ಲೇಖಕರಲ್ಲಿ ಕೋರಿಕೆ

Lohkarya - Udyam Prakashan    24-Nov-2020
Total Views |
ಉದ್ಯಮ ಪ್ರಕಾಶನವು ಮಾಸ ಪತ್ರಿಕೆಗಳನ್ನು ಮುದ್ರಿಸಲು ಪ್ರಾರಂಭಿಸಿ ಮೂರು ವರ್ಷಕ್ಕಿಂತ ಹೆಚ್ಚು ಕಾಲಾವಧಿಯು ಪೂರ್ಣವಾಯಿತು. ಈ ತನಕ ಪ್ರಕಟಿಸಲಾಗಿರುವ ಸಂಚಿಕೆಗಳಲ್ಲಿ 450 ಕ್ಕಿಂತಲೂ ಹೆಚ್ಚು ಲೇಖನಗಳನ್ನು ಓದುಗರಿಗೆ ನೀಡಲಾಗಿದೆ. ಈ ಲೇಖನಗಳಿಂದ ನಾವು ಹೊಸ ಉತ್ಪಾದನೆಗಳ ವಿವರಗಳು, ಅತ್ಯಾಧುನಿಕ ತಂತ್ರಜ್ಞಾನ, ಕಾರ್ಖಾನೆ ಮತ್ತು ಪ್ರಕ್ರಿಯೆಯಲ್ಲಿ ಮಾಡಲಾದ ಸುಧಾರಣೆಗಳು ಇತ್ಯಾದಿ ಹಲವಾರು ವಿಷಯಗಳ ಕುರಿತಾದ ವಿಚಾರ ಮತ್ತು ಮಾಹಿತಿಯನ್ನು ಓದುಗರ ತನಕ ತಲುಪಿಸುವ ಪ್ರಯತ್ನವನ್ನು ಮಾಡಿದ್ದೇವೆ. ಭವಿಷ್ಯತ್ಕಾಲದಲ್ಲಿಯೂ ಇದೇ ರೀತಿಯಲ್ಲಿ ಉಚ್ಚ ಗುಣಮಟ್ಟದ ಮಾಹಿತಿಯೊಂದಿಗೆ ವಿನೂತನವಾದ ವಿಷಯಗಳನ್ನು ಓದುಗರಿಗೆ ನೀಡಲು ನಾವು ಉತ್ಸುಕರಾಗಿದ್ದೇವೆ. ಮಾಸ ಪತ್ರಿಕೆಯಿಂದ ಲಭಿಸಿರುವ ಮಾಹಿತಿಯು ಓದುಗರಿಗೆ ಅವರವರ ಕೆಲಸಗಳಲ್ಲಿ ಉಪಯುಕ್ತವಾಗಲಿದೆ, ಎಂಬ ಸಕಾರಾತ್ಮಕವಾದ ಪ್ರತಿಕ್ರಿಯೆಗಳು ನಮ್ಮಲ್ಲಿ ಮತ್ತು ಲೇಖಕರಲ್ಲಿಯೂ ಬರುತ್ತಿವೆ. ಲೇಖಕರು ಸೂಚಿಸಿರುವ ಸುಧಾರಣೆಗಳು ಅಥವಾ ಉತ್ಪಾದನೆಯ ಕುರಿತಾದ ಅಂಶಗಳ ಕುರಿತು ಓದುಗರು ನೇರವಾಗಿ ಚರ್ಚೆಯನ್ನು ಮಾಡುತ್ತಾರೆ, ಎಂಬುದೂ ನಮ್ಮ ಗಮನಕ್ಕೆ ಬಂದಿರುತ್ತದೆ. ತಮ್ಮ ಉತ್ಪಾದನೆಗಳು ಮತ್ತು ಹೊಸ ತಂತ್ರಜ್ಞಾನವನ್ನು ಗ್ರಾಹಕರ ತನಕ ತಲುಪಿಸುವಲ್ಲಿ ಈ ಮಾಸಪತ್ರಿಕೆಯು ಮಹತ್ವದ ವೇದಿಕೆಯಾಗಿದೆ. ಈ ನಮ್ಮ ಮಾಸ ಪತ್ರಿಕೆಯು ಇಂಜಿನಿಯರಿಂಗ್ ಕ್ಷೇತ್ರದಲ್ಲಿರುವ ವರ್ಕ್ ಶಾಪ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲರಿಗೂ ಉಪಯುಕ್ತವಾಗಿದ್ದು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ದಕ್ಷಿಣ ಭಾರತ ಮತ್ತು ಉತ್ತರ ಭಾರತದಲ್ಲಿ ಕನ್ನಡ, ಮರಾಠಿ, ಗುಜರಾತಿ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. ಲಘು, ಮಧ್ಯಮ ಉದ್ಯಮಿಗಳಿಂದ ಎಲ್ಲ ಕೆಲಸಗಾರರ ತನಕ ಪ್ರತಿಯೊಬ್ಬರಿಗೂ ಇದರಿಂದ ಏನಾದರೂ ಓದಲು ಸಿಗಬೇಕು, ಎಂಬ ಪ್ರಯತ್ನವು ನಮ್ಮದಾಗಿದೆ.
 
ಈ ಮಾಸ ಪತ್ರಿಕೆಯಲ್ಲಿ ತಮ್ಮ ಸ್ವಂತ ಅನುಭವಕ್ಕೆ ಸಂಬಂಧಪಟ್ಟ ಲೇಖನಗಳನ್ನು ಪ್ರಕಟಿಸಲು ನಿರಂತರವಾಗಿ ಲೇಖನಗಳು ಲಭ್ಯವಾಗಬೇಕು, ಎಂಬುದೇ ನಮ್ಮ ಆಪೇಕ್ಷೆಯಾಗಿದೆ. ವರ್ಕ್ ಶಾಪ್ ನಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಹಲವಾರು ವಿಶೇಷ ಉತ್ಪಾದನೆಯ ತಂತ್ರಗಳನ್ನು ಬಳಸಿ, ಹಲವಾರು ಕಲ್ಪನೆಗಳನ್ನು ಬಳಸಿ ಉತ್ಪಾದನೆಯ ಖರ್ಚನ್ನು ಕಡಿಮೆ ಮಾಡಲಾಯಿತು, ಅನೇಕ ವಿಧದ ಯೋಜನೆಯನ್ನು ಮಾಡಿ, ತಮ್ಮಲ್ಲಿರುವ ಸಾಮಗ್ರಿಗಳನ್ನು ಬಳಸಿ ಹೆಚ್ಚು ಉತ್ಪಾದನೆಯನ್ನು ಪಡೆಯುವುದು, ಈ ರೀತಿಯ ಅನೇಕ ಸುಧಾರಣೆಗಳನ್ನು ತಮ್ಮ ಕಾರ್ಖಾನೆಗಳಲ್ಲಿ ಪ್ರತ್ಯಕ್ಷವಾಗಿ ಮಾಡಲಾಗಿತ್ತು. ಇದರೊಂದಿಗೆ ಶಾಪ್ ಫ್ಲೋರ್ ನಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಅನೇಕ ರೀತಿಯ ಘಟನೆಗಳು ಸಂಭವಿಸುತ್ತಿರುತ್ತವೆ. ಇದರಲ್ಲಿ ಕೆಲಸದ ರೀತಿ ಅಥವಾ ತಪ್ಪಾದ ವಿಚಾರಗಳು ಅಥವಾ ತಿಳಿವಳಿಕೆಯಲ್ಲಾಗುವ ಗಡಿಬಿಡಿ, ಇಂತಹ ಅನೇಕ ಕಾರಣಗಳು ಸೇರಿವೆ. ಆದರೆ ಈ ಎಲ್ಲ ಅಂಶಗಳಿಂದ ತಮಗೆ ಅನೇಕ ರೀತಿಯಲ್ಲಿ ಮಾಹಿತಿಯು ಸಿಗುತ್ತದೆ, ಹಾಗೆಯೇ ಹೊಸ ಅನುಭವವೂ ಸಿಗುತ್ತದೆ. ಈ ರೀತಿಯ ಅನುಭವ, ಅಲ್ಲದೇ ಹೊಸ ಉತ್ಪಾದನೆಗಳು ಮತ್ತು ತಂತ್ರಜ್ಞಾನದ ಕುರಿತಾದ ಮಾಹಿತಿಯನ್ನು ಸುಮಾರು 50,000 ಕ್ಕಿಂತಲೂ ಹೆಚ್ಚು ಓದುಗರ ತನಕ ತಲುಪಿಸುವಲ್ಲಿ ನಾವು ಖಂಡಿತವಾಗಿಯೂ ಸಹಕರಿಸುತ್ತೇವೆ.
 
ನಾವು ಇಂಜಿನಿಯರ್ ಆಗಿದ್ದೇವೆ ಅಥವಾ ಕಾರ್ಖಾನೆಯಲ್ಲಿ ಕೆಲಸ ಮಾಡುವವರಾಗಿದ್ದೇವೆ, ಆದ್ದರಿಂದ ಈ ಲೇಖನಗಳನ್ನು ಬರೆಯುವುದು ನಮ್ಮ ಕೆಲಸವಲ್ಲ, ಎಂಬ ತಪ್ಪು ಕಲ್ಪನೆಯು ಅನೇಕರಲ್ಲಿದೆ. ನಿಜವಾಗಿ ನೋಡಿದಲ್ಲಿ ತಮಗೆ ಏನನ್ನು ಹೇಳುವುದಿದೆಯೋ, ಅದನ್ನು ಹೇಳಲು ಅನೇಕ ದಾರಿಗಳಿವೆ. ತಾವು ತಮಗೆ ನೀಡಬೇಕು ಎಂದು ಅನಿಸುವಂತಹ ಮಾಹಿತಿಯನ್ನು ತಾವು ಸುಲಭವಾದ ಭಾಷೆಯಲ್ಲಿ ಬರೆದು ಕಳುಹಿಸಬಲ್ಲಿರಿ ಅಥವಾ ಫೋನ್ ನಲ್ಲಿ ಅದರ ರೆಕಾರ್ಡಿಂಗ್ ಮಾಡಿಯೂ ಕಳುಹಿಸಬಲ್ಲಿರಿ. ತಮ್ಮಿಂದ ಸಿಕ್ಕಿರುವ ಕರಡು ಲೇಖನದ ಮರು ಬರವಣಿಗೆಯನ್ನು ನಮ್ಮಲ್ಲಿರುವ ನಿಪುಣ ಸಂಪಾದಕರು ಮಾಡಿ, ತಮಗೆ ಮತ್ತೆ ಕಳುಹಿಸಬಲ್ಲರು. ನಂತರ ಆ ಕರಡು ಲೇಖನವನ್ನು ಮುದ್ರಿಸಲು ಯೋಗ್ಯವಾದ ರೀತಿಯಲ್ಲಿ ಮಾಡುವಲ್ಲಿ ಎಲ್ಲ ರೀತಿಯ ಸಹಕಾರವನ್ನು ಮಾಡಬಲ್ಲರು.
 
ತಮ್ಮಲ್ಲಿರುವ ಕೆಲಸದ ಪದ್ಧತಿಯನ್ನು ಇನ್ನಷ್ಟು ಸಮೃದ್ಧ ಮತ್ತು ಜ್ಞಾನದಿಂದ ಕೂಡಿರುವಂತೆ ಮಾಡಲು ಪ್ರಾರಂಭಿಸಿರುವ ಈ ಪ್ರಚಾರದಲ್ಲಿ ತಾವೆಲ್ಲರೂ ಸಹಭಾಗಿಗಳಾಗಬೇಕು, ಎಂಬುದೇ ನಮ್ಮ ಆಪೇಕ್ಷೆಯಾಗಿದೆ. ತಮ್ಮಿಂದ ವೈವಿಧ್ಯಪೂರ್ಣವಾದ ಮತ್ತು ಉಚ್ಚ ಗುಣಮಟ್ಟದ ಮಾಹಿತಿಯು ಲಭಿಸಬಲ್ಲದು, ಎಂಬ ಖಾತರಿಯು ನಮಗಿದೆ. ಇದಕ್ಕೋಸ್ಕರ ಈ ಕೆಳಗಿನ ಮೊಬೈಲ್ ಕ್ರಮಾಂಕಕ್ಕೆ ಕರೆ ನೀಡಿರಿ ಅಥವಾ ಇಮೇಲ್ ನೊಂದಿಗೆ ಸಂಪರ್ಕಿಸಿರಿ.
 
ಮೊಬೈಲ್ ಕ್ರಮಾಂಕ +91 9359104060
ಇಮೇಲ್ : [email protected]
-------------------