ಒಳ್ಳೆಯ ಪ್ರೋಗ್ರಾಮಿಂಗ್‌ನ ರೀತಿಯ ಮೂಲಕ ವೃತ್ತಾಕಾರದ ಸರ್ಫೇಸ್‌ನಲ್ಲಿ ಥ್ರೆಡ್ ಮಾಡಲು ಮಶಿನ್‌ನಲ್ಲಿರುವ ವೈಶಿಷ್ಟ್ಯಗಳನ್ನು ಬಳಸುವುದು. ತಮಗೆಲ್ಲರಿಗೂ ತಿಳಿದಂತೆ ಸಾಮಾನ್ಯವಾಗಿ ಥ್ರೇಡಿಂಗ್ ಸೈಕಲ್ ಉಪಯೋಗಿಸಿ ಟೇಪರ್ ಅಥವಾ ನೇರವಾದ ಹೊರ ವ್ಯಾಸ (ಓ.ಡಿ.)/ ಅಂತರ್ವ್ಯಾಸದಲ್ಲಿ (ಐ.ಡಿ.) ಥ್ರೇಡ್‌ಗಳನ್ನು ಮಾಡುವುದು ಸಾಧ್ಯವಿದೆ. ಹಲವೊಮ್ಮೆ ವೃತ್ತಾಕಾರವಾದ (ಕಾನ್ಕೆವ್/ ಕಾನ್ವೆಕ್‌ಸ್) ಆಕಾರದಲ್ಲಿ ಥ್ರೆಡ್‌ಗಳನ್ನು ತಯಾರಿಸಬೇಕಾಗುತ್ತದೆ. ಈ ಸ್ಥಿತಿಯಲ್ಲಿ ಈ ವಿಧದ ಥ್ರೆಡಿಂಗ್‌ಗೋಸ್ಕರ ಟರ್ನಿಂಗ್ ಸೆಂಟರ್‌ನಲ್ಲಿ ವಿಶೇಷವಾದ ವೈಶಿಷ್ಟ್ಯಗಳಿರುವುದು ಅವಶ್ಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರೋಗ್ರಾಮರ್‌ಗೆ ಉಪಲಬ್ಧವಿರುವ ಟರ್ನಿಂಗ್ ಸೆಂಟರ್‌ನಲ್ಲಿ ಇಂತಹ ರೀತಿಯ ಥ್ರೆಡಿಂಗ್‌ಗಳನ್ನು ಮಾಡಲು ನಾವೀನ್ಯತೆಯಿಂದ ಕೂಡಿರುವ ಕಲ್ಪನೆಯ ವಿಚಾರಗಳನ್ನು ಮಾಡುವ ಅವಕಾಶವನ್ನು ನೀಡುವುದು ಅಗತ್ಯವಾಗಿದೆ.
ಮಲ್ಟಿಪಲ್ ಸ್ಟಾರ್ಟ್ ಕಟಿಂಗ್ ಪಾಸ್‌ನೊಂದಿಗೆ ಥ್ರೆಡಿಂಗ್ ಮಾಡುವ ವೇಳೆಯಲ್ಲಿ ಪ್ರತಿಯೊಂದು ಕಟಿಂಗ್ ಪಾಸ್‌ಗೋಸ್ಕರ ಥ್ರೆಡ್ ಸ್ಟಾರ್ಟ್ ಪಾಯಿಂಟ್ ಸಮಾನವಾಗಿರುವುದು ಅಗತ್ಯವಾಗಿರುವುದು, ತಿಳಿದ ವಿಷಯವೇ ಆಗಿರುತ್ತದೆ. ಥ್ರೆಡಿಂಗ್ ಸೈಕಲ್ ಅಥವಾ G33 ಸಿಂಗಲ್ ಮೋಶನ್ ಕಟಿಂಗ್ ಉಪಯೋಗಿಸುವಾಗ ಸ್ಪಿಂಡಲ್ ಎನ್‌ಕೋಡರ್ ಮೂಲಕ ಮಿ.ಮೀ./ ಸುತ್ತುವಿಕೆಯ ಮತ್ತು ಪ್ರಾರಂಭದ ಜಾಗವನ್ನು ಒಂದೇ ಕಾಪಾಡುವ ಮುತುವರ್ಜಿಯನ್ನು ವಹಿಸಲಾಗುತ್ತದೆ.
ಥ್ರೆಡಿಂಗ್ ಸೈಕಲ್ ಹೊರತಾಗಿ ಇನ್ನಿತರ ಚಲಿಸುವ ವೇಗ ಮೋಶನ್ G ಕೋಡ್, G01, ಎG2 ಮತ್ತು G03 ಗೋಸ್ಕರ ಎನ್ಕೋಡರ್ ಮೂಲಕ ಕೇವಲ ಮಿ.ಮೀ./ಸುತ್ತುವಿಕೆ ಚಲಿಸುವ ವೇಗವನ್ನು ನಿಯಂತ್ರಿಸಲಾಗುತ್ತದೆ.
ಥ್ರೇಡ್‌ಗಳನ್ನು ಪ್ರಾರಂಭಿಸುವಾಗ ಆರಂಭದಲ್ಲಿರುವ ಕೋನದೊಂದಿಗೆ G33 ಉಪಯೋಗಿಸಿ ಪ್ರಾರಂಭಿಸಿದ
ನಂತರ, ಶೇಕಡಾ 100 ರಷ್ಟು ಚಲಿಸುವ ವೇಗವನ್ನು ಓವರ್‌ರೈಡ್ ಇಟ್ಟು G01, G02 ಅಥವಾ G03 ಉಪಯೋಗಿಸಿದಲ್ಲಿ ಪ್ರೊೊಫೈಲ್‌ನಲ್ಲಿ ಥ್ರೇಡ್‌ಗಳನ್ನು ತಯಾರಿಸಬಹುದು.
• ಚಿಪ್ಪಣಿ
• ಚಲಿಸುವ ವೇಗವು ಓವರ್‌ರೈಡ್ 100% ಕ್ಕಿಂತ ಹೆಚ್ಚು ಇರುವುದು ಅವಶ್ಯಕವಾಗಿದೆ.
• ಅಥವಾ ಚಲಿಸುವ ವೇಗವನ್ನು ಓವರ್‌ರೈಡ್ ನಿಲ್ಲಿಸಬೇಕು. (ಇತರ ಅಪ್ಲಿಕೇಶನ್ ಮಾಡಲು ಅಸುರಕ್ಷಿತವಾಗಿವೆ.)
• G01, G02 ಅಥವಾ G03 ಉಪಯೋಗಿಸಿ ಥ್ರೇಡಿಂಗ್ ಮಾಡುವಾಗ 100% ರಷ್ಟು ಚಲಿಸುವ ವೇಗವನ್ನು ಕಾಪಾಡಲು ಥ್ರೆಡಿಂಗ್ ಅಪ್ಲಿಕೇಶನ್‌ನ ಮೊದಲು ಮತ್ತು ನಂತರ M ಕೋಡ್‌ನ ವ್ಯವಸ್ಥೆಯನ್ನು ಮಾಡಬೇಕು.
%
O5678
N1 G0 G21 G40
T0000 X0 Z0
T0101
G97 S500 M4 (ಅಥವಾ M3)
G0 X150.0 Z5.0
X54.0
N101
# 502=50.0 (X ಸ್ಥಿತಿ)
# 503=2.0
(ಫೀಡ್ ರೇಟ್ ಮಿ.ಮೀ./ ಸುತ್ತು)
M98 P2233
N102
# 502=49.9
# 503=2.05
M98 P2233
N103
# 502=49.8
# 503=2.1
M98 P2233
N104
# 502=49.7
# 503=2.15
M98 P2233
N105
# 502=49.6
# 503=2.2
M98 P2233
N106
# 502=49.5
# 503=2.25
M98 P2233
N107
# 502=49.4
# 503=2.3
M98 P2233
N108
# 502=49.3
# 503=2.35
M98 P2233
N109
# 502=49.2
# 503=2.4
M98 P2233
N110
# 502=49.1
# 503=2.45
M98 P2233
N111
# 502=49.05
# 503=2.475
M98 P2233
N112
# 502=49.0
# 503=2.5
M98 P2233
N112 (ಐಡಲ್ ಪಾಸ್
# 502=49.0
# 503=2.5
M98 P2233
G0 X150.0 Z10.0 M5
T0000 X0 Z0
M30
%