ಟ್ರಯಲ್ ಬ್ಯಾಲೆನ್ಸ್ ನ ವಿಂಗಡಣೆ

@@NEWS_SUBHEADLINE_BLOCK@@

Lohkarya - Udyam Prakashan    13-Sep-2021   
Total Views |
 
table01_1  H x
 
ಕಳೆದ ಸಂಚಿಕೆಯಲ್ಲಿ ಫೈನಲ್ ಅಕೌಂಟ್ ಅಂದರೆ ಬ್ಯಾಲೆನ್ಸ್ ಶೀಟ್ ಮತ್ತು ಲಾಭ-ನಷ್ಟ (ಪ್ರಾಫಿಟ್ ಎಂಡ್ ಲಾಸ್) ಅಕೌಂಟ್ ಈ ಎರಡು ವರದಿಗಳ ಕುರಿತು ಪ್ರಾಥಮಿಕ ಸ್ವರೂಪದ ಮಾಹಿತಿಯನ್ನು ತಿಳಿದುಕೊಂಡೆವು. ಹಾಗೆಯೇ ಈ ಎರಡು ವರದಿಗಳಲ್ಲಿ ಟ್ರಯಲ್ ಬ್ಯಾಲೆನ್ಸ್ ನಿಂದ ಲೆಜರ್ ಅಕೌಂಟ್ ನಿಂದ ಬ್ಯಾಲೆನ್ಸ್ ಪಡೆಯುವಾಗ ಯಾವ ಆಯಾಮಗಳನ್ನು ಸರಿಹೊಂದಿಸಲಾಗುತ್ತದೆ ಎಂಬುದರ ಕುರಿತಾಗಿ ಕೆಲವಾರು ಅಂಶಗಳನ್ನು ತಿಳಿದುಕೊಂಡೆವು. ಟ್ರಯಲ್ ಬ್ಯಾಲೆನ್ಸ್ ಈ ಎರಡು ವರದಿಗಳಲ್ಲಿ ಹೇಗೆ ವಿಂಗಡಿಸಲಾಗುತ್ತದೆ ಮತ್ತು ವಿವಿಧ ಲೇಜರ್ ಅಕೌಂಟ್ ಗಳನ್ನು ಆ ವರದಿಯಲ್ಲಿರುವ ಯಾವ್ಯಾವ ಜಾಗದಲ್ಲಿ ಅಳವಡಿಸಲ್ಪಡುತ್ತವೆ, ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಇದರ ಮೊದಲ ಹಂತವೆಂದರೆ ಈ ಎರಡೂ ವರದಿಗಳಿಗೆ ಕಂಪನಿ ಕಾನೂನಿನ ಪ್ರಕಾರ ನಿರ್ಧರಿಸುವ ಫಾರ್ಮೆಟ್ ನ್ನು ಅರಿತುಕೊಳ್ಳುವುದು ಆವಶ್ಯಕವಾಗಿದೆ. ಇದಕ್ಕೋಸ್ಕರ ಎ.ಬಿ.ಸಿ. ಪ್ರೈ.ಲಿ. ಕಂಪನಿಯು ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿಯಾಗಿದೆ, ಎಂಬುದಾಗಿ ಊಹಿಸೋಣ. ಈ ಕಂಪನಿಯ (31 ಮಾರ್ಚ್ 2021 ರಂದು ಮುಗಿದಿರುವ ಹಣಕಾಸು ವರ್ಷಕ್ಕೆ ಸಂಬಂಧಪಟ್ಟ) ವರದಿಯನ್ನು (ಕೋಷ್ಟಕ ಕ್ರ. 1) ಮಾದರಿ ಎಂಬುದಾಗಿ ತಿಳಿದುಕೊಳ್ಳೋಣ. ಈ ಕೋಷ್ಟಕದಲ್ಲಿ ಇರುವ ವಿವಿಧ ಶೀರ್ಷಿಕೆಗಳಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ. ಅದಕ್ಕೆ ಸಂಬಂಧಪಟ್ಟ ಪ್ರಚಲಿತವಿರುವ ಆಂಗ್ಲ ಶಬ್ದಗಳನ್ನು ಒಂದೇ ಕಾಲಮ್ ನಲ್ಲಿ ನೀಡಲಾಗಿದೆ. ಟ್ಯಾಲಿಯಲ್ಲಿ ಆಂಗ್ಲ ಭಾಷೆಯಲ್ಲಿ ಸಿಗುವ ಕೋಷ್ಟಕ, ಹಾಗೆಯೇ ಕಂಪನಿಗಳ ಮುದ್ರಿತ ವಾರ್ಷಿಕ ವರದಿಯನ್ನು ತಿಳಿದುಕೊಳ್ಳಲು ಈ ಮಾಹಿತಿಯಿಂದ ಸಹಾಯವಾಗುತ್ತದೆ. ಟ್ಯಾಲಿಯಲ್ಲಿ ಬ್ಯಾಲೆನ್ಸ್ ಶೀಟ್ ಮತ್ತು ಲಾಭ-ನಷ್ಟದ ಅಕೌಂಟ್ ತಯಾರಿಸಲು ಲೆಜರ್ ಅಕೌಂಟ್ ನ ಪ್ರೈಮರಿ ಗ್ರೂಪ್ ತಯಾರಿಸಲಾಗಿದೆ. ಇದರ ರೆಫರನ್ಸ್ ಕೋಷ್ಟಕದಲ್ಲಿ ನೀಡಲಾಗಿದೆ. ಈ ಹಿಂದೆ ತಿಳಿದುಕೊಂಡಂತೆ ಈ ಗ್ರೂಪ್ ಆಯ್ಕೆ ಮಾಡುವಾಗ ಒಂದು ವೇಳೆ ಯಾವುದೇ ರೀತಿಯ ತಪ್ಪುಗಳಾದಲ್ಲಿ ಟ್ಯಾಲಿಯ ಬ್ಯಾಲೆನ್ಸ್ ಶೀಟ್ ನಲ್ಲಿ ಹೇಗೆ ದೋಷಗಳುಂಟಾಗಬಲ್ಲವು ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.

ಫೈನಲ್ ಅಕೌಂಟ್ ನಲ್ಲಿರುವ ಹೆಚ್ಚು ಮಹತ್ವದ ವರದಿಗಳಲ್ಲಿ ಇರುವ ವಿವಿಧ ಶೀರ್ಷಿಕೆಗಳ ಕುರಿತು ಹೆಚ್ಚಿನ ವಿಶ್ಲೇಷಣೆಯನ್ನು ಮುಂದಿನ ಲೇಖಮಾಲೆಗಳಲ್ಲಿ ತಿಳಿದುಕೊಳ್ಳಲಿದ್ದೇವೆ. ಇದರಿಂದಾಗಿ ಪ್ರತಿಯೊಂದು ಶೀರ್ಷಿಕೆಗೆ ಒಂದು ರೆಫರನ್ಸ್ ಕ್ರಮಾಂಕ ಒಂದು ಕಾಲಮ್ ನಲ್ಲಿ ನೀಡಲಾಗಿದೆ. ಇದರ ರೆಫರನ್ಸ್ ಮುಂದಿನ ಸಂಚಿಕೆಗಳಲ್ಲಿ ಪ್ರಕಟಿಸಲಾಗುವ ಲೇಖನಗಳಲ್ಲಿ ಓದಬಹುದು. ಇದರಿಂದಾಗಿ ಆ ಕೋಷ್ಟಕದಲ್ಲಿ ವಿವರಿಸಿರುವ ಅಂಶಗಳನ್ನು ಉದಾಹರಣೆಯೊಂದಿಗೆ ಅರಿತು ಕೊಳ್ಳುವುದೂ ಸುಲಭವಾಗಬಲ್ಲದು. ಆದ್ದರಿಂದ ನೀಡಿರುವ ಮಾದರಿ ವರದಿಗಳನ್ನು ಜಾಗ್ರತೆಯಿಂದ ಇಟ್ಟುಕೊಂಡಲ್ಲಿ ಹಲವಾರು ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ಲಾಭಕಾರಿಯಾಗಬಲ್ಲದು.

ಕೋಷ್ಟಕ ಕ್ರ. 1 ರಲ್ಲಿ ನೀಡಿರುವ ಮಾದರಿಯ ಪ್ರಕಾರ ಫೈನಲ್ ಅಕೌಂಟ್ ಕುರಿತು ತಿಳಿದುಕೊಳ್ಳುವಾಗ ಪ್ರಾರಂಭದಲ್ಲಿ ಬ್ಯಾಲೆನ್ಸ್ ಶೀಟ್ ನಲ್ಲಿರುವ ವಿವಿಧ ಕಲ್ಪನೆಗಳು ಮತ್ತು ಶೀರ್ಷಿಕೆಗಳ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ. ಈ ಹಿಂದೆ ಅರಿತುಕೊಂಡಂತೆ ವ್ಯವಹಾರದ ಯಾವುದೇ ವಿಶಿಷ್ಟ ದಿನಾಂಕದ ಆಸ್ತಿ-ಪಾಸ್ತಿ ಮತ್ತು ಮರುಪಾವತಿಸುವಿಕೆಗಳ ಸ್ಥಿತಿಯು ಏನಿದೆ ಎಂಬುದನ್ನು ನಾವು ಬ್ಯಾಲೆನ್ಸ್ ಶೀಟ್ ನಲ್ಲಿ ನಮೂದಿಸುತ್ತೇವೆ. ಸುಲಭವಾದ ರೀತಿಯಲ್ಲಿ ತಿಳಿದುಕೊಳ್ಳಲು ದಿನನಿತ್ಯದ ಜೀವನದಲ್ಲಿ ಕೇಂದ್ರೀಯ ಮುಂಗಡಪತ್ರದ ಉದಾಹರಣೆಯನ್ನು ನೋಡೋಣ. ದಿನ ಪತ್ರಿಕೆಗಳಲ್ಲಿ ಕೇಂದ್ರ ಮುಂಗಡಪತ್ರದ ಕುರಿತು ಪ್ರಕಟಿಸಲಾಗುವ ಅನೇಕ ವಾರ್ತೆಗಳಲ್ಲಿ ಹೆಚ್ಚಾಗಿ ಸರ್ಕಾರದಲ್ಲಿ ಜಮೆಯಾಗುವ ಪ್ರತಿಯೊಂದು ರೂಪಾಯಿಯೂ ಎಲ್ಲೆಲ್ಲಿಂದ ಜಮೆಯಾಗುವುದನ್ನು ಅಪೇಕ್ಷಿಸಲಾಗಿದೆ ಮತ್ತು ಈ ರೀತಿಯ ಜಮೆಯಾಗಿರುವ ರೂಪಾಯಿಯು ವರ್ಷವಿಡಿ ಯಾವ್ಯಾವ ರೀತಿಯಲ್ಲಿ ಖರ್ಚು ಮಾಡಲಾಗುತ್ತದೆ, ಈ ಕುರಿತು ಸರ್ಕಾರ ಯೋಜನೆ ಏನಿದೆ, ಎಂಬುದನ್ನು ‘ಪಾಯ್ ಚಾರ್ಟ್’ ಸ್ಪರೂಪದಲ್ಲಿ ಒಂದು ಚೌಕಟ್ಟಿನಲ್ಲಿ ನೀಡಲಾಗಿರುತ್ತದೆ. ಈ ಚೌಕಟ್ಟಿನಿಂದ ಮುಂಗಡಪತ್ರದ ಕುರಿತು ಸಾಮಾನ್ಯವಾದ ಅಂದಾಜು ಓದುಗರಿಗೆ ತಿಳಿಯಬಲ್ಲದು. ಬ್ಯಾಲೆನ್ಸ್ ಶೀಟ್ ನಲ್ಲಿಯೂ ಚುಟುಕಾಗಿ ಈ ರೀತಿಯಲ್ಲಿ ಒಂದು ವಿಶಿಷ್ಟ ದಿನದ ಕೊನೆಯಲ್ಲಿ ವ್ಯವಸಾಯದಲ್ಲಿ ಮರುಪಾವತಿಸುವ ಹಣವು ಎಷ್ಟು ಪ್ರಮಾಣದಲ್ಲಿ ಜಮೆಯಾಗಿತ್ತು ಮತ್ತು ಅದನ್ನು ವ್ಯವಹಾರದಲ್ಲಿ ಯಾವ್ಯಾವ ರೀತಿಯಲ್ಲಿ ಖರ್ಚು ಮಾಡಲಾಗಿದೆ, ಅಂದರೆ ಆ ಹಣದಿಂದ ಯಾವ್ಯಾವ ಆಸ್ತಿ-ಪಾಸ್ತಿಗಳು ವ್ಯವಹಾರದಲ್ಲಿ ಲಭಿಸಿದ್ದವು, ಎಂಬುದರ ಕುರಿತು ವಿಸ್ತಾರವಾದ ಮಾಹಿತಿಯು ಲಭಿಸುತ್ತದೆ.

ಬ್ಯಾಲೆನ್ಸ್ ಶೀಟ್ ತಯಾರಿಸುವಾಗ ಟ್ರಯಲ್ ಬ್ಯಾಲೆನ್ಸ್ ನಲ್ಲಿರುವ ಯಾವುದೇ ಅಕೌಂಟ್ ಅಂದರೆ ವ್ಯವಹಾರದಲ್ಲಿರುವ ಆಸ್ತಿ-ಪಾಸ್ತಿಗಳಾಗಿವೆ ಮತ್ತು ವ್ಯವಹಾರದಲ್ಲಿ ಮರುಪಾವತಿಸುವಿಕೆಗಳು ಯಾವ ರೀತಿಯಲ್ಲಿವೆ, ಎಂಬುದರ ಕುರಿತು ಮೊತ್ತಮೊದಲಾಗಿ ವಿಮರ್ಶಿಸಬೇಕಾಗುತ್ತದೆ. ಈ ಕುರಿತು ‘ಲೋಹಕಾರ್ಯ’ ಆಗಸ್ಟ್ 2021 ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿರುವ ಲೇಖನದಲ್ಲಿ ನಾವು ತಿಳಿದುಕೊಂಡಿದ್ದೇವೆ. ಟ್ರಯಲ್ ಬ್ಯಾಲೆನ್ಸ್ ನಲ್ಲಿರುವ ಪ್ರತಿಯೊಂದು ಲೆಜರ್ ಅಕೌಂಟ್ ನ ಶ್ರೇಣಿ ಮತ್ತು ಬ್ಯಾಲೆನ್ಸ್ ನ ಕಾಲಮ್, ಇದರಿಂದ ಆ ಅಕೌಂಟ್ ನ್ನು ಬ್ಯಾಲೆನ್ಸ್ ಶೀಟ್ ನಲ್ಲಿ ನೀಡಲಾಗುತ್ತದೆಯೋ, ಅಥವಾ ಲಾಭ-ನಷ್ಟದ ವರದಿಯಲ್ಲಿ ನೀಡಬೇಕೋ, ಎಂಬುದನ್ನು ನಿರ್ಧರಿಸಲಾಗುತ್ತದೆ. ಇದನ್ನು ನಿರ್ಧರಿಸಿದ ನಂತರ ಸಂಬಂಧಪಟ್ಟ ವರದಿಯಲ್ಲಿ ವಿಶಿಷ್ಟ ಅಕೌಂಟ್ ಯಾವ ವರ್ಟಿಕಲ್ ನಲ್ಲಿರಬಲ್ಲದು, ಎಂಬುದನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ವ್ಯವಸಾಯದಲ್ಲಿ ಯಾವ ವಸ್ತುವಿನ ಅಥವಾ ಸೇವೆಯ ಮಾರಾಟವಾಗುತ್ತದೆ, ಈ ಕುರಿತಾದ ವಿಚಾರವನ್ನೂ ಸಂಬಂಧಪಟ್ಟ ಅಕೌಂಟ್ ವ್ಯವಹಾರದ ಆಸ್ತಿ-ಪಾಸ್ತಿ, ಮರುಪಾವತಿಸುವಿಕೆಗಳು, ಆದಾಯ ಅಥವಾ ಖರ್ಚು ಇವುಗಳಲ್ಲಿ ಯಾವ ರೀತಿಯದ್ದಾಗಿದೆ, ಎಂಬುದನ್ನು ನೋಡಿಯೇ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಹಾಗೆಯೇ ಸಂಬಂಧಪಟ್ಟ ಲೆಜರ್ ಅಕೌಂಟ್ ನ ಶ್ರೇಣಿಯು ಯಾವುದಿದೆ ಮತ್ತು ಟ್ಯಾಲಿಯಲ್ಲಿ ಆಯಾ ಅಕೌಂಟ್ ನ ಪ್ರಾಥಮಿಕ ಶ್ರೇಣಿ ಯಾವುದಿದೆ, ಎಂಬುದನ್ನು ನಿರ್ಧರಿಸುವಾಗಲೂ ಈ ಅಂಶಗಳ ವಿಚಾರ ಮಾಡಬೇಕಾಗುತ್ತದೆ. ಉದಾಹರಣೆ, ವಾಹನಗಳ ಖರೀದಿ ಇದು ಹೆಚ್ಚಿನ ವ್ಯವಸಾಯಗಳಿಗೆ ರಿಯಲ್ ಶ್ರೇಣಿಯಲ್ಲಿರುವ ಅಕೌಂಟ್ ಆಗಿರುತ್ತದೆ. ಅಲ್ಲದೇ ಆ ಅಕೌಂಟ್ ನಲ್ಲಿರುವ ಡೆಬಿಟ್ ಬ್ಯಾಲೆನ್ಸ್ ವ್ಯವಸಾಯದ ಅಸ್ತಿ-ಪಾಸ್ತಿ ಎಂಬುದಾಗಿ ಬಾಲೆನ್ಸ್ ಶೀಟ್ ನಲ್ಲಿ ಇನ್ನೊಂದು ವರ್ಟಿಕಲ್ ಭಾಗದಲ್ಲಿ ದೃಶ್ಯ ಸ್ವರೂಪದ ಅಚಲ (Immovable) ಆಸ್ತಿ-ಪಾಸ್ತಿ ಈ ಶೀರ್ಷಿಕೆಯಡಿಯಲ್ಲಿ ವಾಹನ ಎಂಬುದಾಗಿ ತೋರಿಸಲಾಗುತ್ತದೆ. ಟ್ಯಾಲಿಯಲ್ಲಿರುವ ಆ ಅಕೌಂಟ್ ನ ಪ್ರಾಥಮಿಕ ಫಿಕ್ಸ್ಡ್ ಅಸೆಟ್ ಇದೇ ಆಗಿರುತ್ತದೆ.
ಆದರೆ ಯಾವುದೊಂದು ವ್ಯವಸಾಯದ ಬಿಝಿನೆಸ್ ಮಾಡೆಲ್ ಒಂದು ವೇಳೆ ವಾಹನಗಳ ಖರೀದಿ ಮತ್ತು ಮಾರಾಟ ಮಾಡುವ ವ್ಯವಸಾಯದಲ್ಲಿ ನಾಮಿನಲ್ ಶ್ರೇಣಿಯಲ್ಲಿರುವ ಅಕೌಂಟ್ ಆಗಿರಬಲ್ಲದು. ಇದನ್ನು ಡೆಬಿಟ್ ಬ್ಯಾಲೆನ್ಸ್, ಲಾಭ-ನಷ್ಟದ ವರದಿಯಲ್ಲಿ ಮಾರಾಟಕ್ಕೆ ಮಾಡಲಾಗಿರುವ ಖರ್ಚು ಈ ಶೀರ್ಷಿಕೆಯಲ್ಲಿ ತೋರಿಸಲಾಗುತ್ತದೆ. ಟ್ಯಾಲಿಯಲ್ಲಿರುವ ಆಯಾ ಅಕೌಂಟ್ ನ ಪ್ರಾಥಮಿಕ ಶ್ರೇಣಿ ಇದು ಖರೀದಿಯೇ ಆಗಿರುತ್ತದೆ. ಇನ್ನೊಂದು ಉದಾಹರಣೆಯಿಂದ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಟ್ರಕ್ ನ ನಿರ್ಮಿತಿಯನ್ನು ಮಾಡುವ ಯಾವುದೊಂದು ಕಂಪನಿಯಲ್ಲಿ ವರ್ಷದ ಕೊನೆಯಲ್ಲಿ ಮಾರಾಟವಾಗದೇ ಉಳಿದಿರುವ ಟ್ರಕ್ ಗಳಿದ್ದಲ್ಲಿ, ಟ್ರಕ್ ತಯಾರಿಸಲು ಮಾಡಲಾಗಿರುವ ಉತ್ಪಾದನಾ ಖರ್ಚಿನ ಮೊತ್ತವನ್ನು ಆ ಕಂಪನಿಯ ಫೈನಲ್ ಅಕೌಂಟ್ ನಲ್ಲಿ ಪ್ರಚಲಿತ ಆಸ್ತಿ-ಪಾಸ್ತಿ ಎಂಬ ಶೀರ್ಷಿಕೆಯಲ್ಲಿ ತಯಾರಾಗಿರುವ ವಸ್ತುಗಳ ಸ್ಟಾಕ್ ಎಂಬುದಾಗಿ ಬ್ಯಾಲೆನ್ಸ್ ಶೀಟ್ ನಲ್ಲಿ ತೋರಿಸಲಾಗುತ್ತದೆ. ಹಾಗೆಯೇ ಟ್ಯಾಲಿಯಲ್ಲಿರುವ ಆಯಾ ಅಕೌಂಟ್ ನ ಪ್ರಾಥಮಿಕ ಶ್ರೇಣಿ ಕರಂಟ್ ಅಸೆಟ್ ಎಂಬುದಾಗಿದೆ ಇರಬಲ್ಲದು. ಆದರೆ ಉತ್ಪಾದನೆಯಾಗಿರುವ ಟ್ರಕ್ ಗಳಲ್ಲಿ ಯಾವುದೊಂದು ಟ್ರಕ್ ಈ ಕಂಪನಿಯು ತಮ್ಮ ಕಾರ್ಖಾನೆಯಲ್ಲಿ ವಸ್ತುಗಳ ಸಾಗಾಟಕ್ಕೆ ಬಳಸುವ ನಿರ್ಧಾರವನ್ನು ಕೈಗೊಂಡಲ್ಲಿ ಆ ಟ್ರಕ್ ನ ಉತ್ಪಾದನೆಯ ಖರ್ಚನ್ನು ಸ್ಟಾಕ್ ಎಂಬುದಾಗಿ ಪ್ರಚಲಿತ ಆಸ್ತಿ-ಪಾಸ್ತಿ ಎಂಬ ಶೀರ್ಷಿಕೆಯಲ್ಲಿ ಕಾಣಿಸದೇ, ಅಚಲ (immovable) ಆಸ್ತಿ-ಪಾಸ್ತಿ ಎಂಬುದಾಗಿ ಬ್ಯಾಲೆನ್ಸ್ ಶೀಟ್ ನಲ್ಲಿ ಕಾಣಿಸಲಾಗುತ್ತದೆ. ಹಾಗೆಯೇ ಟ್ಯಾಲಿಯಲ್ಲಿರುವ ಆ ಅಕೌಂಟ್ ನ ಪ್ರಾಥಮಿಕ ಶ್ರೇಣಿಗೆ ಫಿಕ್ಸ್ಡ್ ಎಸೆಟ್ ಆಗಿರುತ್ತದೆ.

ಲೆಜರ್ ಅಕೌಂಟ್ ನ ಶ್ರೇಣಿ ಮತ್ತು ಅದಕ್ಕೆ ಆದರಿಸಿ ಆ ಅಕೌಂಟ್ ಬ್ಯಾಲೆನ್ಸ್ ಶೀಟ್ ನಲ್ಲಿ ಬರಬಲ್ಲದೇ ಅಥವಾ ಲಾಭ-ನಷ್ಟದ ವರದಿಯಲ್ಲಿ ಇದರ ಕುರಿತಾದ ಆಯಾಮಗಳು ಹಾಗೆಯೇ ಟ್ಯಾಲಿಯಲ್ಲಿರುವ ಆ ಅಕೌಂಟ್ ನ
ಪ್ರಾಥಮಿಕ ಶ್ರೇಣಿ ಇವೆರಡೂ ಅಂಶಗಳು ಯಾವ ರೀತಿಯ ವ್ಯವಸಾಯವಿರುತ್ತದೆಯೋ ಅದರಲ್ಲಿ ಅವಲಂಬಿಸಿರುತ್ತದೆ, ಎಂಬ ಮಾಹಿತಿಯು ಈ ಎರಡೂ ಉದಾಹರಣೆಗಳಿಂದ ತಿಳಿಯುತ್ತದೆ.
 
ಕೋಷ್ಟಕ ಕ್ರ. 1 ರಲ್ಲಿರುವ ಲಾಭ-ನಷ್ಟವನ್ನು ವೀಕ್ಷಿಸಿದಾಗ ತಕ್ಷಣವೇ ಕೆಲವಾರು ಅಂಶಗಳು ಗಮನಕ್ಕೆ ಬರುತ್ತವೆ.
 

table01_1  H x  
 
ಶೀರ್ಷಿಕೆಯಿಂದ ತಕ್ಷಣ ಗಮನಕ್ಕೆ ಬರುವಂತಹ ಮೊದಲ ಅಂಶವೆಂದರೆ ಈ ಬ್ಯಾಲೆನ್ಸ್ ಶೀಟ್ ಯಾವುದೊಂದು ಕಂಪನಿಯ ಆಸ್ತಿ-ಪಾಸ್ತಿ ಮತ್ತು ಮರುಪಾವತಿಸುವಿಕೆ 31 ಮಾರ್ಚ್ 2021 ಈ ದಿನಾಂಕದ ಸ್ಥಿತಿಯು ನಗದಿ ರೂಪಾಯಿಗಳಲ್ಲಿ ಹೇಗಿತ್ತು, ಎಂಬುದನ್ನು ತಿಳಿಸುತ್ತದೆ. ಇನ್ನೊಂದು ಅಂದರೆ ಬ್ಯಾಲೆನ್ಸ್ ಶೀಟ್ ನ ಮೊದಲ ವರ್ಟಿಕಲ್ ಭಾಗದಲ್ಲಿ ಎಲ್ಲ ಪಾವತಿಸುವಿಕೆಗಳನ್ನು ತೋರಿಸಲಾಗಿದೆ. ಹಾಗೆಯೇ ಕೆಳ ಭಾಗದಲ್ಲಿರುವ ಇನ್ನೊಂದು ವರ್ಟಿಕಲ್ ಕಾಲಮ್ ನಲ್ಲಿ ಎಲ್ಲ ಆಸ್ತಿಪಾಸ್ತಿಗಳನ್ನು ತೋರಿಸಲಾಗಿದೆ. ಪರ್ಸನಲ್

table02_1  H x
 
ಶ್ರೇಣಿಯಲ್ಲಿರುವ ವ್ಯಕ್ತಿ ಅಥವಾ ಸಂಸ್ಥೆಗಳ ಅಕೌಂಟ್ ನಲ್ಲಿರುವ ಕ್ರೆಡಿಟ್ ಬ್ಯಾಲೆನ್ಸ್ ಅಂದರೆ ಅವರಿಗೆ ಪಾವತಿಸಬೇಕಾಗಿರುವ ಮೊತ್ತಗಳು ಅಂದರೆ ಸಾಮಾನ್ಯವಾಗಿ ವ್ಯಾಪಾರದಲ್ಲಿರುವ ಪಾವತಿಸುವಿಕೆಗಳಾಗಿರುತ್ತವೆ. ಅಲ್ಲದೇ ಅವುಗಳು ಬ್ಯಾಲೆನ್ಸ್ ಶೀಟ್ ನಲ್ಲಿ ಮೊದಲ ವರ್ಟಿಕಲ್ ಭಾಗದಲ್ಲಿ ಇರುತ್ತದೆ. ಹಾಗೆಯೇ ರಿಯಲ್ ಶ್ರೇಣಿಯಲ್ಲಿರುವ ವಸ್ತು ಮತ್ತು ಖಾಸಗಿ ಶ್ರೇಣಿಯಲ್ಲಿರುವ ವ್ಯಕ್ತಿ ಮತ್ತು ಸಂಸ್ಥೆಗಳ ಅಕೌಂಟ್ ನಲ್ಲಿರುವ ಡೆಬಿಟ್ ಬ್ಯಾಲೆನ್ಸ್ ಅಂದರೆ ಅವರಿಂದ ಬರಬೇಕಾಗಿರುವ ಮೊತ್ತ ಅಂದರೆ ಸಾಮಾನ್ಯವಾಗಿ ವ್ಯವಸಾಯದ ಆಸ್ತಿ-ಪಾಸ್ತಿಗಳಾಗಿರುತ್ತವೆ ಮತ್ತು ಆ ಎಲ್ಲ ಬ್ಯಾಲೆಸ್ಸ್ ಶೀಟ್ ನ ಇನ್ನೊಂದು ವರ್ಟಿಕಲ್ ಕಾಲಮ್ ನಲ್ಲಿರುತ್ತವೆ. ಮೂರನೆಯ ಅಂಶವೆಂದರೆ ಯಾವುದೊಂದು ಕಂಪನಿಯ 31 ಮಾರ್ಚಿ 2021 ರಂದು ಒಟ್ಟು ಪಾವತಿಸುವಿಕೆ 25 ಲಕ್ಷ ರೂಪಾಯಿಗಳಷ್ಟು ಇವೆ ಮತ್ತು ಅಷ್ಟೇ ಮೊತ್ತದ ಆಸ್ತಿ-ಪಾಸ್ತಿಗಳು ಕಂಪನಿಯಲ್ಲಿ ಅದೇ ದಿನ ಇರುತ್ತವೆ. ಅಂದರೆ ಪಾವತಿಸುವಿಕೆ ಮತ್ತು ಆಸ್ತಿ-ಪಾಸ್ತಿ ಇವೆರಡೂ ಒಂದೇ ರೀತಿಯ ಮೊತ್ತಗಳಾಗಿವೆ. ನಾಲ್ಕನೆಯದಾಗಿ ಪಾವತಿಸುವಿಕೆಗಳು ಮತ್ತು ಆಸ್ತಿ-ಪಾಸ್ತಿಗಳನ್ನು ಎರಡೂ ಶ್ರೇಣಿಯಲ್ಲಿ ತೋರಿಸಲಾಗಿರುವ ವಿವಿಧ ಲೆಜರ್ ಅಕೌಂಟ್ಸ್ ಗಳ ಗುಂಪನ್ನು ತಯಾರಿಸಿ ವಿಶಿಷ್ಟ ಫಾರ್ಮೆಟ್ ನಲ್ಲಿ ನೀಡಲಾಗಿರುತ್ತದೆ. ಇವುಗಳ ವಿಂಗಡಣೆಯನ್ನು ಯಾವ ಶೀರ್ಷಿಕೆಯಲ್ಲಿ ಮತ್ತು ಯಾವ್ಯಾವ ಕಲ್ಪನೆಗಳ ಆಧಾರದಲ್ಲಿ ಮಾಡಲಾಗಿದೆ, ಎಂಬುದರ ಕುರಿತು ಮುಂದಿನ ಲೇಖಮಾಲೆಯಲ್ಲಿ ತಿಳಿದುಕೊಳ್ಳೋಣ.

9822475611
ಮುಕುಂದ ಅಭ್ಯಂಕರ್ ಇವರು ಚಾರ್ಟರ್ಡ್ ಅಕೌಂಟಂಟ್ ಆಗಿದ್ದಾರೆ. ಕಳೆದ 30 ವರ್ಷಗಳ ಕಾಲಾವಧಿಯಲ್ಲಿ ಅವರು ಅನೇಕ ಕಂಪನಿಗಳ ಲೆಕ್ಕ ಪರಿಶೋಧನೆಯ (ಆಡಿಟ್) ಮತ್ತು ಹಣಕಾಸಿನ ಚಟುವಟಿಕೆಗಳ ಕುರಿತಾದ ಆಗುಹೋಗುಗಳ ವಿಶ್ಲೇಷಣೆಯ ಕೆಲಸವನ್ನು ಮಾಡುತ್ತಿದ್ದಾರೆ.
@@AUTHORINFO_V1@@