ಸಾಮಾನ್ಯವಾಗಿ ಸಿ.ಎಸ್.ಸಿ. ಮಶಿನಿಂಗ್ ಸೆಂಟರ್ ನಲ್ಲಿ ಪ್ರೊಗ್ರಾಮ್ ನಂತೆಯೇ ಆಗುತ್ತಿರುವ ಟೂಲ್ ಗಳ ಚಟುವಟಿಕೆಗಳು ಡ್ರಾಯಿಂಗ್ ನಲ್ಲಿರುವ ಮಾಪನಗಳಂತೆ ಇರುತ್ತವೆ. ಹಲವಾರು ಸಲ ಕಟರ್ ನ ತ್ರಿಜ್ಯದ ಆಫ್ ಸೆಟ್ ಅದರಲ್ಲಿ ಪಡೆಯಲಾಗಿರುತ್ತದೆ. ಅನೇಕ ಸಲ ಮಶನಿಂಗ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿರುವಾಗ ಪ್ರೊಗ್ರಾಮ್ ನಂತೆಯೇ ನಡೆಯುವ ಟೂಲ್ ಗಳ ಚಟುವಟಿಕೆಗಳು ಆಗಾಗ ಅದೇ ರೀತಿಯಲ್ಲಿ ಮಾಡುವ ಆವಶ್ಯಕತೆಯು ಉಂಟಾಗುತ್ತದೆ. ಟೂಲ್ ಗಳ ಈ ಚಟುವಟಿಕೆಗಳು ಪ್ರೊಗ್ರಾಮ್ ನಲ್ಲಿ ನೀಡಿರುವ ಮೌಲ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಮಾಡುವ ಆವಶ್ಯಕತೆ ಇರುತ್ತದೆ. ಹಾಗೆಯೇ ಈ ಚಟುವಟಿಕೆಗಳು ಮೂಲ ಚಟುವಟಿಕೆಗಳ ಗುಣಾಕಾರದಲ್ಲಿರಬೇಕಾಗುತ್ತದೆ. ಇದನ್ನು ಸಾಧಿಸಲು ಕಂಟ್ರೋಲರ್ ನಲ್ಲಿ ಒಂದು ವಿಶಿಷ್ಟವಾದ ವ್ಯವಸ್ಥೆಯನ್ನು ನೀಡಲಾಗಿದೆ. ಅದಕ್ಕೆ ಸ್ಕೇಲಿಂಗ್ ಫಂಕ್ಷನ್ ಎಂದು ಹೇಳಲಾಗಿದೆ.
ಸ್ಕೇಲಿಂಗ್ ಫಂಕ್ಷನ್ ಕುರಿತು ಮಹತ್ವದ ಅಂಶಗಳು
ವರ್ಣನೆ
ಎಲ್ಲ ಪ್ರೊಗ್ರಾಮ್ ಮಾಡಿರುವ ಚಟುವಟಿಕೆಗಳಿಗೆ, ಕಂಟ್ರೋಲರ್ ಮೂಲಕ ಒಂದು ನಿರ್ಧರಿಸಿದ ಸ್ಕೇಲಿಂಗ್ ಫ್ಯಾಕ್ಟರ್ ಅಳವಡಿಸಲಾಗುತ್ತದೆ. ಇದರಿಂದಾಗಿ ಎಲ್ಲ ಅಕ್ಷಗಳ ಪ್ರೊಗ್ರಾಮ್ ಮಾಡಿರುವ ಮೌಲ್ಯವನ್ನು ಬದಲಾಯಿಸಲಾಗುತ್ತದೆ.
ಸ್ಕೇಲಿಂಗ್ ಪ್ರೊಸೆಸ್ ಗೋಸ್ಕರ ಅಪೇಕ್ಷಿಸಿರುವ ಮೌಲ್ಯ = ಪ್ರೊಗ್ರಾಮ್ ಮಾಡಿರುವ ಅಕ್ಷದ ಮೌಲ್ಯ x ಸ್ಕೇಲಿಂಗ್ ಫ್ಯಾಕ್ಟರ್.
ಸ್ಕೇಲಿಂಗ್ ಫ್ಯಾಕ್ಟರ್ ಸೆಂಟರ್ ಪಾಯಿಂಟ್ ನೊಂದಿಗೆ ಆಧರಿಸಿರುತ್ತದೆ. ಅದಕ್ಕೋಸ್ಕರ ಪ್ರೊಗ್ರಾಮರ್ ಗೆ ಸ್ಕೇಲಿಂಗ್ ಸೆಂಟರ್ ಪಾಯಿಂಟ್ ಮತ್ತು ಸ್ಕೇಲಿಂಗ್ ಫ್ಯಾಕ್ಟರ್ ಈ ಎರಡೂ ಅಂಶಗಳನ್ನು ತಿಳಿಸಬೇಕಾಗುತ್ತದೆ. ಕಂಟ್ರೋಲರ್ ನಿಂದ ಪ್ಯಾರಾಮೀಟರ್ ಮೂಲಕ ಸ್ಕೇಲಿಂಗ್ ಆನ್ ಅಥವಾ ಆಫ್ ಮಾಡುವುದು ಸಾಧ್ಯವಿದೆ. ಸ್ಕೇಲಿಂಗ್ ಪ್ರಮುಖವಾದ ಮೂರು ಅಕ್ಷಗಳಲ್ಲಿ (X, Y, Z) ಸ್ವತಂತ್ರವಾಗ ಆನ್ ಅಥವಾ ಆಫ್ ಮಾಡಬಹುದಾಗಿದೆ. ವ್ಯಾವಹಾರಿಕವಾಗಿ ಅನೇಕ ಬಾರಿ ಸ್ಕೇಲಿಂಗ್ ಕೇವಲ X ಮತ್ತು Y ಅಕ್ಷಗಳಿಗೆ ಬಳಸಲಾಗುತ್ತದೆ. ಸ್ಕೇಲಿಂಗ್ ಫಂಕ್ಷನ್ ನ ಬಳಕೆಯಿಂದಾಗಿ ಈ ಮುಂದಿನ ಆಫ್ ಸೆಟ್ ಫಂಕ್ಷನ್ ನಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ.
ಕಟರ್ ತ್ರಿಜ್ಯ ಆಫ್ ಸೆಟ್ G41 – G42/D
ಟೂಲ್ ಲೆನ್ಥ್ ಆಫ್ ಸೆಟ್ G43 – G44/H
ಟೂಲ್ ಪೋಜಿಶನ್ ಆಫ್ ಸೆಟ್ G45 – G48/H
ಹಾಗೆಯೇ ಫಿಕ್ಸ್ಡ್ ಸೈಕಲ್ ನಲ್ಲಿ ಈ ಮುಂದಿ ನ ಜಾಗದಲ್ಲಿ ಸ್ಕೇಲಿಂಗ್ ಫಂಕ್ಷನ್ ಬಳಸುವುದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ.
• G76 ಮತ್ತು G87 ಸೈಕಲ್ ನಲ್ಲಿರುವ X, Y ಶಿಫ್ಟ್ ಮೌಲ್ಯ
• G83 ಮತ್ತು G73 ಸೈಕಲ್ ನಲ್ಲಿರುವ ಪೇಕ್ ಡ್ರಿಲ್ ಆಳ Q
• G83 ಮತ್ತು G73 ಸೈಕಲ್ ನಲ್ಲಿ ಸ್ಟೋರ್ ಮಾಡಿರುವ ರಿಲೀಫ್ ಮೌಲ್ಯಚಿತ್ರ ಕ್ರ. 1
ಸ್ಕೇಲಿಂಗ್ ಫಂಕ್ಷನ್ ನ ಬಳಕೆ
ಸ್ಕೇಲಿಂಗ್ ಫಂಕ್ಷನ್ ನ ಬಳಕೆಯಿಂದಾಗಿ ಹೆಚ್ಚಿನ ಕೆಲಸಕ್ಕಾಗಿ ವ್ಯರ್ಥವಾಗುವ ಸಮಯದಲ್ಲಿ ಉಳಿತಾಯವಾಗುತ್ತದೆ. ಇದರಿಂದಾಗಿ ಈ ಕೆಳಗಿನ ಜಾಗದಲ್ಲಿ ಸ್ಕೇಲಿಂಗ್ ಫಂಕ್ಷನ್ ನ ಬಳಕೆಯು ಲಾಭಕಾರಿಯಾಗುತ್ತದೆ.
• ಜಾಮೆಟ್ರಿಕಲಿ ಸ್ವಾಮ್ಯ ಇರುವ ಭಾಗಗಳು.
• ಶ್ರಿಂಕೇಜ್ ಫ್ಯಾಕ್ಟರ್ ಒಳಗೊಂಡಿರುವ ಭಾಗಗಳ ಯಂತ್ರಣೆ.
• ಮೋಲ್ಡಿಂಗ್ ನ ಕೆಲಸ.
• ಕಚ್ಚುಗಳ ಯಂತ್ರಣೆಯಲ್ಲಿ ಇಂಗ್ಲಿಷ್ ನಿಂದ ಮೆಟ್ರಿಕ್, ಹಾಗೆಯೇ ಮೆಟ್ರಿಕ್ ನಿಂದ ಇಂಗ್ಲಿಷ್ ವಿಧದ ಕಚ್ಚುಗಳ ರೂಪಾಂತರ.
• ಕೊರೆದಿರುವ (ಎನ್ ಗ್ರೇವ್) ಮಾಡಿರುವ ಅಕ್ಷರಗಳ ಗಾತ್ರವನ್ನು ಬದಲಾಯಿಸುವುದು (ಚಿತ್ರ ಕ್ರ. 1), ಅದೇ ರೀತಿಯಲ್ಲಿ ಮೂಲ ಗಾತ್ರಕ್ಕಿಂತ ಗಾತ್ರವನ್ನು ಹೆಚ್ಚಿಸುವುದು ಮತ್ತು ಗಾತ್ರವನ್ನು ಕಡಿಮೆ ಮಾಡುವುದು, ಇದಕ್ಕೋಸ್ಕರ ಸ್ಕೇಲಿಂಗ್ ಬಳಸಲಾಗುತ್ತದೆ. ಮೂಲ ಗಾತ್ರ ಅಂದರೆ ಸದ್ಯಕ್ಕೆ ಅಸ್ತಿತ್ವದಲ್ಲಿರುವ ಟೂಲ್ ನ ದಾರಿ.
ಪ್ರೊಗ್ರಾಮಿಂಗ್ ಫಾರ್ಮೆಟ್
ಸಿ.ಎನ್.ಸಿ. ಪ್ರೊಗ್ರಾಮರ್ ಗೆ ಈ ಕೆಳಗಿನ ಮಾಹಿತಿಯನ್ನು ಕಂಟ್ರೋಲರ್ ಗೆ ನೀಡಬೇಕಾಗುತ್ತದೆ.
• ಸ್ಕೇಲಿಂಗ್ ಸೆಂಟರ್ : ಪಿವರ್ ಪಾಯಿಂಟ್
ಸ್ಕೇಲಿಂಗ್ ಫಂಕ್ಷನ್ ನ ಬಳಕೆ
ಸ್ಕೇಲಿಂಗ್ ಫಂಕ್ಷನ್ ನ ಬಳಕೆಯಿಂದಾಗಿ ಹೆಚ್ಚಿನ ಕೆಲಸಕ್ಕಾಗಿ ವ್ಯರ್ಥವಾಗುವ ಸಮಯದಲ್ಲಿ ಉಳಿತಾಯವಾಗುತ್ತದೆ. ಇದರಿಂದಾಗಿ ಈ ಕೆಳಗಿನ ಜಾಗದಲ್ಲಿ ಸ್ಕೇಲಿಂಗ್ ಫಂಕ್ಷನ್ ನ ಬಳಕೆಯು ಲಾಭಕಾರಿಯಾಗುತ್ತದೆ.
• ಜಾಮೆಟ್ರಿಕಲಿ ಸ್ವಾಮ್ಯ ಇರುವ ಭಾಗಗಳು.
• ಶ್ರಿಂಕೇಜ್ ಫ್ಯಾಕ್ಟರ್ ಒಳಗೊಂಡಿರುವ ಭಾಗಗಳ ಯಂತ್ರಣೆ.
• ಮೋಲ್ಡಿಂಗ್ ನ ಕೆಲಸ.
• ಕಚ್ಚುಗಳ ಯಂತ್ರಣೆಯಲ್ಲಿ ಇಂಗ್ಲಿಷ್ ನಿಂದ ಮೆಟ್ರಿಕ್, ಹಾಗೆಯೇ ಮೆಟ್ರಿಕ್ ನಿಂದ ಇಂಗ್ಲಿಷ್ ವಿಧದ ಕಚ್ಚುಗಳ ರೂಪಾಂತರ.
• ಕೊರೆದಿರುವ (ಎನ್ ಗ್ರೇವ್) ಮಾಡಿರುವ ಅಕ್ಷರಗಳ ಗಾತ್ರವನ್ನು ಬದಲಾಯಿಸುವುದು (ಚಿತ್ರ ಕ್ರ. 1), ಅದೇ ರೀತಿಯಲ್ಲಿ ಮೂಲ ಗಾತ್ರಕ್ಕಿಂತ ಗಾತ್ರವನ್ನು ಹೆಚ್ಚಿಸುವುದು ಮತ್ತು ಗಾತ್ರವನ್ನು ಕಡಿಮೆ ಮಾಡುವುದು, ಇದಕ್ಕೋಸ್ಕರ ಸ್ಕೇಲಿಂಗ್ ಬಳಸಲಾಗುತ್ತದೆ. ಮೂಲ ಗಾತ್ರ ಅಂದರೆ ಸದ್ಯಕ್ಕೆ ಅಸ್ತಿತ್ವದಲ್ಲಿರುವ ಟೂಲ್ ನ ದಾರಿ.
ಪ್ರೊಗ್ರಾಮಿಂಗ್ ಫಾರ್ಮೆಟ್
ಸಿ.ಎನ್.ಸಿ. ಪ್ರೊಗ್ರಾಮರ್ ಗೆ ಈ ಕೆಳಗಿನ ಮಾಹಿತಿಯನ್ನು ಕಂಟ್ರೋಲರ್ ಗೆ ನೀಡಬೇಕಾಗುತ್ತದೆ.
• ಸ್ಕೇಲಿಂಗ್ ಸೆಂಟರ್ : ಪಿವರ್ ಪಾಯಿಂಟ್
ಸ್ಕೇಲಿಂಗ್ ಗೋಸ್ಕರ ಈ ಮುಂದಿನ ಎರಡು G ಕಮಾಂಡ್ ಗಳನ್ನು ಬಳಸಲಾಗುತ್ತದೆ.
ಪ್ರೋಗ್ರಾಮಿಂಗ್ ಫಾರ್ಮೆಟ್ಸ್ಕೇಲಿಂಗ್ ಫಂಕ್ಷನ್ ಬಳಕೆಗೆ ಕುರಿತು ಮಹತ್ವದ ಸೂಚನೆಗಳು
ಸ್ಕೇಲಿಂಗ್ ಸೆಂಟರ್ (ಮೂಲ ಟೂಲ್ ಪಾಥ್ ವಿವಿಧ ರೀತಿಯಲ್ಲಿ)
ಸ್ಕೇಲ್ ಗಳಿಗೆ ಟೂಲ್ ಗಳ ಸ್ಥಾನವನ್ನು (ಚಿತ್ರ ಕ್ರ. 2), ಸ್ಕೇಲಿಂಗ್ ಸೆಂಟರ್ ನಿಂದಲೇ ನಿರ್ಧರಿಸಲಾಗುತ್ತದೆ.
ಸ್ಕೇಲ್ ಮಾಡಿರುವ ಭಾಗದಲ್ಲಿ ಸ್ಕೇಲಿಂಗ್ ಸೆಂಟರ್ ನ ಪರಿಣಾಮ (ಚಿತ್ರ ಕ್ರ. 3)ಚಿತ್ರ ಕ್ರ. 2
B : ಟೂಲ್ ಪಾಥ್
A : ಹೆಚ್ಚಾದ ಟೂಲ್ ಪಾಥ್
C : ಸ್ಕೇಲಿಂಗ್ ಸೆಂಟರ್
A1 – A8 : ಪಾಥ್ 2
B1 – B8 ಪಾಥ್ 1
ಒಂದು ವೇಳೆ A1 – A8 ಮೂಲ ಪಾಥ್ ಹಿಡಿದಲ್ಲಿ B1 – B8 ಸ್ಕೇಲ್ ಮಾಡಿರುವ ಟೂಲ್ ಪಾಥ್ ಆಗಬಹುದು.
ಸೆಂಟರ್ C ಮತ್ತು ಸ್ಕೇಲಿಂಗ್ ಫ್ಯಾಕ್ಟರ್ ಒಂದಕ್ಕಿಂತ ಕಡಿಮೆ.
ಒಂದು ವೇಳೆ B1 – B8 ಮೂಲ ಪಾಥ್ ಹಿಡಿಯುವಾಗ A1 – A8 ಸ್ಕೇಲ್ ಮಾಡಿರುವ ಟೂಲ್ ಪಾಥ್ ಆಗಬಹುದು.
ಸ್ಕೇಲಿಂಗ್ ಫ್ಯಾಕ್ಟರ್ ಒಂದಕ್ಕಿಂತ ಹೆಚ್ಚು : ಹೆಚ್ಚಳ
ಸ್ಕೇಲಿಂಗ್ ಫ್ಯಾಕ್ಟರ್ ಒಂದಕ್ಕಿಂತ ಕಡಿಮೆ : ಕಡಿಮೆ
ಸ್ಕೇಲಿಂಗ್ ಫ್ಯಾಕ್ಟರ್ ಒಂದು : ಬದಲಾವಣೆಯಾಗುವುದಿಲ್ಲ.ಪ್ರೊಗ್ರಾಮ್ ನ ಉದಾಹರಣೆ
(ಚಿತ್ರ ಕ್ರ. 4 ನೋಡಿರಿ)01201 (ಪ್ರೊಗ್ರಾಮ್ G54 ಬಳಸಿ – ಸ್ಕೇಲಿಂಗ್ ಇಲ್ಲ)
N1 G20
N2 G17 G40 G80
N3 G90 G00 G54 X -1.25 Y - 1.25 S800 M03
N4 G43 Z 1.0 H01 M08
N5 G01 Z-0.7 F50.0
N6 G41 X -0.75 D01 F25.0
N7 Y1.75 F15.0
N8 X 1.5
N9 G02 X 2.5 Y0.75 I0J-1.0
N10 G01 Y-0.75
N11 X-1.25
N12 G40 Y-1.25 M09
N13 G00 Z1.0
N14 G28 Z 1.0
N15 G28 X-1.25 Y-1.25
N16 M30
%
ಪ್ರೋಗ್ರಾಮ್ 01202 : ಸ್ಕೇಲಿಂಗ್ ಫ್ಯಾಕ್ಟರ್
1.05 (5%) ಹೆಚ್ಚಳ
ಸ್ಕೇಲಿಂಗ್ ಸೆಂಟರ್ (X0 Y0 Z0)
N1 G20
N2 G17 G40 G80
N3 G50 (ಸ್ಕೆಲಿಂಗ್ ಆಫ್)
N4 G90 G00 G54 X -1.25 Y-1.25 S800 M03
N5 G43 Z1.0 H01 M08
N6 G51 I0 J0 K0 P1.050 (X0 Y0 Z0 ನಿಂದ ಸ್ಲೇಲಿಂಗ್ ಆನ್)
N7 G01 Z-0.7 F50.0
N8 G41 X-0.75 D01 F25.0
N9 Y1.75 F15.0
N10 X 1.5
N11 G02 X2.5 Y0.75 I0 J-1.0
N12 G01 Y-0.75
N13 X -1.25
N14 G40 Y -1.25 M09
N15 G50 (ಸ್ಕೇಲಿಂಗ್ ಆಫ್)
N16 G00 Z1.0
N17 G28 Z1.0
N18 G28 X -1.25 Y -1.25
N19 M30
%
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಇದರ ಕುರಿತು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.