ಟೇಪರ್ ನಲ್ಲಿರುವ ಥ್ರೆಡಿಂಗ್

@@NEWS_SUBHEADLINE_BLOCK@@

Lohkarya - Udyam Prakashan    25-Aug-2021   
Total Views |
  
IMG-1_1  H x W:
 
 
ಪರಸ್ಪರ ಜೋಡಿಸುವ ಶಾಫ್ಟ್ ಮತ್ತು ರಂಧ್ರಗಳಿಗೆ ಅತ್ಯಂತ ಕಡಿಮೆ ಟಾಲರನ್ಸ್ ನಲ್ಲಿ ಯಂತ್ರಣೆಯನ್ನು ಮಾಡುವಾಗ ಕೈಯಿಂದ ಶಾಫ್ಟ್ ನ್ನು ರಂಧ್ರದಲ್ಲಿ ಸರಿಸಲು ಸ್ವಲ್ಪ ಜಾಗವನ್ನು ಇಡಬೇಕಾಗುತ್ತದೆ. ಅವುಗಳ ಟಾಲರನ್ಸ್ ಎಷ್ಟು ನಿಖರವಾಗಿದ್ದರೂ ಕೂಡಾ ಶಾಫ್ಟ್ ನ ವ್ಯಾಸವು ರಂಧ್ರದ ವ್ಯಾಸಕ್ಕಿಂತ ಕಡಿಮೆಯೇ ಇರಬೇಕಾಗುತ್ತದೆ. ಇದರಲ್ಲಿ ಸ್ವಲ್ಪ ಜಾಗವನ್ನು ಬಿಟ್ಟಿದ್ದರಿಂದ ಈ ರೀತಿಯ ಜಾಯಿಂಟ್ ಗಳು ಎಂದಿಗೂ ಲೀಕ್ ಪ್ರೂಫ್ ಆಗಲಾರವು. ಇದರಂತೆಯೇ ಎರಡು ಯಂತ್ರಭಾಗಗಳನ್ನು ಜೋಡಿಸುವ ಆವಶ್ಯಕತೆ ಇರುವಾಗ ಸಮಾನಾಂತರವಾದ ಥ್ರೆಡ್ ಗಳನ್ನು ತಯಾರಿಸಲಾಗುತ್ತದೆ. ಅವುಗಳನ್ನು ಪರಸ್ಪರ ಸಿಲುಕಿಸುತ್ತೇವೆ. ಈ ರೀತಿಯ ಮಾಡಿದ್ದರಿಂದ ಎರಡೂ ಯಂತ್ರಭಾಗಗಳನ್ನು ಪರಸ್ಪರ ಜೋಡಿಸಲಾಗುತ್ತದೆ. ಆದರೆ ಒಂದು ವೇಳೆ ಈ ಜೋಡಣೆಯಲ್ಲಿರುವ ಜಾಯಿಂಟ್ ನ ಒಳಗಿಂದ ದ್ರವ ಪದಾರ್ಥವು ಹರಿಯುತ್ತಿದ್ದಲ್ಲಿ ಅದರ ಸೋರುವಿಕೆಯು ಇನ್ನೊಂದು ಬದಿಯಲ್ಲಿ ಆಗಬಹುದು. ಈ ರೀತಿ ಸಮಾನಾಂತರ ಥ್ರೆಡ್ ಗಳ ಜೋಡಿಯೂ ಲೀಕ್ ಪ್ರೂಫ್ ಜಾಯಿಂಟ್ಸ್ ನೀಡಲಾರದು. ದ್ರವದ ಸೋರುವಿಕೆ ಸ್ವಲ್ಪವೂ ಆಗಲಾರದಿರುವ ‘ಪ್ರೆಶರ್ ಟೈಟ್’ ಜಾಯಿಂಟ್ಸ್ ಗಳು ಬೇಕಾದಲ್ಲಿ ಟೇಪರ್ ಥ್ರೆಡ್ ಗಳನ್ನು ಬಳಸಬೇಕಾಗುತ್ತದೆ. ಹೊರ ಥ್ರೆಡ್ ಒಳ ಥ್ರೆಡ್ ನಲ್ಲಿ ಪ್ರವೇಶಿಸಬಲ್ಲದು ಮತ್ತು ಒಂದು ವಿಶಿಷ್ಟ ಕ್ರಾಸ್ ಸೆಕ್ಷನ್ ನಲ್ಲಿ ಹೊರ ಮತ್ತು ಒಳ ಥ್ರೆಡ್ ಗಳ ಪಿಚ್ ವ್ಯಾಸ ಸಮಾನವಾಗಿದ್ದಲ್ಲಿ ಅವುಗಳಲ್ಲಿ ಯಾವುದೇ ರೀತಿಯ ಸಾಪೇಕ್ಷ ವೇಗವು ಸಂಭವಿಸಲಾರದು. ಒಂದು ವೇಳೆ ಥ್ರೆಡ್ ಫಾರ್ಮ್ ನ ಯಂತ್ರಣೆಯು ಪರಿಪೂರ್ಣವಾಗಿದ್ದಲ್ಲಿ ಅದರಿಂದ ‘ಪ್ರೆಶರ್ ಟೈಟ್’ ಜಾಯಿಂಟ್ ಲಭಿಸಬಲ್ಲದು.
 

1.1 ಟೇಪರ್ ಥ್ರೆಡಿಂಗ್ ನ ಪ್ರಚಲಿತ ವಿಧಗಳು

 

ಎರಡು ವಿಧದ ಟೇಪರ್ ಥ್ರೆಡ್ ಗಳು ಪ್ರಚಲಿತವಾಗಿವೆ. ಮೊದಲನೆಯದಾಗಿ ಅಮೆರಿಕನ್ ಸ್ಟ್ಯಾಂಡರ್ಡ್ ಗಳಿಗೆ ಅನುಸಾರವಾಗಿ ನ್ಯಾಶನಲ್ ಪೈಪ್ ಟೇಪರ್ ( NPT) ಇರುವಂತಹದ್ದು ಮತ್ತು ಇನ್ನೊಂದು ಬ್ರಿಟಿಷ್ ಸ್ಟ್ಯಾಂಡರ್ಡ್ ಪೈಪ್ ಟೇಪರ್ (BSPT) ಅಥವಾ ISO ಮಾನದಂಡಗಳಿಗೆ ಅನುಸಾರವಾಗಿ ಸಮಾನವಾಗಿರುವುದು. ಈ ಲೇಖನದಲ್ಲಿ NPT ಥ್ರೆಡ್ ಮತ್ತು ಅವುಗಳ ಯಂತ್ರಣೆಗೋಸ್ಕರ ಬೇಕಾಗುವ ಪ್ರೊಗ್ರಾಮಿಂಗ್ ಕುರಿತು ತಿಳಿದುಕೊಳ್ಳೋಣ.

 

NPT ಮತ್ತು NPTF (ನ್ಯಾಶನಲ್ ಪೈಪ್ ಟೇಪರ್ ಫ್ಯುಯೆಲ್) ವಿಧಗಳಲ್ಲಿ ಒಳ ಮತ್ತು ಹೊರ ಎಂಬ ಎರಡು ವಿಧದ ಟೇಪರ್ ಥ್ರೆಡ್ ಗಳಿವೆ. ಅಲ್ಲದೇ ಅವುಗಳ ಟೇಪರ್ ಕೋನವು ಸಮಾನವಾಗಿರುತ್ತದೆ. ಅಂದರೆ 16 ಮಿ.ಮೀ. ಟೇಪರ್ ಉದ್ದದ ವ್ಯಾಸದಲ್ಲಿ 1 ಮಿ.ಮೀ. ಹೆಚ್ಚಳ ಅಥವಾ ಕಡಿತ ಇರುತ್ತದೆ. ಇದರಿಂದಾಗಿ ಟೇಪರ್ ಗೋಸ್ಕರ ಅರ್ಧ ಶಂಕುವಿನ ಕೋನ 1.7899° (4 ದಶಾಂಶ ಸ್ಥಾನದಷ್ಟು ನಿಖರ) ಇರುತ್ತದೆ.

 

NPT ಮತ್ತು NPTF ಈ ಎರಡೂ ವಿಧದಲ್ಲಿ ಥ್ರೆಡ್ ಗಳ V ಕೋನವು 60° ಇರುತ್ತದೆ. ಆದರೆ BSPT ಥ್ರೆಡ್ ಗೋಸ್ಕರ ಅದು 55° ಇರುತ್ತದೆ. ಟೇಪರ್ ಥ್ರೆಡ್ ಇರುವುದರಿಂದ ಹೊರ ಹಾಗೆಯೇ ಒಳ ಥ್ರೆಡ್ ಗಳ ಪ್ರಾರಂಭದಲ್ಲಿ ಅಳವಡಿಸಿರುವ ಪಿಚ್ ವ್ಯಾಸವು ಸಂಪರ್ಕದ ಉದ್ದದಲ್ಲಿ ಅವಲಂಬಿಸಿರುತ್ತದೆ. ಈ ರೀತಿಯಲ್ಲಿ ಎಲ್ಲ ಟೇಪರ್ ಥ್ರೆಡ್ ಗಳ ಸ್ಪೆಸಿಫಿಕೇಶನ್ ಗಳ ಪ್ರಾರಂಭವು ಹೊರ ಮತ್ತು ಒಳ ಥ್ರೆಡ್ ಗಳ ಪ್ರಾರಂಭದ ಪಿಚ್ ವ್ಯಾಸ ಮತ್ತು ಗೇಜ್ ಪ್ಲೇನ್ ನ ಥ್ರೆಡ್ ಗಳ ಪ್ರಾರಂಭದ ಫೇಸ್ ಸಂದರ್ಭದಲ್ಲಿರುವ ಸ್ಥಿತಿ, ಇವುಗಳನ್ನು ನಿರ್ಧರಿಸಿಯೇ ಮಾಡಲಾಗುತ್ತದೆ.

 

1.2 ಥ್ರೆಡ್ ಗಳ ಆಕಾರದ ನಿರ್ಧಾರ

 
 
ಈಗ ನಾವು NPT ಥ್ರೆಡ್ ಗಳಿಗೆ ಯಾವ ಆಯಾಮಗಳನ್ನು ಅಳವಡಿಸಬೇಕಾಗುತ್ತದೆ, ಎಂಬುದರ ಕುರಿತು ತಿಳಿದುಕೊಳ್ಳೋಣ 
 

ಚಿತ್ರ ಕ್ರ. 1 : ಟೇಪರ್ ಥ್ರೆಡಿಂಗ್ ನ ರೇಖಾಚಿತ್ರ

 

pic-1_1  H x W: 
 

1.2.1 NPT ಮತ್ತು NPTF ಥ್ರೆಡಿಂಗ್ ನ ಆಯಾಮಗಳು

 

ಹೊರ ಥ್ರೆಡ್ ಗಳ ಪ್ರಾರಂಭದ ಪಿಚ್ ವ್ಯಾಸ ಇದು E0 ನ ವ್ಯಾಖ್ಯೆ ಎಂದು ತಿಳಿಯಲಾಗುತ್ತದೆ (ಚಿತ್ರ ಕ್ರ. 1). ಒಳ ಥ್ರೆಡ್ ಗಳ ಪ್ರಾರಂಭದ ಪಿಚ್ ವ್ಯಾಸ, ಇಂತಹ E1 ನ ವ್ಯಾಖ್ಯೆವನ್ನು ಮಾಡಲಾಗುತ್ತದೆ. L1 ಇದು ಕೈಯಿಂದ ಬಿಗಿ ಮಾಡಿದ್ದರಿಂದ ಲಭಿಸಬಲ್ಲ ಸಂಪರ್ಕದ ಉದ್ದ (ಹ್ಯಾಂಡ್ ಟೈಟ್ ಎಂಗೇಜ್ಮೆಂಟ್ ಲೆಂಗ್ಥ್) ಇರುತ್ತದೆ. ಹೊರ ಥ್ರೆಡ್ ಗಳ ಪ್ರಾರಂಭದಲ್ಲಿ E0 ಈ ಪಿಚ್ ವ್ಯಾಸವಿದೆ, ಆದರೆ ಒಳ ಥ್ರೆಡ್ ಗಳ ಪ್ರಾರಂಭದಲ್ಲಿ E1 ಪಿಚ್ ವ್ಯಾಸವಿದೆ. ಹೊರ ಥ್ರೆಡ್ ಗಳಿಗೆ ಪಿಚ್ ವ್ಯಾಸ ಹೆಚ್ಚುತ್ತಾ ಹೋಗುತ್ತದೆ, ಆದರೆ ಒಳ ಥ್ರೆಡ್ ಗಳಿಗೆ ಪಿಚ್ ವ್ಯಾಸ ಕಡಿಮೆ ಆಗುತ್ತಾ ಹೋಗುತ್ತದೆ.

 

NPT ಮತ್ತು NPTF ಥ್ರೆಡ್ ಗಳಿಗೆ E0 ಮತ್ತು E1 ನ ಸೂತ್ರಗಳು ಈ ಮುಂದಿನಂತಿವೆ.

E0 = D - (0.05D + 1.1) * P

E1 = E0 + (0.0625 * L1)

L2 = [(0.8 * D) + 6.8] * P

ಎಲ್ಲಿ,

D : ಪೈಪ್ ನ ಹೊರ ವ್ಯಾಸ (ID ಮತ್ತು ಪ್ರವಾಹದ ವಲಯ (ಫ್ಲೋ ಏರಿಯಾ) ಇವುಗಳ ಆಧಾರದಲ್ಲಿ ಪೈಪ್ ನಿರ್ಧರಿಸಲಾಗುತ್ತದೆ).

P : ಅಮೆರಿಕನ್ ಹಾಗೆಯೇ ಬ್ರಿಟಿಷ್ ಮಾನದಂಡಗಳಿಗೆ ಥ್ರೆಡ್ ಗಳ ಪಿಚ್, ಥ್ರೆಡ್ ಪ್ರತಿ ಇಂಚು (TPI) ನಿರ್ಧರಿಸಲಾಗಿದೆ. ಈ ರೀತಿಯಲ್ಲಿ P = 1/TPI ಇಂಚಿನಲ್ಲಿ.

L1 : ಕೈಯಿಂದ ಬಿಗಿ ಮಾಡಿದ ನಂತರ ಲಭಿಸುವ ಸಂಪರ್ಕ ಉದ್ದ.

L2 : ಹೊರ ಥ್ರೆಡ್ ಗಳ ಪರಿಣಾಮಕಾರಿಯಾದ ಮೂಲಭೂತ ಉದ್ದ.

ಚಿತ್ರ ಕ್ರ. 1 ರಲ್ಲಿ ಇನ್ನಿತರ ಕೆಲವು ಆಯಾಮಗಳನ್ನು ನಿರ್ದಿಷ್ಟಗೊಳಿಸಲಾಗಿದೆ. ಅದರ ಅರ್ಥವು ಈ ಮುಂದಿನಂತಿದೆ.

 

1. ಯಾವ ಉದ್ದಕ್ಕಿಂತ ಹೆಚ್ಚು ಥ್ರೆಡ್ ಫಾರ್ಮ್ ನ ತುದಿಯಲ್ಲಿ ಪರಿಪೂರ್ಣವಾಗಿರಲಾರದೋ ಆ ದೂರ L5 ರಿಂದ ನಿರ್ಧರಿಸಲಾಗುತ್ತದೆ. ಟೇಪರ್ ಥ್ರೆಡ್ ಗಳಲ್ಲಿ ಮೇಜರ್ ವ್ಯಾಸ ನಿರಂತರ ಹೆಚ್ಚಾಗುತ್ತಿರುವುದರಿಂದ ಇದು ಸಂಭವಿಸುತ್ತದೆ. ಆದರೂ ಕೂಡಾ ಪೈಪ್ ನ ಹೊರ ವ್ಯಾಸ ಸ್ಥಿರವಾಗಿರುತ್ತದೆ. ಮುಂದಿನ ಎರಡು ಥ್ರೆಡ್ ಗಳಿಗೆ (ಚಿತ್ರ ಕ್ರ. 1 ರಲ್ಲಿ 2P ಎಂಬುದಾಗಿ ನೀಡಲಾಗಿರುವ), ಥ್ರೆಡ್ ಗಳ ಬುಡದಲ್ಲಿರುವ (ರೂಟ್) ವ್ಯಾಸ ಪರಿಪೂರ್ಣ, ಅಂದರೆ ಸೂತ್ರಗಳಿಂದ ಲಭಿಸುವ ಆಕಾರದ್ದಾಗಿರುತ್ತದೆ.

2. ಉದ್ದ L3 ಒಳ ಥ್ರೆಡ್ ಗಳಿಗೋಸ್ಕರ ‘ರೆಂಚ್ ಮೇಕ್ ಅಪ್’ನ ಉದ್ದ ನಿರ್ಧರಿಸಲಾಗುತ್ತದೆ. L1 ಗಿಂತ ಹೆಚ್ಚಾಗಿ ಕನಿಷ್ಠದಷ್ಟು ಹೆಚ್ಚುವರಿ ಉದ್ದದ ತನಕ ಒಳ ಥ್ರೆಡ್ ಗಳ ಯಂತ್ರಣೆಯನ್ನು ಮಾಡಲಾಗುತ್ತದೆ.

3. ಉದ್ದ L4 ಹೊರ ಥ್ರೆಡ್ ಗಳ ಸಂಪೂರ್ಣ ಉದ್ದ ನಿರ್ಧರಿಸುತ್ತದೆ. ಥ್ರೆಡ್ ಗಳ ಎತ್ತರ 0.8P ಪಡೆಯಲಾಗುತ್ತದೆ.

 

ಯಾವ ಥ್ರೆಡ್ ಗಳ V ಕೋನ 60° ಇರುತ್ತದೆ, ಅಂತಹ ಚೂಪಾಗಿರುವ ಥ್ರೆಡ್ ಗಳಿಗೆ ಈ ಎತ್ತರವು 0.866P ಇರುತ್ತದೆ. ಆದರೆ, ಚೂಪಾಗಿರುವ ಬಿಂದುವನ್ನು ಅಳವಡಿಸುವುದು ಸಾಧ್ಯವಿರುವುದಿಲ್ಲ ಮತ್ತು ಅದಕ್ಕೋಸ್ಕರವೇ ತುದಿಯಲ್ಲಿ ಹಾಗೆಯೇ ಥ್ರೆಡ್ ಗಳ ಬುಡದ ಆಕಾರವನ್ನು ತುಂಡು ಮಾಡಿ ಸ್ವಲ್ಪ ಸಮತಟ್ಟಾಗಿ ಮಾಡಲು (ಟ್ರಂಕೇಶನ್) ಅನುಮತಿ ಇರುತ್ತದೆ. ಮೇಲೆ ಉಲ್ಲೇಖಿಸಿರುವ ವಿವಿಧ ಆಯಾಮಗಳಿಗೋಸ್ಕರ ಚಿತ್ರ ಕ್ರ. 1 ರ ಸಂದರ್ಭವನ್ನು ಪಡೆಯಿರಿ. ಸುಲಭವಾದ ಸಂದರ್ಭಕ್ಕೋಸ್ಕರ .
 

pic-2_1  H x W: 
 
ಥ್ರೆಡ್ ಡಾಟಾ ಕೋಷ್ಟಕ ಕ್ರ. 1 ರ ಸಂದರ್ಭವನ್ನು ಪಡೆಯಿರಿ.
 
 ಚಿತ್ರ ಕ್ರ. 2 : 1” NPT ಹೊರ ಥ್ರೆಡ್ ಗಳಿಗೋಸ್ಕರದ 
 

ಚಿತ್ರ ಕ್ರ. 3 : ½” NPT ಒಳ ಥ್ರೆಡ್ ಗಳಿಗೋಸ್ಕರ ಅಳತೆಗಳು

 

2.1 ಥ್ರೆಡಿಂಗ್ ಗೋಸ್ಕರ ಆವಶ್ಯಕವಿರುವ ಮಾಹಿತಿ

 
NPT/ BSPT ಅಥವಾ ಯಾವುದೇ ಥ್ರೆಡ್ ಗಳ ಪ್ರೊಗ್ರಾಮಿಂಗ್ ಗೋಸ್ಕರ ಈ ಮುಂದಿನ ಮಾಹಿತಿ ಆವಶ್ಯಕವಿರುತ್ತದೆ. (ಚಿತ್ರ ಕ್ರ. 2 ಮತ್ತು 3).
 

pic-3_1  H x W: 
 

1. ಚಿಕ್ಕ (ಮೈನರ್) ವ್ಯಾಸ. ಥ್ರೆಡ್ ಗಳ ಚಿಕ್ಕ ತುದಿಯಲ್ಲಿ # (Dss)

2. ದೊಡ್ಡ (ಮೇಜರ್) ವ್ಯಾಸ. ಥ್ರೆಡ್ ಗಳ ಚಿಕ್ಕ ತುದಿಯಲ್ಲಿ (Dsb)

3. ಚಿಕ್ಕ ವ್ಯಾಸ. ಥ್ರೆಡ್ ಗಳ ದೊಡ್ಡ ತುದಿಯಲ್ಲಿ # (Dbs)

4. ದೊಡ್ಡ ವ್ಯಾಸ. ಥ್ರೆಡ್ ಗಳ ದೊಡ್ಡ ತುದಿಯಲ್ಲಿ (Dbb)

5. ಥ್ರೆಡ್ ಗಳ ಪಿಚ್ (P) (ಸಿಂಗಲ್ ಸ್ಟಾರ್ಟ್ ಊಹಿಸಿ)

6. ಥ್ರೆಡ್ ಗಳ ಎತ್ತರ (h)

# ಟೇಪರ್ ಥ್ರೆಡ್ ಗಳ ವ್ಯಾಸವು ನಿರಂತರವಾಗಿ ಬದಲಾಗುತ್ತದೆ. ಇದಕ್ಕೋಸ್ಕರ ಕಡಿಮೆ ವ್ಯಾಸದ ತುದಿಗೆ ಚಿಕ್ಕ ತುದಿ (ಸ್ಮಾಲ್ ಎಂಡ್) ಮತ್ತು ದೊಡ್ಡ ವ್ಯಾಸದ ತುದಿಗೆ ದೊಡ್ಡ ತುದಿ (ಬಿಗ್ ಎಂಡ್) ಎಂದು ಹೇಳುತ್ತಾರೆ.

 
2.1.1 NPT ಥ್ರೆಡ್ ಗಳ ಪ್ರೋಗ್ರಾಮಿಂಗ್ ಗೋಸ್ಕರ ಆವಶ್ಯಕವಿರುವ ಮಾಹಿತಿ
 

pic-4_1  H x W: 

ಕೋಷ್ಟಕ ಕ್ರ. 1

 

ಎಲ್ಲ NPT ಡಾಟಾ ಪಿಚ್ ವ್ಯಾಸದಲ್ಲಿ ಆಧರಿಸಲ್ಪಡುತ್ತದೆ. ಒಂದು ವೇಳೆ ಥ್ರೆಡ್, ಒತ್ತಡದ (ಸ್ಟ್ರೆಸ್) ಗಣನೆ, ಗೇಜಿಂಗ್ ಮುಂತಾದ ಡಿಸೈನ್ ಗಳನ್ನು ಮಾಡಲು ಪಿಚ್ ವ್ಯಾಸವು ತುಂಬಾ ಮಹತ್ವದ್ದಾದ ಅಂಶವಾಗಿದ್ದರೂ ಕೂಡಾ ಥ್ರೆಡಿಂಗ್ ಗೋಸ್ಕರ ಪ್ರೊಗ್ರಾಮಿಂಗ್ ಮಾಡುವಾಗ ಅದಕ್ಕೆ ಏನೂ ಮಹತ್ವವಿರುವುದಿಲ್ಲ.

ನಾವು NPT ಗೆ ಆಧರಿಸಿರುವ ಯಂತ್ರಭಾಗಗಳ ಥ್ರೆಡಿಂಗ್ ಗೋಸ್ಕರ ಪ್ರೊಗ್ರಾಮ್ ತಯಾರಿಸಲು ಮಾಹಿತಿಯನ್ನು ಒಟ್ಟು ಮಾಡಲು ಪ್ರಾರಂಭಿಸುವಾಗ, ಲಭ್ಯವಿರುವ ಕೋಷ್ಟಕದಲ್ಲಿ (ಕೋಷ್ಟಕ ಕ್ರ. 1) ಚಿಕ್ಕ ಮತ್ತು ದೊಡ್ಡ ವ್ಯಾಸದ ಕುರಿತು ಸಿದ್ಧವಾಗಿರುವ ಮಾಹಿತಿ ಲಭ್ಯ ಇಲ್ಲದಿರುವುದು ಗಮನಕ್ಕೆ ಬರುತ್ತಿದೆ.

ಥ್ರೆಡ್ ಗಳ ಎತ್ತರದ ಆಧಾರದಲ್ಲಿ ನಾವು ಎರಡೂ ತುದಿಗಳಲ್ಲಿ ಈ ಮುಂದಿನಂತೆ ಚಿಕ್ಕ ಮತ್ತು ದೊಡ್ಡ ವ್ಯಾಸದ ಗಣನೆಯನ್ನು ಮಾಡಬಲ್ಲೆವು. ಒಳ ಥ್ರೆಡ್ ಗಳಿಗೆ ಫೇಸ್ ನಿಂದ ಚಿಕ್ಕ ತುದಿಯಷ್ಟು (L1 + L3) ಆಳ (ಕನಿಷ್ಠ) ಇರುತ್ತದೆ. ಆದರೆ ದೊಡ್ಡ ತುದಿ ಎದುರಲ್ಲಿರುವ ಫೇಸ್ ನಲ್ಲಿ ಮತ್ತು ಹೊರ ಥ್ರೆಡ್ ಗಳಿಗೆ ಚಿಕ್ಕ ತುದಿ ಮುಂಭಾಗದ ಫೇಸ್ ನಲ್ಲಿ ಇರುತ್ತದೆ ಮತ್ತು ದೊಡ್ಡ ತುದಿ ಮುಂಭಾಗದಲ್ಲಿರುವ ಫೇಸ್ ನಿಂದ L4 ದೂರದಲ್ಲಿರುತ್ತದೆ.

 

2.1.2 ಕೋಷ್ಟಕ ಕ್ರ. 1 ರಲ್ಲಿ ನೀಡಿರುವ ಮಾಹಿತಿಯನ್ನು ಹೇಗೆ ಬಳಸಬೇಕು ?

 

ಈ ಒಂದು ಉದಾಹರಣೆಯನ್ನು ಸರಿಯಾಗಿ ತಿಳಿದುಕೊಳ್ಳಬಹುದು.

1” NPT ಹೊರ ಥ್ರೆಡ್ ಗಳ ಮತ್ತು ½” NPT ಒಳ ಥ್ರೆಡ್ ಗಳ ಯಂತ್ರಣೆಯಗೋಸ್ಕರ ಯೋಗ್ಯ ಮಾಹಿತಿಯನ್ನು ಪಡೆಯುವಲ್ಲಿ ಕೋಷ್ಟಕವನ್ನು ಬಳಸೋಣ. ನಾವು ಅದರ ಪ್ರಾರಂಭವನ್ನು ವಿವಿಧ ಥ್ರೆಡ್ ಗಳ ಆಯಾಮಗಳ ಮೌಲ್ಯವನ್ನು ನೀಡಬಲ್ಲ ನಿರ್ದೇಶನದ ಕೋಷ್ಟಕದಿಂದ ಪ್ರಾರಂಭಿಸೋಣ.

 

2.1.2.1 ಹೊರ 1” NPT ಥ್ರೆಡ್ ಗಳು

 

1” ಪೈಪ್ ಗೋಸ್ಕರ ಪೈಪ್ ನ ಹೊರ ವ್ಯಾಸ D 1.315” ಇದೆ. ಹಾಗೆಯೇ ಅದಕ್ಕೋಸ್ಕರದ ಪಿಚ್ 0.08696 ಇದೆ. ಇದರಿಂದ E0 ನ ಗಣನೆಯನ್ನು ಈ ಮುಂದಿನಂತೆ ಮಾಡಲಾಗುತ್ತದೆ.

1.315 - [(0.05 * 1.315) + 1.1] *

0.08696

E0 = 1.21363”.

ಈಗ ನಿರ್ಧರಿಸಿರುವ ಥ್ರೆಡ್ ನ ಎತ್ತರ 0.8 P ಇದೆ. ಇದರಿಂದಾಗಿ

H = 0.8 * 0.08696

 = 0.069568”

ಈ ರೀತಿಯಲ್ಲಿ ಯಂತ್ರಣೆಯ ಕೆಲಸದ ಪ್ರಾರಂಭದಲ್ಲಿ ದೊಡ್ಡ ವ್ಯಾಸ ಮತ್ತು ಚಿಕ್ಕ ವ್ಯಾಸ ಹೀಗಿರಬಲ್ಲದು,

Dsb     = E0 + H

    = 1.21363 + 0.069568

    = 1.2832”

Dss      = E0 - H

    = 1.21363 - 0.069568

    = 1.1441” ಅನುಕ್ರಮವಾಗಿ

ಹೊರ ಥ್ರೆಡ್ ಗಳ L4 ಉದ್ದದ ತನಕ ಯಂತ್ರಣೆಯನ್ನು ಮಾಡುವುದು ಅತ್ಯಾವಶ್ಯಕವಾಗಿದೆ.

L4 = L2 + V

ಡೈಯಲ್ಲಿರುವ ಎಂಟ್ರಿ ಚ್ಯಾಂಫರ್ ನಿಂದಾಗಿ ತಯಾರಿಸಲ್ಪಡುವ ಅಪೂರ್ಣವಾದ ಥ್ರೆಡ್ ಗಳ ಉದ್ದ V ಆಗಿದೆ. ನಮ್ಮ ಉದಾಹರಣೆಯಲ್ಲಿ, ನಾವು ಥ್ರೆಡ್ ಗಳ ಯಂತ್ರಣೆಗೋಸ್ಕರ ಸಿ.ಎನ್.ಸಿ. ಬಳಸಲಿದ್ದೇವೆ. ಇದರಿಂದಾಗಿ ಮೊದಲ ಲೇಖನದಲ್ಲಿ ಉಲ್ಲೇಖಿಸಿದಂತೆ ತಮಗೆ ಕನಿಷ್ಠ ಒಂದು ಪಿಚ್ ನಷ್ಟು ದೂರದ V ಆವಶ್ಯವಾಗಿದೆ. ಒಂದು ವೇಳೆ ನಾವು V = 2P ಎಂಬುದಾಗಿ ಊಹಿಸಿದಲ್ಲಿ,

L4   = L2 + 2 * P

L2   = [(0.80 * D) + 6.8] * P

    = [(0.80 * 1.315) + 6.8] *

       0.08696

    = 0.6828”

ಅಂದರೆ

L4   = 0.6828 + 2 * 0.08696

    = 0.8567”.

L4 ಆಧಾರದಲ್ಲಿ ಈಗ ನಾವು ದೊಡ್ಡ ತುದಿಯಲ್ಲಿರುವ ದೊಡ್ಡ ಮತ್ತು ಚಿಕ್ಕ ವ್ಯಾಸದ ಗಣನೆಯನ್ನು ಈ ಮುಂದಿನಂತೆ ಮಾಡಬಲ್ಲೆವು.

Dbb = Dsb + L4/16

     = 1.2832 + (0.8567/16)

     = 1.3367”

Dbs = Dss + L4/16

     = 1.1441 + (0.8567/16)

     = 1.1976”.

ಪೈಪ್ ನ ಹೊರ ವ್ಯಾಸ ‘D’ ಇದು 1.315” ಇಷ್ಟಿದೆ, ಅದು Dbb ಗಿಂದ ಕಡಿಮೆ ಇದೆ. ದೊಡ್ಡ ವ್ಯಾಸ 1.315” ಈ ಆಕಾರದ ತನಕ ತಲುಪುವಲ್ಲಿ ಒಂದು ವೇಳೆ ಥ್ರೆಡ್ ಗಳ ಮುಂಭಾಗದ ಫೇಸ್ ನಿಂದ ಪ್ರಾರಂಭವಾಗುವ ಉದ್ದ L ಇದಾಗಿದೆ, ಎಂದು ಊಹಿಸಿದಲ್ಲಿ, ಅದರ ಗಣನೆ ಈ ರೀತಿಯಾಗಬಲ್ಲದು.

D         = Dsb + L/16

ಎಂಬುದಕ್ಕಾಗಿ

L          = 16 * (D - Dsb)

    = 16 * (1.315 - 1.2832)

    = 0.5088”

ಈ ಎಲ್ಲ ಮೌಲ್ಯಗಳನ್ನು ಸಹಜವಾಗಿ ಅರಿತುಕೊಳ್ಳಲು ಚಿತ್ರ ಕ್ರ. 2 ರಲ್ಲಿ ತೋರಿಸಲಾಗಿದೆ.

 

2.1.2.2 ಒಳ ½” NPT ಥ್ರೆಡ್

NPT ಥ್ರೆಡೆಡ್ ಜಾಯಿಂಟ್ ಗಳ ಕುರಿತು ತಮಗೆ L1 ನಷ್ಟು ಕೈಯಿಂದ ಬಿಗಿಯಾಗಿ ಮಾಡಿದ ನಂತರ ಲಭಿಸಬಲ್ಲ ಸಂಪರ್ಕ ಉದ್ದ ಬೇಕಾಗಿದೆ. ½” NPT ಯ ಒಳ ಥ್ರೆಡ್ ಗಳಿಗೋಸ್ಕರ ಈ ಮೌಲ್ಯ 0.320” ಇದೆ. ಒಳ ಥ್ರೆಡ್ ಗಳ ಕುರಿತು ಎಲ್ಲಕ್ಕಿಂತಲೂ ದೊಡ್ಡ ವ್ಯಾಸ ಥ್ರೆಡ್ ಗಳ ಫೇಸ್ ನಲ್ಲಿರುತ್ತದೆ ಮತ್ತು ಥ್ರೆಡ್ ಗಳ ಕನಿಷ್ಠ ಆವಶ್ಯಕವಿರುವ ಉದ್ದ L1 + L3 ಯಷ್ಟು ಇರುತ್ತದೆ. L3 ನ ಮೌಲ್ಯ 0.2143 ಇರುತ್ತದೆ. ಈ ಥ್ರೆಡ್ ಗಳ ಆಕಾರಕ್ಕೋಸ್ಕರ ಪಿಚ್ ನ ಮೌಲ್ಯ P, 0.01743 ಇಷ್ಟು ಇದೆ ಮತ್ತು ಥ್ರೆಡ್ ಗಳ ಎತ್ತರ H, 0.0571” ಇದೆ. ಜೋಡಿಸಲ್ಪಡುವ (ಮೆಟಿಂಗ್) ಪೈಪ್ ನ ಥ್ರೆಡ್ ಗಳ OD ಅಂದರೆ D ಯ ಮೌಲ್ಯ 0.840” ಇದೆ. ಈ ರೀತಿಯಲ್ಲಿ E1,ಅಂದರೆ ಥ್ರೆಡ್ ಗಳ ಫೇಸ್ ನಲ್ಲಿರುವ ಪಿಚ್ ವ್ಯಾಸ ಮುಂದಿನ ಸಮೀಕರಣದ ಮೂಲಕ ನೀಡಲಾಗುತ್ತದೆ.

E1   = E0 + L1/16

E0   = D - (0.05 * D + 1.1) * P

    = 0.840 - [(0.05 * 0.840) +

       1.1] * 0.07143

    = 0.7584”

ಇದರಿಂದಾಗಿ

E1   = 0.7584 + (0.320/16)

    = 0.7784”.

ನಾವು ಚಿಕ್ಕ ತುಡಿಯಲ್ಲಿರುವ ಚಿಕ್ಕ ಮತ್ತು ದೊಡ್ಡ ವ್ಯಾಸಕ್ಕೆ ಅನುಕ್ರಮವಾಗಿ Dss ಮತ್ತು Dsb ಎಂದು ಕರೆಯುತ್ತೇವೆ, ಆದರೆ ದೊಡ್ಡ ತುದಿಯಲ್ಲಿ ಅವುಗಳನ್ನು ಅನುಕ್ರಮವಾಗಿ Dbs ಮತ್ತು Dbb ಎಂದು ಕರೆಯುತ್ತೇವೆ. ಈ ರೀತಿಯಲ್ಲಿ

Dbb    = E1 + H

    = 0.7784 + 0.0571

    = 0.8355”

Dbs     = E1 - H

    = 0.7784 - 0.0571

    = 0.7213”.

ಇಲ್ಲಿಯೂ ನಾವು 2P ಅಂದರೆ ಥ್ರೆಡ್ ಗಳ ಹೆಚ್ಚುವರಿ ಉದ್ದ ಎಂದು ಊಹಿಸಿದಲ್ಲಿ, ಪ್ರೊಗ್ರಾಮಿಂಗ್ ಮಾಡಲು ಒಟ್ಟು ಥ್ರೆಂಡಿಂಗ್ ಉದ್ದ, Lth ಮುಂದೆ ನೀಡಿದಂತೆ ಇದ್ದಲ್ಲಿ

Lth      = L1 + L3 + (2 * P)

    = 0.320 + 0.2143 +

       (2 * 0.07143)

    = 0.6772”

ಇದರಿಂದಾಗಿ,

Dss      = Dbs - Lth/16

    = 0.7213 - (0.6772/16)

    = 0.6790”

Dsb     = Dbb - Lth/16

    = 0.8355 - (0.6772/16)

    = 0.7932”.

ದಯವಿಟ್ಟು ಈ ಎಲ್ಲ ಆಯಾಮಗಳನ್ನು ವೀಕ್ಷಿಸಲು ಚಿತ್ರ ಕ್ರ. 3 ರ ಸಂದರ್ಭವನ್ನು ಪಡೆಯಿರಿ.

 

2.2 ಪ್ರೊಗ್ರಾಮಿಂಗ್ ಡಾಟಾದ ಸಾರಾಂಶ

 
 
2.2.1 ಹೊರ ಥ್ರೆಡ್ 1” NPT 
 

pic-5_1  H x W: 

ಕೋಷ್ಟಕ ಕ್ರ. 2.1

 
ಇಲ್ಲಿ ನಾವು ಮೊದಲು ಟೇಪರ್ OD ಟರ್ನಿಂಗ್ ಮತ್ತು ನಂತರ ಹೊರ ಟೇಪರ್ ಥ್ರೆಡಿಂಗ್ ಮಾಡುತ್ತಿದ್ದೇವೆ. ಇದಕ್ಕೋಸ್ಕರ ನಾವು ಕೋಷ್ಟಕ ಕ್ರ. 2.1 ರಲ್ಲಿ ನೀಡಿದಂತೆ ಯಂತ್ರಣೆಯನ್ನು  
 

pic-6_1  H x W: 

ಮಾಡಬೇಕು.

ಕೋಷ್ಟಕ ಕ್ರ. 2.2

2.2.2 ಒಳ ಥ್ರೆಡ್ ½” NPT

 

ಇಲ್ಲಿ ನಾವು ಟೇಪರ್ ಬೋರಿಂಗ್ ಮತ್ತು ನಂತರ ಇಂಟರ್ನಲ್ ಟೇಪರ್ ಥ್ರೆಡಿಂಗ್ ಮಾಡುತ್ತಿದ್ದೇವೆ. ಇದಕ್ಕೋಸ್ಕರ ನಾವು ಕೋಷ್ಟಕ ಕ್ರ. 2.2 ರಲ್ಲಿ ನೀಡಿದಂತೆ ಯಂತ್ರಣೆಯನ್ನು ಮಾಡಬೇಕಾಗುತ್ತದೆ.

ಇಲ್ಲಿ ನೀಡಿರುವ G ಕೋಡ್ ಫಾನುಕ ಕಂಟ್ರೋಲರ್ ನ ವಿಶಿಷ್ಟ ಆವೃತ್ತಿಗೋಸ್ಕರ ಮನ್ನಿಸಲಾಗಿದೆ, ಎಂಬುದನ್ನು ಗಮನಿಸಬೇಕು. ಬಳಕೆಗಾರರು ಅದರ ಕಂಟ್ರೋಲರ್ ಗೋಸ್ಕರ ಸಮಕಕ್ಷ G ಕೋಡ್ ಗುರುತಿಸಿ ಬಳಸುವುದು ಅತ್ಯಾವಶ್ಯಕವಾಗಿದೆ.

 

2.3 ಥ್ರೆಡಿಂಗ್ ಪ್ರೊಗ್ರಾಮ್

 

2.3.1 : 1” ಹೊರ NPT ಥ್ರೆಡಿಂಗ್ ಗೋಸ್ಕರ ಪ್ರೊಗ್ರಾಮ್

ಈ ಹಿಂದಿನ ಲೇಖನದಲ್ಲಿ ನೋಡಿದಂತೆ ಎಲ್ಲಿ G92 ಈ ಸೈಕಲ್ ಬಳಸುವುದಿದೆ ಮತ್ತು ಅದರ ಫಾರ್ಮೆಟ್ ಹೀಗಿರುತ್ತದೆ.

G92 X<a1> Z<b> R<c> F<f>

X<a2>

X<a3>

..........

X<an>

ಮೌಲ್ಯ R = (Dbb - Dsb)/2

ಎಂಬುದಾಗಿ

R = (1.3367 - 1.2832)/2

    = 0.02675".

ಮಿ.ಮೀ. ನಲ್ಲಿ

R = 0.02675 * 25.4

   = 0.6795 ಮಿ.ಮೀ.

 
ನಾವು ಕೋಷ್ಟಕ ಕ್ರ. 2.3 ಕ್ಕೆ ಅನುಸಾರವಾಗಿ ಎಲ್ಲ ಇಂಪಿರೀಯಲ್ ಡಾಟಾ ಮೆಟ್ರಿಕ್ ನಲ್ಲಿ ರೂಪಾಂತರಿಸೋಣ. 
 

pic-7_1  H x W: 

ಕೋಷ್ಟಕ ಕ್ರ. 2.3

ನಾವು ಕಾರ್ಯವಸ್ತುವಿನ ಮಟೀರಿಯಲ್, ಪ್ಲೇನ್ ಕಾರ್ಬನ್ ಸ್ಟೀಲ್ ನ ಗ್ರೇಡ್ ಇದೆ ಎಂಬುದನ್ನು ಊಹಿಸೋಣ ಮತ್ತು ಸುರಕ್ಷಿತವಾಗಿರುವ ಯಂತ್ರಣೆಯ ವೇಗದಿಂದ (Vc) (80 ಮೀ./ ನಿಮಿಷ) ಪ್ರಾರಂಭಿಸೋಣ.

ನಾವು ಥ್ರೆಡಿಂಗ್ ನಲ್ಲಿ CSS ನಲ್ಲಿ ಬಳಸಲಾರೆವು. ಇದರಿಂದಾಗಿ ನಮಗೆ ಒಂದು ಸ್ಥಿರವಾದ ಆರ್.ಪಿ.ಎಮ್. ಚುನಾಯಿಸಬೇಕಾಗುತ್ತದೆ. 31.5 ಮಿ.ಮೀ. ಈ ರೀತಿಯಲ್ಲಿ ಸರಾಸರಿ ವ್ಯಾಸ ಊಹಿಸಿ ಮುಂದಿನ ಆರ್.ಪಿ.ಎಮ್. ಲಭಿಸುತ್ತದೆ.

ಆರ್.ಪಿ.ಎಮ್.   = Vc/(3.14 * D)

    = 80000 / (3.4 * 31.5)

    = 808

ಅಂದರೆ ಸುಮಾರು 800. ಈಗ ಮುಂದೆ ನೀಡಿದಂತೆ ಪ್ರೊಗ್ರಾಮ್ ಹೀಗಿರಬಲ್ಲದು,

G97 S800 M3 T0101

G0 X40.0 Z10.0 M8

G1 X35.0 Z3.0 F0.5

G92 X33.7 Z-21.7601 R-0.6795 F2.2087

X33.45

X33.2

X33.0

X32.8

X32.6

X32.425

X32.25

X32.075

X31.9

X31.75

X31.6

X31.45

X31.325

X31.2

X31.1

X31.0

X30.9

X30.82

X30.74

X30.67

X30.61

X30.55

X30.5

X30.45

X30.419

X30.419

X30.419

G0 X40.0 Z5.0

2.3.2 : 1/2” ಯಲ್ಲಿ NPT

ಥ್ರೆಡಿಂಗ್ ಗೋಸ್ಕರ ಪ್ರೊಗ್ರಾಮ್

R = (Dbb - Dsb)/2

    ಅದಕ್ಕೋಸ್ಕರವೇ

R = (0.8355 - 0.7932)/2

    = 0.02115".

ಮಿ.ಮೀ.ನಲ್ಲಿ

R = 0.02115 * 25.4 = 0.5372 ಮಿ.ಮೀ.

 
ನಾವು ಈಗ ಕೋಷ್ಟಕ ಕ್ರ. 2.4 ಕ್ಕೆ ಅನುಸಾರವಾಗಿ ಎಲ್ಲ ಇಂಪೀರಿಯಲ್ ಡಾಟಾ ಮೆಟ್ರಿಕ್ ನಲ್ಲಿ ರೂಪಾಂತರಿಸೋಣ.

ಕೋಷ್ಟಕ ಕ್ರ. : 2.4


pic-8_1  H x W: 
 

ನಾವು ಕಾರ್ಯವಸ್ತುವಿನ ಮಟೀರಿಯಲ್, ಪ್ಲೇನ್ ಕಾರ್ಬನ್ ಸ್ಟೀಲ್ ನ ಗ್ರೇಡ್ ಇದೆ, ಎಂಬುದಾಗಿ ತಿಳಿಯೋಣ ಮತ್ತು ಸುರಕ್ಷಿತವಾದ ಯಂತ್ರಣೆಯ ವೇಗದಿಂದ (Vc) (60 ಮೀ./ನಿಮಿಷ) ಪ್ರಾರಂಭಿಸೋಣ. ನಾವು ಥ್ರೆಡಿಂಗ್ ನಲ್ಲಿ CSS ಬಳಸಲಾರೆವು. ಇದರಿಂದಾಗಿ ತಮಗೆ ಒಂದು ಸ್ಥಿರವಾದ ಆರ್.ಪಿ.ಎಮ್. ಚುನಾಯಿಸಬೇಕಾಗುತ್ತದೆ.

19.75 ಮಿ.ಮೀ. ಈ ರೀತಿಯಲ್ಲಿ ಸರಾಸರಿ ವ್ಯಾಸವನ್ನು ಊಹಿಸಿ, ಮುಂದಿನ ಆರ್.ಪಿ.ಎಮ್. ಲಭಿಸುತ್ತದೆ.

ಆರ್.ಪಿ.ಎಮ್. Vc/(3.14 * D)

                60000/(3.14 * 19.75)

                = 967

ಅಂದಾಜು 965

ಈ ಮುಂದೆ ನೀಡಿದಂತೆ ಪ್ರೊಗ್ರಾಮ್ ಇದ್ದಲ್ಲಿ

G97 S965 M3 T0202

G0 X16.0 Z10.0 M8

G1 X16.5 Z2.0 F0.5

G92 X17.5 Z-17.2 R0.5372 F1.8143

X17.7

X17.9

X18.05

X18.20

X18.35

X18.475

X18.6

X18.725

X18.85

X18.95

X19.05

X19.15

X19.25

X19.35

X19.43

X19.51

X19.58

X19.65

X19.72

X19.77

X19.82

X19.86

X19.90

X19.94

X19.98

X20.02

X20.06

X20.09

X20.12

X20.147

X20.147

X20.147

G0 X17.0 Z5.0

 

9922945410

ವಿವೇಕ್ ಮರಾಠೆ ಇವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ. ಅವರು ವೈಭವ ಮ್ಯಾನ್ಯುಫ್ಯಾಕ್ಚರಿಂಗ್ ಸಲ್ಯೂಶನ್ಸ್ ಪ್ರೈ.ಲಿ. ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ವಿವಿಧ ಯಂತ್ರಭಾಗಗಳ ಉತ್ಪಾದನೆಯನ್ನು ಮಾಡುವಾಗ ಅವರು ತರಬೇತಿಯನ್ನು ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಯಾಂತ್ರಿಕ ಶಿಕ್ಷಣವನ್ನು ನೀಡುವಲ್ಲಿ ಹೆಚ್ಚು ಆದ್ಯತೆಯನ್ನು ನೀಡುತ್ತಾರೆ.
 
 
 
 
 
 
 
@@AUTHORINFO_V1@@