ಸಂಪಾದಕೀಯ

@@NEWS_SUBHEADLINE_BLOCK@@

Lohkarya - Udyam Prakashan    10-Sep-2021   
Total Views |
 
 Editorial
 
‘The only thing constant in the world is CHANGE’ ಇದೊಂದು ಆಂಗ್ಲ ಭಾಷೆಯಲ್ಲಿರುವ ನುಡಿ. ನಮ್ಮ ಸುತ್ತಮುತ್ತಲಿನ ಪ್ರಪಂಚವು ಅತಿ ಶೀಘ್ರವಾಗಿ ಬದಲಾಗುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಕೋವಿಡ್ ಈ ಗಂಭೀರವಾದ ಸಾಂಕ್ರಾಮಿಕ ರೋಗದ ನಂತರ ಈ ರೀತಿಯ ಬದಲಾವಣೆಗಳನ್ನು ಇನ್ನಷ್ಟು ವೇಗವಾಗಿ ಗಮನಕ್ಕೆ ಬರುತ್ತಿವೆ. ಪ್ರತಿದಿನ ವ್ಯವಹಾರಗಳ ರೀತಿಯಲ್ಲಿಯೂ ಬದಲಾವಣೆಗಳಾಗುತ್ತಿವೆ. ಶೈಕ್ಷಣಿಕ ವ್ಯವಸ್ಥೆಯಲ್ಲಿಯೂ ಬದಲಾವಣೆಗಳಾದವು. ವ್ಯವಸಾಯ- ಉದ್ಯಮಗಳಲ್ಲಿರುವ ಬೇಡಿಕೆಗಳು ಮತ್ತು ಮಾನದಂಡಗಳೂ ಬದಲಾದವು. ಇದರಿಂದ ಬದಲಾವಣೆಗಳನ್ನು ಸ್ವೀಕರಿಸುವುದು ಮತ್ತು ಅವುಗಳನ್ನು ಕಾರ್ಯಗತಗೊಳಿಸುವುದು ಅನಿವಾರ್ಯವಾಗಿದೆ, ಎಂಬ ಅಂಶವು ಮತ್ತೊಮ್ಮೆ ಸಾಬೀತಾಗಿದೆ.
 
ಇತ್ತೀಚೆಗೆ ಮುಗಿದಿರುವ ಓಲಿಂಪಿಕ್ ಸ್ಪರ್ಧೆಯನ್ನು ನಾವೆಲ್ಲರೂ ನೋಡಿದೆವು ಮತ್ತು ಅದರಲ್ಲಿ ಕೆಲವಾರು ಆಶ್ಚರ್ಯಗಳನ್ನು ಕೇಳಿದೆವು. ಒಟ್ಟು 86 ದೇಶಗಳಿಗೆ ಈ ಸ್ಪರ್ಧೆಯಲ್ಲಿ ಕನಿಷ್ಠ ಒಂದಾದರೂ ಪದಕವು ಲಭಿಸಿದೆ. ಆರ್ಥಿಕವಾಗಿ ದುರ್ಬಲವಿರುವ ದೇಶಗಳಿಂದ ಸಾಂಪತ್ತಿಕವಾಗಿ ಶ್ರೀಮಂತರಾಗಿರುವ ದೇಶಗಳೂ ಇದರಲ್ಲಿವೆ. ಈ 86 ದೇಶಗಳಲ್ಲಿ ಭಾರತವು 48 ಕ್ರಮಾಂಕದಲ್ಲಿದೆ. ಯಾವಾಗಲೂ ಜನ ಸಂಖ್ಯೆಯ ನಿಟ್ಟಿನಲ್ಲಿ ನೋಡಿದಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಮುನ್ನಡೆಯನ್ನು ಸಾಧಿಸಿರುವ ಮೊದಲ ಐದು ದೇಶಗಳಲ್ಲಿ ಪದಕಗಳ ವಿಜೇತರು ತುಂಬಾ ಕಡಿಮೆ, ಇದು ಮಾತ್ರ ತುಂಬಾ ಖೇದ ಜನಕ. ಈ ತನಕದ ಇತಿಹಾಸದ ಹಿನ್ನೆಲೆಯನ್ನು ಗಮನಿಸಿದಾಗ 7 ಪದಕಗಳನ್ನು ಪಡೆದು ತುಂಬಾ ಹೆಮ್ಮೆ ಪಡಲಾಗುತ್ತಿತ್ತು. ಪದಕಗಳನ್ನು ಪಡೆದಿರುವ ದೇಶಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿರುವ ದೇಶಗಳ ವಿಸ್ತೀರ್ಣ, ಜನಸಂಖ್ಯೆ ಹೆಚ್ಚು-ಕಡಿಮೆ ಇದ್ದರೂ ಕೂಡಾ ಆ ಎಲ್ಲ ದೇಶಗಳೆಡೆಗೆ ವೀಕ್ಷಿಸಿದಲ್ಲಿ ಒಂದು ಸರಿಸಮಾನತೆಯು ಕಂಡುಬರುತ್ತಿದೆ. ಆ ಸರಿಸಮಾನತೆ ಅಂದರೆ ಕೈಗಾರಿಕೋದ್ಯಮಗಳಲ್ಲಿ ಮಾಡಿರುವ ಪ್ರಗತಿ. ಜನರ ಜೀವನಮಟ್ಟವು ಉನ್ನತ ಮಟ್ಟದ್ದಾಗಿರುವ ದೇಶಗಳಾಗಿವೆ. ಅವರಲ್ಲಿರುವ ಉದ್ಯಮಗಳು ಅತ್ಯಾಧುನಿಕವಾಗಿದ್ದಾವೆ. ಅವರೆಲ್ಲಿರೂ ಹೊರ ತಂತ್ರಜ್ಞಾನವನ್ನು ಅರಿತುಕೊಂಡು ಉಚ್ಚಗುಣಮಟ್ಟದ ಉತ್ಪಾದನೆಗಳನ್ನು ಜಗತ್ತಿಗೆ ನೀಡುತ್ತಿದ್ದಾರೆ. ಇದೇ ವಿಚಾರವನ್ನು ಅವರೆಲ್ಲರೂ ಆಟಗಳಲ್ಲಿಯೂ ಕಾರ್ಯಗತಗೊಳಿಸಿದ್ದರಿಂದ ಅವರಿಗೆ ಲಭಿಸಿರುವ ಪದಕಗಳ ಸಂಖ್ಯೆಯೂ ಹೆಚ್ಚು. ಹೊಸ ತಂತ್ರ, ನಿರಂತರವಾಗ ಶ್ರಮ ಮತ್ತು ಸೂಕ್ತ ತರಬೇತಿಯಿಂದಾಗಿ ಆ ದೇಶಗಳಲ್ಲಿರುವ ಆಟಗಾರರು ಉನ್ನತ ಸ್ಥಾನವನ್ನು ಪಡೆದಿದ್ದಾರೆ.

ನಮ್ಮ ದೇಶದಲ್ಲಿರುವ ಲಘು ಮಧ್ಯಮ ಕೈಗಾರಿಕೋದ್ಯಮ ಕ್ಷೇತ್ರದ ಕುರಿತು ವಿಚಾರ ಮಾಡಿದಲ್ಲಿ, ಶಾಪ್ ಫ್ಲೋರ್ ನಲ್ಲಿ ಬಳಸಲಾಗುವ ಹೊಸ ತಂತ್ರಜ್ಞಾನ, ಕಾರ್ಯ ಸಾಮರ್ಥ್ಯ ಮತ್ತು ವ್ಯಕ್ತಿಗತ ತರಬೇತಿ ಈ ಮೂರು ಘಟಕಗಳಲ್ಲಿ ಬಂಡವಾಳವನ್ನು ಹೂಡಿದಲ್ಲಿ ಈ ವಲಯದಲ್ಲಿ ತಳವೂರಿ ನಿಂತು ಮುನ್ನಡೆಯನ್ನು ಸಾಧಿಸುವ ದಾರಿಯಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕ್ಕೊಳ್ಳಬೇಕು. ಇದರಲ್ಲಿ ಹೊಸ ತಂತ್ರಜ್ಞಾನದ ಕಾರ್ಯಾಚರಣೆಯು ಸಾಮಾನ್ಯವಾಗಿ ಆರ್ಥಿಕ ಕ್ಷಮತೆಗೆ ಅವಲಂಬಿಸಿ ನಿರ್ಧಾರವನ್ನು ಪಡೆಯಬೇಕಾಗುತ್ತದೆ. ಆದರೆ ಕಾರ್ಯಸಾಮರ್ಥ್ಯ ಮತ್ತು ತರಬೇತಿ ಇದು ಕಾರ್ಖಾನೆಯಲ್ಲಿರುವ ಪರಿಸ್ಥಿತಿ ಮತ್ತು ಸಂಸ್ಕೃತಿಯ ಭಾಗವಾಗಿದೆ. ಕಾರ್ಯಸಾಮರ್ಥ್ಯವನ್ನು ಹೆಚ್ಚಿಸಲು ತರಬೇತಿಯ ಆವಶ್ಯಕತೆ ಇದೆ. ಇದರಲ್ಲಿ ಪ್ರತಿಬಾರಿಯೂ ಯಾವುದೊಂದು ಸಮೂಹದಲ್ಲಿ ಕುಳಿತು ಅಭ್ಯಾಸ ಮಾಡುವುದು ಅಂದರೆ ತರಬೇತಿ ಪಡೆಯುವುದು, ಎಂಬ ಅರ್ಥವಲ್ಲ. ಪ್ರಸ್ತುತ ಲಭ್ಯವಿರುವ ವೆಬ್ ಸೈಟ್, ಯೂಟ್ಯೂಬ್ ಹಾಗೆಯೇ ಯಾಂತ್ರಿಕ ಮಾಸ ಪತ್ರಿಕೆಗಳ ಮಾಧ್ಯಮವನ್ನೂ ಬಳಸುವುದು ಅತ್ಯಾವಶ್ಯಕವಾಗಿದೆ. ಹಲವಾರು ಕಾರ್ಖಾನೆಗಳು ಈ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿಯೇ ಈ ಕುರಿತಾದ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅನೇಕ ಕೆಲಸದ ತಂಡಗಳ ಮಾಧ್ಯಮದಿಂದ ಕಾರ್ಖಾನೆಯಲ್ಲಿರುವ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ, ಪ್ರಕ್ರಿಯೆಗಳನ್ನು ಸುಧಾರಿಸುವಲ್ಲಿ ಹಾಗೆಯೇ ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸಲು ಹೊಸ ಪದ್ಧತಿಗಳನ್ನು ಮತ್ತು ನೂತನ ಟೆಕ್ನಿಕ್ಸ್ ಗಳನ್ನು ಅರಿತುಕೊಳ್ಳುವುದನ್ನು ಒತ್ತಾಯಿಸುತ್ತಾರೆ.

ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗೆ ಸ್ವಂತ ಓದಿ, ತಿಳಿದುಕೊಂಡು ತಜ್ಞನಾಗಿ ನಿಪುಣನಾಗಬೇಕಾದ ಆವಶ್ಯಕತೆಯನ್ನು ಗುರುತಿಸಿ ‘ಲೋಹಕಾರ್ಯ’ವು ಪ್ರತಿ ತಿಂಗಳೂ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಲೇಖನಗಳನ್ನು ಪ್ರಕಟಿಸುತ್ತಿದೆ. ಯಂತ್ರಭಾಗಗಳ ಫಾರ್ಮ್ ಮತ್ತು ಪ್ರೊಫೈಲ್ ಯಂತ್ರಣೆಗೆ ಸಂಬಂಧಪಟ್ಟ ಮಾಹಿತಿಯನ್ನು ನೀಡಬಲ್ಲ ವಿಶೇಷ ಲೇಖನಗಳನ್ನು ಪ್ರಸ್ತುತ ಸಂಚಿಕೆಯಲ್ಲಿ ಓದುಗರಿಗೆ ನೀಡಲಾಗುತ್ತಿದೆ. ಅನೇಕ ರೀತಿಯ ಅಚ್ಟುಕಟ್ಟಾದ ಪ್ಯಾರಾಮೀಟರ್ ಗಳಿರುವ ಯಂತ್ರಭಾಗಗಳ ಮಾಪನಗಳಿಗೋಸ್ಕರ ಅಭಿವೃದ್ಧಿ ಪಡಿಸಲಾಗಿರುವ ಮಶಿನ್ ಗಳ ಕುರಿತಾದ ಲೇಖನಗಳೊಂದಿಗೆ ಯಂತ್ರಭಾಗಗಳ ಫಾರ್ಮ್ ಮತ್ತು ಪ್ರೊಫೈಲ್ ನ ಪರೀಕ್ಷೆಗೆ ಬಳಸಲಾಗುವ 3D CMM ತಂತ್ರದ ಮಾಹಿತಿಯನ್ನು ವಿಸ್ತಾರವಾಗಿ ವಿಷದಪಡಿಸುವ ಲೇಖನಗಳನ್ನು ಮಾಪನದ ಅಂಕಣದಲ್ಲಿ ಓದಬಲ್ಲಿರಿ. ಫಾರ್ಮ್ ಅಥವಾ ಪ್ರೊಫೈಲ್ ನ ಯಂತ್ರಣೆಯನ್ನು ಮಾಡುವಾಗ ವಿಶಿಷ್ಟ ರೀತಿಯ ಜಾಮೆಟ್ರಿಯ ಟೂಲ್ ಗಳ ತಾಂತ್ರಿಕ ವಿವರಣೆಗಳಿರುವ ಲೇಖನಗಳನ್ನು ಟೂಲಿಂಗ್ ಈ ಅಂಕಣದಲ್ಲಿ ಅಳವಡಿಸಲಾಗಿದೆ. ಪ್ರೊಗ್ರಾಮಿಂಗ್ ಪ್ರಕ್ರಿಯೆಯನ್ನು ಸುಲಭವಾಗಿ ಮಾಡಬಲ್ಲ ಮ್ಯಾಕ್ರೊ ಪ್ರೊಗ್ರಾಮಿಂಗ್ ತಂತ್ರ ಮತ್ತು ಅದನ್ನು ನೇರವಾಗಿ ಬಳಸಿರುವ ಉದಾಹರಣೆಗಳನ್ನೂ ಈ ಸಂಚಿಕೆಯಲ್ಲಿ ನೀಡಲಾಗಿದೆ. ಇದರೊಂದಿಗೆ ಸುರಕ್ಷಿತತೆ, ಉಪಾಯಗಳು ಮತ್ತು ಕಾರ್ಖಾನೆಯಲ್ಲಿರುವ ಅನುಭವಗಳನ್ನು ಪ್ರತಿ ತಿಂಗಳಂತೆ ಪ್ರಕಟಿಸಲಾಗುತ್ತಿರುವ ಲೇಖಮಾಲೆ ಈ ಅಂಕಣದಲ್ಲಿ ಶಾಪ್ ಫ್ಲೋರ್ ನಲ್ಲಿ ನಿರ್ವಹಿಸಲಾಗುವ ದೈನಂದಿನ ಕೆಲಸಗಳಲ್ಲಿ ತಮಗೆಲ್ಲರಿಗೂ ಅತ್ಯುಪಯುಕ್ತವಾಗಬಲ್ಲವು, ಎಂಬ ವಿಶ್ವಾಸವು ನಮಗಿದೆ.

ದೀಪಕ ದೇವಧರ
[email protected]
@@AUTHORINFO_V1@@