ಸ್ಟೀಲ್, ಸ್ಟೆನ್‌ಲೇಸ್ ಮತ್ತು ಕಾಸ್ಟ್‌ ಆಯರ್ನ್‌ನ ಮಿಲ್ಲಿಂಗ್

18 Feb 2020 16:36:00
 
 
ಮಿಲ್ಲಿಂಗ್‌ನ ಪ್ರಕ್ರಿಯೆಯಲ್ಲಿ ಟೂಲ್ ತಿರುಗುತ್ತಿರುವಾಗ ಒಂದು ಅಥವಾ ಹೆಚ್ಚು ಚೂಪಾಗಿರುವ ಬದಿಗಳು ಕಾರ್ಯವಸ್ತುವಿನ ಸಂಪರ್ಕದಲ್ಲಿ ಬರುತ್ತವೆ ಮತ್ತು ಅತಿರಿಕ್ತವಾದ ಮಟೀರಿಯಲ್‌ಗಳನ್ನು ತೆಗೆದುಹಾಕುತ್ತದೆ. ಕಟಿಂಗ್ ಎಡ್‌ಜ್‌ ಕಾರ್ಯವಸ್ತುವಿನ ಸಂಪರ್ಕಕ್ಕೆ ನಿರಂತರವಾಗಿ ಬರದಿರದಿರುವುದರಿಂದ ಈ ಯಂತ್ರಣೆಯು ನಿರಂತರವಾಗಿ ಆಗುವುದಿಲ್ಲ. ಕಟಿಂಗ್ ಮಾಡುವಾಗ ಉಂಟಾಗುವ ಘರ್ಷಣೆಯಿಂದಾಗಿ ಕಟರ್‌ನ ಬದಿಗಳು ಬಹು ಬೇಗನೆ ಬಿಸಿಯಾಗುತ್ತವೆ ಮತ್ತು ಸಂಪರ್ಕ ಇಲ್ಲದಿರುವಾಗ ಅವುಗಳು ತಕ್ಷಣ ತಂಪಾಗುತ್ತವೆ. ಕಟಿಂಗ್ ಎಡ್‌ಜ್‌ ಕಾರ್ಯವಸ್ತುವಿನ ಸಂಪರ್ಕದಲ್ಲಿ ಅನಿಯಮಿತವಾಗಿ ಬರುವುದರಿಂದ ಅವುಗಳಿಗೆ ತೀವ್ರವಾದ ಥರ್ಮಲ್ ಶಾಕ್ ಸಹಿಸಬೇಕಾಗುತ್ತದೆ.
 
ಇತ್ತಿಚೇಗೆ ತಂತ್ರಜ್ಞಾನದಲ್ಲಿ ಕಾರ್ಯವಸ್ತುವಿನ ಮಟೀರಿಯಲ್‌ಗಳ ಕುರಿತಾದ ಸಂಶೋಧನೆಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತಿದೆ. ಕಾರ್ಯವಸ್ತುವಿಗೋಸ್ಕರ ಹೊಸಹೊಸದಾದ ಮಟೀರಿಯಲ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿವೆ. ಆದ್ದರಿಂದ ಉಚ್ಚಮಟ್ಟದ ಕಾರ್ಯಸಾಮರ್ಥ್ಯದಿಂದ ಯಂತ್ರಣೆಯನ್ನು ಮಾಡಲು ಕಟಿಂಗ್ ಟೂಲ್ ಉತ್ಪಾಾದಕರು ಟೂಲ್ ಮಟೀರಿಯಲ್ ಮತ್ತು ಕಟಿಂಗ್ ಎಡ್‌ಜ್‌‌ಗಳ ಜ್ಯಾಮಿತಿಯನ್ನು ಸುಧಾರಿಸಲು ಮತ್ತು ವಿಕಸಿಸಲು ಪ್ರಯತ್ನವನ್ನು ಮಾಡುತ್ತಿದ್ದಾರೆ.
 
ಥರ್ಮಲ್ ಶಾಕ್ ಇದು ಕಟಿಂಗ್ ಎಡ್ಜ್‌‌ನಲ್ಲಿ ಅನುಭವಿಸಲ್ಪಡುವ ಬೃಹತ್ ಪ್ರಮಾಣದ ಉಷ್ಣಾಾಂಶಗಳಲ್ಲಾಾಗುವ ಬದಲಾವಣೆಗಳಿಗೆ ನೀಡಲಾಗುವ ಸಂಜ್ಞೆಯಾಗಿದೆ. ಕಾರ್ಯವಸ್ತುವಿನ ಯಂತ್ರಣೆಯನ್ನು ಮಾಡುವಾಗ ಘರ್ಷಣೆಯಿಂದಾಗಿ ಕಟಿಂಗ್ ಎಡ್‌ಜ್‌‌ನ ಉಷ್ಣಾಾಂಶವು ತುಂಬಾ ಭರದಿಂದ ಹೆಚ್ಚಾಗುತ್ತದೆ. ಯಂತ್ರಣೆಯ ನಂತರ ಕಟರ್‌ನಲ್ಲಿರುವ ಇನ್ಸರ್ಟ್ ಕಾರ್ಯವಸ್ತುವಿನಿಂದ ದೂರಕ್ಕೆ ಹೋಗುತ್ತವೆ ಮತ್ತು ಗಾಳಿಯಲ್ಲಿ ಹೋಗುವಾಗ ಅದರ ವೇಗದಿಂದಾಗಿ ತಂಪಾಗುತ್ತವೆ. ಆದ್ದರಿಂದ ಮಿಲ್ಲಿಂಗ್‌ನಲ್ಲಿ ತುಂಬಾ ಕಠಿಣವಾದ ಮತ್ತು ಕ್ಲಿಷ್ಟವಾದ ಪರಿಸ್ಥಿತಿಯನ್ನು ಎದುರಿಸಬಹುದಾದಂತಹ ಟೂಲ್ ಮಟೀರಿಯಲ್ ಮತ್ತು ಇನ್ಸರ್ಟ್‌ನ ಕೆಲಸವು ಸಾಕಷ್ಟು ಹೆಚ್ಚಿಸುವಂತಹ ಜ್ಯಾಮಿತಿಯನ್ನು ಆಯ್ಕೆ ಮಾಡುವುದು ಆಗತ್ಯವಾಗಿದೆ.
 
ಯಂತ್ರಣೆಯ ಪದ್ಧತಿ
 

1_1  H x W: 0 x 
 
ಫೇಸ್ ಮಿಲ್ಲಿಂಗ್ ಕಟರ್‌ಗಳನ್ನು ಎರಡು ಗುಂಪುಗಳಾಗಿ ವಿಭಾಜಿಸಲಾಗಿದೆ. ಪ್ಲೇನ್ ಮಿಲ್ಲಿಂಗ್ ಕಟರ್, ಇದರ ಲೀಡ್ ಕೋನ 90 ಅಂಶಗಳಿಗಿಂತ ಬೇರೆ ಇರುತ್ತದೆ ಮತ್ತು ಶೋಲ್ಡರ್ ಮಿಲ್ಲಿಂಗ್ ಕಟರ್ ಇದರ ಲೀಡ್ ಕೋನ 90 ಅಂಶಗಳಷ್ಟು (ಚಿತ್ರ ಕ್ರ. 1) ಇರುತ್ತದೆ. ಟೂಲ್‌ನ ಆಯ್ಕೆ ಯಂತ್ರಣೆಯ ಮಾಡುವ ರೀತಿಯಲ್ಲಿ ಅಥವಾ ಯಾವ ಎಪ್ಲಿಕೇಶನ್ (ಕೆಲಸ) ಮಾಡಬೇಕಾಗುವುದಿದೆಯೋ, ಅದರಲ್ಲಿ ಅವಲಂಬಿಸಿರುತ್ತದೆ.
 
ಮಿಲ್ಲಿಂಗ್ ಕಟರ್‌ನ ಆಯ್ಕೆ
> ಯಂತ್ರಣೆಯ ರೀತಿಗೆ ಆಧರಿಸಿರುವಂತಹದ್ದು: ಪ್ಲೇನ್ ಮಿಲ್ಲಿಂಗ್ ಅಥವಾ ಶೋಲ್ಡರ್ ಮಿಲ್ಲಿಂಗ್.
 

2_1  H x W: 0 x 
 
> ಕಾರ್ಯವಸ್ತುವಿನ ಮಟೀರಿಯಲ್‌ಗೆ ಆಧರಿಸಿರುವಂತಹದ್ದು : ಇನ್ಸರ್ಟ್ ಜ್ಯಾಮಿತಿ, ಕಟಿಂಗ್ ಎಡ್‌ಜ್‌‌ನ ವಿಧಗಳು ಮತ್ತು ಹಲ್ಲುಗಳು ಅಥವಾ ಇನ್ಸರ್ಟ್‌ಗಳ ಸಂಖ್ಯೆ.
ಕಾರ್ಯವಸ್ತುವಿನ ಮತ್ತು ಕ್ಲ್ಯಾಂಪ್‌ನ ರಿಜಿಡಿಟಿ : ದಪ್ಪ ಅಥವಾ ತೆಳ್ಳಗಿರುವ ಕಾರ್ಯವಸ್ತು ಮತ್ತು ಸ್ಥಿರವಾದ (ಸ್ಟೇಬಲ್) ಅಥವಾ ಅಸ್ಥಿರವಾದ (ಅನ್‌ಸ್ಟೇಬಲ್) ಕ್ಲ್ಯಾಂಪಿಂಗ್.
> ಅಗತ್ಯವಿರುವ ಡೈಮೆನ್ಷನಲ್ ಎಕ್ಸುರೆಸಿ ಮತ್ತು ಸರ್ಫೇಸ್‌ನ ಗುಣಮಟ್ಟ : ರಫ್ ಮಿಲ್ಲಿಂಗ್ ಅಥವಾ ಫಿನಿಶ್ ಮಿಲ್ಲಿಂಗ್.
 

11_1  H x W: 0  
 
>ಮಶಿನ್ ಸ್ಪಿಂಡಲ್ ಪವರ್ ಮತ್ತು ಟಾರ್ಕ್‌ನ ಉಪಲಬ್ಧತೆ : ಮಶಿನ್‌ನ ಸಾಮರ್ಥ್ಯದ ಲಾಭವನ್ನು ಸಂಪೂರ್ಣವಾಗಿ ಪಡೆಯಬಲ್ಲದು ಮತ್ತು ಹೆಚ್ಚು ಕಾರ್ಯಸಾಮರ್ಥ್ಯದಿಂದ ಯಂತ್ರಣೆಯನ್ನು ಮಾಡಬಲ್ಲದು, ಇಂತಹ ಯಂತ್ರಣೆಯ ಪರಿಸ್ಥಿತಿಯನ್ನು ಆಯ್ಕೆ ಮಾಡುವುದು ಸಾಧ್ಯವಾಗಿದೆ.
 
ಕಾರ್ಯವಸ್ತುವಿನ ಮಟೀರಿಯಲ್‌ಗೆ ಅನುಸಾರವಾಗಿ ಸೆಟಪ್‌ನ ದೃಢತೆ, ಯೋಗ್ಯವಾದ ನಿಖರತೆ ಮತ್ತು ಮಶಿನ್‌ನ ಸ್ಥಿತಿಗೆ ಅನುಸಾರವಾಗಿ ಫೇಸ್ ಮಿಲ್ಲಿಂಗ್ ಆಪರೇಶನ್‌ನಲ್ಲಿ ಫೇಸ್ ಮಿಲ್ ಕಟರ್ ಆಯ್ಕೆ ಮಾಡಲು ಸಹಕರಿಸಬಲ್ಲದು, ಇಂತಹ ಉಚ್ಚಮಟ್ಟದ ಪರ್ಯಾಯಗಳನ್ನು ಗ್ರಾಹಕರಿಗೆ ನೀಡಲು ಸ್ಟೀಲ್, ಸ್ಟೇನ್‌ಲೆಸ್ ಸ್ಟೀಲ್ ಮತ್ತು ಕಾಸ್ಟ್‌ ಆಯರ್ನ್‌ನ ಯಂತ್ರಣೆಗೋಸ್ಕರ ‘ಮಿತ್ಸುಬಿಶಿ ಮಟೀರಿಯಲ್‌ಸ್‌ ಕಾರ್ಪೋರೇಶನ್ ಮೆಟಲ್ ವರ್ಕಿಂಗ್ ಸಲ್ಯೂಶನ್’ ಈ ಕಂಪನಿಯ ಸ್ಟೀಲ್, ಸ್ಟೇನ್ ಲೆಸ್ ಸ್ಟೀಲ್ ಮತ್ತು ಕಾಸ್‌ಟ್‌ ಆಯರ್ನ್‌ನ ಯಂತ್ರಣೆಗೆ ಒಂದು ಫೇಸ್ ಮಿಲ್ ಅಭಿವೃದ್ಧಿಪಡಿಸಲಾಗಿದೆ. ಈ ಫೇಸ್ ಮಿಲ್‌ನ ವೈವಿಧ್ಯಗಳನ್ನು ಈ ಮುಂದೆ ನೀಡಲಾಗಿದೆ.
 
 
3_1  H x W: 0 x 
 
ಏಳು ಕೋನಗಳಿರುವ, ಎರಡು ಎಡ್‌ಜ್‌‌ಗಳಿರುವ, ಪೂರೈಸುವಂತಹ,
14 ಕಟಿಂಗ್ ಎಡ್‌ಜ್‌‌ಗಳ ಇನ್ಸರ್ಟ್
AHX440S, AHX640S ಯುನಿಕ್ ಫೇಸ್ ಮಿಲ್ ಕಟರ್ (ಚಿತ್ರ ಕ್ರ. 3)
ಉನ್ನತ ಫೀಡ್ ರೇಟ್ ಯಂತ್ರಣೆಗೋಸ್ಕರ AHX475S
AHX440S ಇನ್ಸರ್ಟ್‌ನ ಕಟಿಂಗ್ ಬಾಡಿಯಲ್ಲಿ RE=3.2 ಮಿ.ಮೀ. ಸೆಟ್ ಮಾಡಿ 75 ಡಿಗ್ರಿ (KAPR 150)
 

4_1  H x W: 0 x 
 
ಕಾರ್ನರ್ ಅ್ಯಂಗಲ್ ಉಚ್ಚಮಟ್ಟದ ಫೀಡ್‌ರೇಟ್ ಲಭಿಸುವುದೂ ಸಾಧ್ಯವಿದೆ. ಇದರಲ್ಲಿ ತುಂಡುಗಳ ಗರಿಷ್ಠ ಆಳ (APMX) 1.6 ಮಿ.ಮೀ.ತನಕ (ಚಿತ್ರ ಕ್ರ. 4) ಮಿತಿಯಲ್ಲಿರುತ್ತದೆ.
 

5_1  H x W: 0 x 
 
ಕಾಸ್ಟ್‌ ಆಯರ್ನ್‌ನ ಯಂತ್ರಣೆಯಲ್ಲಿ ಉನ್ನತ ಕಾರ್ಯಸಾಮರ್ಥ್ಯಕ್ಕೋಸ್ಕರ
AHX640W ಫೇಸ್ ಮಿಲ್ಲಿಂಗ್ ಕಟರ್ (ಚಿತ್ರ ಕ್ರ. 5)
AHX640W ಫೇಸ್ ಮಿಲ್ಲಿಂಗ್ ಕಟರ್‌ನಲ್ಲಿ ಕಾಸ್‌ಟ್‌ ಆಯರ್ನ್ ಉಚ್ಚಮಟ್ಟದ ಫೀಡ್ ರೇಟ್ ಮಿಲ್ಲಿಂಗ್‌ಗೋಸ್ಕರ ಯೋಗ್ಯವಾದ ಉಚ್ಚಮಟ್ಟದ ದೃಢವಾದ ಇನ್ಸರ್ಟ್ ನಾವು ಪ್ರಸ್ತುತ ಪಡಿಸಿದ್ದೇವೆ.
 
ವಿವಿಧ ಅಪ್ಲಿಕೇಶನ್‌ಗಳಿಗೋಸ್ಕರ ಮಾಡಿರುವ ಬದಲಾವಣೆಗಳು
 

6_1  H x W: 0 x 
 
ವಿವಿಧ ಮಿಲ್ಲಿಂಗ್‌ನ ಪರಿಸ್ಥಿತಿಯಲ್ಲಿ ಎಕ್ಸ್‌‌ಟ್ರಾ ಫೈನ್ ಪಿಚ್ ಮತ್ತು ಸುಪರ್ ಎಕ್ಸ್‌‌ಟ್ರಾ ಫೈನ್ ಪಿಚ್‌ನ ವಿಧಗಳನ್ನು (ಚಿತ್ರ ಕ್ರ. 6) ಬಳಸಿ ಉಚ್ಚ ಕಾರ್ಯಸಾಮರ್ಥ್ಯವನ್ನು ಪಡೆಯಬಹುದಾಗಿದೆ. ಇದರ ಹೊರತಾಗಿ ವಿಶೇಷವಾದ ಮಶಿನ್‌ನಲ್ಲಿ ಬಳಸಲು ಲೆಫ್‌ಟ್‌ ಹ್ಯಾಂಡ್ ವಿಧದಲ್ಲಿಯೂ ಸ್ಟ್ಯಾಂಡರ್ಡ್ ಕಟರ್ ಉಪಲಬ್ಧವಿವೆ. ಲೆಫ್ಟ್‌ ಹ್ಯಾಂಡ್ ಮತ್ತು ರೈಟ್ ಹ್ಯಾಂಡ್ ಕಟರ್‌ಗೆ ಒಂದೇ ರೀತಿಯ ಇನ್ಸರ್ಟ್‌ಗಳನ್ನು ಬಳಸಲಾಗುತ್ತದೆ.
 
ನಾವೀನ್ಯಪೂರ್ಣವಾದ ಕ್ಲ್ಯಾಂಪ್ ಪ್ರಣಾಳಿಕೆ
 

7_1  H x W: 0 x 
 
ಇನ್ಸರ್ಟ್‌ಗಳ ಪರ್ಮಿಸಿಬಲ್ ಸಂಖ್ಯೆಯನ್ನು ಹೆಚ್ಚಿಸಲು ನಾವು ಹೊಸ ವೇಜ್ ಜ್ಯಾಮಿತಿಯನ್ನು (ಚಿತ್ರ ಕ್ರ 7) ಅಭಿವೃದ್ಧಿಪಡಿಸಿದೆವು. ಈ ವೇಜ್ ಜ್ಯಾಮಿತಿಯಲ್ಲಿ ಇನ್ಸರ್ಟ್‌ನ ರಂಧ್ರಗಳಲ್ಲಿ ಸರಿಯಾಗಿ ಅಳವಡಿಸಲ್ಪಡುವ ಒಂದು ಮುಂದೆ ಬಂದಿರುವ ಸೆಕ್ಷನ್ ಇದೆ. ಇದು ಅ್ಯಂಟಿ ಫ್ಲೈ ಇನ್ಸರ್ಟ್ ಯಂತ್ರಣೆ (A.F.I.) ಎಂದು ಕೆಲಸವನ್ನು ನಿರ್ವಹಿಸುತ್ತದೆ.
AHS ಶ್ರೇಣಿಗೋಸ್ಕರ ಇನ್ಸರ್ಟ್‌ನ ಅನುಕೂಲತೆ
AHX440 ನೊಂದಿಗೆ ಬಳಸಲು RE=3.2 ಮಿ.ಮೀ. ಇನ್ಸರ್ಟ್. ಈ ಇನ್ಸರ್ಟ್ AHX475S ನಲ್ಲಿ ಅಳವಡಿಸುವುದು ಸಾಧ್ಯ.
AHX640 ನೊಂದಿಗೆ ಬಳಸಲು ಎಲ್ಲ ಇನ್ಸರ್ಟ್ AHX640S ನಲ್ಲಿ ಅಳವಡಿಸಬಹುದು. (ಸೆಟ್‌ನ ಎತ್ತರವು ಬೇರೆ ಇರಬಹುದು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ)
AHX640W ನಲ್ಲಿ ಅಳವಡಿಸಲು ಇರುವ ಇನ್ಸರ್ಟ್ ಅಂದರೆ ಕಾಸ್ಟಿಂಗ್‌ಗೋಸ್ಕರ MK, HK ಮತ್ತು WK ಬ್ರೇಕರ್ ಆಗಿರುತ್ತವೆ.
ಕೇಸ್ ಸ್ಟಡಿ 1
 

8_1  H x W: 0 x 
 
ನಮ್ಮ ಗ್ರಾಹಕರೊಬ್ಬರಲ್ಲಿ ಡಕ್ಟೈಲ್ ಕಾಸ್ಟ್‌ ಆಯರ್ನ್ ಹೌಸಿಂಗ್ ಯಂತ್ರಭಾಗಗಳ ಯಂತ್ರಣೆಯು ನಡೆಯುತ್ತಿತ್ತು. ಒಟ್ಟಾರೆ 12 ರಿಂದ 14 ಮಿ.ಮೀ. ಮಟೀರಿಯಲ್ ತೆಗೆಯುವ ಆವಶ್ಯಕತೆ ಇತ್ತು. ರಫ್ ಮಿಲ್ಲಿಂಗ್‌ನ ನಡುವೆ ಇನ್ಸರ್ಟ್ ತುಂಡಾಗುವಂತಹ ಸಮಸ್ಯೆಯಾಗಿತ್ತು. ರಫ್ ಮಿಲ್ಲಿಂಗ್‌ನಲ್ಲಿ ಗ್ರಾಹಕರು ಯಾವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಇದನ್ನು ತಿಳಿದ ನಂತರ ನಾವು ಅವರಿಗೆ AHX640W ಸಿರೀಸ್‌ನಲ್ಲಿರುವ ಕಟರ್ ಸೂಚಿಸಿದೆವು. ಅದನ್ನು ಬಳಸಿ ಲಭಿಸಿರುವ ಲಾಭಗಳನ್ನು ಗ್ರಾಫ್ ಕ್ರ. 1 ರಲ್ಲಿ ತೋರಿಸಲಾಗಿವೆ.
ಯಂತ್ರಣೆಯ ವಿವರಗಳು
ಮಟೀರಿಯಲ್ : ENGJS-400-18, ಕಾಸ್ಟಿಂಗ್ ಇನ್‌ಪುಟ್ ಎಂಬುದಾಗಿ.
ಕಠಿಣತೆ : 200 ರಿಂದ 220 BHN
ಮಶಿನ್ : ಎಚ್.ಎಮ್.ಸಿ. (ಸ್ಪಿಂಡಲ್ ಪಾವರ್ 40 Kw)
ಟೂಲ್ ಓವರ್‌ಹ್ಯಾಾಂಗ್ : 210 ಮಿ.ಮೀ.
 

9_1  H x W: 0 x 
 
ವೇಟ್ ಕಟಿಂಗ್
 
ಕೇಸ್ ಸ್ಟಡಿ 2
 

10_1  H x W: 0  
 
ನಮ್ಮ ಇನ್ನೊಬ್ಬ ಗ್ರಾಹಕರಿಗೆ ಕನೆಕ್ಟಿಂಗ್ ರಾಡ್‌ನ ಯಂತ್ರಣೆಯನ್ನು ಮಾಡಬೇಕಿತ್ತು. ಈ ಕನೆಕ್ಟಿಂಗ್ ರಾಡ್‌ಗೋಸ್ಕರ 35 HRC ಕಠಿಣತೆ ಇರುವ ಫೋರ್ಜ್‌ಡ್‌ ಸ್ಟೀಲ್ ಮಟೀರಿಯಲ್ ಬಳಸಲಾಗುತ್ತಿತ್ತು. ಗ್ರಾಹಕರಿಗೆ ಈ ಯಂತ್ರಭಾಗಗಳ ಉತ್ಪಾಾದನೆಯನ್ನು ಬೃಹತ್ ಪ್ರಮಾಣದಲ್ಲಿ ಮಾಡಬೇಕಾಗಿತ್ತು. ಇದರಿಂದಾಗಿ ಪ್ರತಿಯೊಂದು ಯಂತ್ರಭಾಗದ ಖರ್ಚು ಕಡಿಮೆ ಮಾಡುವುದು ಮತ್ತು ಸೈಕಲ್ ಟೈಮ್‌ನಲ್ಲಿ ಕಡಿತ ಮಾಡಬೇಕು, ಎಂಬ ಬೇಡಿಕೆಯು ಗ್ರಾಹಕರದ್ದಾಗಿತ್ತು. ಅದಕ್ಕೋಸ್ಕರ ನಾವು ಈ ಗ್ರಾಹಕರಿಗೆ ಏಗಿ640ಖ ಸಿರೀಜ್ ಕಟರ್ ಸೂಚಿಸಿದೆವು. ಅದನ್ನು ಬಳಸಿ ಲಭಿಸಿರುವ ಲಾಭಗಳನ್ನು ಗ್ರಾಫ್ ಕ್ರ. 2 ರಲ್ಲಿ ತೋರಿಸಲಾಗಿದೆ.
ಯಂತ್ರಣೆಯ ವಿವರಗಳು
 
ಕೆಲಸಕ್ಕೆ ಬಳಸುವ ಮಟೀರಿಯಲ್ : 39CrV5 ಫೋರ್ಜ್‌ಡ್‌ ಇನ್‌ಪುಟ್ ಎಂದು.
ಕಠಿಣತೆ : 35 HRC
ಮಶಿನ್ : ಎಸ್.ಪಿ.ಎಮ್. (ಸ್ಪಿಂಡಲ್ ಪಾವರ್ 11Kw)
ವೆಟ್ ಕಟಿಂಗ್
ನಾವು ಈ ಗ್ರಾಹಕರಿಗೆ AHX640S ಸಿರೀಸ್‌ನ ಕಟರ್ ಕುರಿತು ಸೂಚಿಸಿದೆವು. ಇದನ್ನು ಬಳಸಿ ಆಗಿರುವ ಲಾಭಗಳನ್ನು ಗ್ರಾಫ್ ಕ್ರ. 2 ರಲ್ಲಿ ನೀಡಲಾಗಿದೆ.
 
 
 

nithin_1  H x W 
ನಿತೀನ್ ಕ್ಷೀರಸಾಗರ್
ತಂಡದ ನಾಯಕ (ತಾಂತ್ರಿಕ ಸಹಾಯ ವಿಭಾಗ)
MMC ಹಾರ್ಡ್ ಮೆಟಲ್ ಇಂಡಿಯಾ ಪ್ರೈ. ಲಿ. 
9371276736
nitin.kshirsagar@mmci.co.in
 
ನಿತೀನ್ ಕ್ಷೀರಸಾಗರ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. MMC ಹಾರ್ಡ್ ಮೆಟಲ್ ಇಂಡಿಯಾ ಪ್ರೈ. ಲಿ. ಎಂಬ ಕಂಪನಿಯಲ್ಲಿ ತಾಂತ್ರಿಕ ಸಹಾಯ ವಿಭಾಗದಲ್ಲಿ ಟೀಮ್ ಲೀಡರ್ ಆಗಿದ್ದಾರೆ. ಕಟಿಂಗ್ ಟೂಲ್‌ನ ಸೇಲ್ಸ್‌ ಮತ್ತು ಅಪ್ಲಿಕೇಶನ್ ಕ್ಷೇತ್ರದಲ್ಲಿ ಅವರಿಗೆ 15 ವರ್ಷಗಳ ಅನುಭವವಿದೆ.
 
 
 
Powered By Sangraha 9.0