ಸಿ.ಎಮ್.ಎಮ್. ಒಂದು ವಿಚಾರ

@@NEWS_SUBHEADLINE_BLOCK@@

Lohkarya - Udyam Prakashan    06-Sep-2021   
Total Views |
ಹಿಂದ್ ಕ್ರ್ಯಾಂಕ್ ಶಾಫ್ಟ್ ನ ಪ್ರಾಡಕ್ಷನ್ ಮ್ಯಾನೆಜರ್ ಸುರ್ವೆ ಸಾಹೇಬ್ರು ಇಂಟರ್ ಕಾಮ್ ನಲ್ಲಿ ಯಾರೊಂದಿಗೊ ಮಾತನಾಡುತ್ತಿದ್ದರು. ಆದರೆ ಎದುರು ಎಕ್ಸಿಕ್ಯುಟಿವ್ ಡೈರೆಕ್ಟರ್ ನ ಖಾಸಗಿ ಸಹಾಯಕರು ನೇರವಾಗಿ ಬಂದು ನಿಂತಿರುವುದನ್ನು ನೋಡಿ ಅವರು ಫೋನ್ ನಲ್ಲಿ ಮಾಡುತ್ತಿದ್ದ ಮಾತುಕತೆಯನ್ನು ನಿಲ್ಲಿಸಿದರು.
“ನೀವು? ಫೋನ್ ಮಾಡುವುದಲ್ಲವೇ,” ಸುರ್ವೇ ಹೇಳಿದರು.
“ಸರ್ ನಿಮ್ಮ ಫೋನ್ ಎಂಗೇಜ್ ಇತ್ತು. ಕಾರ್ಯನಿರ್ವಾಹಕ ನಿರ್ದೇಶಕ ಸಾಹೇಬ್ರು ತಕ್ಷಣ ತಮ್ಮನ್ನು ಕರೆದಿದ್ದಾರೆ,” ಎಂಬುದಾಗಿ ಪಿ.ಎ. ಹೇಳಿದನು.
ಚಿತ್ರ ಕ್ರ. 1 : ಕ್ರ್ಯಾಂಕ್ ಶಾಫ್ಟ್ ನ ಚಿತ್ರ

img1_1  H x W:  

img1_1  H x W:  
 
“ಹೋಗಿ, ಬಂದೆ,” ಎಂದು ಹೇಳಿ ಸುರ್ವೇ ಇವರು ಎದ್ದರು. ಈ ರೀತಿಯಲ್ಲಿ ಅವರ ಕರೆ ಬರಬಹುದು, ಎಂದು ಅವರಿಗೆ ಅನಿಸಿತ್ತು. ಕಾರಣ ಕಳೆದ ಹತ್ತು ದಿನಗಳಿಂದ ಆರು ಸಿಲಿಂಡರ್ ಕ್ರ್ಯಾಂಕ್ ಶಾಫ್ಟ್ ನ ಲೈನ್, ಬೃಹತ್ ಪ್ರಮಾಣದಲ್ಲಿ ರಿಜೆಕ್ಷನ್ ಆಗುತ್ತಿರುವುದರಿಂದ ಸ್ತಬ್ಧವಾಗಿತ್ತು. ಕಾರ್ಯನಿರ್ವಾಹಕ ನಿರ್ದೇಶಕರ ಆಫೀಸ್ ನಲ್ಲಿ ಅವರು ಮತ್ತು ಕ್ವಾಲಿಟಿ ಕಂಟ್ರೋಲ್ ಮ್ಯಾನೆಜರ್ ದೇಶಪಾಂಡೆ ಇಬ್ಬರೂ ನಿಂತಿದ್ದರು. ಸುರ್ವೇ ಕುಳಿತುಕೊಂಡ ನಂತರ ಇ.ಡಿವಯನರಿಂದ ಫಯರಿಂಗ್ ಪ್ರಾರಂಭವಾಗಿದೆ.
“ಸುರ್ವೇ, ದೇಶಪಾಂಡೆ... ಈ ರಿಜೆಕ್ಷನ್ ನಲ್ಲಿ ಏನು ಗಡಿಬಿಡಿ? ತಾವು ಆರು ಸಿಲಿಂಡರ್ ನ ಕ್ರ್ಯಾಂಕ್ ಶಾಫ್ಟ್ ಇಷ್ಟು ದೊಡ್ಡ ಪ್ರೊಜೆಕ್ಟ್ ಪ್ರಸ್ತುತ ಪಡಿಸಿದ್ದೇವೆ. ನಿಮಗೆ ಸೆಪರೇಟ್ ಲೈನ್ ಬೇಕಾಗಿತ್ತು, ಅದಕ್ಕೋಸ್ಕರ ನಾವು ತುಂಬಾ ಬಂಡವಾಳವನ್ನು ಹೂಡಿದ್ದೇವೆ. ಸಿಂಗಲ್ ಪೀಸ್ ಫ್ಲೋ ಮಶಿನಿಂಗ್ ಲೈನ್ ಬೇಕಾಗಿತ್ತು, ಅದನ್ನು ಅಳವಡಿಸಲಾಯಿತು. ಪ್ರಾಡಕ್ಷನ್ ಲೈನ್ ನಲ್ಲಿ ನಿಮಗೋಸ್ಕರ ಡೆಡಿಕೇಟೆಡ್ ಸಿ.ಎಮ್.ಎಮ್. ಬೇಕಾಗಿತ್ತು, ಅದನ್ನೂ ನೀಡಲಾಯಿತು. ಹಾಗಾದ್ರೇ ಇಷ್ಟು ರಿಜೆಕ್ಷನ್ ಯಾಕಾಗುತ್ತದೆ? ಪ್ರೊಸೆಸ್ ಸರಿಯಾಗಿ ಸೆಟ್ ಆಗಿಲ್ಲವೇ? ‘ಎಮ್ ರಿವ್ಯೂ’ನಲ್ಲಿ ಕ್ವಾಲಿಟಿ ಎಟ್ ಸೋರ್ಸ್ ಗೆ ತುಂಬಾ ಒಳ್ಳೆಯ ರೇಟಿಂಗ್ ಇದೆ, ಹಾಗಾದ್ರೆ ರಿಜೆಕ್ಷನ್ ಯಾಕಾಗುತ್ತದೆ? 100% ಓಕೆ ಜಾಬ್ ಯಾವಾಗ ಸಿಗುತ್ತದೆ, ಎಂಬುದನ್ನು ಹೇಳಿ. ಇಲ್ಲದಿದ್ದಲ್ಲಿ ನನಗೆ ಬೇರೆ ವ್ಯವಸ್ಥೆಯನ್ನು ಮಾಡಬೇಕಾಗಬಹುದು.” ಕೊನೆಯ ವಾಕ್ಯದ ಅರ್ಥವು ಎಲ್ಲರಿಗೂ ತಿಳಿದದ್ದೇ ಇತ್ತು. ಪರಿಸ್ಥಿತಿ ತುಂಬಾ ಬಿಸಿಯಾಗಿತ್ತು.
ಚಿತ್ರ ಕ್ರ. 2 : ಕ್ರ್ಯಾಂಕ್ ಶಾಫ್ಟ್ – ಪಿನ್ ಎಂಗಲ್ ನ ಚಿತ್ರ

img1_1  H x W:  

ಸುರ್ವೇ ಇವರು ಮಾತ್ರ ಉದ್ದದ ಶ್ವಾಸವೊಂದನ್ನು ತೆಗೆದುಕೊಂಡರು. “ಸರ್, ಕಳೆದ ಎರಡು ವಾರ ನಾವಿಬ್ಬರೂ ಕೇವಲ ಇದೇ ಪ್ರಶ್ನೆಯ ಕುರಿತು ವಿಚಾರ ಮಾಡುತ್ತಿದ್ದೇವೆ. ನಮ್ಮಲ್ಲಿರುವ ಗ್ರೈಂಡಿಂಗ್ ವ್ಯವಸ್ಥೆ ಸರಿಯಾಗಿದೆ. ಮೂರೂ ಗ್ರೈಂಡಿಂಗ್ ನಲ್ಲಿರುವ ಜಾಬ್ ನಿಖರವಾಗಿಯೇ ಬರಬೇಕು. ನಾವು ಎಲ್ಲ ಪ್ರೊಸೆಸ್ ಪ್ಯಾರಾಮೀಟರ್ ಪರಿಶೀಲಿಸಿ ಖಾತರಿ ಮಾಡಿದ್ದೇವೆ. ಅಲ್ಫಾ ಟೆಸ್ಟಿಂಗ್ ಮಾಡುವಾಗಲೇ ನಾವು ಸಂಪೂರ್ಣವಾಗಿ ದೋಷರಹಿತ ಗ್ರೈಂಡಿಂಗ್ ವ್ಯವಸ್ಥೆಯನ್ನು ಮಾಡಿದ್ದೇವೆ. ಸರ್ಫೇಸ್ ಫಿನಿಶ್, ಫಿಲೇಟ್ ರೇಡಿಯಸ್, ಡೈಮೆನ್ಶನ್, ಥ್ರಸ್ಟ್ ಫೇಸ್ ನ ಗ್ರೈಂಡಿಂಗ್ ಇವೆಲ್ಲವೂ ಮಹತ್ವದ ಪ್ಯಾರಾಮೀಟರ್ ಗಳು ಮಿತಿಯಲ್ಲಿವೆ. ಇಷ್ಟು ಪರಿಪೂರ್ಣ ಮತ್ತು ನಿರ್ದೋಷವಾದ ಉತ್ಪಾದನೆಯನ್ನು ಇಂದಿನ ತನಕ ನಾವು ಒಂದೇ ಲೈನ್ ನಲ್ಲಿ ಮಾಡುವುದು ನಮಗೆ ಸಾಧ್ಯವಾಗಿಲ್ಲ. ಪ್ರಸ್ತುತ ಪ್ರಶ್ನೆಯ ಕೇವಲ ಕ್ರ್ಯಾಂಕ್ ಶಾಫ್ಟ್ ನ ಪಿನ್ ಎಂಗಲ್ ನದ್ದಾಗಿದೆ. ಈ ಎಂಗಲ್ ನಮ್ಮ ಅಲ್ಫಾ ಟ್ರಯಲ್ ನಲ್ಲಿ ಸರಿಯಾಗಿ ಕಂಡುಬಂದಿತ್ತು. ಆದರೆ ಪ್ರಾಡಕ್ಷನ್ ಲಾಟ್ ನಲ್ಲಿ ರಿಜೆಕ್ಷನ್ ಇದೆ. ನಾವು ಅದನ್ನು ಹುಡುಕುತ್ತಿದ್ದೇವೆ. ಅದರಲ್ಲಿ ಎಂಗಲ್ ನಲ್ಲಿ ಕಂಡು ಬರುವ ದೋಷಗಳಲ್ಲಿ ನಿರಂತರತೆ ಇಲ್ಲ. ಪ್ರತಿಯೊಂದು ಬಾರಿ ಬೇರೆ ಬೇರೆ ರೀಡಿಂಗ್ ಕಂಡುಬರುತ್ತಿದೆ. ಅದರಲ್ಲಿಯೂ ಕೇವಲ ಒಂದು ನಂಬರ್ ನ ಪಿನ್ ನಲ್ಲಿ ಅಡಚಣೆಗಳು ಬರುತ್ತಿವೆ. ಯಾವುದೇ ಕ್ರ್ಯಾಂಕ್ ಶಾಫ್ಟ್ ಒಂದು ನಂಬರ್ ಪಿನ್ ಬಿಟ್ಟು ಇನ್ನಿತರ ಯಾವುದೇ ಪಿನ್ ಎಂಗಲ್ ಗಳಿಗೆ ರಿಜೆಕ್ಟ್ ಆಗಿಲ್ಲ. ಇದರಿಂದಾಗಿ ಪ್ರಕ್ರಿಯೆಯಲ್ಲಿ ಯಾವ ದೋಷಗಳಿವೆ, ಎಂಬುದು ಬೇಗ ಗಮನಕ್ಕೆ ಬರುವುದಿಲ್ಲ.”

ಇಷ್ಟು ಹೇಳಿ ಸುರ್ವೇ ಸ್ವಲ್ಪ ಸಮಯ ಮಾತನಾಡುವುದನ್ನು ನಿಲ್ಲಿಸಿದರು. ನಂತರ ದೇಶಪಾಂಡೆಯವರ ಕಡೆ ನೋಡಿ, “ನಾವು ಲೈನ್ ನಲ್ಲಿ ಹೊಸ ಸಿ.ಎಮ್.ಎಮ್. ಅಳವಡಿಸಿದ ನಂತರ ಈ ರೀತಿಯ ರಿಜೆಕ್ಷನ್ ಹೆಚ್ಚಿರುವುದು ಕಂಡುಬರುತ್ತಿದೆ. ನೀವು ಈ ಕುರಿತು ಏನಾದರೂ ವಿಮರ್ಷೆ ಮಾಡಿದ್ದಿರೋ?”
ದೇಶಪಾಂಡೆಯವರು ಕ್ಷಣಮಾತ್ರದಲ್ಲಿ ಗೊಂದಲಕ್ಕೀಡಾದರು. ಕೈಯಲ್ಲಿರುವ ಫೈಲ್ ಬದಿಗಿಟ್ಟು ಮನಸ್ಸಿನಲ್ಲಿಯೇ ವಿಚಾರ ಮಾಡಲಾರಂಭಿಸಿದರು. ಕ್ಷಣಮಾತ್ರದಲ್ಲಿ ಆ ವಿಚಾರದಿಂದ ಹೊರ ಬಂದು ಅವರು ಹೇಳಿದರು, “ನಾವು ಲೈನ್ ನಲ್ಲಿ ಸಿ.ಎಮ್.ಎಮ್. ಅಳವಡಿಸಿದ ನಂತರ ಕ್ರ್ಯಾಂಕ್ ಶಾಫ್ಟ್ ಲೋಡ್ ಹೇಗೆ ಮಾಡುವುದು ಇದರ ಕುರಿತೂ ಎರಡು ದಿನ ಪರೀಕ್ಷೆ ಮಾಡಿದ್ದೆವು. ನಮಗೆ ನಾಲ್ಕು ನಿಮಿಷಗಳಲ್ಲಿಯೇ ಒಂದು ಕ್ರ್ಯಾಂಕ್ ಶಾಫ್ಟ್ ನ ಪರೀಕ್ಷೆ ಮಾಡ ಬೇಕು. ಇಷ್ಟು ಕಡಿಮೆ ಸಮಯದಲ್ಲಿ ಅದನ್ನು ಮಶಿನ್ ಲೋಡ್ ಮಾಡುವುದು, ಪರಿಶೀಲಿಸುವುದು ಮತ್ತು ಮತ್ತೆ ಪೇಲೆಟ್ ನಲ್ಲಿ ಇಡುವುದು ಅಸಾಧ್ಯ, ಇದು ನಮಗೆ ಮೊದಲೇ ತಿಳಿದಿತ್ತು. ಅದಕ್ಕೋಸ್ಕರವೇ ಓವರ್ ಹೆಡ್ ಕ್ರೇನ್ ಮತ್ತು ಸರಿಯುವ ಟ್ರಾಲಿ ನಾವು ಅಳವಡಿಸಿದೆವು. ಈ ಎಲ್ಲ ವ್ಯವಸ್ಥೆಯಲ್ಲಿ ತುಂಬಾ ಸಮಯವು ವ್ಯರ್ಥವಾಯಿತು. ಇದರಿಂದಾಗಿ ನಂತರ ಮಶಿನ್ ನ ಪರೀಕ್ಷೆಯನ್ನು ಮಾಡುವುದು ಅಸಾಧ್ಯವಾಗಿತ್ತು ಮತ್ತು ಪ್ರಾಡಕ್ಷನ್ ಚೆಕ್ ಮಾಡಲು ಪ್ರಾರಂಭವಾಯಿತು.”

“ಹೌದು.... ಆದರೆ ಈಗ ಆಗುತ್ತಿರುವ ರಿಜೆಕ್ಷನ್ ನಲ್ಲಿ ಏನು ಸಂಬಂಧ?” ಕಾರ್ಯನಿರ್ವಾಹಕ ನಿರ್ದೇಶಕರ ಬಿಸಿಯಾಗಿರುವ ತಲೆ ಇನ್ನೂ ತಂಪಾಗಿರಲಿಲ್ಲ. “ನಿಮಗಿಬ್ಬರಿಗೂ ಸಿ.ಎಮ್.ಎಮ್. ಕುರಿತು ಅನುಮಾನಗಳಿದ್ದಲ್ಲಿ ಅವರ ಇಂಜಿನಿಯರ್ ರನ್ನು ಕರೆಯಿರಿ. ಇದು ‘ಅಭಿನವ’ ಈ ಕಂಪನಿಯ ಸಿ.ಎಮ್.ಎಮ್. ಅಲ್ಲವೇ?”
“ಹೌದು ಸರ್. ನಮ್ಮಲ್ಲಿ ತುಂಬಾ ಹಳೆಯದಾದ ಒಂದು ವಿದೇಶದ ಸಿ.ಎಮ್.ಎಮ್. ಇದೆ. ಅದರ ನಂತರ ಖರೀದಿಸುವ ಎಲ್ಲ ಸಿ.ಎಮ್.ಎಮ್.ಗಳು ‘ಅಭಿನವ’ ಇವರದ್ದೇ, ಅಂದರೆ ಭಾರತೀಯ ಸಿ.ಎಮ್.ಎಮ್.ಗಳಾಗಿವೆ. ಅವರ ಇಬ್ಬರು ಇಂಜಿನಿಯರ್ ಎಂಟೆಂಟು ದಿನ ಬಂದುಹೋಗಿದ್ದಾರೆ. ಎಲ್ಲ ಇನ್ ಸ್ಪೆಕ್ಷನ್ ಪ್ರೊಗ್ರಾಮ್, ಮಾಸ್ಟರ್ ಪ್ರೋಬ್ ನ ಪರೀಕ್ಷೆ, ಪ್ರೊಟೊಟೈಪ್ ನಲ್ಲಿ ರಿಪಿಟ್ಯಾಬಿಲಿಟಿಯ ಪರೀಕ್ಷೆ ಮುಂತಾದವುಗಳನ್ನು ಮಾಡಿದ್ದೇವೆ. ಎಲ್ಲ ಕ್ರ್ಯಾಂಕ್ ಶಾಫ್ಟ್ ನ ಇನ್ನಿತರ ರೀಡಿಂಗ್ ನೊಂದಿಗೆ ಲಭಿಸುತ್ತವೆ. ಆದರೆ ಎಂಗಲ್ ಅಳತೆಗಳಲ್ಲಿ ಕ್ರ್ಯಾಂಕ್ ಶಾಫ್ಟ್ ರಿಜೆಕ್ಟ್ ಆಗುತ್ತಿವೆ. ಅದರಲ್ಲಿ ಕ್ರ್ಯಾಂಕ್ ಶಾಫ್ಟ್ ನಲ್ಲಿರುವ ಎರರ್ ರೇಂಡಮ್ ಆಗಿ ಕಂಡುಬರುತ್ತದೆ. ಒಂದೇ ನಿಗದಿತ ಬದಿಯಲ್ಲಿ ಮಶಿನಿಂಗ್ ಶಿಫ್ಟ್ ಆಗಿರುತ್ತದೆ, ಎಂಬುದು ಕಂಡುಬರುವುದಿಲ್ಲ,” ಎಂಬುದಾಗಿ ದೇಶಪಾಂಡೆ ಇವರು ತಮ್ಮ ವಿಚಾರವನ್ನು ವಿವರಿಸಿದರು.

“ಹೀಗೋ!” ಎಂದು ಹೇಳಿ ಕಾರ್ಯನಿರ್ವಾಹಕ ನಿರ್ದೇಶಕರು ಇಂಟರ್ ಕಾಮ್ ನ ಬೆಲ್ ಒತ್ತಿದರು. “ಅಭಿನವ ಕಂಪನಿಯ ವಿಜಯ್ ದೇಶ್ ಮುಖ್ ಅವರನ್ನು ಲೈನ್ ನಲ್ಲಿ ಕನೆಕ್ಟ್ ಮಾಡಿ!” ಎಂದು ಹೇಳಿದರು. ಸ್ವಲ್ಪ ಸಮಯದಲ್ಲಿಯೇ ಅಭಿನವ ಇಂಜಿನಿಯರಿಂಗ್ ನ ವ್ಯವಸ್ಥಾಪಕ ನಿರ್ದೇಶಕರಾದ ವಿಜಯ್ ದೇಶ್ ಮುಖ್ ಇವರ ಕರೆ ಕಾರ್ಯನಿರ್ವಾಹಕ ನಿರ್ದೇಶಕ ಇವರಿಗೆ ಬಂತು. “ಸರ್, ದೇಶಮುಖ್ ಮಾತನಾಡುತ್ತಿದ್ದೇನೆ. ಏನು ಸೇವೆ ಮಾಡ್ಲಿ?”

img3_1  H x W:  
ಚಿತ್ರ ಕ್ರ. 3 : ಟ್ರಾಲಿ ಮತ್ತು ಸಿ.ಎಮ್.ಎಮ್.ನ ವ್ಯವಸ್ಥೆ

“ವಿಜಯ್ ಸಾಹೇಬ್ರೇ, ನಮ್ಮ ಕ್ರ್ಯಾಂಕ್ ಶಾಫ್ಟ್ ನ ಕೇಸ್ ನೀವು ಕೇಳಿರಬಹುದು. ನಿಮ್ಮ ಎರಡು ಇಂಜಿನಿಯರ್ ಈ ತನಕ ನಮ್ಮಲ್ಲಿ ಬಂದುಹೋಗಿದ್ದಾರೆ. ಆದರೆ ಈ ಪ್ರಶ್ನೆ ಮಾತ್ರ ನಮ್ಮ ಕೈಯಿಂದ ಹೊರಹೋಗಬಾರದು. ನನಗೆ ನಾಲ್ಕು ದಿನಗಳೊಳಗೆ ಯಾವ ಸಮಸ್ಯೆ ಇದೆ ಎಂಬುದನ್ನು ನಿಖರವಾಗಿ ತಿಳಿಯಬೇಕು. ಅಲ್ಲದೇ ಮುಂದಿನ ಎರಡು ದಿನಗಳಲ್ಲಿಯೇ ನಾವು ಮತ್ತು ನೀವು ಸೇರಿ ಈ ಸಮಸ್ಯೆಯನ್ನು ಪರಿಹರಿಸಬೇಕು,” ಎಂಬುದಾಗಿ ಕಾರ್ಯನಿರ್ವಾಹಕ ನಿರ್ದೇಶಕರು ಒತ್ತಾಯದಿಂದಲೇ ಹೇಳಿದರು.

“ಸರ್, ನಾವೆಲ್ಲರೂ ನಿಮ್ಮೊಂದಿಗೆ 100% ಇದ್ದೇವೆ. ನಾಳೆ ಬೆಳಿಗ್ಗೆ ಕಸ್ಟಮರ್ ಇಂಜಿನಿಯರಿಂಗ್ ಹೆಡ್ ಇವರನ್ನು ನಿಮ್ಮಲ್ಲಿಗೆ ಕಳುಹಿಸುತ್ತೇನೆ. ನಾಳೆ ಸಾಯಂಕಾಲ ನಮ್ಮ ಇಂಟರ್ನಲ್ ಮೀಟಿಂಗ್ ನಲ್ಲಿ ನಮ್ಮ ಇಂಜಿನಿಯರ್ ಇವರ ರಿಪೋರ್ಟ್ ಕುರಿತು ಚರ್ಚೆ ಮಾಡಿದ್ದೆವು. ಇದರಿಂದಾಗಿ ಅವರೆಲ್ಲರಿಗೂ ಎಲ್ಲ ಹಿನ್ನೆಲೆಯು ತಿಳಿದಿದೆ,” ಎಂದು ವಿಜಯ್ ದೇಶ್ ಮುಖ್ ಹೇಳಿದರು. ಭಾರತೀಯ ನಿರ್ಮಾಣದ ಸಿ.ಎಮ್.ಎಮ್. ಉದ್ಯಮದಲ್ಲಿ ದೇಶ್ ಮುಖ್ ಇವರು ಅವರ ದೂರದೃಷ್ಟಿಯ ವಿಚಾರದಿಂದ ಮತ್ತು ಟೀಮ್ ವರ್ಕ್ ನಿಂದಾಗಿ ದೃಢವಾಗಿ ಕಾಲೂರಿದ್ದಾರೆ. ಇದರಿಂದಾಗಿ ನಾವು ಈ ವಿಷಯದಲ್ಲಿ ಸಹಾಯ ಮಾಡಬಲ್ಲೆವು, ಎಂಬ ವಿಶ್ವಾಸವು ಅವರಿಗಿತ್ತು.
ಮುಂದಿನ ದಿನ ಬೆಳಿಗ್ಗೆ 11 ಗಂಟೆಗೆ ‘ಅಭಿನವ’ ಕಂಪನಿಯ ಕಸ್ಟಮರ್ ಇಂಜಿನಿಯರಿಂಗ್ ಹೆಡ್ ಮೋಹನ್ ‘ಹಿಂದ್ ಕ್ರ್ಯಾಂಕ್ ಶಾಫ್ಟ್’ ಕಡೆಗೆ ಬಂದು ತಲುಪಿದರು. ಮೊದಲು ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ನಂತರ ಸುರ್ವೆ ಇವರನ್ನು ಭೇಟಿ ಮಾಡಿ ದೇಶಪಾಂಡೆ ಇವರೊಂದಿಗೆ ಅವನು ಸಿ.ಎಮ್.ಎಮ್. ಸ್ಟೇಶನ್ ನ ಹತ್ತಿರ ನಿಂತುಕೊಂಡನು. ದೇಶಪಾಂಡೆಯವರು ಮೋಹನ್ ಗೆ ಕ್ರ್ಯಾಂಕ್ ಶಾಫ್ಟ್ ನ ಮಾಪನಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಿದರು.

“ಕ್ರ್ಯಾಂಕ್ ಶಾಫ್ಟ್ ನ ಒಂದು ಬ್ಯಾಚ್ ನಲ್ಲಿ 12 ಕ್ರ್ಯಾಂಕ್ ಶಾಫ್ಟ್ ಗಳಿರುತ್ತವೆ. ಒಂದೇ ಪ್ಯಾಲೇಟ್ ನಲ್ಲಿ ನಾಲ್ಕು, ಹೀಗೆ ಮೂರು ಪ್ಯಾಲೇಟ್ ನಲ್ಲಿ ಒಂದರ ಮೇಲೊಂದು ಅಟ್ಟಿ ಮಾಡಿ ಇಲ್ಲಿಗೆ ಅವುಗಳನ್ನು ಕ್ರೇನ್ ನ ಸಹಾಯದಿಂದ ತರಲಾಗುತ್ತದೆ. ಕ್ರ್ಯಾಂಕ್ ಶಾಫ್ಟ್ ನ ಭಾರ ತುಂಬಾ ಹೆಚ್ಚಾಗಿರುವುದರಿಂದ ಈ ಸ್ಟೇಶನ್ ನಲ್ಲಿ ಒಂದು ಚಿಕ್ಕ ಜಿಬ್ ಕ್ರೇನ್ ಅಳವಡಿಸಲಾಗಿದೆ. ಅದರ ಸಹಾಯದಿಂದ ಕ್ರ್ಯಾಂಕ್ ಶಾಫ್ಟ್ ಎತ್ತಿ ಸಿ.ಎಮ್.ಎಮ್.ನ ಎದುರು ಟ್ರಾಲಿಯಲ್ಲಿ ಇಡಲಾಗುತ್ತದೆ. ಈ ಟ್ರಾಲಿಗೆ ಒಂದು ಮತ್ತು ಏಳು ಕ್ರಮಾಂಕದ ಮೇನ್ ಜರ್ನಲ್ ಗೋಸ್ಕರ, ರೋಲರ್ ಸ್ಟ್ಯಾಂಡ್ ಅಳವಡಿಸಲಾಗಿರುತ್ತದೆ. ಇದರಿಂದಾಗಿ ಅದರಲ್ಲಿ ಕ್ರ್ಯಾಂಕ್ ಶಾಫ್ಟ್ ಸರಿಯಾಗಿ ಅಳವಡಿಸಲ್ಪಡುತ್ತದೆ. ರೋಲರ್ ನಲ್ಲಿ ಕ್ರ್ಯಾಂಕ್ ಶಾಫ್ಟ್ ಒಂದೇ ರೀತಿಯಲ್ಲಿ ಅಳವಡಿಸಲ್ಪಡಬೇಕು, ಎಂಬುದಕ್ಕೋಸ್ಕರ ನಾಲ್ಕು ಕ್ರಮಾಂಕ ಪಿನ್ ನ ಕೆಳಗೆ ಒಂದು ಸ್ಟ್ಯಾಂಡ್ ಇಡಲಾಗಿದೆ. ಪಿನ್ ಅದರಲ್ಲಿ ಒರಗಿದಾಗ ಕ್ರ್ಯಾಂಕ್ ಶಾಫ್ಟ್ ಒಂದು ಮತ್ತು ಆರು ನಂಬರ್ ನ ಪಿನ್ ಜರ್ನಲ್ ನೊಂದಿಗೆ ಟಾಪ್ ಪೋಜಿಶನ್ ನಲ್ಲಿ ಬರುತ್ತದೆ. ಕ್ರ್ಯಾಂಕ್ ಶಾಫ್ಟ್ ಹೆಚ್ಚು ಭಾರವಿರುವುದರಿಂದ ಈ ಟ್ರಾಲಿ ಹೈಡ್ರಾಲಿಕ್ ನಿಂದ ನಡೆಯಬಲ್ಲದ್ದಾಗಿದೆ. ಆಪರೇಟರ್ ಬಟನ್ ಒತ್ತಿದಾಕ್ಷಣ ಅದು ಒಳಗೆ ಸರಿದು ಪ್ಲಾಸ್ಟಿಕ್ ನ ಪರದೆಯ ಇನ್ನೊಂದು ಬದಿಗೆ ಸಿ.ಎಮ್.ಎಮ್. ಆರ್ಮ್ ನ ಹತ್ತಿರ ಹೋಗಿ ನಿಲ್ಲುತ್ತದೆ. ನಿಲ್ಲಲು ಅದಕ್ಕೆ ರಬರ್ ನ ಸ್ಟಾಪರ್ ನೀಡಲಾಗಿರುತ್ತದೆ. ಟ್ರಾಲಿ ಸ್ಟಾಪರ್ ನಲ್ಲಿ ಹೋಗಿ ನಿಂತಲ್ಲಿ ತಕ್ಷಣ ಸಿ.ಎಮ್.ಎಮ್.ನ ಅಳತೆಗೆ ಪ್ರಾರಂಭವಾಗುತ್ತದೆ. ಮೇನ್ ಮತ್ತು ಪಿನ್ ಜರ್ನಲ್ ನಲ್ಲಿ ಮೇಲ್ಭಾಗದಲ್ಲಿ ಪ್ರತಿಯೊಂದು ಮೂರು ರೀಡಿಂಗ್ ಪ್ರೋಬ್ ಮೂಲಕ ಪಡೆಯಲಾಗುತ್ತದೆ. ಇದರಿಂದಾಗಿ ಮೊದಲು ಕ್ರ್ಯಾಂಕ್ ಶಾಫ್ಟ್ ನ ಮಧ್ಯ ರೇಖೆಯು (ಸೆಂಟರ್ ಲೈನ್) ಮತ್ತು ನಂತರ 1, 6, 2, 5, 4 ಮತ್ತು 3 ಈ ಪಿನ್ ಗಳು ಜರ್ನಲ್ ನ ಅಂಶಾತ್ಮಕ ಸ್ಥಿತಿಯನ್ನು ಪಡೆಯಲಾಗುತ್ತದೆ. ಪಿನ್ ನಲ್ಲಿರುವ ಎಂಗಲ್ 120° ±20” ಇದರಲ್ಲಿರಬೇಕು.

ನಿಮಗೆ ಏನು ಬೇಕು, ಎಂಬ ಮಾಹಿತಿಯು ನಮ್ಮ ಸಿ.ಎಮ್.ಎಮ್. ಆಪರೇಟರ್ ನೀಡಬಲ್ಲನು. ನೀವು ಅವನಿಗೆ ಎಷ್ಟೂ ಪ್ರಶ್ನೆಗಳನ್ನು ಕೇಳಿದರೂ ಅಡ್ಡಿ ಇಲ್ಲ. ಆದರೆ ತಾವು ಇದರಲ್ಲಿರುವ ತೊಡಕನ್ನು ಹುಡುಕಲೇ ಬೇಕು. ನನಗೆ 12 ಗಂಟೆಗೆ ಒಂದು ಮೀಟಿಂಗ್ ಇದೆ, ಅಡ್ಡಿ ಇಲ್ಲ ತಾನೇ?” ಎಂಬುದಾಗಿ ದೇಶಪಾಂಡೆ ಹೇಳುತ್ತಾರೆ.
“ಸರ್ ನಾನು ಇಲ್ಲಿಯೇ ನಿಲ್ಲುತ್ತೇನೆ. ನನಗೆ ಏನಾದರೂ ಬೇಕಾಗಿದ್ದಲ್ಲಿ ನಿಮ್ಮಲ್ಲಿಗೆ ಬರುತ್ತೇನೆ. ಆದರೆ ಮೊದಲು ನೇರವಾಗಿ ಮಾಪನಗಳನ್ನು ನೋಡುತ್ತೇನೆ ಮತ್ತು ಅದರ ಕುರಿತಾದ ವಿಮರ್ಷೆಯನ್ನು ಮಾಡುತ್ತೇನೆ,” ಎಂದು ಮೋಹನ್ ಹೇಳುತ್ತಾನೆ. ಆಪರೇಟರ್ ಗೆ ಯೋಗ್ಯವಾದ ಸೂಚನೆಗಳನ್ನು ನೀಡಿ ದೇಶಪಾಂಡೆ ಮೀಟಿಂಗ್ ಗೆ ಹೊರಟು ಹೋಗುತ್ತಾರೆ.

ಮುಂದಿನ ಒಂದುವರೆ ಗಂಟೆಯ ಕಾಲಾವಧಿಯಲ್ಲಿ ಮೋಹನ್ ಆ ಆಪರೇಟರ್ ನೊಂದಿಗೆ ಕ್ರ್ಯಾಂಕ್ ಶಾಫ್ಟ್ ನ ಕುರಿತು ಮಾಪನಗಳನ್ನು ಪರಿಶೀಲಿಸಿದನು. 20 ಕ್ರ್ಯಾಂಕ್ ಶಾಫ್ಟ್ ಗಳಲ್ಲಿ ಮತ್ತೆ ಆರು ರಿಜೆಕ್ಟ್ ಆಗಿದ್ದವು. ಈ ಎಲ್ಲ ಕ್ರ್ಯಾಂಕ್ ಶಾಫ್ಟ್ ಗಳಿಗೆ ಎಂಗಲ್ ನಲ್ಲಿ ಕೇವಲ ಒಂದು ನಂಬರ್ ನ ಪಿನ್ ಗೆ ಮಾತ್ರ ತೊಡಕುಗಳು ಉಂಟಾಗುತ್ತಿದ್ದವು. ಆ ಎಂಗಲ್ ಒಮ್ಮೊಮ್ಮೆ ಜಾಸ್ತಿ, ಕೆಲವೊಮ್ಮೆ ಕಡಿಮೆ ಕಾಣುತ್ತಿತ್ತು. ಒಟ್ಟಾರೆ ಸಕ್ಷಮವಾದ ಮಶಿನಿಂಗ್ ನ ಪ್ರಕ್ರಿಯೆಯಲ್ಲಿ ಈ ರೀತಿಯಾಗುವುದು ಮಾತ್ರ ಕಡಿಮೆಯೇ ಸರಿ, ಎಂಬ ವಿಚಾರವು ಮೋಹನ್ ನ ಗಮನಕ್ಕೆ ಬಂತು.

ಆದರೆ ಆ ನಾಲ್ಕು ನಿಮಿಷಗಳ ಆವರ್ತನೆಯಲ್ಲಿ ಅದರ ಕುರಿತು ಯಾವುದೇ ಸಂಶಯವೂ ಕಂಡುಬಂದಿಲ್ಲ. ಒಟ್ಟಾರೆ ಈ ರೀತಿಯ ಮಾಪನದಲ್ಲಿ ಏನಾದರೂ ‘ಮಿಸ್ಸಿಂಗ್ ಲಿಂಕ್’ ಇದೆ ಮತ್ತು ಅದನ್ನು ನಾವು ಹುಡುಕಲೇ ಬೇಕು, ಎಂಬುದಾಗಿ ಅವನಿಗೆ ಮನವರಿಕೆಯಾಯಿತು.

ಮಧ್ಯಾಹ್ನ ಒಂದುವರೆಗೆ ಸುಮಾರು ಆಪರೇಟರ್ ಮೋಹನ್ ಗೆ ಹೇಳುತ್ತಾನೆ, “ಸಾಹೆಬ್ರೇ, ಎರಡು ಗಂಟೆಗೆ ಶಿಫ್ಟ್ ಬದಲಾಗುತ್ತದೆ. ನಾವು ರೆಡಿಯಾಗಲು ಹೋಗುತ್ತೇನೆ. ಮುಂದಿನ ಶಿಫ್ಟ್ ನ ಆಪರೇಟರ್ ಬರಬಲ್ಲನು. ಅವನ ಡ್ಯೂಟಿ ಎರಡು ಗಂಟೆಗೆ ಪ್ರಾರಂಭಗೊಳ್ಳುತ್ತದೆ. ನಿಮಗೆ ಅಡ್ಡಿ ಇಲ್ಲ ತಾನೇ?”
“ಖಂಡಿತ ಇಲ್ಲ,” ಎಂದು ಮೋಹನ್ ನಗುತ್ತಾ ಹೇಳುತ್ತಾನೆ. ಈಗಾಗಲೇ ಇಬ್ಬರಲ್ಲಿ ಆತ್ಮೀಯತೆ ನಿರ್ಮಾಣಗೊಂಡಿತ್ತು. “ನಾನು ರೀಡಿಂಗ್ ಪರಿಶೀಲಿಸುತ್ತಾ ಇಲ್ಲಿಯೇ ಕುಳಿತುಕೊಳ್ಳುತ್ತೇನೆ.”
ಸ್ವಲ್ಪ ಸಮಯದಲ್ಲಿಯೇ ಮೆಂದಿನ ಶಿಫ್ಟ್ ನ ಆಪರೇಟರ್ ಬಂದನು. ಅವನಿಗೆ ಮೊದಲ ಆಪರೇಟರ್ ಕೆಲವೇ ಸೂಚನೆಗಳನ್ನು ನೀಡಿದ್ದನು. ಅವನನ್ನು ಮೋಹನ್ ಗುರುತಿಸಿದನು. “ರೀ, ನಾವು ಟ್ರೇನಿಂಗ್ ಸೆಶನ್ ನಲ್ಲಿ ಭೇಟಿಯಾಗಿದ್ದೆವು,” ಎಂಬುದಾಗಿ ಮೋಹನ್ ಕೇಳಿದನು. “ಹೌದು ಸಾಹೆಬ್ರೇ, ನಾನು ದಾನವೆ. ಕಳೆದ ವರ್ಷ ನಾನು ನಿಮ್ಮೊಂದಿಗೆ ಎಂಟು ದಿನಗಳ ಟ್ರೇನಿಂಗ್ ನಲ್ಲಿ ಇದ್ದೆ. ತುಂಬಾ ಚೆನ್ನಾಗಿ ತಾವು ಕಲಿಸಿದ್ದಿರಿ. ಅದರಿಂದಾಗಿಯೇ ನನಗೆ ಕಳೆದ ತಿಂಗಳಲ್ಲಿ ನನಗೆ ಇಲ್ಲಿ ಕೆಲಸ ಸಿಕ್ಕಿತು.” ದಾನವೆ ತುಂಬಾ ಮಾತನಾಡುವ ವ್ಯಕ್ತಿ ಮತ್ತು ತುಂಬಾ ಖುಷಿಯಲ್ಲಿದ್ದ. ಸರಿಯಾಗಿ ಎರಡು ಗಂಟೆಗೆ ಅವನು ಕೆಲಸ ಪ್ರಾರಂಭಿಸಿದನು. ಮುಂದಿನ ಗಂಟೆಯೊಳಗೆ ಪರಸ್ಪರ ಮಾತನಾಡುತ್ತಾ 15 ಕ್ರ್ಯಾಂಕ್ ಶಾಫ್ಟ್ ಗಳನ್ನು ಪರಿಶೀಲಿಸಲಾಯಿತು. ಅದರಲ್ಲಿ ಮತ್ತೆ 3 ರಿಜೆಕ್ಟ್ ಆದವು. “ನನಗೆ ಇದರಲ್ಲಿ ಏನೋ ಗಡಿಬಿಡಿ ಅನಿಸುತ್ತದೆ. ಆದರೆ ಅದೇನದು ಎಂಬುದು ಮಾತ್ರ ತಿಳಿಯುತ್ತಿಲ್ಲ. ಒಂದು ನಂಬರಿಗೆಯೇ ಯಾಕೆ ಪ್ರಾಬ್ಲೇಮ್ ಬರ್ತಾ ಇದೆ,” ಎಂದು ಮೋಹನ್ ತನ್ನಲ್ಲಿಯೇ ಮಾತನಾಡಿದ.

“ಸರ್, ನನಗೂ ಇದು ಯಾಕೋ ಸರಿ ಅನಿಸುತ್ತಿಲ್ಲ. ಆದರೆ ಇಲ್ಲಿ ಇನ್ನೇನನ್ನು ಹುಡುಕುವುದು ಅಂದ್ರೆ ಸೈಕಲ್ ಟೈಮ್ ಹಾಳಾಗುತ್ತದೆ. ಸಮಯ ವೇಸ್ಟ್ ಆದ್ರೆ ನನಗೆ ಬೈಸಿಕೊಳ್ಳಬೇಕಾಗಬಹುದು,” ಎಂದು ದಾನವೆ ಹೇಳುತ್ತಾನೆ.

“ನೋಡಪ್ಪಾ, ನಾವು 10 ನಿಮಿಷ ಎಲ್ಲವನ್ನೂ ಶಾಂತಿಯುತವಾಗಿ ನೋಡೋಣ. 2-3 ಕ್ರ್ಯಾಂಕ್ ಶಾಫ್ಟ್ ಗಳು ಕಡಿಮೆಯಾದರೂ ಅಡ್ಡಿ ಇಲ್ಲ. ನಾವು ಸುರ್ವೇ ಸಾಹೆಬ್ರಿಗೆ ಹೇಳುತ್ತೇನೆ. ನಾವು ಮತ್ತೆ ಟ್ರಯಲ್ ಮಾಡೋಣ,” ಎಂದು ಹೇಳಿ ಮೋಹನ್ ರಿಜೆಕ್ಟ್ ಆಗಿರುವ ಕ್ರ್ಯಾಂಕ್ ಶಾಫ್ಟ್ ಪೆಲೇಟ್ ನಿಂದ ತೆಗೆದು ಮತ್ತೆ ಟ್ರಾಲಿಯಲ್ಲಿ ಏರಿಸಲು ಹೇಳಿದನು. ಅದು ಮಾತ್ರ ಮತ್ತೆ ರಿಜೆಕ್ಟ್ ಆಯಿತು. ಆದರೆ ಅದರ ರೀಡಿಂಗ್ ಮೊದಲಿಗಿಂತ ಬೇರೆಯೇ ಇತ್ತು. “ಹೀಗೆ ಯಾಕಾಗುತ್ತದೆ?” ಎಂದು ಮೋಹನ್ ಕೇಳಿದನು. “ರಿಜೆಕ್ಷನ್ ಆಗಬಾರದು.”

“ಸರ್, ನಿಮಗೆ ಏನು ಹೇಳಲಿ? ಒಮ್ಮೊಮ್ಮೆ ನನಗೂ ಕೂಡಾ ಈ ರಿಜೆಕ್ಷನ್ ನಿಂದಾಗಿ ತಲೆಬಿಸಿಯಾಗುತ್ತದೆ. ನಂತರ ಯಾವಾಗಲೂ ಕ್ರ್ಯಾಂಕ್ ಶಾಫ್ಟ್ ಹೊರ ತೆಗೆಯುವ ಮುಂಚೆ ಎರಡು ನಿಮಿಷ ಹಾಗೆಯೇ ನಿಲ್ಲುತ್ತೇನೆ ಮತ್ತು ಮತ್ತೆ ಎಲ್ಲ ರೀಡಿಂಗ್ ಪಡೆಯುತ್ತೇನೆ. ನಂತರವೇ ಆ ಕ್ರ್ಯಾಂಕ್ ಶಾಫ್ಟ್ ಪಾಸ್ ಆಗುತ್ತದೆ,” ಎಂಬುದಾಗಿ ದಾನವೆ ಹೇಳುತ್ತಾನೆ.

“ಏನು?”, ಎಂಬುದಾಗಿ ಮೋಹನ್ ತಕ್ಷಣ ಕೇಳುತ್ತಾನೆ. “ನಾವು ಈಗ ಒಂದು ಹೊಸ ಕ್ರ್ಯಾಂಕ್ ಶಾಫ್ಟ್ ಅಳವಡಿಸೋಣ. ನಾವು ಕ್ರ್ಯಾಂಕ್ ಶಾಫ್ಟ್ ನೊಂದಿಗೆ ಪ್ಲಾಸ್ಟಿಕ್ ನ ಪರದೆಯ ಇನ್ನೊಂದು ಬದಿಯನ್ನು ಸೂಕ್ಷ್ಮವಾಗಿ ನೋಡುತ್ತೇನೆ. ನೀನು ಸೈಕಲ್ ಶುರು ಮಾಡು.”

“ಓಕೆ ಸರ್, ಆದರೆ ಜಾಗ್ರತೆ ವಹಿಸಿರಿ. ತಲೆಗೆ ಯಾವುದೇ ಅಪಘಾತವಾಗಬಾರದು,” ಎಂಬುದಾಗಿ ಹೇಳಿ ದಾನವೆ ಹೊಸ ಸೈಕಲ್ ಪ್ರಾರಂಭಿಸಿದನು. ಕ್ರ್ಯಾಂಕ್ ಶಾಫ್ಟ್ ಇಟ್ಟಿರುವ ಟ್ರಾಲಿ ಮುಂದೆ ತಳ್ಳುವಾಗ ಮೋಹನ್ ಬಗ್ಗಿ ತಲೆ ಮುಂದೆ ಮುಂದೆ ಸರಿಸುತ್ತಾ ಪರಿಶೀಲಿಸಿದನು. ಟ್ರಾಲಿ ಮುಂಭಾಗದಲ್ಲಿರುವ ರಬರ್ ಸ್ಟಾಪರ್ ಗೆ ತಾಗಿ ನಿಂತಿತು. ಆಗಲೇ ಸಿ.ಎಮ್.ಎಮ್.ನ ಆರ್ಮ್ ಪ್ರೋಬ್ ನೊಂದಿಗೆ ಕೆಳಗೆ ಬಂತು. ಒಂದನೇ ನಂಬರ್ ಮೇನ್ ಜರ್ನಲ್, ಒಂದು ನಂಬರ್ ಪಿನ್ ಮತ್ತು ಎರಡು ನಂಬರ್ ಮೇನ್ ಜರ್ನಲ್, ಮತ್ತೆ ಎರಡು ನಂಬರ್ ಪಿನ್ ಹೀಗೆ ಮಾಡುತ್ತಾ ಪ್ರತಿಯೊಂದು ರೀಡಿಂಗ್ ಮಾಡುತ್ತಾ ಆ ಪ್ರೋಬ್ ಕೊನೆಯ ತನಕ ತಲುಪಿತು.
“ರಿಜಲ್ಟ್?” ಮೋಹನ್ ಒಳಗಿನಿಂದಲೇ ಕೇಳಿದನು. “ರಿಜೆಕ್ಟ್” ದಾನವೆ ಹೇಳುತ್ತಾನೆ. “ಮತ್ತೆ ಕೇವಲ ಸಿ.ಎಮ್.ಎಮ್. ರೀಡಿಂಗ್ ಬಿಡು. ಟ್ರಾಲಿಗೆ ಆಘಾತವನ್ನುಂಟು ಮಾಡಬೇಡಾ,” ಮೋಹನ್ ಹೇಳಿದನು. ದಾನವೆ ರೀಡಿಂಗ್ ಸೈಕಲ್ ಪ್ರಾರಂಭಿಸಿದನು. “ಓಕೆ” ಅವನು ಜೋರಾಗಿ ಹೇಳುತ್ತಾನೆ.

“ಈಗ ತಿಳಿಯಿತು!” ಮೋಹನ್ ಕೂಡಾ ಒಳಗಿನಿಂದಲೇ ಜೋರಾಗಿ ಹೇಳುತ್ತಾನೆ. “ನಡಿ, ನಾವು ಲೈನ್ ನಲ್ಲಿಯೇ ಟೀ ಕುಡಿದು ಸಡಗರವನ್ನು ಆಚರಿಸೋಣ.” ಈಗಾಗಲೇ ಶಾಪ್ ನಲ್ಲಿ ಟೀ ರೌಂಡ್ ಬಂದಿತ್ತು.

ಸ್ವಲ್ಪ ಸಮಯದ ನಂತರ ಕಾರ್ಯನಿರ್ವಾಹಕ ಅಧಿಕಾರಿ, ಸುರ್ವೇ, ದೇಶಪಾಂಡೆ, ಮೋಹನ್, ದಾನವೆ ಮತ್ತು ಇನ್ನಿತರರ ‘ಗೆಂಬಾ ಮೀಟಿಂಗ್” ಕೈಝನ್ ಭಾಷೆಯಲ್ಲಿ ಅಂದರೆ ನೇರವಾಗಿ ಕೆಲಸ ನಿರ್ವಹಿಸಲ್ಪಡುವಲ್ಲಿ ನಿಂತು ಮೀಟಿಂಗ್ ಪ್ರಾರಂಭವಾಯಿತು. ಮೋಹನ್ ಎಲ್ಲಿ ಪರಿಶೀಲನೆಯ ವರದಿಯನ್ನು ವಿಸ್ತಾರವಾಗಿ ವಿಶದಪಡಿಸುತ್ತಾನೆ.

“ಕ್ರ್ಯಾಂಕ್ ಶಾಫ್ಟ್ ನ ಭಾರ ಹೆಚ್ಚು ಇರುವುದರಿಂದ ಮತ್ತು ಸಿ.ಎಮ್.ಎಮ್.ಗೆ ಯಾವುದೇ ತೊಡಕು ಉಂಟಾಗಬಾರದು ಎಂಬುದಕ್ಕಾಗಿ ಲೋಡಿಂಗ್ ಗೋಸ್ಕರ ಹೈಡ್ರಾಲಿಕ್ ಟ್ರಾಲಿ ನೀಡಲಾಗಿದೆ, ಇದು ಮಾತ್ರ ಸೂಕ್ತ ಉಪಾಯವಾಗಿದೆ. ಆದರೆ ಟ್ರಾಲಿ ಒಳಗೆ ಸರಿಯುವಾಗ ವೇಗ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚು ಇದೆ ಎಂದು ನನಗೆ ಅನಿಸುತ್ತದೆ. ಇದರಿಂದಾಗಿ ಟ್ರಾಲಿಯ ಬೇಸ್ ಮುಂದೆ ಸರಿದು ರಬರ್ ನ ಸ್ಟಾಪ್ ನಲ್ಲಿ ಅಪ್ಪಳಿಸುತ್ತದೆ. ಇದೇ ಸಮಯದಲ್ಲಿ ಸಿ.ಎಮ್.ಎಮ್.ನ ಅಳತೆಯ ಪ್ರಾರಂಭವಾಗುತ್ತದೆ. ಮೊದಲ ಮೂರು ರೀಡಿಂಗ್ (1 ಜರ್ನಲ್, 1 ಪಿನ್, 2 ಜರ್ನಲ್) ಪ್ರತಿ 5 ಸೆಕಂಡುಗಳಲ್ಲಿ ಪೂರ್ತಿಯಾಗುತ್ತದೆ. ಟ್ರಾಲಿ ಗೋಲಾಕಾರವಾದ ಬುಶ್ ಗೆ ಅಪ್ಪಳಿಸುವುದರಿಂದ ಅಲ್ಲಿ ಆಸಿಲೇಶನ್ ಉಂಟಾಗುತ್ತಿರಬೇಕು ಮತ್ತು ಅದು ಸುಮಾರು 10-15 ಸೆಕಂಡುಗಳಲ್ಲಿಯೇ ತುಂಬಾ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಒಂದು ನಂಬರ್ ಕ್ರ್ಯಾಂಕ್ ಪಿನ್ ನ ರೀಡಿಂಗ್ ಆಗುವುದರಿಂದ ಅದರಲ್ಲಿ ನೇರವಾಗಿ ವ್ಯತ್ಯಾಸ ಉಂಟಾಗುತ್ತದೆ ಮತ್ತು ಅದು ಪ್ರತಿ ಬಾರಿ ಬೇರೆ ಬೇರೆ ಇರುವುದರಿಂದ ನಾವು ಗೊಂದಲಕ್ಕೀಡಾಗುತ್ತೇವೆ. ಮುಂದಿನ ರೀಡಿಂಗ್ ತನಕ ಪ್ರೋಬ್ ತಲುಪುವಲ್ಲಿ ಈ ಕಂಪನಗಳು ಇಲ್ಲದಂತಾಗುವುದರಿಂದ ಮುಂದಿನ ಎಲ್ಲ ಪಿನ್ ನ ಎಂಗಲ್ ಸರಿಯಾಗಿಯೇ ಲಭಿಸುತ್ತವೆ,” ಎಂದು ಹೇಳುತ್ತಾ ಅವನು ಟ್ರಯಲ್ ಮಾಡಿ ತೋರಿಸಿದನು.

“ಮೂರು ಬಾರಿ ಎಕ್ಷನ್ ಮಾಡಬೇಕು, ಎಂದು ನನಗನ್ನಿಸುತ್ತದೆ. ಟ್ರಾಲಿಯ ವೇಗವನ್ನು ಕಡಿಮೆ ಮಾಡುವುದು, ಸಾಫ್ಟ್ ರಬರ್ ನ ಸ್ಟಾಪರ್ ನ ಬದಲಾಗಿ ಪಾಲಿಯುರೇಥಿನ್ ನ ಸ್ಟಾಪರ್ ಅಳವಡಿಸಿ ಕ್ಲ್ಯಾಂಪ್ ಮಾಡುವುದು ಮತ್ತು ಟ್ರಾಲಿ ಒಳಭಾಗದಲ್ಲಿ ತಾಗಿದ ನಂತರ ರೀಡಿಂಗ್ ಗೋಸ್ಕರ ಸುಮಾರು ಎಂಟರಿಂದ ಹತ್ತು ಸೆಕಂಡುಗಳ ಪಾಜ್ ಪಡೆಯುವುದು, ಈ ರೀತಿಯ ಮೂರು ಅಂಶಗಳನ್ನು ಅನುಷ್ಠಾನಗೊಳಿಸಿದಲ್ಲಿ, ಈ ಸಮಸ್ಯೆಯು ದೂರವಾಗಬಲ್ಲದು,” ಮೋಹನ್ ಎಲ್ಲರಿಗೂ ಹೇಳುತ್ತಾನೆ.

ಎಲ್ಲರಿಗೂ ಸಮಾಧಾನವಾಯಿತು. “ನಾವು ಈ ಸೆಟಪ್ ನಲ್ಲಿಯೇ ಟ್ರಯಲ್ ಗೆ ಹೆಚ್ಚು ಸಮಯ ನೀಡಬೇಕಾಗಿತ್ತು,” ಕಾರ್ಯನಿರ್ವಾಹಕ ನಿರ್ದೇಶಕರು ಹೇಳುತ್ತಾರೆ.

“ಸರ್, ನಾವು ಪ್ರೊಜೆಕ್ಟ್ ಪ್ಲಾನ್ ನಲ್ಲಿ ಮ್ಯಾನ್ಯುಫ್ಯಾಕ್ಚರಿಂಗ್ ಇಕ್ವಿಪ್ ಮೆಂಟ್ ಗೋಸ್ಕರ ಎಷ್ಟು ಬೇಕೋ ಅಷ್ಟೇ ಅಥವಾ ತುಂಬಾ ಸಮಯವನ್ನು ಮೀಸಲಾಗಿ ಇಡುತ್ತೇವೆ,” ದೇಶಪಾಂಡೆ ಸ್ವಲ್ಪ ಕಡಕ್ ಆಗಿಯೇ ಹೇಳುತ್ತಾರೆ, “ಆದರೆ ಕ್ವಾಲಿಟಿ ಮೆಜರ್ ಮೆಂಟ್ ಗೋಸ್ಕರ ಎಲ್ಲವೂ ‘ಯಸ್ಟರ್ಡೆ ಬೆಸಿಸ್’ನಲ್ಲಿಯೇ ಇರುತ್ತದೆ. ಇದಕ್ಕೋಸ್ಕರ ಪ್ಲಾನಿಂಗ್ ನಲ್ಲಿ ಮುಂಚಿನಿಂದಲೂ ಯೋಗ್ಯ ಸಮಯವನ್ನು ಕೊಡಬೇಕು. ಕೇವಲ ಸಿ.ಎಮ್.ಎಮ್.ನ ಟ್ರಯಲ್ ಮಾಡಿ ಎಲ್ಲ ಪ್ರೊಸೆಸ್ ಸರಿಯಾಗಲಾರದು. ಆದರೆ ನಾವು ನಿಗದಿಸಿರುವ ಆಪರೇಶನ್ ಸೈಕಲ್ ನ ಪುನರಾವರ್ತನೆ ಮತ್ತು ಸಾಮರ್ಥ್ಯ ಪೂರ್ತಿ ಮಾಡಲು ಸ್ವಲ್ಪ ಸಮಯ ಮತ್ತು ಸಪೋರ್ಟ್ ಸಿಕ್ಕಲ್ಲಿ ಹೆಚ್ಚು ಪರಿಣಾಮ ಸಿಗಬಲ್ಲದು.”

“ಓಕೆ... ಓಕೆ... ನನಗೆ ತಿಳಿಯಿತು ನಿಮಗೆ ಏನು ಹೇಳುವುದಿದೆ,” ಕಾರ್ಯನಿರ್ವಾಹಕ ನಿರ್ದೇಶಕರು ತನ್ನ ಜಾಗದಿಂದ ಏಳುತ್ತಾ ಹೇಳುತ್ತಾರೆ. “ಎಲ್ಲ ಪರೀಕ್ಷೆಗಳನ್ನು ಮುಂದಿನ ಮೂರು ದಿನಗಳಲ್ಲಿ ಮುಗಿಸಿ ಲೈನ್ ಚಾಲೂ ಮಾಡ್ರಿ. ಮೋಹನ್ ಗುಡ್ ಜಾಬ್, ಕೀಪ್ ಇಟ್ ಅಪ್. ನಾವು ದೇಶಮುಖರವರೊಂದಿಗೆ ಮತ್ತೆ ಫೋನ್ ನಲ್ಲಿ ಮಾತನಾಡ್ತೇನೆ. ಬೈ ದ ವೇ ದೇಶಪಾಂಡೆ. ಇವತ್ತು ಮೋಹನ್ ನಿಗೆ ಸರಿಯಾಗಿ ಅತಿಥಿ ಸತ್ಕಾರ ಮಾಡಿ, ಏನು?”

“ಯಸ್ ಸರ್” ಸುರ್ವೇ ಮತ್ತು ದೇಶಪಾಂಡೆ ಮೋಹನ್ ಕಡೆಗೆ ನೋಡುತ್ತಾ ಒಮ್ಮೆಲೆ ಹೇಳುತ್ತಾನೆ.
(ತಾಂತ್ರಿಕ ವಿವರಣೆ : ಮೋಮಿನ್ ಎ.ವೈ., ಅಪ್ಲಿಕೇಶನ್ ಎಂಡ್ ಟ್ರೇನಿಂಗ್ ಹೆಡ್, ಎಕ್ಯುರೇಟ್ ಗೇಜಿಂಗ್ ಎಂಡ್ ಇನ್ ಸ್ಟ್ರುಮೆಂಟ್ಸ್ ಪ್ರೈ.ಲಿ.)


9764955599
ಅಚ್ಯುತ್ ಮೇಢೇಕರ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಅವರಿಗೆ ಉತ್ಪಾದನೆ ಮತ್ತು ಗುಣಮಟ್ಟದ ನಿಯಂತ್ರಣೆಯ ವಲಯದಲ್ಲಿ ಸುಮಾರು 42 ವರ್ಷಗಳ ಅನುಭವವಿದೆ.
@@AUTHORINFO_V1@@