ಯೂಕ್ಯಾಮ್ ಕಂಪನಿಯವರು ತಮ್ಮ ಉದ್ಯಮವನ್ನು 1986 ರಲ್ಲಿ ಒಂದು ಚಿಕ್ಕ ಜಾಬ್ ಶಾಪ್ ನಿಂದ ಪ್ರಾರಂಭಿಸಿದರು. 1994 ರಲ್ಲಿ ಅವರು ರೋಟರಿ ಟೇಬಲ್ ನ ತಯಾರಿಕೆಯನ್ನು ಮಾಡುತ್ತಾ ಹೊಸದಾದ ಕ್ಷೇತ್ರದಲ್ಲಿ ಕಾಲೂರಿದರು. ರೋಟರಿ ಇಂಡೆಕ್ಸಿಂಗ್ ಟೇಬಲ್ ನ ನಿರ್ಮಾಣದಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನವನ್ನು ಪಡೆಯುವಲ್ಲಿ ಪ್ರಾರಂಭಿಸಿರುವ ಈ ಪ್ರವಾಸವು ಈಗ ದೇಶದಾದ್ಯಂತ ಪ್ರಖ್ಯಾತವಾಗಿದೆ. ಅಲ್ಲದೇ ದೇಶದ ಮಾರುಕಟ್ಟೆಯಲ್ಲಿ ರೋಟರಿ ಟೇಬಲ್ ಗಳಿಗೆ ಏಕಮೇವಾದ್ವಿತೀಯ ಎಂಬುದಾಗಿ ಯಶಸ್ಸನ್ನು ಪಡೆದಿದ್ದಾರೆ. ಅವರ ತಂತ್ರಜ್ಞಾನ, ಹೊಸ ಉಪಾಯಗಳು ಮತ್ತು ಮಶಿನ್ ಟೂಲ್ ಗಳಲ್ಲಿ ಮಾಡಲಾಗಿರುವ ಅಭಿವೃದ್ಧಿಗಳಿಂದಾಗಿ ಮೂರು ಹೊಸ ವ್ಯವಹಾರದ ವರ್ಟಿಕಲ್ಸ್ ಗಳು ಮೂಡಿಬಂದಿವೆ. ಅವೆರಡರಲ್ಲಿ ವರ್ಟಿಕಲ್ ಅಂದರೆ ನಿಂಬಲ್ ಮಶಿನ್ಸ್ ಒಂದಾಗಿದೆ. ರೋಟರಿ ಟೇಬಲ್ ನಿರ್ಮಾಣದಲ್ಲಿ ಹೆಚ್ಚು ಸೂಕ್ಷ್ಮವಾದ ಗುಣಮಟ್ಟದ ನಿಯತಾಂಕಗಳು ಇರುವ ಅನೇಕ ಗಿಯರ್ ಗಳನ್ನು ಬಳಸಲಾಗುತ್ತದೆ. ತಮಗೆ ಬೇಕಾಗಿರುವ ಗುಣಮಟ್ಟದ ಮತ್ತು ರೇಂಜ್ ನಲ್ಲಿರುವ ಗಿಯರ್ ಗಳನ್ನು ತಯಾರಿಸಲು ಯೋಗ್ಯ ರೀತಿಯ ಗಿಯರ್ ಹಾಬಿಂಗ್ ಮಶಿನ್ ನೀಡಲು ಕೆಲವೇ ಉತ್ಪಾದಕರು ಸಿದ್ಧರಿದ್ದರು. ಅದರಲ್ಲಿಯೂ ಈ ಮಶಿನ್ ಗ್ರಾಹಕರ ಬೇಡಿಕೆ ತಕ್ಕಂತೆ (ಕಸ್ಟಮೈಜ್ಡ್) ತಯಾರಿಸಿರುವುದರಿಂದ ದುಬಾರಿಯಾಗಿದ್ದವು. ಈ ಅಂಶದ ಕುರಿತು ಚರ್ಚೆ ಮಾಡಲು ಕೆಲಸ ನಿರ್ವಹಿಸುವ ಅನೇಕ ತಂಡಗಳು ಒಟ್ಟುಗೂಡಿ ಕೆಲಸ ಪ್ರಾರಂಭಿಸಿದರು ಮತ್ತು ಬ್ಯಾಕ್ ವರ್ಡ್ ಇಂಟಿಗ್ರೇಶನ್ ನ ಕೆಲಸದ ಭಾಗವೆಂದು ತಿಳಿದು, 2004 ರಲ್ಲಿ ಸ್ವಂತದ್ದೇ ಆದ ಮೊತ್ತ ಮೊದಲ ಸಿ.ಎನ್.ಸಿ. ಗಿಯರ್ ಹಾಬಿಂಗ್ ಮಶಿನ್ ಅಭಿವೃದ್ಧಿ ಪಡಿಸಲಾಯಿತು. ಈ ಮಶಿನ್ ನ ಕೆಲಸದ ನಿರ್ವಹಣೆಯ ಪರಿಣಾಮವು ಅನೇಕ ಗ್ರಾಹಕರಲ್ಲಿ ಕಂಡು ಬಂತು. ಈ ರೀತಿಯ ಗ್ರಾಹಕರೊಬ್ಬರು ನಿಂಬಲ್ ಮಶಿನ್ ವರ್ಟಿಕಲ್ ನ ಮಾರಾಟ ಪ್ರಾರಂಭಿಸುವ ಮೊದಲೇ ಆರ್ಡರ್ ನೀಡಿದರು. ಪೂರೈಸಿರುವ ಮಶಿನ್ ನ ಕೆಲಸದ ನಿರ್ವಹಣೆಯಿಂದಾಗಿ ತೃಪ್ತಿಗೊಂಡ ಗ್ರಾಹಕರು ಮತ್ತೆ ಮತ್ತೆ ಆರ್ಡರ್ ನೀಡಲು ಪ್ರಾರಂಭಿಸಿದರು. ಇದರಿಂದಾಗಿ ನಮ್ಮ ಕೆಲಸ ನಿರ್ವಹಿಸುವ ತಂಡದ ಆತ್ಮವಿಶ್ವಾಸವು ಹೆಚ್ಚಾಯಿತು ಮತ್ತು ಅದರಿಂದಾಗಿ 2015 ರಲ್ಲಿ ನಿಂಬಲ್ ಮಶಿನ್ಸ್ ಈ ಕಂಪನಿಯು ಮಶಿನ್ ಗಳ ನಿರ್ಮಿತಿಯಲ್ಲಿ ನೂತನ ಮತ್ತು ವಿಶೇಷವಾದ ವರ್ಟಿಕಲ್ ಪ್ರಾರಂಭಿಸಿದರು. ಹಾಬಿಂಗ್ ಇದು ಮೂಲತಃ ಹಾಬ್ ಎಂಬ ಹೆಸರಿನ ಒಂದು ವಿಶೇಷವಾದ ಕಟಿಂಗ್ ಟೂಲ್ ಬಳಸಿ ಲೋಹಗಳ ತುಂಡುಗಳಲ್ಲಿ ಗಿಯರ್ ಪ್ರೊಫೈಲ್ ಕತ್ತರಿಸುವ ಒಂದು ವಿಶೇಷವಾದ ಮಿಲ್ಲಿಂಗ್ ಪ್ರಕ್ರಿಯೆಯಾಗಿದೆ. ಸ್ಪರ್, ಸ್ಪ್ಲೈನ್, ಸ್ಪ್ರಾಕೇಟ್, ವರ್ಮ್ ವೀಲ್ ಇಂತಹ ಗಿಯರ್ ತಯಾರಿಸಲು ಇದೊಂದು ಉಚ್ಚಗುಣಮಟ್ಟದ ಸಾಮರ್ಥ್ಯವುಳ್ಳ ಪ್ರಕ್ರಿಯೆಯಾಗಿದೆ. ಹಾಬಿಂಗ್ ಯಂತ್ರಣೆಯ ಪ್ರಕ್ರಿಯೆಯಲ್ಲಿ ಕಾರ್ಯವಸ್ತು ಮತ್ತು ಹಾಬ್ ಇದು ಒಂದರೊಂದಿಗೆ ವಿಶಿಷ್ಟ ಗುಣಾಕಾರದ ವಿಶಿಷ್ಟ ರೀತಿಯಲ್ಲಿ ತಿರುಗಿಸಲಾಗುತ್ತದೆ. ಇದರಿಂದಾಗಿ ಕಾರ್ಯವಸ್ತು ಮತ್ತು ಟೂಲ್ ಗಳಲ್ಲಿ ನಿರ್ದೋಷವಾದ ಸಿಂಕ್ರೋನೈಸೇಶನ್ ತುಂಬಾ ಮಹತ್ವದ್ದಾಗಿರುತ್ತದೆ. ಹಾಬಿಂಗ್ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಟೀರಿಯಲ್ ತೆಗೆಯಲ್ಪಡುವುದರಿಂದ ಮಶಿನ್ ನ ಸ್ಥಿರತೆ ಮತ್ತು ದೃಢತೆ ತಯಾರಾಗುವ ಯಂತ್ರಭಾಗಗಳ ಗುಣಮಟ್ಟದಲ್ಲಿ ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಮಶಿನ್ ನ ಅಭಿವೃದ್ಧಿಯಲ್ಲಿರುವ ಸವಾಲುಗಳು ಗುಣಮಟ್ಟ ಮತ್ತು ಉತ್ಪಾದನೆಯ ಸಾಮರ್ಥ್ಯದ ಕುರಿತು ಉಚ್ಚ ಕಾರ್ಯಸಾಮರ್ಥ್ಯವಿರುವ ಮಶಿನ್ ನ ಆವಶ್ಯಕತೆ ಇರುವಾಗ, ಭಾರತೀಯ ಗ್ರಾಹಕರಲ್ಲಿ ವಿದೇಶದ ಪೂರೈಕೆಗಾರರನ್ನು ಹುಡುಕುವ ಹೊರತಾಗಿ ಯಾವುದೇ ಇನ್ನಿತರ ಉಪಾಯ ಇರುವುದಿಲ್ಲ. ಆದರೆ ಆ ಮಶಿನ್ ಗಳು ತುಂಬಾ ದುಬಾರಿಯಾಗಿರುತ್ತವೆ. ಇದನ್ನು ಅರಿತು ಯೂಕ್ಯಾಮ್ ಇವರು ಮಾರುಕಟ್ಟೆಯ ಬೇಡಿಕೆಗಳನ್ನು ಈಡೇರಿಸುವ ಆಮದು ಮಾಡುವ ಪರ್ಯಾಯವುಳ್ಳ ಮಶಿನ್ ತಯಾರಿಸುವಂತಹ ಕಾರ್ಯನೀತಿಯುಳ್ಳ ನಿರ್ಧಾರವನ್ನು ಕೈಗೊಂಡರು. ಇದನ್ನು ಸಾಧಿಸುವಾಗ ತಂತ್ರಜ್ಞಾನ, ಚಟುವಟಿಕೆ ಮತ್ತು ಸ್ಪರ್ಧೆ ಇಂತಹ ಅನೇಕ ಘಟಕಗಳ ಕುರಿತಾದ ಸವಾಲುಗಳಿದ್ದವು.
ಆಂತರರಾಷ್ಟ್ರೀಯ ಬ್ರ್ಯಾಂಡ್ ಗಳೊಂದಿಗೆ ಸ್ಪರ್ಧಿಸಲು ಹೊಸದಾಗಿರುವ ಡೈರೆಕ್ಟ್ ಡ್ರೈವ್ ತಂತ್ರಜ್ಞಾನ ಮತ್ತು ಇಲೆಕ್ಟ್ರಾನಿಕ್ ಗಿಯರ್ ಬಾಕ್ಸ್ (EGB) ಬಳಸಿ ಮಶಿನ್ ತಯಾರಿಸುವುದನ್ನು ನಿರ್ಧರಿಸಲಾಯಿತು. ಡೈರೆಕ್ಟ್ ಡ್ರೈವ್ ತಂತ್ರಜ್ಞಾನದಿಂದಾಗಿ ಮಶಿನ್ ತುಂಬಾ ವೇಗವಾದ ಯಂತ್ರಣೆಯಲ್ಲಿ ನಡೆಸಬಹುದಾಗಿದೆ. ಅಲ್ಲದೇ ಕಡಿಮೆ ಕಾಲಾವಧಿಯಲ್ಲಿ ಉಚ್ಚಗುಣಮಟ್ಟದ ಉತ್ಪಾದನೆಯ ಸಾಮರ್ಥ್ಯದಿಂದ ಗಿಯರ್ ಗಳನ್ನು ತಯಾರಿಸುವುದು ಸಾಧ್ಯ. ಹೊಸದಾದ DDR ಮೋಟರ್ ಗಳಲ್ಲಿ ಉಚ್ಚಮಟ್ಟದ ಟಾರ್ಕ್ ಉಪಲಬ್ಧವಿರುವುದರಿಂದ ವರ್ಕ್ ಹೆಡ್ ಮತ್ತು ಸ್ಪಿಂಡಲ್ ನಲ್ಲಿರುವ ರಿಯರ್ ರಿಡಕ್ಷನ್ ಮಾಡುವ ಆವಶ್ಯಕತೆ ಇಲ್ಲದಂತಾಗುತ್ತದೆ. ಇದರಿಂದಾಗಿ ಅದು ಹೆಚ್ಚು ನಿಖರವಾಗುತ್ತದೆ ಮತ್ತು ನಿರ್ವಹಣೆಗೂ ಸುಲಭವಾಗುತ್ತದೆ.
ಸಾಂಪ್ರದಾಯಿಕ ಗಿಯರ್ ಹಾಬಿಂಗ್ ಮಶಿನ್ ಗಳಲ್ಲಿ ಸ್ಪಿಂಡಲ್ ಮತ್ತು ವರ್ಕ್ ಟೇಬಲ್ ಇವೆರಡರಲ್ಲಿ ಸಿಂಕ್ರೋನೈಸೇಶನ್ ಗಿಯರ್ ಟ್ರೇನ್ ನಿಂದಲೇ ಮಾಡಲಾಗುತ್ತದೆ. ಆದರೆ ಅದರಲ್ಲಿ ಸಮಸ್ಯೆಗಳು ಇರುತ್ತವೆ. ಅದರಲ್ಲಿ ಅನೇಕ ರೀತಿಯ ಲಿಂಕೇಜೆಸ್ ಗಳು ಇರುವುದರಿಂದ ನಿರ್ದೋಷತ್ವವೂ ಕಡಿಮೆಯಾಗುತ್ತದೆ. ಅಲ್ಲದೇ ಗಿಯರ್ ಗುಣಾಕಾರವನ್ನು ಅಳವಡಿಸಲು ನಿಪುಣ ಆಪರೇಟರ್ ರ ಆವಶ್ಯಕತೆ ಇರುತ್ತದೆ. ಇಂದಿನ ಸಿ.ಎನ್.ಸಿ. ಕಂಟ್ರೋಲರ್ ನಲ್ಲಿ ಈ ಗಿಯರ್ ಟ್ರೇನ್ ನ ಸ್ಥಾನವನ್ನು EGB ಆಕ್ರಮಿಸಿದೆ. ಇದರಿಂದಾಗಿ ಸ್ಪಿಂಡಲ್ ಮತ್ತು ವರ್ಕ್ ಹೆಡ್ ಇವುಗಳಲ್ಲಿ ಸಿಂಕ್ರೋನೈಸೇಶನ್ ನ ಗುಣಮಟ್ಟವು ಸುಧಾರಿಸುತ್ತದೆ ಮತ್ತು ಉಚ್ಚಗುಣಮಟ್ಟದ ಗಿಯರ್ ತಯಾರಿಸುವುದೂ ಸಾಧ್ಯ. ಸಿ.ಎನ್.ಸಿ. ಕಂಟ್ರೋಲರ್ ನಲ್ಲಿ ಅಳವಡಿಸಲಾಗಿರುವ ಗಿಯರ್ ಡಾಟಾ ಬಳಸಿ EGB ಸ್ವಯಂಚಾಲಿತವಾಗಿ ಸ್ಪಿಂಡಲ್ ಮತ್ತು ವರ್ಕ್ ಹೆಡ್ ನಲ್ಲಿ ಗಿಯರ್ ನ ಗುಣಾಕಾರವನ್ನು ಸೆಟ್ ಮಾಡುತ್ತದೆ. ಇದರಿಂದಾಗಿ ಅದು ಬಳಕೆಗಾರರಿಗೆ ಸುಲಭವಾಗುತ್ತದೆ. (ಯೂಸರ್ ಫ್ರೆಂಡ್ಲಿ) EGB ಯ ಕೆಲಸವನ್ನು ಹೆಚ್ಚು ಸುಲಭವಾಗಿ ತಿಳಿದುಕೊಳ್ಳಲು ಚಿತ್ರ ಕ್ರ. 1 ರಲ್ಲಿರುವ ಬ್ಲಾಕ್ ಡೈಗ್ರಾಮ್ ನೋಡಿರಿ.
EGB ಇದೊಂದು ವಸ್ತುತಃ (ವರ್ಚುವಲ್) ಗಿಯರ್ ಬಾಕ್ಸ್. ಇದರಲ್ಲಿ ಹಾಬ್ ಸ್ಪಿಂಡಲ್ ಮತ್ತು ವರ್ಕ್ ಟೇಬಲ್ ಗಳ ನಡುವೆ ಗಿಯರ್ ನ ಗುಣಾಕಾರಗಳನ್ನು ಸೆಟ್ ಮಾಡಲಾಗುತ್ತದೆ. ಈ ಕಾಂನ್ಫಿಗರೇಶನ್ ನಲ್ಲಿ ಮಾಸ್ಟರ್ ಎಂಬ ಪಾತ್ರವನ್ನು ವಹಿಸಿರುವ ಸ್ಪಿಂಡಲ್ ಕೆಲಸ ನಿರ್ವಹಿಸುತ್ತದೆ, ಮತ್ತು ವರ್ಕ್ ಟೇಬಲ್ EGB ಕಂಟ್ರೋಲರ್ ನಲ್ಲಿ ಸೆಟ್ ಮಾಡಿರುವ ಗಿಯರ್ ಗುಣಾಕಾರಕ್ಕೆ ಅನುಸಾರವಾಗಿ ಸ್ಲೇವ್ ಎಂಬುದಾಗಿ ಕೆಲಸವನ್ನು ನಿರ್ವಹಿಸುತ್ತದೆ.
⦁ ಸ್ಪರ್ಧೆಯಿಂದ ಕೂಡಿರುವ ಇಂದಿನ ಮಾರುಕಟ್ಟೆಯಲ್ಲಿ ಪ್ರತಿಯೊಂದು ಕಾರ್ಯವಸ್ತುವಿನ ಬೆಲೆಯು ತುಂಬಾ ಮಹತ್ವದ್ದಾಗಿದೆ. ಅದಕ್ಕೆ ಮಶಿನ್ ನ ಉತ್ಪಾದಕತೆಯೂ ಅಷ್ಚೇ ಮಹತ್ವದ್ದಾಗಿದೆ. ಈ ಬೇಡಿಕೆಯನ್ನು ಪೂರ್ತಿಗೊಳಿಸಲು ನಿಂಬಲ್ ಮಶಿನ್ಸ್ ಇವರು NOAH ಶ್ರೇಣಿಯಲ್ಲಿ ಗಿಯರ್ ಹಾಬಿಂಗ್ ಮಶಿನ್ ಉಚ್ಚಮಟ್ಟದ ಯಂತ್ರಣೆಯ ವೇಗದಲ್ಲಿ ನಡೆಸಲು ತಯಾರಿಸಲಾಗಿವೆ. ಮಶಿನ್ ಗಳ ಉತ್ಪಾದನೆಯಲ್ಲಿ ಕಾರ್ಯವಸ್ತುಗಳ ಲೋಡಿಂಗ್ ಅಥವಾ ಅನ್ ಲೋಡಿಂಗ್ ಮಾಡುವುದು ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದಕ್ಕೋಸ್ಕರ ಕಾರ್ಯವಸ್ತು ಬೇಗಬೇಗ ಬದಲಾಯಿಸುವಂತಹ ಉಚ್ಚಮಟ್ಟದ ವೇಗವಿರುವ ರಿಂಗ್ ಲೋಡರ್, ಹಾಗೆಯೇ ಕಾರ್ಯವಸ್ತು ಮಾಗೆಸಿನ್ ಮತ್ತು ರೊಬೋ ಆರ್ಮ್ ನಂತಹ ಪರ್ಯಾಯಗಳು ಈ ಮಶಿನ್ ನಲ್ಲಿ ಉಪಲಬ್ಧವಿವೆ.
ಇದರಿಂದಾಗಿ ಯಂತ್ರಭಾಗಗಳ ನಿರ್ಮಿತಿಯಲ್ಲಿ ಮಾನವವ ಹಸ್ತಕ್ಷೇಪವು ಕಡಿಮೆಯಾಗುತ್ತದೆ.
ಜಾಗತಿಕ ಬ್ರಾಂಡ್ ಗಳೊಂದಿಗೆ ಸ್ಪರ್ಧಿಸಲು ವಿಶ್ವಾಸಾರ್ಹತೆ ಮತ್ತು ಕಾರ್ಯಸಾಮರ್ಥ್ಯವು ತುಂಬಾ ಮಹತ್ವದ್ದಾಗಿದೆ. ಇದು ಕೇವಲ ತುಂಬಾ ಹೊಸದಾದ ಮತ್ತು ಪರಿಪಕ್ವತೆಯುಳ್ಳ ಡಿಸೈನ್ ಮೂಲಕ ಪಡೆಯುವುದು ಸಾಧ್ಯ, ಎಂಬ ವಿಶ್ವಾಸವು ಯೂಕ್ಯಾಮ್ ಗೆ ಇದೆ. ಇದೆಲ್ಲವೂ ಸಹಜವಾಗಿ ಸಾಧ್ಯವಾಗಬೇಕು ಎಂಬುದಕ್ಕಾಗಿ ಯೂಕ್ಯಾಮ್ ಇವರು ಅತ್ಯಾಧುನಿಕವಾದ ಡಿಸೈನ್ ಮತ್ತು ವಿಶ್ಲೇಷಿಸುವ ಸಾಫ್ಟ್ ವೇರ್ ಮತ್ತು ಉಚ್ಚ ಶಿಕ್ಷಣ ಪಡೆದ ಡಿಸೈನರ್ ರ ಕೆಲಸ ನಿರ್ವಹಿಸುವ ತಂಡಕ್ಕೋಸ್ಕರ ಹೆಚ್ಚು ಪ್ರಮಾಣದಲ್ಲಿ ಬಂಡವಾಳವನ್ನು ಹೂಡಿದ್ದಾರೆ. ಉತ್ಪಾದನೆಗೆ ಪ್ರಾರಂಭಿಸುವ ಮೊದಲು ಸಾಫ್ಟ್ ವೇರ್ ಮೂಲಕ ಸ್ಟೆಟಿಕ್, ಮೋಡಲ್, ಥರ್ಮಲ್ ಹಾಗೆಯೇ ಕಂಪನಗಳ ಕುರಿತಾದ ವಿಶ್ಲೇಷಣೆ ಇಂತಹ ವಿವಿಧ ರೀತಿಯ ಅಭ್ಯಾಸವನ್ನು ಮಾಡಿ ಡಿಸೈನ್ ಆಪ್ಟಿಮಮ್ ಮಾಡಲಾಗುತ್ತದೆ. ಉತ್ಪಾದನೆಯ ಉಚ್ಚ ಗುಣಮಟ್ಟವನ್ನು ನಿರ್ಧರಿಸಲು ಕಚ್ಚಾ ವಸ್ತುಗಳ ಆಯ್ಕೆ ಮತ್ತು ಇನ್ ಪುಟ್ ಘಟಕಗಳ ಗುಣಮಟ್ಟಗಳಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಕೊನೆಯಲ್ಲಿ ಉತ್ಪಾದಿತ ವಸ್ತುಗಳ ಗುಣಮಟ್ಟವನ್ನು ಸುಧಾರಿಸಲು, ಕಂಪನಗಳನ್ನು ನಿಯಂತ್ರಿಸುವಿಕೆ ಮತ್ತು ಡಾಂಪನಿಂಗ್ ಮಾಡುವುದು ತುಂಬಾ ಮಹತ್ವದ್ದಾಗಿದೆ. ಮಶಿನ್ ಬೆಡ್ ಮತ್ತು ಕಾಲಮ್ ನಲ್ಲಿ ವಿಶೇಷ ಕಂಪೋಸಿಟ್ ಮಟೀರಿಯಲ್ ಬಳಸಿ, ಅದನ್ನು ಪಡೆಯಲಾಗುತ್ತದೆ.
ಭಾರತೀಯ ಉತ್ಪಾದಕರು ಆಮದು ಮಾಡಿರುವ ಯಾವುದೇ ಬ್ರಾಂಡ್ ಗಿಂತ ಯೂಕ್ಯಾಮ್ ನ ಮಶಿನ್ ಸ್ಪರ್ಧೆಗೆ ಯೋಗ್ಯವಾಗಿರಬೇಕು, ಎಂಬ ಆಪೇಕ್ಷೆಯಿತ್ತು. ಎಲ್ಲಕ್ಕಿಂತಲೂ ಮಹತ್ವದ ಅಂಶವೆಂದರೆ, ಇನ್ ಪುಟ್ ಖರೀದಿಸುವಾಗ ಹೆಸರುವಾಸಿಯಾದ ಬ್ರಾಂಡ್ ಆಮದು ಮಾಡಲಾಗುತ್ತಿರುವುದರಿಂದ ಅವರ ಎದುರು ಕಾಲೂರಿ ನಿಲ್ಲುವುದು ಯೂಕ್ಯಾಮ್ ನಂತಹ ಕಂಪನಿಗಳಿಗೆ ತುಂಬಾ ಸವಾಲುಗಳನ್ನು ಒಡ್ಡುತ್ತಿತ್ತು. ಆದರೆ ಯೂಕ್ಯಾಮ್ ಈ ಕಂಪನಿಯು ಹೊಸ ಡಿಸೈನ್ ನ ರೀತಿ, ಉತ್ಪಾದನೆಗೋಸ್ಕರ ಸುಲಭವಾದ ಡಿಸೈನ್ ಮತ್ತು ಹೆಚ್ಚು ಕಾರ್ಯಕ್ಷಮತೆಯ ಯಂತ್ರಭಾಗಗಳ ನಿರ್ಮಿತಿಯ ಮೂಲಕ ಈ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದರು. ⦁ NOAH ಮಶಿನ್ ನ ಶ್ರೇಣಿಯಲ್ಲಿ NOAH 150, NOAH 250H/XL, NOAH 400 ಮತ್ತು NOAH 400 XL ಈ ಮಾಡೆಲ್ ಗಳು ಒಳಗೊಂಡಿವೆ. ಇದರಲ್ಲಿ 3, 6, 8 ಮತ್ತು 10 ಮಿ.ಮೀ.ತನಕದ ಮಾಡ್ಯುಲ್ ಗಳ ಮತ್ತು ಕ್ರಮವಾಗಿ 150, 250, 400 ಮತ್ತು 500 ಮಿ.ಮೀ. ವ್ಯಾಸದ ತನಕದ ಗಿಯರ್ ಗಳನ್ನು ತಯಾರಿಸುವುದು ಸಾಧ್ಯ. ಈ ಮಶಿನ್ ಬೇಕಾಗಿರುವ ಹಾಬ್ ಕಟರ್ ಬಳಸಿ DIN7/ DIN8 ಶ್ರೇಣಿಯ ನಿಖರತೆಯ ಗಿಯರ್ ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ.
ಮಶಿನ್ ನ ವೈಶಿಷ್ಟ್ಯಗಳು ಯೂಕ್ಯಾಮ್ ನ ಮಶಿನ್ ಗಿಯರ್ ಮತ್ತು ಶಾಫ್ಟ್ ಈ ಎರಡೂ ವಿಧದ ಯಂತ್ರಭಾಗಗಳಿಗೆ ಉಪಯುಕ್ತವಾಗಿವೆ ಮತ್ತು ಅವುಗಳಲ್ಲಿರುವ ವೈಶಿಷ್ಟ್ಯಗಳನ್ನು ಈ ಕೆಳಗೆ ನೀಡಲಾಗಿದೆ. ⦁ ಸೊನ್ನೆ ಬ್ಯಾಕ್ ಲ್ಯಾಶ್ ಇರುವ ಡೈರೆಕ್ಟ್ ಡ್ರೈವ್ ವರ್ಕ್ ಟೇಬಲ್ ನಿಂದಾಗಿ ಯಾವುದೇ ಫಾಲೋಅಪ್ ನಂತಹ ಕೊರತೆಗಳು ಇಲ್ಲದಿರುವ ಗಿಯರ್ ತಯಾರಿಸುವ ಸಾಮರ್ಥ್ಯ. ⦁ ಹಾಬ್ ನ ಸಾಮರ್ಥ್ಯವನ್ನು ಆಪ್ಟಿಮೈಸ್ಡ್ ಬಳಸಲು ಸರ್ವೋದಿಂದ ನಡೆಯಬಲ್ಲ ಹಾಬ್ ಶಿಫ್ಟ್ ವ್ಯವಸ್ಥೆ.
⦁ ಮಶಿನ್ ನ ಉಚ್ಚಮಟ್ಟದ ವೇಗದಿಂದ ಕಟಿಂಗ್ ಮಾಡುವ ಸಾಮರ್ಥ್ಯದಿಂದಾಗಿ ಉತ್ಪಾದಕತೆಯೂ ಹೆಚ್ಚು ಪಟ್ಟಿನಲ್ಲಿ ವೃದ್ಧಿಸುತ್ತದೆ.
HSK ಕ್ವಿಕ್ ಚೇಂಜ್ ಹಾಬ್ ಕ್ಲಾಂಪಿಂಗ್ ಪ್ರಣಾಳಿಕೆ ಮತ್ತು ಹೈಡ್ರಾಲಿಕ್ ಸಪೋರ್ಟ್ ಆರ್ಮ್ ಇವುಗಳಿಂದಾಗಿ ಹಾಬ್ ಆರ್ಬರ್ (ಚಿತ್ರ ಕ್ರ. 2) ಬದಲಾಯಿಸಲು ಕಡಿಮೆ ಸಮಯವು ಬೇಕಾಗುತ್ತದೆ. ⦁ ಒಂದಕ್ಕಿಂತ ಹೆಚ್ಚು ಗಿಯರ್ ಇರುವ ಶಾಫ್ಟ್ ನ ಯಂತ್ರಭಾಗಗಳನ್ನು ಒಂದೇ ಸೆಟಪ್ ನಲ್ಲಿ ಯಂತ್ರಣೆಗೋಸ್ಕರ, ಮಲ್ಟಿ ಗಿಯರ್ ಹಾಬಿಂಗ್ ಫೀಚರ್ ಯಂತ್ರಭಾಗಗಳು ಮತ್ತು ಹಾಬ್ ಬದಲಾಯಿಸುವ ಸಮಯವೂ ಕಡಿಮೆಯಾಗುತ್ತದೆ. ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯನ್ನು ಮಾಡುವಾಗ ಉಚ್ಚಮಟ್ಟದ ವೇಗವಿರುವ ರಿಂಗ್ ಲೋಡರ್ ಈ ಸ್ವಯಂಚಾಲಿತ ಪರ್ಯಾಯವು ಉತ್ಪಾದಕತೆಯನ್ನು ವೃದ್ಧಿಸುವಾಗ, ಲೋಡಿಂಗ್ ಅಥವಾ ಅನ್ ಲೋಡಿಂಗ್ ನ ಸಮಯವನ್ನು ಶೇಕಡಾ 70 ರಿಂದ 80 ರಷ್ಟು ಕಡಿಮೆ ಮಾಡುತ್ತದೆ.
⦁ ಮಶಿನ್ ನಲ್ಲಿ ನೀಡಿರುವ ಬಳಕೆಗಾರರಿಗೋಸ್ಕರ ಸುಲಭವಾಗಿರುವ (ಯೂಸರ್ ಫ್ರೆಂಡ್ಲಿ) ಮ್ಯಾಕ್ರೋಜ್ ನ ಸಹಾಯದಿಂದ ಯಂತ್ರಚಿತ್ರಗಳ (ಮಶಿನ್ ಡ್ರಾಯಿಂಗ್) ಮೌಲ್ಯಗಳನ್ನು ಬಳಸಿ ಗಿಯರ್ ಹಾಬಿಂಗ್ ಪ್ರೊಗ್ರಾಮ್ ವೇಗವಾಗಿ ತಯಾರಿಸಬಹುದಾಗಿದೆ. ಇದಕ್ಕೋಸ್ಕರ ನಿಪುಣ ಆಪರೇಟರ್ ರ ಆವಶ್ಯಕತೆಯೂ ಇರುವುದಿಲ್ಲ. ವಿವಿಧ ಮ್ಯಾಕ್ರೋ ಸೈಕಲ್ಸ್ ಗಳಿಂದಾಗಿ ಆಫ್ ಸೆಟ್ ನಲ್ಲಿ ದುರಸ್ತಿಗಳು, ಕ್ರೌನಿಂಗ್, ಟೇಪರ್ ಹಾಬಿಂಗ್ ಇತ್ಯಾದಿ ಕೆಲಸಗಳನ್ನು ಸುಲಭ ರೀತಿಯಲ್ಲಿ ನಿರ್ವಹಿಸುವುದು ಸಾಧ್ಯ. ಕ್ಲೈಂಬ್ ಮತ್ತು ಸಾಂಪ್ರದಾಯಿಕವಾದ ಕಟ್ ಇವುಗಳ ಬೇರೆಬೇರೆ ಒಂದಾಗುವಿಕೆಯನ್ನು (ಇಂಟಿಗ್ರೇಶನ್) ಬಳಸಿ ಒಂದಕ್ಕಿಂತ ಹೆಚ್ಚು ಮಶಿನಿಂಗ್ ರೊಟೇಶನ್ ಮಾಡುವುದೂ ಸಾಧ್ಯ.
⦁ ಕಾಲಮ್ ರಿಟ್ರಾಕ್ಷನ್ ಎಂಬ ಸುರಕ್ಷಿತತೆಯ ಫೀಚರ್ ಮೂಲಕ ವಿದ್ಯುತ್ ಪ್ರವಾಹವು ನಿಂತಲ್ಲಿ ಹಾಬ್ ಹೇಡ್ ಹಿಂದೆ ಸರಿಸುವುದು ಸಾಧ್ಯ ಮತ್ತು ಟೂಲ್ ಮತ್ತು ಕಾರ್ಯವಸ್ತು ಇವುಗಳಲ್ಲಿ ಸಂಭವಿಸಬಹುದಾದ ನಷ್ಟವನ್ನು ತಡೆಗಟ್ಟಬಹುದು.
ಕಾರ್ಯವಸ್ತುಗಳನ್ನು ಹಿಡಿಯಲು ಕಸ್ಟಮೈಜ್ಡ್ ಉಪಾಯ ಕಾರ್ಯವಸ್ತುಗಳನ್ನು ಹಿಡಿಯಲು ಅನೇಕ ವಿಧದ ಉಪಾಯಗಳನ್ನು ಸೂಚಿಸುತ್ತೇವೆ. ದೃಢವಾಗಿರುವ, ವಿಶ್ವಾಸಾರ್ಹವಾದ ಮತ್ತು ಆಯಾ ಕಾರ್ಯವಸ್ತುಗಳಿಗೆ ವಿಶೇಷವಾದ ಅಭಿವೃದ್ಧಿಯನ್ನು ಸೂಚಿಸಲಾಗುತ್ತದೆ. ವಿವಿಧ ಕಲ್ಪನೆಗಳ ಉಪಯೋಗವನ್ನೂ ಮಾಡಲಾಗುತ್ತದೆ. ಉದಾಹರಣೆ, ⦁ ಹೈಡ್ರಾಲಿಕ್ ಮ್ಯಾಂಡ್ರೆಲ್ ⦁ ಹ್ರೈಡ್ರಾಲಿಕ್ ಚಕ್ ⦁ ಸ್ಪೀಡ್ ಚೇಂಜ್ ಚಕ್ ⦁ ಸ್ಪ್ಲೈನ್ಡ್ ಮ್ಯಾಂಡ್ರೆಲ್ ⦁ ಮೆಕ್ಯಾನಿಕಲ್ ಮ್ಯಾಂಡ್ರೆಲ್ ⦁ ಎಕ್ಸೆಂಟ್ರಿಕ್ ಕಾಂಪೆನ್ಸೆಟಿಂಗ್ ಚಕ್ ಇತ್ಯಾದಿ.
ನಮ್ಮ ಮಶಿನ್ ಗಳಲ್ಲಿ ಮಾಡಲಾಗುವ ಗಿಯರ್ ಹಾಬಿಂಗ್ ಪ್ರಕ್ರಿಯೆಯನ್ನು ವೀಕ್ಷಿಸಲು ಪಕ್ಕದಲ್ಲಿ ನೀಡಿರುವ QR ಕೋಡನ್ನು ತಮ್ಮ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿರಿ.
ಗ್ರಾಹಕರ ಪ್ರತಿಕ್ರಿಯೆ
ಹೈವೆ ಇಂಡಸ್ಟ್ರೀಸ್ ಲಿ. ಈ ಕಂಪನಿಯ ನರೇಂದ್ರಸಿಂಗ್ ಠಾಕೂರ್ (ಎಜಿಎಮ್, ಉತ್ಪಾದನೆಯ ವಿಭಾಗ) ಈ ಮುಂದೆ ಹೇಳುತ್ತಾರೆ, ನಾವು ಕಳೆದ ಮೂರು ವರ್ಷಗಳಿಂದ ನಿಂಬಲ್ ಮಶಿನ್ಸ್ ಇವರ NOAH 250 ಮಶಿನ್ ಬಳಸುತ್ತಿದ್ದೇವೆ. ನಮ್ಮಲ್ಲಿ ಮೊದಲಿನಿಂದಲೂ ಇದ್ದ ವಿದೇಶದ ಮಶಿನ್ ಹೋಲಿಸಿದಲ್ಲಿ ಈ ಮಶಿನ್ ಆವಶ್ಯಕವಾದ ಗುಣಮಟ್ಟದ ಯಂತ್ರಭಾಗಗಳನ್ನು ಅಪೇಕ್ಷಿಸಿರುವ ಸಂಖ್ಯೆಯಲ್ಲಿ ತಯಾರಿಸುತ್ತಿದೆ. ಆಮದು ಮಾಡಿರುವ ಇನ್ನಿತರ ಮಶಿನ್ ಗಳ ಹೋಲಿಕೆಯಲ್ಲಿ ಬಂಡವಾಳದ ಹೂಡಿಕೆಯೂ ಕಡಿಮೆ ಇರುವುದರಿಂದ ಪ್ರತಿಯೊಂದು ಯಂತ್ರಭಾಗದ ಬೆಲೆಯೂ ನಮಗೆ ಪೂರೈಸುವಂತಹದ್ದಾಗಿದೆ. ಇದರಿಂದಾಗಿ ನಮಗೆ ಲಾಭವಾಯಿತು. ಈ ಮಶಿನ್ ನಲ್ಲಿ ಕೆಲಸ ನಿರ್ವಹಿಸುವಾಗ ನಮ್ಮ ಉತ್ಪಾದಕತೆಯೂ 20-30% ವೃದ್ಧಿಸಿತು.
ಇತ್ತೀಚೆಗೆ ನಮ್ಮ ಕಾರ್ಖಾನೆಯಲ್ಲಿ ನಾವು ನಿಂಬಲ್ ಮಶಿನ್ಸ್ ಮೇಕ್ ನ ಎರಡು NOAH 250 ಸಿ.ಎನ್.ಸಿ. ಗಿಯರ್ ಹಾಬರ್ ಬಳಸುತ್ತಿದ್ದೇವೆ. ಸೈಕಲ್ ಟೈಮ್ ಕಡಿಮೆ ಆಗಿದ್ದರಿಂದ ನಾವು ಪ್ರತಿದಿನ ಸುಮಾರು 3500 ಯಂತ್ರಭಾಗಗಳನ್ನು ತಯಾರಿಸುತ್ತಿದ್ದೇವೆ. ಉಚ್ಚಮಟ್ಟದ ವೇಗದಿಂದ ನಿರ್ದೋಷವಾದ ಉತ್ಪಾದನೆಯನ್ನು ಮಾಡಲು ಮಶಿನ್ ನಲ್ಲಿ ಸಾಮರ್ಥ್ಯವು ಇರುವುದರಿಂದ ಇವೆಲ್ಲವೂ ಸಾಧ್ಯವಾಯಿತು. ಮಶಿನ್ ನಲ್ಲಿರುವ ಹಾಬ್ ಶಿಫ್ಟಿಂಗ್ ಫೀಚರ್ ಬಳಸಿದ್ದರಿಂದ ಹಾಬ್ ನ ಬಾಳಿಕೆಯೂ ಹೆಚ್ಚಾಯಿತು. ಈ ಮಶಿನ್ ನ ನಿರ್ವಹಣೆಯ ಖರ್ಚು ಕೂಡಾ ತುಂಬಾ ಕಡಿಮೆಯಾಗಿದೆ. ಬ್ರೇಕ್ ಡೌನ್ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ನಮ್ಮಲ್ಲಿ ಗಿಯರ್ ನ ಹಲ್ಲುಗಳ ಪ್ರೊಫೈಲ್ ಉಚ್ಚಗುಣಮಟ್ಟದಲ್ಲಿ ತಯಾರಿಸಲಾಗುತ್ತದೆ. ಯಂತ್ರಭಾಗಗಳ ನಿರ್ಮಾಣವೂ ನಮ್ಮಲ್ಲಿ ನಿರ್ದೋಷವಾದ ನಿಯತಾಂಕಗಳಿಗೆ ಅನುಸಾರವಾಗಿ ಮಾಡಲಾಗುತ್ತದೆ. ನಮ್ಮ ಮಶಿನ್ ಗುಣಮಟ್ಟ, ಉತ್ಪಾದಕತೆ ಮತ್ತು ಆಧುನಿಕ ತಂತ್ರಜ್ಞಾನಕ್ಕೋಸ್ಕರ ಪ್ರಸಿದ್ಧವಾಗಿದೆ. ಹಾಬಿಂಗ್ ನ ಎಲ್ಲ ಪ್ರಶ್ನೆಗಳಿಗೆ ಒಂದೇ ಸ್ಥಳದಲ್ಲಿ ಉತ್ತರವು ಲಭಿಸಲು ಇದೊಂದು ಯೋಗ್ಯವಾದ ಸ್ಥಾನವಾಗಿದೆ.