ಇತ್ತೀಚಿನ ದಿನಗಳಲ್ಲಿ ಎರಡನೇ ಅಥವಾ ಮೂರನೇ ಸ್ತರದಲ್ಲಿರುವ ಕಾರ್ಖಾನೆಗಳು ಒಂದೇ ವಿಧದ ಯಂತ್ರಭಾಗಗಳ ಯಂತ್ರಣೆಯಲ್ಲಿ ಅವಲಂಬಿಸಿರುವುದಿಲ್ಲ. ಈ ಕಾರ್ಖಾನೆಗಳಲ್ಲಿ ನಿರಂತರವಾಗಿ ಒಂದಲ್ಲ ಒಂದು ಕೆಲಸ ನಡೆಯುತ್ತಿರುವುದು ಆವಶ್ಯಕವಾಗಿದೆ. ಆದುದರಿಂದ ಅವರಲ್ಲಿರುವ ಮಶಿನ್ ಗಳು ನಿರಂತರವಾಗಿ ಕೆಲಸ ನಿರ್ವಹಿಸುತ್ತಿರಬೇಕಾಗುತ್ತದೆ. ತಮ್ಮಲ್ಲಿ ಉಪಲಬ್ಧವಿರುವ ಮಶಿನ್ ಗಳಲ್ಲಿ ಅನೇಕ ವಿಧದ ಯಂತ್ರಭಾಗಗಳನ್ನು ತಯಾರಿಸಲಾಗುತ್ತಿರುವುದರಿಂದ ಮತ್ತು ಅವರಿಗೆ ಬೇರೆಬೇರೆ ಕೈಗಾರಿಕೋದ್ಯಮಗಳೊಂದಿಗೆ ಕೆಲಸ ಮಾಡುವ ಅವಕಾಶವು ಸಿಗುತ್ತಿರುವುದರಿಂದ ಅವರಿಗೆ ನಿರಂತರವಾಗಿ ಕೆಲಸ ನಿರ್ವಹಿಸುವುದು ಸಾಧ್ಯವಾಗಿದೆ. ಜಾಬ್ ವರ್ಕ್ ರೀತಿಯಲ್ಲಿ ಯಂತ್ರಣೆಯನ್ನು ಮಾಡಿಕೊಡುವ ಕಾರ್ಖಾನೆಗಳಿಗೆ ವಾಹನೋದ್ಯೋಗ, ವಾಲ್ವ್ ಗಳ ತಯಾರಿಕೆ, ತೈಲ ಕ್ಷೇತ್ರಕ್ಕೆ ಸಂಬಂಧಪಟ್ಟ ಉದ್ಯಮ, ಏರೋಸ್ಪೇಸ್, ಟರ್ಬೈನ್, ವಿದ್ಯುತ್ ಶಕ್ತಿಯ ನಿರ್ಮಾಣ ಕ್ಷೇತ್ರ, ಸಾಮಾನ್ಯ ಇಂಜಿನಿಯರಿಂಗ್ ನ ಯಂತ್ರಭಾಗಗಳು, ಮಶಿನ್ ಟೂಲ್ ಇತ್ಯಾದಿ ಕೈಗಾರಿಕೋದ್ಯಮಗಳ ಕ್ಷೇತ್ರದಲ್ಲಿ ಯಂತ್ರಭಾಗಗಳನ್ನು ತಯಾರಿಸುವ ಕೆಲಸಗಳು ಸಿಗುತ್ತಿರುತ್ತವೆ. ಯಾವುದೇ ಒಂದು ಉದ್ಯಮ ಕ್ಷೇತ್ರದಲ್ಲಿ ರಿಸೆಶನ್ (ಹಿಂಜರಿತ) ಇದ್ದಲ್ಲಿ ಅವರ ಮಶಿನ್ ಗಳು ಮೇಲೆ ಉಲ್ಲೇಖಿಸಿರುವ ಇನ್ನಿತರ ಕ್ಷೇತ್ರಗಳಿಗೆ ಬೇಕಾಗಿರುವ ಯಂತ್ರಭಾಗಗಳನ್ನು ತಯಾರಿಸುವಲ್ಲಿ ಕಾರ್ಯನಿರತರಾಗಿರುತ್ತಾರೆ. ಇದರಿಂದಾಗಿ ಕೈಗಾರಿಕೋದ್ಯಮಿಗಳ ಉತ್ಪಾದನೆಯ ಸಾಮರ್ಥ್ಯದ ಒಳ್ಳೆಯ ಮತ್ತು ಸಾಕಷ್ಟು ಉಪಯೋಗವಾಗುತ್ತದೆ ಮತ್ತು ಆ ಉದ್ಯಮಗಳ ಉದ್ಯೋಗಗಳು ಯಾವುದೇ ಒಂದು ಉದ್ಯಮದ ಕ್ಷೇತ್ರದಿಂದ ಕಡಿಮೆ ಬೇಡಿಕೆ ಇದ್ದರೂ ಕೂಡಾ ನಿಲ್ಲುವುದಿಲ್ಲ.
ನಮ್ಮ ಒಬ್ಬ ಗ್ರಾಹಕರಾದ ಕಾರ್ಖಾನೆಯವರು, ವಾಹನ ಉದ್ಯಮ, ವಾಲ್ವ್, ಏರೋಸ್ಪೇಸ್, ತೈಲ ಮತ್ತು ಗ್ಯಾಸ್ ಉದ್ಯಮ ಕ್ಷೇತ್ರಕ್ಕೆ ಬೇಕಾಗುವಂತಹ ಯಂತ್ರಭಾಗಗಳನ್ನು ಮತ್ತು ಕೃಷಿ ಕ್ಷೇತ್ರದಲ್ಲಿ ಬಳಸಲಾಗುವ ಪಂಪ್ ಗಳ ಹಲವಾರು ಭಾಗಗಳನ್ನು ತಯಾರಿಸುತ್ತಾರೆ. ನಾವು ತುಂಬಾ ಕಾಲಾವಧಿಯಿಂದಲೂ ಈ ಗ್ರಾಹಕರಿಗೆ ವಿವಿಧ ಉಪಾಯಗಳನ್ನು ಸೂಚಿಸಿದೆವು, ತಾಂತ್ರಿಕತೆಗೆ ಸಂಬಂಧಪಟ್ಟ ಸಲಹೆಯನ್ನು ನೀಡಿ ಸಹಾಯ ಮಾಡುತ್ತಿದ್ದೆವು. ಒಂದು ಫ್ರೇಮ್ ನ (ಚಿತ್ರ ಕ್ರ. 1) ಯಂತ್ರಣೆಯನ್ನು ಮಾಡುವಾಗ ಅವರಿಗೆ ಹೆಚ್ಚು ಸೈಕಲ್ ಟೈಮ್, ಟೂಲ್ ಕಡಿಮೆ ಬಾಳಿಕೆ ಮತ್ತು ಸರ್ಫೇಸ್ ಫಿನಿಶ್ ನ ಗುಣಮಟ್ಟ ಇಂತಹ ಸಮಸ್ಯೆಗಳು ಎದುರಾಗುತ್ತಿದ್ದವು. ಈ ಸಮಸ್ಯೆಗಳನ್ನು ಪರಿಹರಿಸಲು ಅವರು ನಮಗೆ ಕರೆ ನೀಡಿದರು.
ಈ ಗ್ರಾಹಕರಲ್ಲಿ ಅಲಾಯ್ ಸ್ಟೀಲ್, ಕಾಸ್ಟ್ ಆಯರ್ನ್ ಕಠಿಣವಾಗಿರುವ ಅನೇಕ ಮಟೀರಿಯಲ್ ಗಳಿಂದ ತಯಾರಿಸಿರುವ ಯಂತ್ರಭಾಗಳಿಗೆ ಯಂತ್ರಣೆ ಮಾಡಲು ಬರುತ್ತಿದ್ದವು. ಇದರಿಂದಾಗಿ ಗ್ರಾಹಕರ ಮಟೀರಿಯಲ್ ಗಳಿಗೆ ಅನುಸಾರವಾಗಿ ಅನೇಕ ವಿಧದ ಕಟರ್ ಬಾಡಿ ಮತ್ತು ಪ್ರತಿಯೊಂದು ಸಲ ಇನ್ಸರ್ಟ್ ಬದಲಾಯಿಸುವುದನ್ನು ನಿಲ್ಲಿಸಬೇಕಿತ್ತು. ಮೇಲಿನ ಭಿನ್ನ ರೀತಿಯ ಮಟೀರಿಯಲ್ ನ ಯಂತ್ರಣೆಯನ್ನು ಮಾಡಲು ಅವರಿಗೆ ಬೇರೆಯೇ ಆದ ಗ್ರೇಡ್ ನೊಂದಿಗೆ ಒಂದು ಸಾಮಾನ್ಯವಾದ ಇನ್ಸರ್ಟ್ ನ ಆವಶ್ಯಕತೆ ಇತ್ತು. ನಾವು ಅವರಿಗೆ ಸೂಚಿಸಿರುವ ಉಪಾಯಗಳಲ್ಲಿ ಭಿನ್ನ ರೀತಿಯ ಮಟೀರಿಯಲ್ ಗಳಿಗೆ ಬಳಸಲಾಗುವಂತಹ ವಿವಿಧ ಗ್ರೇಡ್ ಗಳ ಇನ್ಸರ್ಟ್ ಗಳನ್ನು ಸಮಾನವಾದ ಕೇರಿಯರ್ ಬಾಡಿಯಲ್ಲಿ ಅಳವಡಿಸಲ್ಪಡುವ ಕಟರ್ ಆಗಿತ್ತು. (ಚಿತ್ರ ಕ್ರ. 2).
ಇತ್ತೀಚೆಗೆ ಬಳಕೆಯಲ್ಲಿರುವ ಸೆಟಪ್ ನಲ್ಲಿ ನಾಲ್ಕು ಮೂಲೆಗಳಿರುವ ಒಂದು ಸಿಂಗಲ್ ಎಡ್ಜ್ ಪಾಜಿಟಿವ್ ಇನ್ಸರ್ಟ್ ನೊಂದಿಗೆ ಟೂಲ್ ಬಳಸಲಾಗಿದೆ. ಯಂತ್ರಭಾಗಗಳ ಮಟೀರಿಯಲ್ ಕಾಸ್ಟ್ ಸ್ಟೀಲಿದ್ದಾಗಿದೆ. ಸರ್ಫೇಸ್ ನ ಯಂತ್ರಣೆಗೋಸ್ಕರ ಬಳಸಲಾಗಿರುವ ಪಾಸ್ ಗಳ ಸಂಖ್ಯೆಯು ಹೆಚ್ಚಾಗಿದೆ ಮತ್ತು ಟಫ್ ಗ್ರೇಡ್ ಇನ್ಸರ್ಟ್ ಬಳಸಲಾಗಿದೆ. ಪ್ರತಿಯೊಂದು ಪಾಸ್ ನಲ್ಲಿ ಕಡಿಮೆ ಫೀಡ್ ರೇಟ್ ನೊಂದಿಗೆ ತುಂಡುಗಳ ಆಳ ಕಡಿಮೆ ಇರುವುದರಿಂದ ಕಟಿಂಗ್ ಎಡ್ಜ್ ಗಳ ಸವೆತ ಹೆಚ್ಚು ಮತ್ತು ಟೂಲ್ ಗಳ ಬಾಳಿಕೆ ಕಡಿಮೆಯಾಗಿದೆ. ಇತ್ತೀಚಿನ ಕೆಲಸದ ರೀತಿಯನ್ನು ಈ ಮುಂದೆ ನೀಡಲಾಗಿದೆ.
ಯಂತ್ರಭಾಗಗಳ ಆಕಾರವು ದೊಡ್ಡದಾಗಿದ್ದು ಯಂತ್ರಣೆಗೋಸ್ಕರ ಅದರಲ್ಲಿರುವ ಸ್ಟಾಕ್ ಕೂಡಾ ಹೆಚ್ಚಿದೆ. (ಸುಮಾರು 8 ಮಿ.ಮೀ.).
• ಯಂತ್ರಭಾಗಗಳು : ಫ್ರೇಮ್
• ಮಟೀರಿಯಲ್ : ಕಾಸ್ಟ್ ಸ್ಟೀಲ್
• ಆಪರೇಶನ್ : ಫೇಸ್ ಮಿಲ್ಲಿಂಗ್
• ಮಶಿನ್ : ವಿ.ಎಮ್.ಸಿ., BT40 ಟೇಪರ್
• ಸ್ಪಿಂಡಲ್ ಫೋರ್ಸ್ : 12Kw
• ಮಶಿನ್ ನ ಗರಿಷ್ಠ ಆರ್.ಪಿ.ಎಮ್. : 6000
ಇತ್ತೀಚಿನ ರೀತಿಯಲ್ಲಿರುವ ಸಮಸ್ಯೆಗಳು
• ಟೂಲ್ ಗಳ ಬಾಳಿಕೆ ಕಡಿಮೆ
• ಸರ್ಫೇಸ್ ಫಿನಿಶ್ ನಲ್ಲಿ ಇನ್ನಷ್ಟು ಸುಧಾರಣೆಯ ಅಗತ್ಯ
• ಎಡ್ಜ್ ಗಳಲ್ಲಿರುವ ಬರ್
ನಾವು ಇತ್ತೀಚೆಗೆ ಯಂತ್ರಣೆಯಲ್ಲಿರುವ ಪ್ರಕ್ರಿಯೆಯ ಅಭ್ಯಾಸ ಮಾಡಿದೆವು ಮತ್ತು ವಿಮರ್ಶಿಸಿದೆವು. ನಮ್ಮ ಇನ್ಸರ್ಟ್ ನಲ್ಲಿ ವಾಯಪಿಂಗ್ ಎಡ್ಜ್ ದೊಡ್ಡದಾಗಿದ್ದರಿಂದ ಯಂತ್ರಭಾಗಗಳ ಎಡ್ಜ್ ಗಳಲ್ಲಿ ಬರ್ ಕಡಿಮೆ ಪ್ರಮಾಣದಲ್ಲಿ ತಯಾರಾಗುತ್ತದೆ. ಇದರಿಂದಾಗಿ ನಾವು ಆ ಇನ್ಸರ್ಟ್ ಬಳಸುವ ವಿಚಾರ ಪ್ರಸ್ತಾಪಿಸಿದೆವು. ಪಾಸ್ ಗಳ ಸಂಖ್ಯೆ ಹೆಚ್ಚಾಗಿರುವುದನ್ನು ನಾವು ಗಮನಿಸಿದ್ದೆವು. ಇದರಿಂದಾಗಿ ತುಂಡುಗಳ ಆಳ ಮತ್ತು ಫೀಡ್ ರೇಟ್ ಹೆಚ್ಚಿಸುವುದು ಸಾಧ್ಯವಾಯಿತು. ಕಾರಣ ತುಂಡುಗಳ ಆಳ ಹೆಚ್ಚಾಗಿದ್ದರೂ ಕೂಡಾ ಈ ಇನ್ಸರ್ಟ್ ನಲ್ಲಿ ಅದರಿಂದ ತಯಾರಾಗುವ ಕಟಿಂಗ್ ಫೋರ್ಸ್ ಸಹಿಸುವ ಸಾಮರ್ಥ್ಯವಿತ್ತು. ಅದರಲ್ಲಿರುವ ವಿಶೇಷವಾದ ಜಾಮೆಟ್ರಿಯಿಂದಾಗಿ ಉಚ್ಚಮಟ್ಟದ ವಿಜ್ಯುವಲ್ ಫಿನಿಶ್ ಲಭಿಸಿತು. ನಮ್ಮ ಉತ್ಪಾದನೆಗಳ ವೈಶಿಷ್ಟ್ಯಗಳನ್ನು ಈ ಮುಂದೆ ವಿವರವಾಗಿ ನೀಡಲಾಗಿದೆ ಮತ್ತು ಸುಧಾರಿತ ಕೆಲಸದ ರೀತಿಯ ವಿವರಗಳನ್ನು ಕೋಷ್ಟಕ ಕ್ರ. 1 ರಲ್ಲಿ ನೀಡಲಾಗಿದೆ.
ಹೊಸ ರೀತಿ
ನಾವು ತುಂಡಿನ ಆಳ 0.8 ರಿಂದ 2.0 ಮಿ.ಮೀ.ಗಳಷ್ಟು ಹೆಚ್ಚಿಸಿದೆವು ಮತ್ತು ಪಾಸ್ ಗಳ ಸಂಖ್ಯೆಯನ್ನು 10 ರಿಂದ 4 ರಷ್ಟು ಕಡಿಮೆ ಮಾಡಿದೆವು. ಫೀಡ್ ರೇಟ್ ಪ್ರತಿ ಹಲ್ಲು 0.08 ರಿಂದ 0.12 ಮಿ.ಮೀ.ನಷ್ಟು ಹೆಚ್ಚಿಸಿದೆವು. ಇನ್ಸರ್ಟ್ ನ ವಾಯಪಿಂಗ್ ಎಡ್ಜ್ ನ ಉದ್ದವು ಹೆಚ್ಚು ಇದ್ದರಿಂದ ಹೆಚ್ಚು ತುಂಡುಗಳ ಆಳ ಮತ್ತು ಫೀಡ್ ರೇಟ್ ಇದ್ದರೂ ಕೂಡಾ ಬರ್ ಕಡಿಮೆ ಪ್ರಮಾಣದಲ್ಲಿ ತಯಾರಾಗುವುದೇ ಇದರ ಲಾಭವಾಗಿದೆ.
ವೈಶಿಷ್ಟ್ಯಗಳು
• ಪಾಜಿಟಿವ್ ಹೆಲಿಕಲ್ ಕಟಿಂಗ್ ಎಡ್ಜ್ ನೊಂದಿಗೆ ಚೌಕಟ್ಟಾದ ಇನ್ಸರ್ಟ್
• ಕಡಿಮೆ ಸ್ಪಿಂಡಲ್ ಫೋರ್ಸ್ ಇರುವ ಮಶಿನ್ ಗೋಸ್ಕರ ಪರಿಣಾಮಕಾರಿಯಾದ 4 ಕಟಿಂಗ್ ಎಡ್ಜ್ ಗಳ 90 ಅಂಶದಲ್ಲಿ ಫೇಸ್ ಮಿಲ್ಲಿಂಗ್
• ವಿಶಿಷ್ಟವಾದ ಜಾಮೆಟ್ರಿ ಮತ್ತು ಅಗಲವಾಗಿರುವ ವಾಯ್ ಪಿಂಗ್ ಎಡ್ಜ್
• ಉನ್ನತ ದೃಢತೆಯನ್ನು ಪಡೆಯಲು ದೊಡ್ಡ ಸ್ಕ್ರೂ ಹೋಲ್ ಮತ್ತು ಇನ್ಸರ್ಟ್ ನ ಕೋನೀಯ ಕ್ಲ್ಯಾಂಪಿಂಗ್
• ಉಚ್ಚಮಟ್ಟದ ಫೀಡ್ ರೇಟ್ ನಿಂದಾಗಿ ಯಂತ್ರಣೆಯನ್ನು ಮಾಡುವ ಸಾಮರ್ಥ್ಯ
• ಅಗಲವಿರುವ ವಾಯ್ ಪಿಂಗ್ ಎಡ್ಜ್ ಗಳಿರುವುದರಿಂದ ಉಚ್ಚಮಟ್ಟದ ಫೀಡ್ ರೇಟ್ ಇರುವಾಗಲೂ ಉಚ್ಚಮಟ್ಟದ ಸರ್ಫೇಸ್ ಪಿನಿಶ್ ಲಭಿಸುತ್ತದೆ.
• ಕಟಿಂಗ್ ಎಡ್ಜ್ ಗಳ ವಿಶಿಷ್ಟ ಜಾಮೆಟ್ರಿಯಿಂದಾಗಿ ಚಿಪ್ ಒಯ್ಯುವ ಕೆಲಸವು ಒಳ್ಳೆಯದಾಗುತ್ತದೆ ಮತ್ತು ಕಟಿಂಗ್ ಫೋರ್ಸ್ ಕಡಿಮೆ ಬೇಕಾಗುತ್ತದೆ.
• ಬಿಡಿ ಭಾಗಗಳ ಆವಶ್ಯಕತೆಯು ಕಡಿಮೆ, ಇದರಿಂದಾಗಿ ಇನ್ವೆಂಟರಿಯೂ ಕಡಿಮೆ.
• ಸ್ಟೀಲ್, ಸ್ಟೇನ್ ಲೆಸ್ ಸ್ಟೀಲ್, ಅಲ್ಯುಮಿನಿಯಮ್, ಕಾಸ್ಟ್ ಆಯರ್ನ್, ಎಸ್ ಜಿ ಆಯರ್ನ್ ಇಂತಹ ವಿವಿಧ ಕೆಲಸಗಳಿಗೋಸ್ಕರ ಬಳಸಬಹುದಾಗಿದೆ.
ಲಾಭಗಳು
1. ಟೂಲ್ ಗಳ ಆಯುಷ್ಯದಲ್ಲಿ 86% ಗಿಂತಲೂ ಹೆಚ್ಚು ಹೆಚ್ಚಳ.
2. ಪ್ರತಿಯೊಂದು ಯಂತ್ರಭಾಗಗಳ ಖರ್ಚು 45% ಕಡಿಮೆಯಾಯಿತು.
3. ಉತ್ಪಾದನೆಯ ಸಾಮರ್ಥ್ಯವು 100% ಹೆಚ್ಚಾಯಿತು.
4. ಯಂತ್ರಭಾಗಗಳ ಎಡ್ಜ್ ನಲ್ಲಿರುವ ಬರ್ ಕಡಿಮೆಯಾಯಿತು.
5. ಉಚ್ಚಮಟ್ಟದ ಸರ್ಫೇಸ್ ಫಿನಿಶ್ ಲಭಿಸಿತು.
ವಿಜೇಂದ್ರ ಪುರೋಹಿತ್
ಟೂಲಿಂಗ್ ತಜ್ಞರು
9579352519
vijay_purohit@rediffmail.com
ವಿಜೇಂದ್ರ ಪುರೋಹಿತ್ ಇವರು ಟೂಲಿಂಗ್ ತಜ್ಞರಾಗಿದ್ದಾರೆ. ಅವರಿಗೆ ಮಶಿನ್ ಟೂಲ್ ಮತ್ತು ಕಟಿಂಗ್ ಟೂಲ್ ಡಿಸೈನ್ ನಲ್ಲಿ ಸುಮಾರು 20 ವರ್ಷಗಳಿಗಿಂತಲೂ ಹೆಚ್ಚು ಕಾಲಾವಧಿಯ ಅನುಭವವಿದೆ.