ಕಾಸ್ಟ್ ಆಯರ್ನ್ ಟರ್ನಿಂಗ್‌ಗೆ ISO ಇನ್ಸರ್ಟ್

10 Dec 2019 15:03:00
 
ಕಾಸ್ಟ್ ಆಯರ್ನ್‌ನಲ್ಲಿ ಕಾರ್ಬನ್‌ನ ಪ್ರಮಾಣವು 2.1 ರಿಂದ 6.7% ಇರುತ್ತದೆ. ಕಬ್ಬಿಣದವು ಸುಮಾರು 14000 ಸೆಂಟಿಗ್ರೇಡ್‌ನಲ್ಲಿ ಕರಗುತ್ತದೆ ಮತ್ತು ಅಚ್ಚು ಸುರಿಯಲಾಗುತ್ತದೆ. ಇದರಿಂದಾಗಿ ಅದರ ಅಪೇಕ್ಷಿಸಿರುವ ಆಕಾರವನ್ನು ತಯಾರಿಸುವುದು ಸುಲಭವಾಗುತ್ತದೆ. ಕಾಸ್ಟ್ ಆಯರ್ನ್‌ನ ಗ್ರೆ ಕಾಸ್ಟ್ ಆಯರ್ನ್ ಮತ್ತು ಡಕ್ಟೈಲ್ ಕಾಸ್ಟ್ ಆಯರ್ನ್ ಈ ಎರಡು ವಿಧಗಳೂ ಅನೇಕ ಯಂತ್ರಭಾಗಗಳಿಗೆ ಬಳಸಲಾಗುತ್ತವೆ.
 
ಗ್ರೆ ಕಾಸ್ಟ್ ಆಯರ್ನ್
 

1_1  H x W: 0 x 
 
 
2_1  H x W: 0 x
 
ಯಾವಾಗಲೂ ಬಳಕೆಯಲ್ಲಿರುವ ಕಾಸ್ಟ್ ಆಯರ್ನ್‌ಗೆ ‘ಗ್ರೆ ಕಾಸ್ಟ್ ಆಯರ್ನ್ ಎಂದು’ ಹೇಳಲಾಗುತ್ತದೆ. ಇದರ ಸರ್ಫೇಸ್‌ನ ಬಣ್ಣವು ಬೂದು (ಗ್ರೇ) ಆಗಿದ್ದು ಅದರಲ್ಲಿರುವ ಸವೆತದ ಪ್ರತಿರೋಧದ ಗುಣಧರ್ಮವು ತುಂಬಾ ಉಚ್ಚಮಟ್ಟದ್ದಾಗಿರುತ್ತದೆ. ಕಾರಣ ಅದರಲ್ಲಿರುವ ಗ್ರಾಫೈಟ್‌ನ ಕಣಗಳು ಫ್ಲೆಕ್ಸ್‌ನ ಗಾತ್ರದ್ದಾಗಿದ್ದು ಯಾವುದೇ ಕಾರ್ಯವಸ್ತುವಿನ ಸರ್ಫೇಸ್‌ನಲ್ಲಿ ವಿಸ್ತಾರವಾದ ಪ್ರದೇಶವನ್ನು ವ್ಯಾಪಿಸಿ ಲುಬ್ರಿಕೇಶನ್‌ನ ಕೆಲಸವನ್ನು ನಿರ್ವಹಿಸುತ್ತದೆ. ಆದರೆ ಅದರಿಂದಾಗಿ ಲೋಹದ ಕಣಗಳು ವಿಂಗಡಿಸಲ್ಪಟ್ಟು ಕಾಸ್ಟ್ ಆಯರ್ನ್ ಮೆತ್ತಗಾಗುತ್ತದೆ ಮತ್ತು ಕಂಪನಗಳ ಶಕ್ತಿಯೂ ವೃದ್ಧಿಸುತ್ತದೆ. ಇದರಿಂದಾಗಿ ಮಶಿನ್‌ನ ಬೆಡ್ ಅಥವಾ ಇಂಜಿನ್‌ನ ವೈಬ್ರೇಶನ್ ಉಂಟಾಗುವಂತಹ ಭಾಗಗಳನ್ನು ಈ ಲೋಹಗಳಿಂದ ತಯಾರಿಸುತ್ತಾರೆ. ಇದರಿಂದ ಕಡಿಮೆ ದಪ್ಪವಿರುವ ಭಾಗಗಳನ್ನು ತಯಾರಿಸುವುದೂ ಸಾಧ್ಯವಿದ್ದರಿಂದ ಅಷ್ಟೇ ಶಕ್ತಿಯ, ಆದರೆ ಕಡಿಮೆ ಭಾರವಿರುವ ವಸ್ತುಗಳನ್ನೂ ತಯಾರಿಸಬಹುದಾಗಿದೆ. ಗ್ರೇ ಕಾಸ್ಟ್ ಆಯರ್ನ್‌ನ ಸೂಕ್ಷ್ಮ ರಚನೆಯನ್ನು (ಮೈಕ್ರೋ ಸ್ಟ್ರಕ್ಚರ್) ಚಿತ್ರ ಕ್ರ. 1 ರಲ್ಲಿ ಮುಕ್ತ ಗ್ರಾಫೈಟ್ ಕಪ್ಪು ಬಣ್ಣದಿಂದ ತೋರಿಸಲಾಗಿದೆ.
 
ಡಕ್ಟೈಲ್ ಕಾಸ್ಟ್ ಆಯರ್ನ್
 
ಈ ವಿಧದ ಕಾಸ್ಟ್ ಆಯರ್ನ್‌ನಲ್ಲಿ ಒತ್ತಡವಿರುವ ಶಕ್ತಿಯು (ಟೆನ್ಸೈಲ್) ಹೆಚ್ಚಾಗಿರುತ್ತದೆ. ಆದ್ದರಿಂದ ಇದನ್ನು ಡಕ್ಟೈಲ್ ಕಾಸ್ಟ್ ಆಯರ್ನ್ ಎಂದು ಹೇಳುತ್ತಾರೆ. ಅದಕ್ಕೆ ‘ಸ್ಟೆರೈಡಲ್ ಗ್ರಾಫೈಟ್’ ಕಾಸ್ಟ್ ಆಯರ್ನ್ ಅಥವಾ ‘ನೊಡ್ಯುಲರ್’ ಕಾಸ್ಟ್ ಆಯರ್ನ್ ಎಂಬುದಾಗಿಯೂ ಗುರುತಿಸಲಾಗುತ್ತದೆ.
 
ಗ್ರೆ ಕಾಸ್ಟ್ ಆಯರ್ನ್‌ನ ನಿರ್ಮಾಣದಲ್ಲಿ ಗ್ರಾಫೈಟ್ ಲಿನಿಯರ್ ಫ್ಲೆಕ್ಸ್‌ನ ರೂಪದಲ್ಲಿರುತ್ತದೆ. ಆದರೆ ಮೃದುವಾದ ಕಾಸ್ಟ್ ಆಯರ್ನ್‌ನಲ್ಲಿ ಅದು ಉರುಟಾಗಿರುತ್ತದೆ (ಸ್ಪೆರೈಡಲ್). ಈ ಉರುಟಾದ ಕಣಗಳು ತುಂಬಾ ಹತ್ತಿರ ಹತ್ತಿರ ಮತ್ತು ಕಾಂಪ್ಯಾಕ್ಟ್ ಆಗಿರುವುದರಿಂದ ಮಟೀರಿಯಲ್‌ನ ಟಫ್‌ನೆಸ್ ಹೆಚ್ಚಾಗುತ್ತದೆ. ಇದರಿಂದಾಗಿ ಸಡಿಲತನದಿಂದ ಉಂಟಾಗುವ ಸಮಸ್ಯೆಗಳನ್ನು ತಡೆಯಬಹುದಾಗಿದೆ. ಒಳ್ಳೆಯ ಟೆನ್ಸೈಲ್ ಬಲದಿಂದಾಗಿ ಯಾವ ಭಾಗಗಳಲ್ಲಿ ಹೆಚ್ಚು ಬಲವನ್ನು ಸಹಿಸಬೇಕಾಗುತ್ತದೆಯೋ (ಉದಾಹರಣೆ, ಹೈಡ್ರಾಲಿಕ್ ಸಿಲಿಂಡರ್‌ನ ಭಾಗಗಳು ಅಥವಾ ಪ್ರೆಶರ್ ಮೋಲ್ಡ್) ಅವುಗಳಿಗೆ ಈ ಮಟೀರಿಯಲ್ ಬಳಸಲಾಗುತ್ತದೆ. ಡಕ್ಟೈಲ್ ಕಾಸ್ಟ್ ಆಯರ್ನ್‌ನ ಸೂಕ್ಷ್ಮವಾದ ರಚನೆಯನ್ನು ಚಿತ್ರ ಕ್ರ. 2 ರಲ್ಲಿ ತೋರಿಸಲಾಗಿದ್ದು, ಸ್ಫೆರೈಡಲ್ ಗ್ರೆಫೈಟ್ ಕಪ್ಪು ಬಣ್ಣದಿಂದ ತೋರಿಸಲಾಗಿದೆ.
 
ಕಾಸ್ಟ್ ಆಯರ್ನ್‌ನ ಯಂತ್ರಣೆಯ ಸಾಮರ್ಥ್ಯ
 

3_1  H x W: 0 x 
 

4_1  H x W: 0 x 
 
ISO ಇವರು 1958 ರಲ್ಲಿ ಮಾಡಿರುವ ವರ್ಗೀಕರಣದಲ್ಲಿ ಗ್ರೂಪ್ K ಯಲ್ಲಿರುವ ಮಟೀರಿಯಲ್ ಗುರುತಿಸುವ ಚಿಹ್ನೆಯನ್ನು ಹೇಗೆ ಇಟ್ಟಿದ್ದರೆಂದರೆ, ಯಂತ್ರಣೆಯ ನಂತರ ಇದರ ಚಿಪ್‌ಗಳು ನಿರಂತರವಾಗಿ ಬರದೇ ತುಂಡು ತುಂಡಾಗಿ ಬರುತ್ತವೆ. ಈ ಗ್ರೂಪ್ K ನಲ್ಲಿರುವ ಮಟೀರಿಯಲ್‌ನಲ್ಲಿ ಕಾಸ್ಟ್ ಆಯರ್ನ್‌ನ ಭಾಗಗಳೂ ಸೇರಿವೆ. ಯಂತ್ರಣೆಯ ಸಮಯದಲ್ಲಿ ಉಂಟಾಗುವ ತುಂಡು ತುಂಡಾದ ಚಿಪ್‌ಗಳು ತಯಾರಾಗುತ್ತಿರುವಾಗ ಉಂಟಾಗುವ ಕಂಪನಗಳಿಂದಾಗಿ ಟೂಲ್‌ನ ಯಂತ್ರಣೆಯ ಬದಿಯಲ್ಲಿ ತುಂಡುಗಳು ಬೀಳುವ ಸಾಧ್ಯತೆಯು ಇರುತ್ತದೆ. ತುಂಡಾಗಿರುವ ಚಿಪ್‌ಗಳು ತಯಾರಾಗುವಾಗ ಕಾರ್ಯವಸ್ತುವಿನ ಸರ್ಫೇಸ್ ಕೂಡಾ ಒರಟಾಗುವುದರಿಂದ ಘರ್ಷಣೆಯಿಂದಾಗಿ ಟೂಲ್‌ನ ಸವೆತವೂ ಉಂಟಾಗುತ್ತದೆ. ಇತ್ತಿಚೇಗೆ K ಗ್ರೂಪ್‌ನಲ್ಲಿ ಉಚ್ಚ (ಹೈ) ಗ್ರೇಡ್‌ನ ಕಾಸ್ಟ್ ಆಯರ್ನ್ ಸೇರಿಸಲಾಗಿದೆ. ಅದು ಹೆಚ್ಚು ಕಠಿಣ ಮತ್ತು ದೃಢವಾದ ಮಟೀರಿಯಲ್ ಆಗಿರುವುದರಿಂದ ಹಲವಾರು ಕಾಸ್ಟ್ ಆಯರ್ನ್‌ನ ಯಂತ್ರಣೆಗೋಸ್ಕರ ಕಷ್ಟಕರವೆಂದು ತಿಳಿಯಲಾಗುತ್ತದೆ. ಈ ಉಚ್ಚ ಗ್ರೇಡ್ ಕಾಸ್ಟ್ ಆಯರ್ನ್‌ನಲ್ಲಿ (ಡಕ್ಟೈಲ್ ಮತ್ತು ಮ್ಯಾಲಿಯೇಬಲ್) ಯಾವಾಗಲೂ ತುಂಡು ತುಂಡಾಗಿರುವ ಚಿಪ್‌ಗಳು ಬರುತ್ತವೆ ಎಂದು ಹೇಳಲಾಗುವುದಿಲ್ಲ. ಅದ್ದರಿಂದ ಚಿಪ್‌ನ ನಿಯಂತ್ರಣೆಯು ಹೆಚ್ಚು ಪ್ರಮುಖವಾಗಿದೆ.
 
ಉಚ್ಚ ಗ್ರೇಡ್ ಕಾಸ್ಟ್ ಆಯರ್ನ್ ಯಂತ್ರಣೆಗೆ ತಡೆಯನ್ನುಂಟು ಮಾಡುತ್ತಿರುವುದರಿಂದ ಟೂಲ್‌ನ ತುಂಡುಗಳು ಬೀಳುವುದು, ಹೆಚ್ಚು ಉಷ್ಣತೆಯು ತಯಾರಾಗುವುದು ಮತ್ತು ಕ್ರೇಟರ್‌ನ ಸವೆತವಾಗುವಂತಹ ಸಮಸ್ಯೆಯು ಉಂಟಾಗುತ್ತದೆ. ಒರಟಾದ ಸರ್ಫೇಸ್ ಈ ಲೋಹದ ಇನ್ನೊೊಂದು ವೈಶಿಷ್ಟ್ಯವಾಗಿದೆ. ಅದರ ಕಾರಣವೆಂದರೆ ಕಾಸ್ಟಿಂಗ್ ಆಗುತ್ತಿರುವಾಗ ಸರ್ಫೇಸ್‌ನ ಕುಗ್ಗುವಿಕೆ ಮತ್ತು ಹರಡುವಿಕೆಯು ಆಗುತ್ತಿರುತ್ತದೆ. ಹಾಗೆಯೇ ಉಷ್ಣತೆಯಿಂದಾಗಿ ಸರ್ಫೇಸ್‌ನಲ್ಲಿ ಆಕ್ಸಿಡೇಶನ್ ಆಗುತ್ತಿರುವುದರಿಂದ ಅದು ಹೆಚ್ಚು ಪ್ರಮಾಣದಲ್ಲಿ ಕಠಿಣವಾಗುತ್ತದೆ. ಇದರಿಂದಾಗಿ ಸರ್ಫೇಸ್‌ನಲ್ಲಿ ತಯಾರಾಗಿರುವ ಪೊರೆಗಳು (ಮೆಂಬ್ರೆನ್ಸ್) ಯಂತ್ರಣೆಗೋಸ್ಕರ ಅಡಚಣೆಯನ್ನುಂಟು ಮಾಡುತ್ತವೆ.
 
ಸ್ಯಾಂಡ್ ಮೋಲ್ಡ್‌ನಲ್ಲಿ ಕಾಸ್ಟ್ ಆಯರ್ನ್ ತಯಾರಿಸುವಾಗ ಕರಗಿರುವ ಕಬ್ಬಿಣವು ಈ ಮರಳಿನ (ಸ್ಯಾಂಡ್) ಮೋಲ್ಡ್‌ನಲ್ಲಿ ಸುರಿಯಲಾಗುತ್ತದೆ. ಆಗ ಮರಳಿನ ಕಣಗಳು ಕಬ್ಬಿಣದ ಸರ್ಫೇಸ್‌ನಲ್ಲಿ ಬೆರೆಸಲ್ಪಡುವ ಸಾಧ್ಯತೆಯು ಇರುತ್ತದೆ. ಇಂತಹ ಮರಳಿನ ಕಣಗಳಿಂದ ಪರಿಣಾಮ ಹೊಂದಿರುವ ಸರ್ಫೇಸ್‌ನ ಯಂತ್ರಣೆಯ ಸಾಮರ್ಥ್ಯವು ಕಡಿಮೆ ಇರುವುದರಿಂದ ಟೂಲ್‌ನ ಆಯುಷ್ಯವು ಕಡಿಮೆಯಾಗುತ್ತದೆ. ಈ ಪರಿಸ್ಥಿತಿಯಲ್ಲಿ ಕಠಿಣತೆ, ಒರಟಾಗಿರುವ ಸರ್ಫೇಸ್, ಉಚ್ಚ ಟೆನ್ಸೈಲ್ ಸ್ಟ್ರೆಂಥ್ ಮತ್ತು ಹೆಚ್ಚು ಯಂತ್ರಣೆಯ ಪ್ರತಿರೋಧಶಕ್ತಿ ಇರುವ ಕಾಸ್ಟ್ ಆಯರ್ನ್‌ನ ಯಂತ್ರಣೆಯನ್ನು ಮಾಡುವಾಗ ಟೂಲ್‌ನ ಬಲ ಮತ್ತು ಉಷ್ಣಾಂಶವನ್ನು ಸಹಿಸುವ ಸಾಮರ್ಥ್ಯವು ಉಚ್ಚಮಟ್ಟದ್ದು ಇರಬೇಕಾಗುತ್ತದೆ.
 
ಪ್ರಚಲಿತವಾದ ಟೂಲ್‌ನ ಸವೆತದ ವಿಶ್ಲೇಷಣೆಯನ್ನು ಮಾಡಿದಾಗ, ಸವೆತವು ಮುಖ್ಯವಾಗಿ ‘ಎಬ್ರೆಸಿವ್’ ವಿಧದ ಸವೆತವಾಗಿರುತ್ತದೆ, ಕಾರಣ ಕಾಸ್ಟ್ ಆಯರ್ನ್ ಯಂತ್ರಣೆಯನ್ನು ಮಾಡುವಾಗ ತಯಾರಾಗುವ ಚಿಪ್‌ಗಳು ಸಣ್ಣ ಧೂಳಿನ ಕಣಗಳ ರೂಪದಲ್ಲಿ ಇರುವುದು ಗಮನಕ್ಕೆ ಬಂತು. ಯಂತ್ರಣೆಯಾಗುತ್ತಿರುವಾಗ ಈ ಕಣಗಳು ನಿರಂತರವಾಗಿ ಟೂಲ್‌ನ ಬದಿಯಲ್ಲಿ ಅಪ್ಪಳಿಸುತ್ತಿರುತ್ತವೆ. ಇದರಿಂದಾಗಿ ಟೂಲ್‌ಗೆ ಲೇಪನ ಮಾಡಲಾಗಿದ್ದರೂ ಕೂಡಾ, ಅದರ ಪೊರೆಗಳು ಹಾರಿ ಒಳಗಿನ ಮೂಲ ಮಟೀರಿಯಲ್ ತೆರೆಯಲ್ಪಡುತ್ತದೆ ಮತ್ತು ಅದರಿಂದಾಗಿ ಅದರ ಸವೆತವು ವೇಗವಾಗಿ ಆಗುತ್ತದೆ. ಆದರೆ ಈ ಹೊಸ ತಂತ್ರದಿಂದ ಮಾಡಿರುವ ಲೇಪನದಿಂದಾಗಿ ಅದರ ಪೊರೆಗಳು ಹಾರುವುದಿಲ್ಲ ಮತ್ತು ಅದರಿಂದಾಗಿ ಮಟೀರಿಯಲ್‌ನ ಗುಣಧರ್ಮಕ್ಕೆ ಅನುಸಾರವಾಗಿ ಸಾಮಾನ್ಯವಾದ ಸವೆತವಾಗಬೇಕೋ, ಅಷ್ಟೇ ಸವೆತವಾಗುತ್ತದೆ.
 
ಈ ಸಮಸ್ಯೆಯ ಕುರಿತು ಸಂಶೋಧನೆಯನ್ನು ಮಾಡಿ ಮಿತ್ಸುಬಿಶಿ ಮಟೀರಿಯಲ್ ಕಾರ್ಪೊರೇಶನ್ ಮೆಟಲ್ ವರ್ಕಿಂಗ್ 
 
ಸಲ್ಯೂಶನ್ ಕಂಪನಿಯವರು ಟೂಲ್‌ಗಳ ಲೇಪನಕ್ಕೆ ಅಗತ್ಯವಿರುವ ಬದಲಾವಣೆಗಳನ್ನು ಮಾಡಿದರು ಮತ್ತು ಕಾಸ್ಟ್ ಆಯರ್ನ್ ಟರ್ನಿಂಗ್‌ಗೋಸ್ಕರ ಹೊಸ ISO ಇನ್ಸರ್ಟ್ ಪ್ರಸ್ತುತ ಪಡಿಸಿದೆವು. MC5005 ಸಿ.ವಿ.ಡಿ. ಲೇಪನ ಮಾಡಿರುವ ಕಾರ್ಬೈಡ್ ಟೂಲ್ ಅಭಿವೃದ್ಧಿ ಪಡಿಸಲಾಗಿದೆ. ಇದರ ಯಂತ್ರಣೆಯ ವೇಗವು ಸಿರ್ಯಾಮಿಕ್ ಗ್ರೇಡ್‌ಗೆ ಸರಿಸಮಾನವಾಗಿ (600 ಮೀ./ ನಿಮಿಷಗಳ ತನಕ) ಲಭಿಸುತ್ತದೆ. ಇದರಿಂದಾಗಿ ಯಂತ್ರಣೆಯ ಕಾರ್ಯಸಾಮರ್ಥ್ಯವು ಹೆಚ್ಚಾಗಬಲ್ಲದು. MC5005 ಮತ್ತು MC5015 ಈ ಲೇಪನ ಮಾಡಿರುವ ಟೂಲ್‌ನಿಂದಾಗಿ ಯಂತ್ರಣೆಯ ಖರ್ಚಿನಲ್ಲಿ ಉಳಿತಾಯವಾಗಿ ಕಾಸ್ಟ್ ಆಯರ್ನ್ ಯಂತ್ರಣೆಯು ತುಂಬಾ ಸುಲಭವಾಗುತ್ತದೆ.
 
MC5005 ಮತ್ತು MC5015 ನ ವೈಶಿಷ್ಟ್ಯಗಳು
1. ಹೆಚ್ಚು ದಪ್ಪವಿರುವ AL2O3 ಲೇಪನದ ಸ್ತರ
 
ಹೊಸದಾದ ಲೇಪನದ ತಂತ್ರಜ್ಞಾನವನ್ನು ಬಳಸಿ ಪಡೆದಿರುವ ಸ್ತರವು ಸಾಂಪ್ರದಾಯಿಕವಾದ ಟೂಲ್‌ನಲ್ಲಿರುವ ಸ್ತರಕ್ಕಿಂತ ಇಮ್ಮಡಿಗಿಂತಲೂ ಹೆಚ್ಚು ದಪ್ಪದ್ದಾಗಿರುತ್ತದೆ. (ಚಿತ್ರ ಕ್ರ. 5).
 
2. ಅಪ್ಲಿಕೇಶನ್ ರೇಂಜ್
 

7_1  H x W: 0 x 
 

6_1  H x W: 0 x 
 

5_1  H x W: 0 x 
 

8_1  H x W: 0 x 
 
 
ಸಿರ್ಯಾಮಿಕ್ ಟೂಲ್‌ಗಳ ಗುಣಮಟ್ಟದಲ್ಲಿ ಯಂತ್ರಣೆಯ ವೇಗವನ್ನು ಪಡೆಯಬಹುದು. ಕಾರಣ AL2O3 ಈ ಮಟೀರಿಯಲ್ ಸಿರ್ಯಾಮಿಕ್ ಗುಣಮಟ್ಟದ ಮಟೀರಿಯಲ್ ಆಗಿರುತ್ತದೆ. ಇದರಿಂದಾಗಿ ಕಾಸ್ಟ್ ಆಯರ್ನ್ ಯಂತ್ರಣೆಗೆ ತಗಲುವ ಖರ್ಚನ್ನು ಕಡಿಮೆ ಮಾಡಬಹುದು. ಟೂಲ್‌ನ ಬಾಳಿಕೆ ಮತ್ತು ಯಂತ್ರಣೆಯ ಬದಿಗಳ ಹೊಸ ಡಿಸೈನ್‌ನಿಂದಾಗಿ (ಸುಧಾರಿಸಿರುವ ಲೇಪನದ ರೀತಿ) ಇದು ಸಾಧ್ಯವಾಗಿದೆ. MC5005 ಈ ವಿಧದ ಟೂಲ್ ಸ್ಟೇಬಲ್ ಮತ್ತು
 
 
9_1  H x W: 0 x
 
ಸಾಮಾನ್ಯವಾದ ಯಂತ್ರಣೆಗೋಸ್ಕರ ಉಪಯುಕ್ತವಾಗಿದೆ. ಆದರೆ MC5015 ಈ ವಿಧದ ಟೂಲ್‌ಗಳು ಅನ್‌ಸ್ಟೇಬಲ್ ಯಂತ್ರಣೆಗೋಸ್ಕರ (ಕೋಷ್ಟಕ ಕ್ರ. 1 ಮತ್ತು ಗ್ರಾಫ್ ಕ್ರ. 1) ಬಳಸಲಾಗುತ್ತದೆ. ಈ ವಿಧದ ಯಂತ್ರಣೆಯಲ್ಲಿ ಉಂಟಾಗುವ ತಳ್ಳುವಿಕೆ, ತುಂಡುಗಳ ಅಸಮಾನವಾದ ಆಳ ಮತ್ತು ಟೂಲ್‌ಗಳನ್ನು ಹೋಲಿಸಿದಲ್ಲಿ ಕಡಿಮೆ ದೃಢತೆಯ ಹಿಡಿತ ಇಂತಹ ಸಮಸ್ಯೆಗಳನ್ನು ಎದುರಿಸಲು ಅದರಲ್ಲಿರುವ ಲೇಪನವನ್ನು (ಚಿತ್ರ ಕ್ರ. 5) ವಿಶಿಷ್ಟವಾದ ರೀತಿಯಲ್ಲಿ ಮಾಡಲಾಗಿದೆ.
 
3. ಟಫ್ ಗ್ರಿಪ್
 
ಪೆಟೆಂಟೆಡ್ ತಂತ್ರಜ್ಞಾನದಿಂದ ತಯಾರಿಸಿರುವ ಇಂತಹ ಸ್ತರದ ಗ್ರೇನ್ ಸ್ಟ್ರಕ್ಚರ್ ನ್ಯಾನೋ ಮಾಪನಗಳಲ್ಲಿ ನಿಯಂತ್ರಿಸಲ್ಪಟ್ಟಿರುತ್ತದೆ. ಇದರಿಂದಾಗಿ ಅದರಲ್ಲಿರುವ ಬಂಧನ ಹೆಚ್ಚು ದೃಢವಾಗಿರುತ್ತದೆ. ಈ ಕಠಿಣ ಹಿಡಿತದಿಂದ (ಟಫ್ ಗ್ರಿಪ್) ಲೇಪನದದಿಂದ ಸವೆತವನ್ನು ತಡೆಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಲೇಪನದ ಸ್ತರವು ಹೆಚ್ಚು ಬಲಶಾಲಿಯಾಗುತ್ತವೆ. ಇದಕ್ಕೋಸ್ಕರ ವಿಶೇಷವಾದ HRC91.0 ಇಂತಹ ಮೂಲ ಮಟೀರಿಯಲ್ (ಸಬ್‌ಸ್ಟ್ರೇಟ್) ಬಳಸಲಾಗುತ್ತದೆ.
 
ಟಫ್ ಗ್ರಿಪ್ (ಚಿತ್ರ ಕ್ರ. 6) ಇದು ನಮ್ಮ ಪೆಟೆಂಟೆಡ್ ತಂತ್ರಜ್ಞಾನವಾಗಿದೆ. ಮಟೀರಿಯಲ್‌ನ ಕೆಳಗಿನ ಸ್ತರದ ಅಸ್ಪಷ್ಟತೆಗೆ ಪ್ರತಿರೋಧವಾಗಲು ಟಫ್ ಗ್ರಿಪ್ ತಂತ್ರಜ್ಞಾನವನ್ನು ಅಸ್ತಿತ್ವಕ್ಕೆ ತರಲಾಯಿತು. AL2O3 ಇದರ ಸ್ತರವು ತುಂಬಾ ದಪ್ಪ ಇದ್ದರೂ ಕೂಡಾ ಈ ತಂತ್ರಜ್ಞಾನದಿಂದಾಗಿ ಅದರ ಪಿಲಿಂಗ್ ಯೋಗ್ಯವಾಗಿ ಆಗುತ್ತದೆ. ಸಾಂಪ್ರದಾಯಿಕ ತಂತ್ರಜ್ಞಾನದಲ್ಲಿ ಯಂತ್ರಣೆಯ ಮೊದಲು ತುಂಬಾ ಬೇಗನೆ ಪಿಲಿಂಗ್ ಆಗುವುದರಿಂದ ಮಟೀರಿಯಲ್‌ನಲ್ಲಿ ದಪ್ಪದ ಸ್ತರವು ಉಂಟಾಗುವುದರಿಂದ ಸಾಂಪ್ರದಾಯಿಕ ರೀತಿಯಲ್ಲಿ (ಚಿತ್ರ ಕ್ರ. 7) ಅದರ ಪ್ರಭಾವಶಾಲಿಯಾದ ಪರಿಣಾಮವು ಕಂಡುಬರುತ್ತದೆ.
 
ಕಾಸ್ಟ್‌ ಆಯರ್ನ್ ಯಂತ್ರಣೆಯ ಉದಾಹರಣೆಗಳು
 
ಉದಾಹರಣೆ 1
 
ಕಾರ್ಯವಸ್ತುವಿನ ಸರ್ಫೇಸ್ ಅಸಮಾನವಾಗಿದ್ದರಿಂದ ಅದರಲ್ಲಿ ಟೂಲ್‌ನ ಆಯುಷ್ಯವನ್ನು ಹೆಚ್ಚಿಸುವುದು, ಹಾಗೆಯೇ ಯಂತ್ರಣೆಯ ಸಮಯವನ್ನು ಕಡಿಮೆ ಮಾಡುವಂತಹ ಸವಾಲುಗಳಿದ್ದವು. ಇದಕ್ಕೋಸ್ಕರ ನಮ್ಮ ಇನ್ಸರ್ಟ್ ಬಳಸಿ ಮಾಡಿರುವ ಬದಲಾವಣೆಗಳು ಮತ್ತು ಲಾಭಗಳನ್ನು ಈ ಕೆಳಗೆ ನೀಡಲಾಗಿದೆ.
 

10_1  H x W: 0  
 
ಉದಾಹರಣೆ 2
 
ಕಾರ್ಯವಸ್ತುವಿನ ಯಂತ್ರಣೆಯನ್ನು ಮಾಡುತ್ತಿರುವಾಗ ಮುಂಚಿನ ಯಂತ್ರಣೆಯ ಪ್ಯಾರಾಮೀಟರ್‌ಗಳನ್ನು ಹಾಗೆಯೇ ಇಟ್ಟು ಟೂಲ್‌ನ ಬಾಳಿಕೆಯಲ್ಲಿ ಹೆಚ್ಚಳವಾಯಿತು.
 

11_1  H x W: 0  
 
 
 

Nitin Kshirsagar_1 & 
ನಿತೀನ್ ಕ್ಷೀರಸಾಗರ್
ತಂಡದ ನಾಯಕರು (ತಾಂತ್ರಿಕ ಸಹಾಯ ವಿಭಾಗ)
MMC ಹಾರ್ಡ್‌ಮೆಟಲ್ ಇಂಡಿಯಾ ಪ್ರೈ.ಲಿ.
9371276736
nitin.kshirsagar@mmci.co.in
 
ನಿತೀನ್ ಕ್ಷೀರಸಾಗರ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. MMC ಹಾರ್ಡ್‌ಮೆಟಲ್ ಇಂಡಿಯಾ ಪ್ರೈ.ಲಿ. ಈ ಕಂಪನಿಯಲ್ಲಿ ತಾಂತ್ರಿಕ ಸಹಾಯ ವಿಭಾಗದಲ್ಲಿ ಟೀಮ್ ಲೀಡರ್ ಆಗಿದ್ದಾರೆ. ಕಟಿಂಗ್ ಟೂಲ್‌ನ ಸೇಲ್‌ಸ್‌ ಮತ್ತು ಅಪ್ಲಿಕೇಶನ್ ಕ್ಷೇತ್ರದಲ್ಲಿ ಅವರಿಗೆ 15 ವರ್ಷಗಳ ಅನುಭವ ಇದೆ.
 
 
Powered By Sangraha 9.0