ಬೃಹತ್ ಸಿ.ಎನ್.ಸಿ. ಟರ್ನಿಂಗ್ ಸೆಂಟರ್

06 Dec 2019 17:47:00

1_1  H x W: 0 x
 
 
ಉತ್ಪಾದನೆಗಳ ನಿರ್ಮಾಣದಲ್ಲಿ ತಂತ್ರಜ್ಞಾನದ ಪ್ರಗತಿ ಮತ್ತು ಔದ್ಯೋಗಿಕ ಕ್ರಾಂತಿಯಿಂದಾಗಿ ಎಲ್ಲದರ ಕುರಿತು ನಿಖರತೆಯ ಬೇಡಿಕೆಯನ್ನು ಮಾಡುವುದು ಸಹಜ ಸಾಧ್ಯವಾಗಿದೆ. ಈ ಬೇಡಿಕೆಯು ಕೇವಲ ಸಣ್ಣ ಅಥವಾ ಮಧ್ಯಮ ಆಕಾರದ ಯಂತ್ರೋಪಕರಣಗಳಿಗೆ ಸೀಮಿತವಾಗಿಲ್ಲದೇ ಬೃಹದಾಕಾರದ ಯಂತ್ರೋಪಕರಣಗಳಿಗೂ ಮಾಡಲಾಗುತ್ತದೆ.
 
ಬೃಹತ್ ಮತ್ತು ಕ್ಲಿಷ್ಟವಾದ ಯಂತ್ರಭಾಗಗಳ ಉತ್ಪಾದನೆಯಲ್ಲಿರುವ ಉನ್ನತ ನಿಖರತೆಯ ಆವಶ್ಯಕತೆಯಿಂದಾಗಿ ಮಶಿನಿಂಗ್ ಸೆಂಟರ್‌ನ ಅಭಿವೃದ್ಧಿಯಾಯಿತು. ಮಶಿನಿಂಗ್ ಸೆಂಟರ್‌ನ ಇತ್ತಿಚೀನ ಡಿಸೈನ್‌ಗಳಲ್ಲಿ ಈ ಕೆಳಗಿನ ವೈಶಿಷ್ಟ್ಯಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ.
 
>ವೇಗವಾಗಿ ಆಗುತ್ತಿರುವ ಟೂಲ್‌ಗಳ ಬದಲಾವಣೆ ಮತ್ತು ಹೆಚ್ಚು ವೇಗವಾಗಿರುವ ಕ್ರಮಿಸುವಂತಹ ಚಟುವಟಿಕೆಗಳಿಂದಾಗಿ ಅನುತ್ಪಾದಕತೆಯ ವೇಳೆಯಲ್ಲಿ ಇಳಿತವಾಗುತ್ತದೆ.
>ಬೆಡ್ ಮತ್ತು ಕಾಲಮ್‌ಗಳಿಗೆ ದೃಢವಾದ ರಚನೆಯನ್ನು ಬಳಸಿ ನಿಖರತೆಯಲ್ಲಿ ಹೆಚ್ಚಳವಾಗುತ್ತದೆ.
>ತುಂಡುಗಳ ಆಳ ಮತ್ತು ಫೀಡ್ ರೇಟ್ ಹೆಚ್ಚು ಪ್ರಮಾಣದಲ್ಲಿ ಇಡಬಹುದಾದಂತಹ ಸಾಧ್ಯತೆಯೂ ಇರುತ್ತದೆ.
 
ಬೃಹದಾಕಾರ, ಭಾರಿ ತೂಕ, ಹೆಚ್ಚು ಉದ್ದ ಮತ್ತು ವ್ಯಾಸ ಹೀಗೆ ಯಂತ್ರಭಾಗಗಳ ಪ್ಯಾರಾಮೀಟರ್ ಹೆಚ್ಚಾಗುತ್ತಿದ್ದಂತೆ ಈ ಕೆಲಸವು ಇನ್ನಷ್ಟು ಸವಾಲುಗಳನ್ನು ಉಂಟುಮಾಡಿದೆ. ಇಂತಹ ಕಾರ್ಯವಸ್ತುಗಳನ್ನು ಹಿಡಿಯುವುದು, ಅವುಗಳನ್ನು ಮಶಿನ್‌ನ ಮೇಲೆ ಎರಿಸುವುದು ಮತ್ತು ಅದರ ಯಂತ್ರಣೆಯನ್ನು ಮಾಡುವುದು, ಹಾಗೆಯೇ ಈ ಕೆಲಸಗಳನ್ನು ಮಾಡಬಲ್ಲಂತಹ ಮಶಿನ್‌ಗಳನ್ನು ಪಡೆಯುವುದು, ಇದು ತುಂಬಾ ಕಷ್ಟದ ಕೆಲಸವಾಗಿದೆ. ಇದರಲ್ಲಿ ಬಳಸಲಾಗುವ ‘ಬೃಹತ್’ ಈ ಶಬ್ದವು ಮಶಿನ್‌ನ ದೊಡ್ಡ ವ್ಯಾಸ ಮತ್ತು ಉದ್ದವಿರುವ ಕಾರ್ಯವಸ್ತುಗಳ ಯಂತ್ರಣೆಯನ್ನು ಮಾಡುವ ಸಾಮರ್ಥ್ಯದೊಂದಿಗೆ ಸಂಬಂಧಪಟ್ಟದ್ದಾಗಿದೆ. ಒಂದು ವೇಳೆ ಸಣ್ಣ, ಮಧ್ಯಮ ಮತ್ತು ಬೃಹದಾಕಾರದ ಮಶಿನ್‌ಗಳನ್ನು ಬೇರ್ಪಡಿಸುವಂತಹ ಸ್ಪಷ್ಟವಾದ ವ್ಯಾಖ್ಯೆ ಇಲ್ಲದಿದ್ದರೂ ಕೂಡಾ ಇಂದು ಸಾಮಾನ್ಯವಾಗಿ 500 ಮಿ.ಮೀ.ಗಿಂತ ಹೆಚ್ಚು ವ್ಯಾಸ ಮತ್ತು 1 ರಿಂದ 3 ಮೀಟರ್ ಉದ್ದವಿರುವ ಕಾರ್ಯವಸ್ತುಗಳ ಯಂತ್ರಣೆಯನ್ನು ಮಾಡುವ ಮಶಿನ್‌ಗೆ ಬೃಹದಾಕಾರದ ಮಶಿನ್ ಎಂದು ತಿಳಿಯಲಾಗಿದೆ.
 
200 ಮಿ.ಮೀ.ಗಿಂತ ಕಡಿಮೆ ವ್ಯಾಸದ ಮತ್ತು A24/A25 ಸ್ಪಿಂಡಲ್ ನೋಸ್ ಇರುವ ಮಶಿನ್‌ಗೆ ಸಣ್ಣ ಮಶಿನ್, ಆದರೆ 350 ಮಿ.ಮೀ. ವ್ಯಾಸದ ಕಾರ್ಯವಸ್ತುವಿನ ಯಂತ್ರಣೆಯನ್ನು ಮಾಡುವ ಮತ್ತು A26/A28 ಸ್ಪಿಂಡಲ್ ನೋಸ್ ಇರುವ ಮಶಿನ್ ಮಧ್ಯಮ ಮಶಿನ್ ಎಂದು ಗುರುತಿಸಲಾಗುತ್ತದೆ. 500 ಮಿ.ಮೀ.ಗಿಂತ ಹೆಚ್ಚು ವ್ಯಾಸವಿರುವ ಕಾರ್ಯವಸ್ತುಗಳ ಯಂತ್ರಣೆಯನ್ನು ಮಾಡಬಹುದಾದ ಬೃಹತ್ ಮಶಿನ್‌ನಲ್ಲಿ A211 ಸ್ಪಿಂಡಲ್ ನೋಸ್ ಬಳಸಲಾಗುತ್ತವೆ.
 
ಬೃಹದಾಕಾರದ ಮಶಿನ್‌ನಲ್ಲಿರುವ ಅತ್ಯಾವಶ್ಯಕ ಗುಣವಿಶೇಷಗಳು
 
ದೊಡ್ಡ ಟರ್ನಿಂಗ್ ಮಶಿನ್, ಸಣ್ಣ ಟರ್ನಿಂಗ್ ಮಶಿನ್‌ನೊಂದಿಗೆ ಹೋಲಿಸಿದರೆ ತುಂಬಾ ವೈಶಿಷ್ಟ್ಯಪೂರ್ಣವಾಗಿರುತ್ತವೆ. ಕಾರಣ ಅದರ ಡಿಸೈನ್ ಬೇರೆಯೇ ಆದ ಕಾಲ್ಪನಿಕತೆಗೆ ಆಧರಿಸಿದ್ದು ಅದರ ವೈಶಿಷ್ಟ್ಯಗಳೂ ಬೇರೆಯೇ ಇರುತ್ತವೆ. ತುಂಬಾ ದೃಢ ಮತ್ತು ದೃಢ ಅಥವಾ ಕಠಿಣವಾದ ರಚನೆಯು ಬೃಹದಾಕಾರದ ಟರ್ನಿಂಗ್ ಮಶಿನ್‌ಗೆ ಪ್ರಾಥಮಿಕ ಆವಶ್ಯಕತೆಯಾಗಿರುತ್ತದೆ. ಇದರ ಕಾರಣವೆಂದರೆ ಅವುಗಳಿಗೆ ದೊಡ್ಡ ಪ್ರಮಾಣದ ಯಂತ್ರಣೆಯ ಬಲವನ್ನು ಎದುರಿಸಬೇಕಾಗುತ್ತದೆ ಮತ್ತು ಇಂತಹ ಶಕ್ತಿಯು ಮಶಿನ್‌ನ ಬಲದಿಂದ ಮತ್ತು ಚಟುವಟಿಕೆಯಲ್ಲಿರುವ ನಿಖರತೆಯಲ್ಲಿ ಬಹು ದೊಡ್ಡ ಪ್ರಭಾವವನ್ನು ಬೀರಬಹುದು. ಆದರೆ ಅದೇ ವೇಳೆಯಲ್ಲಿ ಅದರ ಬಹು ದೊಡ್ಡ ಗಾತ್ರದಿಂದಾಗಿ ಆಪರೇಟರ್‌ಗೆ ಆಯಾಸ ಉಂಟಾಗಬಾರದು, ಎಂಬುದರ ಕುರಿತೂ ಮುತುವರ್ಜಿಯನ್ನು ವಹಿಸುವುದೂ ಅಗತ್ಯವಾಗಿದೆ. ಇದರ ಹೊರತಾಗಿ ಮಶಿನ್‌ನಿಂದ ಒಳ್ಳೆಯ ಸರ್ಫೇಸ್ ಫಿನಿಶ್ ಅಪೇಕ್ಷಿಸಲಾಗುತ್ತದೆ ಮತ್ತು ಮಶಿನ್‌ನ ನಿಖರತೆಯೂ ದೀರ್ಘಕಾಲದ ತನಕ ಉಳಿಯುವುದು, ಸುಲಭವಾದ ಸರ್ವಿಸ್, ಉಚ್ಚಮಟ್ಟದ ನಿರ್ವಹಣೆ ಮತ್ತು ಹೊಂದಾಣಿಕೆ ಈ ಅಂಶಗಳಿರುವುದೂ ಆವಶ್ಯಕವಾಗಿದೆ.
 
ಮಶಿನ್ ಬೆಡ್‌ನ ರಚನೆ
 
ಮಶಿನ್‌ನ ಸ್ಟ್ರಕ್ಚರ್ ಡಿಸೈನ್‌ನ ವಿಚಾರದಲ್ಲಿ ಪ್ರಮುಖವಾಗಿ ಸ್ಲಂಟ್ ಸೆಡಲ್ ಸ್ಟ್ರಕ್ಚರ್, ಸ್ಲಂಟ್ ಬೆಡ್ ಸ್ಟ್ರಕ್ಚರ್ ಮತ್ತು ಸ್ಟೆಪ್ ಅಪ್ ಸ್ಟ್ರಕ್ಚರ್ ಎಂಬ ಮೂರು ವಿಧಗಳ ಕುರಿತು ವಿಚಾರ ಮಾಡಲಾಗುತ್ತದೆ. ಕಂಪನಗಳ ಸ್ಟ್ರಕ್ಚರ್‌ನಲ್ಲಿ ಉಂಟಾಗುವ ಪರಿಣಾಮವನ್ನು ತಡೆಯಲು ಆವಶ್ಯಕವಿರುವ ಡಂಪಿಂಗ್ ಗುಣಧರ್ಮವು ಅಪೇಕ್ಷಿಸಿರುವ ಮೌಲ್ಯಗಳ ತನಕ ಇರುವ ಕುರಿತು ಖಾತರಿ ವಹಿಸಲು ವಿಶ್ಲೇಷಣೆಯನ್ನು ಮಾಡಬಲ್ಲ ಆಧುನಿಕ ಸಾಫ್‌ಟ್‌‌ವೇರ್ ಬಳಸಿ ಸ್ಟ್ರಕ್ಚರ್ ಪರಿಶೀಲಿಸಲಾಗುತ್ತದೆ. ಉತ್ತಮ ರೀತಿಯ ಸ್ಲಂಟ್ ಬೆಡ್ ಸ್ಟ್ರಕ್ಚರ್, ಕಾಸ್ಟಿಂಗ್‌ನಲ್ಲಿಯೇ ನಿರೀಕ್ಷಿಸಿರುವ ಕೋನವನ್ನು ನೀಡಿ ತಯಾರಿಸಲಾಗುತ್ತದೆ. ಇದರಿಂದಾಗಿ ಸೆಡಲ್‌ನಲ್ಲಿ ಎಡ್ಜೆಸ್‌ಟ್‌‌ಮೆಂಟ್ ಮಾಡಿ ಅದನ್ನು ಓರೆ ಮಾಡಬೇಕಾಗುವುದಿಲ್ಲ.
 
>ಈ ವಿಧದ ರಚನೆಯಲ್ಲಿ ಹೆಚ್ಚು ಕಾಠಿಣ್ಯ, ಕಠೋರತನವು ಇರುತ್ತದೆ. ಇದರಿಂದಾಗಿ ಔಷ್ಣಿಕ ಸ್ಥಿರತೆಯೂ ಲಭಿಸುತ್ತದೆ.
>ಓರೆಯಾಗಿರುವ ಬೆಡ್ ಕಾಸ್ಟಿಂಗ್ ರಚನೆಯಲ್ಲಿರುವ ಇನ್ನೊಂದು ಲಾಭವೆಂದರೆ, ಅದರಲ್ಲಿರುವ ಒಟ್ಟಾರೆ ಸಾಮೂಹಿಕತನವು ಅಧಿಕವಾಗಿ ಇರುತ್ತದೆ. ಇದರಿಂದಾಗಿ ಕಡಿಮೆ ಜಾಗವನ್ನು ಆಕ್ರಮಿಸುವ ಹೆಚ್ಚು ಭಾರವಿರುವ ಮಶಿನ್ ತಯಾರಾಗುತ್ತದೆ.
 
ಕಾಂಪ್ರೆಸಿವ್ ಮತ್ತು ಕಂಪನಗಳ ಭಾರವನ್ನು ಸಹಿಸಿ ಕ್ರ್ಯಾಕ್‌ಗಳು ಉಂಟಾಗಬಾರದು, ಅದಕ್ಕೋಸ್ಕರ ಮಶಿನ್‌ನ ಬೆಡ್ ಕಾಸ್ಟಿಂಗ್‌ನಲ್ಲಿ ಮಾಡಲಾಗುತ್ತದೆ. ಕಂಪನಗಳೆಡೆಗೆ ವಿಶೇಷವಾಗಿ ಗಮನ ಹರಿಸಬೇಕಾಗುತ್ತದೆ. ಕಾರಣ ಇದರಿಂದಾಗಿ ಕೆಲಸ ಮಾಡುತ್ತಿರುವಾಗ ಅಡಚಣೆಗಳು ನಿರ್ಮಾಣವಾಗುವ ಸಾಧ್ಯತೆಯೂ ಇರುತ್ತದೆ. ಕಾಸ್ಟಿಂಗ್ ಯಂತ್ರಣೆಯ ಸಾಮರ್ಥ್ಯ ಮತ್ತು ಉತ್ಪಾದನೆಯ ಸಾಮರ್ಥ್ಯ ಒಳ್ಳೆಯದು ಮತ್ತು ಅಗ್ಗವಾಗಿರುವುದರಿಂದ ಮಶಿನ್ ಬೆಡ್ ತಯಾರಿಸುವಾಗ ಕಾಸ್ಟಿಂಗ್‌ಗೆ ಪ್ರಾಧಾನ್ಯತೆವನ್ನು ನೀಡಲಾಗುತ್ತದೆ.
 
ಈ ಮಶಿನ್ ಸಾಮಾನ್ಯವಾಗಿ 300, 450 ಮತ್ತು ಕೆಲವೊಮ್ಮೆ 600 ಹೀಗೆ ಬೆಡ್‌ನ ಕೋನವನ್ನಿಟ್ಟು ತಯಾರಿಸಲಾಗುತ್ತದೆ. ಜಾಸ್ತಿ ವೇಗದ ಯಂತ್ರಣೆಯಲ್ಲಿ ಉಂಟಾಗುವ ಉಚ್ಚ ಪ್ರಕ್ರಿಯೆಯ ಬಲಕ್ಕೆ ಯೋಗ್ಯ ರೀತಿಯಲ್ಲಿ ಪ್ರತೀಕಾರ ಮಾಡಲು ಓರೆಯಾಗಿರುವ ಬೆಡ್‌ನ ರಚನೆಯೂ ಉಪಯುಕ್ತವಾಗುತ್ತದೆ. ಸ್ಟೆಪ್ ಅಪ್ ರಚನೆಯ ಡಿಸೈನ್‌ನಿಂದಾಗಿ ದೊಡ್ಡ ವ್ಯಾಸದ ಯಂತ್ರಭಾಗಗಳ ಯಂತ್ರಣೆಯಲ್ಲಿ ಸಮತೋಲಿತ ಮತ್ತು ಉನ್ನತ ಸ್ಥಿರತೆಗೋಸ್ಕರ ಹೆಚ್ಚು ಅಗಲದಲ್ಲಿ ಗೈಡ್‌ವೆ ಅಳವಡಿಸಬಹುದು.
 
ಆಧುನಿಕ ಸಿ.ಎನ್.ಸಿ. ಮಶಿನ್‌ನಲ್ಲಿ ಅನೇಕ ಜಾಗಗಳಲ್ಲಿ ಓರೆಯಾಗಿರುವ (ಸ್ಲಾಂಟಿಂಗ್) ಬೆಡ್‌ನ ರಚನೆಯನ್ನು ಬಳಸಲಾಗುತ್ತದೆ. ಇದರಿಂದಾಗಿ ಯಂತ್ರಣೆಯ ಪ್ರಕ್ರಿಯೆನ್ನು ಮಾಡುತ್ತಿರುವಾಗ ತಯಾರಾಗುವ ಚಿಪ್‌ಗಳನ್ನು ಕೂಲಂಟ್‌ನೊಂದಿಗೆ ತಕ್ಷಣ ಸಾಗಿಸಲ್ಪಡುತ್ತವೆ ಮತ್ತು ಬೆಡ್ ಓರೆಯಾಗಿರುವುದರಿಂದ ಅವುಗಳು ಗುರುತ್ವದಿಂದಾಗಿ ಕೆಳಗೆ ಬೀಳುತ್ತವೆ. ಇದರಿಂದಾಗಿ ಚಿಪ್‌ನಲ್ಲಿ ಒಳ್ಳೆಯ ರೀತಿಯಲ್ಲಿ ಸಾಗಾಣಿಕೆಯೂ ಆಗುತ್ತದೆ, ಇದೇ ಓರೆಯಾಗಿರುವ ಬೆಡ್‌ನ ರಚನೆಯ ಲಾಭವಾಗಿದೆ. ಈ ಕಾರಣದಿಂದಾಗಿ ಸಮತಟ್ಟಾದ ಸರ್ಫೇಸ್‌ನಲ್ಲಿ ಒಟ್ಟಾಗುವ ಚಿಪ್‌ಗಳ ಸಮಸ್ಯೆಯೂ ದೂರವಾಗುತ್ತದೆ.
 
ಮಶಿನ್‌ನ ಇನ್ನಿತರ ಘಟಕಗಳು
 
ಬೃಹದಾಕಾರದ ಸಿ.ಎನ್.ಸಿ. ಟರ್ನಿಂಗ್‌ನ ಮೂಲಭೂತ ರಚನೆಯು ಸ್ಟ್ಯಾಂಡರ್ಡ್ ಸಿ.ಎನ್.ಸಿ. ಟರ್ನಿಂಗ್ ಸೆಂಟರ್‌ನಂತೆಯೇ ಇರುತ್ತದೆ. ಆದರೆ ದೃಢವಾದ ಕಟ್ಟುವಿಕೆ, ದೃಢ ಅಥವಾ ಕಠಿಣವಾದ ಡಿಸೈನ್ ಮತ್ತು ಹೆಚ್ಚು ಸಾಮರ್ಥ್ಯ ಇವುಗಳೇ ಅದರಲ್ಲಿರುವ ಮುಖ್ಯವಾದ ವ್ಯತ್ಯಾಸಗಳಾಗಿವೆ. ಸಾಮಾನ್ಯವಾಗಿ ದೊಡ್ಡ ಸಿ.ಎನ್.ಸಿ. ಟರ್ನಿಂಗ್ ಸೆಂಟರ್‌ನಲ್ಲಿ 500 ಮಿ.ಮೀ.ಗಿಂತ ಹೆಚ್ಚು ವ್ಯಾಸ ಮತ್ತು 1000 ದಿಂದ 3000 ಮಿ.ಮೀ. ಉದ್ದದ ಹಂತದಲ್ಲಿ ಕಾರ್ಯವಸ್ತುಗಳ ಟರ್ನಿಂಗ್ ಮಾಡಬಹುದಾಗಿದೆ.
 
 
ಹೆಡ್‌ಸ್ಟಾಕ್
 

2_1  H x W: 0 x 
 
ಕಾಸ್ಟ್‌ ಆಯರ್ನ್‌ನಿಂದ ತಯಾರಿಸಿರುವ ಹೆಡ್‌ಸ್ಟಾಕ್ ಎಂಬ ಹೆಸರಿನ ಮುಚ್ಚಿರುವ ಜಾಗದಲ್ಲಿ ಸ್ಪಿಂಡಲ್ ಇಡಲಾಗಿರುತ್ತದೆ. ಉಷ್ಣತೆಯನ್ನು ಪ್ರಭಾವಶಾಲಿಯಾಗಿ ಆಗದಂತೆ ಮಾಡಲು ಇದರ ಸರ್ಫೇಸ್‌ಗೆ ಹೆಚ್ಚು ವಿಸ್ತೀರ್ಣವು ಉಪಲಬ್ಧವಾಗಬೇಕು ಮತ್ತು ಸ್ಪಿಂಡಲ್‌ನಲ್ಲಿರುವ ಔಷ್ಣಿಕ ಭಾರವು ಕಡಿಮೆ ಆಗಬೇಕು, ಈ ಕಾರಣದಿಂದ ಈ ಹೆಡ್‌ಸ್ಟಾಕ್‌ನ ಫಿನ್‌ನ ಡಿಸೈನ್ ಮಾಡಲಾಗಿದೆ.
 
ಸ್ಪಿಂಡಲ್
 
ಸ್ಪಿಂಡಲ್ ಬೇರಿಂಗ್‌ನ ಆಯ್ಕೆ ಇದು ಇನ್ನೊಂದು ಮಹತ್ವವಾದ ಅಂಶವಾಗಿದೆ. ಇದರಲ್ಲಿಯೇ ಸ್ಪಿಂಡಲ್‌ನ ಕೆಲಸ ಮತ್ತು ಬಾಳಿಕೆಯು ಅವಲಂಬಿಸಿರುತ್ತದೆ. ಎಕ್ಸಿಯಲ್ (ತ್ರಿಜ್ಯಾತ್ಮಕ) ಮತ್ತು ಎಕ್ಸಿಸ್ ಭಾರಗಳ ಮುತುವರ್ಜಿಯನ್ನು ವಹಿಸಲು, ಸಿಲಿಂಡರ್ ರೋಲರ್ ಬೇರಿಂಗ್ ಮತ್ತು ಕೋನಗಳ ಸಂಪರ್ಕವಿರುವ ಬಾಲ್ ಬೇರಿಂಗ್ ಇವುಗಳ ಜೋಡಿಗಳ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಒಮ್ಮೊಮ್ಮೆ ಅಪೇಕ್ಷಿಸಿರುವ ಶಕ್ತಿ ಮತ್ತು ಟಾರ್ಕ್ ಪಡೆಯಲು ಸ್ಪಿಂಡಲ್‌ನೊಂದಿಗೆ ಗಿಯರ್ ಬಾಕ್‌ಸ್‌ ನೀಡಲಾಗುತ್ತದೆ. ಇದರಿಂದಾಗಿ ಹೆಚ್ಚು ಪ್ರಮಾಣದಲ್ಲಿ ಮಟೀರಿಯಲ್ ಹೊರಗೆ ತೆಗೆಯುವುದೂ ಸಾಧ್ಯವಾಗುತ್ತದೆ.
 
ಆವಶ್ಯಕವಿರುವ ಯಂತ್ರಣೆಯ ಕೆಲಸಕ್ಕೋಸ್ಕರ ಮಶಿನ್‌ನ ಆಯ್ಕೆಯ ಪ್ರಕ್ರಿಯೆಯಲ್ಲಿ ಸ್ಪಿಂಡಲ್‌ನ ಆಯ್ಕೆ ಇದೂ ಒಂದು ಪ್ರಮುಖವಾದ ಘಟಕವಾಗಿರುತ್ತದೆ. ಯಂತ್ರಣೆಯ ರೊಟೇಶನ್ ಅಪೇಕ್ಷಿಸಿರುವ ವೇಳೆಯಲ್ಲಿ ಪೂರ್ತಿ ಮಾಡಲು ಸ್ಪಿಂಡಲ್ ಪಾವರ್, ಟಾರ್ಕ್ ಮತ್ತು ವೇಗ ಇವುಗಳ ಆಧಾರದಲ್ಲಿ ಆವಶ್ಯಕವಿರುವ ಯಂತ್ರಣೆಯ ಪ್ಯಾರಾಮೀಟರ್‌ಗಳನ್ನು ನಿರ್ಧರಿಸಲಾಗುತ್ತವೆ. ಅದಕ್ಕೋಸ್ಕರವೇ ಮಶಿನ್‌ನಲ್ಲಿ ಯಾವ ಕೆಲಸ ಮಾಡಬೇಕು ಎಂಬುದನ್ನು ಮೊದಲಾಗಿಯೇ ನಿರ್ಧರಿಸಬೇಕು ಮತ್ತು ನಂತರ ಮಶಿನ್‌ಗೆ ಯೋಗ್ಯವಾದ ಸ್ಪಿಂಡಲ್ ಅಯ್ಕೆ ಮಾಡಬೇಕು, ಎಂಬ ಸಲಹೆಯನ್ನು ನೀಡಲಾಗುತ್ತದೆ.
 
ಟರೆಟ್
 

3_1  H x W: 0 x 
 
ಲೋಹಗಳ ಯಂತ್ರಣೆಯನ್ನು ಮಾಡಲಾಗುವ ಸಿ.ಎನ್.ಸಿ. ಟರ್ನಿಂಗ್ ಮಶಿನ್‌ನಲ್ಲಿ ಎಲ್ಲಕ್ಕಿಂತಲೂ ಮಹತ್ವದ ಭಾಗವೆಂದರೆ ವೇಗವಾಗಿರುವ ಮತ್ತು ದೃಢವಾದ ಟರೇಟ್. ಬೃಹದಾಕಾರದ ಟರ್ನಿಂಗ್ ಮಶಿನ್‌ಗೋಸ್ಕರ ‘ಬೈ ಡೈರೆಕ್ಷನ್ ಸರ್ವೋ ಟರೇಟ್’ ಈ ತಂತ್ರಜ್ಞಾನವು ನೀಡಿರುವ ಒಂದು ಹೊಸದಾದ ಪರ್ಯಾಯವಾಗಿದೆ. ಸರ್ವೋ ಟರೇಟ್‌ನ ಪ್ರತಿಕ್ರಿಯೆಯು ತುಂಬಾ ವೇಗವಾಗಿರುವುದರಿಂದ ಟರೇಟ್ ತುಂಬಾ ಕಡಿಮೆ ವೇಳೆಯಲ್ಲಿ ಇಂಡೆಕ್‌ಸ್‌ ಮಾಡಿ ಯೋಗ್ಯವಾದ ಸ್ಥಿತಿಗೆ ತರಲಾಗುತ್ತದೆ. ಇದರಿಂದಾಗಿ ಒಟ್ಟಾರೆ ರೊಟೇಶನ್ ಟೈಮ್ ಕಡಿಮೆ ಮಾಡುವಲ್ಲಿ ಸಹಾಯವಾಗುತ್ತದೆ ಮತ್ತು ಬೃಹತ್ ಪ್ರಮಾಣದ ಉತ್ಪಾದನೆಯನ್ನು ಮಾಡುವುದಾದಲ್ಲಿ ಇದು ವೇಳೆಯ ಉಳಿತಾಯ ಮಾಡುವಂತಹ ಮಹತ್ವದ ಘಟಕವಾಗುತ್ತದೆ. ಹರ್ಥ್ ಅಥವಾ ಕರ್ವೀ ಕಪಲಿಂಗ್ ಮತ್ತು ಹೈಡ್ರಾಲಿಕ್ ಒತ್ತಡದ ಹೊಂದಾಣಿಕೆಯ ಮೂಲಕ ನಿರ್ದೋಷವಾದ ಸ್ಥಾನದ ನಿಶ್ಚಯವನ್ನು ಪಡೆಯಲಾಗುತ್ತದೆ. ಇದರಿಂದಾಗಿ ಹೆಚ್ಚು ಪ್ರಮಾಣದ ಯಂತ್ರಣೆಯ ಬಲದ ವಿರುದ್ಧ ದೃಢವಾಗಿ ಉಳಿಯುವುದು ಸಾಧ್ಯವಾಗುತ್ತದೆ.
 
ಗೈಡ್ ವೆ
 
X ಮತ್ತು Y ಅಕ್ಷಗಳ ನಿರ್ದೋಷವಾದ ರೇಖೀಯ ಚಟುವಟಿಕೆಗಳು ‘ಲಿನಿಯರ್ ಮೋಶನ್ ಗೈಡ್ ವೇ’ಯ ಮೂಲಕ ಪಡೆಯಲಾಗುತ್ತದೆ. ಕಠಿಣವಾದ ಟರ್ನಿಂಗ್ ಮಟೀರಿಯಲ್‌ನಿಂದ ತಯಾರಾಗುವ ಉಚ್ಚ ಯಂತ್ರಣೆಯ ಬಲವನ್ನು ಸಹಿಸಲು LM ಗೈಡ್ ವೇ ಸಾಮರ್ಥ್ಯದಿಂದ ಕೂಡಿರುತ್ತವೆ. LM ಗೈಡ್ ವೇಯಲ್ಲಿ ಟಫ್‌ನೆಸ್ ಮತ್ತು ಸ್ಟ್ರೆಂಥ್ ಪಡೆಯಲು ಒಳ್ಳೆಯ ಉಪಾಯವೆಂದರೆ ರೋಲರ್‌ನ ವಿಧದ LM ಗೈಡ್. LM ಗ್ರೈಡ್‌ನ ಬಳಕೆಯನ್ನು ದೀರ್ಘ ಕಾಲಾವಧಿಯ ತನಕ ಮಾಡಿದ ನಂತರವೂ ಈ ಕಠಿಣತೆ ಮತ್ತು ದೃಢತೆ ಶಾಶ್ವತವಾಗಿ ನಿಲ್ಲುತ್ತದೆ.
 
ಟೇಲ್‌ಸ್ಟಾಕ್
 

4_1  H x W: 0 x 
 
ದೊಡ್ಡ ಸಿ.ಎನ್.ಸಿ. ಟರ್ನಿಂಗ್ ಮಶಿನ್‌ನ ಬಳಕೆಯನ್ನು ಶಾಫ್‌ಟ್‌‌ಗೆ ಸಂಬಂಧಪಟ್ಟ ಕೆಲಸಗಳಿಗೋಸ್ಕರ ಹೆಚ್ಚಾಗಿ ಮಾಡಲಾಗುತ್ತದೆ. ಅಪೇಕ್ಷಿಸಿರುವ ಸರ್ಫೇಸ್ ಫಿನಿಶ್ ಪಡೆಯಲು ಉದ್ದದ ಕಾರ್ಯವಸ್ತುಗಳ ಬರಿದಾದ ತುದಿಯಲ್ಲಿ ಆವಶ್ಯಕವಿರುವ ಆಧಾರವನ್ನು ಟೇಲ್‌ಸ್ಟಾಕ್‌ನ ಮೂಲಕ ನೀಡಲಾಗುತ್ತದೆ. ಟೇಲ್‌ಸ್ಟಾಕ್ ಕೈಯಿಂದ ಅಥವಾ ಯೋಗ್ಯವಾದ ಸಾಮಗ್ರಿಗಳ ಸಹಾಯದಿಂದ ಸರಿಸಬಹುದು. ಹೈಡ್ರಾಲಿಕ್ ಯಂತ್ರಣೆಯ ಮೂಲಕ ಕ್ವಿಲ್‌ನ ಚಟುವಟಿಕೆಯನ್ನು ಮಾಡಲಾಗುತ್ತದೆ. ಆಯಾಸ ರಹಿತವಾದ ಮತ್ತು ವೇಗದ ಉತ್ಪಾದನೆಗೋಸ್ಕರ, ಮಶಿನ್‌ನಲ್ಲಿ ಡಿಜಿಟಲೈಜ್‌ಡ್‌ ಟೇಲ್‌ಸ್ಟಾಕ್ ನೀಡಲಾಗಿರುತ್ತದೆ. ಡಿಜಿಟಲ್ ಟೇಲ್‌ಸ್ಟಾಕ್ ಸರ್ವೋ ಮೋಟರ್‌ನ ಮೂಲಕ ನಡೆಸಲಾಗುತ್ತದೆ ಮತ್ತು ಯಾವುದೇ ಮಾನವನ ಹಸ್ತಕ್ಷೇಪದ ಹೊರತಾಗಿ ಯಾವುದೇ ಅಪೇಕ್ಷಿಸಿರುವ ಸ್ಥಾನಕ್ಕೆ ಅಳವಡಿಸಲು ಸಹಜವಾಗಿ ಪ್ರೊಗ್ರಾಮ್ ಮಾಡಬಹುದಾಗಿದೆ.
 
ಕಂಟ್ರೋಲ್ ಪ್ಯಾನೆಲ್
 
ಮಶಿನ್ ಬೃಹದಾಕಾರದ್ದಾಗಿರುವುದರಿಂದ ಆಪರೇಟರ್‌ಗೆ ಆಯಾಸವನ್ನು ತಡೆಯಲು ತುಂಬಾ ಅನುಕೂಲವಾದ ಆಪರೇಟಿಂಗ್‌ನ ಪರಿಸ್ಥಿತಿಯ ಆವಶ್ಯಕತೆಯು ಇರುತ್ತದೆ. ಒಂದು ಮಶಿನ್‌ನ ಆಪರೇಟಿಂಗ್ ಪ್ಯಾನೆಲ್ ಸರಿಸುವಂತೆ ಮತ್ತು ಗೋಲಾಕಾರವಾಗಿ ತಿರುಗುವಂತೆ ಇದ್ದರೆ ಆ ಕಾರ್ಯವಸ್ತುವಿನ ಸೆಟಪ್ ಮಾಡುತ್ತಿರುವಾಗ ಮತ್ತು ಯಂತ್ರಣೆಯಲ್ಲಿ ಒಳ್ಳೆಯ ವಿಜ್ಯುವಲ್ ನಿಯಂತ್ರಣೆಯನ್ನು ನೀಡುತ್ತದೆ. ಸರಿಸಲು ಯೋಗ್ಯವಾಗಿರುವ ಪ್ಯಾನೆಲ್‌ನಿಂದಾಗಿ ಆಪರೇಟರ್‌ಗೆ ಅವನ ಕೆಲಸದಲ್ಲಿ ಉತ್ತಮ ಗುಣಮಟ್ಟದ ಹೊಂದಾಣಿಕೆ ಮತ್ತು ಸಹಜತೆಯು ಲಭಿಸುತ್ತದೆ. ಇದರಿಂದಾಗಿ ಆಪರೇಟರ್‌ಗೆ ಒತ್ತಡ ರಹಿತವಾಗಿ ಮತ್ತು ಉತ್ತಮ ಕಾರ್ಯಕ್ಷಮತೆಯಿಂದ ಕೆಲಸ ಮಾಡುವುದೂ ಸಾಧ್ಯವಿದೆ.
 

5_1  H x W: 0 x 
 
ಲೈವ್ ಟೂಲ್ ಟರೇಟ್, C ಅಕ್ಷದೊಂದಿಗೆ ಹೆಡ್‌ಸ್ಟಾಕ್, ಚಿಪ್ ಕನ್ವೆಯರ್, ಹೈಡ್ರಾಲಿಕ್ ಸ್ಟೆಡಿ ರೆಸ್‌ಟ್‌, ಟೂಲ್ ಪ್ರೋಬ್ ಮತ್ತು ಕಾರ್ಯವಸ್ತು ಪ್ರೋಬ್ ಇಂತಹ ವಿವಿಧ ಉಪಕರಣೆಗಳನ್ನು ಸೇರಿಸಿ ಮಶಿನ್‌ಗೆ ಹೆಚ್ಚು ಉತ್ಪಾದನೆಗೆ ಯೋಗ್ಯವಾಗುವಂತೆ ಮಾಡಬಹುದಾಗಿದೆ. ಲೈವ್ ಟೂಲ್ ಟರೇಟ್ ಮತ್ತು C ಅಕ್ಷದ ಹೊಂದಾಣಿಕೆಯ ಮೂಲಕ ಟರ್ನಿಂಗ್ ಮಶಿನ್‌ನ ಟರ್ನ್ ಮಿಲ್ ಸೆಂಟರ್‌ನಲ್ಲಿ ರೂಪಾಂತರಿಸುವುದು ಸಾಧ್ಯವಿದೆ. ಪಿಚ್ ಸರ್ಕಲ್ ವ್ಯಾಸ (PCD) ಡ್ರಿಲಿಂಗ್ ಮತ್ತು ಟ್ಯಾಪಿಂಗ್, ಹೊರ ವ್ಯಾಸ (OD) ಮತ್ತು ಒಳಗಿನ ವ್ಯಾಸ (ID) ಪ್ರೊಫೈಲ್ ತಯಾರಿಸುವುದು, ಸ್ಲಾಟ್ ಮತ್ತು ಕೀ ವೆ ಇತ್ಯಾದಿಗಳ ಮಿಲಿಂಗ್ ಮಾಡುವಲ್ಲಿ ಇದರ ಸಹಾಯವು ಲಭಿಸುತ್ತದೆ. ಟರ್ನ್ ಮಿಲ್ ಸೆಂಟರ್ ಟರೇಟ್, 8 ಅಥವಾ 12 ಟೂಲ್ ಸ್ಟೇಶನ್‌ಗಳ ಸಾಮರ್ಥ್ಯದೊಂದಿಗೆ VDI ಅಥವಾ BMT ಸ್ಟ್ಯಾಂಡರ್ಡ್‌ನಲ್ಲಿ ಉಪಲಬ್ಧವಿರುತ್ತವೆ.
 
DX500 ಮಶಿನ್‌ನ ವೈಶಿಷ್ಟ್ಯಗಳು
ಸಾಮರ್ಥ್ಯ
 
>ಸ್ವಿಂಗ್ ಓವರ್ ಹೆಡ್: 800 ರಿಂದ 1050 ಮಿ.ಮೀ.
>ಸ್ಟ್ಯಾಂಡರ್ಡ್ ಟರ್ನಿಂಗ್ ವ್ಯಾಸ: 550 ರಿಂದ 780 ಮಿ.ಮೀ.
>ಮ್ಯಾಕ್ಸಿಮಮ್ ಟರ್ನಿಂಗ್ ವ್ಯಾಸ*: 700 ರಿಂದ 920 ಮಿ.ಮೀ.
>ಹೆಚ್ಚೆಂದರೆ ಟರ್ನಿಂಗ್ ಉದ್ದ*: 1000 ದಿಂದ 3000 ಮಿ.ಮೀ.
 
ಸ್ಲೈಡ್
 
>X ಅಕ್ಷ ಟ್ರಾವಲ್ (ಕ್ರಾಸ್): 360 ರಿಂದ 480 ಮಿ.ಮೀ.
>Z ಅಕ್ಷ ಟ್ರಾವೆಲ್ (ಲಾಂಜಿಟ್ಯುಡನಲ್): 1000 ದಿಂದ 3100 ಮಿ.ಮೀ.
>ರ್ಯಾಪಿಡ್ ಫೀಡ್ (X ಮತ್ತು Z ಅಕ್ಷ): 24 ರಿಂದ 24/20 ಮೀ./ ನಿಮಿಷ
 
ನಿಖರತೆ (VDI/DGQ 3441 ಗೆ ಅನುಸಾರವಾಗಿ)
 

6_1  H x W: 0 x 
 
>ಪೊಜಿಶನಿಂಗ್ ಅನ್‌ಸರ್ಟನಿಟಿ (P) (X/Z ಅಕ್ಷ): 0.01 ರಿಂದ 0.01/0.02 ಮಿ.ಮೀ.
>ರಿಪಿಟ್ಯಾಬಿಲಿಟಿ (Ps ಮೀಡಿಯಮ್) (X/Y ಅಕ್ಷ): 0.005 ರಿಂದ 0.005/0.008 ಮಿ.ಮೀ.
 
ಉಪಯೋಗ
 
ಕ್ಷೇತ್ರ (ಸೆಕ್ಟರ್): ವಾಹನ ಉದ್ಯಮ, ರಕ್ಷಣೆ, ಎರೋಸ್ಪೇಸ್, ತೈಲ ಮತ್ತು ಗ್ಯಾಸ್, ಅರ್ಥ್ ಮೂವಿಂಗ್, ಹೈಡ್ರಾಲಿಕ್ ಸಿಲಿಂಡರ್, ಡೈ ಮತ್ತು ಮೋಲ್ಡ್.
ಯಂತ್ರಭಾಗಗಳು: ಶಾಪ್‌ಟ್‌, ಸ್ಲೈನ್, ವಾಹನಗಳ (ಆಟೊಮೊಬೈಲ್) ಎಕ್ಸೆಲ್, ಪೇಪರ್, ಸ್ಟೀಲ್, ಟೆಕ್‌ಸ್‌‌ಟೈಲ್ ಮತ್ತು ಪವರ್ ಲೂಮ್ ಯಂತ್ರಭಾಗಗಳು, ಪ್ರಿಂಟಿಂಗ್ ಮಶಿನ್‌ನ ಯಂತ್ರಭಾಗಗಳು, ಕ್ರ್ಯಾಂಕ್‌ಶಾಫ್‌ಟ್‌, ಪೈಪ್‌ಗಳಿಗೆ ಸಂಬಂಧಪಟ್ಟ ಕೆಲಸ, ರೈಲ್ವೆ ಬಿಲೇಟ್ ಟರ್ನಿಂಗ್, ವಾಲ್ವ್ ಟರ್ನಿಂಗ್, ರಾಸಾಯನಿಕ ಪ್ರಕ್ರಿಯೆಯ ಉಪಕರಣೆಗಳು, ಪ್ಲಾಸ್ಟಿಕ್ ಫಿಲ್‌ಮ್‌ ಉಪಕರಣೆಗಳು, ಇಲೆಕ್ಟ್ರಿಸಿಟಿ ತಯಾರಿಸುವ ಉಪಕರಣಗಳು.
 
ಕೇಸ್ ಸ್ಟಡಿ
 
ವಾಹನ, ರೈಲ್ವೆ, ಕೃಷಿ ಸಲಕರಣೆಗಳು, ಬೇರಿಂಗ್ ಇಂತಹ ವಿವಿಧ ಕ್ಷೇತ್ರಗಳಲ್ಲಿ ಭಾರತೀಯ ಮತ್ತು ವಿದೇಶ ಈ ಎರಡೂ ಮಾರುಕಟ್ಟೆಗಳಲ್ಲಿ ಪೂರೈಕೆದಾರರೆಂದು ರಾಮಕೃಷ್ಣ ಫೋರ್ಜಿಂಗ್ ಲಿ. ಈ ಕಂಪನಿಯು ಕಾರ್ಯಗತವಾಗಿದೆ. ಸ್ಕ್ರೂ ಕಪಲಿಂಗ್, ಬೋಲ್ಸ್ಟರ್ ಸಸ್ಪೆನ್ಶನ್, ಸೈಡ್ ಫ್ರೇಮ್ ಕೀ, ರೈಲ್ವೆ ಕೋಚ್ ಮತ್ತು ವೆಗನ್‌ಗಳಿಗೋಸ್ಕರ ಡ್ರಾ ಗಿಯರ್ ಅಸೆಂಬ್ಲಿ ಇಂತಹ ಮಹತ್ವಪೂರ್ಣವಾದ ಸುರಕ್ಷೆಯ ಯಂತ್ರಭಾಗಗಳ ಪೂರೈಕೆಯನ್ನು ಮಾಡುವಲ್ಲಿ ಈ ಕಂಪನಿಯು ಮುಂಚೂಣಿಯಲ್ಲಿದೆ. ಸವಾಲುಗಳಿರುವ ವ್ಯಾಪಾರೀಕರಣದ ಪರಿಸ್ಥಿತಿಯಲ್ಲಿ, ಅವರು ಜಾಗತಿಕ ಮಟ್ಟದಲ್ಲಿ ವಾಹನ ಉದ್ಯಮದಲ್ಲಿ ತಮ್ಮ ಸ್ಥಾನವನ್ನು ಸಂಪಾದಿಸಿದ್ದಾರೆ.
 
ಒಂದೇ ಯಂತ್ರಭಾಗದ ಯಂತ್ರಣೆಯಲ್ಲಿ ಬೇಕಾಗಿರುವ ಫಿನಿಶಿಂಗ್ ಪಡೆಯಲು ಅಪ್ಲಿಕೇಶನ್‌ನಲ್ಲಿ ದೊಡ್ಡ ಸ್ವಿಂಗ್ ವ್ಯಾಸ, ದೊಡ್ಡ ಸ್ಪಿಂಡಲ್ ಬೋರ್ ಮತ್ತು ಉನ್ನತ ಯಂತ್ರಣೆಯ ಪ್ಯಾರಾಮೀಟರ್‌ಗಳು ಆವಶ್ಯಕವಿರುತ್ತವೆ. ಅದರಿಂದ ಹೊರಗೆ ಬಂದಿರುವ ಭಾಗವು ಇನ್ನಿತರ ಭಾಗದ ಯಂತ್ರಣೆಯು ಆಗುತ್ತಿರುವಾಗ ಸ್ಪಿಂಡಲ್ ಬೋರ್‌ನಲ್ಲಿ ಸೇರಿಸಲ್ಪಡುವುದು ಆವಶ್ಯಕವಾಗಿತ್ತು, ಇದು ಈ ಯಂತ್ರಭಾಗಗಳ ವೈಶಿಷ್ಟ್ಯವಾಗಿತ್ತು. ಈ ಯಂತ್ರಭಾಗಗಳು ರೊಟೇಶನಲ್ ಅಕ್ಷದಲ್ಲಿ ಸಿಮೆಟ್ರಿಕಲ್ ಇಲ್ಲದಿರುವುದರಿಂದ ಅದನ್ನು ತಿರುಗಿಸುವಾಗ ದೊಡ್ಡ ಪ್ರಮಾಣದಲ್ಲಿ ಅಸಂತುಲನೆಯು ನಿರ್ಮಾಣವಾಗುತ್ತದೆ. ಸ್ಪಿಂಡಲ್ ಬೋರ್‌ನಲ್ಲಿರುವ ಸ್ವಿಂಗ್ 120 ಮಿ.ಮೀ. ನಷ್ಟು ಇತ್ತು. ಅದರ ಸಂತುಲನೆಯನ್ನು ಮಾಡಿ ತಿರುಗಿಸುವುದಕ್ಕೋಸ್ಕರ ಮಾಡಿರುವ ಫಿಕ್ಸ್ಚರ್ ಮತ್ತು ಇತರ ಸೆಟಪ್ ಸೇರಿಸಿ 500 ಮಿ.ಮೀ. ಸ್ವಿಂಗ್ ಲಭಿಸುವುದನ್ನು ನಿರೀಕ್ಷಿಸಲಾಗಿತ್ತು. ಫೋರ್ಜಿಂಗ್ ಮಾಡಿರುವ ಆ ಭಾಗದಲ್ಲಿ ಯಂತ್ರಣೆಯನ್ನು ಮಾಡುವಾಗ ತುಂಡಿನ ಆಳವು 5 ಮಿ.ಮೀ.ನಷ್ಟು ಇರುವುದೂ ಆತ್ಯಾವಶ್ಯಕವಾಗಿತ್ತು. ಹೊರ ವ್ಯಾಸದ ಮತ್ತು ಅದರ ಫ್ಲಂಜ್‌ನಲ್ಲಿ ಇಂಟರಪ್ಟೆಡ್ ಯಂತ್ರಣೆಯನ್ನು ಮಾಡಬೇಕಾಗುತ್ತಿತ್ತು. ಸರ್ಫೇಸ್ ಪಿನಿಶ್ h6, g6 ಮತ್ತು p6 ಟಾಲರನ್‌ಸ್‌‌ನಲ್ಲಿ, ಆದರೆ Ra ಮೌಲ್ಯ N6 ಗುಣಮಟ್ಟದಷ್ಟು ನಿರೀಕ್ಷಿಸಲಾಗಿತ್ತು. ಸರ್ಫೇಸ್‌ನಲ್ಲಿ ಎಲ್ಲಿಯೂ ಟೂಲ್ ಮಾರ್ಕ್ ನಡೆಯುವುದಿಲ್ಲ. ಇದರಿಂದಾಗಿ ಮಶಿನ್‌ನ ಆಯ್ಕೆ ಮಾಡುವಾಗ ಕೇವಲ ಯಂತ್ರಭಾಗಗಳ ಗಾತ್ರದೊಂದಿಗೆ ಹೊಂದಿಕೊಳ್ಳುವ ಮಶಿನ್ ನಡೆಯುತ್ತಿರಲಿಲ್ಲ, ಆದರೆ ಗುಣಮಟ್ಟ ಮತ್ತು ಸಂಖ್ಯೆ ಇವೆಲ್ಲದರ ನಿರೀಕ್ಷೆಯನ್ನೂ ಪೂರ್ತಿ ಮಾಡುವ ಮಶಿನ್ ಅಪೇಕ್ಷಿಸಲಾಗಿತ್ತು.
 
ಈ ಯಂತ್ರಭಾಗಗಳು ರೊಟೇಶನ್‌ನ ಅಕ್ಷದಲ್ಲಿ ಸಿಮೆಟ್ರಿಕಲ್ ಇಲ್ಲದಿರುವುದರಿಂದ ಯಂತ್ರಣೆಯನ್ನು ಮಾಡುವಾಗ ದೊಡ್ಡ ಪ್ರಮಾಣದಲ್ಲಿ ಅಸಮತೋಲನೆ ಮತ್ತು ಕಂಪನಗಳೂ ಉಂಟಾಗುತ್ತಿದ್ದವು. ಇದರಿಂದಾಗಿ ಕಾರ್ಯವಸ್ತುವಿನ ಮೂರೂ ಮಹತ್ವಪೂರ್ಣವಾದ ಬೇಡಿಕೆಗಳನ್ನು ಪೂರೈಸಲು ಜ್ಯೋತಿ ಸಿ.ಎನ್.ಸಿ. ಇವರ DX500 ನ ಆಯ್ಕೆಯನ್ನು ಮಾಡಲಾಯಿತು. ಉಚ್ಚಮಟ್ಟದ ನಿಖರತೆಯ ಸ್ಪಿಂಡಲ್ ಮತ್ತು ಟರೇಟ್ ಇದರೊಂದಿಗೆ ದೃಢವಾದ ರಚನೆ ಮತ್ತು ದೃಢವಾದ ಮಶಿನ್‌ನ ನಿರ್ಮಾಣದಿಂದಾಗಿ ನಿರೀಕ್ಷಿಸಿರುವ ಪರಿಣಾಮಗಳನ್ನು ಪಡೆಯುವುದು ಸಾಧ್ಯವಾಯಿತು. ಈ ಮಶಿನ್ ಸಮಾಧಾನಕಾರಕವಾಗಿ ಔಟ್‌ಪುಟ್ ಕೊಡುತ್ತಿದ್ದು ಉತ್ಪಾದನೆಯ ಶ್ರೇಣಿಯಲ್ಲಿ ತಮ್ಮ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.
 

Ambrish Nasit_1 &nbs 
ಅಂಬರೀಶ್ ನಸೀತ್
ಸಹಾಯಕ ವ್ಯವಸ್ಥಾಪಕರು
(ಟೆಕ್ನಿಕಲ್ ಸಪೋರ್ಟ್)
ಜ್ಯೋತಿ ಸಿ.ಎನ್.ಸಿ. ಆಟೊಮೇಶನ್ ಲಿ. 
9879571116
ambasish.nasit@jyoti.co.in
 
ಅಂಬರೀಷ್ ನಸೀತ್ ಇವರು ‘ಜ್ಯೋತಿ ಸಿ.ಎನ್.ಸಿ. ಆಟೊಮೇಶನ್ ಲಿ.’ ಈ ಕಂಪನಿಯಲ್ಲಿ ಸಹಾಯಕ ವ್ಯವಸ್ಥಾಪಕರು (ಟೆಕ್ನಿಕಲ್ ಸಪೋರ್ಟ್) ಎಂಬ ಹುದ್ದೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಎಸ್.ಆರ್.ಇ.ಝೆಡ್. ಇಂಜಿನಿಯರಿಂಗ್ ವಿಶ್ವವಿದ್ಯಾಲಯದಲ್ಲಿ (ರಾಜ್‌ಕೋಟ್) ಕಳೆದ 5 ವರ್ಷಗಳಿಂದ ಪ್ರಾಧ್ಯಾಪಕರಾಗಿದ್ದಾರೆ. ‘ಮ್ಯಾನಿಫ್ಯಾಕ್ಟರಿಂಗ್ ಪ್ರೊಸೆಸ್-II’ ಎಂಬ ಪುಸ್ತಕವನ್ನು                                                       ಆಂಗ್ಲ ಭಾಷೆಯಲ್ಲಿ ಬರೆದಿದ್ದಾರೆ.
 
 
Powered By Sangraha 9.0