ಸಿ.ಎಮ್.ಎಮ್. : ನಿರ್ಮಾಣದ ಯಂತ್ರಣೆಯಲ್ಲಿ ಪ್ರಮುಖ ಘಟಕ

15 Jan 2021 11:09:01
3_1 H x W: 0 x
ಔದ್ಯೋಗಿಕ ಕ್ಷೇತ್ರದಲ್ಲಿ ಇತ್ತೀಚೆಗೆ ಎಲ್ಲ ರೀತಿಯ ಸುಧಾರಣೆಗಳು ಆಗುತ್ತಿರುವುದು ಕಂಡುಬರುತ್ತಿದೆ. ಕಳೆದ ಎರಡು ದಶಕಗಳಲ್ಲಿ ಆಗಿರುವ ಸುಧಾರಣೆಗಳ ವೇಗ ಮತ್ತು ಮುಂದಿನ ಕಾಲದಲ್ಲಿ ಅಪೇಕ್ಷಿಸಲಾಗಿರುವ ಸುಧಾರಣೆಗಳ ವೇಗವು ತುಂಬಾ ವ್ಯಾಪಕವಾಗಿವೆ ಮತ್ತು ಮುಂದೆಯೂ ಅಗಬಲ್ಲವು. ಜಾಗತಿಕ ಮಾರುಕಟ್ಟೆ ಮತ್ತು ಭಾರತೀಯ ಉತ್ಪಾದನೆಗಳು ಇವೆರಡರಲ್ಲಿರುವ ದೂರ, ವ್ಯತ್ಯಾಸ ತುಂಬಾ ಕಡಿಮೆಯಾಗುತ್ತಿರುವುದು ವಿಶೇಷವಾಗಿ ಗಮನಕ್ಕೆ ಬರುತ್ತಿದೆ. ಇದರಿಂದಾಗಿ ಇದರಲ್ಲಿ ಕಂಡುಬರುವ ಮಹತ್ವದ ಅಂಶವೆಂದರೆ, ತಾವು ಮಾಡಿರುವ ಅಭಿವೃದ್ಧಿಗಳ ವೇಗವನ್ನು ಕಾಪಾಡುವುದು ಸಾಲದು, ಆ ವೇಗವನ್ನು ಇನ್ನಿತರರ ವೇಗಕ್ಕಿಂತ ಹೆಚ್ಚಿಸಬೇಕು, ಎಂಬ ಅಂಶವು ಎಲ್ಲ ಉತ್ಪಾದಕರ ಗಮನಕ್ಕೆ ಬಂದಿದೆ.

1_1  H x W: 0 x 
 
ತಂತ್ರಜ್ಞಾನದಲ್ಲಿ ಸುಧಾರಣೆಗಳ ‘ಡ್ರೈವಿಂಗ್’ ಘಟಕಗಳಲ್ಲಿ ಗಾಳಿಯ ಮತ್ತು ಶಬ್ದದ (ಧ್ವನಿಯ) ಮಾಲಿನ್ಯವನ್ನು ಕಡಿಮೆ ಮಾಡುವುದು, ಎಲ್ಲ ರೀತಿಯ ಪ್ರಕ್ರಿಯೆಗಳ ವೇಗವನ್ನು ವೃದ್ಧಿಸುವುದು ಮತ್ತು ಸ್ವಯಂಚಾಲನೆಯ ಪ್ರಮಾಣವನ್ನು ಹೆಚ್ಚಿಸುವುದು, ಈ ಮೂರು ಪ್ರಮುಖ ಘಟಕಗಳಾಗಿವೆ. ಈ ಮೂರೂ ಘಟಕಗಳು ಸೇರಿ ಲಭಿಸುವ ಪರಿಣಾಮವೆಂದರೆ ಅನೇಕ ವಿಧದ ಮಶಿನ್ ಗಳಲ್ಲಿರುವ ಮಹತ್ವದ ಯಂತ್ರಭಾಗಗಳ ಗುಣಮಟ್ಟವು ಹೆಚ್ಚಾಗುತ್ತಿದೆ. ಅವುಗಳ ಯಂತ್ರಣೆಯನ್ನು ಮಾಡಲು ಅಷ್ಟೇ ಕಾರ್ಯ ಸಾಮರ್ಥ್ಯ ಇರುವ ಮಶಿನ್ ಗಳ ಆವಶ್ಯಕತೆ ಇರುವುದರಿಂದ ಲಘು, ಮಧ್ಯಮ ಉದ್ಯಮಗಳಲ್ಲಿಯೂ ಸಿ.ಎನ್.ಸಿ.ಯ ಬಳಕೆಯು ಹೆಚ್ಚುತ್ತಿರುವುದು ಕಾಣುತ್ತಿದೆ. ಇದರಿಂದಾಗಿ ಉತ್ಪಾದನೆಯ ಸಾಮರ್ಥ್ಯ ಮತ್ತು ಗುಣಮಟ್ಟದಲ್ಲಿ ಆಮೂಲಾಗ್ರ ಸುಧಾರಣೆಗಳಾಗಿವೆ. ಈ ಎಲ್ಲ ಪ್ರಕ್ರಿಯೆಗಳಲ್ಲಿರುವ ಮಹತ್ವದ ಘಟಕವೆಂದರೆ ಯಂತ್ರಭಾಗದ ಮಾಪನ ಮತ್ತು ಅದರ ಗುಣಮಟ್ಟ. ಯಂತ್ರಭಾಗದ ಕ್ಲಿಷ್ಟತೆ ಎಷ್ಟು ಹೆಚ್ಚು ಇರುತ್ತದೆಯೋ, ಅಷ್ಟೇ ಅದರ ಮಾಪನವೂ ನಿಖರವಾಗಿ ಮತ್ತು ಕನಿಷ್ಠ ಸಮಯದಲ್ಲಿ ಮಾಡುವುದೂ ಅನಿವಾರ್ಯವಾಗಿದೆ. ಸಂಪೂರ್ಣ ಪ್ರಕ್ರಿಯೆಯಾದ ನಂತರ ಯಂತ್ರಭಾಗದ ಗುಣಮಟ್ಟದ ತಪಾಸಣೆಯನ್ನು ಮಾಡುವುದಕ್ಕಿಂತ ವಿವಿಧ ಹಂತಗಳಲ್ಲಿ ಅದರ ಮಾಪನವನ್ನು ಮಾಡಿದಲ್ಲಿ ಯಂತ್ರಭಾಗಗಳನ್ನು ತಿರಸ್ಕರಿಸುವ (ರಿಜೆಕ್ಟ್) ಪ್ರಮಾಣವೂ ಕಡಿಮೆಯಾಗುತ್ತದೆ. ಇದರಿಂದಾಗಿ ಖರ್ಚಿನಲ್ಲಿಯೂ ತುಂಬಾ ಉಳಿತಾಯವಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಯಂತ್ರಣೆಯನ್ನು ಮಾಡಲು ಸಿ.ಎನ್.ಸಿ. ಮಶಿನ್ ಎಲ್ಲೆಡೆಯಲ್ಲಿಯೂ ಬಳಸಲಾಗುತ್ತದೆ, ಹಾಗೆಯೇ ಮಹತ್ವದ ಯಂತ್ರಭಾಗಗಳ ಮಾಪನವನ್ನು ಮಾಡುವಾಗ ಉಚ್ಚಮಟ್ಟದ ಕೊ-ಆರ್ಡಿನೆಟ್ ಮೆಜರಿಂಗ್ ಮಶಿನ್ (ಸಿ.ಎಮ್.ಎಮ್.) ಬಳಸಬೇಕಾಗುತ್ತದೆ. ಸಿ.ಎನ್.ಸಿ. ಮಶಿನ್ ನಂತೆಯೇ ಸಿ.ಎಮ್.ಎಮ್.ನಲ್ಲಿಯೂ ಕೂಡಾ ದೀರ್ಘಕಾಲಾವಧಿಯ ಲಾಭಗಳಿವೆ. 

2_1  H x W: 0 x 
 
ಆಧುನಿಕ ಕೈಗಾರಿಕೋದ್ಯಮಗಳಲ್ಲಿ ಎಸ್.ಪಿ.ಎಮ್.ನ ಜಾಗದಲ್ಲಿ ವರ್ಟಿಕಲ್ ಮಶಿನಿಂಗ್ ಸೆಂಟರ್ ಮತ್ತು ಹಾರಿಝಾಂಟಲ್ ಮಶಿನಿಂಗ್ ಸೆಂಟರ್, ರೊಬೊ ಡ್ರಿಲ್ ಇಂತಹ ಬಹುಮುಖತ್ವದ ಸಿ.ಎನ್.ಸಿ. ಮಶಿನ್ ಆಕ್ರಮಿಸಿದೆ. ಇಂತಹ ಮಶಿನ್ ನಿಂದ ಅನೇಕ ವಿಧದ ಯಂತ್ರಭಾಗಗಳ ಯಂತ್ರಣೆಯನ್ನು ಮಾಡಬಹುದು. ಇದರೊಂದಿಗೆ ಪ್ರೊಗ್ರಾಮ್ ಬದಲಾಯಿಸಿ ಹೊಸ ಸೆಟಪ್ ನಲ್ಲಿ ನಿರ್ಮಾಣವಾಗುವ ಮೊದಲ ಹೊಸ ಯಂತ್ರಭಾಗಗಳ ಮಾಪನದ ತಪಾಸಣೆಯನ್ನು ಮಾಡುವುದೂ ಮಹತ್ವದ್ದಾಗಿದೆ. ಈ ಪರಿಸ್ಥಿತಿಯಲ್ಲಿ ತಕ್ಷಣ ಮತ್ತು ನಿಖರವಾದ ಮಾಪನವನ್ನು ಮಾಡುವಾಗ ಸಿ.ಎಮ್.ಎಮ್. ಮಶಿನ್ ಉಪಯೋಗವು ಯೋಗ್ಯ ರೀತಿಯಲ್ಲಿ ಆಗುತ್ತದೆ.
 
ತಮ್ಮ ಪ್ರಸ್ತುತ ಉದ್ಯಮ ಮತ್ತು ಅದರ ಭವಿಷ್ಯತ್ಕಾಲದ ವಿಚಾರಗಳನ್ನು ಗಮನದಲ್ಲಿ ಇಟ್ಟಲ್ಲಿ ಉಚ್ಚಮಟ್ಟದ ನಿರ್ಮಾಣದ ಪ್ರಕ್ರಿಯೆಯೊಂದಿಗೆ ಮಾಪನದ ಪ್ರಕ್ರಿಯೆಯನ್ನೂ ಹೊಂದಾಣಿಸಲಾಗಿದೆ. ಇಂತಹ ವಿಚಾರದಿಂದಲೇ ಈ ಹಿಂದೆ ಶಾಪ್ ಫ್ಲೋರ್ ನೊಂದಿಗೆ ಅನೇಕ ಜಾಗಗಳಲ್ಲಿ ಅಳವಡಿಸಲಾಗಿರುವ ಸಿ.ಎಮ್.ಎಮ್. ಈಗ ಹೊಸ ಹೊಸ ಯೋಜನೆಗಳಲ್ಲಿ ಪ್ರತ್ಯಕ್ಷವಾಗಿ ನಿರ್ಮಾಣದ ಪ್ರಕ್ರಿಯೆಯಲ್ಲಿಯೇ ಒಳಗೊಂಡಿರುತ್ತವೆ. ಇದರಿಂದಾಗಿ ಮಾನವ ಹಸ್ತಕ್ಷೇಪದ ಹೊರತಾಗಿ ಯಂತ್ರಣೆ, ಮಾಪನ ಮತ್ತು ಅದರ ಫೀಡ್ ಬ್ಯಾಕ್ ಇತ್ಯಾದಿಗಳನ್ನು ಯಂತ್ರಣೆಯ ವ್ಯವಸ್ಥೆಗೆ ಜೋಡಿಸಿ ಹೆಚ್ಚು ನಿಖರವಾದ ಯಂತ್ರಣೆಯನ್ನು ಮಾಡುವುದು ಸಾಧ್ಯವಾಗಿದೆ.
ಸಿ.ಎಮ್.ಎಮ್.ನ ಲಾಭಗಳು
1.ಯಂತ್ರಭಾಗಗಳ ಮಾಪನದಲ್ಲಿ ಉಚ್ಚಮಟ್ಟದ ಪ್ರಿಸಿಜನ್ ಮತ್ತು ನಿಖರತೆ.
2.ಕ್ಲಿಷ್ಟ ಮಾಪನ : ಪಾರಂಪರಿಕ ರೀತಿಯಲ್ಲಿ ಮಾಪನವನ್ನು ಮಾಡಲು ಅತ್ಯಂತ ನಿಪುಣ ಮತ್ತು ಅನುಭವವುಳ್ಳ ತಂತ್ರಜ್ಞರ ಆವಶ್ಯಕತೆ ಇರುತ್ತದೆ. ಸಿ.ಎಮ್.ಎಮ್.ನಲ್ಲಿ ಇವೆಲ್ಲವನ್ನು ತಪ್ಪಿಸಲಾಗುತ್ತದೆ. ಯಾವ ವ್ಯಕ್ತಿಯು ಪ್ರೊಗ್ರಾಮಿಂಗ್ ಮಾಡಿ ಮಾಪನ ಮಾಡಬಲ್ಲನೋ, ಇಂತಹ ತರಬೇತಿ ಪಡೆದ ವ್ಯಕ್ತಿಯಿಂದಲೇ ಎಲ್ಲ ಮಾಪನಗಳನ್ನು ಯಶಸ್ವಿಯಾಗಿ ಮಾಡಬಹುದಾಗಿದೆ.
 
3.ಸಿಲಿಂಡರ್ ಹೆಡ್, ಗೇರ್ ಕವರ್, ಬ್ಲಾಕ್ ಇತ್ಯಾದಿ ಯಂತ್ರಭಾಗಗಳಲ್ಲಿ ನೂರಾರು ರೀತಿಯ ಮಾಪನಗಳಿರುತ್ತವೆ. ಇದರಿಂದಾಗಿ ಕೈಯಿಂದ ಮಾಪನವನ್ನು ಮಾಡುವಾಗ ಮಾನಸಿಕ ಒತ್ತಡ ಉಂಟಾಗುತ್ತದೆ, ಹೆಚ್ಚು ಸಮಯವೂ ಬೇಕಾಗುತ್ತದೆಮತ್ತು ದೋಷಗಳು ಉದ್ಭವಿಸುವ ಸಾಧ್ಯತೆಯೂ ಹೆಚ್ಚುತ್ತದೆ. ಸಿ.ಎಮ್.ಎಮ್.ನಲ್ಲಿ ಈ ಎಲ್ಲ ಕೆಲಸವು ವೇಗವಾಗಿ ಮತ್ತು ಸುಲಭವಾಗಿ ಮಾಡಲಾಗುತ್ತದೆ.


3_1  H x W: 0 x 
 
4.ಯಂತ್ರಭಾಗಗಳ ಎಲ್ಲ ಬದಿಗಳಲ್ಲಿ ಅಕ್ಕಪಕ್ಕದ ದೂರದ ತಪಾಸಣೆಯನ್ನು ನಿರ್ದೋಷವಾಗಿ ಕೇವಲ ಅವುಗಳ ಅಕ್ಷೀಯ ದೂರ ಪ್ರೊಗ್ರಾಮ್ ನಲ್ಲಿ ಫೀಡ್ ಮಾಡಿಯೇ ಸಹಜವಾಗಿ ಮಾಪನ ಮಾಡಲಾಗುತ್ತದೆ.
5.ಅನೇಕ ಯಂತ್ರಭಾಗಗಳಲ್ಲಿ ಅನೇಕ ವಿಧದ ಹಂತಗಳ ಮಾಪನವನ್ನು ಮಾಡುವುದು ಆವಶ್ಯಕವಿರುತ್ತದೆ. ಮಾನವನ ಹಸ್ತಕ್ಷೇಪದ ರೀತಿಯಿಂದಾಗಿ ಇದರಲ್ಲಿ ತಪ್ಪುಗಳಾಗುತ್ತವೆ. ಈ ತಪ್ಪುಗಳು ಮುಂದೆ ಹೆಚ್ಚಾಗುತ್ತಾ ಹೋಗುತ್ತವೆ. ಸಿ.ಎಮ್.ಎಮ್.ನಲ್ಲಿ ಹಾಗೆ ಆಗುವುದಿಲ್ಲ.
 
6.ಹೊಸ ರೀತಿಯನ್ನು ಅವಲಂಬಿಸಲು ಮಶಿನ್ ನಲ್ಲಿ ಮಾಡಲಾಗುವ ಕೆಲಸದಲ್ಲಿ ಬದಲಾವಣೆಗಳನ್ನು ಮಾಡುವ ಆವಶ್ಯಕತೆ ಇರುವುದಿಲ್ಲ. ಕೇವಲ ಪ್ರೊಗ್ರಾಮಿಂಗ್ ಬದಲಾಯಿಸಿ, ಅದೇ ಸಿ.ಎಮ್.ಎಮ್. ಬಳಸುವುದೂ ಸಾಧ್ಯ.
7.ಒಂದೇ ಸಿ.ಎಮ್.ಎಮ್. ನಲ್ಲಿ ಅನೇಕ ಆಕಾರದ ಯಂತ್ರಭಾಗಗಳನ್ನು ಬಳಸುವುದೂ ಸಾಧ್ಯ.
8.ಒಂದೇ ವಿಧದ ಅನೇಕ ಯಂತ್ರಭಾಗಗಳ ಮಾಪನವನ್ನು ಮಾಡುವುದಾದಲ್ಲಿ ಸಿ.ಎಮ್.ಎಮ್.ನಲ್ಲಿ ಅದನ್ನು ತುಂಬಾ ಕಡಿಮೆ ಸಮಯದಲ್ಲಿ ಮಾಡಲಾಗುತ್ತದೆ. ಇದರಿಂದಾಗಿ ಉತ್ಪಾದಕತೆಯೂ ಹೆಚ್ಚುತ್ತದೆ.
ಹಲವಾರು ಮಾಪನಗಳನ್ನು ಯೋಗ್ಯವಾದ ಪ್ರೊಗ್ರಾಮಿಂಗ್ ನ ಸಹಾಯದಿಂದ ಸಿ.ಎಮ್.ಎಮ್.ನಲ್ಲಿ ಹೇಗೆ ಮಾಡಬಹುದು, ಎಂಬುದನ್ನು ಈ ಮುಂದಿನ ಒಂದೆರಡು ಉದಾಹರಣೆಗಳಿಂದ ತಿಳಿದುಕೊಳ್ಳೋಣ.
ಸಿ.ಎಮ್.ಎಮ್.ನ ಸಹಾಯದಿಂದ ಕೋನದ ಮಾಪನ
ಯಂತ್ರಭಾಗಗಳಲ್ಲಿ ಇರುವ ಕೋನದ ಮಾಪನವನ್ನು ಮಾಡುವಾಗ ಎರಡು ಸರ್ಫೇಸ್ ಗಳಿಂದ ಸಮಾನವಾದ ಲಂಬ ಸ್ಥಿತಿಯಲ್ಲಿ ಪ್ರೋಬ್ ನ ಸಹಾಯದಿಂದ ಮಾಪನವನ್ನು ಮಾಡಲಾಗುತ್ತದೆ. ಎರಡೂ ಸರ್ಫೇಸ್ ಗಳಲ್ಲಿರುವ ಬಿಂದುಗಳ ಎರಡು ಸರಾಸರಿ ರೇಖೆಗಳ ಸ್ಥಿತಿಯಿಂದ ಕೋನವನ್ನು ನಿರ್ಧರಿಸಲಾಗುತ್ತದೆ. ಎಲ್ಲ ಬಿಂದುಗಳ ಮಾಪನವನ್ನು ಮಾಡಿದನಂತರ ಪ್ರೊಗ್ರಾಮಿಂಗ್ ನಲ್ಲಿ ಅಂಕೆ-ಸಂಖ್ಯೆಗಳ ಶಾಸ್ತ್ರೀಯ ಪದ್ಧತಿಯಿಂದ ಸರಾಸರಿ ಕೋನವನ್ನು ನಿರ್ಧರಿಸಲಾಗುತ್ತದೆ. ಇದರಿಂದಾಗಿ ಅದರ ನಿಖರತೆಯು ಹೆಚ್ಚಾಗುತ್ತದೆ. ಚಿತ್ರ ಕ್ರ. 1 ರಲ್ಲಿ ಕೋನ ಮತ್ತು ಅದರ ಮಾಪನವನ್ನು ಮಾಡುವಾಗ ಬಿಂದುಗಳ ಸಹಭಾಗಿತ್ವವನ್ನು ತೋರಿಸಲಾಗಿದೆ.
ಸಿ.ಎಮ್.ಎಮ್.ನ ಸಹಾಯದಿಂದ ವರ್ತುಲದ ಮಾಪನ
ವರ್ತುಲಾಕಾರದ ಮಾಪನವನ್ನು ಮಾಡುವಾಗ ಒಂದು ಅಕ್ಷವನ್ನು ಸ್ಥಿರವಾಗಿರಿಸಿ ಇನ್ನಿತರ ಎರಡು (ಸಾಮಾನ್ಯವಾಗಿ X ಮತ್ತು Y) ಅಕ್ಷಗಳಲ್ಲಿ ವರ್ತುಲಾಕಾರ ಭಾಗದಿಂದ ಪ್ರೋಬ್ ತಿರುಗಿಸಿ ಅದರ ಮಾಪನವನ್ನು ಮಾಡಲಾಗುತ್ತದೆ. ಇದರಲ್ಲಿರುವ ಎಲ್ಲ ಬಿಂದುಗಳ X ಮತ್ತು Y ಅಕ್ಷಗಳ ಸ್ಥಾನದಿಂದ ಸರಾಸರಿ ವರ್ತುಲಾಕಾರವನ್ನು ನಿರ್ಧರಿಸಲಾಗುತ್ತದೆ. ಈ ಎಲ್ಲ ಮಾಪನಗಳು ಸಂಖ್ಯಾಶಾಸ್ತ್ರದ ಪದ್ಧತಿಯಲ್ಲಿ ಆಗುವುದರಿಂದ ಯೋಗ್ಯವಾದ ಪ್ರೊಬ್ ಬಳಸಿದ ನಂತರ ಫಲಿತಾಂಶವು ನಿರ್ದೋಷವಾಗಿ ಲಭಿಸುತ್ತದೆ. ಈ ಮಾಪನದ ಪ್ರಾತಿನಿಧಿಕ ಸ್ಪರೂಪವನ್ನು ಚಿತ್ರ ಕ್ರ. 2 ರಲ್ಲಿ ತೋರಿಸಲಾಗಿದೆ.
 
3_1  H x W: 0 x
ಮೇಲಿನ ಎರಡೂ ರೀತಿಗಳಲ್ಲಿ ಸ್ಕ್ಯಾನಿಂಗ್ ಅಪ್ಲಿಕೇಶನ್ ತುಂಬಾ ಮಹತ್ವದ್ದಾಗಿದೆ. ಅದರಲ್ಲಿ ಹೆಚ್ಚು ನಿರ್ದೋಷತ್ವವೂ ಆವಶ್ಯಕವಾಗಿದೆ. ಮಾಪನದಲ್ಲಿರುವ ದೋಷಗಳನ್ನು ತಡೆಯಲು ಬ್ರಿಜ್ ಸಿ.ಎಮ್.ಎಮ್. ಬಳಸಿದಲ್ಲಿ ಅಂತಿಮ ಫಲಿತಾಂಶವು ಉಚ್ಚಮಟ್ಟದ್ದು ಲಭಿಸುತ್ತದೆ. ಹಾಗೆಯೇ ಪ್ರೋಬ್ ನ ವೇಗ ಮತ್ತು ಚಲನೆಯಲ್ಲಿರುವ ಬದಲಾವಣೆಯಲ್ಲಿಯೂ ನಿಯಂತ್ರಣೆ ಇರುವುದು ಅಗತ್ಯದ್ದಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಅನೇಕ ರೀತಿಯ ಯಂತ್ರಭಾಗಗಳ ಮಾಪನವನ್ನು ನಿರ್ದೋಷವಾಗಿ ಮಾಡಬಹುದಾಗಿದೆ. ಇದಕ್ಕೋಸ್ಕರ ಆವಶ್ಯಕವಿರುವ ಬಂಡವಾಳವನ್ನು ಹೂಡಬೇಕಾಗುತ್ತದೆ. ಎರಡು ಧ್ಯೇಯಗಳನ್ನು ಎದುರಿಗಿಟ್ಟು ‘ಎಕ್ಯುರೇಟ್’ ಈ ಕಂಪನಿಯು ಅನೇಕ ವಿಧದ ಸಿ.ಎಮ್.ಎಮ್. ತಯಾರಿಸಿದ್ದಾರೆ. ಅದರಲ್ಲಿರುವ ಕೆಲವು ಮಶಿನ್ ಗಳ ಈ ಮುಂದೆ ನೀಡಲಾಗಿದೆ.

ಬ್ರಿಜ್ ಸಿ.ಎಮ್.ಎಮ್.

5_1  H x W: 0 x 
ಸಿ.ಎಮ್.ಎಮ್.ನಲ್ಲಿರುವ ಎರಡು ಮಹತ್ವದ ಘಟಕಗಳಿವೆ. ಯಂತ್ರಭಾಗಗಳನ್ನು ಸರ್ಫೇಸ್ ಪ್ಲೇಟ್ ನಲ್ಲಿ ಇಡುವುದು ಮತ್ತು ಪ್ರೋಬ್ ತಿರುಗಿಸುವುದು, ಇವೆರಡನ್ನು ಬ್ರಿಜ್ ಅಥವಾ ಕಾಲಮ್ ಎಂದು ಹೇಳುತ್ತಾರೆ. ಮೂವಿಂಗ್ ಬ್ರಿಜ್ ಸಿ.ಎಮ್.ಎಮ್. ನಲ್ಲಿ ಗ್ರಾನೈಟ್ ನ ಸರ್ಫೇಸ್ ಪ್ಲೇಟ್ ಸ್ಥಿರವಾಗಿ ನಿಲ್ಲುತ್ತದೆ. ಎರಡು ಕಾಲಮ್ ಮತ್ತು ಒಂದೇ ಬ್ರಿಜ್ ನಿಂದ ತಯಾರಿಸಿರುವ ಬ್ರಿಜ್ ಸರ್ಫೇಸ್ ಪ್ಲೇಟ್ ಒಂದು ಭಾಗದಿಂದ ಇನ್ನೊಂದು ಭಾಗದ ಕಡೆಗೆ ಸರಿಯುತ್ತದೆ.
 
ಸರ್ಫೇಸ್ ಪ್ಲೇಟ್ ಗೋಸ್ಕರ ಉಚ್ಚಮಟ್ಟದ ಗ್ರೇನೈಟ್ ಬಳಸಲಾಗುತ್ತದೆ. ಆದ್ದರಿಂದ ಹವಾಮಾನದಲ್ಲಿ ಉಂಟಾಗುವ ಬದಲಾವಣೆಗಳು ಮತ್ತು ಪ್ಲೇಟ್ ನ ಬಾಳಿಕೆ ಇತ್ಯಾದಿಗಳಲ್ಲಿ ಯಾವುದೇ ರೀತಿಯ ಪರಿಣಾಮಗಳು ಉಂಟಾಗುವುದಿಲ್ಲ. ಬ್ರಿಜ್ ಸರಿಸಲು ವಿಶೇಷ ಕಚ್ಚಿನ (ಸ್ಲಾಟ್) ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಉದ್ದ, ಅಗಲ ಮತ್ತು ಎತ್ತರ ಇದರಲ್ಲಿ ನಿರ್ದೋಷವಾದ ಮಾಪನವನ್ನು ಮಾಡುವಲ್ಲಿ ಅದರ ಆವಶ್ಯಕತೆ ಇರುತ್ತದೆ. ಎರಡೂ ಬದಿಗಳ ಆಧಾರದಿಂದ ಬ್ರಿಜ್ ನ ಸಮತೋಲವನ್ನು ಕಾಪಾಡಲಾಗುತ್ತದೆ. ಸಂಪೂರ್ಣ ಬ್ರಿಜ್ ನ ಭಾರವು ಗ್ರಾನೈಟ್ ಪ್ಲೇಟ್ ನಲ್ಲಿ ಸಮತೋಲನವನ್ನು ಕಾಪಾಡಲಾಗುತ್ತದೆ.
 
ಬ್ರಿಜ್ ನಲ್ಲಿ ಯಂತ್ರಣೆಯಿಂದ X ಮತ್ತು Y ಕೊ-ಆರ್ಡಿನೇಟ್ ನ ಮಾಪನವನ್ನು ಮಾಡಲಾಗುತ್ತದೆ. ಆದರೆ Z ಕೊ-ಆರ್ಡಿನೇಟ್ ಪ್ರೋಬ್ ಮೇಲೆ ಕೆಳಗೆ ಸರಿಸಿ ಮಾಪನವನ್ನು ಮಾಡಲಾಗುತ್ತದೆ. ಈ ಯಂತ್ರಣೆಯಲ್ಲಿ ಮುರೂ ಅಕ್ಷಗಳ ಮಾಪನವನ್ನು ತುಂಬಾ ವೇಗವಾಗಿ ಮತ್ತು ನಿಖರವಾಗಿ ಮಾಡಲಾಗುತ್ತದೆ. ISO 10360 ಸ್ಟ್ಯಾಂಡರ್ಡ್ ಗಳಿಗೆ ಅನುಸಾರವಾಗಿ ನಿಖರತೆಯನ್ನು ಪ್ರಮಾಣೀಕರಿಸಲಾಗಿದೆ.
 
ಗ್ಯಾಂಟ್ರಿ ಸಿ.ಎಮ್.ಎಮ್.
ಬೃಹದಾಕಾರದ ಯಂತ್ರಭಾಗಗಳ ಮಾಪನವನ್ನು ಮಾಡಲು ದೊಡ್ಡ ಆಧಾರ ಸ್ತಂಭಗಳಿರುವ ಗ್ಯಾಂಟ್ರಿ ಸಿ.ಎಮ್.ಎಮ್. ‘ಎಕ್ಯುರೇಟ್’ ಕಂಪನಿಯು ತಯಾರಿಸುತ್ತದೆ. ಈ ಮಶಿನ್ ನಲ್ಲಿ ಯಂತ್ರಭಾಗಗಳನ್ನು ಇಡುವಾಗ ಅದರ ಮಾಪನವನ್ನು ಎಲ್ಲ ಬದಿಗಳಲ್ಲಿಯೂ ಮಾಡಲಾಗುತ್ತದೆ. ಹಾಗೆಯೇ ಈ ಯಂತ್ರಭಾಗಗಳನ್ನು ಎತ್ತಲು ಮತ್ತು ಇಡಲು ಬೇರೆಯೇ ರೇಲ್ ವ್ಯವಸ್ಥೆಯನ್ನೂ ಅಳವಡಿಸಬಹುದಾಗಿದೆ. ಈ ರೀತಿಯ ವ್ಯವಸ್ಥೆಯಿಂದಾಗಿ ಮಾಪನದ ಪ್ರಕ್ರಿಯೆಯು ಸುಲಭವಾಗುತ್ತದೆ. ಈ ಯಂತ್ರಭಾಗಗಳ ಆಕಾರವು ತುಂಬಾ ದೊಡ್ಡದಾಗಿರುವುದರಿಂದ ಮಾಪನವನ್ನು ಮಾಡುವಾಗ ಪ್ರೋಬ್ ನ ಸಹಾಯದಿಂದ ತಿರುಗಿಸಬಲ್ಲ ಸಂಪೂರ್ಣ ಯಂತ್ರಣೆಯನ್ನು ವಿಶೇಷ ಲೋಹಗಳಿಂದ ತಯಾರಿಸಲಾಗಿರುತ್ತದೆ. ಗ್ಯಾಂಟ್ರಿ ಪ್ರೋಬ್ ನೊಂದಿಗೆ ತಿರುಗುತ್ತಿರುವಾಗ ದೂರದ ಮಾಪನವನ್ನು ಮಾಡಲು ಗ್ಯಾಂಟ್ರಿಯ ಮೇಲ್ಭಾಗದಲ್ಲಿ ಇಲೆಕ್ಟ್ರಾನಿಕ್ ಸ್ಕೇಲ್ ಗಳನ್ನು ಅಳವಡಿಸಲಾಗಿರುತ್ತದೆ. ಹವಾಮಾನದಲ್ಲಿರುವ ಸೂಕ್ಷ್ಮ ಧೂಳಿನಿಂದ ಅದರಲ್ಲಿ ಪಟ್ಟೆಗಳು ಉಂಟಾಗಿ ಹಾಳಾಗುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಅದರಲ್ಲಿ ವಿಶಿಷ್ಟ ರೀತಿಯ ರಬರ್ ನ ಆವರಣವನ್ನು ಹಾಕಲಾಗಿರುತ್ತದೆ.

ಹಾರಿಝಾಂಟಲ್ ಆರ್ಮ್ ಸಿ.ಎಮ್.ಎಮ್.
ಮಧ್ಯಮ ಆಕಾರದ ಮತ್ತು ಕಡಿಮೆ ಭಾರವಿರುವ ಯಂತ್ರಭಾಗಗಳ ಮಾಪನವನ್ನು ಮಾಡಲು ಒಂದೇ ಆಧಾರ ಸ್ತಂಭವಿರುವ ಮತ್ತು ಅಡ್ಡಕ್ಕಿರುವ ಬೀಮ್ ನ ಆಧಾರದಿಂದ ಪ್ರೋಬ್ ತಿರುಗುವಂತಹ ಸಿ.ಎಮ್.ಎಮ್. ಕೆಲಸ ನಿರ್ವಹಿಸಲ್ಪಡುವ ಜಾಗದಲ್ಲಿ ಇಡಬಹುದಾಗಿದೆ. ಅನೇಕ ಸುಧಾರಣೆಗಳನ್ನು ಕಾರ್ಯಗತಗೊಳಿಸಿದ್ದರಿಂದ ಶಾಪ್ ಫ್ಲೋರ್ ನಲ್ಲಿರುವ ಹವಾಮಾನದಲ್ಲಿಯೂ ಈ ಮಶಿನ್ ಯೋಗ್ಯ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಕಾರಣದಿಂದಾಗಿ ಮಾನವ ಸಂಪನ್ಮೂಲಗಳಲ್ಲಿ ಉಳಿತಾಯವಾಗುತ್ತದೆ. ಹಾಗೆಯೇ ಸುಲಭ ಮತ್ತು ಪರಿಪೂರ್ಣವಾದ ಸಾಫ್ಟ್ ವೇರ್ ಇರುವುದರಿಂದ ಅನೇಕ ವಿಧದ ಯಂತ್ರಭಾಗಗಳ ತಪಾಸಣೆಯನ್ನು ಸಹಜವಾಗಿ ಮಾಡುವುದು ಸಾಧ್ಯ. ಇದರಲ್ಲಿ ಯಾಂತ್ರಿಕ ಮತ್ತು ಮಾನವನಿಂದ ಮಾಡಲಾಗುವಂತಹ ಎರಡೂ ರೀತಿಗಳಲ್ಲಿಯೂ ಇಂಡೆಕ್ಸಿಂಗ್ ಮತ್ತು ಪ್ರೋಬಿಂಗ್ ಮಾಡಬಹುದಾಗಿದೆ. ಈ ಮಶಿನ್ ನ ನಿರ್ವಹಣೆಯ ಖರ್ಚು ಕೂಡಾ ಕಡಿಮೆಯಾಗುತ್ತದೆ.
 
6_1  H x W: 0 x
 
ಪೋರ್ಟೆಬಲ್ ಸಿ.ಎಮ್.ಎಮ್.
ಸಿ.ಎಮ್.ಎಮ್. ಮಶಿನ್ ಗೆ ಒಂದು ಮಿತಿ ಇರುತ್ತದೆ. ಹೆಚ್ಚಿನ ಮಶಿನ್ ಗಳನ್ನು ಒಂದೇ ಜಾಗದಲ್ಲಿ ಸೂಕ್ತವಾದ ಫೌಂಡೇಶನ್ ಮತ್ತು ಹವಾನಿಯಂತ್ರಣೆ ಇತ್ಯಾದಿ ಸೌಲಭ್ಯಗಳನ್ನು ನೀಡಿಯೇ ಅಳವಡಿಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಮಶಿನ್ ಮತ್ತೆ ಸ್ಥಳಾಂತರಿಸಲಾಗುವುದಿಲ್ಲ. ಇದರಿಂದಾಗಿ ಕಾರ್ಖಾನೆಯ ವಿಸ್ತಾರ ಮಾಡುವುದು, ಯಾವುದೇ ನಿರ್ಮಿತಿಯ ಯಂತ್ರಣೆಯನ್ನು ಇನ್ನೊಂದೆಡೆಗೆ ಸ್ಥಳಾಂತರಿಸುವುದು ಇಂತಹ ಕೆಲಸಗಳಿಗಿಂತ ಸಿ.ಎಮ್.ಎಮ್. ಸ್ಥಳಾಂತರಿಸುವುದು ತುಂಬಾ ಕಠಿಣವಾದ ಕೆಲಸವಾಗಿರುತ್ತದೆ. ಇದರೊಂದಿಗೆ ಸಿ.ಎಮ್.ಎಮ್.ನೆಡೆಗೆ ಎಲ್ಲ ಯಂತ್ರಭಾಗಗಳನ್ನು ತಪಾಸಣೆ ಮಾಡಲು ಕಳುಹಿಸುವುದೂ ಅತ್ಯಂತ ಕಠಿಣವಾದ ಕೆಲಸವೇ ಸರಿ. ಈ ಪರಿಸ್ಥಿತಿಯಲ್ಲಿ ಹೆಟ್ಟು ಪ್ರಮಾಣದ ಟಾಲರನ್ಸ್ ಇರುವ ಯಂತ್ರಭಾಗಗಳಿಗೋಸ್ಕರ ಪೋರ್ಟೆಬಲ್ ಸಿ.ಎಮ್.ಎಮ್. ಶಾಪ್ ಫ್ಲೋರ್ ನಲ್ಲಿ ಬಳಸಲಾಗುತ್ತದೆ. ಬೃಹತ್ ಯಂತ್ರಭಾಗಗಳ ನಿರ್ಮಿತಿಯಲ್ಲಿಯೂ ಪೋರ್ಟೆಬಲ್ ಮಶಿನ್ ನ ಮೂಲಕ ತಪಾಸಣೆಯನ್ನು ಸುಲಭವಾಗಿ ಮಾಡಬಹುದು.
ಈ ಮಶಿನ್ ಬಳಸುವಾಗ ಆಪರೇಟರ್ ಹೆಚ್ಚು ಮುತುವರ್ಜಿ ವಹಿಸುವುದು ಆವಶ್ಯಕವಾಗಿದೆ. ಇದಕ್ಕೋಸ್ಕರ ಎಕ್ಯುರೇಟ್ ಕಂಪನಿಯಿಂದ ವಿಶೇಷ ತರಬೇತಿಯನ್ನೂ ನೀಡಲಾಗುತ್ತದೆ.

7_1  H x W: 0 x 
 
ಎಕ್ಯುಫ್ಲೇಕ್ಸ್ ಪೋರ್ಟೆಬಲ್ ಸಿ.ಎಮ್.ಎಮ್.
ಈ ಮಶಿನ್ ನ ಪ್ರೋಬ್ ಆರ್ಮ್ ನ ಸ್ಥಿತ್ಯಂತರಗಳು ಯೋಗ್ಯವಾದ ರೀತಿಯಲ್ಲಿ ಆಗಲು ಅದರಲ್ಲಿ ಡಬಲ್ ಸ್ಪ್ರಿಂಗ್ ವೆಟ್ ಬ್ಯಾಲೆನ್ಸ್ ನೀಡಲಾಗಿದೆ. ಕಾಂತೀಯ (ಮ್ಯಾಗ್ನೆಟಿಕ್) ಬ್ರೇಕ್ ನಿಂದ ಆರ್ಮ್ ನ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತದೆ. ಇದಕ್ಕೋಸ್ಕರ ಅನೇಕ ಉಪಕರಣಗಳು ಇದರಲ್ಲಿ ಲಭ್ಯವಿವೆ. ಪ್ರೋಬ್ ನ ಉದ್ದಕ್ಕೆ ಅನುಸಾರವಾಗಿ ಸಿ.ಎಮ್.ಎಮ್.ನ ನಿಖರತೆಯೂ ಬದಲಾಯಿಸುತ್ತದೆ.
(ಶಬ್ದ ನಿರೂಪಣೆ : ಅಚ್ಯುತ ಮೇಢೇಕರ್)
 
 
Powered By Sangraha 9.0