ಜುಲೈ 2021 ರ ಸಂಚಿಕೆಯ ಲೇಖನದಲ್ಲಿ ನಾವು ಬ್ಯಾಲೆನ್ಸ್ ಶೀಟ್ ಮತ್ತು ಲಾಭ-ನಷ್ಟದ (ಪ್ರಾಫಿಟ್ ಅ್ಯಂಡ್ ಲಾಸ್) ವರದಿಯ ಕುರಿತು ಪ್ರಾಥಮಿಕ ಸ್ಪರೂಪದ ಮಾಹಿತಿಯನ್ನು ತಿಳಿದುಕೊಂಡೆವು. ಹಾಗೆಯೇ ವಿಶಿಷ್ಟ ದಿನಾಂಕದಂದು ಅಕೌಂಟ್ಸ್ ನಂತೆಯೇ ಲೆಜರ್ ನಲ್ಲಿ ಉಳಿದಿರುವ ಬ್ಯಾಲೆನ್ಸ್ ಗಳನ್ನು ಒಂದೇ ಜಾಗದಲ್ಲಿ ತೋರಿಸಬಲ್ಲ ಬ್ಯಾಲೆನ್ಸ್ ಶೀಟ್ ಕುರಿತಾದ ಒಂದು ಪರಿಪೂರ್ಣವಾದ ವರದಿಯನ್ನು ತಿಳಿದುಕೊಂಡೆವು.
ಯಾವ ದಿನಾಂಕದಂದು ಬ್ಯಾಲೆನ್ಸ್ ಶೀಟ್ ತಯಾರಿಸಲಾಗಿದೆಯೋ, ಆದೇ ದಿನಾಂಕದಂದು ಲೆಜರ್ ನಲ್ಲಿರುವ ರಿಯಲ್ ಮತ್ತು ಪರ್ಸನಲ್ ಗುಂಪಿನಲ್ಲಿರುವ ಎಲ್ಲ ಅಕೌಂಟ್ಸ್ ನಲ್ಲಿರುವ ಬ್ಯಾಲೆನ್ಸ್ ಗಳನ್ನು ಬ್ಯಾಲೆನ್ಸ್ ಶೀಟ್ ನಲ್ಲಿ ಇದ್ದದ್ದನ್ನು ಇದ್ದಂತೆ ತೋರಿಸಲಾಗುತ್ತದೆ. ಲೆಜರ್ ನಲ್ಲಿ ಉಳಿದಿರುವ ಎಲ್ಲ ನಾಮಿನಲ್ ಅಕೌಂಟ್ಸ್ ಗಳಲ್ಲಿ ಆಯಾ ದಿನಾಂಕಕ್ಕೆ ಉಳಿದಿರುವ ಬ್ಯಾಲೆನ್ಸ್ ಗಳನ್ನು ಲಾಭ ಮತ್ತು ನಷ್ಟದ (ಪ್ರಾಫಿಟ್ ಎಂಡ್ ಲಾಸ್) ಅಕೌಂಟ್ ನಲ್ಲಿ ಅಳವಡಿಸಲಾಗುತ್ತದೆ. ನಂತರ ಲಾಭ ಮತ್ತು ನಷ್ಟದ ಅಕೌಂಟ್ ನಲ್ಲಿ ಉಳಿದಿರುವ ಬ್ಯಾಲೆನ್ಸ್ ಮಾತ್ರ ಲಾಭ ಅಥವಾ ನಷ್ಟವಾಗಿ ಪರಿಗಣಿಸಲಾಗುತ್ತದೆ. ಅದನ್ನು ಬ್ಯಾಲೆನ್ಸ್ ಶೀಟ್ ನಲ್ಲಿ ಮಾಲಿಕರ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಎಂಬುದಾಗಿ ವರ್ಗಾವಣೆ ಮಾಡಲಾಗುತ್ತದೆ. ಈ ರೀತಿಯಲ್ಲಿ ಬ್ಯಾಲೆನ್ಸ್ ಶೀಟ್ ನಲ್ಲಿ ಎಲ್ಲ ಲೆಜರ್ ಅಕೌಂಟ್ಸ್ ನ ಬ್ಯಾಲೆನ್ಸ್ ಅಯಾ ಡೆಬಿಟ್ ಮತ್ತು ಕ್ರೆಡಿಟ್ ಗಳನ್ನು ಗಮನದಲ್ಲಿಟ್ಟುಕೊಂಡು ಆಸ್ತಿ-ಪಾಸ್ತಿ ಮತ್ತು ಪಾವತಿಯ ಕಾಲಮ್ ನಲ್ಲಿ ಬರೆಯಲಾಗುತ್ತದೆ. ಪ್ರತಿಯೊಂದು ವೌಚರ್ ನಲ್ಲಿರುವ ಡೆಬಿಟ್ ಮತ್ತು ಕ್ರೆಡಿಟ್ ಅಯಾಮಗಳ ಮೊತ್ತವು ಸರಿಸಮಾನವಾಗಿದ್ಲಲ್ಲಿ ಇಂತಹ ಎಲ್ಲ ವೌಚರ್ ಗಳ ಲೆಜರ್ ಪೋಸ್ಟಿಂಗ್ ಮಾಡಿದ ನಂತರ, ಯಾವ ಅಕೌಂಟ್ ನಲ್ಲಿ ಡೆಬಿಟ್ ಬ್ಯಾಲೆನ್ಸ್ ಇದೆಯೋ, ಈ ರೀತಿಯ ಎಲ್ಲ ಅಕೌಂಟ್ ಗಳಲ್ಲಿ ಡೆಬಿಟ್ ಬ್ಯಾಲೆನ್ಸ್ ನ ಮೊತ್ತವು, ಇಂತಹ ಎಲ್ಲ ಅಕೌಂಟ್ಸ್ ಗಳಲ್ಲಿರುವ ಕ್ರೆಡಿಟ್ ಬ್ಯಾಲೆನ್ಸ್ ನ ಮೊತ್ತದಷ್ಟೇ ಇರುತ್ತದೆ. ಹೀಗೆ ಎಲ್ಲ ಒಟ್ಟಾದ ಮೊತ್ತವು ಸಮಾನವಾಗಿರುವ ಲೆಜರ್ ಬ್ಯಾಲೆನ್ಸ್ ಆಯಾ ಡೆಬಿಟ್ ಅಥವಾ ಕ್ರೆಡಿಟ್ ಕಾಲಮ್ ನಂತೆಯೇ ಅಸ್ತಿ-ಪಾಸ್ತಿ ಅಥವಾ ಪಾವತಿಸುವಿಕೆ ಈ ವರ್ಗೀಕರಣೆಯಂತೆ ಬ್ಯಾಲೆನ್ಸ್ ಶೀಟ್ ನಲ್ಲಿ ತೋರಿಸಲಾಗುತ್ತದೆ. ಆಗ ಬ್ಯಾಲೆನ್ಸ್ ಶೀಟ್ ನಲ್ಲಿರುವ ಆಸ್ತಿ-ಪಾಸ್ತಿ ಮತ್ತು ಪಾವತಿಗಳ ಮೊತ್ತವೂ ಸಮಾನವಾಗಿರುತ್ತವೆ ಮತ್ತು ಕೂಡು-ಕಳೆಯು ಸರಿಹೊಂದಿಸಲ್ಪಟ್ಟಿರುತ್ತದೆ.
ಲೆಜರ್ ನಲ್ಲಿರುವ ಯಾವುದೇ ಅಕೌಂಟ್ ನಲ್ಲಿ ವಿಶಿಷ್ಟ ದಿನಾಂಕಕ್ಕೆ ಎಷ್ಟು ಮೊತ್ತವು ಉಳಿದಿದೆ ಮತ್ತು ಉಳಿದಿರುವ ಮೊತ್ತವು ಯಾವ ಕಾಲಮ್ ಗೆ ಸಂಬಂಧಪಟ್ಟದ್ದು ಅಂದರೆ ಡೆಬಿಟ್ ಆಗಿದೆಯೋ, ಕ್ರೆಡಿಟ್ ಆಗಿದೆಯೋ ಎಂಬುದನ್ನು ಅರಿತುಕೊಳ್ಳಲಾಗುತ್ತದೆ. ಒಂದು ಡೆಬಿಟ್ ಕಾಲಮ್ ನ ಮೊತ್ತವು ಕ್ರೆಡಿಟ್ ಕಾಲಮ್ ನ ಮೊತ್ತಕ್ಕಿಂತ ಹೆಚ್ಚು ಇದ್ದಲ್ಲಿ ಆ ದಿನಾಂಕಕ್ಕೆ ಆ ಅಕೌಂಟ್ ನಲ್ಲಿ ಡೆಬಿಟ್ ಬ್ಯಾಲೆನ್ಸ್ ಇದೆ ಎಂಬುದಾಗಿ ತಿಳಿಯಲಾಗುತ್ತದೆ ಮತ್ತು ಅದಕ್ಕೆ ವಿರುದ್ಧವಾಗಿ ಒಂದು ವೇಳೆ ಕ್ರೆಡಿಟ್ ಕಾಲಮ್ ನ ಮೊತ್ತವು ಡೆಬಿಟ್ ಬದಿಯ ಮೊತ್ತಕಿಂತ ಹೆಚ್ಚು ಇದ್ದಲ್ಲಿ ಆ ದಿನಾಂಕಕ್ಕೆ ಆ ಅಕೌಂಟ್ ನಲ್ಲಿ ಕ್ರೆಡಿಟ್ ಬ್ಯಾಲೆನ್ಸ್ ಇದೆ, ಎಂಬುದಾಗಿ ತಿಳಿಯಲಾಗುತ್ತದೆ. ಯಾವುದೇ ಅಕೌಂಟ್ ನ ಬ್ಯಾಲೆನ್ಸ್ ಅಂದರೆ ಉಳಿಕೆಯು ಡೆಬಿಟ್ ಆಗಿದೆಯೇ ಅಥವಾ ಕ್ರೆಡಿಟ್ ಆಗಿದೆಯೇ, ಎಂಬುದರ ಲೆಕ್ಕಾಚಾರವನ್ನು ಮಾಡುವ ಪ್ರಕ್ರಿಯೆಯನ್ನು ಅಕೌಂಟಿಂಗ್ ನ ಭಾಷೆಯಲ್ಲಿ ‘ಬ್ಯಾಲೆನ್ಸಿಂಗ್ ಆಫ್ ಅಕೌಂಟ್ಸ್’ ಎಂಬುದಾಗಿ ಕರೆಯಲಾಗುತ್ತದೆ, ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಯಾವುದೊಂದು ಅಕೌಂಟ್ ನಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾಲಮ್ ಗಳ ಮೊತ್ತವು ಒಂದು ವೇಳೆ ಸಮಾನವಾಗಿದ್ದಲ್ಲಿ ಸಹಜವಾಗಿಯೇ ಆ ಅಕೌಂಟ್ ನಲ್ಲಿರುವ ಉಳಿಕೆಯ ಮೊತ್ತವು ಸೊನ್ನೆಯಾಗಿದ್ದಲ್ಲಿ ಮತ್ತು ಈ ರೀತಿಯ ಅಕೌಂಟ್ ಆಯಾ ದಿನಾಂಕಕ್ಕೆ ಲೆಕ್ಕಾಚಾರದ ನಿಟ್ಟಿನಲ್ಲಿ ಪರಿಪೂರ್ಣವಾಗಿದೆ ಎಂಬುದಾಗಿ ತಿಳಿಯಲಾಗುತ್ತದೆ. ನಂತರ ಅದರ ಕುರಿತು ಹೆಚ್ಚು ವಿಚಾರ ಮಾಡುವ ಆವಶ್ಯಕತೆ ಇರುವುದಿಲ್ಲ.
ಫೈನಲ್ ಅಕೌಂಟ್ಸ್ ತಯಾರಿಸಲಾಗುವಾಗ ಆಯಾ ದಿನಾಂಕಕ್ಕೆ ಪ್ರತಿಯೊಂದು ಲೆಜರ್ ಅಕೌಂಟ್ ನಲ್ಲಿರುವ ಆಯಾ ದಿನಾಂಕದ ಕೊನೆಯಲ್ಲಿರುವ ಉಳಿಕೆ ಮತ್ತು ಅದರ ಇನ್ನೊಂದು ಕಾಲಮ್ ಈ ಅಂಶಗಳ ನೊಂದಾಣಿಕೆಯನ್ನು ಟ್ರಯಲ್ ಬ್ಯಾಲೆನ್ಸ್ ಎಂಬ ಹೆಸರಿನ ಒಂದು ವರದಿಯಲ್ಲಿ ಮಾಡಲಾಗುತ್ತದೆ. ಟ್ರಯಲ್ ಬ್ಯಾಲೆನ್ಸ್ ನಲ್ಲಿ ಯಾವ ಲೆಜರ್ ಅಕೌಂಟ್ಸ್ ನ ಬ್ಯಾಲೆನ್ಸ್ ಇದೆಯೋ ಇಂತಹ ಎಲ್ಲ ಅಕೌಂಟ್ಸ್ ಗಳನ್ನು ಪಡೆಯಲಾಗುತ್ತದೆ ಮತ್ತು ಪ್ರತಿಯೊಂದು ಲೆಜರ್ ಅಕೌಂಟ್ಸ್ ನ ಹೆಸರಿನ ಮುಂದೆ ಬ್ಯಾಲೆನ್ಸ್ ಇರುವ ಕಾಲಮ್ ಡೆಬಿಟ್ ಆಗಿದೆಯೋ ಅಥವಾ ಕ್ರೆಡಿಟ್ ಕಾಲಮ್ ಆಗಿದೆಯೋ ಎಂಬುದನ್ನು ವೀಕ್ಷಿಸಿ, ಡೆಬಿಟ್ ಅಥವಾ ಕ್ರೆಡಿಟ್ ಕಾಲಮ್ ನಲ್ಲಿ ಆಯಾ ಅಕೌಂಟ್ ನಲ್ಲಿರುವ ಅಂತಿಮ ಉಳಿಕೆ ಅಂದರೆ ಕ್ಲೋಜಿಂಗ್ ಬ್ಯಾಲೆನ್ಸ್ ಬರೆಯಲಾಗುತ್ತದೆ. ವರ್ಷದ ಕೊನೆಯಲ್ಲಿ ತಯಾರಿಸಲಾಗಿರುವ ಫೈನಲ್ ಅಕೌಂಟ್ಸ್ ನ ಆಡಿಟ್ ಪೂರ್ಣವಾದ ನಂತರ ಆ ಹಣಕಾಸು ವರ್ಷಕ್ಕೋಸ್ಕರದ ಲೆಜರ್ ಅಕೌಂಟ್ಸ್ ಮುಕ್ತಾಯಗೊಳಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಅಕೌಂಟ್ಸ್ ಕ್ಲೋಜರ್ ಎಂದು ಕರೆಯಲಾಗುತ್ತದೆ.
ಅಕೌಂಟ್ಸ್ ಮುಕ್ತಾಯಗೊಳಿಸಿ ಟ್ರಯಲ್ ಬ್ಯಾಲೆನ್ಸ್ ತಯಾರಿಸಿ ನಂತರ ಟ್ರಯಲ್ ಬ್ಯಾಲೆನ್ಸ್ ನಲ್ಲಿ ಬಂದಿರುವ ಪ್ರತಿಯೊಂದು ಲೆಜರ್ ಅಕೌಂಟ್ ನೋಡಿ ಅದನ್ನು ಬ್ಯಾಲೆನ್ಸ್ ಶೀಟ್ ನಲ್ಲಿ ತೋರಿಸುವುದೇ ಅಥವಾ ಲಾಭ-ನಷ್ಟ ವರದಿಯಲ್ಲಿ ತೋರಿಸುವುದೇ, ಎಂಬುದನ್ನು ನಿರ್ಧರಿಸುವ ಕೆಲಸ ಉಳಿಯುತ್ತದೆ. ಇದಕ್ಕೋಸ್ಕರ ಟ್ರಯಲ್ ಬ್ಯಾಲೆನ್ಸ್ ನ ಎದುರಿನಲ್ಲಿರುವ ಪ್ರತಿಯೊಂದು ಲೆಜರ್ ಅಕೌಂಟ್, ರಿಯಲ್, ಪರ್ಸನಲ್ ಮತ್ತು ನಾಮಿನಲ್ ಈ ಅಕೌಂಟ್ ಗಳು ಮೂರು ಗುಂಪುಗಳಲ್ಲಿ ಯಾವ ಗುಂಪಿನಲ್ಲಿರುತ್ತವೆ, ಎಂಬುದನ್ನು ನೋಡಬೇಕಾಗುತ್ತದೆ. ಮೇಲೆ ತಿಳಿದುಕೊಂಡಂತೆ ರಿಯಲ್ ಮತ್ತು ಪರ್ಸನಲ್ ಗುಂಪಿನಲ್ಲಿರುವ ಎಲ್ಲ ಅಕೌಂಟ್ಸ್ ಬ್ಯಾಲೆನ್ಸ್ ಶೀಟ್ ನಲ್ಲಿ ತೋರಿಸಲಾಗುತ್ತವೆ ಮತ್ತು ಎಲ್ಲ ನಾಮಿನಲ್ ಅಕೌಂಟ್ಸ್ ನ ಜಾಗದಲ್ಲಿ ಲಾಭ ಮತ್ತು ನಷ್ಟ ಅಕೌಂಟ್ಸ್ ನಲ್ಲಿರುತ್ತದೆ.
ಬ್ಯಾಲೆನ್ಸ್ ಶೀಟ್ ನ ಕುರಿತು ಮೊದಲ ವರ್ಟಿಕಲ್ ಭಾಗದಲ್ಲಿ ವ್ಯವಹಾರದ ಎಲ್ಲ ಪಾವತಿಸುವಿಕೆಗಳನ್ನು ತೋರಿಸಲಾಗುತ್ತದೆ ಮತ್ತು ನಂತರದ ಬ್ಯಾಲೆನ್ಸ್ ಶೀಟ್ ನ ಇನ್ನೊಂದು ವರ್ಟಿಕಲ್ ಭಾಗದಲ್ಲಿ ವ್ಯವಹಾರದ ಎಲ್ಲ ಎಸೆಟ್ ಗಳು ಅಂದರೆ ಆಸ್ತಿ-ಪಾಸ್ತಿಗಳನ್ನು ತೋರಿಸಲಾಗುತ್ತದೆ, ಎಂಬುದನ್ನು ನಾವು ತಿಳಿದುಕೊಂಡೆವು. ಲಾಭ-ನಷ್ಟ ವರದಿಯ ಕುರಿತು ಮೊದಲ ವರ್ಟಿಕಲ್ ಭಾಗದಲ್ಲಿ ಆದಾಯದ ಎಲ್ಲ ಮೂಲಗಳನ್ನು ಮತ್ತು ಇನ್ನೊಂದು ವರ್ಟಿಕಲ್ ಭಾಗದಲ್ಲಿ ಖರ್ಚಿನ ಎಲ್ಲ ಅಂಶಗಳನ್ನು ತೋರಿಸಲಾಗುತ್ತದೆ. ರಿಯಲ್ ಮತ್ತು ಪರ್ಸನಲ್ ಗುಂಪಿನಲ್ಲಿ ಎಲ್ಲ ಅಕೌಂಟ್ಸ್ ಬ್ಯಾಲೆನ್ಸ್ ಶೀಟ್ ನಲ್ಲಿ ತೋರಿಸಲಾಗುತ್ತದೆ ಮತ್ತು ಎಲ್ಲ ನಾಮಿನಲ್ ಅಕೌಂಟ್ಸ್ ನ ಲಾಭ ಮತ್ತು ನಷ್ಟವು ಅಕೌಂಟ್ಸ್ ನಲ್ಲಿ ಸೇರ್ಪಡೆಯಾಗಿದೆ, ಎಂಬುದನ್ನು ನಾವು ತಿಳಿದುಕೊಂಡೆವು. ಈ ನೀತಿಗೆ ಅನುಗುಣವಾಗಿ ಟ್ರಯಲ್ ಬ್ಯಾಲೆನ್ಸ್ ನಲ್ಲಿರುವ ಪ್ರತಿಯೊಂದು ಅಕೌಂಟ್ಸ್ ನ ಪೋಸ್ಟಿಂಗ್ ಬ್ಯಾಲೆನ್ಸ್ ಶೀಟ್ ಅಥವಾ ಲಾಭ-ನಷ್ಟ ಅಕೌಂಟ್ ನಲ್ಲಿ ಮಾಡಲಾಗುತ್ತದೆ.
ವಿಶಿಷ್ಟ ಲೆಜರ್ ಅಕೌಂಟ್ ಬ್ಯಾಲೆನ್ಸ್ ಶೀಟ್ ನಲ್ಲಿ ಸೇರ್ಪಡೆಯಾಗಬಲ್ಲದೇ ಅಥವಾ ಲಾಭ-ನಷ್ಟ ವರದಿಯಲ್ಲಿ ಸೇರ್ಪಡೆಯಾಗಬಲ್ಲದೇ ಎಂಬುದನ್ನು ಒಮ್ಮೆ ನಿರ್ಧರಿಸಿದಲ್ಲಿ, ಆ ಅಕೌಂಟ್ ಗೆ ಸಂಬಂಧಪಟ್ಟ ವರದಿಯಲ್ಲಿ ಜಾಗವನ್ನು ನಿರ್ಧರಿಸುವ, ಟ್ರಯಲ್ ಬ್ಯಾಲೆನ್ಸ್ ನಲ್ಲಿರುವ ರಿಯಲ್ ಮತ್ತು ಪರ್ಸನಲ್ ಗುಂಪಿನಲ್ಲಿ ಅಕೌಂಟ್ಸ್ ಬ್ಯಾಲೆನ್ಸ್ ಯಾವ ಕಾಲಮ್ ನಲ್ಲಿವೆ, ಎಂಬುದನ್ನು ನೋಡಿ ಅದರ ಬ್ಯಾಲೆನ್ಸ್ ಶೀಟ್ ನಲ್ಲಿರುವ ಜಾಗವನ್ನು ಪಾವತಿಸುವಿಕೆಗೆ ಇರುವ ಮೊದಲ ವರ್ಟಿಕಲ್ ಭಾಗದಲ್ಲಿರಬಲ್ಲವೋ, ಆಸ್ತಿಪಾಸ್ತಿಗಳಲ್ಲಿರುವ ಕೆಳಭಾಗದ ವರ್ಟಿಕಲ್ ಭಾಗದಲ್ಲಿರಬಲ್ಲವೋ, ಎಂಬುದನ್ನು ಸಾಮಾನ್ಯವಾಗಿ ನಿರ್ಧರಿಸುವ ಕೆಲಸ ಮಾತ್ರ ಉಳಿಯುತ್ತದೆ. ಈ ವಿಧದ ಯಾವುದೇ ಅಕೌಂಟ್ಸ್ ನಲ್ಲಿ ಒಂದು ವೇಳೆ ಕ್ರೆಡಿಟ್ ಬ್ಯಾಲೆನ್ಸ್ ಇದ್ದಲ್ಲಿ ಅನೇಕ ಬಾರಿ ಆ ಮೊತ್ತವು ವ್ಯವಹಾರದಲ್ಲಿ ಪಾವತಿಸುವಂತಹ ಮೊತ್ತವಾಗಿರುವ ಸಾಧ್ಯತೆ ಇರುತ್ತದೆ ಮತ್ತು ಇದಕ್ಕೆ ವಿರುದ್ಧವಾಗಿ ಒಂದು ವೇಳೆ ಡೆಬಿಟ್ ಬ್ಯಾಲೆನ್ಸ್ ಇದ್ದಲ್ಲಿ ಅನೇಕ ಬಾರಿ ಆ ಮೊತ್ತವು ವ್ಯವಹಾರದ ಆಸ್ತಿ-ಪಾಸ್ತಿಯಾಗಿರುವ ಸಾಧ್ಯತೆಯೂ ಇರುತ್ತದೆ. ಅಂತೆಯೇ ಟ್ರಯಲ್ ಬ್ಯಾಲೆನ್ಸ್ ನಲ್ಲಿ ನಾಮಿನಲ್ ಗುಂಪಿನಲ್ಲಿರುವ ಅಕೌಂಟ್ಸ್ ನಲ್ಲಿರುವ ಬ್ಯಾಲೆನ್ಸ್ ಯಾವ ಕಾಲಮ್ ನಲ್ಲಿವೆ, ಎಂಬುದನ್ನು ನೋಡಿ ಅದರ ಲಾಭ ಮತ್ತು ನಷ್ಟ ವರದಿಯಲ್ಲಿರುವ ಜಾಗವನ್ನು ಆದಾಯಕ್ಕೋಸ್ಕರ ಇರುವ ಮೊದಲ ವರ್ಟಿಕಲ್ ಭಾಗದಲ್ಲಿ ಸೇರ್ಪಡೆಯಾಗಬಲ್ಲದೇ, ಅಥವಾ ಖರ್ಚಿಗೋಸ್ಕರ ಇರುವ ಕೆಳಭಾಗದಲ್ಲಿರುವ ವರ್ಟಿಕಲ್ ಕಾಲಮ್ ನಲ್ಲಿ ಇರಬಲ್ಲದೇ, ಎಂಬುದನ್ನು ಸಾಧಾರಣವಾಗಿ ನಿರ್ಧರಿಸಬಹುದು. ಈ ರೀತಿಯ ಯಾವುದೊಂದು ಅಕೌಂಟ್ ನಲ್ಲಿ ಒಂದು ವೇಳೆ ಕ್ರೆಡಿಟ್ ಬ್ಯಾಲೆನ್ಸ್ ಇದ್ದಲ್ಲಿ ಹೆಚ್ಚಾಗಿ ಆ ಮೊತ್ತವು ವ್ಯವಹಾರದ ಆದಾಯವಾಗಿರುವ ಸಾಧ್ಯತೆ ಇರುತ್ತದೆ. ಹೆಚ್ಚಾಗಿ ಆ ಮೊತ್ತವು ವ್ಯವಹಾರದ ಖರ್ಚಿನ ಅಂಶವಾಗಿರುವ ಸಾಧ್ಯತೆ ಇರುತ್ತದೆ. ಈ ರೀತಿಯ ಸಾಮಾನ್ಯವಾದ ನಿಯಮವನ್ನು ಬಳಸಿ ಟ್ರಯಲ್ ಬ್ಯಾಲೆನ್ಸ್ ನಲ್ಲಿರುವ ಹೆಚ್ಚಿನ ಎಲ್ಲ ಲೆಜರ್ ಬ್ಯಾಲೆನ್ಸ್, ಬ್ಯಾಲೆನ್ಸ್ ಶೀಟ್ ಮತ್ತು ಪ್ರಾಫಿಟ್ ಅ್ಯಂಡ್ ಲಾಸ್ ಅಕೌಂಟ್ ನಲ್ಲಿ ಯೋಗ್ಯ ರೀತಿಯ ಕಾಲಮ್ ನಲ್ಲಿ ಸೇರ್ಪಡಿಸಬಹುದಾಗಿದೆ.
ಯಾವುದೇ ಲೇಜರ್ ಅಕೌಂಟ್ ಬ್ಯಾಲೆನ್ಸ್ ಶೀಟ್ ಅಥವಾ ಲಾಭ-ನಷ್ಟ ಅಕೌಂಟ್ ನಲ್ಲಿರುವ ಮೇಲ್ಭಾಗದ ಅಥವಾ ಕೆಳಭಾಗದ ಯಾವ ಕಾಲಮ್ ನಲ್ಲಿ ಸೇರ್ಪಡೆಯಾಗಬಲ್ಲದು ಎಂಬುದನ್ನು ನಿರ್ಧರಿಸಿ, ಆ ವಿಶಿಷ್ಟ ಭಾಗದ ರಚನೆಯನ್ನು ಕಂಪನಿ ಕಾನೂನುಗಳಲ್ಲಿ ನೀಡಿರುವ ಪಾರ್ಮೇಟ್ ನ ಸ್ವರೂಪದಲ್ಲಿರುತ್ತದೆ. ಆ ರಚನೆಯಲ್ಲಿ ಯಾವ ಶೀರ್ಷಿಕೆಯಲ್ಲಿ ಆ ಅಕೌಂಟ್ ಗಳನ್ನು ತೋರಿಸಬೇಕಾಗುತ್ತದೆ, ಎಂಬುದನ್ನೂ ನಿರ್ಧರಿಸಬೇಕಾಗುತ್ತದೆ. ಇವೆರಡೂ ವರದಿಗಳ ಸ್ವರೂಪವು ಸೂಕ್ತ ರೀತಿಯಲ್ಲಿರುತ್ತವೆಯೇ, ಎಂಬುದನ್ನೂ ತಿಳಿದುಕೊಳ್ಳುವುದು ಅತ್ಯಾವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಮುಂದಿನ ಅಂಕಣದಲ್ಲಿ ನಾವು ಇದರ ಕುರಿತಾಗಿರುವ ಕಾನೂನುಗಳ ಫಾರ್ಮೆಟ್ ತಿಳಿದುಕೊಳ್ಳಲಿದ್ದೇವೆ.
9822475611
ಮುಕುಂದ ಅಭ್ಯಂಕರ್ ಇವರು ಚಾರ್ಟರ್ಡ್ ಅಕೌಂಟಂಟ್ ಆಗಿದ್ದಾರೆ. ಕಳೆದ 30 ವರ್ಷಗಳ ಕಾಲಾವಧಿಯಲ್ಲಿ ಅವರು ಅನೇಕ ಕಂಪನಿಗಳ ಲೆಕ್ಕ ಪರಿಶೋಧನೆಯ (ಆಡಿಟ್) ಮತ್ತು ಹಣಕಾಸಿನ ಚಟುವಟಿಕೆಗಳ ಕುರಿತಾದ ಆಗುಹೋಗುಗಳ ವಿಶ್ಲೇಷಣೆಯ ಕೆಲಸವನ್ನು ಮಾಡುತ್ತಿದ್ದಾರೆ.