ಡ್ರಿಲ್ಲಿಂಗ್ ಫಿಕ್ಸ್ಚರ್ : 2

27 Feb 2020 17:29:00
  
ಈ ಹಿಂದಿನ ಲೇಖನದಲ್ಲಿ ಟೆಂಪ್ಲೆಟ್, ಟೆಂಪ್ಲೆಟ್ ಜಿಗ್, ಪ್ಲೇಟ್ ಟೈಪ್ ಜಿಗ್, ಡ್ರಿಲಿಂಗ್ ಟೆಂಪ್ಲೆಟ್ ಮತ್ತು ಜಿಗ್‌ನ ಕುರಿತು ತಿಳಿದುಕೊಂಡೆವು. ಈ ಲೇಖನದಲ್ಲಿ ನಾವು ಅ್ಯಂಗಲ್ ಪ್ಲೇಟ್ ಟೈಪ್ ಜಿಗ್ ಕುರಿತು ತಿಳಿದುಕೊಳ್ಳಲಿದ್ದೇವೆ. ಅದಕ್ಕೋಸ್ಕರ ಮೊದಲಾಗಿ ಒಂದು ಸಾಮಾನ್ಯವಾದ ಜಿಗ್ ನೋಡೋಣ. ಚಿತ್ರ ಕ್ರ. 1 ರಲ್ಲಿ ಒಂದು ಅ್ಯಂಗಲ್ ಪ್ಲೇಟ್ ಟೈಪ್ ಜಿಗ್ ತೋರಿಸಲಾಗಿದೆ.
 

1_1  H x W: 0 x 
 
ಚಿತ್ರ ಕ್ರ. 1 ರಲ್ಲಿ ವಿವಿಧ ಭಾಗಗಳನ್ನು ತೋರಿಸಲಾಗಿದ್ದು ಅವುಗಳನ್ನು ಮುಂದೆ ನೀಡಲಾಗಿದೆ.
1. ಜಿಗ್ (ಪ್ರಮುಖ) ಬಾಡಿ
2. ಲೊಕೇಟಿಂಗ್ ಪಿನ್ (ಲೊಕೇಟರ್)
3. ‘C’ ವಾಶರ್
4. ಕ್ಲಾOಪಿಂಗ್ ನಟ್
5. ಲೈನರ್ ಬುಶ್
6. ಸ್ಲಿಪ್ ಬುಶ್ - ಡ್ರಿಲ್‌ಗೋಸ್ಕರ
7. ಸ್ಲಿಪ್ ಬುಶ್ - ರೀಮರ್‌ಗೋಸ್ಕರ
8. ರೀಟೇನಿಂಗ್ ಸ್ಕ್ರೂ (ಈ ಸ್ಕ್ರೂ ಬುಶ್ ಹಿಡಿದಿಡುತ್ತದೆ)
9. ಕಾರ್ಯವಸ್ತು
 
ಈಗ ನಾವು ಪ್ರತಿಯೊಂದು ಭಾಗದ ಕೆಲಸವು ಏನಿದೆ, ಎಂಬುದನ್ನು ತಿಳಿದುಕೊಳ್ಳೋಣ. ಕಾರ್ಯವಸ್ತುವಿನ (ಚಿತ್ರ ಕ್ರ. 2) ‘ಡ’ ವ್ಯಾಸ H7 ಗುಣಮಟ್ಟದ್ದು ಮತ್ತು ಹೊರಗಿನ ವ್ಯಾಸ) ಫಿನಿಶ್ ಮಾಡಿದ್ದಾಗಿದೆ. ಹಾಗೆಯೇ ಎರಡೂ ಬದಿಗಳ ಸರ್ಫೇಸ್ ಕೂಡಾ ಫಿನಿಶ್ ಮಾಡಲಾಗಿದೆ. ಕಾರ್ಯವಸ್ತು ‘ಡ’ ವ್ಯಾಸದಲ್ಲಿ ಲೊಕೇಟ್ ಮಾಡಲಾಗಿದೆ. 
 
ಜಿಗ್ (ಪ್ರಮುಖವಾದ) ಬಾಡಿ
 
ಈ ಫಿಕ್ಸ್ಚರ್‌ನ ಪ್ರಮುಖವಾದ ಚೌಕಟ್ಟಾಗಿದೆ, ಅದರಲ್ಲಿ ಉಳಿದ ಭಾಗ ಅಳವಡಿಸಲಾಗಿರುತ್ತವೆ ಮತ್ತು ಇದರಲ್ಲಿಯೇ ಫಿಕ್ಸ್ಚರ್‌ನ ದೃಢತೆಯೂ ಅವಲಂಬಿಸಿರುತ್ತದೆ. ಈ ಭಾಗವು ಎರಕ ಹಾಕಿದ ಕಬ್ಬಿಣದಿಂದ ಕೂಡಾ (ಕಾಸ್‌ಟ್‌ ಆಯರ್ನ್) ತಯಾರಿಸಬಹುದಾಗಿದೆ. ಆದರೆ ಇದಕ್ಕೋಸ್ಕರ ಅದರ ಆಕಾರದ ಸ್ಟಾOಡರ್ಡೈಜೆಸನ್ ಮಾಡುವುದು ತುಂಬಾ ಅವಶ್ಯಕವಾಗಿದೆ. ಕಾರಣ ಡಿಸೈನ್ ಮಾಡುವ ಪ್ರತಿಯೊಬ್ಬನೂ ಒಂದು ವೇಳೆ ಅದಕ್ಕೆ ಬೇಕಾಗುವಷ್ಟೇ ಅದೇ ಅಳತೆಯ ಚೌಕಟ್ಟನ್ನು ತಯಾರಿಸಿದಲ್ಲಿ ಅಷ್ಟೇ ವಿಧದ ಚೌಕಟ್ಟುಗಳು ತಯಾರಿಸಲ್ಪಡುತ್ತವೆ ಮತ್ತು ಆ ಎಲ್ಲ ಪ್ಯಾಟರ್ನ್‌ಗಳನ್ನು ನಿರ್ವಹಿಸುವುದು ಮಾತ್ರ ತುಂಬಾ ಕಠಿಣವಾದ ಕೆಲಸವಾಗಬಹುದು. ಇದರಿಂದಾಗಿ ಹೆಚ್ಚಾಗಿ ಈ ಫಿಕ್ಸ್ಚರ್‌ಗಳನ್ನು ವೆಲ್ಡಿಂಗ್ ಮಾಡಿ ತಯಾರಿಸುತ್ತಾರೆ ಅಥವಾ ಬಿಲ್ಟ್ ‌ಅಪ್ ಮಾಡಿ ತಯಾರಿಸುತ್ತಾರೆ. ಬಿಲ್ಟ್ ಅಪ್ ಎಂದರೆ ಫಿಕ್ಸ್ಚರ್‌ನ ಬೇರೆಬೇರೆ ಭಾಗಗಳನ್ನು ತಯಾರಿಸಿ ನಂತರ ಅವುಗಳನ್ನು ಜೋಡಿಸಲಾಗುತ್ತದೆ ಮತ್ತು ಅಗತ್ಯವಿದ್ದಲ್ಲಿ ಸ್ಕ್ರೂನೊಂದಿಗೆ ಡಾವೆಲ್ ಕೂಡಾ ಬಳಸಲಾಗುತ್ತದೆ. ವೆಲ್ಡಿಂಗ್ ಮಾಡಿದಾಗ ಸ್ಟ್ರೆಸ್ ರಿಲೀವಿಂಗ್ ಮಾಡುವುದು ಅತ್ಯಾವಶ್ಯಕವಾಗಿದೆ. ಈ ಚೌಕಟ್ಟು ತಯಾರಿಸಲು ಮೈಲ್ಡ್‌ ಸ್ಟೀಲ್ (M.S.) ಬೃಹತ್ ಪ್ರಮಾಣದಲ್ಲಿ ಬಳಸಲಾಗುತ್ತದೆ.
 

2_1  H x W: 0 x 
 
ಲೊಕೇಟಿಂಗ್ ಪಿನ್ (ಲೊಕೇಟರ್)
 
ಕಾರ್ಯವಸ್ತುವನ್ನು ನಿರ್ದೋಷವಾಗಿ ಲೊಕೇಟ್ ಮಾಡುವುದು ಇದರ ಪ್ರಮುಖವಾದ ಕೆಲಸವಾಗಿದೆ. ಈ ಭಾಗ ಒಳ-ಹೊರ ಹಾರ್ಡ್ ಅಥವಾ ಕೇಸ್ ಹಾರ್ಡ್ ಮಾಡಲಾಗುತ್ತದೆ ಮತ್ತು ಅದರ ವ್ಯಾಸ, ಒರಗುವ ಸರ್ಫೇಸ್ ಅಗತ್ಯಕ್ಕೆ ತಕ್ಕಂತೆ ಗ್ರೈಂಡ್ ಮಾಡಲಾಗಿರುತ್ತದೆ. ಲೊಕೇಟರ್‌ನ ಫಿಕ್ಸ್ಚರ್‌ನಲ್ಲಿ ಅಳವಡಿಸಲಾಗಿರುವ ವ್ಯಾಸ ಮತ್ತು ಕಾರ್ಯವಸ್ತುವಿನಲ್ಲಿ ಅಳವಡಿಸಲ್ಪಡುವ ವ್ಯಾಸ ಕಾನ್ಸೆಂಟ್ರಿಕ್ ಇರಲೇಬೇಕು. ಕಾರ್ಯವಸ್ತು ಯಾವ ದಿಕ್ಕಿನಲ್ಲಿ ಅಳವಡಿಸಲ್ಪಡುತ್ತದೆಯೋ ಆ ಲೊಕೇಟರ್‌ನ ಪಕ್ಕಕ್ಕೆ ಚಾಂಫರ್ ನೀಡಿದ್ದರಿಂದ ಕಾರ್ಯವಸ್ತುವನ್ನು ತೆಗೆಯುವುದು ಮತ್ತು ಅಳವಡಿಸುವುದು ಸುಲಭವಾಗುತ್ತದೆ. ಚಿತ್ರ ಕ್ರ. 2 ರಲ್ಲಿ ತೋರಿಸಿದಂತೆ ಕಾರ್ಯವಸ್ತು ಕಾಣುತ್ತದೆ. ಈ ಲೊಕೇಟರ್‌ನಿಂದಾಗಿ ಕಾರ್ಯವಸ್ತುವಿನ ಚಟುವಟಿಕೆ ಹೇಗೆ ನಿಯಂತ್ರಿಸಲ್ಪಡುತ್ತದೆ, ಎಂಬುದನ್ನು ನೊಡೋಣ. ಮೊದಲ ಲೇಖನದಲ್ಲಿ ನಾವು ‘12 ಡಿಗ್ರಿಸ್ ಆಫ್ ಪ್ರೀಡಮ್’ ಅಂದರೆ ಏನು ಎಂಬುದನ್ನು ತಿಳಿದುಕೊಂಡೆವು. ಈ ಲೇಖನದಲ್ಲಿ ಅದರ ಕೆಲಸವು ಹೇಗೆ ನಡೆಯುತ್ತದೆ, ಎಂಬುದನ್ನು ತಿಳಿದುಕೊಳ್ಳೋಣ.
 

3_1  H x W: 0 x 
 
12 ಡಿಗ್ರೀಸ್ ಆಫ್ ಪ್ರೀಡಮ್
 
ಚಿತ್ರ ಕ್ರ. 3 ರಲ್ಲಿ ‘12 ಡಿಗ್ರೀಸ್ ಆಫ್ ಫ್ರೀಡಮ್’ ತೋರಿಸಲಾಗಿದೆ. ಕಾರ್ಯವಸ್ತುವನ್ನು (ಚಿತ್ರ ಕ್ರ. 2) ‘ಡ’ ವ್ಯಾಸದಲ್ಲಿ ಲೊಕೇಟ್ ಮಾಡಲಾಗಿದೆ. ಕಾರ್ಯವಸ್ತುವಿನ ಅಕ್ಷ -X, +X ದಿಕ್ಕಿನಲ್ಲಿ ಇದೆ, ಎಂದು ತಿಳಿದಲ್ಲಿ ಈ ದಿಕ್ಕಿನಲ್ಲಿ 1-2 ಹಿಂದೆ-ಮುಂದೆ ಆಗುವ ಸಾಧ್ಯತೆ ಇದೆ. ಹಾಗೆಯೇ ಅದು 3-4 ಈ ದಿಕ್ಕಿನಲ್ಲಿ ತನ್ನ ಸುತ್ತ ವರ್ತುಲಾಕಾರವಾಗಿ ತಿರುಗಬಲ್ಲದು. ಅಂದರೆ 4 ದಿಕ್ಕುಗಳಲ್ಲಿ ಅದರ ಚಟುವಟಿಕೆಯ ನಿಯಂತ್ರಣವು ತಪ್ಪಿದೆ. ಇದರ ಅರ್ಥವೇ ಇದು, 12 ರಲ್ಲಿ 8 ದಿಕ್ಕುಗಳಲ್ಲಿ ಕಾರ್ಯವಸ್ತುವಿನ ಉಂಟಾಗುವ ಚಟುವಟಿಕೆಗಳು ಕೇವಲ ಒಂದೇ ಲೊಕೇಟರ್‌ನಿಂದ ನಿಯಂತ್ರಿಸಲ್ಪಟ್ಟಿವೆ.
 

4_1  H x W: 0 x 
 
ಇನ್ನುಳಿದ 4 ದಿಕ್ಕುಗಳಲ್ಲಿ ಉಂಟಾಗುವ ಚಟುವಟಿಕೆಗಳನ್ನು ನಿಯಂತ್ರಿಸಲು ಅದು ನಟ್‌ನ (ಭಾಗ ಕ್ರ. 4) ಸಹಾಯದಿಂದ ದೃಢವಾಗಿ ಹಿಡಿದಿಟ್ಟರಿಂದ ಅದು ಲೊಕೇಟರ್‌ನ ಸಮತಟ್ಟಾದ ಸರ್ಫೇಸ್‌ನಲ್ಲಿ (ಕಾಲರ್‌ನಲ್ಲಿ) ಒರಗುತ್ತದೆ. ಇದರಿಂದಾಗಿ ಅದು 1 ರಿಂದ 2 ಈ ದಿಕ್ಕುಗಳಲ್ಲಿ ಅಲುಗಾಡುವುದಿಲ್ಲ. ಹಾಗೆಯೇ ಅದು ಗಟ್ಟಿಯಾಗಿ ಹಿಡಿಯಲ್ಪಟ್ಟಿದ್ದರಿಂದ 3 ರಿಂದ 4 ದಿಕ್ಕುಗಳಲ್ಲಿ ತನ್ನ ಸುತ್ತಮುತ್ತ ಉರುಟಾಗಿಯೂ ತಿರುಗಲಾರದು. ಈ ರೀತಿಯಲ್ಲಿ ಎಲ್ಲ ವಿಧದ ‘12 ಡಿಗ್ರೀಸ್ ಆಫ್ ಫ್ರೀಡಮ್’ ನಿಯಂತ್ರಿಸಲ್ಪಟ್ಟಿದೆ. ಕಾರ್ಯವಸ್ತುವು ಫಿಕ್ಸ್ಟರ್‌ನಲ್ಲಿ ಆಗಾಗ ಒಂದೇ ರೀತಿಯಲ್ಲಿ ಅಳವಡಿಸಿದ್ದರಿಂದ ಉತ್ಪಾದನೆಯಲ್ಲಿ ನಿರಂತರತೆಯು ಲಭಿಸುತ್ತದೆ.
 
ಲೊಕೇಟರ್‌ನಲ್ಲಿ ‘S’ ಕಚ್ಚು ಮಾಡಲಾಗಿದೆ. ಇದರ ಮಹತ್ವದ ಕಾರಣವೆಂದರೆ, ಯಾವುದೇ ರಂಧ್ರವನ್ನು ಆರುಪಾರಾಗಿ ಮಾಡುವಾಗ ಡ್ರಿಲ್ ಸರ್ಫೇಸ್‌ನ ಹೊರಗೆ ಬರಬೇಕಾಗುತ್ತದೆ. ಎಂಬುದಕ್ಕೋಸ್ಕರವೇ ಲೊಕೇಟರ್‌ನಲ್ಲಿ ಹಲವಾರು ಸಲ ರಂಧ್ರಗಳನ್ನು ಆರುಪಾರಾಗಿ ಮಾಡಲಾಗುತ್ತದೆ. ಚಿತ್ರ ಕ್ರ. 4 ರಲ್ಲಿ ತೋರಿಸಿದಂತೆ ಬರ್ ಹೇಗೆ ತಯಾರಾಗುತ್ತದೆ ಎಂಬುದು ತಮ್ಮ ಗಮನಕ್ಕೆ ಬರಬಹುದು. ಈ ಬರ್ ಆ ಲೊಕೇಟರ್‌ನ ರಂಧ್ರದಲ್ಲಿ ಸೇರಿ ಕಾರ್ಯವಸ್ತುವನ್ನು ಫಿಕ್ಸ್ಚರ್‌ನಿಂದ ಹೊರಗೆ ತೆಗೆಯುವಾಗ ಲೊಕೇಟರ್‌ನಲ್ಲಿ ಸಿಕ್ಕಿಕೊಳ್ಳುತ್ತದೆ, ಅಲ್ಲದೇ ಈ ಕಚ್ಚು ಕೊನೆಯ ತನಕ ನೀಡಲಾಗಿದೆ, ಎಂಬುದನ್ನು ಗಮನಿಸಬೇಕು. ಈ ರೀತಿಯ ಚಿಕ್ಕ ಚಿಕ್ಕ ಅಂಶಗಳನ್ನು ಗಮನಿಸುವುದು ತುಂಬಾ ಅಗತ್ಯವಾಗಿದೆ.
 

5_1  H x W: 0 x 
 
‘C’ ವಾಶರ್ ಮತ್ತು ಕ್ಲಾOಪಿಂಗ್ ನಟ್
 
ವಾಶರ್‌ನ ಆಕಾರ ಆಂಗ್ಲ ಭಾಷೆಯ ‘C’ ಅಕ್ಷರದಂತೆ ಇರುವುದರಿಂದ ಅದಕ್ಕೆ (ಚಿತ್ರ ಕ್ರ. 5) ಈ ಹೆಸರನ್ನು ನೀಡಲಾಗಿದೆ. ಕ್ಲಾOಪಿಂಗ್ ನಟ್ ಈ ಕಾರ್ಯವಸ್ತುವಿನ ವ್ಯಾಸ ‘ಡ’ ಕ್ಕಿಂತ ಚಿಕ್ಕದಾಗಿರುವುದರಿಂದ ಮಧ್ಯಭಾಗದಲ್ಲಿ ದಪ್ಪ ಮತ್ತು ದೊಡ್ಡ ವ್ಯಾಸದ ವಾಶರ್ ಅಳವಡಿಸಬೇಕಾಗಬಹುದು. ಆದರೆ ಕೇವಲ ಉರುಟಾದ ರಂಧ್ರವಿರುವ ವಾಶರ್ ಬಿಟ್ಟರೆ, ಕಾರ್ಯವಸ್ತುವನ್ನು ತೆಗೆಯುವಾಗ ನಟ್ ತಿರುಗಿಸಿ ಅದನ್ನು ಸಂಪೂರ್ಣವಾಗಿ ಹೊರಗೆ ತೆಗೆಯಬೇಕಾಗಬಹುದು. ಅದರ ನಂತರ ವಾಶರ್ ಮತ್ತು ಕಾರ್ಯವಸ್ತು ಕಳಚಬಹುದು. ಕಾರ್ಯವಸ್ತುವನ್ನು ಅಳವಡಿಸುವಾಗ ನಟ್ ಸಂಪೂರ್ಣವಾಗಿ ತಿರುಗಿಸಿಯೇ ಜೋಡಿಸಬೇಕು. ಇದರಲ್ಲಿ ತುಂಬಾ ಸಮಯ ಮತ್ತು ಕಷ್ಟವು ವ್ಯರ್ಥವಾಗುತ್ತದೆ. ಆದರೆ ‘C’ ವಾಶರ್ ಬಳಸಿದ್ದರಿಂದ ಅದಕ್ಕಿರುವ ಕಚ್ಚಿನಿಂದಾಗಿ ಅದು ಸರಿಸಿ ಹೊರಗೆ ತೆಗೆಯಬಹುದು. ಆದರೆ ನಟ್‌ನ ಗಾತ್ರ ವ್ಯಾಸ ‘ಡ’ಕ್ಕಿಂತ ಚಿಕ್ಕದಾಗಿರಬೇಕು. ‘C’ ವಾಶರ್ ಫ್ಲೇಮ್ ಹಾರ್ಡ್ ಅಥವಾ ಟಫನ್ ಮಾಡಲಾಗುತ್ತದೆ. ಅದರ ಹೊರಗಿನ ವ್ಯಾಸದಲ್ಲಿ ಡೈಮಂಡ್ ನರ್ಲಿಂಗ್ ಮಾಡಲಾಗಿರುತ್ತದೆ. ಇದರಿಂದಾಗಿ ‘C’ ವಾಶರ್ ಯೋಗ್ಯವಾಗಿ ಹಿಡಿಯಲ್ಪಡುತ್ತದೆ. ಚಿತ್ರ ಕ್ರ. 6 ರಲ್ಲಿ ಕ್ವಿಕ್ ಎಕ್ಟಿಂಗ್ ನಟ್ ತೋರಿಸಲಾಗಿದೆ.


6_1  H x W: 0 x

ಈ ನಟ್ ಬಳಸಿದಲ್ಲಿ ‘C’ ವಾಶರ್‌ನ ಆವಶ್ಯಕತೆ ಇಲ್ಲ. ಈ ನಟ್ ತುಂಬಾ ವೇಗವಾಗಿ ಕೆಲಸ ಮಾಡುತ್ತದೆ. ಕೇವಲ ಅದನ್ನು ವಿಶೇಷವಾಗಿ ತಯಾರಿಸಬೇಕಾಗುತ್ತದೆ. ‘C’ ವಾಶರ್ ಮತ್ತು ನಟ್ ಮಾತ್ರ ಸ್ಟ್ಯಾOಡರ್ಡ್ ಮತ್ತು ಹಾಳಾದಲ್ಲಿ ಸ್ಟೋರ್‌ನಿಂದ ಹೊಸದಾಗಿ ಮತ್ತೆ ಪಡೆಯಬಹುದು. ಯಾವಾಗಲೂ ಸ್ಟ್ಯಾOಡರ್ಡ್ ಭಾಗಗಳಿಗೆ ಪ್ರಾಧಾನ್ಯತೆಯನ್ನು ನೀಡಬೇಕು, ಎಂಬುದನ್ನು ಗಮನದಲ್ಲಿ ಇಡಬೇಕು. ಡಿಸೈನ್ ಮಾಡುವವನಿಗೆ ಎಷ್ಟು ವಿಧದ ಕಲ್ಪನೆಗಳ ವಿಚಾರವನ್ನು ನಿರಂತರವಾಗಿ ಮಾಡಬೇಕಾಗುತ್ತದೆ, ಎಂಬುದು ತಮ್ಮ ಗಮನಕ್ಕೆ ಬಂದಿರಬಹುದು.
 
ಲೈನರ್ ಬುಶ್
 
ಚಿತ್ರ ಕ್ರ. 7 ರಲ್ಲಿ ಲೈನರ್ ಬುಶ್ ತೋರಿಸಲಾಗಿದೆ. ಹೆಡ್ ಇರುವ ಅಥವಾ ಹೆಡ್ ಇಲ್ಲದಿರುವಂತಹ ಎರಡು ವಿಧಗಳು ಈ ಹೆಡ್‌ಗಳಲ್ಲಿವೆ. ಈ ಬುಶ್‌ಗಳು ಹಾರ್ಡ್ ಮತ್ತು ಗ್ರೈಂಡ್ ಮಾಡಲ್ಪಟ್ಟಿರುತ್ತವೆ. ಲೈನರ್ ಬುಶ್‌ನ ಹೊರಗಿನ ವ್ಯಾಸ ಪ್ರೆಸ್ ಫಿಟ್ (m6 ಅಥವಾ n6) ಇರುತ್ತದೆ. ಒಳ ವ್ಯಾಸವು H7 ನಲ್ಲಿ ನಿಯಂತ್ರಿಸಲ್ಪಡುತ್ತದೆ. ಯಾವುದೇ ಸ್ಟ್ಯಾOಡರ್ಡ್ ಲೈನರ್ ನೋಡಿದಲ್ಲಿ, ಹೊರಗಿನ ವ್ಯಾಸ ಮತ್ತು ಒಳಗಿನ ವ್ಯಾಸ ಇದು ಸೆಂಟ್ರಿಕ್ ಇರುವುದು ತುಂಬಾ ಅಗತ್ಯವಾಗಿದೆ. ಜಿಗ್ ಪ್ಲೇಟ್‌ನ ಮಟೀರಿಯಲ್ ಮೈಲ್ಡ್‌ ಸ್ಟೀಲ್‌ನಿಂದ ತಯಾರಿಸಿದ್ದು, ಸ್ಲಿಪ್ ಬುಶ್ ಆಗಾಗ ಅಳವಡಿಸುವುದರಿಂದ ಮತ್ತು ತೆಗೆಯುವುದರಿಂದ ಸವೆತವಾಗಿ ಜಿಗ್
 

7_1  H x W: 0 x 
 

8_1  H x W: 0 x 
 
ಪ್ಲೇಟ್‌ನಲ್ಲಿರುವ ರಂಧ್ರಗಳು ಹಾಳಾಗುತ್ತವೆ. ಜಿಗ್ ಹಾಳಾದನಂತರ ಮತ್ತೆ ಹೊಸದಾಗಿ ಜಿಗ್ ಪ್ಲೇಟ್ ತಯಾರಿಸಬೇಕಾಗುತ್ತದೆ. ಆದ್ದರಿಂದ ಲೈನರ್ ಬಳಸುವುದು ಯೋಗ್ಯವಾಗಿದೆ. ಲೈನರ್ ಬುಶ್ ಒತ್ತಿ (ಪ್ರೆಸ್ ಫಿಟ್) ಅಳವಡಿಸಲಾಗುತ್ತದೆ. ಇದನ್ನು ಸೂಕ್ತವಾಗಿ ಅಳವಡಿಸಲು ಅದಕ್ಕೆ 15 ಡಿಗ್ರಿಯ ಚಾಂಫರ್ ನೀಡಲಾಗಿರುತ್ತದೆ. ಈ ಲೈನರ್ ಬುಶ್ ನೇರವಾಗಿ ಅಳವಡಿಸುವುದು ಅತ್ಯಾವಶ್ಯಕವಾಗಿದೆ.
 

9_1  H x W: 0 x 
 

10_1  H x W: 0  
 
ಸ್ಲಿಪ್ ಬುಶ್ - ಡ್ರಿಲ್‌ಗೋಸ್ಕರ
ಚಿತ್ರ ಕ್ರ. 7 ರಲ್ಲಿ ಸ್ಲಿಪ್ ಬುಶ್‌ನ ಅಸೆಂಬ್ಲಿ ತೋರಿಸಲಾಗಿದೆ.
ಬುಶ್‌ನಿಂದಾಗಿ ಡ್ರಿಲ್‌ನ ದಾರಿಯನ್ನು ನಿರ್ಧರಿಸಲಾಗುತ್ತದೆ. ಕಾರ್ಯವಸ್ತುವಿನ ಸರ್ಫೇಸ್ ಮತ್ತು ಬುಶ್ ಇದರಲ್ಲಿ ಸಾಮಾನ್ಯವಾಗಿ ಡ್ರಿಲ್‌ನ ವ್ಯಾಸದಷ್ಟು ಅಥವಾ ಒಂದುವರೆ ಪಟ್ಟು ದೂರವನ್ನು ಇಡಲಾಗುತ್ತದೆ. ಇದರಿಂದಾಗಿ ಡ್ರಿಲ್ ಅಕ್ಕ- ಪಕ್ಕಕ್ಕೆ ಸರಿಯದೇ ಯೋಗ್ಯವಾಗಿ ಗೈಡ್ ಮಾಡಲಾಗುತ್ತದೆ. ಕಾರ್ಯವಸ್ತುವಿನ ಸರ್ಫೇಸ್ ಮತ್ತು ಬುಶ್ ಇವೆರಡರಲ್ಲಿಯೂ ದೂರವನ್ನು ಕಡಿಮೆ ಅಳವಡಿಸಿದ್ದರಿಂದ ಯಂತ್ರಣೆಯನ್ನು ಮಾಡುತ್ತಿರುವಾಗ ತಯಾರಾಗುವ ಚಿಪ್‌ಗಳು ಬುಶ್‌ನಿಂದ ಸರಿಯಾಗಿ ಹೊರಗೆ ಬರುತ್ತವೆ. ಚಿಪ್‌ಗಳು ಹೊರಗೆ ಬರುವಾಗ, ಆ ಬುಶ್‌ನ ಒಳಭಾಗದ ವ್ಯಾಸದಲ್ಲಿ ತಿಕ್ಕಲ್ಪಡುತ್ತವೆ. ಇದರಿಂದಾಗಿ ಬುಶ್ ಗಡಿಯಾರದ ಮುಳ್ಳಿನಂತೆ ತಿರುಗಬಾರದು ಎಂಬುದಕ್ಕಾಗಿ ರಿಟೇನಿಂಗ್ ಸ್ಕ್ರೂ ನೀಡಲಾಗಿರುತ್ತದೆ. ಅದಕ್ಕೋಸ್ಕರ ಬುಶ್‌ಗೆ ಕಚ್ಚನ್ನು ನೀಡಲಾಗಿದೆ. (ಚಿತ್ರ ಕ್ರ. 7) ಅದರಂತೆ ಈ ಚಿಪ್‌ಗಳು ಮೇಲೆ ಬರುವಾಗ ಘರ್ಷಣೆಯಿಂದಾಗಿ ಬುಶ್ ಮೇಲೆ ತಳ್ಳಲ್ಪಡುತ್ತದೆ. ಬುಶ್ ಜಿಗ್ ಪ್ಲೇಟ್‌ನಿಂದ ಹೊರಗೆ ಬರಬಾರದು ಎಂಬುದಕ್ಕಾಗಿ ಬುಶ್‌ನ ಸ್ವಲ್ಪ ಭಾಗವನ್ನು ಈ ಸ್ಕ್ರೂನ ಕೆಳಗೆ ನಿಲ್ಲುವಂತೆ ಸ್ಟೆಪ್ ‘A’ ಮತ್ತು ‘B’ ನೀಡಲಾಗಿರುತ್ತದೆ. ಬುಶ್ ಹೊರಗೆ ತೆಗೆಯುವಾಗ ವಿರುದ್ಧ ದಿಕ್ಕಿನಿಂದ ತಿರುಗಿಸಿ ಹೊರಗೆ ತೆಗೆಯಬೇಕಾಗುತ್ತದೆ. ಈ ಸ್ಕ್ರೂ ತುಂಬಾ ಸಲ ಚಿಪ್‌ಗಳ ಘರ್ಷಣೆಯಿಂದಾಗಿ ಉಂಟಾಗುವ ಶಕ್ತಿಯಿಂದಾಗಿ ತುಂಡಾಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಸ್ಕ್ರೂ ತುಂಡಾದಲ್ಲಿ ಬುಶ್ ಗೋಲಾಕಾರವಾಗಿ ತಿರುಗುತ್ತದೆ, ಅಲ್ಲದೆ ಮೇಲೆ ಬರುವ ಸಾಧ್ಯತೆ ಇದೆ. ತುಂಬಾ ಸಲ ಸ್ಕ್ರೂ ತುಂಡಾದರೂ ಕೂಡಾ ಫಿಕ್ಸ್ಚರ್ ಹಾಗೆಯೇ ಬಳಸಲಾಗುತ್ತದೆ. ಇದರಿಂದಾಗಿ ಬುಶ್‌ನೊಂದಿಗೆ ಲೈನರ್ ಕೂಡಾ ವರ್ತುಲಾಕಾರವಾಗಿ ತಿರುಗಲಾರಂಭಿಸುತ್ತದೆ ಮತ್ತು ಜಿಗ್ ಪ್ಲೇಟ್‌ನಲ್ಲಿರುವ ಲೈನರ್‌ನೊಂದಿಗೆ ರಂಧ್ರಗಳೂ ಹಾಳಾಗುತ್ತವೆ ಮತ್ತು ಜಿಗ್ ಪ್ಲೇಟ್ ಬದಲಾಯಿಸಬೇಕಾಗುತ್ತದೆ. ಇದರಿಂದಾಗಿ ಈ ಸ್ಕ್ರೂ ತುಂಡಾದಲ್ಲಿ ಅಥವಾ ಹಾಳಾದಲ್ಲಿ ತಕ್ಷಣ ಬದಲಾಯಿಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಸ್ಕ್ರೂ ಕಚ್ಚುಗಳ ಹತ್ತಿರವೇ ತುಂಡಾಗುತ್ತವೆ. ಹೀಗಾಗಬಾರದು ಎಂಬುದಕ್ಕೋಸ್ಕರ ಚಿತ್ರ ಕ್ರ. 8 ಮತ್ತು 9 ರಲ್ಲಿ ತೋರಿಸಿದಂತೆ ಒಂದು ಕ್ಲ್ಯಾOಪ್ ತಯಾರಿಸಿ ಚಿತ್ರ ಕ್ರ. 8 ರಲ್ಲಿ ತೋರಿಸಿದಂತೆ ಅದನ್ನು ಅಳವಡಿಸಿದಲ್ಲಿ ರಿಟೆನಿಂಗ್ ಸ್ಕ್ರೂ ತುಂಡಾಗುವ (ಚಿತ್ರ ಕ್ರ. 10) ಸಮಸ್ಯೆಯು ಉಂಟಾಗುವುದಿಲ್ಲ. ಈ ಕ್ಲ್ಯಾಾಂಪ್ ಸ್ಟ್ಯಾOಡರ್ಡ್‌ಗೊಳಿಸಿ ಮೇಲೆ ತಿಳಿಸಿದ ಸಮಸ್ಯೆಯನ್ನು ನೀಗಿಸಬಹುದು. ಚಿತ್ರ ಕ್ರ. 7 ರಲ್ಲಿ ಹೆಡ್‌ನೊಂದಿಗೆ ಲೈನರ್ ತೋರಿಸಲಾಗಿದೆ. ಹಾಗೆಯೇ ಹೆಡ್ ರಹಿತವಾದ ಲೈನರ್‌ಗೋಸ್ಕರವೂ ಜೋಡಣೆಯನ್ನೂ ಮಾಡುವುದು ಸಾಧ್ಯವಿದೆ.
 
ಹೆಡ್ ಸಹಿತವಾಗಿ ಅಥವಾ ಹೆಡ್ ರಹಿತವಾಗಿ ಲೈನರ್ ಯಾವಾಗ ಬಳಸುವುದು ಎಂಬ ಕಾಲಾವಧಿಯನ್ನು ನಿರ್ಧರಿಸಲಾಗುತ್ತದೆ. ಸ್ಲಿಪ್ ಬುಶ್‌ನ ಉದ್ದ, ಜಿಗ್ ಪ್ಲೇಟ್‌ನ ದಪ್ಪ, ಡ್ರಿಲ್‌ನ ಉದ್ದ, ಡ್ರಿಲ್‌ನ ತುದಿ ಮತ್ತು ಕಾರ್ಯವಸ್ತು ಇವೆರಡರಲ್ಲಿರುವ ದೂರ ಇತ್ಯಾದಿ ಅಂಶಗಳನ್ನು ನಿರ್ಧರಿಸಬೇಕಾಗುತ್ತದೆ. ಮೇಲೆ ಹೇಳಿರುವ ಅಂಶಗಳನ್ನು ವಿಮರ್ಶಿಸಿ ಫಿಕ್ಸ್ಚರ್ ಮಾಡಿದಲ್ಲಿ ಉಚ್ಚಮಟ್ಟದ ಫಿಕ್ಸ್ಚರ್ ತಯಾರಿಸಬಹುದು.
 

11_1  H x W: 0  
 
ಚಿತ್ರ ಕ್ರ. 11 ರಲ್ಲಿ ಇನ್ನೊಂದು ಅ್ಯಂಗಲ್ ಪ್ಲೇಟ್‌ನ ವಿಧದ ಫಿಕ್ಸ್ಚರ್ ಕಾಣುತ್ತದೆ. ಈ ಫಿಕ್ಸ್ಚರ್‌ನಲ್ಲಿ ಕಾರ್ಯವಸ್ತು, ಲೊಕೇಟರ್ ಮತ್ತು ಡೈಮಂಡ್ ಪಿನ್‌ನೊಂದಿಗೆ ಲೊಕೇಟ್ ಮಾಡಲಾಗಿರುತ್ತದೆ. ಕಾರ್ಯವಸ್ತು ಕೇವಲ ಲೊಕೇಟರ್‌ನಲ್ಲಿ ಲೊಕೇಟ್ ಮಾಡಿದಲ್ಲಿ ಅದು ತನ್ನ ಸುತ್ತುಮುತ್ತು ತಿರುಗಬಲ್ಲದು. ಅದು ಈ ರೀತಿಯಲ್ಲಿ ತಿರುಗಬಾರದು ಎಂಬುದಕ್ಕೋಸ್ಕರ ಡೈಮಂಟ್ ಪಿನ್ ನೀಡಲಾಗಿರುತ್ತದೆ. ಲೊಕೇಟರ್ ಮತ್ತು ಡೈಮಂಡ್ ಪಿನ್‌ನ ಕೇಂದ್ರಬಿಂದುವನ್ನು ಜೋಡಿಸುವ ಸೆಂಟರ್ ಲೈನರ್‌ಗೆ (ಕೆಂಪು ಗೆರೆ) ಡೈಮಂಡ್ ಪಿನ್ ಉದ್ದವಾಗಿ ಅಳವಡಿಸಲಾಗಿದೆ. ಇದರಿಂದಾಗಿ ಕಾರ್ಯವಸ್ತುವು ನಿರ್ದೋಷವಾಗಿ ಅಳವಡಿಸಲ್ಪಡುತ್ತದೆ, ಅಲ್ಲದೇ ಇಡಲು ಮತ್ತು ತೆಗೆಯಲು ಸುಲಭವಾಗುತ್ತದೆ.
 
ಈ ಜಾಗದಲ್ಲಿ ಕೇವಲ ಒಂದೇ ಅಳತೆಯ ಡ್ರಿಲ್ ಬಳಸಬೇಕಾಗುತ್ತದೆ. ಇದರಿಂದಾಗಿ ಪಿಕ್ಸ್‌ ಬುಶ್ ಅಥವಾ ಸ್ಲಿಪ್ ರಿನ್ಯುಯೇಬಲ್ ಬುಶ್ ಬಳಸುವುದೂ ಯೋಗ್ಯವಾಗಿದೆ. ಬುಶ್ ಆಗಾಗ ಬಳಸಿದ್ದರಿಂದ ಹಾಳಾದಲ್ಲಿ ಅದನ್ನು ಬದಲಾಯಿಸಬೇಕು. ಇದಕ್ಕೆ ಸ್ಲಿಪ್ ರಿನ್ಯುಯೇಬರ್ ಬುಶ್ ಎಂದು ಹೇಳುತ್ತಾರೆ. ಫಿಕ್ಸ್‌ ಬುಶ್ ಇದು ಲೈನರ್‌ನಂತೆಯೇ ಕಾಣುತ್ತದೆ. ಅದರ ಗರಿಷ್ಠ ವ್ಯಾಸವು F7 ನಲ್ಲಿ ನಿಯಂತ್ರಿಸಲ್ಪಟ್ಟಿರುತ್ತದೆ. ಸ್ಲಿಪ್ ಬುಶ್ ಮತ್ತು ಸ್ಲಿಪ್ ರಿನ್ಯುಯೇಬಲ್ ಬುಶ್‌ನ ಕೆಲಸವನ್ನು (ಚಿತ್ರ ಕ್ರ. 12) ಒಂದೇ ಬುಶ್ ಮಾಡುತ್ತದೆ. ನಾವು ಲಾಕ್ ಸ್ಕ್ರೂ ಎಲ್ಲಿ ಬಳಸುತ್ತೇವೆ, ಎಂಬುದರಲ್ಲಿಯೇ ಅದರ ವಿಧವನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ‘A’ ಕಚ್ಚಿನ ಜಾಗದಲ್ಲಿ ಅಳವಡಿಸಿದರೆ ಅದಕ್ಕೆ ಸ್ಲಿಪ್ ರಿನ್ಯುಯೇಬಲ್ ಬುಶ್ ಎಂದು ಹೇಳಲಾಗುತ್ತದೆ. ಆದರೆ ಸ್ಕ್ರೂ (ತುಂಡು ತುಂಡಾದ ಗೆರೆಯಲ್ಲಿ ತೋರಿಸಿರುವ) ಕಚ್ಚು ‘B’ ಯ ಜಾಗದಲ್ಲಿ ಅಳವಡಿಸಿದರೆ ಅದಕ್ಕೆ ಸ್ಲಿಪ್ ಬುಶ್ ಎಂದು ಹೇಳುತ್ತಾರೆ. ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಫಿಕ್ಸ್ಚರ್‌ನ ವಿವಿಧ ಭಾಗಗಳ ಕೆಲಸವನ್ನು ನಾವು ನೋಡಿದೆವು, ಅದರಂತೆಯೇ ಈ ಫಿಕ್ಸ್ಚರ್‌ನ ವಿವಿಧ ಭಾಗಗಳ ಕಾರ್ಯವು ಹೇಗಾಗುತ್ತದೆ, ಎಂಬುದನ್ನೂ ವೀಕ್ಷಿಸಬೇಕು. ಎಲ್ಲ ಭಾಗಗಳ ಕೆಲಸವನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಬೇಕು. ಇದರಿಂದಾಗಿ ಜಿಗ್ ಮತ್ತು ಫಿಕ್ಸ್ಚರ್ ಕುರಿತು ವಿಸ್ತಾರವಾಗಿ ತಿಳಿದುಕೊಳ್ಳಬಹುದು. ತಮಗೆ ತಿಳಿದಂತೆ ‘ತಾವು ಮಾಡಿರುವ ಅಭ್ಯಾಸವೇ ತಮ್ಮ ಶ್ರೇಷ್ಠವಾದ ಗುರು’ ಎಂಬ ಮಾತಿನಲ್ಲಿ ಅನುಮಾನವಿದ್ದಲ್ಲಿ ನಮ್ಮನ್ನು ಸಂಪರ್ಕಿಸಿರಿ. ತಮ್ಮೆಲ್ಲರ ಅನುಮಾನಗಳಿಗೆ ಪರಿಹಾರವನ್ನು ನೀಡುವಲ್ಲಿ ನಮಗೆ ಸಂತೋಷವಾದೀತು. ಮುಂದಿನ ಲೇಖನದಲ್ಲಿ ನಾವು ಇನ್ನಷ್ಟು ವಿವಿಧ ಜಿಗ್‌ಗಳ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ.
 

12_1  H x W: 0  
 
ಸಾರಾಂಶ
1. ‘C’ ವಾಶರ್ ಬಳಸುವ ಲಾಭಗಳನ್ನು ಗಮನಿಸಬೇಕು.
2. ರಿಟೇನಿಂಗ್ ಸ್ಕ್ರೂ ತುಂಡಾಗುವ ಸಮಸ್ಯೆಗೆ ಪರಿಹಾರವನ್ನು ಮಾಡಲು ಕ್ಲ್ಯಾOಪ್ ಬಳಸಬಹುದಾಗಿದೆ.
3. ರಿಟೇನಿಂಗ್ ಸ್ಕ್ರೂನ ಕೆಲಸವೂ ತುಂಬಾ ಮಹತ್ವದ್ದಾಗಿದೆ.
4. ಸ್ಲಿಪ್ ಬುಶ್ ಮತ್ತು ಸ್ಲಿಪ್ ರಿನ್ಯುಯೇಬರ್ ಬುಶ್ ಇದರಲ್ಲಿ ಇರುವ ವ್ಯತ್ಯಾಸವನ್ನು ಗಮನಿಸಬೇಕು.
5. ಚಿತ್ರ ಕ್ರ. 1 ರಲ್ಲಿ ಲೊಕೇಟರ್‌ನಿಂದಾಗಿ ಡಿಗ್ರೀಸ್ ಆಫ್ ಫ್ರೀಡಮ್ ಹೇಗೆ ನಿಯಂತ್ರಿಸಲ್ಪಡುತ್ತವೆ ಎಂಬುದನ್ನೂ ತಿಳಿದುಕೊಳ್ಳಬೇಕು.
6. ರಂಧ್ರಗಳನ್ನು ಮಾಡುತ್ತಿರುವಾಗ ಬರ್‌ನಿಂದ ಎದುರಿಸಬೇಕಾಗುವ ಸಮಸ್ಯೆಗಳಿಗೋಸ್ಕರ ಯಾವ ರೀತಿಯ ಮುತುವರ್ಜಿಯನ್ನು ವಹಿಸಲಾಗಿದೆ, ಎಂಬುದನ್ನು ಗಮನಿಸಬೇಕು.
7. ಲೊಕೇಟರ್‌ನ ಮೇಲ್ಭಾಗದಲ್ಲಿ ‘S’ ಸರಿಯಾಗಿ ಕಾರ್ಯ ನಿರ್ವಹಿಸುವ ಕುರಿತು ಗಮನ ಹರಿಸಬೇಕು.
8. ‘C’ ವಾಶರ್‌ನ ಹೊರಗಿನ ವ್ಯಾಸದಲ್ಲಿ ಡೈಮಂಡ್ ನರ್ಲಿಂಗ್‌ನ ಮಹತ್ವವನ್ನು ತಿಳಿದುಕೊಳ್ಳಬೇಕು.
 
 
 

ajit deshande_1 &nbs 
ಅಜಿತ್ ದೇಶಪಾಂಡೆ
ಅತಿಥಿ ಪ್ರಾಧ್ಯಾಪಕರು,ARAI SAE 
9011018388
ajitdeshpande21@gmail.com
 
ಅಜಿತ್ ದೇಶಪಾಂಡೆ ಇವರು ಜಿಗ್‌ಸ್‌ ಮತ್ತು ಫಿಕ್ಸ್ಚರ್ ಕ್ಷೇತ್ರದಲ್ಲಿ ಸುಮಾರು 37 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಕಿರ್ಲೋಸ್ಕರ್, ಗ್ರೀವ್‌ಜ್‌ ಲೊಂಬಾರ್ಡಿನಿ ಲಿ., ಟಾಟಾ ಮೋಟರ್ಸ್ ಇಂತಹ ವಿವಿಧ ಕಂಪನಿಗಳಲ್ಲಿ ಬೇರೆ ಬೇರೆ ಅಧಿಕಾರಸ್ಥಾನಗಳಲ್ಲಿ ಸೇವೆಯನ್ನು ನಿರ್ವಹಿಸಿದ್ದಾರೆ.
 
 
Powered By Sangraha 9.0