ತಪ್ಪಿಲ್ಲದ ಗಿಯರ್ ಹಾಬಿಂಗ್ ಪ್ರೊಗ್ರಾಮ್ ಗೆ...

26 Sep 2020 15:00:00

ಗೇರ್ ನ ತಂತ್ರಜ್ಞಾನಕ್ಕೆ ಬೇಕಾಗುವ ಉಪಾಯಗಳನ್ನು ನೀಡುವಲ್ಲಿ ಲೀಭರ್ ಕಂಪನಿಯು ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದೆ. ನಾವು ಚಿಕ್ಕ ಮಶಿನ್ ನಿಂದ ದೊಡ್ಡ ಮಶಿನ್ ತನಕದ ಗಿಯರ್ ಮಶಿನ್ ಗಳನ್ನು ಅಳವಡಿಸಲು ಸುಲಭವಾಗುವಂತೆ ಮತ್ತು ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಮಶಿನ್ ಗಳನ್ನು ತಯಾರಿಸಿದ್ದೇವೆ. ಲಿಬಹರ್ ನ ಅರ್ಧ ಶತಕವೆಂದರೆ ಗಿಯರ್ ಹಾಬಿಂಗ್, ಶೇಪಿಂಗ್, ಸ್ಕೈವಿಂಗ್ ಮತ್ತು ಗಿಯರ್ ಗ್ರೈಂಡಿಂಗ್ ಈ ಮಶಿನರಿಗೆ ಇರುವ 50 ವರ್ಷಗಳ ವಿಶ್ವಾಸ. ಗಿಯರ್ ತಂತ್ರಜ್ಞಾನದ ಕ್ಷೇತ್ರದಲ್ಲಿ ನಾವು ಮಾಡಿರುವ ಪ್ರಮುಖವಾದ ಕೆಲಸಗಳಲ್ಲಿ 1967 ರಲ್ಲಿ ತಯಾರಿಸಿದ ಹೈಡ್ರೋಸ್ಟ್ಯಾಟಿಕ್ ಗೈಡ್ ಇರುವ ಮೊತ್ತಮೊದಲ ಶೇಪಿಂಗ್ ಮಶಿನ್ ಮತ್ತು 1989 ರಲ್ಲಿ ಸಿ.ಬಿ.ಎನ್. ಗ್ರೈಂಡಿಂಗ್ ಡಿಸ್ಕ್ ಇರುವ ಮೊದಲನೆಯ ಗಿಯರ್ ಗ್ರೈಂಡಿಂಗ್ ಮಶಿನ್ ಗಳು ಒಳಗೊಂಡಿವೆ.
 
1_1  H x W: 0 x
 
2003 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾದ ಲಿಬಹರ್ ಮಶಿನ್ ಟೂಲ್ಸ್ ಇಂಡಿಯಾ ಪ್ರೈ.ಲಿ. ಮತ್ತು ಫ್ರಾನ್ಸೆಸ್ ಕ್ಲೀನ್ ಇವರ ಜಂಟಿ ಯೋಜನೆಯಲ್ಲಿ ಅತ್ಯಾಧುನಿಕವಾದ ತಂತ್ರಜ್ಞಾನದ ಸಹಾಯದಿಂದ ಗಿಯರ್ ಕಟಿಂಗ್ ಮಶಿನ್ ಪ್ರಮುಖವಾಗಿ ಭಾರತೀಯ ಮಾರುಕಟ್ಟೆಗೋಸ್ಕರ ತಯಾರಿಸಲಾಗಿದೆ.
ಲೀಭರ್ ಗ್ರೂಪ್ ನಲ್ಲಿ ಗ್ರಾಹಕರ ಬೇಡಿಕೆ ಮತ್ತು ಗ್ರಾಹಕರ ಸೇವೆ ಎಂಬ ಎರಡು ಅಂಶಗಳು ಒಳಗೊಂಡಿವೆ. ಗ್ರಾಹಕರ ಒಳಿತಿನ ನಿಟ್ಟಿನಲ್ಲಿ ಗಮನವನ್ನು ಕೇಂದ್ರೀಕರಿಸಿ ಉದ್ಯಮವನ್ನು ವಿಸ್ತರಿಸಿದ್ದಾರೆ. ಮೆನ್ಯು ಆಧರಿಸಿರುವ ಪ್ರೊಗ್ರಾಮ್ ನ ಬಳಕೆಗಾರರ ಹಸ್ತಕ್ಷೇಪವನ್ನು (ಯೂಸರ್ ಇಂಟರ್ ಫಿಯರನ್ಸ್) ಕಡಿಮೆ ಮಾಡುವಲ್ಲಿ ಇದೊಂದು ಮಹತ್ತರವಾದ ಹೆಜ್ಜೆಯಾಗಿದೆ.

ಮೆನ್ಯು ಆಧರಿಸಿರುವ ಪ್ರೊಗ್ರಾಮಿಂಗ್
ಆಧುನಿಕ ತಂತ್ರಜ್ಞಾನವು ಮನುಷ್ಯನನ್ನು ಮಶಿನ್ ನಿಂದ ತುಂಬಾ ದೂರಕ್ಕೆ ಒಯ್ಯುತ್ತದೆ. ಹಲವಾರು ವರ್ಷಗಳ ಹಿಂದೆ ಗಿಯರ್ ಕೈಯಿಂದ ಸೆಟ್ ಮಾಡಲಾಗುತ್ತಿತ್ತು. ಆದರೆ ಈಗ ಎಲ್ಲವನ್ನೂ ಡಿಜಿಟಲ್ NC ಕಂಟ್ರೋಲ್ ಸಿಸ್ಟಮ್ ಮೂಲಕ ಮಾಡಲಾಗುತ್ತಿದೆ. ಲಿಬಹರ್ ಇಂಟರ್ ಫೇಸ್ಹೆಚ್ಚು ಇಂಟ್ಯುಟಿವ್, ಫ್ಲೆಕ್ಸಿಬಲ್ ಮತ್ತು ಬಳಕೆಗಾರರಿಗೆ ಅನುಕೂಲವಾಗಿವೆ. ಕಾರ್ಯವಸ್ತು ಮತ್ತು ಟೂಲ್ ನ ಡಾಟಾ ಸೇರಿಸುವಾಗ ಹಾಗೆಯೇ ಕಾರ್ಯವಸ್ತುವಿನಲ್ಲಿ ಹಲವಾರು ಸುಧಾರಣೆಗಳನ್ನು ಮಾಡುತ್ತಿರುವಾಗ ಬಳಕೆಗಾರರಿಗೆ ಮಾರ್ಗದರ್ಶನವೂ ಸಿಗುತ್ತದೆ.
ಸಿ.ಎನ್.ಸಿ. ಮಶಿನ್ ನಲ್ಲಿ ಮೆನ್ಯು ಗೆ ಆಧರಿಸಿರುವ ಪ್ರೊಗ್ರಾಮಿಂಗ್ ನ ಆಗಮನವು ಆಧುನಿಕ ಉತ್ಪಾದನೆಯ ರೀತಿಗೆ ಒಂದು ಕೊಡುಗೆಯಾಗಿದೆ. ಬಳಕೆಗಾರರಿಗೆ ಅನುಕೂಲ ಇರುವ ಹೊರತಾಗಿ ಅದು ಎರಡು ಮಹತ್ವದ ಮಿತಿಗಳನ್ನು ದೂರವಾಗಿಡುತ್ತದೆ. ಪ್ರೊಗ್ರಾಮಿಂಗ್ ಮಾಡುವಾಗ ಪ್ರೊಗ್ರಾಮರ್ ನ ಕುಶಲತೆಗೆ ಅವಲಂಬಿಸಿ ಯಂತ್ರಣೆಯ ರೀತಿಯು ಇರುವುದು, ಇದು ಮೊದಲನೆಯ ಮಿತಿ. ಮಾಹಿತಿಯನ್ನು ಸೇರಿಸುವಾಗ ಆಗುವ ತಪ್ಪುಗಳು, ಇದು ಎರಡನೆಯ ಮಿತಿ, ಇದು ಮಹತ್ವದ ಮಿತಿಯಾಗಿತ್ತು, ಆದರೆ ಈಗ ಇದಕ್ಕೆನೂ ಅರ್ಥವಿಲ್ಲ.
ಪ್ರೊಗ್ರಾಮಿಂಗ್ ಗೋಸ್ಕರ ಮಾಹಿತಿಯನ್ನು ಇನ್ ಪುಟ್ ಮಾಡುವಾಗ ಬಳಸುವ ಯೋಗ್ಯ ಮತ್ತು ಶಾಸ್ತ್ರೀಯ ರೀತಿಯನ್ನು ಓದುಗರಿಗೆ ನೀಡಿ ಮಾಹಿತಿಯನ್ನು ತಿಳಿದುಕೊಳ್ಳುವಲ್ಲಿ ಮತ್ತು ಅದನ್ನು ಗೇರ್ ಪ್ರೊಗ್ರಾಮ್ ನಲ್ಲಿ ಸೇರಿಸುವಾಗ ಆಗುವ ಸಾಮಾನ್ಯ ತಪ್ಪುಗಳನ್ನು ಅಥವಾ ಗಡಿಬಡಿಯನ್ನು ಹೇಗೆ ತಡೆಯಬಹುದು, ಇದೇ ಲೇಖನದ ಉದ್ದೇಶವಾಗಿದೆ.
ಇದನ್ನು ವಿವರವಾಗಿ ತಿಳಿದುಕೊಳ್ಳುವ ಮೊದಲು ನಾವು ಗಿಯರ್ ಹಾಬಿಂಗ್ ಮಶಿನ್ ನಲ್ಲಿ ಕೆಲಸ ಪೂರ್ತಿಗೊಳಿಸಲು ಮೆನ್ಯು ಆಧಾರಿತವಾದ ಪ್ರೊಗ್ರಾಮ್ ಹೇಗೆ ತಯಾರಿಸಲಾಗುತ್ತದೆ, ಎಂಬುದನ್ನು ತಿಳಿದುಕೊಳ್ಳೋಣ.

⦁ ಹಾಬಿಂಗ್ ನಲ್ಲಿ ಗಿಯರ್ ಕಟಿಂಗ್ ನ ಕೆಲಸವನ್ನು 3 ಉಪ ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ.
1. ಯಂತ್ರಭಾಗಗಳ ವಿವರಗಳು
2. ಟೂಲಿಂಗ್ (ಹಾಬ್ ನ ವಿವರಗಳು)
3. ಕಾರ್ಯವಸ್ತುವನ್ನು ಹಿಡಿಯಲು (ಕ್ಲಾಂಪಿಂಗ್) ರೀತಿ.
ಇದನ್ನು WTC (ವರ್ಕ್ ಪೀಸ್, ಟೂಲ್, ಕ್ಲಾಂಪಿಂಗ್) ಫೈಲ್ಸ್ ಎಂದು ಹೇಳಲಾಗುತ್ತದೆ.
⦁ ಮೆನ್ಯು ಆಧರಿಸಿರುವ ಪ್ರೊಗ್ರಾಮ್ ನ ಬಳಕೆಯಿಂದ ಒಳ ಗಿಯರ್ ಕಟಿಂಗ್ ಪೂರ್ತಿ ಮಾಡುವುದಾದರೆ W, T ಮತ್ತು C ಯ ಪ್ರತಿಯೊಂದು ಫೈಲ್ ಮಾಹಿತಿಯ ಬೇರೆಯೇ ಸೆಟ್ ಸೇರಿಸುವುದು ಅತ್ಯಾವಶ್ಯಕವಾಗಿದೆ. ಮಾಹಿತಿಯನ್ನು ಸೇರಿಸುವುದು, ಒಂದು ಸ್ವತಂತ್ರವಾದ ಕೆಲಸವಾಗಿದೆ ಮತ್ತು ಅದು
14_1  H x W: 0 ಈ ಕೀಯ ಮೂಲಕ ಯಾವಾಗಲೂ ಆಯ್ಕೆ ಮಾಡಬಹುದಾಗಿದೆ. ಮಾಹಿತಿಯ ಇನ್ ಪುಟ್ ನಲ್ಲಿರುವ ಪ್ರಮುಖ ಕೆಲಸವನ್ನು ಈ ಮುಂದೆ ನೀಡಲಾಗಿದೆ.
⦁ ಕಾರ್ಯವಸ್ತುವಿನ ಪ್ರೊಗ್ರಾಮಿಂಗ್
⦁ ಟೂಲ್ ಪ್ರೊಗ್ರಾಮಿಂಗ್
⦁ ಕ್ಲಾಂಪಿಂಗ್ ಪ್ರೊಗ್ರಾಮಿಂಗ್
⦁ ಯಂತ್ರಭಾಗಗಳ ಪ್ರೊಗ್ರಾಮಿಂಗ್
⦁ ಕಂಟ್ರೋಲ್ ಕಾನ್ಫಿಗರೇಶನ್ ಸಿಸ್ಟಮ್ ಫಂಕ್ಷನ್
⦁ ಮಾಹಿತಿಯ ಬ್ಯಾಕ್ ಅಪ್
⦁ ಫೈಲ್ ಗಳ ವ್ಯವಸ್ಥಾಪನೆ

03_1  H x W: 0 ಮಾಹಿತಿಯ ಇನ್ ಪುಟ್:
ಪ್ರೊಗ್ರಾಮ್ ಪ್ಯಾರಾಮೀಟರ್ ಅಥವಾ ಫಂಕ್ಷನಲ್ ಸಿಕ್ವೆನ್ಸ್ ಇದು ಸಂಬಂಧಪಟ್ಟ ಪ್ರೊಗ್ರಾಮರ್ ನ ಜವಾಬ್ದಾರಿಯಾಗಿದೆ. ಮಶಿನ್ ನಲ್ಲಾಗುವ ನಷ್ಟವನ್ನು ತಡೆಯಲು (ಉದಾಹರಣೆ, ಕಾರ್ಯಕ್ಷೇತ್ರದಲ್ಲಿ ಸಂಭವಿಸುವ ಅಪಘಾತಗಳು), ಎಲ್ಲ ಇನ್ ಪುಟ್ ಮಾಹಿತಿಯನ್ನು ಅತ್ಯಂತ ಮುತುವರ್ಜಿ ವಹಿಸಿ ಪರಿಶೀಲಿಸಲಾಗುತ್ತದೆ.


ಫೈಲ್ ಗಳ ಹೆಸರು

ಸಿ.ಎನ್.ಸಿ. ಫೈಲ್ ನ ಹೆಸರು (W/T/C/%/L-ಫೈಲ್) 16 ಆಲ್ಫಾನ್ಯುಮೆರಿಕ್ ಅಕ್ಷರಗಳ ತನಕ (ಬ್ಲಾಂಕ್ ಹೊರತು ಪಡಿಸಿ) ಇರಬಲ್ಲವು. ಉದ್ದದ ಹೆಸರಿನಲ್ಲಿ ಕ್ಯಾಪಿಟಲ್ ಮತ್ತು ಚಿಕ್ಕ ಅಕ್ಷರಗಳು ಬೇರೆ ಬೇರೆಯಾಗಿ ಗುರುತಿಸಲಾಗುತ್ತವೆ. ಫೈಲ್ ನ ಹೆಸರಿನಲ್ಲಿ ಮೊದಲ ಅಕ್ಷರ (ಕ್ಯಾರೆಕ್ಟರ್) ಫೈಲ್ ನ ವಿಧವನ್ನು ನಿರ್ದೇಶಿಸುತ್ತದೆ.

ಫೈಲ್ ಸ್ಟ್ರಕ್ಚರ್ W, T, C, %...

04_1  H x W: 0      

04_1  H x W: 0
ಯಾವುದೇ ಟೂಲ್ ಕೇವಲ ಒಂದೇ ವಿಶಿಷ್ಟ ಕಾರ್ಯವಸ್ತುವಿಗೋಸ್ಕರ ಮೀಸಲಾಗಿರದೇ ಇದ್ದುದರಿಂದ ಎಲ್ಲ ಟೂಲ್ ಗಳ ಪ್ಯಾರಾಮೀಟರ್ ಒಂದೇ ಟೂಲ್ ನ ಫೈಲ್ ನಲ್ಲಿ (T-ಫೈಲ್) ಒಂದುಗೂಡಿಸಲಾಗಿರುತ್ತವೆ. ಈ ಟೂಲ್ ಫೈಲ್ ಯಾವುದೇ ಕಾರ್ಯವಸ್ತುವಿನೊಂದಿಗೆ ಜೋಡಿಸುವುದು (ಕನೆಕ್ಟ್) ಸಾಧ್ಯ. (ಚಿತ್ರ ಕ್ರ. 2) ಪ್ರಕ್ರಿಯೆಯಲ್ಲಿ ಟೂಲ್ ಫೈಲ್ ಯಂತ್ರಭಾಗಗಳನ್ನು ಪ್ರೊಗ್ರಾಮ್ ಮೂಲಕ ಅಪಡೇಟ್ ಮಾಡಲಾಗುತ್ತದೆ. (ಉದಾಹರಣೆ, ವರ್ಕ್ ಪೀಸ್, ಕೌಂಟರ್)
ಕ್ಲಾಂಪಿಂಗ್ ಫೈಲ್ ನಲ್ಲಿರುವ (C-ಫೈಲ್) ಜಾಮೆಟ್ರಿಯ ಮಾಹಿತಿ ಮತ್ತು ಬಳಸಿರುವ ಸ್ವಯಂಚಾಲನೆಗೆ ಅನ್ವಯಿಸಿರುವ ಎಲ್ಲ ಪ್ಯಾರಾಮೀಟರ್ ಗಳಿರುತ್ತವೆ. (ಉದಾಹರಣೆ, ಕ್ಲಾಂಪಿಂಗ್ ಪ್ರೆಶರ್, ಗ್ರಿಪರ್ ಪೊಸಿಶನ್).
ಟೂಲ್, ಕಾರ್ಯವಸ್ತು ಮತ್ತು ಕ್ಲಾಂಪಿಂಗ್ ಫೈಲ್ ನ ಉದ್ದ (ಪ್ಯಾರಾಮೀಟರ್ ಗಳ ಸಂಖ್ಯೆ) ಮತ್ತು ಒಳಗೆ ಸೇರಿಸಿರುವ ಅಂಶಗಳು (ಯಾವ ಪ್ಯಾರಾಮೀಟರ್) ಟೂಲ್, ಕಾರ್ಯವಸ್ತು ಮತ್ತು ಕ್ಲಾಂಪಿಂಗ್ ಫಿಕ್ಸ್ಚರ್ ನ ಪ್ರಕಾರಕ್ಕೆ ಅನುಸಾರವಾಗಿ ಬದಲಾಗುತ್ತವೆ.
ಒಂದೇ ಪ್ರಾಥಮಿಕ ರನ್ ನಲ್ಲಿ (ಹೆಡರ್ ಮಾಹಿತಿಯ ಇನ್ ಪುಟ್) ಈ ಫೈಲ್ ನ ಮೊದಲ ನಿರ್ಮಿತಿಯಲ್ಲಿ ಬೇಕಾಗುವ ಪ್ಯಾರಾಮೀಟರ್ ಕಂಟ್ರೋಲ್ ಮೂಲಕ ಸಂಗ್ರಹಿಸಲಾಗುತ್ತವೆ. ಈ ರೀತಿಯಲ್ಲಿ ಪೈಲ್ಸ್ ಗಳ ಪ್ಯಾರಾಮೀಟರ್ ನಲ್ಲಿ ಯಾವಾಗಲೂ ಆಪ್ಟಿಮೈಜ್ಡ್ ಸಂಖ್ಯೆಗಳಿರುತ್ತವೆ.
ಎಲ್ಲ ಪ್ಯಾರಾಮೀಟರ್ ಕಾನ್ಫಿಗರ್ ಮಾಡಲು ಯೋಗ್ಯವಾಗಿರುತ್ತವೆ. ದೀರ್ಘವಾದ ವಿಷಯ, ಗುರುತು, ಕಾರ್ಯಸಾಮರ್ಥ್ಯದ ಮಿತಿ ಇತ್ಯಾದಿಗಳು ಬದಲಿಸುವುದು ಸಾಧ್ಯವಾಗಿರುತ್ತದೆ. ಪ್ರಸ್ತುತದ ಪ್ಯಾರಾಮೀಟರ್ ತೆಗೆಯುವುದೂ ಸಾಧ್ಯ. ಹೊಸ ಪ್ಯಾರಾಮೀಟರ್ ಪಡೆಯುವುದೂ ಸಾಧ್ಯ. ಆದರೂ ಕೂಡಾ ಪ್ಯಾರಾಮೀಟರ್ NC ಪ್ರೊಗ್ರಾಮ್ ನಲ್ಲಿ ಉಲ್ಲೇಖಿಸಿದಾಗ ಮಾತ್ರ ಯಾವುದೇ ಕೆಲಸ ಮಾಡುವುದೂ ಸಾಧ್ಯ, ಎಂಬುದನ್ನು ಇಲ್ಲಿ ಗಮನಿಸಬೇಕು.

05_1  H x W: 0  
 
ಪ್ರೊಗ್ರಾಮಿಂಗ್ ನ ಮಾಹಿತಿಯ ಇನ್ ಪುಟ್ ನಲ್ಲಿರುವ ಸಾಮಾನ್ಯ ತಪ್ಪುಗಳು ಮತ್ತು ಅವುಗಳ ನಿರಾಕರಣೆ.
ಮಾಹಿತಿಯನ್ನು ಸೇರಿಸುವಾಗ ಕಾಣುವ ಪಾಪ್-ಅಪ್ ಸಂದೇಶದ ಮೂಲಕ (ಚಿತ್ರ ಕ್ರ. 3) ಹೊಸದಾಗಿ ಸೇರಿಸಲಾಗುವ ಮಾಹಿತಿಯನ್ನು ಸಿಸ್ಟಮ್ ನಲ್ಲಿ ಮುಂಚಿನಿಂದಲೇ ಸೇರಿಸಿರುವ ಮೂಲಭೂತ ಮಾಹಿತಿಯೊಂದಿಗೆ ಸರಿಹೊಂದಾಣಿಸಲ್ಪಡದಿರುವ ಮಾಹಿತಿ ಆಪರೇಟರ್ ಗೆ ಸಿಗಬಲ್ಲದು.
 
06_1  H x W: 0
 
ಮಾಹಿತಿಯನ್ನು ಸೇರಿಸುವಾಗ ಉಂಟಾಗುವ ಹಲವಾರು ಸಾಮಾನ್ಯವಾದ ತಪ್ಪುಗಳನ್ನು ಈ ಮುಂದೆ ನೀಡಲಾಗಿದೆ. ಈ ತಪ್ಪುಗಳನ್ನು ಸಿಸ್ಟಮ್ ಮೂಲಕ ತೋರಿಸಲಾಗುವುದಿಲ್ಲ. ಆದರೆ ಇದರ ಪರಿಣಾಮದಿಂದಾಗಿ ಹಾಬಿಂಗ್ ನಂತರ ಉಚ್ಟಮಟ್ಟದ ಗೇರ್ ಗಳು ಸಿಗುವುದಿಲ್ಲ.
1. ಹಾಬ್ ಲೀಡ್ ಕೋನ
⦁ ಸಾಮಾನ್ಯವಾಗಿ ಇದನ್ನು ಹಾಬ್ ನ ಬದಿಯ ಸರ್ಫೇಸ್ ನಲ್ಲಿ ಚಿತ್ರಿತವಾಗಿರುತ್ತದೆ (ಚಿತ್ರ ಕ್ರ. 4). ಒಂದು ವೇಳೆ ಯಾವುದೇ ಕಾರಣಕ್ಕೋಸ್ಕರ ಹಾಬ್ ನ ಬದಿಯಲ್ಲಿರುವ ಸರ್ಫೇಸ್ ನಿಂದ ಅದು ತೆಗೆಯಲಾಗಿದ್ದರೂ ಕೂಡಾ ಅದರ ಮೌಲ್ಯ ಹಾಬ್ ನ ಮಾಹಿತಿಯ ಕೋಷ್ಟಕದಿಂದ ಪಡೆಯಲಾಗುತ್ತದೆ.
⦁ ಈ ಮೌಲ್ಯ ಹಾಬ್ ನ ಸ್ಟಾರ್ಟ್ ನ ಸಂಖ್ಯೆಯ ಹೆಚ್ಚಳಕ್ಕೆ ಅನುಸಾರವಾಗಿ ಹೆಚ್ಚುತ್ತದೆ, ಎಂಬ ಸಾಮಾನ್ಯ ನಿಯಮವಿದೆ.
⦁ ಮುಖ್ಯ ಸ್ಟ್ರೀನ್ ನಲ್ಲಿ ತೋರಿಸಿದಂತೆ ಸ್ಪರ್ ಮತ್ತು ಹೆಲಿಕಲ್ ಗಿಯರ್ ಇವೆರಡರಲ್ಲಿಯೂ ಮಶಿನ್ ಸ್ವಯಂಚಾಲಿತವಾಗಿ ಹಾಬ್ ಮೌಂಟಿಂಗ್ ಅಕ್ಷದ ಟಿಲ್ಟಿಂಗ್ ಕೋನವನ್ನು ಲೆಕ್ಕಿಸುತ್ತದೆ.

ಮಾಹಿತಿ ಇನ್ ಪುಟ್ ಮಾಡುವಾಗ ಉಂಟಾಗುವ ಸಾಮಾನ್ಯ ತಪ್ಪುಗಳು

⦁ ಅಳವಡಿಸಿರುವ ಕೋನದ ಅಂಶಗಳ ಮೌಲ್ಯವು ದಶಾಂಶ ಬಿಂದುವಿನ ನಂತರ ಎರಡನೇ ಅಂಕೆಯ ತನಕ ನಿಖರವಾಗಿ ಇರದೇ ಇದ್ದಲ್ಲಿ ಇದರಿಂದಾಗಿ ಅನೇಕ ಸಲ ಹಾಬ್ ನ ಫ್ಲಂಕ್ ನ ಸವೆತವು ಹೆಚ್ಚಾಗುತ್ತದೆ. ಕಾರಣ ಹಾಬ್ ನ ಹಲ್ಲುಗಳು ಯಂತ್ರಣೆಯಲ್ಲಿ ಎದುರುಬದುರಾಗಿ ಅಳವಡಿಸಲು ಈ ಮೌಲ್ಯವೇ ಕೆಲಸವನ್ನು ನಿರ್ವಹಿಸುತ್ತದೆ.
 

07_1  H x W: 0  
ಹಲವಾರು ಅಪ್ಲಿಕೇಶನ್ ಗಳಲ್ಲಿ ಶಾರ್ಟ್ ಲೀಡ್ ಹಾಬ್ ಬಳಸುವುದು ಆವಶ್ಯಕವಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ಹಾಬ್ ತಯಾರಿಸುವವರು ಸ್ವಂತ ಹಾಬ್ ಅಕ್ಷದ ಟಿಲ್ಟಿಂಗ್ ಎಂಗಲ್ ತೋರಿಸುತ್ತಾರೆ. (SA ಅಂದರೆ ಸೆಟ್ ಎಂಗಲ್- ಚಿತ್ರ ಕ್ರ. 5). ಇದು ಮಶಿನ್ ನ ಮೂಲಕ ತಯಾರಿಸಿರುವ ಲೀಡ್ ಕೋನಕ್ಕೆ ಅವಲಂಬಿಸಿರುವ ಗಣನೆಯ ಮೌಲ್ಯಕ್ಕಿಂತ ಬೇರೆ ಇರಬಹುದು. ಈ ಸ್ಥಿತಿಯಲ್ಲಿ ಹಾಬ್ ಅಕ್ಷವು ಟಿಲ್ಟಿಂಗ್ ಆಗಲು ಯೋಗ್ಯವಾದ ಕೋನವನ್ನು ಪಡೆಯಲು ಆಪರೇಟರ್ ಗೆ ಹಾಬ್ ನ ಲೀಡ್ ಕೋನವನ್ನು ತಮ್ಮ ಕೈಯಿಂದಲೇ ಬದಲಾಯಿಸಬೇಕಾಗುತ್ತದೆ.
 
2. ಪ್ರೊಫೈಲ್ ನ ಸುಧಾರಣೆ ಮಾಡುವ ಅಂಶಗಳು

08_1  H x W: 0  
ಇದು ಕೇವಲ ಹಾಬ್ ಟೂಥ್ ನ ಅಡೆಂಡಮ್ ಗೋಸ್ಕರ ಅನ್ವಯಿಸುತ್ತದೆ ಮತ್ತು ಅದು ಗಿಯರ್ ನಲ್ಲಿ ತಯಾರಾಗಿರುವ ಹಲ್ಲುಗಳ ದಪ್ಪದಲ್ಲಿ ಪರಿಣಾಮವನ್ನು ಬೀರುತ್ತದೆ.
⦁ ಒಂದು ವೇಳೆ ಪ್ರೊಫೈಲ್ ಸಂದರ್ಭ ರೇಖೆಯು ಪಿಚ್ ವರ್ತುಲದ
⦁ ವ್ಯಾಸದ (ಪಿ.ಸಿ.ಡಿ.) ಸ್ಪರ್ಶರೇಖೆ ಇದ್ದಲ್ಲಿ, ಅಡೆಂಡಮ್ ನ (ಚಿತ್ರ ಕ್ರ. 6) ಸುಧಾರಣೆಯ ಮೌಲ್ಯ 0 ಇರುತ್ತದೆ. ಒಂದು ವೇಳೆ ಅದು ಪಿ.ಸಿ.ಡಿ. ಹೊರಗಿದ್ದಲ್ಲಿ, ಆ ಮೌಲ್ಯವು ಪಾಸಿಟಿವ್ (ಧನಾತ್ಮಕ) ಇರುತ್ತದೆ. ಅಂದರೆ ಅಡೆಂಡಮ್ ನ ಹತ್ತಿರ ಹಲ್ಲುಗಳ ದಪ್ಪವು ಹೆಚ್ಚಾಗುತ್ತದೆ.


9_1  H x W: 0 x 
ವಿವರಗಳನ್ನು ಸೇರಿಸುವಾಗ ಆಗುವ ಸಾಮಾನ್ಯ ತಪ್ಪುಗಳು
⦁ ಕಾರ್ಖಾನೆಯಲ್ಲಿ ಅಡೆಂಡಮ್ ಗುಣಾಕಾರದ 1.25 ಈ ಮೌಲ್ಯವನ್ನು ಸೇರಿಸುವಂತಹ ಸಾಮಾನ್ಯವಾದ (ಚಿತ್ರ ಕ್ರ. 7) ರೂಢಿ ಇರುತ್ತದೆ. ಇದು ಸರಿಯಲ್ಲ. ಹಾಬ್ ನ ಯಂತ್ರಚಿತ್ರಗಳನ್ನು ಪರಿಶೀಲಿಸುವುದು ಮತ್ತು ಅಡೆಂಡಮ್ ನ ಎತ್ತರವನ್ನು ಪಡೆಯುವುದು, ಇದೇ ಸರಿಯಾದ ರೀತಿ.
ಅಡೆಂಡಮ್ ಗುಣಾಕಾರ = ಅಡೆಂಡಮ್/ ಮೊಡ್ಯುಲ್

3. ಹಾಬ್ ನಲ್ಲಿರುವ ಸ್ಟಾರ್ಟ್ ಗಳ ಸಂಖ್ಯೆ
⦁ ಉತ್ಪಾದಕತೆಯನ್ನು ಹೆಚ್ಚಿಸಲು ಹಾಬ್ ನಲ್ಲಿ ಸ್ಟಾರ್ಟ್ ನ ಸಂಖ್ಯೆಯನ್ನು (ಚಿತ್ರ ಕ್ರ. 8) ಹೆಚ್ಚಿಸುವುದು, ಒಂದು ಸಾಮಾನ್ಯವಾದ ರೀತಿಯಾಗಿದೆ. ಕಾರಣ ಸ್ಟಾರ್ಟ್ ನ ಸಂಖ್ಯೆಯು ಎಷ್ಟು ಹೆಚ್ಚು ಇರುತ್ತದೆಯೋ, ಅಷ್ಟೇ ಸೈಕಲ್ ಟೈಮ್ ಕಡಿಮೆಯಾಗುತ್ತದೆ. ಹಾಬ್ ಸ್ಟಾರ್ಟ್ ಎಷ್ಟು ಹೆಚ್ಚುತ್ತವೆಯೋ, ಅಷ್ಟೇ ಪಟ್ಟಿನಲ್ಲಿ ಟೇಬಲ್ ಅಥವಾ ಫಿಕ್ಚರ್ ತಿರುಗುತ್ತದೆ.

10_1  H x W: 0
⦁ ಮಾಹಿತಿಯನ್ನು ಸೇರಿಸುವಾಗ ಉಂಟಾಗುವ ಸಾಮಾನ್ಯ ತಪ್ಪುಗಳು
⦁ ಸ್ಟಾರ್ಟ್ ಗಳ ಸಂಖ್ಯೆಯನ್ನು ಸೇರಿಸುವಾಗ ಆವಶ್ಯಕವಿರುವ ಮುತುವರ್ಜಿಯನ್ನು ವಹಿಸಲಾಗುವುದಿಲ್ಲ. ಇದರಿಂದಾಗಿ ಹಲ್ಲುಗಳ ಬದಲಾಗಿ ರೂಟ್ ವ್ಯಾಸದ ತನಕ ಸಂಪೂರ್ಣವಾಗಿ ಮಿಲ್ಲಿಂಗ್ ಆಗುತ್ತದೆ.
⦁ ಹೊಸ ಫೈಲ್ ತಯಾರಿಸಲು ಹಳೆಯ ಪ್ರೋಗ್ರಾಮಿಂಗ್ ನ ನಕಲು (ಕಾಪಿ) ಮಾಡುವಾಗ ಈ ರೀತಿಯ ತಪ್ಪುಗಳು ಹೆಚ್ಚು ಪ್ರಮಾಣದಲ್ಲಿ ಆಗುತ್ತವೆ.

4. ಹಾಬ್ ನ ಸ್ಥಳಾಂತರದ ಪ್ರಾರಂಭ ಮತ್ತು ಕೊನೆಯ ಮಿತಿ

11_1  H x W: 0  
⦁ ಹೊಸ ಪ್ರೊಗ್ರಾಮ್ ತಯಾರಿಸಿದ ನಂತರ ಹಾಬ್ ಮಶಿನ್ ನಲ್ಲಿ ಅಳವಡಿಸಲಾಗುತ್ತದೆ. ಆಪರೇಟರ್ ಫಿಕ್ಸ್ಚರ್ ಅಥವಾ ಕಾರ್ಯವಸ್ತುವನ್ನು ಹಿಡಿಯುವ ಗ್ರಿಪರ್ ಮತ್ತು ಮಶಿನ್ ನಲ್ಲಿರುವ ಇನ್ನಿತರ ಭಾಗಗಳ ತಪಾಸಣೆಯನ್ನು ಮಾಡಿ ಹಾಬ್ ನ ಯಂತ್ರಣೆ ಗೋಸ್ಕರ ಸಂಪರ್ಕದಲ್ಲಿ ಬರುವ ಸ್ಥಿತಿಯನ್ನು ನಿರ್ಧರಿಸುವುದು ಅತ್ಯಾವಶ್ಯಕವಾಗಿದೆ. ಇದರಿಂದಾಗಿ ಪ್ರತಿಯೊಂದು ಸೈಕಲ್ ನ ನಂತರ ಹಾಬ್ ಎಷ್ಟು ದೂರ ಸರಿಯಬಲ್ಲದು, ಅದರ ಸುರಕ್ಷಿತವಾದ ಕೆಲಸ ಮಿತಿಯನ್ನು ನಿರ್ಧರಿಸುವುದು ಸಾಧ್ಯ.
ಹಾಬ್ ನ ಒಂದು ತುದಿಯಲ್ಲಿ ಯಂತ್ರಣೆಯ ಕೆಲಸವನ್ನು ಎಲ್ಲಿಂದ ಪ್ರಾರಂಭಿಸಬೇಕು, ಅದರ ಮೌಲ್ಯ ಮತ್ತು ಮಶಿನ್ ಪ್ರಮುಖ ಸ್ಪಿಂಡಲ್ ಬೇರಿಂಗ್ ನ ಹತ್ತಿರ ಇರುವ ಹಾಬ್ ನ ಯಾವ ಭಾಗಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಲ್ಪಟ್ಟಿದ್ದೆಂದು ನಿಗದಿಸಬೇಕೋ, ಅದರ ಮೌಲ್ಯವನ್ನು (ಚಿತ್ರ ಕ್ರ. 9) ಸೇರಿಸುವುದು ಅತ್ಯಾವಶ್ಯಕವಾಗಿದೆ. ಇದರಿಂದಾಗಿ ಹಾಬ್ ನ ಸ್ಥಳಾಂತರ ಪ್ರಾರಂಭವಾಗುವ ಸ್ಥಾನವನ್ನು ತೋರಿಸಲಾಗುತ್ತದೆ.
⦁ ಹಾಬ್ ನ ಕೌಂಟರ್ ಸ್ಪಿಂಡಲ್ ಅಥವಾ ಸಪೋರ್ಟ್ ಸ್ಪಿಂಡಲ್ ನ ಹತ್ತಿರದ ಭಾಗದ ಸ್ಥಳಾಂತರದ ಕೊನೆಯೆಂದು ಸೇರಿಸಬೇಕು. ಇದರಿಂದಾಗಿ ಸ್ಥಳಾಂತರ ಪ್ರಾರಂಭದಿಂದಲೂ ಹಾಬ್ ಯಾವ ಕೊನೆಯ ಸ್ಥಿತಿಯ ತನಕ ಬಳಸಬಹುದು, ಎಂಬುದನ್ನು ತೋರಿಸಲಾಗಿದೆ.

12_1  H x W: 0
 
ಮಾಹಿತಿಯನ್ನು ಸೇರಿಸುವಾಗ ಉಂಟಾಗುವ ಸಾಮಾನ್ಯ ತಪ್ಪುಗಳು
⦁ ಹಾಬ್ ನ ಎರಡು ತುದಿಗಳ ಕುರಿತು ಸಾಕಷ್ಟು ವಿಚಾರ ಮಾಡದೇ ಪ್ರಾರಂಭ ಮತ್ತು ಕೊನೆಯ ಸ್ಥಾನಗಳನ್ನು ಆಯ್ಕೆ ಮಾಡಲಾಗುತ್ತದೆ. ಕಟಿಂಗ್ ಹಲ್ಲುಗಳ ಸಂಪೂರ್ಣವಾಗಿ ಎಲ್ಲಿ ಶುರುವಾಗಿಲ್ಲವೋ, ಇಂತಹ ಸ್ಥಾನದ ಆಯ್ಕೆ ಮಾಡಿ ಯಂತ್ರಣೆ ಮಾಡಲಾಗುತ್ತದೆ, ಆದರೆ ಕಟಿಂಗ್ ಎಡ್ಜ್ ಮುರಿಯುತ್ತವೆ (ಚಿತ್ರ ಕ್ರ. 10), ಗಿಯರ್ ನ ಗ್ರಾಫ್ ಸರಿ ಇರದಂತಹ (ನಾಟ್ ಓಕೆ) ಪರಿಣಾಮಗಳು ಲಭಿಸುತ್ತವೆ.
⦁ ವಿಶೇಷವಾಗಿ ಉಚ್ಚಮಟ್ಟದ ಹೆಲಿಕ್ಸ್ ಇರುವ ಕೆಲಸಗಳಲ್ಲಿ ಎಚ್ಚರಿಕೆಯನ್ನು ವಹಿಸುವುದು ಅತ್ಯಾವಶ್ಯಕವಾಗಿದೆ. ಕಾರಣ ಕಾರ್ಯವಸ್ತುವಿನ ಹೆಚ್ಚುವರಿ ಹೆಲಿಕ್ಸ್ ಕೋನದಿಂದಾಗಿ ಹಾಬ್ ನ ಬಳಕೆಯನ್ನು ಮಾಡುವಲ್ಲಿ ಉದ್ದವು ಇನ್ನಷ್ಟು ಕಡಿಮೆಯಾಗುತ್ತದೆ.

5. ಕಾರ್ಯವಸ್ತು ಬದಲಾಯಿಸುವ ಸ್ಥಾನ
⦁ ಆಧುನಿಕ ಸಿ.ಎನ್.ಸಿ. ಹಾಬಿಂಗ್ ಮಶಿನ್ ನಲ್ಲಿ ಉಚ್ಚಮಟ್ಟದ ಉತ್ಪಾದನೆಯ ಸಾಮರ್ಥ್ಯಕ್ಕೆ ಕಾರ್ಯವಸ್ತುವಿನ ಲೋಡಿಂಗ್ ಅಥವಾ ಅನ್ ಲೋಡಿಂಗ್ ಸ್ವಯಂಚಾಲಿತ ಮಾಡಲಾಗುತ್ತದೆ. ಪ್ರತಿಯೊಂದು ಕಾರ್ಯವಸ್ತುವಿನ ಯಂತ್ರಣೆಯನ್ನು ಮಾಡಿದ ನಂತರ ಹಾಬಿಂಗ್ ಸ್ಲ್ಪೈಡ್ ಪ್ರೊಗ್ರಾಮ್ ಮಾಡಿದ ಜಾಗಕ್ಕೆ ಹಿಂತುರುಗುತ್ತದೆ. ಆದ್ದರಿಂದ ಲೋಡಿಂಗ್ ಅರ್ಮ್ ಗೆ ಲೋಡಿಂಗ್ ಅಥವಾ ಅನ್ ಲೋಡಿಂಗ್ ನ ಕೆಲಸಕ್ಕೋಸ್ಕರ ಯಂತ್ರಣೆಯ ಕ್ಷೇತ್ರದಲ್ಲಿ ಮುಕ್ತವಾಗಿ ಪ್ರವೇಶಿಸುವುದು ಸುಲಭವಾಗುತ್ತದೆ.
⦁ ಎಲ್ಲ ಘಟಕಗಳನ್ನು ಮುತುವರ್ಜಿ ವಹಿಸಿ ವಿಚಾರ ಮಾಡಿದಾಗ ಈ ಸ್ಥಾನವು ಮಶಿನ್ ನಲ್ಲಿ ಪ್ರೊಗ್ರಾಮ್ ಮಾಡುವುದು ಅತ್ಯಾವಶ್ಯಕವಾಗಿರುತ್ತದೆ.

ಪ್ರೊಗ್ರಾಮಿಂಗ್ ನಲ್ಲಿರುವ ಸಾಮಾನ್ಯ ತಪ್ಪುಗಳು

13_1  H x W: 0  
ಹಲವಾರು ಸಲ ಇನ್ನಿತರ ಫೈಲ್ಸ್ ಗಳಿಂದ ಪ್ರೊಗ್ರಾಮ್ ಕಾಪಿ ಮಾಡಲಾಗುತ್ತವೆ ಮತ್ತು ಚಿತ್ರ ಕ್ರ. 11 ರಲ್ಲಿ ತೋರಿಸಿದಂತೆ ಸೆಂಟರ್ ಡಿಸ್ಟನ್ಸ್ ವರ್ಕ್ ಪೀಸ್ ಚೇಂಜ್ ಈ ಮೌಲ್ಯವನ್ನೂ ಕಾಪಿ ಮಾಡಲಾಗುತ್ತದೆ.
⦁ ಸೈಕಲ್ ಟೈಮ್ ಕಡಿಮೆ ಮಾಡಲು ಈ ಮೌಲ್ಯ ಹಾಬ್ ಗೆ ಫಿಕ್ಸ್ಚರ್ ನ ತುಂಬಾ ಹತ್ತಿರ ತರುವಂತೆ ಇರುತ್ತದೆ. ಆದರೆ ಮಶಿನ್ ನಲ್ಲಿರುವ ಎಲ್ಲ ಘಟಕಗಳ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದಿಲ್ಲ ಮತ್ತು ಅದರ ಪರಿಣಾಮದಿಂದಾಗಿ ಅಪಘಾತಗಳಾಗುತ್ತವೆ.

ಎಚ್ಚರಿಕೆ ವಹಿಸುವ ಉಪಾಯಗಳು
ಮುಂದೆ ನೀಡಿರುವ ಎಚ್ಚರಿಕೆಯ ಉಪಾಯಗಳಿಂದಾಗಿ ಪ್ರತಿಯೊಂದು ಹೊಸ ಸೆಟಪ್ ನಂತರ ಉಂಟಾಗುವ ಮೊದಲ ಯಂತ್ರಭಾಗ ಸರಿಯಾಗಿರುವ ಉದ್ದೇಶವು ಸಾಧ್ಯವಾಗುತ್ತದೆ.
⦁ ಯಾವುದೇ ರೀತಿಯ ತಪ್ಪುಗಳನ್ನು ತಡೆಯಲು ಯಾವಾಗಲೂ ಯಂತ್ರಭಾಗ ಮತ್ತು ಹಾಬ್ ಇವುಗಳ ಮಾಹಿತಿಯನ್ನು ಒಂದೇ ಸಲ ಸೇರಿಸುವುದು ಆವಶ್ಯಕವಾಗಿದೆ.
⦁ ಪ್ರಕ್ರಿಯೆಯ ಟೈಮ್ ವರ್ಕ್ ಶೀಟ್ ನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಸವೆತದ ಕುರಿತಾದ ನೀತಿಗಳೊಂದಿಗೆ (ವೇರ್ ಸ್ಟ್ರೆಟಿಜಿ) ಕಟಿಂಗ್ ಪ್ಯಾರಾಮೀಟರ್ ನ ಮಾಹಿತಿಯನ್ನೂ ಸೇರಿಸಬೇಕು, ಅಲ್ಲದೇ ಹೆಲಿಕಲ್ ಗಿಯರ್ ನ ಕುರಿತು ಹಾಬ್ ನ ನಿಜವಾದ ಉದ್ದವನ್ನು ಬಳಸಬೇಕು.
⦁ ಮಾಹಿತಿಯನ್ನು ಸೇರಿಸಿದ ನಂತರ ವಿವರಗಳೆಡೆಗೆ, ವಿಶೇಷವಾಗಿ ಒಂದೇ ರೀತಿಯ ಪ್ರೊಗ್ರಾಮ್ ನಿಂದ ಕಾಪಿ ಮಾಡಿರುವ ಸಮಾನವಾದ ಟೂಲ್ ಫೈಲ್ಸ್ ಗಳ ಕುರಿತು ಮುತುವರ್ಜಿಯನ್ನು ವಹಿಸುವುದೂ ಅತ್ಯಾವಶ್ಯಕವಾಗಿದೆ.

 

13_1  H x W: 0  
 ಪಿ. ಜಗದೀಶ್
 ಹೆಡ್, ಕ್ವಾಲಿಟಿ ಮ್ಯಾನೆಜ್ಮೆಂಟ್,
 ಲೀಭರ್ ಮಶಿನ್ ಟೂಲ್ಸ್ ಇಂಡಿಯಾ ಪ್ರೈ.ಲಿ. 
 9741309223
 p.jagadeesh@liebherr.com
ಪಿ. ಜಗದೀಶ್ ಇವರು ಬೆಂಗಳೂರಿನ ಆರ್. ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಪದವಿಯನ್ನು ಪಡೆದಿದ್ದಾರೆ. ಅವರು ವಿಡಿಯಾ ಇಂಡಿಯಾ ಲಿ. ನಲ್ಲಿ ಎಸ್.ಪಿ.ಎಮ್. ಟೂಲ್ಸ್ ವಿಭಾಗದಲ್ಲಿ ಸುಮಾರು 15 ವರ್ಷಗಳ ಕಾಲಾವಧಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಲೀಭರ್ ಮಶಿನ್ ಟೂಲ್ಸ್ ಇಂಡಿಯಾ ಪ್ರೈ. ಲಿ. ಎಂಬ ಕಂಪನಿಯಲ್ಲಿ ಅವರು ಕಳೆದ 12 ವರ್ಷಗಳಿಂದ ಕ್ವಾಲಿಟಿ ಮ್ಯಾನೆಜ್ ಮೆಂಟ್ ವಿಭಾಗದಲ್ಲಿ ಪ್ರಮುಖರಾಗಿ ಕಾರ್ಯನಿರತರಾಗಿದ್ದಾರೆ.
Powered By Sangraha 9.0