲ್ಲದೇ ಈ ಹೆಚ್ಚಿನ ಸಮಯವು ಬೃಹತ್ ಪ್ರಮಾಣದಲ್ಲಿ ವ್ಯರ್ಥವಾಗುತ್ತದೆ. ಈ ರೀತಿಯಲ್ಲಿ ವ್ಯಯವಾಗುವ ಸಮಯವನ್ನು ಕಡಿಮೆ ಮಾಡಲು ಟೂಲ್ ಪ್ರೀಸೆಟರ್ ಬಳಸಿ, ಮಶಿನ್ ನಲ್ಲಿ ಅಪೇಕ್ಷಿಸಿರುವ ಮಾಪನವನ್ನು ಮಾಡಿ ಆ ಟೂಲ್ ಗಳನ್ನು ಮುಂಗಡವಾಗಿಯೇ ತಯಾರಿಸಿ ಇಟ್ಟಲ್ಲಿ, ತುಂಬಾ ಕಡಿಮೆ ಸಮಯದಲ್ಲಿ ಅವುಗಳನ್ನು ಮಶಿನ್ ನಲ್ಲಿ ಅಳವಡಿಸಿ ಕೆಲಸ ನಿರ್ವಹಿಸುವುದು ಸಾಧ್ಯ.
 
ಅತ್ಯಾಧುನಿಕ ಟೂಲ್ ಪ್ರೀಸೆಟರ್ ನಲ್ಲಿ ಒಂದು ಹ್ಯಾಂಡಲ್, ಒಂದು ಬದಿಯಲ್ಲಿ ಕ್ಯಾಮೆರಾ ಮತ್ತು ಅದರ ವಿರುದ್ಧ ದಿಕ್ಕಿನಲ್ಲಿ ಒಂದು ಬೆಳಕಿನ ಮೂಲ ಇಂತಹ ರಚನೆಯನ್ನು ಮಾಡಲಾಗಿರುತ್ತದೆ. ಹಾಗೆಯೇ ಸೂಕ್ತ ಟೂಲ್ ಹೋಲ್ಡರ್ ನೊಂದಿಗೆ ಟೂಲ್ ನಡುವಿನಲ್ಲಿ ಸುರಕ್ಷಿತವಾಗಿ ಹಿಡಿದಿಡಲಾಗಿರುತ್ತದೆ. ಹ್ಯಾಂಡಲ್ ನ ಚಟುವಟಿಕೆಯನ್ನು ಸಿ.ಎನ್.ಸಿಮೂಲಕ ನಿಯಂತ್ರಿಸಲಾಗುತ್ತದೆ. ಇದರ ಹೊರತಾಗಿ ಟೂಲ್ ಪ್ರೀಸೆಟರ್ ಗೆ ಆವಶ್ಯಕವಿರುವ ಸಾಫ್ಟ್ ವೇರ್ ನೊಂದಿಗೆ ಒಂದು ಕಂಪ್ಯೂಟರ್ ಜೋಡಿಸಲಾಗಿರುತ್ತದೆ. ಪ್ರೀಸೆಟರ್ ನಲ್ಲಿರುವ ಕ್ಯಾಮೆರಾದಿಂದ ಸೆರೆ ಹಿಡಿದಿರುವ ಟೂಲ್ ನ ಚಿತ್ರದಲ್ಲಿ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಇದರಿಂದ ಲಭಿಸುವ ಮಾಪನಗಳನ್ನು ತಕ್ಷಣ ಸ್ಕ್ರೀನ್ ನಲ್ಲಿ ತೋರಿಸಲಾಗುತ್ತದೆ. ನಂತರ ಈ ಮಾಪನಗಳನ್ನು ಮಶಿನಿಂಗ್ ಸೆಂಟರ್ ಗೆ ಅಥವಾ ಕ್ಯಾಮ್ ಪ್ರೊಗ್ರಾಮ್ ಗೆ ಡಿಜಿಟಲ್ ಸ್ವರೂಪದಲ್ಲಿ ಕಳುಹಿಸಲಾಗುತ್ತದೆ.
 
1_1  H x W: 0 x
 
ಟೂಲ್ ಪ್ರೀಸೆಟರ್ ನಲ್ಲಿ ISO 50 ಅಥವಾ ISO 40 ಟೇಪರ್ ಇರುವ ಸ್ಪಿಂಡಲ್ ಇರುತ್ತದೆ. ಅನೇಕ ವಿಧದ ಟೇಪರ್ ಇರುವ ಟೂಲ್ ಹೋಲ್ಡರ್ ಗಳ ಮಾಪನವನ್ನು ಮಾಡಲು ಎಡ್ಯಾಪ್ಟರ್ ಬಳಸಲಾಗುತ್ತದೆ. ಕಾರ್ಯವಸ್ತುವಿನ ಯಂತ್ರಣೆಯನ್ನು ಅಪೇಕ್ಷಿಸಿದಂತೆ ಮಾಡುವಲ್ಲಿ ಆಗಾಗ ಬೇಕಾಗುವ (ಕನ್ಸುಮೇಬಲ್) ವಸ್ತುಗಳಲ್ಲಿ ಉಳಿತಾಯ ಮಾಡುವುದು ಮತ್ತು ಟೂಲ್ ನ ಬಾಳಿಕೆಯನ್ನು ಹೆಚ್ಚಿಸುವುದು, ಇದಕ್ಕೋಸ್ಕರ ರನ್ಔಟ್ ಇದೊಂದು ತುಂಬಾ ಮಹತ್ವದ ಘಟಕವಾಗಿರುತ್ತದೆ. ಟೂಲ್ ಮಶಿನ್ ನಲ್ಲಿ ಅಳವಡಿಸುವ ಮುನ್ನ ಅದರಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇಲ್ಲದಿರುವುದನ್ನು ಪರಿಶೀಲಿಸುವುದು ಅತ್ಯಂತ ಮಹತ್ವದ ಅಂಶವಾಗಿದೆ. ಉಚ್ಚಮಟ್ಟದ ಸರ್ಫೇಸ್ ಫಿನಿಶ್ ಮತ್ತು ಟಾಲರನ್ಸ್ ಇವುಗಳ ಕುರಿತು ವಿಚಾರ ಮಾಡುವಾಗ ಟೂಲ್ ರನ್ಔಟ್ ನಿಯಂತ್ರಣದಲ್ಲಿರುವುದೂ ಹೆಚ್ಚು ಅನಿವಾರ್ಯವಾಗಿದೆ. ಟೂಲ್ ಪ್ರೀಸೆಟ್ ನಲ್ಲಿ ರನ್ಔಟ್ ನ ತಪಾಸಣೆಯನ್ನು ಸ್ವಯಂಚಾಲಿತವಾಗಿ ಮಾಡುವುದೂ ಸಾಧ್ಯ. ಇದರಿಂದಾಗಿ ಟೂಲ್ ಉರುಟಾಗಿ ತಿರುಗಿಸಿ ರನ್ಔಟ್ ನ ಮಾಪನವನ್ನು ತಕ್ಷಣ ಮತ್ತು ನಿರ್ದೋಷವಾಗಿ ಮಾಡಬಹುದು.
 
ಟೂಲ್ ಸ್ಪಿಂಡಲ್ ನಲ್ಲಿ ಅಳವಡಿಸಿದ ನಂತರ ಮಶಿನ್ ನಲ್ಲಿ ಡಯಲ್ ಇಂಡಿಕೇಟರ್ ಮೂಲಕ ಟೂಲ್ ನ ತಪಾಸಣೆ ಮಾಡಲು ತುಂಬಾ ಸಮಯವು ವ್ಯರ್ಥವಾಗುತ್ತದೆ. ಆದರೆ ಟೂಲ್ ಪ್ರೀಸೆಟರ್ ನಿಂದಾಗಿ ಇದೇ ಕೆಲಸವನ್ನು ವೇಗವಾಗಿ ಮತ್ತು ನಿರ್ದೋಷವಾಗಿ ಮಾಡುವುದು ಸಾಧ್ಯ. ಅದರೊಂದಿಗೆ ಟೂಲ್ ನ ಎತ್ತರ ಮತ್ತು ವ್ಯಾಸ, ಹಾಗೆಯೇ ಮೂಲೆಗಳ (ಕಾರ್ನರ್) ತ್ರಿಜ್ಯಗಳ ಮಾಪನವು ತನ್ನಷ್ಟಕ್ಕೆ ಆಗುತ್ತದೆ. ನಂತರ ಇದರ ವಿವರಣೆಗಳನ್ನು ಕ್ಯಾಮ್ ಪ್ರೊಗ್ರಾಮ್ ಗೆ ಕಳುಹಿಸಿ ನಿರ್ದೋಷವಾದ ಟೂಲ್ ದಾರಿಯ (ಪಾಥ್) ನಿರ್ಮಾಣವನ್ನು ಮಾಡಲಾಗುತ್ತದೆ.
 
ಟೂಲ್ ಪ್ರೀಸೆಟರ್ ನಲ್ಲಿ ಮ್ಯಾಗ್ನಿಫಯರ್ ನ ಸೌಲಭ್ಯವು ಲಭ್ಯವಿರುವುದರಿಂದ ಟೂಲ್ ನ ತುದಿಯ ಸವೆತ ಮತ್ತು ತುಂಡಾಗುವಿಕೆಯನ್ನು ವೀಕ್ಷಿಸಲು ಚಿತ್ರಗಳನ್ನು 45 ಪಟ್ಟು ಹೆಚ್ಚಿಸಿ (ಝೂಮ್ ಮಾಡಿ) ತೋರಿಸಲಾಗುತ್ತದೆ. ಇದರಿಂದ ಟೂಲ್ ಬದಲಾವಣೆಯನ್ನು ನಿರ್ಧರಿಸುವುದು ಸುಲಭ ಸಾಧ್ಯವಾಗುತ್ತದೆ. ಹೆಚ್ಚಿನ ಸಿ.ಎನ್.ಸಿ. ಟೂಲ್ ಪ್ರೀಸೆಟರ್ ನ ರಿಸೋಲ್ಯುಶನ್ ಒಂದು ಮೈಕ್ರಾನ್ ಮತ್ತು ರಿಪಿಟ್ಯಾಬಿಲಿಟಿಯ ಸಾಮರ್ಥ್ಯ ಎರಡು ಮೈಕ್ರಾನ್ ಇರುತ್ತದೆ.

ಟೂಲ್ ಪ್ರೀಸೆಟರ್ ಆವಶ್ಯಕತೆ
ಟೂಲ್ ಪ್ರೀಸೆಟರ್ ನ ಆವಶ್ಯಕತೆಯು ಗುಣಮಟ್ಟ, ಆಪ್ಟಿಮೈಸ್ಡ್ ಉತ್ಪಾದನೆಯ ಪ್ರಕ್ರಿಯೆ ಮತ್ತು ಫ್ಲೆಕ್ಸಿಬಿಲಿಟಿಯಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರ್ತಿಗೊಳಿಸಲು ತುಂಬಾ ಮಹತ್ವದ್ದಾಗಿರುತ್ತದೆ.
ಇದರಲ್ಲಿ ಬೋರಿಂಗ್ ಬಾರ್, ರೀಮರ್, ಮಿಲ್ಲಿಂಗ್ ಕಟರ್, ಫಾರ್ಮ್ ಟೂಲ್, ಸ್ಟೆಪ್ ಡ್ರಿಲ್ ಇತ್ಯಾದಿ ಟೂಲ್ ಗಳ ಮಾಪನವನ್ನು ನಾವು ಟೂಲ್ ಪ್ರೀಸೆಟರ್ ನಲ್ಲಿ ಮಾಡಬಲ್ಲೆವು.
ಟೂಲ್ ಪ್ರೀಸೆಟಿಂಗ್ ಮತ್ತು ಮಾಪನದ ಕ್ಷೇತ್ರದಲ್ಲಿ EVOSET ಇದು ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾಗಿದೆ. ನಾವು ಉತ್ಪಾದನೆಯ ಸಾಮರ್ಥ್ಯಕ್ಕೆ ಸಹಜತೆಯನ್ನು ನೀಡುತ್ತೇವೆ. ಇದರಲ್ಲಿ ವೈಯಕ್ತಿಕವಾದ ಯೋಜನೆಗಳಿಗೆ ಕಸ್ಟಮೈಜ್ಡ್ ಉಪಾಯಗಳು, ಟೂಲ್ ವ್ಯವಸ್ಥಾಪನಕ್ಕೆ ಪರಿಪೂರ್ಣವಾದ ಉಪಾಯಗಳು ಮತ್ತು ಎಲ್ಲ ರೀತಿಯ ಉತ್ಪಾದನೆಗೋಸ್ಕರ ಪ್ರಕ್ರಿಯೆಗಳ ಇಂಟಿಗ್ರೇಶನ್ ಇವುಗಳು ಒಳಗೊಂಡಿರುತ್ತವೆ.
ಗ್ರಾಹಕರ ವಿಶಿಷ್ಟವಾದ ಬೇಡಿಕೆಗಳನ್ನು ಆಪ್ಟಿಮೈಜ್ ರೂಪದಲ್ಲಿ ಕಾರ್ಯಗತಗೊಳಿಸಲು ಆದ್ಯತೆಯನ್ನು ನೀಡಲಾಗುತ್ತದೆ. ಟೂಲ್ ಪ್ರೀಸೆಟಿಂಗ್ ಇದು ಮಾಪನ ಮತ್ತು ಪರೀಕ್ಷಣೆಯ ಕ್ಷೇತ್ರದಲ್ಲಿ EVOSET ಉಚ್ಚಮಟ್ಟದ ಮತ್ತು ಪೂರಕವಾದ ಉಪಾಯಗಳನ್ನು ನೀಡಲು ಯಾವಾಗಲೂ ಮುಂದಿರುತ್ತದೆ. ಅನೇಕ ವರ್ಷಗಳ ಅನುಭವ, ಉಪಕರಣಗಳು ಮತ್ತು ಸಾಫ್ಟ್ ವೇರ್ ನ ಇನ್ ಹೌಸ್ ಅಭಿವೃದ್ಧಿ ಇವುಗಳ ಸಹಾಯದಿಂದ ನಮ್ಮ ಇಂಜಿನಿಯರಿಂಗ್ ತಂಡವು ಉತ್ಪಾದನೆಯ ಕೌಶಲ್ಯದ ಮತ್ತು ಸಫಲತೆಯ ಖಾತರಿಯನ್ನು ನೀಡುತ್ತದೆ. ಇದರ ಮೂಲಕ ಬೃಹತ್ ಪ್ರಮಾಣದಲ್ಲಿ ಮಶಿನ್ ಗಳನ್ನು ತಯಾರಿಸುವ ಹಾಗೆಯೇ ಮಶಿನ್ ನ ಪ್ರಮಾಣವು ಕಡಿಮೆ ಇರುವ, ಆದರೆ ಆಗಾಗ ಟೂಲ್ ಗಳನ್ನು ಬದಲಾಯಿಸಬೇಕಾಗುವ ಕಂಪನಿಗಳಲ್ಲಿ, ಮಾಡಲಾಗುವ ವಿವಿಧ ಕೆಲಸಗಳ, ಉತ್ಪಾದನೆಯ ನಿಖರತೆಯ ಮತ್ತು ಉತ್ಪಾದನೆಯ ಸಾಮರ್ಥ್ಯವನ್ನು ಶೇಕಡಾ 20 ಕ್ಕಿಂತ ಹೆಚ್ಚು ವೃದ್ಧಿಸಬಲ್ಲದು.
 
ಆಪ್ಟಿಮಾ ಸಿ.ಎನ್.ಸಿ.
ಆಪ್ಟಿಮಾ ಸಿ.ಎನ್.ಸಿ. ಟೂಲ್ ಪ್ರೀಸೆಟಿಂಗ್ ಮಶಿನ್ ಯಾವುದೇ ಸಿ.ಎನ್.ಸಿ. ಮತ್ತು ಸಂಪೂರ್ಣವಾಗಿ ಸ್ವಯಂಚಾಲಿತ ವಸ್ತುಗಳ ನಿರ್ಮಾಣ ಪ್ರಣಾಳಿಕೆಗೋಸ್ಕರ ಬೇಕಾಗುವ ಕಾನ್ಫಿಗರೇಶನ್ ನಲ್ಲಿ ಗ್ರಾಹಕರಿಗೆ ಅನುಗುಣವಾಗಿ ಬದಲಾವಣೆಗಳನ್ನು ಲಭ್ಯ ಮಾಡಿಕೊಡಲಾಗುತ್ತದೆ.
ಈ ಮಶಿನ್ ಸಹಜವಾಗಿ ನಡೆಸುವಂತೆ ಇದ್ದು ಅದರ ನಿಖರತೆಯಲ್ಲಿ ಸಂಶಯವಿಲ್ಲ. ಮಶಿನ್ ನಲ್ಲಿ ಬಳಸಲಾಗಿರುವ ಉಚ್ಚಮಟ್ಟದ ಯಂತ್ರಭಾಗಗಳು ಮತ್ತು ಮಾರುಕಟ್ಟೆಯಲ್ಲಿ ನಮ್ಮಕುರಿತು ಇರುವ ಗೌರವ ಇದೇ, ಈ ಪ್ರಕ್ರಿಯೆ ಕುರಿತು ಖಾತರಿಯನ್ನು ನೀಡುತ್ತವೆ.

ಪ್ರಕ್ರಿಯೆಯ ವಿಶ್ವಾಸಾರ್ಹತೆ
ಸ್ವಯಂಚಾಲಿತ ನಿರ್ವಹಣೆ, ಮೋಟರ್ ನ ಸಹಾಯದಿಂದ ನಡೆಸಲಾಗುವ C ಅಕ್ಷದೊಂದಿಗಿರುವ ಆಟೋಫೋಕಸ್ ಲಭ್ಯ.

ವೈಶಿಷ್ಟ್ಯಗಳು

ಗ್ರಾಹಕರ ಅನುಭವ
ಸಿ.ಎನ್.ಸಿ. ಮಶಿನ್ ಶಾಪ್ ನಲ್ಲಿ ಸೆಟಪ್ ಗೋಸ್ಕರ ಟೂಲ್ ಪ್ರೀಸೆಟರ್ ಆವಶ್ಯಕವಾಗಿದೆ. ಟೂಲ್ ನ ಎತ್ತರ, ಆಫ್ ಸೆಟ್ ನ ತಪಾಸಣೆ ಮಾಡಲು ಮತ್ತು ಟೂಲ್ ನ ಸೆಟಿಂಗ್ ಮಾಡಲು ಪುಣೆಯಲ್ಲಿರುವ ಜಯಹಿಂದ್ ಇಂಡಸ್ಟ್ರೀಜ್ ಕಂಪನಿಯಲ್ಲಿ ಆಪ್ಟಿಮಾ ಸಿ.ಎನ್.ಸಿ. ಟೂಲ್ ಪ್ರೀಸೆಟರ್ ಬಳಸಲಾಗುತ್ತದೆ. ‘ಜಯಹಿಂದ್’ನ ಕಟಿಂಗ್ ಟೂಲ್ ವಿಭಾಗದ ವ್ಯವಸ್ಥಾಪಕರಾದ ನಿತೀನ್ ದೇಶಮುಖ್ ಇವರು ಹೇಳುತ್ತಾರೆ, ‘’ಸಿ.ಎನ್.ಸಿ. ಮಶಿನ್ ನಲ್ಲಿ ಮೆಗಜಿನ್ ನಲ್ಲಿ ಟೂಲ್ ಲೋಡ್ ಮಾಡುವಾಗ ಟೂಲ್ ನ ಎತ್ತರದ ತಪಾಸಣೆಯನ್ನು ಮಾಡಬೇಕಾಗುತ್ತದೆ. ಈ ಎತ್ತರದ ತಪಾಸಣೆಯನ್ನು ವರ್ನಿಯರ್ ನಿಂದ ಅಥವಾ ಅಡಿಕೋಲಿನಿಂದ ಮಾಡಲಾಗುವುದಿಲ್ಲ. ಅದಕ್ಕೋಸ್ಕರ ಟೂಲ್ ಪ್ರೀಸೆಟರ್ ಅತ್ಯಾವಶ್ಯಕವಾಗಿರುತ್ತದೆ. 2006 ರಿಂದ ನಾವು ಟೂಲ್ ಪ್ರೀಸೆಟರ್ ಬಳಸುತ್ತಿದ್ದೇವೆ. ಟೂಲ್ ನ ಹೈಟ್ ಆಫ್ ಸೆಟ್, ಟೂಲ್ ನ ವ್ಯಾಸ ಮತ್ತು ಟೂಲ್ ನ ರನ್ಔಟ್, ಕೋನ, ಇನ್ ಸೈಡ್ ಪ್ರೊಫೈಲ್ ನ ತಪಾಸಣೆ ಇತ್ಯಾದಿ ಅಂಶಗಳಿಗೋಸ್ಕರ ಟೂಲ್ ಪ್ರೀಸೆಟರ್ ನ ಉಪಯೋಗವಾಗುತ್ತದೆ. ಟೂಲ್ ನಿರ್ಧರಿಸಿರುವ ಟಾಲರನ್ಸ್ ನಲ್ಲಿ ತಯಾರಿಸಲಾಗಿದೆಯೇ, ಇಲ್ಲವೇ ಎಂಬುದನ್ನು ಟೂಲ್ ಪ್ರೀಸೆಟರ್ ನಿಂದ ಪರಿಶೀಲಿಸಲಾಗುತ್ತದೆ. ಟೂಲ್ ಗಳ ಪ್ರಮುಖ ವ್ಯಾಸ, ಎಂಗಲ್ ಮತ್ತು ತ್ರಿಜ್ಯಗಳ ಮೂಲಕ ಇದನ್ನು ಪರೀಕ್ಷಿಸಬಲ್ಲೆವು.
 
ಟೂಲ್ ಪ್ರೀಸೆಟರ್ ನಲ್ಲಿ ನೀಡಲಾಗಿರುವ ಎಲ್ಲ ವೈಶಿಷ್ಟ್ಯಗಳನ್ನು ನಾವು ಇತ್ತೀಚೆಗೆ ಬಳಸುತ್ತಿದ್ದೇವೆ. ಇದರಿಂದಾಗಿ ಕಾರ್ಯವಸ್ತುವಿನ ಸೆಟಪ್ ನ ವೇಳೆಯಲ್ಲಿ ಲಾಭವಾಗುತ್ತದೆ. ಟೂಲ್ ಪ್ರೀಸೆಟರ್ ನಲ್ಲಿ ಟೂಲ್ ಬರುವ ಮುಂಚೆಯೇ ಅಡಾಪ್ಟರ್ ನಿಂದ ಅದನ್ನು ಕೈಯಿಂದಲೇ ಬಿಗಿಯಾಗಿ ಅಳವಡಿಸಲಾಗುತ್ತದೆ. ಅದರ ನಂತರ ಟೂಲ್ ಆಪ್ಟಿಮಾ ಪ್ರೀಸೆಟರ್ ನಲ್ಲಿ ವ್ಯಾಸದ ಎತ್ತರದ ತಪಾಸಣೆಯನ್ನು ಮಾಡಲಾಗುತ್ತದೆ. ಈ ಪರೀಕ್ಷೆಯನ್ನು ಟೂಲ್ ಗ್ರೈಂಡಿಂಗ್ ಗೆ ಅನುಸಾರವಾಗಿ ಮಾಡಲಾಗುತ್ತದೆ.
 
ಟೂಲ್ ಪ್ರೀಸೆಟರ್ ನಲ್ಲಿ ಸೆಟ್ ಮಾಡಲಾಗಿರುವ ಟೂಲ್ ಪ್ರಮುಖ ಕೆಲಸಕ್ಕೋಸ್ಕರ ಬರುವಾಗ ಅದರಲ್ಲಿ 10 ರಿಂದ 12 ಮೈಕ್ರಾನ್ ನ ವ್ಯತ್ಯಾಸ (ಡೆವಿಯೇಶನ್) ಉಂಟಾಗುತ್ತದೆ. ಟೂಲ್ ಪ್ರೀಸೆಟರ್ ನಲ್ಲಿ ಟೂಲ್ ಸ್ಥಿರವಾಗುತ್ತದೆ. ಇದರಿಂದಾಗಿ ಸ್ಥಿರವಾದ ಪರಿಸ್ಥಿತಿಯಲ್ಲಿ ಉಂಟಾಗುವ ಮಾಪನಗಳು ಮತ್ತು ಮಶಿನ್ ನಲ್ಲಿ ಆ ಟೂಲ್ ಗಳು ಒಂದು ವಿಶಿಷ್ಟವಾದ ಆರ್.ಪಿ.ಎಮ್.ನಲ್ಲಿ ತಿರುಗಿಸುವಾಗ ಉಂಟಾಗುವ ಮಾಪನ ಇದರಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಉಂಟಾಗುತ್ತದೆ. ಇದಕ್ಕೋಸ್ಕರ ನಾವು ಯಂತ್ರಭಾಗಗಳ ಆಕಾರಕ್ಕೆ ಅನುಸಾರವಾಗಿ ಆ ಟೂಲ್ ಪ್ರೀಸೆಟರ್ ನಲ್ಲಿ ಸೆಟ್ ಮಾಡುತ್ತೇವೆ. ಸ್ಟೆಟಿಕ್ ಲೋಡ್ ನ ಹೋಲಿಕೆಯಲ್ಲಿ ಡೈನ್ಯಾಮಿಕ್ ಲೋಡ್ ನಿಂದಾಗಿ ಅದರಲ್ಲಿ ರನ್ಔಟ್ ಹೆಚ್ಚುತ್ತಿದ್ದಲ್ಲಿ ಅದನ್ನು ಆಪರೇಟರ್ ಗೆ ತಪಾಸಣೆಯ ಮಾಡಬೇಕಾಗುತ್ತದೆ. ನಮ್ಮಲ್ಲಿ 80 ಮಶಿನ್ ಗಳಿದ್ದು ಎಲ್ಲ ಮಶಿನ್ ಗಳಿಗೋಸ್ಕರ ಒಂದು ಪ್ರೀಸೆಟರ್ ಇದೆ.’’
 
ಟೂಲ್ ಪ್ರೀಸೆಟರ್ ಬಳಸಲು ವಿಶೇಷವಾದ ತಿಳುವಳಿಕೆ ಇರುವ ವ್ಯಕ್ತಿಯ ಆವಶ್ಯಕತೆ ಇರುವುದಿಲ್ಲ. ಅಲ್ಪಸ್ವಲ್ಪ ತರಬೇತಿ ಪಡೆದು ಅಥವಾ ಅಭ್ಯಾಸದ ನಂತರ ಮಶಿನ್ ಆಪರೇಟರ್ ಗೆ ಕೂಡಾ ಆಪ್ಟಿಮಾ ಟೂಲ್ ಪ್ರೀಸೆಟರ್ ನ ಉಪಯೋಗವನ್ನು ಮಾಡುವುದು ಸಾಧ್ಯ.
 
ನಟರಾಜನ್ ಅಯ್ಯರ್
ವ್ಯವಸ್ಥಾಪಕ ನಿರ್ದೇಶಕರು
ಟ್ರೈಮಾಸ್ ಇಂಡಿಯಾ ಪ್ರೈ.ಲಿ.
9823147614
natarajan@trimosindia.com
ನಟರಾಜನ್ ಅಯ್ಯರ್ ಇವರು ಮೆಥಮೆಟಿಕ್ಸ್ ಪದವೀಧರರಾಗಿದ್ದಾರೆ. ಅವರು ಟ್ರೈಮಾಸ್ ಇಂಡಿಯಾ ಪ್ರೈ.ಲಿ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
Powered By Sangraha 9.0