ಫ್ಲ್ಯಾಟ್ ಟಾ ಪ್ ಡ್ಲಿಲ್ ಜಿಗ್ ಗಳನ್ನು ಯಾವಾಗ, ಹೇಗೆ ಮತ್ತು ಎಲ್ಲಿ ಬಳಸಬೇಕು ಎಂದುದರ ಕುರಿತು ವಿಸ್ತಾರವಾದ ಮಾಹಿತಿಯನ್ನು ಹಿಂದಿನ ಸಂಚಿಕೆಯಲ್ಲಿ (ಆಗಸ್ಟ್ 2020) ತಿಳಿದುಕೊಂಡೆವು. ಈ ರೀತಿಯ ಜಿಗ್ ಪ್ಲೇಟ್ ಗಳನ್ನು ಯಾವಾಗ ಬಳಸಬೇಕು ಎಂಬುದಕ್ಕೋಸ್ಕರ ಹಲವಾರು ಮಹತ್ವದ ಅಂಶಗಳನ್ನು ನಾವು ನೋಡಿದೆವು. ಇವೆಲ್ಲದರ ಕುರಿತು ಚುಟುಕಾದ ನಿರೀಕ್ಷಣೆಯನ್ನು ಈ ಮುಂದೆ ನೀಡಲಾಗಿದೆ.
⦁ ಕಾರ್ಯವಸ್ತುಗಳ ಭಾರವು ಹೆಚ್ಚು ಇರುವಾಗ ಅಥವಾ ಅದು ನಿರ್ವಹಿಸಲು ಯೋಗ್ಯವಿಲ್ಲದಿದ್ದಲ್ಲಿ ಈ ರೀತಿಯ ಜಿಗ್ ಪ್ಲೇಟ್ ಬಳಸಲಾಗುತ್ತದೆ. ಕಾರಣ ಕಾರ್ಯವಸ್ತುವನ್ನು ಹೋಲಿಸಿದಲ್ಲಿ ಈ ಜಿಗ್ ಪ್ಲೇಟ್ ತುಂಬಾ ಹಗುರ, ಅಚ್ಚುಕಟ್ಟು ಮತ್ತು ನಿರ್ವಹಿಸಲು ಸುಲಭವಾಗಿರುತ್ತದೆ.
⦁ ಚಿಕ್ಕ ಗಾತ್ರದ ರಂಧ್ರಗಳನ್ನು ಮಾಡುವುದಾದಲ್ಲಿ ಕಟಿಂಗ್ ಫೋರ್ಸ್ ಕಡಿಮೆ ಇರುವುದರಿಂದ ಲೊಕೇಟಿಂಗ್ ಪಿನ್ ತುಂಡಾಗುವ ಅಥವಾ ಜಿಗ್ ಪ್ಲೇಟ್ ನೊಂದಿಗೆ ಕಾರ್ಯವಸ್ತುವು ತಿರುಗುವ ಅಪಾಯವು ಉಂಟಾಗುವುದಿಲ್ಲ.
⦁ ಥ್ರೆಡಿಂಗ್ ಇರುವ ರಂಧ್ರಗಳಿದ್ದಲ್ಲಿ ಈ ರೀತಿಯನ್ನು ಬಳಸಬಾರದು. ಕಾರಣ ಕಚ್ಚುಗಳನ್ನು ಮಾಡುವಾಗ ಅಥವಾ ಟ್ಯಾಪ್ ಮೇಲೆ ತೆಗೆಯುವಾಗ ಕಾರ್ಯವಸ್ತು ಮೇಲೆ ಎತ್ತಲ್ಪಡುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಅಪಘಾತ ಆಗುವ ಸಾಧ್ಯತೆ ಇರುತ್ತದೆ. ಹಾಗೆಯೇ ಕಾರ್ಯವಸ್ತುವು ಹಾಳಾಗಬಹುದು ಅಥವಾ ಟ್ಯಾಪ್ ಕೂಡಾ ತುಂಡಾಗಬಹುದು.
⦁ ಜಿಗ್ ಪ್ಲೇಟ್ ನ ಗಾತ್ರವು ಚಿಕ್ಕದಾಗಿರಬೇಕು ಮತ್ತು ಅದರ ಭಾರವೂ ಮಿತಿಯಲ್ಲಿರುವುದೂ ಆತ್ಯಾವಶ್ಯಕವಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಈ ಭಾರವು 12 ರಿಂದ 15 ಕಿ.ಗ್ರಾಂ.ಗಿಂತ ಹೆಚ್ಚು ಇರಬಾರದು. ಆದರೆ ಈ ಪ್ಲೇಟ್ ಎತ್ತಲು ಸುಲಭವಾಗಿರಬೇಕು.
ಡ್ರಿಲ್ಲಿಂಗ್ ಜಿಗ್ ನ ಅನೇಕ ವಿಧಗಳಲ್ಲಿ ಇದು ತುಂಬಾ ಮಹತ್ವದ ವಿಧವನ್ನು ನೋಡಿದೆವು. ಇಂಡೆಕ್ಸಿಂಗ್ ಈ ವಿಧದ ಜಿಗ್ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಲಿದ್ದೇವೆ. ಕಾರ್ಯವಸ್ತುವಿನಲ್ಲಿ 8 ರಂಧ್ರಗಳಿರುವುದನ್ನು ಚಿತ್ರ ಕ್ರ. 1 ರಲ್ಲಿ ತೋರಿಸಲಾಗಿದೆ. ಈ ರಂಧ್ರಗಳನ್ನು ಮಾಡುವುದಾದಲ್ಲಿ ಪ್ರತಿಯೊಂದು ರಂಧ್ರಗಳಿಗೋಸ್ಕರ ಕಾರ್ಯವಸ್ತುವನ್ನು ತಿರುಗಿಸಬೇಕಾಗಬಹುದು. ಈ ರೀತಿಯಲ್ಲಿ ತಿರುಗಿಸುವುದನ್ನು ಇಂಡೆಕ್ಸಿಂಗ್ ಎಂದು ಹೇಳಲಾಗುತ್ತದೆ. ಎರಡು ರಂಧ್ರಗಳಲ್ಲಿರುವ ಕೋನ 450 ಇದೆ, ಹಾಗೆಯೇ ಕೋನೀಯ ದೂರವು ಸಮಾನವಾಗಿದೆ.
ಜಿಗ್ ಹೇಗೆ ಕಾರ್ಯ ನಿರ್ವಹಿಸುತ್ತದೆ, ಎಂಬುದನ್ನು ಈಗ ತಿಳಿದುಕೊಳ್ಳೋಣ. ಕಾರ್ಯವಸ್ತುವು ಲೊಕೇಟರ್ ನ ವ್ಯಾಸದಲ್ಲಿ ಲೊಕೇಟ್ ಮಾಡಲಾಗಿದೆ ಮತ್ತು C ವಾಶರ್ ನ ಸಹಾಯದಿಂದ ದೃಢವಾಗಿ ಹಿಡಿಯಲಾಗಿದೆ. ಹಾಗೆಯೇ ಕಾರ್ಯವಸ್ತುವು ಸರ್ಫೇಸ್ ಇಂಡೆಕ್ಸ್ ಪ್ಲೇಟ್ ನಲ್ಲಿ ಒರಗಿದೆ. ಕಾರ್ಯವಸ್ತುವಿನಲ್ಲಿ ಮೊದಲ ರಂಧ್ರವನ್ನು ಮಾಡಿದ ನಂತರ ಇಂಡೆಕ್ಸ್ ಪಿನ್ ಹಿಂದಕ್ಕೆ ಎಳೆದು ಇಂಡೆಕ್ಸ್ ಪ್ಲೇಟ್ ತಿರುಗಿಸಲಾಗುತ್ತದೆ. ಇಂಡೆಕ್ಸ್ ಪ್ಲೇಟ್ ನಲ್ಲಿರುವ ಮುಂಭಾಗದ ರಂಧ್ರದಲ್ಲಿರುವ ಬುಶ್ ನಲ್ಲಿ ಇಂಡೆಕ್ಸ್ ಪಿನ್ ಲೊಕೇಟ್ ಮಾಡಿ ಕಾರ್ಯವಸ್ತುವಿನಲ್ಲಿ ಇನ್ನೊಂದು ರಂಧ್ರವನ್ನು ಮಾಡಲಾಗುತ್ತದೆ. ಈ ರೀತಿಯಲ್ಲಿ ಕಾರ್ಯವಸ್ತುವಿನಲ್ಲಿ ಒಂದರ ನಂತರ ಇನ್ನೊಂದು ಹೀಗೆ ಎಂಟೂ ರಂಧ್ರಗಳನ್ನು ಮಾಡಲಾಗುತ್ತದೆ. ಕಾರ್ಯವಸ್ತುವನ್ನು ತೆಗೆಯದೇ ಮತ್ತು ಅಳವಡಿಸದೇ ಎಲ್ಲ ರಂಧ್ರಗಳನ್ನು ಮಾಡಿದ್ದರಿಂದ (ಒಂದೇ ಸೆಟಿಂಗ್ ನಲ್ಲಿ) ರಂಧ್ರಗಳು ನಿರ್ದೋಷವಾಗಿ ಆಗುತ್ತವೆ ಮತ್ತು ಅದರಲ್ಲಿರುವ ಪರಸ್ಪರವಾದ ಸಂಬಂಧವೂ ನಿಖರವಾಗಿ ಲಭಿಸುತ್ತದೆ. ಎಷ್ಟು ರಂಧ್ರಗಳು ಕಾರ್ಯವಸ್ತುವಿನಲ್ಲಿರುತ್ತವೆಯೋ, ಅಷ್ಟೇ ರಂಧ್ರಗಳು ಇಂಡೆಕ್ಸ್ ಪ್ಲೇಟ್ ನಲ್ಲಿ ಮಾಡಲಾಗಿರುತ್ತವೆ. ಇದರ ಪರಸ್ಪರ ಸಂಬಂಧವು ಕಾರ್ಯವಸ್ತುವಿನಲ್ಲಿರುವ ರಂಧ್ರಗಳೊಂದಿಗೆ ಇರುತ್ತದೆ. ಅದೇ ಪರಸ್ಪರ ಸಂಬಂಧವು ಇಂಡೆಕ್ಸ್ ಪ್ಲೇಟ್ ನಲ್ಲಿರುವ ರಂಧ್ರಗಳಲ್ಲಿಯೂ ಅಳವಡಿಸುವುದು ಆವಶ್ಯಕವಾಗಿದೆ. ಈಗ ಈ ಜಿಗ್ ನಲ್ಲಿರುವ (ಚಿತ್ರ ಕ್ರ. 1) ಹಲವಾರು ಮಹತ್ವದ ಭಾಗಗಳ ಮಾಹಿತಿಯನ್ನು ತಿಳಿದುಕೊಳ್ಳೋಣ.
1. ಜಿಗ್ ಬಾಡಿಈ ಬಾಡಿ ವೆಲ್ಡ್ ಮಾಡಲಾಗಿರುವುದರಿಂದ ಇದಕ್ಕೆ ಸ್ಟ್ರೆಸ್ ರಿಲೀವ್ ಮಾಡುವುದು ಅತ್ಯಾವಶ್ಯಕವಾಗಿದೆ. ಈ ಬಾಡಿಯು ತುಂಬಾ ದೃಢವಾಗಿರಬೇಕು, ಕಾರಣ ಈ ಬಾಡಿಯನ್ನು ಅಲುಗಾಡಿಸುವಾಗ ಒಂದು ವೇಳೆ ಎಲ್ಲಾದರೂ ಅಪ್ಪಳಿಸಿದಲ್ಲಿ ಜಿಗ್ ಮೇಲೆ ಅದರ ಯಾವುದೇ ರೀತಿಯ ವಿಪರೀತವಾದ ಪರಿಣಾಮ ಉಂಟಾಗುವುದಿಲ್ಲ. ಈ ಚಟುವಟಿಕೆಯನ್ನು ತುಂಬಾ ಮುತುವರ್ಜಿ ವಹಿಸಿಯೇ ಮಾಡಬೇಕು.
2. ಇಂಡೆಕ್ಸ್ ಪಿನ್ಇಂಡೆಕ್ಸ್ ಪಿನ್ ಬುಶ್ ನಲ್ಲಿ ಹಿಂದು-ಮುಂದು ಸರಿಯುತ್ತದೆ. ಇಂಡೆಕ್ಸ್ ಪಿನ್ ನಲ್ಲಿ ಅಳವಡಿಸಿರುವ ನಾಬ್ ಹಿಂದಕ್ಕೆ ಎಳೆದಲ್ಲಿ ಇಂಡೆಕ್ಸ್ ಪಿನ್ ನ ಡೈಮಂಡ್ ಗಾತ್ರದ ಭಾಗವು ಇಂಡೆಕ್ಸ್ ಪ್ಲೇಟ್ ನಲ್ಲಿ ಅಳವಡಿಸಿರುವ ಬುಶ್ ನಿಂದ ಹೊರಗೆ ಬರುತ್ತದೆ, ಆಗ ಇಂಡೆಕ್ಸ್ ಪ್ಲೇಟ್ ತಿರುಗಿಸಬಹುದು. ಇಂಡೆಕ್ಸ್ ಪಿನ್ ನ ಮುಂಭಾಗಕ್ಕೆ ಡೈಮಂಡ್ ಆಕಾರವನ್ನು ನೀಡಲಾಗಿರುತ್ತದೆ, ಇದರ ಕಾರಣವೆಂದರೆ ಇಂಡೆಕ್ಸ್ ಪ್ಲೇಟ್ ನ ಮಧ್ಯಭಾಗದಲ್ಲಿರುವ ರಂಧ್ರಗಳು ಮತ್ತು ಇಂಡೆಕ್ಸಿಂಗ್ ಗೋಸ್ಕರ ಇರುವ ರಂಧ್ರ ± 0.01 ಮಿ.ಮೀ.ಯಲ್ಲಿ ನಿಯಂತ್ರಿಸಲ್ಪಟ್ಟಿರುತ್ತದೆ. ಇಂಡೆಕ್ಸ್ ಪಿನ್ ನ ಮುಂಭಾಗಕ್ಕೆ ಡೈಮಂಡ್ ಗಾತ್ರವನ್ನು ನೀಡಿದ್ದರಿಂದ ಪಿನ್ ಇಂಡೆಕ್ಸ್ ಪ್ಲೇಟ್ ನಲ್ಲಿರುವ ಬುಶ್ ನಲ್ಲಿ ಸಹಜವಾಗಿ ಒಳಗೆ ಅಳವಡಿಸಲ್ಪಡುತ್ತದೆ ಹಾಗೆಯೇ ಸಹಜವಾಗಿ ಹೊರಗೆಯೂ ಬರುತ್ತದೆ. ಇಂಡೆಕ್ಸ್ ಪಿನ್ ನ ಹಿಂಭಾಗದಲ್ಲಿ ಸ್ರ್ಪಿಂಗ್ ನೀಡಲಾಗಿದೆ. ಈ ಸ್ಪ್ರಿಂಗ್ ಯಾಕೆ ಅಳವಡಿಸಲಾಗಿದೆ, ಎಂಬ ಪ್ರಶ್ನೆಯು ಸಹಜವಾಗಿ ಮೂಡಿಬರುತ್ತದೆ. ಕಾರಣ ಪಿನ್ ಕೈಯಿಂದ ಹಿಂದಕ್ಕೆ ಮತ್ತು ಮುಂದಕ್ಕೆ ಸರಿಸುವುದು ಸಾಧ್ಯವಿದೆ. ಆದರೆ ಇಂಡೆಕ್ಸ್ ಪಿನ್ ಕೈಯಿಂದ ಹಿಂದಕ್ಕೆ ಎಳೆದರೆ ಮತ್ತು ಇಂಡೆಕ್ಸ್ ಪ್ಲೇಟ್ ಸ್ವಲ್ಪವಾದರೂ ತಿರುಗಿಸಿದಲ್ಲಿ ಅಥವಾ ಇಂಡೆಕ್ಸ್ ಪಿನ್ ಬಿಟ್ಟರೂ ಕೂಡಾ ಈ ಸ್ಪ್ರಿಂಗ್ ನಿಂದಾಗಿ ಇಂಡೆಕ್ಸ್ ಪಿನ್ ಇಂಡೆಕ್ಸ್ ಪ್ಲೇಟ್ ನಲ್ಲಿ ಒರಗುತ್ತದೆ. ಇಂಡೆಕ್ಸ್ ಪ್ಲೇಟ್ ನಲ್ಲಿರುವ ಬುಶ್ ಇಂಡೆಕ್ಸ್ ಪಿನ್ ನ ಮುಂಭಾಗದಲ್ಲಿ ಬಂದಾಗ ತನ್ನಷ್ಟಕ್ಕೆ ಇಂಡೆಕ್ಸ್ ಪಿನ್ ಇಂಡೆಕ್ಸ್ ಪ್ಲೇಟ್ ನಲ್ಲಿರುವ ಬುಶ್ ನೊಳಗೆ ಹೋಗುತ್ತದೆ. ಇಂಡೆಕ್ಸ್ ಪಿನ್ ಮತ್ತು ಬುಶ್ ಗೆ ನೀಡಲಾಗಿರುವ ಚ್ಯಾಂಫರ್ ನಿಂದ ಮತ್ತು ಸ್ಪ್ರಿಂಗ್ ನ ಫೋರ್ಸ್ ನಿಂದಾಗಿ ಇಂಡೆಕ್ಸ್ ಪಿನ್ ಇಂಡೆಕ್ಸ್ ಪ್ಲೇಟ್ ನಲ್ಲಿರುವ ಬುಶ್ ನಲ್ಲಿ ಸಹಜವಾಗಿ ಲೊಕೇಟ್ ಆಗುತ್ತದೆ. ಆಪರೇಟರ್ ಗೆ ಇಂಡೆಕ್ಸ್ ಪಿನ್ ಲೊಕೇಟ್ ಮಾಡಲು ಯಾವುದೇ ಚಟುವಟಿಕೆಯನ್ನು ಮಾಡುವ ಅಗತ್ಯವಿರುವುದಿಲ್ಲ. ಈ ರೀತಿಯ ತುಂಬಾ ಮಹತ್ವದ ಕೆಲಸವನ್ನು ಸ್ಪ್ರಿಂಗ್ ಮಾಡುತ್ತದೆ. ಸ್ಪ್ರಿಂಗ್ ಯಾವಾಗಲೂ ಒಳಗಿನ ಅಥವಾ ಹೊರಗಿನ ವ್ಯಾಸದಲ್ಲಿಯೇ ಲೊಕೇಟ್ ಮಾಡಲಾಗಿರುತ್ತದೆ.
3. ಲೊಕೇಟರ್

ಈ ರೀತಿಯ ಲೊಕೇಟರ್ ಗಳ ಕೆಲಸವನ್ನು ನಾವು ಈ ಹಿಂದಿನ (ಆಗಸ್ಟ್ 2020) ಸಂಚಿಕೆಯಲ್ಲಿ ತಿಳಿದುಕೊಂಡೆವು. ಅದರಂತೆ ಲೊಕೇಟರ್ ನಲ್ಲಿ ಸ್ಲಾಟ್ ಏಕೆ ನೀಡಲಾಗಿದೆ ಎಂಬುದನ್ನು ನೋಡಿದೆವು. ಕಾರ್ಯವಸ್ತುವಿನಲ್ಲಿ 8 ಕಚ್ಚುಗಳನ್ನು ನೀಡಲಾಗಿದೆ. ಈ ಲೊಕೇಟರ್ ಬಾಡಿಯಲ್ಲಿ ನೀಡಿರುವ ಬುಶ್ ನಲ್ಲಿ ಲೊಕೇಟ್ ಮಾಡಲಾಗಿದ್ದು ಅದನ್ನು ಗೋಲಾಕಾರವಾಗಿ ತಿರಗಿಸಬಹುದು. (ಗೈಡ್ ಫಿಟ್ ಮಾಡಲಾಗಿರುತ್ತದೆ H7/g6). ಲೊಕೇಟರ್ ನ ಎಡಬದಿಯ ಸರ್ಫೇಸ್ ಬುಶ್ ನ ಸರ್ಫೇಸ್ ನ ಹೊರಗೆ 0.02 ಮಿ.ಮೀ. ಇಡಲಾಗಿದೆ. (ಚಿತ್ರ ಕ್ರ. 2) ಇದರಿಂದಾಗಿ ಸ್ಪೇಸರ್ ಮತ್ತು ಬುಶ್ ಇವುಗಳಲ್ಲಿ 0.02 ಮಿ.ಮೀ. ದೂರವನ್ನು ಇಡಬಹುದು. ಈ ದೂರವನ್ನು ನಿಯಂತ್ರಿಸಿದ್ದರಿಂದ ಇಂಡೆಕ್ಸ್ ಪ್ಲೇಟ್ ಗೋಲಾಕಾರವಾಗಿ ತಿರುಗಿಸುವುದು ಸುಲಭವಾಗುತ್ತದೆ. ಇದರಂತೆಯೇ ಅದು ಹಿಂದೆ-ಮುಂದೆ ಹೆಚ್ಚಿನ ಪ್ರಮಾಣದಲ್ಲಿ ಅಲುಗಾಡುವುದಿಲ್ಲ. ಸ್ಕ್ರೂನ ಸಹಾಯದಿಂದ ಲೊಕೇಟರ್ ಇಂಡೆಕ್ಸ್ ಪ್ಲೇಟ್ ನಲ್ಲಿ ಅಳವಡಿಸಲಾಗಿದೆ. ಲೊಕೇಟರ್ ಯಾವ ಸರ್ಫೇಸ್ ನಲ್ಲಿ ಇಂಡೆಕ್ಸ್ ಪ್ಲೇಟ್ ನಲ್ಲಿ ಅಳವಡಿಸಲ್ಪಡುತ್ತದೆಯೋ, ಅದರ ಪಕ್ಕದಲ್ಲಿ ವ್ಯಾಸವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಿ ಒಂದು ಸ್ಟೆಪ್ ನೀಡಲಾಗಿರುತ್ತದೆ. ಇದರಿಂದಾಗಿ ಲೊಕೇಟರ್, ಬುಶ್ ನಲ್ಲಿ ಅಳವಡಿಸದೇ ಇಂಡೆಕ್ಸ್ ಪ್ಲೇಟ್ ನಲ್ಲಿಯೇ ಅಳವಡಿಸಲ್ಪಡುತ್ತದೆ. ಲೊಕೇಟರ್ ನ ಎಡಭಾಗದಲ್ಲಿ ನರ್ಲ್ ನಾಬ್ ಮತ್ತು ಸ್ಪೇಸರ್ ಕ್ಯಾಪ್ ಸ್ಕ್ರೂನ ಸಹಾಯದಿಂದ ಲೊಕೇಟರ್ ನಲ್ಲಿ ಅಳವಡಿಸಲಾಗಿದೆ. ಲೊಕೇಟರ್ ನ ಎಡಬದಿಯ ಒಳಭಾಗದ ಕಚ್ಚುಗಳು ಮತ್ತು ಬಲಭಾಗದಲ್ಲಿ ಹೊರ ಕಚ್ಚುಗಳು ಇರುವುದರಿಂದ ಈ ಲೊಕೇಟರ್ ಕೇಸ್ ಹಾರ್ಡ್ ಮಾಡಿ ತಮಗೆ ಬೇಕಾಗಿರುವ ಜಾಗದಲ್ಲಿ ಗ್ರೈಂಡಿಂಗ್ ಮಾಡಬೇಕಾಗುತ್ತದೆ. ಅದಕ್ಕೆ ಸಂಬಂಧಪಟ್ಟ ಉದಾಹರಣೆಗಳನ್ನು ಈ ಕೆಳಗೆ ನೀಡಲಾಗಿದೆ.
ಅ. ಯಾವ ವ್ಯಾಸದಲ್ಲಿ ಕಾರ್ಯವಸ್ತುವನ್ನು ಅಳವಡಿಸಲ್ಪಡುತ್ತದೋ ಆ ವ್ಯಾಸ
ಆ. ಯಾವ ವ್ಯಾಸದಲ್ಲಿ ಇಂಡೆಕ್ಸ್ ಪ್ಲೇಟ್ ಅಳವಡಿಸಲ್ಪಡುತ್ತದೋ ಆ ವ್ಯಾಸ
ಇ. ಯಾವ ವ್ಯಾಸದಲ್ಲಿ ವಿಶೇಷವಾದ ಬುಶ್ ಅಳವಡಿಸಲ್ಪಡುತ್ತದೋ ಆ ವ್ಯಾಸ (ಈ ಮೂರೂ ವ್ಯಾಸಗಳು ಕಾನ್ಸೆಂಟ್ರಿಕ್ ಇರಲೇಬೇಕು)
ಈ. ಯಾವ ಸರ್ಫೇಸ್ ಇಂಡೆಕ್ಸ್ ಪ್ಲೇಟ್ ನಲ್ಲಿ ಅಳವಡಿಸಲ್ಪಡುತ್ತದೋ,
ಉ. ಯಾವ ಸರ್ಫೇಸ್ ವಿಶೇಷವಾದ ಬುಶ್ ಗಳ ಸಂಪರ್ಕದಲ್ಲಿರುತ್ತದೆಯೋ, ಅದು.
ಲೊಕೇಟರ್ ಇಂಡೆಕ್ಸ್ ಕ್ಯಾಪ್ ಸ್ಕ್ರೂ ಗಳ ಸಹಾಯದಿಂದ ಅಳವಡಿಸಲಾಗಿದೆ.
4. ಸ್ಲಿಪ್ ಬುಶ್ ಮತ್ತು ಲೈನರ್
ಸ್ಲಿಪ್ ಬುಶ್ ನ ಕೆಲಸವನ್ನು ನಾವು ಈ ಹಿಂದೆಯೇ ತಿಳಿದುಕೊಂಡಿದ್ದೇವೆ. ಸಾಧ್ಯವಾದಷ್ಟು ಮಟ್ಟಿಗೆ ಸ್ಟ್ಯಾಂಡರ್ಡ್ ಬುಶ್ ಗಳನ್ನು ಬಳಸುವಲ್ಲಿ ಪ್ರಾಧಾನ್ಯತೆಯನ್ನು ನೀಡಬೇಕು. ಕಾರ್ಯವಸ್ತುವಿನಲ್ಲಿ ಕೇವಲ 10 ಮಿ.ಮೀ. ವ್ಯಾಸದ ರಂಧ್ರಗಳನ್ನು ಮಾಡುವುದಾದಲ್ಲಿ, ಫಿಕ್ಸ್ ರಿನ್ಯುಯೇಬಲ್ ಬುಶ್ ಬಳಸಬಹುದು. ಆದರೆ 10H7 ವ್ಯಾಸದ ರಂಧ್ರಗಳನ್ನು ಮಾಡುವುದಾದರೆ ಸ್ಲಿಪ್ ರಿನ್ಯುಯೇಬಲ್ ಈ ವಿಧದ ಮೂರು ಬುಶ್ ಗಳನ್ನು ಬಳಸಬೇಕಾಗಬಹುದು. ಉದಾಹರಣೆ,
ಊ. Ø9.5 ಡ್ರಿಲ್ ಗೋಸ್ಕರ ಬುಶ್
ಋ. Ø14 ಡ್ರಿಲ್ ಗೋಸ್ಕರ ಬುಶ್ (ಕಾರ್ಯವಸ್ತುವಿನಲ್ಲಿರುವ ರಂಧ್ರಗಳಿಗೆ ಚ್ಯಾಂಫರ್ ಮಾಡಲು)
ಎ. Ø10 ರೀಮರ್ ಗೋಸ್ಕರ ಬಳಸಬೇಕಾಗಿರುವ ಬುಶ್.
ಇದರಿಂದಾಗಿ ಮೇಲಿನ ಉದಾಹರಣೆಯಲ್ಲಿ ಮೂರು ಸ್ಲಿಪ್ ರಿನ್ಯುಯೇಬಲ್ ಬುಶ್ ಗಳನ್ನು ಬಳಸಬೇಕಾಗುತ್ತದೆ. ಜಿಗ್ ಪ್ಲೇಟ್ ನಲ್ಲಿ ಸ್ಲಿಪ್ ಬುಶ್ ಬಳಸಲು ಆ ಮಾಪನದ ಲೈನರ್ ಅಳವಡಿಸಲಾಗಿದೆ.
5. ಸ್ಪೇಸರ್ಇಲ್ಲಿ ಬಳಸಿರುವ ಸ್ಪೇಸರ್ ಹಾರ್ಡ್ ಮತ್ತು ಗ್ರೈಂಡ್ ಮಾಡಲಾಗಿರುತ್ತದೆ. ಇಂಡೆಕ್ಸ್ ಪ್ಲೇಟ್ ತಿರುಗಿಸುವಾಗ ಈ ಸ್ಪೇಸರ್ ಬುಶ್ ನ ಸರ್ಫೇಸ್ ಗೆ ಉಜ್ಜಲ್ಪಟ್ಟಿದ್ದರಿಂದ ಸವೆಯಬಹುದು ಮತ್ತು ಇದು ಯೋಗ್ಯವಲ್ಲ. ಇದರಿಂದಾಗಿ 0.02 ಮಿ.ಮೀ. ಈ ನಿಯಂತ್ರಿಸಲ್ಪಟ್ಟ ಮಾಪನವು ಉಳಿಯುವುದಿಲ್ಲ. ಆದುದರಿಂದ ಸ್ಪೇಸರ್ ಹಾರ್ಡ್ ಮತ್ತು ಗ್ರೈಂಡಿಂಗ್ ಮಾಡುವುದು ಅತ್ಯಾವಶ್ಯವಕವಾಗಿದೆ.
6. ನರ್ಲ್ ನಾಬ್ಈ ನಾಬ್ ಇಂಡೆಕ್ಸ್ ಪಿನ್ ಹಿಂದೆ-ಮುಂದೆ ಮಾಡುವುದಕ್ಕೋಸ್ಕರ ನೀಡಲಾಗಿದೆ. ಅದು ಬುಶ್ ನ ಸರ್ಫೇಸ್ ನಲ್ಲಿ ಒರಗುತ್ತದೆ ಮತ್ತು ಇದರಿಂದಾಗಿ ಇಂಡೆಕ್ಸ್ ಪಿನ್ ಹೆಚ್ಚು ಹಿಂದೆ-ಮುಂದೆ ಸರಿಯುವುದಿಲ್ಲ. ಈ ಇಂಡೆಕ್ಸ್ ಪಿನ್ ಹಿಂದೆ ಎಳೆಯುವಾಗ ಸ್ಪ್ರಿಂಗ್ ನ ಫೋರ್ಸ್ ಗೆ ವಿರುದ್ಧವಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಪಿನ್ ಸರಿಯಾಗಿ ಹಿಡಿಯಲು ಮುಂಭಾಗದಲ್ಲಿ ನಾಬ್ ನ ವ್ಯಾಸವನ್ನು ಕಡಿಮೆ ಮಾಡಿ ನಾಬ್ ಗೆ ಹೆಡ್ ನಂತಹ ಆಕಾರವನ್ನು ನೀಡಲಾಗಿದೆ. ಇದರಿಂದಾಗಿ ಪಿನ್ ಹಿಂದೆ-ಮುಂದೆ ಎಳೆಯುವುದು ಸುಲಭವಾಗುತ್ತದೆ. ಸ್ಪ್ರಿಂಗ್ ನ ಫೋರ್ಸ್ ನಿಂದಾಗಿಯೇ ಪಿನ್ ಮುಂದೆ ಸರಿಯುತ್ತದೆ.
7. ಇಂಡೆಕ್ಸ್ ಪಿನ್ ನ ಬುಶ್ಈ ಬುಶ್ ಇಂಡೆಕ್ಸ್ ಪಿನ್ ನ ಚಟುವಟಿಕೆ ನಿರ್ದೋಷವಾಗಿ ಆಗಲು ಇದನ್ನು ನೀಡಲಾಗಿದೆ. ಇಂಡೆಕ್ಸ್ ಪಿನ್ ಈ ಬುಶ್ ನೊಳಗೆ ಗೈಡ್ ಮಾಡಲಾಗಿರುತ್ತದೆ. ಈ ಬುಶ್ ಹಾರ್ಡ ಮತ್ತು ಗ್ರೈಂಡಿಂಗ್ ಮಾಡಲಾಗಿರುತ್ತದೆ. ಸ್ಕ್ರೂನ ಸಹಾಯದಿಂದ ಅದನ್ನು ಬಾಡಿಯಲ್ಲಿ ಅಳವಡಿಸಲಾಗಿದೆ. ಈ ಬುಶ್ ನ ಒಳ ವ್ಯಾಸದಲ್ಲಿ ಸ್ವಲ್ಪ ದೂರದಲ್ಲಿ ದೊಡ್ಡದಾಗಿ ಮಾಡಿ ಗ್ರೈಂಡಿಂಗ್ ನ ಉದ್ದವನ್ನು ಕಡಿಮೆ ಮಾಡಲಾಗಿರುತ್ತದೆ. ಗ್ರೈಂಡಿಂಗ್ ಮಾಡಬೇಕಾದ ಸರ್ಫೇಸ್ ಯಾವಾಗಲೂ ಕನಿಷ್ಠವಾಗಿಡಬೇಕು. ಇಂಡೆಕ್ಸ್ ಪಿನ್ ಗೆ ಗೈಡ್ ಮಾಡುವ ವ್ಯಾಸ ಮತ್ತು ಬಾಡಿಗೆ ತಾಗುವ ಸರ್ಫೇಸ್ ಇವುಗಳು ಒಂದಕ್ಕೊಂದು ಸಮಕೋನದಲ್ಲಿರಬೇಕು.
ಈ ಜಿಗ್ ನಲ್ಲಿರುವ ಮಹತ್ವದ ಭಾಗಗಳ ಕೆಲಸವನ್ನು ನೋಡಲಾಯಿತು. ಇನ್ನಿತರ ಭಾಗಗಳ ಕೆಲಸವನ್ನು ಈ ಹಿಂದಿನ ಲೇಖನಗಳಲ್ಲಿ ತಿಳಿದುಕೊಂಡಿದ್ದೇವೆ. ತಮಗೆ ಈ ಕುರಿತಾಗಿ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಅಥವಾ ಅನುಮಾನಗಳಿದ್ದಲ್ಲಿ ನಮಗೆ ತಿಳಿಸಿರಿ. ಅದರ ಕುರಿತಾಗಿ ಎಲ್ಲ ರೀತಿಯ ಪರಿಹಾರವನ್ನು ಸೂಚಿಸುತ್ತೇವೆ.
ಅಜಿತ ದೇಶಪಾಂಡೆ
ಅತಿಥಿ ಪ್ರಾಧ್ಯಾಪಕರು, ARAI SAE
9011018388
ajitdeshpande21@gmail.com
ಅಜಿತ ದೇಶಪಾಂಡೆ ಇವರು ಜಿಗ್ಸ್ ಮತ್ತು ಫಿಕ್ಸ್ಚರ್ ಕ್ಷೇತ್ರದಲ್ಲಿ ಸುಮಾರು 37 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಕಿರ್ಲೋಸ್ಕರ್, ಗ್ರೀವ್ಜ್ ಲೊಂಬಾರ್ಡಿನಿ ಲಿ., ಟಾಟಾ ಮೋಟರ್ಸ್ ಇಂತಹ ವಿವಿಧ ಕಂಪನಿಗಳಲ್ಲಿ ಬೇರೆ ಬೇರೆ ಅಧಿಕಾರ ಸ್ಥಾನಗಳಲ್ಲಿ ಸೇವೆಯನ್ನು ನಿರ್ವಹಿಸಿದ್ದಾರೆ.