3 ಎಕ್ಸಿಸ್ ಸಿ.ಎನ್.ಸಿ. ಎನ್ ಗ್ರೆವಿಂಗ್ ಮಶಿನ್

24 Nov 2020 15:13:32

2_1  H x W: 0 x
ತುಂಬಾ ಕಡಿಮೆ ಸ್ಥಳದಲ್ಲಿ ಪ್ರಾರಂಭ ಮಾಡಿ 12 ವರ್ಷಗಳಲ್ಲಿ ಜಾಗದ ವಿಸ್ತಾರವನ್ನು ಸುಮಾರು 10 ಪಟ್ಟು ಮಾಡಿರುವ ನಾಶಿಕ್ ನಲ್ಲಿರುವ ನಮ್ಮ ‘ಎನ್-ಗ್ರೆವ್ ಟೆಕ್’ ಕಂಪನಿಯು 3 ಎಕ್ಸಿಸ್, 4 ಎಕ್ಸಿಸ್ ಮತ್ತು 5 ಎಕ್ಸಿಸ್ ನ ಸಿ.ಎನ್.ಸಿ. ಎನ್ ಗ್ರೆವಿಂಗ್ ಮತ್ತು ಮೈಕ್ರೊಮಿಲ್ಲಿಂಗ್ ಮಶಿನ್ ನ ನಿರ್ಮಾಣವನ್ನು ಮಾಡುತ್ತಿದೆ. ಮಾರುಕಟ್ಟೆಯ ಒತ್ತು ಮತ್ತು ಬೇಡಿಕೆ ಇವೆರಡರ ಅಭ್ಯಾಸವನ್ನು ಮಾಡುವಾಗ ಎನ್ ಗ್ರೆವಿಂಗ್ ಮಶಿನ್ ಗೆ ತುಂಬಾ ಬೇಡಿಕೆ ಇರುವುದು ಮತ್ತು ಹೋಲಿಕೆಯಲ್ಲಿ ಇದರಲ್ಲಿ ಕಡಿಮೆ ಉತ್ಪಾದನೆಯು ಇರುವುದರಿಂದ ಈ ಮಾರುಕಟ್ಟೆಗೋಸ್ಕರ ಇಂತಹ ಪರ್ಯಾಯವು ಉಪಲಬ್ಧ ಮಾಡಿಕೊಡಬೇಕು ಎಂಬುದು ನಮ್ಮ ಗಮನಕ್ಕೆ ಬಂತು.

ನಿರ್ಮಾಣದ ಹಿಂದಿರುವ ಸ್ಫೂರ್ತಿ
2005 ರಲ್ಲಿ ಜಾಬ್ ವರ್ಕ್ ಮಾಡುವವರಿಗೋಸ್ಕರ ನಾವು 3 ಎಕ್ಸಿಸ್ ಸಿ.ಎನ್.ಸಿ. ಎನ್ ಗ್ರೆವಿಂಗ್ ಮಶಿನ್ ನ ನಿರ್ಮಾಣವನ್ನು ಮಾಡುತ್ತಿದ್ದೆವು. ಮೇಲೆ ತಿಳಿಸಿದಂತೆ ಮಾರುಕಟ್ಟೆಯಲ್ಲಿರುವ ಈ ಮಶಿನ್ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಭಾರತದಲ್ಲಿರುವ ಸಿ.ಎನ್.ಸಿ. ಎನ್ ಗ್ರೆವಿಂಗ್ ಮಶಿನ್ ಉತ್ಪಾದನೆಯನ್ನು ಮಾಡುವವರ ಸಂಖ್ಯೆಯು ತುಂಬಾ ಕಡಿಮೆ ಇರುವುದನ್ನು ಗಮನಿಸಿದಾಗ ನಾವು ಈ 3 ಎಕ್ಸಿಸ್ ಸಿ.ಎನ್.ಸಿ. ಎನ್ ಗ್ರೆವಿಂಗ್ ಮಶಿನ್ ನ ಕಡೆಗೆ ಹೆಚ್ಚು ಗಮನ ಹರಿಸಿದೆವು. ಇದಕ್ಕೋಸ್ಕರ ನಾವು ಅದರಲ್ಲಿ ಸುಧಾರಣೆಗಳನ್ನು ಮಾಡುತ್ತಾ ಹೊಸದಾದ 3 ಎಕ್ಸಿಸ್ ಸಿ.ಎನ್.ಸಿ. ಎನ್ ಗ್ರೆವಿಂಗ್ ಮಾಡೆಲ್ ‘ಎಕಾನಾಮಿಕಲ್ ಸಿರೀಜ್’ ಎಂಬುದಾಗಿ ಅಭಿವೃದ್ಧಿಪಡಿಸಿದೆವು.
• ನಮ್ಮಲ್ಲಿರುವ ಈ ಹಿಂದಿನ 3 ಎಕ್ಸಿಸ್ ಸಿ.ಎನ್.ಸಿ. ಮಾಡೆಲ್ ನಲ್ಲಿ ಸ್ಟೆಪರ್ ಮೋಟರ್ ಅಳವಡಿಸಲಾಗಿತ್ತು. ಗ್ರಾಹಕರಿಂದ ಬಂದಿರುವ ಬೇಡಿಕೆಯಲ್ಲಿ ಅವರಿಗೆ ಪ್ರಿಸಿಜನ್ ಮೂವ್ ಮೆಂಟ್ ನ ಅಗತ್ಯವಿತ್ತು. ಗ್ರಾಹಕರ ಈ ಬೇಡಿಕೆಯನ್ನು ಪೂರ್ತಿಗೊಳಿಸಲು ನಾವು ಹೊಸ ಮಾಡೆಲ್ ಗೆ ಸರ್ವೋ ಮೋಟರ್ ಅಳವಡಿಸಿದೆವು.
 

3_1  H x W: 0 x 
• ಈ ಹಿಂದಿನ ಮಶಿನ್ ನನ್ನು ಟೇಬಲ್ ಮೇಲೆ ಇಡುವುದು ಸಾಧ್ಯವಿತ್ತು. ಆದರೆ ಹೊಸ ಮಶಿನ್ ನ ಬೇಸ್ ಸಂಪೂರ್ಣವಾಗಿ ಕಾಸ್ಟಿಂಗ್ ನಿಂದ ತಯಾರಿಸಿದ್ದರಿಂದ ಮಶಿನ್ ನ ಭಾರವು ಹೆಚ್ಚಾಗಿ ಅದರ ದೃಢತೆಯು (ಸ್ಟರ್ಡಿನೆಸ್) ಈ ಹಿಂದಿನ ಮಶಿನ್ ನ ಹೋಲಿಕೆಯಲ್ಲಿ ಹೆಚ್ಚು ಇದೆ. ಕಾರಖಾನೆಯಲ್ಲಿ ಮಶಿನ್ ಇಡುವ ಜಾಗದ ಅಕ್ಕಪಕ್ಕದಲ್ಲಿ ಭಾರಿ ತೂಕವಿರುವ ಪ್ರೆಸ್, ಹಾಗೆಯೇ ಭಾರಿ ತೂಕವಿರುವ ಮಶಿನ್ ಗಳಿರುತ್ತವೆ. ಇದರಿಂದಾಗಿ ಆ ಮಶಿನ್ ನ ಹತ್ತಿರ ನಮ್ಮ ಮಶಿನ್ ಇದ್ದಲ್ಲಿ ಅದರ ಕಂಪನಗಳು ಉಂಟಾಗುತ್ತಿದ್ದವು. ಆ ಕಂಪನಗಳನ್ನು ತಡೆಯಲು ನಮಗೆ ಮಶಿನ್ ನ ದೃಢತೆಯನ್ನು ಹೆಚ್ಚಿಸುವ ಆವಶ್ಯಕತೆಯ ಅರಿವಾಯಿತು.
• ಹೊಸ 3 ಎಕ್ಸಿಸ್ ಎನ್ ಗ್ರೆವಿಂಗ್ ಮಶಿನ್ ನಲ್ಲಿ ಕೆಲಸಕ್ಕೆ ಬಳಸಲಾಗುವ ಟೇಬಲ್ ನ ಆಕಾರವು 300 ಮಿ.ಮೀ.X 300 ಮಿ.ಮೀ., 400 ಮಿ.ಮೀ. X 400 ಮಿ.ಮೀ. ಮತ್ತು 600 ಮಿ.ಮೀ.X 400 ಮಿ.ಮೀ. ಇದ್ದು ಈ ಮೂರು ವಿಧದ ಮಾಡೆಲ್ ಗಳನ್ನು ನಾವು ಅಭಿವೃದ್ಧಿ ಮಾಡಿದ್ದೇವೆ. ಹೊಸ ಮಶಿನ್ ನಲ್ಲಿ ಒಂದೇ ಸಲ ಒಂದೇ ರೀತಿಯ ಅಥವಾ ವಿವಿಧ 6 ಕಾರ್ಯವಸ್ತುಗಳನ್ನು ಅಳವಡಿಸುವುದು ಸಾಧ್ಯವಿದೆ.

ನಿರ್ಮಿತಿಯಲ್ಲಿರುವ ಸವಾಲುಗಳು
ನಾವು ಅಭಿವೃದ್ಧಿ ಪಡಿಸಿರುವ ಉತ್ಪಾದನೆಗಳನ್ನು ಗ್ರಾಹಕರಿಗೆ ಪೂರೈಸುವಂತಹ ಬೆಲೆಯಲ್ಲಿ ನೀಡುವ ಜವಾಬ್ದಾರಿಯು ನಮ್ಮ ಮೇಲೆ ಇತ್ತು. ಇದರಲ್ಲಿ ಸರ್ವೋ ಮೋಟರ್, ಹಾಗೆಯೇ ಯಾವುದೇ ಮಶಿನ್ ಗಳಿಗೆ ಉಚ್ಚ ಗುಣಮಟ್ಟದ ವಿವಿಧ ಭಾಗಗಳನ್ನು ಬಳಸುವುದು ತುಂಬಾ ಅಗತ್ಯವಾಗಿತ್ತು. ಅದ್ದರಿಂದ ನಮ್ಮ ಮಶಿನ್ ಗಳ ಬೆಲೆಯು ಹೆಚ್ಚಾಗಿತ್ತು. ಹೆಚ್ಚಾಗಿರುವ ಬೆಲೆಯನ್ನು ಕಡಿಮೆ ಮಾಡಲು ನಾವು ಅನೇಕ ಬದಲಾವಣೆಗಳನ್ನು ಮತ್ತು ಸಂಶೋಧನೆಗಳನ್ನೂ ಮಾಡಿ ಹೊಸದಾದ ಡಿಸೈನ್ ತಯಾರಿಸಿದೆವು. ಮಶಿನ್ ನ ಯಾಂತ್ರಿಕ (ಮೆಕ್ಯಾನಿಕಲ್) ವ್ಯವಸ್ಥೆಯು ಎಷ್ಟು ಸುಲಭ ಮತ್ತು ಸರಳವಾಗಿ ಇರುತ್ತದೆಯೋ, ಅಷ್ಟೇ ಆ ಮಶಿನ್ ಭವಿಷ್ಯತ್ಕಾಲದಲ್ಲಿ ಒಳ್ಳೆಯ ಚಟುವಟಿಕೆ, ಫಲಿತಾಂಶ ಮತ್ತು ಬಾಳಿಕೆಯನ್ನು ನೀಡಲು ಸಹಕರಿಸುತ್ತದೆ, ಎಂಬುದನ್ನು ನಾವು ಗಮನಿಸಿದೆವು.

ಪ್ರೊಡಕ್ಟ್ ಗಳ ವೈಶಿಷ್ಟ್ಯಗಳು
1. ವಿದ್ಯುತ್ ಶಕ್ತಿಯ ಸರಬರಾಜು ನಿಂತಲ್ಲಿ ಮಶಿನ್ ನಿಲ್ಲುತ್ತಿತ್ತು, ಅಲ್ಲಿಂದಲೇ ಅದು ಮತ್ತೆ ಪ್ರಾರಂಭಿಸಲ್ಪಡುತ್ತದೆ.
2. ಮಶಿನ್ ನಲ್ಲಿ ಒಂದೇ ಸಲ 6 ಒಂದೇ ರೀತಿಯ ಅಥವಾ ವಿವಿಧ ಕಾರ್ಯವಸ್ತುಗಳನ್ನು ಅಳವಡಿಸಬಹುದು.
3. Z ಎಕ್ಸಿಸ್ ನ ಡೈನ್ಯಾಮಿಕ್ ಸಮತೋಲನಕ್ಕೋಸ್ಕರ ಬ್ರೇಕ್ ಮೋಟರ್ ನ ಉಪಯೋಗವನ್ನು ಮಾಡಲಾಗಿದೆ.
4. USB ಪೆನ್ ಡ್ರೈವ್ ಅಥವಾ LAN ಬಳಸಿ ಸಹಜವಾಗಿ ಪ್ರೊಗ್ರಾಮ್ ಕಾಪಿ ಮಾಡಬಹುದು.
5. ವಿವಿಧ CAD-CAM ಸಾಫ್ಟ್ ವೇರ್ ನೊಂದಿಗೆ ಹೊಂದಿಕೊಳ್ಳುವಂತಹದ್ದು.
3 ಎಕ್ಸಿಸ್ ಸಿ.ಎನ್.ಸಿ. ಎನ್ ಗ್ರೆವಿಂಗ್ ಮಶಿನ್ ನಲ್ಲಿ ಯಂತ್ರಣೆಯನ್ನು ಮಾಡುತ್ತಿರುವ ವಿಡಿಯೋ ನೋಡಲು ಪಕ್ಕದಲ್ಲಿರುವ QR ಕೋಡ್ ತಮ್ಮ ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡಿರಿ.
 

4_1  H x W: 0 x
ಕೇಸ್ ಸ್ಟಡಿ
ಆಭರಣಗಳ ಡಿಸೈನ್ ಮಾಡುವ ಒಬ್ಬ ಗ್ರಾಹಕರು 3 ಎಕ್ಸಿಸ್ ಸಿ.ಎನ್.ಸಿ. ಎನ್ ಗ್ರೆವಿಂಗ್ ಮಶಿನ್ ಉಪಯೋಗಿಸಿ ತಮ್ಮ ಉತ್ಪಾದನೆಗೋಸ್ಕರ ಬೇಕಾಗುವ ವೇಳೆಯ ಉಳಿತಾಯ ಮಾಡಿ ಉತ್ಪಾದನೆಯನ್ನು ಹೆಚ್ಚಿಸಿದರು. ಇದರ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಹಳೆಯ ರೀತಿ

ಈ ಹಿಂದೆ ಆಭರಣಗಳ ಡಿಸೈನ್ ಗಳನ್ನು ಗ್ರಾಹಕರ ಮನಸ್ಸಿನಲ್ಲಿರುವ ಕಲ್ಪನೆಗಳಿಗೆ ಅನುಸಾರವಾಗಿ ಕಾಗದದಲ್ಲಿ ಬರೆಯಲಾಗುತ್ತಿತ್ತು. ನಂತರ ಕುಶಲಕರ್ಮಿಗಳು ಆ ಡಿಸೈನ್ ನಂತೆ ಮಟೀರಿಯಲ್ ಗೆ ತಮ್ಮ ಕೈಯಿಂದಲೇ ಯೋಗ್ಯವಾದ ಆಕಾರವನ್ನು ನೀಡಿ ಪ್ರತ್ಯಕ್ಷವಾಗಿ ಡೈ ಮೋಲ್ಡ್ ತಯಾರಿಸುತ್ತಿದ್ದರು. ಈ ಕೆಲಸವು ಮ್ಯಾನ್ಯುವಲಿ ಮಾಡಲಾಗುತ್ತಿತ್ತು. ಆದ್ದರಿಂದ ಈ ಕೆಲಸಕ್ಕೆ ನುರಿತ ಮಾನವ ಶಕ್ತಿಯ ಆವಶ್ಯಕತೆ ಇರುತ್ತಿತ್ತು. ಇದರ ಹೊರತಾಗಿ ಈ ಪ್ರಕ್ರಿಯೆಯಲ್ಲಿ ಸಾಕಷ್ಟು ವೇಳೆಯ ವ್ಯಯವೂ ಆಗುತ್ತಿತ್ತು. ಇವೆಲ್ಲವನ್ನೂ ಹೋಲಿಸಿದಲ್ಲಿ ಉತ್ಪಾದನೆ ಮಾತ್ರ ತುಂಬಾ ಕಡಿಮೆ ಇರುತ್ತಿತ್ತು. ಈ ಹಿಂದೆ ಒಂದು ಡಿಸೈನ್ ಗೋಸ್ಕರ ಒಂದು ದಿನದಷ್ಟು ಸಮಯವು ತಗಲುತ್ತಿತ್ತು.

ಹೊಸ ರೀತಿ
ಹಳೆಯ ರೀತಿಯಲ್ಲಿ ಬೇಕಾಗುವ ಜಾಸ್ತಿ ಮಟ್ಟದ ವೇಳೆ ಮತ್ತು ಕಡಿಮೆಯಾದ ಉತ್ಪಾದಕತೆ ಈ ಎರಡೂ ಸಮಸ್ಯೆಗಳ ಕುರಿತು ವಿಚಾರ ಮಾಡಲಾಯಿತು. ಇದಕ್ಕೋಸ್ಕರ ಈ ಗ್ರಾಹಕನು ಆಭರಣಗಳ ಡೈ ಮೋಲ್ಡ್ ತಯಾರಿಸಲು 3 ಎಕ್ಸಿಸ್ ಸಿ.ಎನ್.ಸಿ. ಎನ್ ಗ್ರೆವಿಂಗ್ ಮಶಿನ್ ಬಳಸುವುದನ್ನು ನಿರ್ಧರಿಸಲಾಯಿತು. ಈ ಮಶಿನ್ ನ ನಿರ್ವಹಣೆ ತುಂಬಾ ಸುಲಭ ಮತ್ತು ಸರಳವಾಗಿದೆ. ಈ ಹಿಂದೆ ಯಾವ ಕೆಲಸಕ್ಕಾಗಿ ನುರಿತ ಮಾನವ ಶಕ್ತಿಯ ಅಗತ್ಯವಿತ್ತೋ, ಆ ಕೆಲಸವನ್ನು ಹೊಸ ರೀತಿಯಲ್ಲಿ CAD-CAM ಸಾಫ್ಟ್ ವೇರ್ ಉಪಯೋಗಿಸಿ ಮಾಡಿದ್ದರಿಂದ ತಗಲುವ ಸಮಯವೂ ಕಡಿಮೆಯಾಯಿತು. ಇದರಲ್ಲಿ ಟೂಲ್ ನ ಬಾಳಿಕೆಯೂ ಹೆಚ್ಚಾಯಿತು. ಈ ಮಶಿನ್ ನ ಬಳಕೆಯಿಂದಾಗಿ ಸಮಯದಲ್ಲಿ ದೊಡ್ಡ ಪ್ರಮಾಣದ ಉಳಿತಾಯವೇ ಆಯಿತು. ಕೇವಲ 5 ರಿಂದ 6 ಗಂಟೆಗಳಲ್ಲಿ ಒಂದು ಡಿಸೈನ್ ಪೂರ್ಣವಾಗಲಾರಂಭಿಸಿತು. ಹೊಸ ಮಶಿನ್ ಗಳ ಬಳಕೆಯಿಂದಾಗಿ ಈ ಗ್ರಾಹಕರಿಗೆ ಉತ್ಪಾದನೆಯಲ್ಲಿಯೂ ಬಹು ದೊಡ್ಡ ಲಾಭವೇ ಆಯಿತು. ಹಳೆ ರೀತಿಯನ್ನು ಹೋಲಿಸಿದಾಗ ಉತ್ಪಾದಕತೆಯಲ್ಲಿ ಸುಮಾರು ಮೂರು ಪಟ್ಟು ಹೆಚ್ಚಳವಾಯಿತು.

ಲಭ್ಯವಿರುವ ಪರ್ಯಾಯಗಳು
ಕಳೆದ ಹಲವಾರು ವರ್ಷಗಳಲ್ಲಿ ಭಾರತದ ಮಾರುಕಟ್ಟೆಗೋಸ್ಕರ ನಮ್ಮ ಉತ್ಪಾದನೆಗಳು ಪರಿಪಕ್ವವಾಗಿವೆ ಮತ್ತು ಉತ್ಪಾದನೆಗಳನ್ನು ನಾಲ್ಕು ವಿಧದ ಗುಂಪುಗಳಾಗಿ ವಿಂಗಡಿಸಲಾಗಿದೆ.
1. ಡೆಸ್ಕ್ ಟಾಪ್ ಶ್ರೇಣಿ : ಟೇಬಲ್ ಮೇಲೆ ಇಡಬಹುದಾದಂತಹ ಸಾಮಾನ್ಯವಾದ ಟೂಡಿ (2D) ಮತ್ತು ಥ್ರಿಡಿ (3D) ಇಂತಹ ಸಿ.ಎನ್.ಸಿ. ಎನ್ ಗ್ರೇವರ್.
2. ಇಕೋ ಶ್ರೇಣಿ : ಉತ್ಪಾದನೆಯಲ್ಲಿ ಎಲ್ಲಕ್ಕಿಂತಲೂ ಲಾಭಕಾರಿಯಾದ ಆದರೆ ತುಂಬಾ ಶಕ್ತಿಶಾಲಿಯಾದ 3 ಎಕ್ಸಿಸ್ ಸಿ.ಎನ್.ಸಿ. ಎನ್ ಗ್ರೆವಿಂಗ್ ಮಶಿನ್, ಅದರೊಂದಿಗೆ ಬೇಕಾದಂತೆ 4 ಎಕ್ಸಿಸ್ ಅಟ್ಯಾಚ್ಮೆಂಟ್ ಇರುತ್ತದೆ.
3. ಪ್ರೋ ಶ್ರೇಣಿ : ಉನ್ನತ ನಿಖರತೆ ಮತ್ತು ಸರ್ಫೇಸ್ ನ ಸಮತಲವು ಬೇಕಾಗಿರುವ ಗ್ರಾಹಕರಿಗೋಸ್ಕರ ಯೋಗ್ಯವಾಗಿರುವಂತಹ ವೃತ್ತಿಪರ 3 ಎಕ್ಸಿಸ್ ಮೈಕ್ರೋಮಿಲ್ಲಿಂಗ್ ಮತ್ತು ಎನ್ ಗ್ರೆವಿಂಗ್ ಮಶಿನ್.
4. ಪ್ರಿಸಿಜನ್ ಶ್ರೇಣಿ : ದೃಢವಾದ ಅಡಿಪಾಯ ಇರುವ ಉನ್ನತ ನಿಖರತೆ ಇರುವ ಮೈಕ್ರೋಮಿಲ್ಲಿಂಗ್ ಮತ್ತು ಎನ್ ಗ್ರೆವಿಂಗ್ ಮಶಿನ್. ನಿರ್ದೋಷತೆ ಮತ್ತು ದೃಢತೆಯ ಅಗತ್ಯ ಇರುವ ಗ್ರಾಹಕರಿಗೋಸ್ಕರ ಇದು ತುಂಬಾ ಉಪಯುಕ್ತವಾಗಿದೆ.
 
3 ಎಕ್ಸಿಸ್ ಸಿ.ಎನ್.ಸಿ. ಎನ್ ಗ್ರೆವಿಂಗ್, ಮೈಕ್ರೋಮಿಲ್ಲಿಂಗ್ ಮಶಿನ್ ಇದು ಡೈ ಮೋಲ್ಡ್ ಗೋಸ್ಕರ ಉಪಯುಕ್ತವಾದ ಮಶಿನ್ ಆಗಿದೆ. ಇದರಲ್ಲಿ ಉನ್ನತ ಮಟ್ಟದ ಪ್ರಿಸಿಜನ್ ಇರುವ ಕೆಲಸಗಳನ್ನು ಸೂಕ್ತವಾದ ಸಾಮರ್ಥ್ಯದಿಂದ ಮಾಡಬಹುದಾಗಿದೆ. ಆಟೊಮೊಬೈಲ್ ಉದ್ಯಮ, ಫೋರ್ಜಿಂಗ್, ಪ್ಲಾಸ್ಟಿಕ್, ಆಭರಣಗಳ ತಯಾರಿಕೆ, ಮುದ್ರಣ ಮತ್ತು ಪೆಕೆಜಿಂಗ್ ಉದ್ಯಮ, ಟೆಕ್ಸ್ ಟೈಲ್, ಗಡಿಯಾರ, ಇಲೆಕ್ಟ್ರಾನಿಕ್ ಮತ್ತು ಇಲೆಕ್ಟ್ರಿಕಲ್, ಪಾದರಕ್ಷೆಗಳ ತಯಾರಿಕೆ ಇತ್ಯಾದಿ ವಿವಿಧ ಉದ್ಯಮಗಳಲ್ಲಿ ಈ ಮಶಿನ್ ನ ಬಳಕೆಯು ಆಗುತ್ತದೆ.
Powered By Sangraha 9.0