ಸಂಪಾದಕೀಯ

18 Nov 2020 11:13:34


1_1  H x W: 0 x
 
ಜಾಗತಿಕ ಸ್ತರದಲ್ಲಿರುವ ಹಿಂಜರಿತ (ರಿಸೆಶನ್), ಕೋವಿಡ್-19 ಈ ರೋಗಾಣುವಿನಿಂದ ತಮ್ಮೆಲ್ಲರ ದೈನಂದಿನ ಜೀವನದಲ್ಲಿ ಪ್ರವೇಶಿಸಿದ ಕತ್ತಲೆಯನ್ನು ದೀಪಾವಳಿಯ ಬೆಳಕು ಖಂಡಿತವಾಗಿಯೂ ದೂರ ಮಾಡಬಲ್ಲದು. ನಮ್ಮ ಎಲ್ಲ ಓದುಗರು, ಜಾಹಿರಾತುದಾರರು, ಲೇಖಕರು ಮತ್ತು ಎಲ್ಲ ಹಿತೈಷಿಗಳಿಗೆ ದೀಪಾವಳಿಯ ಶುಭಾಶಯಗಳು. ಹಾಗೆಯೇ ‘ಲೋಹಕಾರ್ಯ’ ಮಾಸ ಪತ್ರಿಕೆಯು ಮೂರನೇ ವರ್ಷದಲ್ಲಿ ಕಾಲೂರುತ್ತಿದೆ. ಈ ತನಕ ತಾವು ನೀಡಿರುವ ಸಹಕಾರದಿಂದಾಗಿ ಮತ್ತು ಬೆಂಬಲದಿಂದಲೇ ‘ಲೋಹಕಾರ್ಯ’ದ ಪ್ರವಾಸವು ಸುಲಲಿತವಾಗಿ ನಡೆಯುತ್ತಿದೆ. ನಮ್ಮಲ್ಲಿ ತೋರಿಸಿರುವ ವಿಶ್ವಾಸವು ಇನ್ನಷ್ಟು ವೃದ್ಧಿಸಬಲ್ಲದು, ಎಂಬ ವಿಶ್ವಾಸವು ನಮಗಿದೆ.
 
ಲಾಕ್ ಡೌನ್ ನಂತರ ಜಗತ್ತಿನೆಲ್ಲೆಡೆ ಕಂಪನಿಗಳ ವ್ಯವಹಾರದ ಕೆಲಸಗಳಿಗೋಸ್ಕರ ಪ್ರತ್ಯಕ್ಷವಾಗಿ ಮಾನವನ ಹಸ್ತಕ್ಷೇಪಕ್ಕೆ ಅನೇಕ ರೀತಿಯ ಶರತ್ತುಗಳು ಅನ್ವಯಿಸುತ್ತಿರುವುದರಿಂದ ಎಲ್ಲೆಡೆಯಲ್ಲಿಯೂ ಡಿಜಿಟಲ್ ಪ್ಲೇಟ್ ಫಾರ್ಮ್ ನ ಬಳಕೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ತಮ್ಮ ಕಾರ್ಖಾನೆಗಳಲ್ಲಿ ಮಾಡಲಾಗುವ ಪ್ರಕ್ರಿಯೆಗಳ ಡಿಜಿಟಲೈಸೆಶನ್ ಮಾಡುವಲ್ಲಿ ಉದ್ಯಮಿಗಳಿಗೆ ತಮ್ಮ ವ್ಯವಹಾರದ ಪದ್ಧತಿಯನ್ನು ಮತ್ತೆ ಕಾರ್ಯಗತಗೊಳಿಸಲು ಅನಿವಾರ್ಯವಾಯಿತು. ಇದಕ್ಕೋಸ್ಕರ ಯಾವ ಯಾವ ದಾರಿಗಳಿವೆ ಆದ್ಯತೆ ನೀಡಬೇಕು, ಇತ್ಯಾದಿ ಅಂಶಗಳಿಗೆ ಪ್ರಯತ್ನಿಸಲಾಗುತ್ತಿದೆ. ವೆಬ್ ಹೋಸ್ಟಿಂಗ್ ನಲ್ಲಿ ಕೆಲಸ ಮಾಡುವವರ ಎನ್ ಡ್ಯುರನ್ಸ್ ಇಂಟರ್ ನ್ಯಾಶನಲ್ ಗ್ರೂಪ್ ಎಂಬ IT ಸರ್ವಿಸೆಸ್ ಕಂಪನಿಯು ಮಾಡಿರುವ ಸಮೀಕ್ಷೆಯ ಪ್ರಕಾರ ಲಾಕ್ ಡೌನ್ ಸಮಯದಲ್ಲಿ ಶೇಕಡಾ 30 MSME ಗಳು ವೆಬ್ ಸೈಟ್ ಅಥವಾ ಇ-ಕಾಮರ್ಸ್ ಗೆ ಪ್ರಾಧಾನ್ಯತೆಯನ್ನು ನೀಡಿದರು. ಹಾಗೆಯೇ ಶೇಕಡಾ 50 ಕ್ಕಿಂತ ಹೆಚ್ಚು MSME ಗಳು ವಿಡಿಯೋ ಕಾನ್ಫರನ್ಸಿಂಗ್ ನ ವ್ಯವಸ್ಥೆ ಮತ್ತು ವಾಟ್ಸ್ ಅಪ್ ಮೂಲಕ ವ್ಯವಹಾರದಲ್ಲಿ ನಿರಂತರೆಯನ್ನು ಕಾಪಾಡುವಲ್ಲಿ ಆದ್ಯತೆಯನ್ನು ನೀಡಿದ್ದಾರೆ. ಅನ್ ಲಾಕ್ ನಂತರ ಉದ್ಯಮ ಕ್ಷೇತ್ರವು ಮತ್ತೆ ನಿರಂತರವಾದ ಉತ್ಪಾದನೆಯನ್ನು ಮಾಡಲು ಹೊಸ ಬದಲಾವಣೆಗಳೊಂದಿಗೆ ಸಿದ್ಧರಾಗಿರುವ ಅಂಶವು ಅನೇಕ ಉದ್ಯಮಿಗಳೊಂದಿಗೆ ಮಾಡಿರುವ ಸಂಭಾಷಣೆಯಿಂದ ಗಮನಕ್ಕೆ ಬಂತು. ಟೆಕ್ನಿಕಲ್ ಅಪ್ ಗ್ರೇಡೆಶನ್ ಇದು ಬಹುತೇಕ ಉದ್ಯಮಿಗಳ ಕೆಲಸದಲ್ಲಿ ಪ್ರಾಧಾನ್ಯತೆಯ ಪಟ್ಟಿಯಲ್ಲಿ ಅಳವಡಿಸಲಾಗಿತ್ತು.
 
ಟೆಕ್ನಿಕಲ್ ಅಪ್ ಗ್ರೇಡೆಶನ್ ಗೋಸ್ಕರ ಸೂಕ್ತವಾದ ವೇಳೆಯಲ್ಲಿ ಮಾರ್ಗದರ್ಶನವು ಲಭಿಸುವುದೂ ಒಂದು ಮಹತ್ವದ ಅಂಶವಾಗಿದೆ, ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತ ಸರ್ಕಾರವೂ ideas.msme.gov.in ಇದು MSME ಐಡಿಯಾಸ್ ಪೋರ್ಟಲ್ ಪ್ರಾರಂಭಿಸಿದೆ. ಉದ್ಯಮಗಳಿಗಿರುವ ಅನೇಕ ಬ್ಯಾಂಕ್ ಗಳ ಯೋಜನೆಗಳು, ಕಲ್ಪನೆಗಳು, ಇನೋವೇಶನ್ ಮತ್ತು ಸಂಶೋಧನೆ ಇತ್ಯಾದಿ ಅಂಶಗಳ ಕುರಿತು ಮಾಹಿತಿಯನ್ನು ಯಾವುದೇ ವ್ಯಕ್ತಿಯು ಅವನ ಹೆಸರಲ್ಲಿಯೇ ಅಪ್ ಲೋಡ್ ಮಾಡಬಲ್ಲನು. ಹಾಗೆಯೇ ಈ ಪೋರ್ಟಲ್ ವೆಂಚರ್ ಕ್ಯಾಪಿಟಲ್ ಮತ್ತು ವಿದೇಶದ ಸಹಭಾಗಿತ್ವಕ್ಕೋಸ್ಕರ (ಕೊಲ್ಯಾಬರೇಶನ್) ಸಹಕರಿಸುತ್ತದೆ.
 
MSME ಕ್ಷೇತ್ರವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವಲ್ಲಿ ಸ್ಟಾರ್ಟ್ ಅಪ್ ನ ಪಾತ್ರವು ಮಹತ್ವದ್ದಾಗಿದೆ. ತಂತ್ರಜ್ಞಾನದಲ್ಲಿ ಕೌಶಲ್ಯವನ್ನು ಹೊಂದಿರುವ ಸ್ಟಾರ್ಟ್ ಅಪ್ ಗಳು ಮಾರುಕಟ್ಟೆಯ ಲೆಕ್ಕಾಚಾರವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ. ಸ್ಟಾರ್ಟ್ ಅಪ್ ಮತ್ತು MSME ಇವುಗಳ ಸಹಭಾಗಿತ್ವವು ಗೇಮ್-ಚೇಂಜರ್ ಎಂಬುದಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ನೋಡಲಾಗುತ್ತದೆ. ಲಘು, ಮಧ್ಯಮ ಕಾರ್ಖಾನೆಗಳಲ್ಲಿ ಪ್ರತಿಯೊಂದು ಹಂತದಲ್ಲಿ ಇನೊವೇಶನ್ ಸೇರ್ಪಡಿಸುವ ಆವಶ್ಯಕತೆಯು ಗಮನಾರ್ಹವಾಗಿ ಕಂಡುಬರುತ್ತಿದೆ.
 
ಹೆಚ್ಚಿನ ವಿದೇಶದ ಕಂಪನಿಗಳು ಭಾರತದಲ್ಲಿ ಅವರವರ ಕಾರ್ಖಾನೆಗಳನ್ನು ಪ್ರಾರಂಭಿಸುವ ಕುರಿತು ವಿಚಾರ ಮಾಡುತ್ತಿದ್ದಾರೆ. ಇದರಿಂದಾಗಿ ಭಾರತದ MSME ಗಳಿಗೆ ಆಂತರರಾಷ್ಟ್ರೀಯ ಸ್ತರದಲ್ಲಿ ಸ್ಪರ್ಧಾತ್ಮಕ, ಉಚ್ಚಮಟ್ಟದ ಕೆಲಸ ರೀತಿ ಮತ್ತು ಉತ್ಪಾದನೆಗಳ ತಯಾರಿಕೆಯ ಅಗತ್ಯವು ಕಂಡುಬರುತ್ತದೆ. ಕೌಶಲ್ಯ ವಿಕಾಸವನ್ನು ಸಾಧಿಸುವಲ್ಲಿ ಮತ್ತು ವಿದೇಶದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಇನೊವೇಶನ್ ಗಳಿಗೆ ಉತ್ತೇಜನವು ಲಭಿಸಬೇಕು. ಜಾಗತಿಕ ಸ್ತರದಲ್ಲಿ ಸ್ಪರ್ಧಾತ್ಮಕವಾಗಲು ಸೂಕ್ತ ಸಮಯವು ಈ ಎಂದಿಗೂ ಬಂದಿರಲಿಲ್ಲ. ಸ್ಪರ್ಧಾತ್ಮಕ ಮತ್ತು ಎಲ್ಲರಿಂದಲೂ ಮನ್ನಣೆಯನ್ನು ಪಡೆದಿರುವ ಉತ್ಪಾದನೆಗಳನ್ನು ತಯಾರಿಸುವುದು ಈ ನಿಟ್ಟಿನಲ್ಲಿ MSME ಉದ್ಯಮಿಗಳು ಜಾಗತಿಕ ಮಾರುಕಟ್ಟೆಯೊಂದಿಗೆ ಜೋಡಿಸಲ್ಪಡಬೇಕು, ಎಂಬುದಕ್ಕೋಸ್ಕರ ಆವಶ್ಯಕವಾದ ಜ್ಞಾನ ಮತ್ತು ಮಾಹಿತಿಯನ್ನು ನೀಡುವಲ್ಲಿ ನಾವು ನಿರಂತರವಾಗಿ ಪ್ರಯತ್ನ ಮಾಡುತ್ತಿರುತ್ತೇವೆ. ‘ಲೋಹಕಾರ್ಯ’ದ ಸುಪರ್ ಫಿನಿಶಿಂಗ್ ಕುರಿತಾದ ಈ ವಿಶೇಷ ಸಂಚಿಕೆಯಲ್ಲಿ ‘ಹೊಸ ಉತ್ಪಾದನೆ’ ಎಂಬ ಅಂಕಣದಲ್ಲಿ ಸರ್ಫೇಸ್ ಫಿನಿಶ್ ನಲ್ಲಿ ಸುಧಾರಣೆಗಳ ಕುರಿತು CMTI ಯು ಅಭ್ಯಾಸಪೂರ್ಣವಾದ ವಿಚಾರ ಮಾಡಿ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನ ಮತ್ತು AFFM-150D ಈ ಮಶಿನ್ ನ ಕುರಿತು ಉದಾಹರಣೆಗಳೊಂದಿಗೆ ವಿವರಗಳನ್ನು ಓದಬಹುದು. ‘ಹೊಸ ತಂತ್ರಜ್ಞಾನ’ ಈ ಅಂಕಣದಲ್ಲಿ 3D ಉತ್ಪಾದನೆಯನ್ನು ಬಳಸಿ ಕ್ಲಿಷ್ಟ ಜಾಮೆಟ್ರಿಯ ಕಟಿಂಗ್ ಟೂಲ್ ತಯಾರಿಸುವ ಕುರಿತು ಮೂಲಭೂತ ಪ್ರಕ್ರಿಯೆ ಹೆಚ್ಚು ಸೂಕ್ತವಾಗಿ ಮಾಡುವಂತಹ ವಾಟರ್ ಜೆಟ್ ಕಟಿಂಗ್ ಎಂಬ ತಂತ್ರಜ್ಞ ಮಾಹಿತಿಯೊಂದಿಗೆ ಸುಪರ್ ಫಿನಿಶಿಂಗ್ ಗೋಸ್ಕರ ಬಳಸಲಾಗುವ ಪ್ಲೆಟೂ ಹೋನಿಂಗ್ ಈ ಯಂತ್ರಣೆಯ ಪ್ರಕ್ರಿಯೆ ವಿಸ್ತೃತ ಮಾಹಿತಿಯನ್ನು ನೀಡಲಾಗಿದೆ. ಟೂಲಿಂಗ್ ಈ ಅಂಕಣದಲ್ಲಿ ಸರ್ಫೇಸ್ ಫಿನಿಶಿಂಗ್ ತಂತ್ರದಲ್ಲಿ ರೋಲರ್ ಬರ್ನಿಶಿಂಗ್ ಪ್ರಕ್ರಿಯೆಯ ಲಾಭಗಳ ಕುರಿತು ಆಳವಾದ ಮಾಹಿತಿ ಅಡಗಿರುವ ಲೇಖನವು ಓದುಗರಿಗೆ ತುಂಬಾ ಉಪಯುಕ್ತವಾಗಲಿದೆ. ಉದ್ಯಮ ಪ್ರಕಾಶನದ ಕುಟುಂಬದೊಂದಿಗೆ ಜೋಡಿಸಲ್ಪಟ್ಟ ಪ್ರತಿಯೊಬ್ಬರಿಗೆ ನಾವು ಸಪ್ಟೆಂಬರ್ ತಿಂಗಳಿನಿಂದ ‘ಯಂತ್ರಗಪ್ಪಾ’ (ಯಾಂತ್ರಿಕ ವಿಚಾರ ಸಂಕೀರಣ) ಎಂಬ ವೆಬಿನಾರ್ ಪ್ರಾರಂಭಿಸಿದ್ದೇವೆ. ಸಪ್ಟೆಂಬರ್ ತಿಂಗಳಲ್ಲಿ ಏರ್ಪಡಿಸಲಾದ ವೆಬಿನಾರ್ ನ ಸಂವಾದದ ಸ್ಪರೂಪದಲ್ಲಿರುವ ಲೇಖನವನ್ನು ಓದುಗರಿಗೆ ನೀಡುತ್ತಿದ್ದೇವೆ. ಇದರ ಹೊರತಾಗಿ ಜಿಗ್ಸ್ ಮತ್ತು ಫಿಕ್ಸ್ಚರ್ಸ್, ಸಿ.ಎನ್.ಸಿ. ಪ್ರೊಗ್ರಾಮಿಂಗ್, ಟೂಲಿಂಗ್ ನ ಸುಧಾರಣೆ, ಆರ್ಥಿಕ ಯೋಜನೆ ಇತ್ಯಾದಿ ಲೇಖಮಾಲೆಗಳೂ ತಮ್ಮ ದೈನಂದಿನ ಕೆಲಸದಲ್ಲಿ ತುಂಬಾ ಉಪಯುಕ್ತವಾಗಲಿವೆ.
ದೀಪಕ ದೇವಧರ
deepak.deodhar@udyamprakashan.in
Powered By Sangraha 9.0