ಪ್ರತಿಯೊಬ್ಬ ಬಳಕೆಗಾರರು ಗಿಯರ್ ಬಾಕ್ಸ್ ಅಂದರೆ ಮುಚ್ಚಿರುವ ಮತ್ತು ಚೊಕ್ಕದಾದ ಪೆಟ್ಟಿಗೆ ಎಂದು ತಿಳಿಯುತ್ತಾರೆ. ಈ ಪೆಟ್ಟಿಗೆಯು ಎಲ್ಲ ರೀತಿಯ ಉತ್ಪಾದನೆಗಳನ್ನು ಮಾಡುವಂತಹ ಕೈಗಾರಿಕೋದ್ಯಮಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಮುಖ ಮೆಕ್ಯಾನಿಕಲ್ ಚಟುವಟಿಕೆಗಳನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿನ ತನಕ ಸಹಜವಾಗಿ ಸ್ಥಳಾಂತರಿಸುವಾಗ ಅಪೇಕ್ಷಿಸಿರುವ ಬೇರೆ ಬೇರೆ ವೇಗ ಮತ್ತು ಟಾರ್ಕ್ ಪಡೆಯಲು ಗಿಯರ್ ಬಾಕ್ಸ್ ಬಳಸಲಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮೆಕ್ಯಾನಿಕಲ್ ಚಟುವಟಿಗೆಗಳನ್ನು ಸಹಜವಾಗಿ ಮತ್ತು ನಿರಂತರವಾಗಿ ಸ್ಥಳಾಂತರಿಸುವ ಯಂತ್ರಣೆ (ಸ್ಮೂಥ್ ಎಂಡ್ ಸೀಮ್ ಲೆಸ್ ಶಿಫ್ಟಿಂಗ್ ಮೆಕ್ಯಾನಿಸಮ್) ಎಂಬುದಾಗಿ ವರ್ಣಿಸಲಾಗುತ್ತದೆ.
ಗಿಯರ್ ಬಾಕ್ಸ್ ನ ಕೆಲಸ ಮತ್ತು ಉದ್ದೇಶ
⦁ ಟಾರ್ಕ್ ಮತ್ತು ವೇಗದ ಆವಶ್ಯಕತೆಯನ್ನು ಪೂರ್ತಿ ಮಾಡುವುದು : ಇಲೆಕ್ಟ್ರಿಕ್ ಮೋಟರ್ ಅಥವಾ ಇಂಟರ್ನಲ್ ಕಂಬಶ್ಚನ್ ಇಂಜಿನ್ ನ ಮಿತಿಗಳಿಂದಾಗಿ ವೇಗವನ್ನು ಕಡಿಮೆ ಮಾಡಿ ಔಟ್ ಪುಟ್ ಶಾಫ್ಟ್ ನಲ್ಲಿ ಮಶಿನ್ ನ ಆವಶ್ಯಕತೆಗೆ ತಕ್ಕಂತೆ ಟಾರ್ಕ್ ಹೆಚ್ಚಿಸಲು ಗಿಯರ್ ಬಾಕ್ಸ್ ಬಳಸಲಾಗುತ್ತದೆ. ಈ ರೀತಿ ಮಾಡಿದ್ದರಿಂದ ಮೆಕ್ಯಾನಿಕಲ್ ಅಡ್ ವಾಂಟೇಜ್ ಸಿಗುತ್ತದೆ ಮತ್ತು ಇಂಜಿನ್ ಅಥವಾ ಮೋಟರ್ ನ ಮೇಲಿರುವ ಭಾರವು ಕಡಿಮೆ ಆಗಿ ವೇಗವನ್ನು ಹೆಚ್ಚಿಸುವುದೂ ಗಿಯರ್ ಬಾಕ್ಸ್ ನ ಬಳಕೆಯಿಂದಾಗಿ ಸಾಧ್ಯ. ವಾಹನಗಳಲ್ಲಿ ಬಳಸಲಾಗುವ ಗಿಯರ್ ಬಾಕ್ಸ್ ನಲ್ಲಿ ಅನೇಕ ಗಿಯರ್ ರೇಶೋಗಳಲ್ಲಿ ಒಂದನ್ನೇ ಆಯ್ಕೆ ಮಾಡಬೇಕಾಗುತ್ತದೆ. ಇದರಿಂದಾಗಿ ಹೆಚ್ಚು ನಿಯಂತ್ರಣೆ, ಹೆಚ್ಚು ವೇಗ, ಉಚ್ಚಮಟ್ಟದ ಎಕ್ಸಿಲರೇಶನ್, ಇಂಧನದ ಬಳಕೆಯಲ್ಲಿ ಉಳಿತಾಯ ಮತ್ತು ಕೊನೆಯದಾಗಿ ಇಂಜಿನ್ ನ ಬಾಳಿಕೆಯೂ ಹೆಚ್ಚು ಸಿಗುತ್ತದೆ.
⦁ ಔಟ್ ಪುಟ್ ಶಾಫ್ಟ್ ನ ದಿಕ್ಕನ್ನು ಬದಲಾಯಿಸುವುದು ಅಥವಾ ಸರಿಯಾಗಿ ಅಳವಡಿಸುವುದು : ಗಿಯರ್ ಬಾಕ್ಸ್ ಬಳಸಿ ಇನ್ ಪುಟ್ ಶಾಫ್ಟ್ ತಿರುಗುವ ದಿಕ್ಕನ್ನು ಸಮಾನವಾಗಿಟ್ಟು ಔಟ್ ಪುಟ್ ಶಾಫ್ಟ್ ನ ತಿರುಗುವ ದಿಕ್ಕನ್ನು ಬದಲಾಯಿಸುವುದು ಸಾಧ್ಯವಿದೆ. ಇದರಿಂದಾಗಿ ಅದೇ ಗಿಯರ್ ಬಾಕ್ಸ್ ನೊಂದಿಗೆ ಶಿಫ್ಟರ್ ಯಂತ್ರಣೆಯನ್ನು ಬಳಸಿ ಔಟ್ ಪುಟ್ ಶಾಫ್ಟ್ ಗೆ ಗಡಿಯಾರದ ಮುಳ್ಳಿನ ಸುತ್ತುವಿಕೆಯ ದಿಕ್ಕಿನಂತೆ ಮತ್ತು ಅದರ ವಿರುದ್ಧ ದಿಕ್ಕಿನಲ್ಲಿ ತಿರುಗಿಸುವುದು ಅಥವಾ ಶಾಫ್ಟ್ ಹಿಂದೆ- ಮುಂದೆ ಮಾಡುವ ಪ್ರಕ್ರಿಯೆಯು ಸುಲಭವಾಗುತ್ತದೆ.
⦁ ಪಾಸಿಟಿವ್ ಡ್ರೈವ್ ಕೊಡುವುದು : ಯಾವುದೇ ಗಿಯರ್ ನಲ್ಲಿರುವ ಹಲ್ಲುಗಳು ಗಿಯರ್ ಟ್ರೇನ್ ನಲ್ಲಿರುವ ಮುಂದಿನ ಗಿಯರ್ ನೊಂದಿಗೆ ಹೊಂದಿಕೊಂಡು ಒಂದಕ್ಕೊಂದರಲ್ಲಿ ಸಿಲುಕಿದ್ದರಿಂದ ಗಿಯರ್ ಸ್ಲಿಪ್ ಆಗಲಾರದು. ಬೆಲ್ಟ್ ಅಥವಾ ಹಗ್ಗ ಮತ್ತು ಪುಲ್ಲಿ ಯಂತ್ರಣೆ, ಟಾರ್ಕ್ ಕನ್ವರ್ಟರ್ ಇಂತಹ ಟ್ರಾನ್ಸ್ ಮಿಶನ್ ನ ಇನ್ನಿತರ ಪರ್ಯಾಯಗಳನ್ನು ಬಳಸಿದಲ್ಲಿ ಅದರಲ್ಲಿ ಸ್ಲಿಪ್ ಆಗುವುದು ಮತ್ತು ಅದರಿಂದಾಗಿ ಔಟ್ ಪುಟ್ ನಲ್ಲಿ ಪರಿಣಾಮ ಬೀರುವುದೂ ಸಾಧ್ಯ. ನಿಖರವಾದ ವೇಗದ ಗುಣಾಕಾರಗಳ ಆವಶ್ಯಕತೆ ಇರುವಲ್ಲಿ ಪ್ರಿಸಿಶನ್ ಮಶಿನ್ ನಲ್ಲಿ, ಗಿಯರ್ ಡ್ರೈವ್ ಹೆಚ್ಚು ವಿಶ್ವಾಸಾರ್ಹವಾಗಿರುತ್ತದೆ.
⦁ ಅಚ್ಚುಕಟ್ಟಾದ ಆಕಾರದೊಂದಿಗೆ ದೃಢವಾದ ತಯಾರಿಕೆ : ಇನ್ನಿತರ ಟ್ರಾನ್ಸ್ ಮಿಶನ್ ಗಳನ್ನು ಹೋಲಿಸಿದಲ್ಲಿ ಗಿಯರ್ ಬಾಕ್ಸ್ ಗೆ ಕಡಿಮೆ ಜಾಗ ಸಾಕಾಗುತ್ತದೆ. ಹಾಗೆಯೇ ಗಿಯರ್ ಬಾಕ್ಸ್ ದೃಢ ಮತ್ತು ಕಡಿಮೆ ಭಾರವುಳ್ಳ ಗಿಯರ್ ಬಾಕ್ಸ್ ತಯಾರಿಸುವುದು ಸಾಧ್ಯ. ಆದ್ದರಿಂದ ಎಲ್ಲಿ ಸೀಮಿತವಾಗಿ ಉಪಲಬ್ಧವಿರುವ ಜಾಗ, ಕಡಿಮೆ ಭಾರದ ರಚನೆ ಮತ್ತು ದೊಡ್ಡ ಶಕ್ತಿಯ ಟ್ರಾನ್ಸ್ ಮಿಶನ್ ಮಾಡುವ ಆವಶ್ಯಕತೆ ಇರುತ್ತದೆಯೋ, ಅಂತಹ ಮಶಿನ್ ಗಳಿಗೆ ಗಿಯರ್ ಬಾಕ್ಸ್ ಎಲ್ಲಕ್ಕಿಂತಲೂ ಸೂಕ್ತವಾಗಿದೆ.
⦁ ನಿರ್ವಹಣೆ ಕಡಿಮೆ : ಶುಚಿತ್ವಕ್ಕೆ ಸುಲಭವಾದ ಸೌಲಭ್ಯಗಳು, ಯೋಗ್ಯವಾದ ಲುಬ್ರಿಕಂಟ್ ಮತ್ತು ಕೂಲಿಂಗ್ ತಂತ್ರಗಳಿರುವ, ಹಾಗೆಯೇ ನಿರ್ವಹಣೆಯ ಆವಶ್ಯಕತೆ ಕಡಿಮೆ ಇರುವ ಗಿಯರ್ ಬಾಕ್ಸ್ ನ ರಚನೆಯನ್ನು ಮಾಡುವುದು ಸಾಧ್ಯ.
⦁ ವಿಶ್ವಾಸಪೂರ್ಣ ಆಪರೇಶನ್ : ಮೇಲೆ ತಿಳಿಸಿದಂತೆ ಒಂದು ಗಿಯರ್ ಪ್ರಣಾಳಿಕೆಯು ಯಾವಾಗಲೂ ನಿರ್ಧಾರಿತ ವೇಗದ ಗುಣಾಕಾರವಿರುವ ಪಾಸಿಟಿವ್ ಡ್ರೈವ್ ನೀಡುತ್ತದೆ. ಹೆಚ್ಚು ದೃಢವಾದ ಬಲದಿಂದಾಗಿ ಇವುಗಳನ್ನು ಸ್ಥಳಾಂತರಿಸುವುದೂ ಸುಲಭವಾಗಿದೆ. ಹಾಗೆಯೇ ಗಿಯರ್ ಎಷ್ಟು ಸಲ ತಿರುಗಬಹುದು ಎಂಬ ಸಂಖ್ಯೆಯನ್ನು ಸಹಜವಾಗಿ ನಿಯಂತ್ರಿಸಲಾಗುತ್ತದೆ. ಇನ್ ಪುಟ್ ಮತ್ತು ಔಟ್ ಪುಟ್ ನಲ್ಲಿ ಉಚ್ಚಮಟ್ಟದ ಗುಣಾಕಾರವನ್ನು ಕಾಪಾಡುವುದು ಸಹಜವಾಗಿ ಸಾಧ್ಯವಾಗುತ್ತದೆ. ಇದರಿಂದಾಗಿ ವಿಶ್ವಾಸಪೂರ್ಣವಾದ ಕೆಲಸವನ್ನು ನಿರ್ವಹಿಸಬಹುದಾಗಿದೆ.
⦁ ಶಬ್ದವೂ ಕಡಿಮೆ : ಸರ್ಫೇಸ್ ಫಿನಿಶ್ ಉಚ್ಚಮಟ್ಟದಲ್ಲಿಟ್ಟು ಗಿಯರ್ ನಲ್ಲಿರುವ ಶಬ್ದವನ್ನು ಕಡಿಮೆ ಮಾಡುವುದು ಸಾಧ್ಯ. ಪಿಚ್, ಟೂಥ್ ಪ್ರೊಫೈಲ್, ರನ್ ಔಟ್ ಮತ್ತು ಲೀಡ್ ಇವುಗಳಲ್ಲಿರುವ ಕೊರತೆಯನ್ನು ಕಡಿಮೆ ಮಾಡಿ ಉಚ್ಚಮಟ್ಟದ ನಿಖರತೆನ್ನು ಕಾಪಾಡಲಾಗುತ್ತದೆ. ಗ್ರೈಂಡಿಂಗ್, ಲ್ಯಾಪಿಂಗ್ ಮತ್ತು ಶೇವಿಂಗ್ ಈ ಪ್ರಕ್ರಿಯೆಗಳಿಂದಾಗಿ ಹಲ್ಲುಗಳ ಸರ್ಫೇಸ್ ಗುಣಮಟ್ಟವು ಸುಧಾರಿಸುತ್ತದೆ. ಗಿಯರ್ ಗೋಸ್ಕರ ಯೋಗ್ಯವಾದ ಲುಬ್ರಿಕಂಟ್ ಆಯ್ಕೆ ಮಾಡುವುದರಿಂದ ಶಬ್ದವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.
⦁ ಆಪ್ಟಿಮೈಜ್ಡ್ ಕಾರ್ಯಸಾಮರ್ಥ್ಯ : ಹಲ್ಲುಗಳ ಜಾಮೆಟ್ರಿ, ಸರ್ಫೇಸ್ ಫಿನಿಶ್, ಬಳಸಲಾಗುವ ಬೇರಿಂಗ್ ಮತ್ತು ಲುಬ್ರಿಕಂಟ್ ಇವುಗಳಿಂದಾಗಿ ಗಿಯರ್ ಡ್ರೈವ್ ನ ಪ್ರಣಾಳಿಕೆಯ ಕಾರ್ಯಸಾಮರ್ಥ್ಯದಲ್ಲಿ ಪರಿಣಾಮವನ್ನು ಉಂಟುಮಾಡುತ್ತದೆ. ಈ ಘಟಕಗಳಲ್ಲಿ ಸುಧಾರಣೆಯನ್ನು ಮಾಡಿದ್ದರಿಂದ ಕಾರ್ಯಸಾಮರ್ಥ್ಯವು ಹೆಚ್ಚಾಗುತ್ತದೆ. ಯೋಗ್ಯ ರೀತಿಯ ಸೀಲಿಂಗ್ ಬಳಸಿದ್ದರಿಂದ ಗಿಯರ್ ಬಾಕ್ಸ್ ನಲ್ಲಿ ಯಾವುದೇ ಕಲ್ಮಶ, ಧೂಳು ಇತ್ಯಾದಿಗಳು ಸೇರುವುದನ್ನು ತಡೆಯುತ್ತದೆ. ಗಿಯರ್ ಬಾಕ್ಸ್ ನಿಂದ ಸೊರುವಿಕೆಯಾಗುವುದಿಲ್ಲ ಮತ್ತು ಇದರಿಂದಾಗಿ ಕಾರ್ಯಸಾಮರ್ಥ್ಯ ಸುಧಾರಿಸುತ್ತದೆ.
⦁ ಬ್ಯಾಕ್ ಲ್ಯಾಶ್ : ಒಂದರಲ್ಲೊಂದು ಹೊಂದಾಣಿಕೆಯಾಗುವ ಎರಡು ಹಲ್ಲುಗಳ ನಡುವೆ ಲುಬ್ರಿಕಂಟ್ ನ ತೆಳ್ಳಗಿನ ಸ್ತರವು (ಲೇಯರ್) ಸೇರಬಹುದಾದಷ್ಟು ಜಾಗವನ್ನು ಪೂರೈಸಲು ಇರುವ ಕ್ಲಿಯರನ್ಸ್ ಗೆ ಬ್ಯಾಕ್ ಲ್ಯಾಶ್ ಎಂದು ಹೇಳುತ್ತಾರೆ. ಇದರಿಂದಾಗಿ ಉಷ್ಣಾಂಶವು ಹೆಚ್ಚಾಗುವುದು ಮತ್ತು ಹಲ್ಲುಗಳು ಹಾಳಾಗುವುದನ್ನು ತಡೆಯಲಾಗುತ್ತದೆ. ಹೈ ಪ್ರಿಸಿಶನ್ ಗಿಯರ್ ಅಪ್ಲಿಕೇಶನ್ ನ ಚಟುವಟಿಕೆಯಲ್ಲಿ ಕಡಿಮೆ ಅಥವಾ ಸೊನ್ನೆ ಬ್ಯಾಕ್ ಲ್ಯಾಶ್ ಅತ್ಯಾವಶ್ಯಕವಾಗಿರುತ್ತದೆ. ಬ್ಯಾಕ್ ಲ್ಯಾಶ್ ಕಡಿಮೆ ಮಾಡಲು ಅಥವಾ ತೆಗೆದು ಹಾಕಲು ಸ್ಟೆಟಿಕ್ ಮತ್ತು ಡೈನೆಮಿಕ್ ಎಂಬ ಎರಡು ರೀತಿಗಳಿವೆ. ಸ್ಟೆಟಿಕ್ ನಲ್ಲಿ ಗಿಯರ್ ನ ಅಸೆಂಬ್ಲಿಯ ಪ್ರಕ್ರಿಯೆ ಮತ್ತು ನಂತರ ಬೇಕಾಗಿರುವ ಕಡಿಮೆ ಬ್ಯಾಕ್ ಲ್ಯಾಶ್ ಪಡೆಯಲು ಯೋಗ್ಯರೀತಿಯಲ್ಲಿ ಸರಿಹೊಂದಾಣಿಕೆಯನ್ನು ಮಾಡುವುದು ಇದರಲ್ಲಿರುತ್ತದೆ. ಡೈನೆಮಿಕ್ ರೀತಿಯಲ್ಲಿ ಒಂದು ಹೊರಗಿನ ಬಲವನ್ನು ಬಳಸಿ ರೊಟೇಶನಲ್ ಪೊಸಿಶನ್ ನಲ್ಲಿ ಅವಲಂಬಿಸಿರದೇ ಎಲ್ಲ ಬ್ಯಾಕ್ ಲ್ಯಾಶ್ ಗಳನ್ನು ನಿರಂತರವಾಗಿ ನೀಗಿಸಲಾಗುತ್ತದೆ.
ಔದ್ಯೋಗಿಕ ಗಿಯರ್ ಬಾಕ್ಸ್ ಗಳ ವಿಧಗಳು
ಔದ್ಯೋಗಿಕ ಗಿಯರ್ ಬಾಕ್ಸ್ ಇದೊಂದು ಮುಚ್ಚಲ್ಪಟ್ಟಿರುವ ಪ್ರಣಾಳಿಕೆಯಾಗಿದೆ. ಇದು ಔಟ್ ಪುಟ್ ಡಿವೈಸ್ ನೆಡೆಗೆ ಯಾಂತ್ರಿಕವಾದ ಎನರ್ಜಿಯನ್ನು ಪ್ರಸಾರಿಸುತ್ತದೆ. ಎನರ್ಜಿಯನ್ನು ಬಳಸಲು ಯೋಗ್ಯ ಸ್ಥಿತಿಯಲ್ಲಿ ರೂಪಾಂತರಿಸಲು ಅದರ ವೇಗ, ಟಾರ್ಕ್ ಮತ್ತು ಇನ್ನಿತರ ಗುಣಧರ್ಮಗಳು ಗಿಯರ್ ಬಾಕ್ಸ್ ಸುಧಾರಿಸಬಲ್ಲವು. ಗಿಯರ್ ಬಾಕ್ಸ್ ಗಳ ಬಳಕೆಯನ್ನು ವಿವಿಧ ಉಪಕರಣೆಗಳಲ್ಲಿ ಅನೇಕ ಉದ್ದೇಶಗಳಿಗೆ ಮಾಡಲಾಗುತ್ತದೆ. ಈ ಯಂತ್ರಣೆ, ಹೆಚ್ಚು ಟಾರ್ಕ್ ಪಡೆಯುವಲ್ಲಿ ವೇಗವನ್ನು ಕಡಿಮೆ ಮಾಡುತ್ತದೆ. ಔದ್ಯೋಗಿಕ ಗಿಯರ್ ಬಾಕ್ಸ್ ನಲ್ಲಿ ಅನೇಕ ವಿಧಗಳಲ್ಲಿ ಮತ್ತು ಸಾಮಾನ್ಯ ರೀತಿಯಲ್ಲಿ ಹೇಗೆ ಬಳಸಲಾಗುತ್ತವೆ, ಎಂಬುದನ್ನು ತಿಳಿದುಕೊಳ್ಳೋಣ.
ಹೆಲಿಕಲ್ ಗಿಯರ್ ಬಾಕ್ಸ್
ಹೆಲಿಕಲ್ ಗಿಯರ್ ಬಾಕ್ಸ್ ನಲ್ಲಿ (ಚಿತ್ರ ಕ್ರ. 1) ಬಳಸಲಾಗುವ ಗಿಯರ್ ಹೆಲಿಕಲ್ ವಿಧದಲ್ಲಿರುತ್ತವೆ. ರೊಟೇಶನ್ ನ ಅಕ್ಷದೊಂದಿಗೆ ವಿಶಿಷ್ಟ ಕೋನದಲ್ಲಿ ಈ ಗಿಯರ್ ಕತ್ತರಿಸಲಾಗುತ್ತದೆ. ಈ ಕೋನವನ್ನು ಹೆಲಿಕ್ಸ್ ಕೋನ ಎಂದು ಗುರುತಿಸಲಾಗುತ್ತದೆ. ಈ ವ್ಯವಸ್ಥೆಯಿಂದಾಗಿ ಹಲ್ಲುಗಳು ಪರಸ್ಪರ ಹೆಚ್ಚು ಹಂತ-ಹಂತಗಳಲ್ಲಿ ಮತ್ತು ಪ್ರತ್ಯೇಕವಾಗಿ ಸಂಪರ್ಕವನ್ನು ಹೊಂದುತ್ತವೆ. ಹೆಲಿಕಲ್ ಗಿಯರ್ ಬಾಕ್ಸ್ ಹೆಚ್ಚು ಬಾಳಿಕೆ ಉಳ್ಳದ್ದು ಮತ್ತು ಉಚ್ಚಮಟ್ಟದ ಭಾರವಿರುವ ಅಪ್ಲಿಕೇಶನ್ ಗೋಸ್ಕರ ಸೂಕ್ತವಾಗಿರುತ್ತವೆ. ಸಮಾನಾಂತರ ಅಥವಾ ಎದುರು-ಬದುರಾಗಿರುವ ಶಾಫ್ಟ್ ನಲ್ಲಿ ವೇಗ ಮತ್ತು ಬಲ ಪ್ರಸರಣೆ ಮಾಡುವ ಸಾಮರ್ಥ್ಯವು ಇರುತ್ತದೆ.
ಹೆಲಿಕಲ್ ಗಿಯರ್ ಬಾಕ್ಸ್ ಕಡಿಮೆ ಬಲವನ್ನು ಬಳಸುತ್ತದೆ ಮತ್ತು ಅದರ ಗಾತ್ರವೂ ಅಚ್ಚುಕಟ್ಟಾಗಿರುತ್ತದೆ. ಇದನ್ನು ಔದ್ಯೋಗಿಕ ಅಪ್ಲಿಕೇಶನ್ ಗಳಲ್ಲಿ, ವಿಶೇಷವಾಗಿ ಓವರ್ ಹೆಡ್ ಕ್ರೇನ್ ಗಿಯರ್ ಬಾಕ್ಸ್, ಮಟೀರಿಯಲ್ ಹ್ಯಾಂಡಲಿಂಗ್ ಉಪಕರಣೆಗಳು ಇಂತಹ ಕಠಿಣಕೆಲಸಗಳಲ್ಲಿ, ಹಾಗೆಯೇ ಕ್ರಶರ್, ಎಕ್ಸ್ ಟ್ರೂಡರ್ ಮತ್ತು ಕನ್ವೆಯರ್ ಇಂತಹ ಕಡಿಮೆ ಬಲವಿರುವ ಅಪ್ಲಿಕೇಶನ್ ಗಳಲ್ಲಿಯೂ ಬೃಹತ್ ಪ್ರಮಾಣದಲ್ಲಿ ಬಳಸಲಾಗುತ್ತದೆ.
ಕೋ-ಎಕ್ಸಿಯಲ್ ಹೆಲಿಕಲ್ ಇನ್ ಲೈನ್
ಕೋ-ಎಕ್ಸಿಯಲ್ ಹೆಲಿಕಲ್ ಗಿಯರ್ ಬಾಕ್ಸ್ ಹಗುರ ಹಾಗೆಯೇ ಭಾರವುಳ್ಳ ಅಪ್ಲಿಕೇಶನ್ ಗಳಿಗೋಸ್ಕರ ಯೋಗ್ಯವಾಗಿದೆ. ಹಾಗೆಯೇ ಅವುಗಳು ಅಚ್ಚುಕಟ್ಟಾಗಿರುತ್ತವೆ. ಇನ್ ಪುಟ್ ಮತ್ತು ಔಟ್ ಪುಟ್ ಶಾಫ್ಟ್ ಒಂದೇ ರೇಖೆಯಲ್ಲಿ (ಇನ್ ಲೈನ್) ಇರುತ್ತವೆ, ಅಲ್ಲಿ ಇದನ್ನು ಬಳಸಲಾಗುತ್ತದೆ. ತುಂಬಾ ಹೆಚ್ಚು ಕಾರ್ಯ ಸಾಮರ್ಥ್ಯ, ಅತ್ಯಂತ ಉಚ್ಚಮಟ್ಟದ ಬಲದ ಡೆನ್ಸಿಟಿ, ಉಚ್ಚಮಟ್ಟದ ಟ್ರಾನ್ಸ್ ಮಿಶನ್ ಗುಣಾಕಾರ ಮತ್ತು ಅಪ್ಪಿಕೇಶನ್ ನ ವಿಸ್ತಾರವಾದ ಶ್ರೇಣಿ ಇವೆಲ್ಲವೂ ಈ ಗಿಯರ್ ಬಾಕ್ಸ್ ನ ವೈಶಿಷ್ಟ್ಯಗಳಾಗಿವೆ. ಹಾಗೆಯೇ ಪ್ಲಾಂಜ್ ನ ಸಹಾಯದಿಂದ ಈ ಗಿಯರ್ ಬಾಕ್ಸ್ ನಲ್ಲಿ ಮೋಟರ್ ಅಳವಡಿಸುವುದು ಅಥವಾ ಜೋಡಿಸುವುದು ತುಂಬಾ ಸುಲಭವಾಗಿದೆ.
ಬೆವೆಲ್ ಗಿಯರ್ ಬಾಕ್ಸ್ಈ ವಿಧದ ಗಿಯರ್ ಬಾಕ್ಸ್ ನ ವೈಶಿಷ್ಟ್ಯಗಳೆಂದರೆ ಯುನಿಟ್ ನ ಬದಿಗಳಲ್ಲಿರುವ ಶಂಕುವಿನ ಆಕಾರದ ಸರ್ಫೇಸ್ ನಲ್ಲಿರುವ ಓರೆಯಾಗಿರುವ ಹಲ್ಲುಗಳ ಜೊತೆ. ಬೆವೆಲ್ ಗಿಯರ್ ಬಾಕ್ಸ್ ನಾನ್ ಪ್ಯಾರಲಲ್ ಶಾಫ್ಟ್ ನಲ್ಲಿ ಗೋಲಾಕಾರವಾಗಿ ತಿರುಗುವ (ರೋಟರಿ) ಚಟುವಟಿಕೆಗಳನ್ನು ನೀಡಲು ಬಳಸಲಾಗುತ್ತದೆ. ಬೆವೆಲ್ ಗಿಯರ್ ಬಾಕ್ಸ್ ನಲ್ಲಿ ಮೂರು ಪ್ರಮುಖವಾದ ವಿಧಗಳಿವೆ.
⦁
ನೇರವಾದ (ಸ್ಟ್ರೇಟ್) ಬೆವೆಲ್ ಗಿಯರ್ ಬಾಕ್ಸ್ (ಚಿತ್ರ ಕ್ರ. 2) : ಇದರಲ್ಲಿ ಗಿಯರ್ ನ್ನು ತಿರುಗುವ ಅಕ್ಷದ ನೇರ ರೇಖೆಯಲ್ಲಿ ಕತ್ತರಿಸಲಾಗಿರುತ್ತದೆ. ಇಂಜಿನ್, ಹಡಗು, ವಾಹನಗಳು, ಮುದ್ರಣದ ಮಶಿನ್, ಕೂಲಿಂಗ್ ಟಾವರ್, ಎನರ್ಜಿ ಪ್ರೊಜೆಕ್ಟ್ಸ್, ಸ್ಟೀಲ್ ಪ್ಲಾಂಟ್, ರೈಲ್ವೆ ಟ್ರೇಕ್ ನ ತಪಾಸಣೆಯ ಮಶಿನ್ ಇಂತಹ ಕಡೆಗಳಲ್ಲಿ ಇದನ್ನು ಬಳಸಲಾಗುತ್ತದೆ.
ಸ್ಪೈರಲ್ ಬೆವೆಲ್ ಗಿಯರ್ ಬಾಕ್ಸ್ (ಚಿತ್ರ ಕ್ರ. 3) : ಇದರಲ್ಲಿ ಗಿಯರ್ ನ್ನು ತಿರುಗುವ ಅಕ್ಷದೊಂದಿಗೆ ವಿಶಿಷ್ಟವಾದ ಕೋನದಲ್ಲಿ ಕತ್ತರಿಸಲಾಗಿರುತ್ತದೆ. ಇದರಲ್ಲಿ ಉಚ್ಚಮಟ್ಟದ ವೇಗ ಮತ್ತು ಉಚ್ಚಮಟ್ಟದ ಟಾರ್ಕ್ ಬಲದ ಅಗತ್ಯವಿರುವ ಅಪ್ಲಿಕೇಶನ್ ಗಳಿಗೋಸ್ಕರ ಸ್ಪೈರಲ್ ಬೆವೆಲ್ ಗಿಯರ್ ಡಿಸೈನ್ ಮಾಡಲಾಗಿರುತ್ತದೆ. ಉದಾಹರಣೆ, ಏರೋಸ್ಪೇಸ್, ಸ್ಪೇಶಲ್ ಸ್ಟೀಲ್ ಮತ್ತು ಪ್ರಕ್ರಿಯೆ, ಪ್ರೀ ಹೀಟರ್ ಗಿಯರ್ ಬಾಕ್ಸ್ ಇತ್ಯಾದಿ.
⦁ ಹೈಪೊಯ್ಡ್ ಬೆವೆಲ್ ಗಿಯರ್ ಬಾಕ್ಸ್ (ಚಿತ್ರ ಕ್ರ. 4) : ಇದರಲ್ಲಿ ಗಿಯರ್ ನ್ನು ನಿರ್ಧಾರಿತ ಕೋನದಲ್ಲಿಯೇ ಕತ್ತರಿಸಲಾಗುತ್ತದೆ ಮತ್ತು ಲೊಕೇಟಿಂಗ್ ಸೆಂಟರ್ ನ ದೂರವನ್ನು ಪರಸ್ಪರ ವಿಶಿಷ್ಟ ಉದ್ದದಲ್ಲಿ ಆಫ್ ಸೆಟ್ ಮಾಡಲಾಗುತ್ತದೆ. ಇದನ್ನು ಸಿಮೆಂಟ್ ಉದ್ಯಮ, ಆಟೊಮೋಟಿವ್ ಡ್ರೈವ್ ಸಿಸ್ಟಮ್ ನಲ್ಲಿ ಡಿಫರನ್ಶಿಯಲ್ ಗಿಯರ್ ನಲ್ಲಿ ಬಳಸಲಾಗುತ್ತದೆ.
ವರ್ಮ್ ರಿಡಕ್ಷನ್ ಗಿಯರ್ ಬಾಕ್ಸ್ (ಚಿತ್ರ ಕ್ರ. 5)
ವರ್ಮ್ ರಿಡಕ್ಷನ್ ಗಿಯರ್ ಬಾಕ್ಸ್ ಹೆವಿ ಕೆಲಸಗಳಲ್ಲಿ ಬಳಸಲಾಗುತ್ತದೆ. ಹಾಯ್ದು ಹೋಗದಿರುವ, ಪರಸ್ಪರ ದಾಟಿದಿರುವ (ಕ್ರಾಸ್) ಅಕ್ಷದಲ್ಲಿ ವೇಗವನ್ನು ಕಡಿಮೆ ಮಾಡುವ ಪರಿಸ್ಥಿತಿಯು ಇರುವಾಗ ವರ್ಮ್ ಗಿಯರ್ ಬಾಕ್ಸ್ ಬಳಸಲಾಗುತ್ತದೆ. ಈ ವಿಧದ ಔದ್ಯೋಗಿಕ ಗಿಯರ್ ಬಾಕ್ಸ್ ನಲ್ಲಿ ಒಂದೇ ವರ್ಮ್ ವ್ಹೀಲ್ ನ ವ್ಯಾಸವು ದೊಡ್ಡದಾಗಿರುತ್ತದೆ. ಗಿಯರ್ ಬಾಕ್ಸ್ ನ ಸುತ್ತಳತೆಯಲ್ಲಿ ಹಲ್ಲುಗಳೊಂದಿಗೆ ವರ್ಮ್ ಅಥವಾ ಸ್ಕ್ರೂ ಅಳವಡಿಸಿ ಸಿಲುಕುತ್ತದೆ. ವರ್ಮ್ ನ ತಿರುಗುವ ಸ್ಕ್ರೂ ನಂತಹ ಚಟುವಟಿಗೆಗಳಿಂದಾಗಿ ವೀಲ್ ಕೂಡಾ ಅದೇ ರೀತಿಯ ಚಟುವಟಿಕೆಯನ್ನು ಮಾಡುತ್ತದೆ. ಇದರಲ್ಲಿ ಹೆಚ್ಚಾಗಿ ಔದ್ಯೋಗಿಕ ಗಿಯರ್ ಬಾಕ್ಸ್ ರಸಗೊಬ್ಬರಗಳು, ರಾಸಾಯನಿಕ ಪದಾರ್ಥಗಳು ಮತ್ತು ಖನಿಜಗಳಂತಹ ಭಾರಿ ಉದ್ಯಮಗಳಲ್ಲಿ ಬಳಸಲಾಗುತ್ತದೆ.
ಪ್ಲೆನೆಟರಿ ಗಿಯರ್ ಬಾಕ್ಸ್ (ಚಿತ್ರ ಕ್ರ. 6) ಪ್ಲೆನೆಟರಿ ಗಿಯರ್ ಬಾಕ್ಸ್ ದೃಢತೆ, ನಿಖರತೆ ಮತ್ತು ವಿಭಿನ್ನ ಕೆಲಸಗಳಿಗೋಸ್ಕರ ಹೆಸರುವಾಸಿಯಾಗಿದ್ದು ಅದರ ನಿರ್ದೋಷತ್ವವೂ ಉಲ್ಲೇಖಿಸುವಂತಿದೆ. ಈ ವಿಧದ ಗಿಯರ್ ಬಾಕ್ಸ್ ನಿಂದಾಗಿ ಸಾಮಗ್ರಿಗಳ ಬಾಳಿಕೆಯನ್ನು ಮತ್ತು ಆಪ್ಟಿಮೈಜ್ಡ್ ಚಟುವಟಿಕೆಯೂ ಲಭಿಸುತ್ತದೆ. ಪ್ಲೆನೆಟರಿ ಗಿಯರ್ ಬಾಕ್ಸ್ ಒಂದು ದೃಢವಾಗಿರುವ ಟೊಳ್ಳು ಮತ್ತು ಫ್ಲಂಜ್, ಶಾಫ್ಟ್ ಅಥವಾ ಬಿರುಕಿನಂತಹ ಅನೇಕ ಮೌಂಟಿಂಗ್ ನ ಪರ್ಯಾಯಗಳಲ್ಲಿ ಉಪಲಬ್ಧವಿವೆ. ಇದರ ಡಿಸೈನ್ ಕಡಿಮೆ ಜಾಗದಲ್ಲಿಯೂ ಅಳವಡಿಸಲ್ಪಡುವಂತೆ ಅಚ್ಟುಕಟ್ಟಾಗಿ ಇರುವುದರಿಂದ ಅದನ್ನು ವೀಲ್ ಹಬ್ ಡ್ರೈವ್ ನಲ್ಲಿ ಬಳಸಲಾಗುತ್ತದೆ. ಇದರ ಹೊರತಾಗಿಲ ಇದನ್ನು ಸಕ್ಕರೆ ಉದ್ಯಮದ ಮಶಿನ್ ಗಳು, ಹಾಯಿಸ್ಟ್, ಕೈ ಗಡಿಯಾರಗಳು, ಆಟೊಮೋಬೈಲ್ ನಲ್ಲಿ ಸ್ವಯಂಚಾಲಿತ ಟ್ರಾನ್ ಮಿಶನ್, ಇಂಜಿನ್ ನ ಒಳಭಾಗದ ಸ್ಪಾರ್ಕ್ ಮತ್ತು ಇಲೆಕ್ಟ್ರಿಕ್ ಮೋಟರ್ ಗಳಲ್ಲಿರುವ ಪವರ್ ಟ್ರೇನ್ ನಲ್ಲಿಯೂ ಬಳಸಲಾಗುತ್ತದೆ.
ಗಿಯರ್ ಬಾಕ್ಸ್ ನ ಡಿಸೈನ್ ಮತ್ತು ಉತ್ಪಾದನೆಗೆ ಆವಶ್ಯಕವಾದ ಪ್ಯಾರಾಮೀಟರ್
ಇನ್ ಪುಟ್ ಆರ್.ಪಿ.ಎಮ್. ಮತ್ತು ಟಾರ್ಕ್
⦁ ಆವಶ್ಯಕವಾದ ಔಟ್ ಪುಟ್ ಆರ್.ಪಿ.ಎಮ್.
⦁ ಆವಶ್ಯಕವಾದ ಟಾರ್ಕ್
⦁ ಆವಶ್ಯಕವಾದ ಬಲ
⦁ ಉಚ್ಚಮಟ್ಟದ ಸುರಕ್ಷೆಯ ಘಟಕಗಳ ಆವಶ್ಯಕತೆ ಇದೆಯೇ?
⦁ ಮೌಂಟಿಂಗ್ ನಲ್ಲಿರುವ ಅಡಚಣೆಗಳು
⦁ ಶಾಫ್ಟ್ ನ ವ್ಯವಸ್ಥೆಯು ಆವಶ್ಯಕತೆ ಯಾವ ರೀತಿಯಲ್ಲಿದೆ? ಒಂದು ವೇಳೆ ಗ್ರಾಹಕರಿಗೆ ಪ್ಲಾಂಜ್ ಮೌಂಟೆಡ್ ಮೋಟರ್ (ಗಿಯರ್ ಬಾಕ್ಸ್ ನೊಂದಿಗೆ ಸೇರಿಸಿರುವಂತಹದ್ದು) ಬೇಕಾದಲ್ಲಿ ಟೊಳ್ಳಾಗಿರುವ ಸಾಲಿಡ್ (ಇನ್ ಪುಟ್) ಶಾಫ್ಟ್ ನೊಂದಿಗೆ ಒಂದು ಗಿಯರ್ ಬಾಕ್ಸ್ ನೀಡಬೇಕು. ಇದರಿಂದಾಗಿ ಗ್ರಾಹಕರು ಕೀ ಬಳಸಿ ಮೋಟರ್ ಸಾಲಿಡ್ (ಇನ್ ಪುಟ್) ಇರುವ ಶಾಫ್ಟ್ ಗಿಯರ್ ಬಾಕ್ಸ್ ನ ಟೊಳ್ಳು ಶಾಫ್ಟ್ ನಲ್ಲಿ (ಚಿತ್ರ ಕ್ರ. 7 ಮತ್ತು 10) ಅಳವಡಿಸಬಲ್ಲರು. ಈ ರೀತಿಯ ಇನ್ ಪುಟ್ ಇರುವ ಉಪಕರಣೆಗಳೊಂದಿಗೆ ಗಿಯರ್ ಬಾಕ್ಸ್ ಜೋಡಿಸುವುದಾದಲ್ಲಿ, ಎರಡು ಪರ್ಯಾಯಗಳು ಲಭಿಸಬಲ್ಲವು. ಮೊದಲಾಗಿ, ಉಪಕರಣದ ವಿಶೇಷ ಉಪಯೋಗವನ್ನು ಇನ್ ಪುಟ್ ಗಿಯರ್ ಬಾಕ್ಸ್ ನ ಕಚ್ಚುಗಳನ್ನು ಔಟ್ ಪುಟ್ ಶಾಫ್ಟ್ ಗಳನ್ನು ಜೋಡಿಸಲಾಗುತ್ತದೆ. ಎರಡನೆಯದಾಗಿ ಎರಡೂ ಶಾಫ್ಟ್ ಗಳು ಇನ್ ಪುಟ್ ಆಗಿದ್ದಲ್ಲಿ (ಚಿತ್ರ ಕ್ರ. 8 ಮತ್ತು 9) ಅದನ್ನು ಕಪಲಿಂಗ್ ಬಳಸಿಯೇ ಜೋಡಿಸುವುದು ಸಾಧ್ಯ. ಇದರಿಂದಾಗಿ ಸಾಲಿಡ್ ಇನ್ ಪುಟ್ ಮತ್ತು ಔಟ್ ಪುಟ್ ಶಾಫ್ಟ್ ನೀಡುವುದು ಸಾಧ್ಯ.
⦁ ಗಿಯರ್ ಬಾಕ್ಸ್ ಆಯ್ಕೆ ಮಾಡುವಾಗ ಗಿಯರ್ ನ ಶ್ರೇಣಿಯ ಗುಣಮಟ್ಟವು ಕೂಡಾ ಒಂದು ಪ್ಯಾರಾಮೀಟರ್ ಆಗಿರುತ್ತದೆ.
⦁ ಗ್ರಾಹಕರು ಕೆಲಸದ ಸ್ಪರೂಪವನ್ನು ಸ್ಪಷ್ಟಪಡಿಸುವುದು ಗಿಯರ್ ಬಾಕ್ಸ್ ನ ಡಿಸೈನ್ ಗೋಸ್ಕರ ಸಹಕರಿಸುತ್ತದೆ.
ಶಬ್ದ ಮತ್ತು ಕಂಪನಗಳ ಅಪೇಕ್ಷೆ : ಶಬ್ದ 80DB ಗಿಂತ ಕಡಿಮೆ ಇರಬೇಕು.
⦁ ಲುಬ್ರಿಕಂಟ್ ನ ರೀತಿ : ಗ್ರೀಸ್ ಪ್ಯಾಕ್ಡ್, ಆಯಿಲ್ ಸಬ್ ಮರ್ಜ್ಡ್, ಆಯಿಲ್ ಡ್ರಿಪ್ ಮುಂತಾದ ಹಲವಾರು ಲುಬ್ರಿಕಂಟ್ ನ ಪರ್ಯಾಯಗಳಿವೆ.
ಟಿಪ್ಪಣಿ : ಲುಬ್ರಿಕಂಟ್ ನಿಂದಾಗಿ ಸವೆತ ಮತ್ತು ತುಂಡಾಗುವಿಕೆಯು ಕಡಿಮೆಯಾಗುತ್ತದೆ. ಗಿಯರ್ ಬಾಕ್ಸ್ ನಲ್ಲಿರುವ ಉಷ್ಣಾಂಶವನ್ನು ದೂರಕ್ಕೆ ತಳ್ಳಲಾಗುತ್ತದೆ, ಶಬ್ದ ಮತ್ತು ಘರ್ಷಣೆ ಕಡಿಮೆಯಾಗುತ್ತದೆ. ಲುಬ್ರಿಕಂಟ್ ನ ಆಯ್ಕೆ ಮಾಡುವಾಗ ಅದರ ವಿಸ್ಕಾಸಿಟಿಯೂ ತುಂಬಾ ಮಹತ್ವದ ಘಟಕವಾಗಿರುತ್ತದೆ. ಸಾಮಾನ್ಯವಾಗಿ 220 ಅಥವಾ 320 Pa.s ವಿಸ್ಕಾಸಿಟ್ ಗ್ರೇಡ್ ಇರುವ ಅಯಿಲ್ ಲುಬ್ರಿಕೇಶನ್ ಗೋಸ್ಕರ ಬಳಸಲಾಗುತ್ತದೆ. ಬೆಂಕಿಯ ಅಪಾಯವಿರುವುದರಿಂದ ಆಯಿಲ್ ನ್ನು ಶಿಫಾರಸು ಮಾಡಲಾಗುವುದಿಲ್ಲ, ಈ ಪರಿಸ್ಥಿತಿಯಲ್ಲಿ ಲುಬ್ರಿಕೇಶನ್ ಗೋಸ್ಕರ ಗ್ರೀಸ್ ಬಳಸಲಾಗುತ್ತದೆ.
ಉದಾಹರಣೆ
ಗಿಯರ್ ಬಾಕ್ಸ್ ಬದಲಾಯಿಸಲು ನಮ್ಮಲ್ಲಿ ಅನೇಕ ಗ್ರಾಹಕರು ಬರುತ್ತಿರುತ್ತಾರೆ. ಕಾರಣ ಅವರಿಗೆ ಇತ್ತೀಚೆಗೆ ಬಳಸುತ್ತಿರುವ ಗಿಯರ್ ಬಾಕ್ಸ್ ನಲ್ಲಿ ಹಲವಾರು ತೊಂದರೆಗಳಿರುತ್ತವೆ ಮತ್ತು ಗ್ರಾಹಕರಿಗೆ ಮುಂಚಿನಂತೆಯೇ ಹೊಸ ಗಿಯರ್ ಬಾಕ್ಸ್ ಬೇಕಾಗಿರುತ್ತದೆ.
ಗ್ರಾಹಕರಿಗೆ ಈ ಮುಂಚಿನಂತೆಯೇ ಮೌಂಟಿಂಗ್ ಮತ್ತು ಇನ್ನಿತರ ಆಯಾಮಗಳನ್ನು ಅಳವಡಿಸುವ ಇಚ್ಛೆ ಇರುತ್ತದೆ. ಅಲ್ಲದೆ ಸದ್ಯಕ್ಕಿರುವ ಗಿಯರ್ ಬಾಕ್ಸ್ ತೆಗೆಯುವುದೂ ಸಾಧ್ಯವಿರುವುದಿಲ್ಲ. ಕಾರಣ ಅದು ಸದ್ಯದ ಸ್ಥಿತಿಯಲ್ಲಿ ಕಾರ್ಯನಿರತವಾಗಿರುತ್ತದೆ ಮತ್ತು ಅದರ ದುರಸ್ತಿಗೆ ಉತ್ಪಾದಕತೆಯ ಸಮಯವನ್ನು ಖರ್ಚು ಮಾಡಲು ಸಿದ್ಧರಿರುವುದಿಲ್ಲ. ಇದರಿಂದಾಗಿ ನಮಗೆ ಮಶಿನ್ ಪ್ರತ್ಯಕ್ಷವಾಗಿ ನೋಡಿ ಮತ್ತು ಅಲ್ಲಿ ಹಲವಾರು ರೀತಿಯ ಮಾಪನಗಳನ್ನು ಪಡೆದು, ಸದ್ಯಕ್ಕೆ ಕೆಲಸ ನಿರ್ವಹಿಸುವಂತಹ ಡಿಸೈನ್ ಗಿಯರ್ ಬಾಕ್ಸ್ ಗೆ ಮಾಡಬೇಕಾಗುತ್ತದೆ.
ಒಮ್ಮೆ ನಮ್ಮಗೆ ಗಿಯರ್ ನ ಗುಣಾಕಾರವನ್ನು ಉಲ್ಲೇಖಿಸದೇ ಒಂದು ವರ್ಮ್ ಗಿಯರ್ ಬಾಕ್ಸ್ ನ ಬೇಡಿಕೆಯು ಬಂದಿತ್ತು. ಇದಕ್ಕೋಸ್ಕರ ನಾವು ಸಂಬಂಧಪಟ್ಟ ಗ್ರಾಹಕರಿಗೆ ನಮ್ಮ ವರ್ಮ್ ಮಾಡೆಲ್ ಗೋಸ್ಕರ 70:1 ಗುಣಾಕಾರ ಮತ್ತು 5 HP ಪವರ್ ಈ ರೀತಿಯ ಶಿಫಾರಸ್ಸನ್ನು (ಕೋಟ್) ಮಾಡಿದೆವು. ಆದರೂ ಕೂಡಾ ಗಿಯರ್ ಬಾಕ್ಸ್ ನ ಫೊಟೊ ಲಭಿಸಿದವು. ಆಗ ಅದರಲ್ಲಿ 230:1 ಎಂಬ ಗುಣಾಕಾರವನ್ನು ತೋರಿಸಲಾಗಿತ್ತು. ಆದರೆ ಅದನ್ನು ನಾವು ಪ್ರತ್ಯಕ್ಷವಾಗಿ ಶಿಫಾರಸು ಮಾಡಿರುವ ಅಥವಾ ಚರ್ಚಿಸಿರುವ ಗುಣಾಕಾರದ ಮೂರು ಪಟ್ಟಿಗಿಂತಲೂ ಹೆಚ್ಚಾಗಿತ್ತು. ಸಿಂಗಲ್ ವರ್ಮ್ ಗಿಯರ್ ವ್ಯವಸ್ಥೆಯ ಮೂಲಕ ಇಷ್ಟು ಗುಣಾಕಾರವನ್ನು ಪಡೆಯುವುದು ತುಂಬಾ ಕಠಿಣವಾಗಿತ್ತು. ಅಲ್ಲದೇ ಅಲ್ಲಿರುವ ಮಶಿನ್ ಗಿಯರ್ ಬಾಕ್ಸ್ ಗೆ ಉಚ್ಚ ಗುಣಾಕಾರದ ಸವಾಲುಗಳ ಹೊರತಾಗಿ ಮೌಂಟಿಂಗ್ ನ ಮಿತಿಗಳೂ ಇದ್ದವು. ಇದಕ್ಕೋಸ್ಕರ ನಾವು ಅಪ್ಲಿಕೇಶನ್ ನ ಅಭ್ಯಾಸವನ್ನು ಮಾಡಿ ಅದರ ಡಿಸೈನ್ ತಯಾರಿಸಿದೆವು ಮತ್ತು ಒಂದೇ ಬಾಕ್ಸ್ ನಲ್ಲಿ ಹೆಲಿಕಲ್ ವರ್ಮ್ ಇವೆರಡನ್ನೂ ಜೋಡಿಸಿ ಸಂಬಂಧಪಟ್ಟ ಗ್ರಾಹಕರಿಗೆ ನೀಡಿದೆವು.
ಗ್ರಾಹಕರಿಗೆ ಲಭಿಸಿರುವ ಲಾಭಗಳು
ಅದೇ ಮೌಂಟಿಂಗ್ ವ್ಯವಸ್ಥೆಯಲ್ಲಿ ಉಚ್ಚಮಟ್ಟದ ಗುಣಾಕಾರವನ್ನು ಅಳವಡಿಸುವುದು ಸಾಧ್ಯವಾಯಿತು.
⦁ ಮೊದಲನೆಯ ಹಂತದಲ್ಲಿ ಹೆಲಿಕಲ್ ಗಿಯರ್ ನ ಬಳಕೆಯಿಂದಾಗಿ ಫಾರ್ವರ್ಡ್-ರಿವರ್ಸ್ ಚಟುವಟಿಕೆಗಳು ಸಹಜವಾಗಿ ಆಗಲಾರಂಭಿಸಿದವು.
⦁ ವರ್ಮ್ ನ ವ್ಯವಸ್ಥೆಯಿಂದಾಗಿ ಎರಡನೇ ಹಂತದಲ್ಲಿ ಹೆಚ್ಚು ಪ್ರಮಾಣದಲ್ಲಿ ಟಾರ್ಕ್ ಲಭಿಸುತ್ತವೆ.
ಮೇಲಿನ ಎಲ್ಲ ಲಾಭಗಳಿಂದಾಗಿ ಚಟುವಟಿಕೆಯ ಕುರಿತು ಈ ಗಿಯರ್ ಬಾಕ್ಸ್ ನ ಗ್ರಾಹಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಅಮೋದ್ ಕಾಲ್ ಗಾವಕರ್
ನಿರ್ದೇಶಕರು
ಗಿಯರ್ ಎಕ್ಸ್ ಮ್ಯಾನುಫ್ಯಾಕ್ಚರಿಂಗ್
9665476640
amod@gearx.co.in
ಆಮೋದ್ ಕಾಲ್ ಗಾವ್ ಕರ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಅವರಿಗೆ ಮಟೀರಿಯಲ್ ಹ್ಯಾಂಡಲಿಂಗ್ ಮತ್ತು ಗಿಯರ್ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳ ಅನುಭವವಿದೆ.