ವಿದ್ಯುತ್ ಶಕ್ತಿಯನ್ನು ಪಡೆಯಲು ರಿನ್ಯುಯೇಬಲ್ ಎನರ್ಜಿಯನ್ನು ಬಳಸಿ ವಿದ್ಯುತ್ ತಯಾರಿಕೆಯನ್ನು ಮಾಡುವ ಅನೇಕ ಪರ್ಯಾಯಗಳಲ್ಲಿರುವ ಒಂದು ವೈಶಿಷ್ಟ್ಯಪೂರ್ಣವಾದ ರೀತಿ ಎಂದರೆ ಹೈಡ್ರೋಜನ್ ಇಂಧನ ಸೆಲ್. ಚಿತ್ರ ಕ್ರ. 1 ರಲ್ಲಿ ಈ ಪ್ರಕ್ರಿಯೆಯನ್ನು ಪ್ರಾತಿನಿಧಿಕ ರೂಪದಲ್ಲಿ ತೋರಿಸಲಾಗಿದೆ. ಚಿತ್ರ ಕ್ರ. 2 ರಲ್ಲಿ ಹೈಡ್ರೋಜನ್ ಇಂಧನ ಸೆಲ್ ನ ಸ್ವರೂಪವನ್ನು ಸ್ಪಷ್ಟಪಡಿಸಲಾಗಿದೆ.
ವಿಶಿಷ್ಟ ಆಕಾರದ ಸರ್ಫೇಸ್ ನಲ್ಲಿ ಕಚ್ಚುಗಳ ವಿಶೇಷವಾದ ರಚನೆ ಇರುವ ಚಪ್ಪಟೆಯಾಗಿರುವ ಗ್ರೆಫೈಟ್ ಪ್ಲೇಟ್ ಈ ಇಂಧನ ಸೆಲ್ ನಲ್ಲಿರುವ ಮೂಲಭೂತ ಘಟಕವಾಗಿದೆ. ಕಚ್ಚುಗಳ ಪಕ್ಕದಲ್ಲಿ ಜಾಗವು ಕಚ್ಚುಗಳಲ್ಲಿರುವ ಗಾಳಿಯ ಸೋರುವಿಕೆಯನ್ನು ತಡೆಯಬಲ್ಲ ಸೀಲಿಂಗ್ ಗೋಸ್ಕರ (ಚಿತ್ರ ಕ್ರ. 3) ಇದೆ. ಒಂದರ ಮೇಲೊಂದು ಅಳವಡಿಸಿರುವ, ಕಚ್ಚುಗಳ ಸರ್ಫೇಸ್ ನ ಎದುರುಬದುರು ಇರುವ ಎರಡು ಗ್ರೆಫೈಟ್ ಪ್ಲೇಟ್ ನಿಂದ ಗ್ರೆಫೈಟ್ ನ ಒಂದು ಸ್ಟೇಕ್ ತಯಾರಾಗುತ್ತದೆ. ಇಂತಹ ಸ್ಟೇಕ್ ನ ರೂಪದಲ್ಲಿ ಗ್ರೆಫೈಟ್ ನ ಜೋಡಣೆಯನ್ನುಅದರ ಮೂಲಕ ಗಾಳಿಯನ್ನು ಹಾಯಿಸಲು ಒಂದು ಸುಲಭವಾದ ಮಾರ್ಗವನ್ನು ತಯಾರಿಸುತ್ತದೆ. ಒಂದು ಬ್ಯಾಟರಿ ತಯಾರಿಸಲು ಇಂತಹ ಅನೇಕ ಸ್ಟೇಕ್ ಒಂದರಮೇಲೊಂದು ಇಡಲಾಗುತ್ತವೆ. ಆವಶ್ಯಕವಿರುವ ಶಕ್ತಿಯ ಬೇಡಿಕೆಯನ್ನು ಪರಿಶೀಲಿಸಿ ಅದಕ್ಕೆ ಅನುಸಾರವಾಗಿ ಸ್ಟೇಕ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಈ ಸ್ಟೇಕ್ ಗಳ ಜೋಡಣೆಯನ್ನು ವಿರುದ್ಧ ಬದಿಗಳಲ್ಲಿ ಇಡಲಾಗಿರುವ ಎರಡೂ ಟೈ ರಾಡ್ ನ ಸಹಾಯದಿಂದ ಬೋಲ್ಟ್ ಹಚ್ಚಿ ಜೋಡಿಸಲಾಗಿರುತ್ತವೆ. (ಚಿತ್ರ ಕ್ರ. 4) ಈ ಸ್ಟೇಕ್ ಗಳ ಜೋಡಣೆಯಿಂದ ಗಾಳಿ ಹಾಯ್ದು ಹೋಗಲು ಹಾಗೆಯೇ ಪಕ್ಕದಲ್ಲಿರುವ ಸ್ಟೇಕ್ ಗಳಿಂದ ಹೋಗಬಲ್ಲ ದಾರಿಯನ್ನು ತಯಾರಿಸುತ್ತದೆ.
ಗ್ರೆಫೈಟ್ ಪ್ಲೇಟ್ ನಿಖರವಾಗಿ ತಯಾರಿಸುವ ಸವಾಲು ನಮ್ಮೆದುರು ಇತ್ತು. ಗ್ರೆಫೈಟ್ ನ ಮುದ್ದೆಗಳು ಮಾರುಕಟ್ಟೆಯಲ್ಲಿ 750 ಮಿ.ಮೀ. x 750 ಮಿ.ಮೀ. x 4 ಮಿ.ಮೀ. ಆಕಾರದಲ್ಲಿ ಉಪಲಬ್ಧವಿವೆ. ಇವುಗಳು ತುಂಬಾ ಸಡಿಲವಾಗಿರುವುದರಿಂದ ಪ್ರಕ್ರಿಯೆ ಮಾಡುವಾಗ ಹಾಗೆಯೇ ಜೋಡಿಸುವಾಗ ಅವುಗಳನ್ನು ಜಾಗ್ರತೆಯಿಂದ ನಿಭಾಯಿಸಬೇಕಾಗುತ್ತದೆ. ಯಾವುದೇ ಹೆಚ್ಚುವರಿ ಅಥವಾ ಅನಾವಶ್ಯಕವಾದ ಬಲವನ್ನು ನೀಡಿದಲ್ಲಿ ಗ್ರೆಫೈಟ್ ಗೆ ಕಚ್ಚುಗಳು ಉಂಟಾಗುತ್ತವೆ. ಈ ಮುದ್ದೆಗಳನ್ನು ಬಡಗಿಯು ಕಟ್ಟಿಗೆ ಕತ್ತರಿಸುವ ಯಂತ್ರದಂತೆ ಕಟಿಂಗ್ ಮಶಿನ್ ನ ಸಹಾಯದಿಂದ 210 ಮಿ.ಮೀ. x 120 ಮಿ.ಮೀ. ಆಕಾರದಲ್ಲಿ ಕತ್ತರಿಸಲಾಗುತ್ತವೆ. ಪ್ರಾರಂಭದಲ್ಲಿ ಪ್ರಕ್ರಿಯೆಗೆ ಅನುಸಾರವಾಗಿ ಕತ್ತರಿಸಿರುವ ಮುದ್ದೆಗಳನ್ನು ನೇರವಾಗಿ ವಿ.ಎಮ್.ಸಿ.ಯಲ್ಲಿ ಕಚ್ಚುಗಳನ್ನು ಮಾಡಲು ಒಯ್ಯಲಾಗುತ್ತವೆ ಮತ್ತು ನಂತರ ಅಂತಿಮ ಜೋಡಣೆಯನ್ನು ಮಾಡಲಾಗುತ್ತಿತ್ತು. ಈ ರೀತಿಯಲ್ಲಿ ಜೋಡಿಸಿರುವ ಗ್ರೆಫೈಟ್ ನ ಪ್ಲೇಟ್ ನಲ್ಲಿ ಸೀಲಿಂಗ್ ಮಾಡುವ ಜಾಗದಲ್ಲಿ ಸ್ವಲ್ಪ ಅಂಚು ಉಂಟಾಗುತ್ತಿತ್ತು. ಇದರಿಂದಾಗಿ ಹೈಡ್ರೋಜನ್ ಗಾಳಿಯ ಬ್ಯಾಟರಿಯ ಚಟುವಟಿಕೆಯು ಆವಶ್ಯಕ ಗುಣಮಟ್ಟದಷ್ಟು ಆಗುತ್ತಿರಲಿಲ್ಲ.
ಮಾರುಕಟ್ಟೆಯಲ್ಲಿ ಉಪಲಬ್ಧವಿರುವ ಕಚ್ಚಾ ಗ್ರೆಫೈಟ್ ನ ಪ್ಲೇಟ್ ನ ಬದಿಯ ಸರ್ಫೇಸ್ ಪ್ರಾರಂಭದಲ್ಲಿ ಹರಿತವಾಗಿರುತ್ತದೆ, ಎಂಬ ಅಂಶವು ಇದರ ಕುರಿತು ವಿಶ್ಲೇಷಣೆ ಮಾಡಿದಾಗ ಗಮನಕ್ಕೆ ಬಂತು. ಈ ಚೂಪುತನವನ್ನು ತೆಗೆದು ವಿ.ಎಮ್.ಸಿ.ಯಲ್ಲಿ ಕಚ್ಚುಗಳನ್ನು ಮಾಡಿದ್ದರಿಂದ ಕಚ್ಚುಗಳ ಆಳವು ಅನಿಯಮಿತವಾಗುತ್ತಿತ್ತು. ಹಾಗೆಯೇ ಕಚ್ಚುಗಳನ್ನು ಮಾಡಿದ ನಂತರ ಸೀಲಿಂಗ್ ಗೆ ಇಡಲಾಗಿರುವ ಜಾಗವು ಯೋಗ್ಯವಾಗಿ ತಯಾರಾಗುತ್ತಿರಲಿಲ್ಲ. ಇದರಿಂದಾಗಿ ಗಾಳಿ ಮತ್ತು ರಾಸಾಯನಿಕ ಮಿಶ್ರಣಗಳ ಪ್ರವಾಹದಲ್ಲಿ ವಿಪರೀತವಾದ ಪರಿಣಾಮ ಉಂಟಾಗುತ್ತಿತ್ತು. ಹಾಗೆಯೇ ಸೀಲಿಂಗ್ ಸರಿಯಾಗಿ ಆಗುತ್ತಿರಲಿಲ್ಲ. ಆದ್ದರಿಂದ ಬ್ಯಾಟರಿಯ ಕೆಲಸದ ನಿರ್ವಹಣೆಯು ಸಮಾಧಾನಕರವಾಗಿ ಇರಲಿಲ್ಲ.
ಇದಕ್ಕೋಸ್ಕರ ಗ್ರೆಫೈಟ್ ಪ್ಲೇಟ್ ನ ಯಂತ್ರಣೆಯ ಪ್ರಕ್ರಿಯೆಯನ್ನು ನಿರ್ಧರಿಸುವಾಗ ಎರಡು ಸರ್ಫೇಸ್ ಗಳು ಸಮಾನಾಂತರವಾಗಿ ಇರಬೇಕು. ಇದಕ್ಕೋಸ್ಕರ ನಾವು ಸರ್ಫೇಸ್ ನಲ್ಲಿ ಗ್ರೈಂಡಿಂಗ್ ನ ಪ್ರಕ್ರಿಯೆಯನ್ನು ಬಳಸಿದೆವು. ಆದರೆ ಗ್ರೆಫೈಟ್ ತುಂಬಾ ಸಡಿಲವಾಗಿತ್ತು ಮತ್ತು ಮೆಗ್ನೆಟಿಕ್ ರಹಿತವಾದದ್ದಾಗಿತ್ತು. ಅದ್ದರಿಂದ ಸರ್ಫೇಸ್ ನ ಗ್ರೈಂಡಿಂಗ್ ಪ್ರಕ್ರಿಯೆಯಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಯಿತು. ತುಂಡಾಗುವ ಸಾಧ್ಯತೆ ಇದ್ದರಿಂದ ಹೊರ ಬದಿಯಲ್ಲಿ ಕ್ಲಾಂಪಿಂಗ್ ವ್ಯವಸ್ಥೆಯನ್ನು ಅಳವಡಿಸುವುದು ಅಸಾಧ್ಯವಾಗಿತ್ತು. ಹಾಗೆಯೇ ಮೆಗ್ನೆಟಿಕ್ ಗುಣಧರ್ಮಗಳು ಇಲ್ಲದ್ದರಿಂದ ಪ್ಲೇಟ್ ಗೆ ಗ್ರೈಂಡಿಂಗ್ ಮಶಿನ್ ನಲ್ಲಿ ಮೆಗ್ನೆಟಿಕ್ ಪಟ್ಟಿಯ ಸಹಾಯದಿಂದ ನೇರವಾಗಿ ಕ್ಲಾಪಿಂಗ್ ಮಾಡುವುದು ಸಾಧ್ಯವಿರಲಿಲ್ಲ. (ಚಿತ್ರ ಕ್ರ. 5) ಯೋಗ್ಯ ರೀತಿಯ ನೆಸ್ಟಿಂಗ್ ಮಾಡಿ ಈ ಸಮಸ್ಯೆಯನ್ನು ನೀಗಿಸಲಾಯಿತು.
ನೆಸ್ಟಿಂಗ್ ಅಂದರೆ ಪರಿಪೂರ್ಣವಾಗಿ ಗ್ರೈಂಡಿಂಗ್ ಮಾಡಿರುವ ಮತ್ತು ಸಡಿಲವಾಗಿ ಜೋಡಿಸಿರುವ ಗ್ರೆಫೈಟ್ ಪ್ಲೇಟ್ ಗಿಂತ ಕಡಿಮೆ ದಪ್ಪದ ಉಕ್ಕಿನ ಪಟ್ಟಿಗಳಿರುತ್ತವೆ. ಈ ನೆಸ್ಟ್ ಗ್ರೈಂಡಿಂಗ್ ನ ಬಲವನ್ನು ಎದುರಿಸಬಲ್ಲದು ಮತ್ತು ಗ್ರೆಫೈಟ್ ಪ್ಲೇಟ್ ಗೆ ಆವಶ್ಯಕವಿರುವ ಆಧಾರವನ್ನೂ ನೀಡುತ್ತದೆ. ಅಪೇಕ್ಷಿಸಿರುವ ನಿಖರತೆಯನ್ನು ಪಡೆಯಲು ಗ್ರೈಂಡಿಂಗ್ ಪ್ರಕ್ರಿಯೆಯನ್ನು ಡ್ರೈ ಸ್ಥಿತಿಯಲ್ಲಿ ಮಾಡುವುದನ್ನು ಸೂಚಿಸಲಾಗಿತ್ತು.
ಪ್ಲೇಟ್ ನ ಗ್ರೈಂಡಿಂಗ್ ಪ್ರಕ್ರಿಯೆಯಲ್ಲಿ ತಯಾರಾಗಿರುವ ಗ್ರೆಫೈಟ್ ಪಾವಡರ್ ಅಪಾಯಕಾರಿ ಎಂಬುದಾಗಿ ತಿಳಿಯಲಾಗುತ್ತದೆ ಮತ್ತು ಅದರ ಯೋಗ್ಯ ವಿಲೆವಾರಿಯನ್ನು ಮಾಡುವ ಕುರಿತು ಮುತುವರ್ಜಿ ವಹಿಸುವ ಜವಾಬ್ದಾರಿಯು ಉತ್ಪಾದಕರಾಗಿರುತ್ತದೆ. ಇದರಿಂದಾಗಿ ಯೋಗ್ಯ ರೀತಿಯ ಮುತುವರ್ಜಿ ವಹಿಸಿಯೇ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳನ್ನು ಪಾಲಿಸಲಾಗುತ್ತದೆ. ಈ ಪರಿಸರ ಸ್ನೇಹಿಯಾದ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸುವುದು ಸಾಧ್ಯವಾಯಿತು, ಎಂಬ ಅಭಿಮಾನವೂ ಮೂಡಿಬಂತು.
ಈ ಪ್ರಣಾಳಿಕೆಯಲ್ಲಿ ಎರಡು ಸರ್ಫೇಸ್ ಗಳ ಸಮತಟ್ಟುತನ ಮತ್ತು ಸಮಾನಾಂತರತೆ 0.05 ಮಿ.ಮೀ.ಯಲ್ಲಿ ಪಡೆಯುವುದು ಸಾಧ್ಯವಾಯಿತು. ಇದರಿಂದಾಗಿ ಹೈಡ್ರೊಜನ್ ನ ಸೋರುವಿಕೆಯು ಇಲ್ಲದಂತಾಯಿತು.
ಇಂತಹ ಬ್ಯಾಟರಿಯ ಬಾಳಿಕೆಯು ವ್ಯವಹಾರದ ದೃಷ್ಟಿಯಲ್ಲಿ ನೋಡಿದರೆ ಮಿತಿ ಇಲ್ಲದ್ದು ಇರುತ್ತದೆ ಮತ್ತು ಅನೇಕ ವರ್ಷಗಳ ತನಕ ಕೆಲಸವನ್ನು ನಿರ್ವಹಿಸುತ್ತದೆ. ಕಾರಣ ಯಾವುದೇ ಭಾಗದ ಸವೆತ ಅಥವಾ ಇರೋಶನ್ ಆಗುವ ಸಾಧ್ಯತೆ ಇರುವುದಿಲ್ಲ. ಈ ಪ್ರಣಾಳಿಕೆಯ ಕುರಿತು ಪುಣೆಯಲ್ಲಿರುವ ಧೃಢೀಕರಿಸಲ್ಪಟ್ಟ ಮತ್ತು ಪ್ರಸಿದ್ಧ ಪ್ರಯೋಗಶಾಲೆಗಳಲ್ಲಿ ಪರೀಕ್ಷೆಯನ್ನು ಮಾಡಲಾಗಿದೆ ಅಲ್ಲದೇ ಮನ್ನಣೆಯನ್ನು ಪಡೆಯಲಾಗಿದೆ. ಸದ್ಯಕ್ಕೆ ಇಂತಹ ಪ್ರಣಾಳಿಕೆಗಳು ಮೊಬೈಲ್ ಟಾವರ್ ಗಳಲ್ಲಿ, ಇಂಧನದಿಂದ ನಡೆಯುವ ವಿದ್ಯುತ್ ತಯಾರಿಕೆಯಲ್ಲಿ ಯಂತ್ರಗಳ ಸೆಟ್ ಗಳ ಬದಲಿಗೆ (ಜನರೇಟಿಂಗ್ ಸೆಟ್) ಬಳಸಬೇಕು, ಎಂಬುದನ್ನೂ ಸೂಚಿಸಲಾಗಿದೆ.