ಲಘು, ಮಧ್ಯಮ ಗಾತ್ರದ ಕಾರ್ಖಾನೆಗಳಲ್ಲಿ ತಂತ್ರಜ್ಞರಿಗೆ ಪರಿಪೂರ್ಣವಾದ ಇಂಜಿನಿಯರಿಂಗ್ ಕುರಿತಾದ ಜ್ಞಾನ ಮತ್ತು ವಿವರಗಳನ್ನು ಸಹಜವಾಗಿ ನೀಡಲು ಇಂಜಿನಿಯರಿಂಗ್ ಕುರಿತಾದ ತಾಂತ್ರಿಕ ಪುಸ್ತಕಗಳು ಮತ್ತು ಮಾಸ ಪತ್ರಿಕೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಾಶಿಸುವ ಉದ್ದೇಶವನ್ನು ಕಣ್ಣೆದುರು ಇಟ್ಟುಕೊಂಡು `ಉದ್ಯಮ ಪ್ರಕಾಶನ’ ಈ ಸಂಸ್ಥೆಯು ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಾವು ಜೂನ್ 2017 ರಲ್ಲಿ ಧಾತುಕಾಮ ಎಂಬ ಶೀರ್ಷಿಕೆಯಲ್ಲಿ ಮರಾಠೀ ಭಾಷೆಯಲ್ಲಿ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ನಂತರ ನವಂಬರ್ 2018 ರಿಂದ ಕನ್ನಡದಲ್ಲಿ `ಲೋಹಕಾರ್ಯ’ ಮತ್ತು ಹಿಂದಿಯಲ್ಲಿ `ಧಾತುಕಾರ್ಯ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಲು ಪ್ರಾರಂಭಿಸಲಾಯಿತು.
ಮಾರುಕಟ್ಟೆಯಲ್ಲಿರುವ ಹೊಸ ಹೊಸ ತಂತ್ರಜ್ಞಾನ, ಅದಕ್ಕೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಬದಲಾವಣೆಗಳು, ಹೊಸ ಸಾಮಗ್ರಿ ಮತ್ತು ಉಪಕರಣೆಗಳ ಕುರಿತು ಮಹತ್ವದ ಮಾಹಿತಿಯನ್ನು ಪ್ರಸ್ತುತ ಪಡಿಸುವಲ್ಲಿ ಈ ಮಾಸಪತ್ರಿಕೆಗಳು ಬಹು ದೊಡ್ಡ ಕೊಡುಗೆಯನ್ನು ನೀಡುತ್ತಿವೆ. ಯಾವುದೇ ಮಾಸ ಪತ್ರಿಕೆಯ ಪ್ರಕಟಿಸಲಾಗುವ ಹೊಸ ಹೊಸ ಸಂಚಿಕೆಗಳು ತಮ್ಮೆಲ್ಲರ ಕೈ ಸೇರಿದಾಗ ಅದನ್ನು ಮೊದಲಾಗಿ ಮೇಲಿಂದ ಮೇಲಾದರೂ ಓದುವ ಸಾಮಾನ್ಯವಾದ ರೂಢಿಯು ಎಲ್ಲೆಡೆಯು ಕಾಣುತ್ತಿದೆ. ಇಂತಹ ಮಾಸ ಪತ್ರಿಕೆಗಳಲ್ಲಿ ತಮಗೆ ಇಷ್ಟವಾದ ಅಥವಾ ಯಾವುದೇ ವಿಶಿಷ್ಟವಾದ ವಿಚಾರಗಳ ಕುರಿತು ಸ್ನೇಹಿತರು ಅಥವಾ ಸಹೊದ್ಯೊಗಿಗಳೊಂದಿಗೆ ವಿಚಾರ ವಿಮರ್ಶೆಯನ್ನು ಮಾಡಲಾಗುತ್ತದೆ. ಈ ರೀತಿಯಲ್ಲಿ ಕೈಗಾರಿಕೋದ್ಯಮಗಳಲ್ಲಿಯೂ ಗ್ರಾಹಕರ ತನಕ ತಾಂತ್ರಿಕ ಮಾಹಿತಿಯೂ ತಲುಪುತ್ತದೆ. ಇದರಿಂದಲೇ `ಉದ್ಯಮ ಪ್ರಕಾಶನ’ವು ಪ್ರಾದೇಶಿಕ ಭಾಷೆಗಳಲ್ಲಿ ಪುಸ್ತಕಗಳೊಂದಿಗೆ ಮಾಸ ಪತ್ರಿಕೆಗಳನ್ನೂ ಪ್ರಕಟಿಸುವ ನಿರ್ಧಾರವನ್ನು ಮಾಡಿತು.
ಕನ್ನಡದಲ್ಲಿ ಲೋಹಕಾರ್ಯ, ಮರಾಠಿಯಲ್ಲಿ ಧಾತುಕಾಮ ಮತ್ತು ಹಿಂದಿಯಲ್ಲಿ ಧಾತುಕಾರ್ಯ ಎಂಬ ಮಾಸಪತ್ರಿಕೆಗಳು ಮಾಡರ್ನ್ ಮಶಿನ್ ಶಾಪ್, ಅಮೇರಿಕನ್ ಮಶಿನಿಸ್ಟ್ ಅಥವಾ ಫೆರ್ಟಿಗುಂಗ್ ಇಂತಹ ಯುರೋಪಿಯನ್ ಅಥವಾ ಅಮೇರಿಕನ್ ಮಾಸಪತ್ರಿಕೆಗಳ ಆಂತರರಾಷ್ಟ್ರೀಯ ದರ್ಜೆಗೆ ಸರಿಸಮಾನವಾಗಿವೆ. ಮಶಿನ್ ಟೂಲ್ ಗಳನ್ನು ಬಳಸಿ ಯಂತ್ರಣೆಯನ್ನು ಮಾಡಿರುವ ಭಾಗಗಳ ಉತ್ಪಾದನೆಯನ್ನು ಮಾಡುವ ಎಲ್ಲ ಆಧುನಿಕ ತಂತ್ರಗಳ ಅಪ್-ಟು-ಡೇಟ್ ಮಾಹಿತಿಯನ್ನು ಓದುಗರ ತನಕ ಅವರ ಭಾಷೆಯಲ್ಲಿಯೇ ತಲುಪಿಸುವುದೇ ಈ ಮಾಸ ಪತ್ರಿಕೆಯ ಮುಖ್ಯವಾದ ಗುರಿಯಾಗಿದೆ.
ಮಾಸ ಪತ್ರಿಕೆಯಲ್ಲಿ ಪ್ರಕ್ರಿಯೆಯ ಸುಧಾರಣೆ, ಹೊಸ ಉತ್ಪಾದನೆಗಳು, ಹೊಸ ಪ್ರಕ್ರಿಯೆಗಳು ಮತ್ತು ಕಾರ್ಖಾನೆಗಳಲ್ಲಿ ಮಾಡಲಾಗುವಂತಹ ಸುಧಾರಣೆಗಳ ಕುರಿತು ವಿವರಗಳನ್ನೊಳಗೊಂಡ ಮಾಹಿತಿಯನ್ನೂ ನೀಡಲಾಗುತ್ತಿದೆ. ಈ ಮಾಸ ಪತ್ರಿಕೆಯ ಪ್ರತಿಯೊಂದು ಸಂಚಿಕೆಯಿಂದ ಕೆಲಸಗಾರರಿಗೆ, ಮೇಲ್ವಿಚಾರಕರಿಗೆ ಮತ್ತು ಅಧಿಕಾರಸ್ಥರಿಗೆ ಉಪಯುಕ್ತವಾದ ಮಾಹಿತಿಯನ್ನು ನೀಡುವಲ್ಲಿ ಪ್ರಯತ್ನಿಸಲಾಗುತ್ತಿದೆ.
ಕರ್ನಾಟಕದಲ್ಲಿ ಸುಮಾರು 10,000 ಲಘು ಮಧ್ಯಮ ಕೈಗಾರಿಕೋದ್ಯಮಗಳಲ್ಲಿ ಲೋಹಕಾರ್ಯ ಎಂಬ ಕನ್ನಡ ಮಾಸ ಪತ್ರಿಕೆ, ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆಯಲ್ಲಿ ಧಾತುಕಾಮ ಎಂಬ ಮಾಸ ಪತ್ರಿಕೆ ಸುಮಾರು 16,000, ಅಲ್ಲದೇ ದೆಹಲಿಯೊಂದಿಗೆ ಉತ್ತರ ಭಾರತದಲ್ಲಿ ಹಿಂದಿ ಭಾಷೆಯಲ್ಲಿ ಧಾತುಕಾರ್ಯ ಎಂಬ ಮಾಸ ಪತ್ರಿಕೆಯು ಸುಮಾರು 15,000 ಕೈಗಾರಿಕೋದ್ಯಮಿಗಳ ತನಕ ತಲುಪುತ್ತಿದೆ. ಈ ಮಾಸ ಪತ್ರಿಕೆಗಳು ತುಂಬಾ ಯಶಸ್ವಿಯಾಗಿದ್ದು, ಗಮನಾರ್ಹವಾಗಿ ಗ್ರಾಹಕರಿಂದ ಮೆಚ್ಚುಗೆಯನ್ನು ಪಡೆದಿದ್ದು ಎಲ್ಲರಿಂದಲೂ ಈ ಹೆಜ್ಜೆಯನ್ನು ಸ್ವಾಗತಿಸಲಾಗಿದೆ. ಮುಂಬರುವ ಕೆಲವೇ ತಿಂಗಳುಗಳಲ್ಲಿ ಗುಜರಾತಿ ಮತ್ತು ತಮಿಳು ಭಾಷೆಗಳಲ್ಲಿಯೂ ಇದೇ ರೀತಿಯ ಮಾಸ ಪತ್ರಿಕೆಗಳನ್ನು ಪ್ರಾರಂಭಿಸುವ ಇಚ್ಛೆಯು ನಮ್ಮದಾಗಿದೆ.
ದೇಶದಾದ್ಯಂತ ಸಾವಿರಾರು ಲಘು, ಮಧ್ಯಮ ಕೈಗಾರಿಕೋದ್ಯಮಗಳ ಘಟಕಗಳು ಕಾರ್ಯಗತವಾಗಿವೆ. ಈ ಘಟಕಗಳಲ್ಲಿ ತುಂಬಾ ಹೆಚ್ಚು ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಉಂಟಾಗುತ್ತಿದ್ದರೂ ಕೂಡಾ ಕಾರ್ಖಾನೆಗಳಲ್ಲಿ ಹೆಚ್ಚಿನ ಕೆಲಸಗಾರರು ಮತ್ತು ಆಪರೇಟರ್ ಇವರಿಗೆ ಆಂಗ್ಲ ಭಾಷೆಯ ತಿಳುವಳಿಕೆಯು ತುಂಬಾ ಕಡಿಮೆ ಇರುವುದು ಗಮನಿಸುವಂತಹ ಅಂಶವಾಗಿದೆ. ಕೆಲಸಗಾರರ ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸಲು ಅವರಿಗೆ ತಾಂತ್ರಿಕ ತರಬೇತಿಯನ್ನು ನೀಡುವುದಾದಲ್ಲಿ ಪ್ರಾದೇಶಿಕ ಭಾಷೆಗಳ ಹೊರತಾಗಿ ಬೇರೆ ಯಾವುದೇ ದಾರಿ ಇಲ್ಲ. ಅದ್ದರಿಂದಲೇ ಅದಕ್ಕೋಸ್ಕರ ಯೋಗ್ಯವಾದ ಪುಸ್ತಕಗಳು ಲಭ್ಯವಾಗುವುದು ಅಷ್ಟೇ ಮಹತ್ವದ್ದಾಗಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ಕ್ಷೇತ್ರದಲ್ಲಿ ಕಾಲೂರಲು ಮುಂದಾಗುತ್ತಿರುವವರಿಗೆ ಉಪಯೋಗವಾಗುವಂತಹ ಪುಸ್ತಕಗಳ ಕುರಿತು ನಮ್ಮ ಪುಸ್ತಕಗಳ ವಿಭಾಗವು ಕೆಲಸ ಮಾಡುತ್ತಿದೆ. ಈ ಪುಸ್ತಕಗಳು ಕಾರ್ಖಾನೆಯಲ್ಲಿ ಮಾಡಲಾಗುವ ಕೆಲಸಗಳ ಕುರಿತು ಯೋಗ್ಯ ರೀತಿಯಲ್ಲಿ ಮಾಹಿತಿಯನ್ನು ನೀಡುವಲ್ಲಿ ಸಹಾಯವನ್ನು ಮಾಡುತ್ತವೆ. ಸದ್ಯಕ್ಕೆ ಮೆಕ್ಯಾನಿಕಲ್ ಹ್ಯಾಂಡ್ ಬುಕ್, ಸುಲಭ ಯಂತ್ರಶಾಲೆ, ಸುಧಾರಿತ ಯಂತ್ರಶಾಲೆ ಮತ್ತು ಅಸೆಂಬ್ಲಿ- ಡಿಸ್ ಅಸೆಂಬ್ಲಿ ಎಂಬ ನಾಲ್ಕು ಪುಸ್ತಕಗಳನ್ನು ತಯಾರಿಸುವ ಕೆಲಸವೂ ನಡೆಯುತ್ತಿದೆ. ಈ ಪುಸ್ತಕಗಳ ಕೆಲಸವನ್ನು ನಾಲೆಜೇಬಲ್ ವರ್ಕಿಂಗ್ ಮಾಡಿ ಚಟುವಟಿಕೆಗಳನ್ನು ಸುಧಾರಿಸಲು ತುಂಬಾ ಉಪಯುಕ್ತವಾಗಲಿವೆ, ಎಂಬ ಆಪೇಕ್ಷೆ ಇದೆ.
ವೃತ್ತಿಪರ ಇಂಜಿನಿಯರ್ ಇವರ ಒಂದು ಗುಂಪು ತಂತ್ರಜ್ಞರ ಮಾತೃಭಾಷೆಯಲ್ಲಿ ಇಂಜಿನಿಯರಿಂಗ್ ಜ್ಞಾನ ಮತ್ತು ಮಾಹಿತಿಯನ್ನು ಬಿತ್ತುವಲ್ಲಿ ಉತ್ಸಾಹ ಮತ್ತು ನಿರ್ಧರಿಸಿರುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ವಿವಿಧ ಕಾರ್ಯಕ್ಷೇತ್ರಗಳಲ್ಲಿ ಹೆಸರು ಪಡೆದಿರುವ, ಅನುಭವಿಗಳಾದ ಇಂಜಿನಿಯರ್ ಈ ಕೆಲಸವನ್ನು ಕೈಗೂಡಲು ಉದ್ಯಮ ಪ್ರಕಾಶನದೊಂದಿಗೆ ಸಹಭಾಗಿಗಳಾಗಿದ್ದಾರೆ. ಮಾಸ ಪತ್ರಿಕೆ ಮತ್ತು ಪುಸ್ತಕಗಳನ್ನು ತಯಾರಿಸಲು ಬೇಕಾಗುವಂತಹ ಎಲ್ಲ ರೀತಿಯ ಆಧುನಿಕ ಸಂಪನ್ಮೂಲಗಳು ನಮ್ಮಲ್ಲಿಯೇ ಉಪಲಬ್ಧವಿರುವುದರಿಂದ ವಿಚಾರ ಮತ್ತು ವಿನ್ಯಾಸ ಈ ಎರಡರ ಗುಣಮಟ್ಟವು ಆಂತರರಾಷ್ಟ್ರೀಯ ಮಾಸ ಪತ್ರಿಕೆಗಳು ಮತ್ತು ಪುಸ್ತಕಗಳಿಗೆ ಸರಿಸಮಾನವಾಗಿ ಇಡುವಂತಹ ಪ್ರಯತ್ನವನ್ನು ನಾವು ನಿರಂತರವಾಗಿ ಮಾಡುತ್ತಿದ್ದೇವೆ.