ಡ್ರಿಲ್ಲಿಂಗ್ ಜಿಗ್ ಫಿಕ್ಸ್ಚರ್ : 3

20 Mar 2020 15:01:00
 
 
ಎಂಗಲ್ ಪ್ಲೇಟ್ ಟೈಪ್ ಜಿಗ್ ಮತ್ತು ಎರಡು ವಿವಿಧ ಜಿಗ್‌ಗಳ ಕುರಿತು ‘ಲೋಹಕಾರ್ಯ’ದ ಫೆಬ್ರವರಿ 2020 ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ನಾವು ತಿಳಿದುಕೊಂಡೆವು. ಹಾಗೆಯೇ ಈ ಜಿಗ್‌ಗಳ ಮಹತ್ವದ ಭಾಗಗಳ ಕೆಲಸದ ಕುರಿತು ವಿವರಗಳನ್ನು ತಿಳಿದುಕೊಂಡೆವು. ಹಿಂದಿನ ಲೇಖನದಲ್ಲಿ ಅರಿತುಕೊಂಡ ಎರಡೂ ಜಿಗ್‌ಗಳನ್ನು ಚಿಕ್ಕ ಕಾರ್ಯವಸ್ತುಗಳಿಗೋಸ್ಕರ ಬಳಸಲಾಗುತ್ತಿತ್ತು. ಈ ರೀತಿಯ ಜಿಗ್ ದೊಡ್ಡ ಭಾಗಗಳಿಗೋಸ್ಕರವೂ ತಯಾರಿಸಲಾಗುತ್ತದೆ. ಉದಾಹರಣೆ, ಕ್ಲಚ್ ಹೌಸಿಂಗ್, ಫ್ಲೈ ವೀಲ್ ಹೌಸಿಂಗ್, ವಾಟರ್ ಪಂಪ್‌ಗಳ ಫುಟ್ ಮೌಂಟಿಂಗ್ ಹೋಲ್ ಇತ್ಯಾದಿ. ಅ್ಯಂಗಲ್ ಪ್ಲೇಟ್ ಟೈಪ್ ಜಿಗ್ ಬೃಹತ್ ಪ್ರಮಾಣದಲ್ಲಿ ಬಳಸುತ್ತಿರುವುದು ಕಂಡುಬರುತ್ತಿದೆ. ಇದರ ಪ್ರಮುಖವಾದ ಕಾರಣವೆಂದರೆ, ಈ ಜಿಗ್ ಟೇಬಲ್‌ನಲ್ಲಿ ದೃಢವಾಗಿ ಹಿಡಿಯಲ್ಪಡುತ್ತಿದ್ದು, ಅದರಲ್ಲಿ ಕಾರ್ಯವಸ್ತುವನ್ನು ಲೋಡ್ ಮಾಡಲಾಗುತ್ತದೆ. ಜಿಗ್ ಹೆಚ್ಚು ಸಲ ಎತ್ತುವ ಅಗತ್ಯ ಇಲ್ಲದಿರುವುದರಿಂದ ಜಿಗ್‌ನ ಭಾರವು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾದರೂ ಯಾವುದೇ ತೊಂದರೆ ಇರುವುದಿಲ್ಲ. ಇದರಿಂದಾಗಿ ಅದನ್ನು ನಮಗೆ ಬೇಕಾದಂತೆ ದೃಢವಾಗಿ ತಯಾರಿಸುವುದು ಸಾಧ್ಯವಾಗಿದೆ. ಈ ಲೇಖನದಲ್ಲಿ ನಾವು ಟಂಬಲ್ ಟೈಪ್ ಜಿಗ್ ಕುರಿತು ವಿವರಗಳನ್ನು ತಿಳಿಯಲಿದ್ದೇವೆ.
 

1_1  H x W: 0 x 
 
ಟಂಬಲ್ ಟೈಪ್ ಜಿಗ್
 
ಟಂಬಲ್ ಎಂದರೆ ತಿರುಗು-ಮುರುಗಾಗಿ ಮಾಡುವುದು. ಚಿತ್ರ ಕ್ರ. 1 ರಲ್ಲಿ ಈ ರೀತಿಯ ಜಿಗ್ ತೋರಿಸಲಾಗಿದೆ. ಅದರಲ್ಲಿರುವ ಭಾಗಗಳ ಕುರಿತಾದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
 
1. ಜಿಗ್‌ನ ಫೀಟ್ ‘A’
 
ಜಿಗ್‌ನಲ್ಲಿರುವ ಈ ಭಾಗವು ಹಾರ್ಡ್ ಮತ್ತು ಗ್ರೈಂಡ್ ಮಾಡಿದ್ದಾಗಿರುತ್ತದೆ. ಜಿಗ್ ಅಲುಗಾಡಬಾರದು ಎಂಬುದಕ್ಕೋಸ್ಕರ ಈ ಎಲ್ಲ 4 ಫೀಟ್‌ಗಳ ಸರ್ಫೇಸ್ ಒಂದೇ ಮಟ್ಟದಲ್ಲಿ ಗ್ರೈಂಡ್ ಮಾಡಲಾಗಿರುತ್ತದೆ. ರಂಧ್ರಗಳ ಡ್ರಿಲಿಂಗ್ ಮಾಡುತ್ತಿರುವಾಗ ಜಿಗ್ ಫೀಟ್‌ನಲ್ಲಿ ಒರಗಿರುತ್ತದೆ. ಇದರಿಂದಾಗಿ ರಂಧ್ರಗಳ ಯಂತ್ರಣೆಯು ಕಾರ್ಯವಸ್ತುವಿನ ಸರ್ಫೇಸ್‌ಗೆ ನೇರವಾಗಿರುತ್ತದೆ. ಈ ಫೀಟ್ ಜಿಗ್‌ಗೆ ಹೆಕ್ಸ್ ನಟ್‌ನ ಸಹಾಯದಿಂದ ಅಳವಡಿಸಲ್ಪಟ್ಟಿರುತ್ತದೆ. ಅದರ ಸ್ಟ್ಯಾಂಡರ್ಡೈಸೆಶನ್ ಮಾಡಬೇಕು.
 
2. ಜಿಗ್‌ನ ಫೀಟ್ ‘B’
 
ಜಿಗ್‌ನಲ್ಲಿರುವ ಈ ಭಾಗವು ಕಠಿಣ ಮತ್ತು ಗ್ರೈಂಡ್ ಮಾಡಲಾಗಿರುತ್ತದೆ. ಜಿಗ್ ಅಲುಗಾಡದಿರಲು ಈ ಎಲ್ಲ 4 ಫೀಟ್‌ಗಳ ಸರ್ಫೇಸ್ ಒಂದೇ ಮಟ್ಟದಲ್ಲಿ ಗ್ರೈಂಡ್ ಮಾಡಲಾಗಿರುತ್ತದೆ. ಈ ಫೀಟ್ ಕೂಡಾ ಹೆಕ್ಸ್ ನಟ್‌ನ ಸಹಾಯದಿಂದ ಅಳವಡಿಸಲ್ಪಟ್ಟಿರುತ್ತದೆ. ಕಾರ್ಯವಸ್ತುವನ್ನು ಜಿಗ್‌ನಲ್ಲಿ ಇಟ್ಟು ದೃಢವಾಗಿ ಹಿಡಿಯುವಾಗ, ಜಿಗ್ ವಿರುದ್ಧವಾಗಿ ಇಟ್ಟು (ಚಿತ್ರ ಕ್ರ. 2) ಈ ಕ್ರಿಯೆಯನ್ನು ಮಾಡುವುದು ಸುಲಭವಾಗುತ್ತದೆ. ಇದೇ ಈ ಫೀಟ್‌ಗಳ ಕೆಲಸವಾಗಿದೆ. ಅಂದರೆ ಕಾರ್ಯವಸ್ತುವನ್ನು ಲೋಡ್ ಮಾಡುವಾಗ ಈ ಜಿಗ್ ‘B’ ಫೀಟ್‌ನಲ್ಲಿ ಇಡಬೇಕಾಗುತ್ತದೆ. ಡ್ರಿಲ್ಲಿಂಗ್ ಮಾಡುವಾಗ ಮಾತ್ರ ಅದನ್ನು ‘A’ ಫೀಟ್‌ನಲ್ಲಿ ಇಟ್ಟೇ ಡ್ರಿಲ್ಲಿಂಗ್ ಮಾಡಲಾಗುತ್ತದೆ. ಅಂದರೆ ಪ್ರತಿಯೊಂದು ಕಾರ್ಯವಸ್ತುವನ್ನು ತಯಾರಿಸುವಾಗ ಜಿಗ್ ಒಮ್ಮೊಮ್ಮೆ ವಿರುದ್ಧ ಮಾಡಬೇಕಾಗುತ್ತದೆ. ಇದರಿಂದಾಗಿ ಇದಕ್ಕೆ ಟಂಬಲ್ ಜಿಗ್ ಎಂದು ಹೇಳಲಾಗುತ್ತದೆ. ಟ್ರೂನಿಯನ್ ಟೈಪ್ ಫಿಕ್ಸ್ಚರ್‌ನಲ್ಲಿ ಇದೇ ತತ್ವವನ್ನು ಬಳಸಲಾಗುತ್ತದೆ. ಆ ಕುರಿತು ಮುಂದಿನ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳಲಿದ್ದೇವೆ.
 
3. ಜಿಗ್ ಬುಶ್
 
ಈ ಜಿಗ್‌ನಲ್ಲಿ ಹೆಡೆಡ್ ಜಿಗ್ ಬುಶ್ ಬಳಸಲಾಗಿದೆ. ಕಾರ್ಯವಸ್ತುವಿನಲ್ಲಿ ಕೇವಲ 6 ಮಿ.ಮೀ. ವ್ಯಾಸದ 4 ರಂಧ್ರಗಳನ್ನು ಮಾಡಬೇಕಾಗಿರುವುದರಿಂದ ಹೆಡೆಡ್ ಫಿಕ್ಸ್ ಬುಶ್ ಬಳಸಲಾಗಿದೆ. ಕಾರ್ಯವಸ್ತುವಿನ ಸರ್ಫೇಸ್ ಮತ್ತು ಬುಶ್ ಇದರಲ್ಲಿ ಸ್ವಲ್ಪವೇ ಜಾಗವಿರುವುದರಿಂದ ಚಿಪ್ ಬುಶ್‌ನಿಂದಲೇ ಹೊರಗೆ ಬೀಳುತ್ತವೆ. ಇದರಿಂದಾಗಿ ಕಡಿಮೆ ಉದ್ದದ ಡ್ರಿಲ್‌ಕೂಡಾ ಬಳಸಬಲ್ಲೆವು.
 
4. ಜಿಗ್ ಪ್ಲೇಟ್
 
ಇದೊಂದು ಚೌಕೋನವಾಗಿರುವ ಪ್ಲೇಟ್ ಆಗಿದೆ. ಈ ಪ್ಲೇಟ್‌ನ ಎರಡೂ ಸರ್ಫೇಸ್‌ಗಳನ್ನು ಗ್ರೈಂಡ್ ಮಾಡಲಾಗಿರುತ್ತದೆ. ಪ್ಲೇಟ್‌ನ ಒಂದು ಸರ್ಫೇಸ್‌ನಲ್ಲಿ ಕಾರ್ಯವಸ್ತುವು ಆಗಾಗ ಅಳವಡಿಸಲ್ಪಡುತ್ತಿರುವುದರಿಂದ ಈ ಭಾಗವು ಕೇಸ್‌ಹಾರ್ಡ್ ಮಾಡಲಾಗಿರುತ್ತದೆ. ಕಾರಣ ಇದರಲ್ಲಿ ಜಿಗ್‌ನ ಫೀಟ್ ಮತ್ತು ಲೊಕೇಟರ್ ಅಳವಡಿಸಲು H7 ಟಾಲರನ್ಸ್‌ನ ರಂಧ್ರಗಳಿರುತ್ತವೆ. ಈ ರಂಧ್ರಗಳ ಸರ್ಫೇಸ್ ಸಾಫ್ಟ್ ಇರುತ್ತದೆ, ಆದ್ದರಿಂದ ಈ ಪ್ಲೇಟ್ ಕೇಸ್‌ಹಾರ್ಡ್ ಮಾಡಲಾಗಿರುತ್ತದೆ. ಎರಡನೇ ಪರ್ಯಾಯವೆಂದರೆ ಪ್ಲೇಟ್ ಮತ್ತು ಕಾರ್ಯವಸ್ತು ಇವೆರಡರಲ್ಲಿ ಹಾರ್ಡ್ ರೆಸ್ಟ್ ಪ್ಯಾಡ್, ಸ್ಕ್ರೂಗಳ ಸಹಾಯದಿಂದ ಅಳವಡಿಸಬಲ್ಲೆವು. ಆದರೆ ಇದರಿಂದಾಗಿ ಡ್ರಿಲ್‌ನ ಉದ್ದವು ಹೆಚ್ಚುತ್ತದೆ ಮತ್ತು ಅದರ ಬಾಳಿಕೆಯೂ ಕಡಿಮೆ ಆಗುತ್ತದೆ. ಅರ್ಥಾತ್ ಯಾವ ಪರ್ಯಾಯವನ್ನು ಆಯ್ಕೆ ಮಾಡುವುದು, ನಿಮಗೆ ಎಷ್ಟು ಉತ್ಪಾದನೆಯು ಬೇಕೋ, ಅದಕ್ಕೆ ಅನುಸಾರವಾಗಿ ನಿರ್ಧರಿಸಬೇಕಾಗುತ್ತದೆ. ಎರಡೂ ಪರ್ಯಾಯಗಳು ತಮ್ಮ ತಮ್ಮ ರೀತಿಯಲ್ಲಿ ಯೋಗ್ಯವಾಗಿರುತ್ತವೆ.
 

2_1  H x W: 0 x 
 
5. ಲೊಕೇಟರ್
 
ಲೊಕೇಟರ್ ಕಾರ್ಯವಸ್ತುವನ್ನು ಜಿಗ್‌ನಲ್ಲಿ ಯೋಗ್ಯವಾದ ಜಾಗದಲ್ಲಿ ಅಳವಡಿಸುತ್ತದೆ. ಈ ಲೊಕೇಟರ್ ಪ್ಲೇಟ್‌ನಲ್ಲಿ ಗೈಡ್ ಮಾಡಿ ಕ್ಯಾಪ್ ಸ್ಕ್ರೂನ ಸಹಾಯದಿಂದ ಅಳವಡಿಸಲಾಗಿದೆ. ಪ್ಲೇಟ್‌ನಲ್ಲಿ ಲೊಕೇಟರ್ ಯಾವ ರಂಧ್ರದಲ್ಲಿ ಅಳವಡಿಸಲ್ಪಟ್ಟಿದೆಯೋ, ಅದರ ಕೇಂದ್ರ ಬಿಂದು ಮತ್ತು ನಾಲ್ಕು ಬುಶ್‌ಗಳ ರಂಧ್ರಗಳ ಒಟ್ಟಾಗಿರುವ ಕೇಂದ್ರಸ್ಥಾನವು ಒಂದೇ ಇರಬೇಕು. ಈ ಲೊಕೇಟರ್‌ಗಳ ಎರಡನೇ ಬದಿಯಲ್ಲಿ ಥ್ರೇಡ್‌ಗಳನ್ನು ಮಾಡಲಾಗಿರುತ್ತದೆ. ನಟ್‌ನ ಸಹಾಯದಿಂದ ಕಾರ್ಯವಸ್ತುವನ್ನು ಹಿಡಿಯಲಾಗುತ್ತದೆ. ಈ ಥ್ರೆಡ್‌ಗಳನ್ನು ಮೃದುವಾಗಿ ಇಡಬೇಕಾಗುತ್ತದೆ. ಆದ್ದರಿಂದಲೇ ಲೊಕೇಟರ್ ಕೇಸ್‌ಹಾರ್ಡ್ ಮಾಡಬೇಕಾಗುತ್ತದೆ.
 
6. ‘C’ ವಾಶರ್
 
ಇದರ ಕುರಿತಾದ ವಿವರಗಳನ್ನು ಮತ್ತು ಅದರ ಕಾರ್ಯನಿರ್ವಹಣೆಯನ್ನು ಈ ಹಿಂದಿನ ಲೇಖನದಲ್ಲಿ ನಾವು ತಿಳಿದುಕೊಂಡಿದ್ದೇವೆ. ಈ ‘C’ ವಾಶರ್‌ನಲ್ಲಿ ಅಳವಡಿಸಿದ ವಾಶರ್‌ನ ಗರಿಷ್ಠ ವ್ಯಾಸವು ಕಾರ್ಯವಸ್ತುವಿನ ಒಳಗಿನ ವ್ಯಾಸಕ್ಕಿಂತ ಕಡಿಮೆ ಇರುವುದು ಮಹತ್ವದ್ದಾಗಿದೆ. ಹಾಗಿಲ್ಲದಿದ್ದಲ್ಲಿ ಕಾರ್ಯವಸ್ತು ಜಿಗ್‌ನಿಂದ ಹೊರಗೆ ತೆಗೆಯಲು ನಟ್ ಸಂಪೂರ್ಣವಾಗಿ ಹೊರಗೆ ತೆಗೆಯಬೇಕಾಗುತ್ತದೆ. ಇದಕ್ಕೋಸ್ಕರ ನಟ್ ಸುಮಾರು 8 ರಿಂದ 10 ಸಲ ತಿರುಗಿಸಬೇಕಾಗುತ್ತದೆ. ಇದಕ್ಕೋಸ್ಕರ ತುಂಬಾ ಸಮಯವು ವ್ಯರ್ಥವಾಗಬಹುದು, ಹಾಗೆಯೇ ಕೆಲಸಗಾರರಿಗೂ ಆಯಾಸವು ಉಂಟಾಗಬಹುದು ಮತ್ತು ‘C’ ವಾಶರ್ ಬಳಸಿದಲ್ಲಿ ಯಾವುದೇ ಪ್ರಯೋಜನವಿಲ್ಲ. ಅಂದರೆ ಲೊಕೇಟರ್‌ನಲ್ಲಿ ಯಾವ ಥ್ರೆಡ್ ನೀಡಲಾಗಿದೆಯೋ, ಅದರ ಆಯ್ಕೆಯನ್ನು ಮಾಡುವಾಗ ಈ ಅಂಶಗಳನ್ನು ಗಮನಿಸಬೇಕಾಗುತ್ತದೆ.
 
ಈ ವಿಧದ ಜಿಗ್‌ನಲ್ಲಿ ಕೈಯಿಂದಲೇ ಜಿಗ್ ಹಿಂದು-ಮುಂದು ಅಥವಾ ಮೇಲೆ-ಕೆಳಗೆ ಮಾಡಲಾಗುವುದರಿಂದ ಇದರ ಭಾರವು 5 ರಿಂದ 7 ಕಿ.ಗ್ರಾಂ.ನಷ್ಟೇ ಇರಬೇಕಾಗುತ್ತದೆ. ಅಂದರೆ ಇದು ಚಿಕ್ಕದಾದ ಕಾರ್ಯವಸ್ತುಗಳ ಡ್ರಿಲಿಂಗ್‌ಗೋಸ್ಕರ ಬಳಸಲಾಗುತ್ತದೆ. ಈ ಜಿಗ್ ಡ್ರಿಲಿಂಗ್ ಮಾಡುವಾಗ ಕೈಯಿಂದಲೇ ಹಿಡಿಯಬೇಕಾಗುತ್ತದೆ. ಜಿಗ್‌ಗೋಸ್ಕರ ಬೇರೆ ಕ್ಲ್ಯಾಂಪಿಂಗ್ ಮಾಡುವ ಆವಶ್ಯಕತೆ ಇರುವುದಿಲ್ಲ. ಸಾಮಾನ್ಯವಾಗಿ 6 ರಿಂದ 8 ಮಿ.ಮೀ. ವ್ಯಾಸದ ರಂಧ್ರಗಳ ಡ್ರಿಲಿಂಗ್ ಮಾಡುವಾಗ ಜಿಗ್ ಕೈಯಿಂದ ಹಿಡಿಯಬಹುದಾಗಿದೆ. ಎರಡೂ ಬದಿಗಳಿಂದ ಡ್ರಿಲಿಂಗ್ ಇದ್ದಲ್ಲಿ ಇದೇ ರೀತಿಯ ಜಿಗ್ ಬಳಸಬಹುದು.
 
 
 

ajit deshoande_1 &nb 
ಅಜಿತ ದೇಶಪಾಂಡೆ
ಅತಿಥಿ ಪ್ರಾಧ್ಯಾಪಕರು, ARAI SAE 
9011018388
ajitdeshpande21@gmail.com
 
ಅಜಿತ ದೇಶಪಾಂಡೆ ಇವರು ಜಿಗ್ಸ್ ಮತ್ತು ಫಿಕ್ಸ್ಚರ್ ಕ್ಷೇತ್ರದಲ್ಲಿ ಸುಮಾರು 36 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಕಿರ್ಲೋಸ್ಕರ್, ಗ್ರೀವ್ಜ್ ಲೊಂಬಾರ್ಡಿನಿ ಲಿ., ಟಾಟಾ ಮೋಟರ್ಸ್ ಇಂತಹ ವಿವಿಧ ಕಂಪನಿಗಳಲ್ಲಿ ಬೇರೆ ಬೇರೆ ಅಧಿಕಾರಸ್ಥಾನಗಳಲ್ಲಿ ಸೇವೆಯನ್ನು ನಿರ್ವಹಿಸಿದ್ದಾರೆ.
 
 
Powered By Sangraha 9.0