ದೋಷಗಳು ಮಶಿನ್ ನಲ್ಲಿರಲಿಲ್ಲ ...

@@NEWS_SUBHEADLINE_BLOCK@@

Lohkarya - Udyam Prakashan    16-Aug-2021   
Total Views |
rthtrhhy_1  H x
 
ಆಫೀಸ್ ನ ಪಕ್ಕದಲ್ಲಿರುವಾಗಲೇ ವಿಜಯ್ ದೇಶಮುಖ್ ಇವರ ಮೊಬೈಲ್ ನ ರಿಂಗ್ ಕೇಳಲಾರಂಭಿಸಿತು. ಬೆಳಿಗ್ಗೆ ವಿಜಯ್ ಇವರು ಯಾರದೇ ಫೋನ್ ಬಂದರೂ ಮಾತನಾಡುತ್ತಿರಲಿಲ್ಲ. ಕಾರಣ ‘ನೂತನ ಉದ್ಯಮ’ದ ಜವಾಬ್ದಾರಿಯನ್ನು ವಹಿಸಿದ ನಂತರ ಎಲ್ಲಕ್ಕಿಂತಲೂ ಮೊದಲು ಶಾಪ್ ಫ್ಲೋರ್ ನಲ್ಲಿ ಒಂದು ಪ್ರದಕ್ಷಿಣೆ ಮಾಡಿ ನಂತರವೇ ಆಯಾ ದಿನದ ಕೆಲಸವನ್ನು ಪ್ರಾರಂಭಿಸುತ್ತಿದ್ದರು. ಇದೇ ಅವರ ದಿನಚರ್ಯೆಯನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಆದರೆ ಅನಂತರಾವ್ ಠಾಕೂರ್ ಇವರು ಬೆಂಗಳೂರಿನಿಂದ ಬೆಳಿಗ್ಗೆ ಬೆಳಿಗ್ಗೆ ಫೋನ್ ಕರೆ ಮಾಡುತ್ತಿದ್ದರು. ಆಗಲೇ ಅವರಿಗೆ ಅನಿಸುತ್ತಿತ್ತು ಏನೋ ಮಹತ್ವದ ವಿಷಯವಿದೆ.

vcfgcv_1  H x W 
 
 
‘’ಗುಡ್ ಮಾರ್ನಿಂಗ್ ಠಾಕೂರಾ ಸರ್, ಇಂದು ಮುಂಜಾನೆಯೇ ನಮ್ಮ ನೆನಪು ಹೇಗಾಯಿತು? ಎಂಬುದಾಗಿ ಅವರು ಕೇಳಿದರು. ಕಳೆದ ಮೂರು ವರ್ಷಗಳಲ್ಲಿ ಕಾಲಾವಧಿಯಲ್ಲಿ ಅನಂತರಾವ್ ಇವರ ಬಾಲಾಜಿ ಇಂಡಸ್ಟ್ರಿಯೊಂದಿಗೆ ವಿವಿಧ ಯೋಜನೆಗಳಲ್ಲಿ ವಿಜಯ್ ದೇಶಮುಖ್ ಇವರು ಅಭಿನವ್ ಉದ್ಯೋಗದೊಂದಿಗೆ ಸಹಭಾಗಿತ್ವವನ್ನು ಮಾಡಿದ್ದರು. ಸಿ.ಎಮ್.ಎಮ್.ನ ಉತ್ಪಾದನೆ ಮಾಡುವಲ್ಲಿ ಜಗತ್ತಿನಾದ್ಯಂತ ಹೆಸರಾಂತ ಕಂಪನಿಗಳು ವ್ಯವಸಾಯದಲ್ಲಿ ಸ್ಪರ್ಧಿಸುತ್ತಿದ್ದರು. ಅದೇ ಸಮಯದಲ್ಲಿ ಭಾರತದಲ್ಲಿರುವ ಅಭಿನವ ಉದ್ಯೋಗ ಎಂಬ ಸಿ.ಎಮ್.ಎಮ್. ತಯಾರಿಸುವ ಕಂಪನಿಯನ್ನು ವಿಜಯ್ ಇವರು 20 ವರ್ಷಗಳ ಕಾಲಾವಧಿಯಲ್ಲಿ ಮುಂದಾಳುತನ ಮತ್ತು ಒಳ್ಳೆಯ ಟೀಮ್ ವರ್ಕ್ ನಿಂದ ಹೆಸರುವಾಸಿಯನ್ನಾಗಿ ಮಾಡಿದ್ದರು. ತಮ್ಮ ಎಕ್ಸ್ ಪೋರ್ಟ್ ಯೋಜನೆಗೋಸ್ಕರ ಮೊದಲ ಭೇಟಿಯಲ್ಲಿಯೇ ಅನಂತರಾವ್ ಠಾಕೂರ್ ಇವರು ‘ಅಭಿನವ’ದ ತಂಡದ ಕೆಲಸವನ್ನು ನೋಡಿ ಖುಷಿಯಾಗಿತ್ತು. ಅವರ ಕಂಪನಿಗೆ ಜರ್ಮನಿಯಲ್ಲಿರುವ ಒಂದು ಕಂಪನಿಯಿಂದ ಬೃಹದಾಕಾರದ ಗಿಯರ್ ಬಾಕ್ಸ್ ಕಾಸ್ಟಿಂಗ್ ಮತ್ತು ಯಂತ್ರಣೆಗೆ ದೊಡ್ಡ ಆರ್ಡರ್ ಸಿಕ್ಕಿತ್ತು. ಆ ಯಂತ್ರಭಾಗಗಳ ಅಳತೆಯನ್ನು ಮಾಡಲು ವಿದೇಶದ ಸಿ.ಎಮ್.ಎಮ್. ಖರೀದಿ ಮಾಡುವ ಆವಶ್ಯಕತೆ ಇತ್ತು. ಅದರ ಬೆಲೆಯೂ ತುಂಬಾ ಹೆಚ್ಚಾಗಿತ್ತು. ಅರವತ್ತರ ಹೊಸ್ತಿಲಲ್ಲಿರುವ ಠಾಕೂರ್ ಸರ್ ಇವರು ಹೊಸ ಯೋಜನೆಗಳಿಗೋಸ್ಕರ ಜರ್ಮನಿಗೆ ಹೋಗುವಾಗ ವಿಜಯ್ ಇವರನ್ನು ತನ್ನೊಂದಿಗೆ ಕರಕೊಂಡು ಹೋಗಿದ್ದರು. ಅಲ್ಲದೇ ಭಾರತದಲ್ಲಿ ನಿರ್ಮಿಸಲಾಗಿರುವ ‘ಅಭಿನವ’ ಈ ಕಂಪನಿಯ ಸಿ.ಎಮ್.ಎಮ್. ಜರ್ಮನಿಯಲ್ಲಿರುವ ವಿದೇಶದ ಸಿ.ಎಮ್.ಎಮ್.ಗಿಂತ ಬೆಲೆ ಮತ್ತು ಗುಣಮಟ್ಟದಲ್ಲಿ ಹೇಗೆ ಶ್ರೇಷ್ಠವಾಗಿದೆ, ಎಂಬುದನ್ನು ಉದಾಹರಣೆಗಳೊಂದಿಗೆ ಮನದಟ್ಟಾಗುವಂತೆ ವಿವರಿಸಿದ್ದರು. ಆದುದರಿಂದ ಈ ಯೋಜನೆಯು ‘ಕಾಸ್ಟ್ ಇಫೆಕ್ಟಿವ್’ ಆಗಿತ್ತು. ಆಗಿನಿಂದ ಇವರಿಬ್ಬರಲ್ಲಿಯೂ ಸೌಹಾರ್ದಪೂರ್ಣವಾದ ಸಂಬಂಧಗಳು ಸ್ಥಾಪಿತವಾಗಿದ್ದವು. ಇದರಿಂದಾಗಿ ವಿಜಯ್ ಇವರೊಂದಿಗೆ ಮಾತನಾಡುವಾಗ ಏಕವಚನದಲ್ಲಿಯೇ ಮಾತನಾಡುತ್ತಿದ್ದರು.
 
 
ಚಿತ್ರ ಕ್ರ. 1 : ಗಿಯರ್ ಬಾಕ್ಸ್

vcfgcvgbb_1  H
 
‘ವಿಜಯ್ ಇವರೇ, ನಿನ್ನ ಪರಿಚಯದಲ್ಲಿ ಯಾರಾದರೂ ಒಳ್ಳೆಯ ಎನಾಲಿಸ್ಟ್ ಇದ್ದಾರೆಯೇ? ಇದ್ದಲ್ಲಿ ಅವರನ್ನು ನಮ್ಮಲ್ಲಿಗೆ ಎಂಟು ದಿನಗಳ ಮಟ್ಟಿಗೆ ಕಳುಹಿಸಿರಿ.” ವಿಜಯ್ ಮಾತ್ರ ಈ ಮಾತುಗಳನ್ನು ಕೇಳಿ ತನ್ನ ಮನಸ್ಸಿನಲ್ಲಿಯೇ ಮೋಹನ್ ಇವರ ಹೆಸರು ಬಂತು. ಆದರೆ ಅವರು ಗ್ರಾಹಕರಿಗೆ ಆಶ್ವಾಸನೆಯನ್ನು ನೀಡುವ ಮುಂಚೆ ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡಿ ಪ್ರಶ್ನೆಯನ್ನು ಅರಿತುಕೊಳ್ಳುತ್ತಿದ್ದರು. “ಸರ್ ನಾವು ನಿಮಗೆ ನಾಲ್ಕು ಗಂಟೆಗಳೊಳಗೆ ತಿರುಗಿ ಫೋನ್ ಮಾಡುತ್ತೇನೆ,” ಎಂಬುದಾಗಿ ಹೇಳಿ ಅವರು ಫೋನ್ ಆಫ್ ಮಾಡಿ ತನ್ನ ಆಫೀಸ್ ಗೆ ಮರಳಿದರು. ಮಾರ್ಕೆಟಿಂಗ್ ಡೈರೆಕ್ಟರ್ ಪವಾರ್ ಇವರಿಗೆ ಈ ಕುರಿತು ಹೇಳಿ, ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಸಂಬಂಧಪಟ್ಟವರನ್ನು ಭೇಟಿ ಮಾಡಿ ಅರ್ಧ ಗಂಟೆಯ ಮೀಟಿಂಗ್ ಮಾಡಿ ತನ್ನೊಂದಿಗೆ ಮಾತನಾಡಲು ಹೇಳಿದರು.
ಸ್ವಲ್ಪ ಸಮಯದ ನಂತರ ವಿಜಯ್ ದೇಶಮುಖ್ ಇವರು ಮಾರ್ಕೆಟಿಂಗ್ ಡೈರೆಕ್ಟರ್ ಪ್ರಕಾಶ್ ಪವಾರ್ ಮತ್ತು ಕಸ್ಟಮರ್ ಇಂಜಿನಿಯರಿಂಗ್ ಟೀಮ್ ನ ಲೀಡರ್ ಮೋಹನ್ ಇವರೊಂದಿಗೆ ಪಕ್ಕದಲ್ಲಿರುವ ಮೀಟಿಂಗ್ ರೂಮ್ ನಲ್ಲಿ ಸೇರಿದರು.
“ಎಮ್.ಡಿ. ಸಾಹೇಬ್ರಿಗೆ ಬೆಂಗಳೂರಿನಿಂದ ಠಾಕೂರ್ ಸಾಹೇಬ್ರ ಫೋನ್ ಕರೆ ಬಂದಿತ್ತು. ಆಗ ಬಾಲಾಜಿ ಇಂಡಸ್ಟ್ರೀಜ್ ನಲ್ಲಿ ಏನೇನು ಸಮಸ್ಯೆಗಳಿವೆ,” ಎಂಬುದಾಗಿ ಪವಾರ್ ಇವರು ಮೋಹನ್ ಇವರಲ್ಲಿ ವಿಚಾರಿಸಿದರು.
“ನಾನು ಈ ತನಕದ ಎಲ್ಲ ವಿವರಗಳನ್ನು ವಿಸ್ತಾರವಾಗಿ ಹೇಳುತ್ತೇನೆ,” ಎಂಬುದಾಗಿ ಮೋಹನ್ ಇವರು ಓವರ್ ಹೆಡ್ ಪ್ರೊಜೆಕ್ಟರ್ ನಲ್ಲಿ ಒಂದು ಗಿಯರ್ ಬಾಕ್ಸ್ ನ ಚಿತ್ರವನ್ನು ತೋರಿಸಿದರು. (ಚಿತ್ರ ಕ್ರ. 1).
 
“ಬಾಲಾಜಿ ಇಂಡಸ್ಟ್ರೀಜ್ ಇವರ ಬೆಳಗಾವಿಯಲ್ಲಿರುವ ಫೌಂಡ್ರಿಯಲ್ಲಿ ಈ ಗಿಯರ್ ಬಾಕ್ಸ್ ನ ಕಾಸ್ಟಿಂಗ್ ತಯಾರಾಗುತ್ತಿತ್ತು ಮತ್ತು ಇನೀಶಿಯಲ್ ಪಿಕಪ್ ನ (ಮೂಲಭೂತ) ಯಂತ್ರಣೆಯನ್ನು ಮಾಡಿ ಅದನ್ನು ಪುಣೆಗೆ ವರ್ಸಟೈಲ್ ಇಂಜಿನಿಯರಿಂಗ್ ಕಡೆಗೆ ಮುಂದಿನ ಯಂತ್ರಣೆಗೋಸ್ಕರ ಕಳುಹಿಸಲಾಗುತ್ತಿತ್ತು. ಪುಣೆಯಲ್ಲಿ ಎಲ್ಲ ರೀತಿಯ (ಕ್ರಿಟಿಕಲ್) ಮತ್ತು ಮುಂದಿನ ಆತ್ಯಾವಶ್ಯಕವಾದ ಯಂತ್ರಣೆಯನ್ನು ಪೂರ್ತಿಗೊಳಿಸಿದ ನಂತರ ತಮ್ಮ ಸಿ.ಎಮ್.ಎಮ್.ನಲ್ಲಿ ಅದರ ಪೂರ್ಣ ಅಳತೆಯನ್ನು ಮಾಡಲಾಗುತ್ತಿತ್ತು. ಈ ಗಿಯರ್ ಬಾಕ್ಸ್ ‘ಬಾಲಾಜಿ’ ಇವರ ಬೆಂಗಳೂರಿನ ಮಶಿನಿಂಗ್ ಸೆಂಟರ್ ಯುನಿಟ್ ಕಡೆಗೆ ಕಳುಹಿಸಲಾಗುತ್ತಿತ್ತು. ಅಲ್ಲಿ ಉಳಿದಿರುವ ಅಂತಿಮವಾದ ಯಂತ್ರಣೆ, ಪ್ರಿಜರ್ವೇಶನ್ ಮತ್ತು ಪ್ಯಾಕೇಜಿಂಗ್ ಮಾಡಿ ಈ ಗಿಯರ್ ಬಾಕ್ಸ್ ಜರ್ಮನಿಗೆ ಕಳುಹಿಸಲಾಗುತ್ತಿತ್ತು. ಬೆಂಗಳೂರಿನಲ್ಲಿಯೂ ಸಿ.ಎಮ್.ಎಮ್. ಇದೆ. ಅಲ್ಲಿ ಪ್ರತಿ ಹತ್ತು ಗಿಯರ್ ಬಾಕ್ಸ್ ಗಳಲ್ಲಿ ಒಂದು ಗಿಯರ್ ಬಾಕ್ಸ್ ಆಡಿಟ್ ಮಾಡಲು ಪರಿಶೀಲಿಸಲಾಗುತ್ತಿತ್ತು.”
“ಸರಿಯಾಗಿದೆ. ಇದೇ ಆರ್ಡರ್ ಗೋಸ್ಕರ ನಾವು ಕಳೆದ ವರ್ಷವೂ ‘ವರ್ಸಟೈಲ್’ಗೆ ಒಂದು ಸಿ.ಎಮ್.ಎಮ್. ಮಾರಾಟ ಮಾಡಿದ್ದೆವು. ಈಗ ಇದರಲ್ಲಿ ಯಾವ ಸಮಸ್ಯೆ ಉದ್ಭವಿಸಿದೆ?”, ಎಂಬುದಾಗಿ ಪವಾರ್ ಕೇಳಿದರು.
“ಈ ಗಿಯರ್ ಬಾಕ್ಸ್ ಗೆ ಮುಂಭಾಗದಲ್ಲಿ (ಫ್ರಂಟ್) A ಫೇಸ್ ನಲ್ಲಿ ಯಂತ್ರಣೆಯಿದೆ, ಹಾಗೆಯೇ ಹಿಂಭಾಗದಲ್ಲಿ (ರಿಯರ್) ಫೇಸ್ B ನಲ್ಲಿಯೂ ಯಂತ್ರಣೆಯಿದೆ. ಯಂತ್ರಣೆಯ ಎಲ್ಲ ವರದಿಗಳು (ರಿಪೋರ್ಟ್) ಸರಿಯಾಗಿವೆ. ಬೆಂಗಳೂರಿನಲ್ಲಿ ಮಾಡಲಾಗಿರುವ ಆಡಿಟ್ ನ ವರದಿಯೂ ಸಾಮಾನ್ಯವಾಗಿ ಹೊಂದಾಣಿಕೆಯಾಗುತ್ತದೆ. ಆದರೆ ಕಳೆದ ವಾರದಲ್ಲಿ ಅವರು ಮೊದಲ ಆಡಿಟ್ ಮಾಡಿದರು. ಆಗ ಅದರಲ್ಲಿ ಒಂದು ಪ್ರಾಮುಖ್ಯವಾದ ಅಳತೆಯ ರೀಡಿಂಗ್ ನಲ್ಲಿ ವ್ಯತ್ಯಾಸವು ಗಮನಕ್ಕೆ ಬಂತು. ಇನ್ನಿತರ ರೀಡಿಂಗ್ ಸರಿಯಾಗಿವೆ. ಎರಡೂ ಕಡೆಗಳಲ್ಲಿರುವ ರೀಡಿಂಗ್ ತೋರಿಸುವ ಈ ಕೋಷ್ಟಕವನ್ನು ನೋಡಿರಿ,” (ಕೋಷ್ಟಕ ಕ್ರ. 1) ಎಂಬುದಾಗಿ ಮೋಹನ್ ಇವರು ಹೇಳಿದರು.
 
 gffsfdfdfdf_1
 
ಕೋಷ್ಟಕ ಕ್ರ. 1
“ಈ ವ್ಯತ್ಯಾಸವನ್ನು ನೋಡಿದ ನಂತರ ಅವರು ವರ್ಸಟೈಲ್ ಇಂಜಿನಿಯರಿಂಗ್ ಇವರೊಂದಿಗೆ ಮಾತುಕತೆಯನ್ನು ಮಾಡಿದರು. ಆದರೆ ‘ವರ್ಸಟೈಲ್’ ಇವರು ಮತ್ತೆ ಪರಿಶೀಲಿಸಿ ಅದರ ರೀಡಿಂಗ್ ಸರಿಯಾಗಿದೆ, ಎಂಬುದಾಗಿ ಹೇಳಿದರು. ಇನ್ನೊಂದೆಡೆ ‘ಬಾಲಾಜಿ’ಯಲ್ಲಿಯೂ ಇನ್ನೊಂದು ಪ್ಯಾಕ್ ಮಾಡಿರುವ ಯಂತ್ರಭಾಗವನ್ನು ಮತ್ತೆ ಹೊರ ತೆಗೆದು ಅವರು ಪರಿಶೀಲಿಸಿದರು. ಅದರಲ್ಲಿಯೂ ಮೇಲಿನಂತೆ ವ್ಯತ್ಯಾಸವು ಕಂಡುಬಂತು,” ಎಂಬುದಾಗಿ ಮೋಹನ್ ಹೇಳಿದರು.
 
“ಅವರ ಸಿ.ಎಮ್.ಎಮ್. ಮಶಿನ್ ವಿದೇಶದ್ದಾಗಿರುವುದರಿಂದ ನಿರ್ದೋಷವಾಗಿದೆ ಮತ್ತು ‘ವರ್ಸಟೈಲ್’ನಲ್ಲಿರುವ ಮಶಿನ್ ಭಾರತದಲ್ಲಿ ನಿರ್ಮಾಣಗೊಂಡಿರುವುದರಿಂದ ಈ ವ್ಯತ್ಯಾಸವು ಕಂಡುಬರುತ್ತಿದೆ, ಎಂಬುದಾಗಿ ಠಾಕೂರ್ ಸಾಹೇಬ್ರಿಗೆ ಅನಿಸಿತು. ಹೀಗಿದ್ದಲ್ಲಿ ಇದನ್ನು ಸರಿ ಮಾಡುವಲ್ಲಿ ತುಂಬಾ ಖರ್ಚು ಮಾಡಬೇಕಾಗಬಹುದು. ಇದರಿಂದಾಗಿ ಅವರು ಚಿಂತೆಗೊಳಗಾದರು.” ಪವಾರ್ ಹೇಳುತ್ತಾರೆ, “ನಾವು ನಿನ್ನೆಯೇ ಅವರೊಂದಿಗೆ ಈ ಕುರಿತು ಮಾತನಾಡಿದ್ದೇನೆ ಮತ್ತು ಈ ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರವನ್ನು ನೀಡುತ್ತೇವೆ, ಎಂಬುದಾಗಿ ಅವರಿಗೆ ತಿಳಿಸಿದ್ದೇನೆ. ಅವರಲ್ಲಿ 10 ಗಿಯರ್ ಬಾಕ್ಸ್ ಗಳನ್ನು ಪ್ಯಾಕ್ ಮಾಡಿ ರಫ್ತು ಮಾಡಲು ತಯಾರಾಗಿವೆ ಮತ್ತು ಮುಂದಿನ ವಾರಕ್ಕೆ ಕಂಟೇನರ್ ಕೂಡಾ ಬುಕ್ ಮಾಡಲಾಗಿದೆ. ಆದ್ದರಿಂದ ಈ ಸಮಸ್ಯೆಯನ್ನು ಮುಂದಿನ ಮೂರು ದಿನಗಳಲ್ಲಿಯೇ ನೀಗಿಸಬೇಕಾಗಬಹುದು.”
ವಿಜಯ್ ಮಾತ್ರ ಸ್ವಲ್ಪ ಸಮಯ ವಿಚಾರ ಮಾಡಿದನು. “ಮೋಹನ್, ಈ ವಾರದಲ್ಲಿ ನಿನ್ನ ಶೆಡ್ಯುಲ್ ಏನಿದೆ?” ಎಂಬುದಾಗಿ ವಿಚಾರಿಸಿದನು.
ಕೋಷ್ಟಕ ಕ್ರ. 2
 
 
 
ಚಿತ್ರ ಕ್ರ. 2 : ಚಿಕ್ಕ ಪ್ರೋಬ್ ನಿಂದ ಮಾಡಲಾಗುವ ಅಳತೆ

rthtrhhy_1  H x 
 
“ಸರ್, ಮುಂದಿನ ವಾರದಲ್ಲಿ ನಮ್ಮ ಸರ್ವಿಸ್ ಟ್ರೆನಿಂಗ್ ಪ್ರಾರಂಭವಾಗಲಿದೆ. ಅದರ ಪೂರ್ವ ಸಿದ್ಧತೆ ನಡೆಯುತ್ತಿದೆ. ಆದರೆ ನಾನು ಇಂದು ಮಧ್ಯಾಹ್ನ ಪುಣೆಯಲ್ಲಿರುವ ‘ವರ್ಸಟೈಲ್’ಗೆ ಭೇಟಿ ನೀಡಿ ನಾಳೆ ಬೆಳಿಗ್ಗೆ ಬೆಂಗಳೂರಿಗೆ ಹೋಗಬಲ್ಲೆನು,” ಎಂಬುದಾಗಿ ಮೋಹನ್ ಹೇಳಿದನು. “ಪ್ರವಾಸದಲ್ಲಿ ನಾವು ತರಬೇತಿಯ ಎಲ್ಲ ಸಾಮಗ್ರಿಗಳನ್ನು ಪರಿಶೀಲಿಸಬಲ್ಲೆ.”
“ಗುಡ್”, ಎಂಬುದಾಗಿ ಹೇಳಿ ವಿಜಯ್ ಠಾಕೂರ್ ಇವರಿಗೆ ಫೋನ್ ಕರೆ ಮಾಡಿದರು. “ಹೆಲೋ, ವಿಜಯ್, ನನಗೆ ಅನಿಸಿತ್ತು, ನೀನು ನಾಲ್ಕು ಗಂಟೆಗಳಲ್ಲಿ ಹೇಳಿದರೂ ಕೂಡಾ ಮೂರು ಗಂಟೆಗಳಲ್ಲಿಯೇ ಫೋನ್ ಕರೆ ಮಾಡುತ್ತಿ. ಏನು ಮಾಡೋಣ?”, ಎಂದು ಠಾಕೂರ್ ಹೇಳಿದರು.
“ಸರ್, ಮೋಹನ್ ಬೆಂಗಳೂರಿಗೆ ನಿಮ್ಮಲ್ಲಿ ನಾಳೆ ಬೆಳಿಗ್ಗೆ ಬರುತ್ತಾನೆ,” ಎಂದು ವಿಜಯ್ ಹೇಳುತ್ತಾನೆ.
“ವೆರಿ ಗುಡ್, ಈ ವಿಷಯಕ್ಕೆ ಸೂಕ್ತವಾದ ಪರಿಹಾರವನ್ನು ತಕ್ಷಣವೇ ಮಾಡಬೇಕು, ಎಂದು ನನಗನ್ನಿಸುತ್ತದೆ. ನಾನು ನಮ್ಮ ಲಕ್ಷ್ಮಣನನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಫ್ಯಾಕ್ಟರಿಗೆ ಕರೆ ತರಲು ಹೇಳುತ್ತೇನೆ,” ಎಂದು ಹೇಳಿ ಅವರು ಫೋನ್ ಕರೆಯನ್ನು ನಿಲ್ಲಿಸಿದರು.
ಮೋಹನ್ ಮಧ್ಯಾಹ್ನದ ವೇಳೆಯಲ್ಲಿ ವರ್ಸಟೈಲ್ ಇಂಜಿನಿಯರಿಂಗ್ ನಲ್ಲಿ ಹೋಗಿ ಡ್ರಾಯಿಂಗ್, ಯಂತ್ರಣೆ ಮತ್ತು ಪರೀಕ್ಷೆಯ ರೀತಿಯನ್ನು ಅರಿತುಕೊಂಡನು. ಮುಂಜಾನೆಯ ಮೊದಲ ವಿಮಾನದಲ್ಲಿಯೇ ಅವನು ಬೆಂಗಳೂರು ತಲುಪಿದನು. ಬಾಲಾಜಿ ಇಂಡಸ್ಟ್ರಿಯ ಕ್ವಾಲಿಟಿ ಮ್ಯಾನೆಜರ್ ಲಕ್ಷ್ಮಣ್ ಅವರ ದಾರಿ ನೋಡುತ್ತಿದ್ದರು. ಮಧ್ಯದಲ್ಲಿಯೇ ಇಡ್ಲಿ, ಕಾಪಿಯ ಬ್ರೇಕ್ ಮಾಡಿ ಇಬ್ಬರೂ ಕಾರ್ಖಾನೆಯೆಡೆಗೆ ತಲುಪಿದರು.
 
“ಮೋಹನ್, ನೀನು ಮುಂಜಾನೆಯ ವಿಮಾನದಿಂದಲೇ ಬಂದಿದ್ದಿ, ತುಂಬಾ ಒಳ್ಳೆಯದಾಯಿತು. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಬೆಳಿಗ್ಗೆ ಆಫಿಸ್ ಗೆ ಹೋಗುವವರ ಟ್ರಾಫಿಕ್ ಶುರುವಾದರೆ ತಲುಪಲು ಮೂರು-ಮೂರುವರೆ ಗಂಟೆಗಳು ಬೇಕಾಗುತ್ತವೆ. ಈಗ ನಾವು ಒಂದುವರೆ ಗಂಟೆಯಲ್ಲಿಯೇ ತಲುಪಬಲ್ಲೆವು,” ಎಂದು ಲಕ್ಷ್ಮಣ್ ಹೇಳುತ್ತಾನೆ. “ನಿನಗೆ ಅಭ್ಯಂತರವಿಲ್ಲದಿದ್ದರೆ ನಾವು ಠಾಕೂರ್ ಇವರಿಗೆ ಕೇವಲ ಹೆಲೋ ಮಾಡುತ್ತೇನೆ, ನೇರವಾಗಿ ನಮ್ಮ ಲ್ಯಾಬ್ ಕಡೆಗೆ ಹೋಗೋಣ. ಕಾರಣ ಇದು ಸಿ.ಎಮ್.ಎಮ್.ನ ಸಮಸ್ಯೆ ಅಲ್ಲ, ಎಂದು ನನಗನ್ನಿಸುತ್ತಿದೆ. ಆದರೂ ಒಂದು ವೇಳೆ ಈ ಎಲ್ಲ ಗಿಯರ್ ಬಾಕ್ಸ್ ಗಳು ತಿರಸ್ಕರಿಸಲ್ಪಟ್ಟಲ್ಲಿ ಮತ್ತೆ ಮಶಿನಿಂಗ್ ಗೋಸ್ಕರ ಪುಣೆಗೆ ಕಳುಹಿಸಬೇಕಾಗಬಹುದು. ಅದರಲ್ಲಿ ತುಂಬಾ ಸಮಯವು ವ್ಯರ್ಥವಾಗಬಲ್ಲದು. ನಮ್ಮ ಕನ್ಸೈನ್ಮೆಂಟ್ ನ ತಾರೀಕು ತುಂಬಾ ಸಮೀಪ ಬಂದಿದೆ. ಆದುದರಿಂದ ಎಲ್ಲರಿಗೂ ಕಾಳಜಿ ಉಂಟು.”
 
 
ಮೋಹನ್ ವಿಚಾರ ಮಾಡಿಯೇ ಸರಿ, ಎಂದು ಹೇಳಿದನು ಮತ್ತು ಅಲ್ಪಸ್ವಲ್ಪ ಕೆಲಸಗಳನ್ನು ಪೂರೈಸಿ ಅವರಿಬ್ಬರೂ ಬಾಲಾಜಿ ಇಂಡಸ್ಟ್ರಿಯ ಲ್ಯಾಬ್ ಕಡೆಗೆ ತಲುಪಿದರು. “ನಾವು ಮತ್ತೊಮ್ಮೆ ಎಲ್ಲ ಅಳತೆಗಳನ್ನು ಪರಿಶೀಲಿಸೋಣ ಮತ್ತು ‘ವರ್ಸಟೈಲ್’ನ ಎಲ್ಲ ಅಳತೆಗಳನ್ನೂ ಪರಿಶೀಲಿಸೋಣ,” ಎಂಬುದಾಗಿ ಮೋಹನ್ ಸೂಚಿಸಿದನು. ನಂತರ ಅವರಿಬ್ಬರೂ ಎಲ್ಲ ಅಳತೆಗಳನ್ನು ಪರಿಶೀಲಿಸಿದರು. “ವರ್ಸಟೈಲ್ ನ ಗಿಯರ್ ಬಾಕ್ಸ್ ನ ರೀಡಿಂಗ್ ಸಾಮಾನ್ಯವಾಗಿ ಒಂದೇ ರೇಂಜ್ ನಲ್ಲಿದ್ದವು. ಇದರ ಅರ್ಥವೆಂದರೆ ಕೆಲಸದ ರೀತಿ ಮತ್ತು ಕೆಲಸದ ರೀತಿಯ ಕ್ಷಮತೆ ಒಳ್ಳೆಯದಿದೆ, ಎಂದು ಕಂಡುಬರುತ್ತಿದೆ. ಆದರೆ ಈ ಎಲ್ಲ ರೀಡಿಂಗ್ ನಲ್ಲಿ ಮತ್ತು ‘ಬಾಲಾಜಿ’ಯವರಲ್ಲಿ ಮಾಡಿರುವ ರೀಡಿಂಗ್ ನಲ್ಲಿ ಏನು ವ್ಯತ್ಯಾಸವಿದೆ?”, ಎಂದು ಮೋಹನ್ ಕೇಳಿದನು.
 
 
“ಈ ಗಿಯರ್ ಬಾಕ್ಸ್ ನ ಮುಂಭಾಗದಲ್ಲಿ A ಫೇಸ್ ನಲ್ಲಿ ಮತ್ತು ಹಿಂಭಾಗದಲ್ಲಿ B ಫೇಸ್ ನಲ್ಲಿರುವ ಇನ್ನಿತರ ಎಲ್ಲ ರೀಡಿಂಗ್ ಗಳು ಮಿತಿಯಲ್ಲಿವೆ. ಆದರೆ ಈ ಎರಡಕ್ಕೂ ಸಂಬಂಧಪಟ್ಟ ಬೋರ್ ನ ಸಿಲಿಂಡ್ರಿಕಲ್ ಅಳತೆಯು (ಮುಂಭಾಗದಲ್ಲಿರುವ ಫೇಸ್ ನೊಂದಿಗೆ ಸ್ಕ್ವೇರ್ ನೆಸ್) ಮಿತಿಗಿಂತ ಹೆಚ್ಚಿರುವುದು ಕಂಡುಬರುತ್ತಿದೆ. A ಫೇಸ್ ನಲ್ಲಿ ಇರುವ 400 ಮಿ.ಮೀ. ಆಕಾರದ ಬೋರ್ ನ ಹೊರ ಫೇಸ್, ಆ ಫೇಸ್ ನ B ಫೇಸ್ ನಲ್ಲಿರುವ 100 ಮಿ.ಮೀ. ಬೋರ್ ಸೆಂಟರ್ ಲೈನ್ ಇದು 60 ಮೈಕ್ರಾನ್ ಸ್ಕ್ವೇರ್ ನೆಸ್ ನಲ್ಲಿ (ಹೋಲ್ ಪೋಸಿಶನ್) ಇರಬೇಕು. ಈ ರೀಡಿಂಗ್ ಸುಮಾರು 100 ಮೈಕ್ರಾನ್ ನಷ್ಟು ಕಾಣುತ್ತಿದೆ. ಇದರಿಂದಾಗಿ ಆಪರೇಶನ್ ನಲ್ಲಿ ಹಲವಾರು ಸುಧಾರಣೆಗಳನ್ನು ಮಾಡಬೇಕಾಗಬಹುದು, ಎಂದು ಅನಿಸುತ್ತಿದೆ,” ಎಂಬುದಾಗಿ ಲಕ್ಷ್ಮಣ ಹೇಳಿದನು.
 
 
“ನೀವು ಡ್ರಾಯಿಂಗ್ ನಂತೆಯೇ ಪಾರ್ಟ್ ನ ಎಲ್ಲ ರೀಡಿಂಗ್ ಮಾಡಿದ್ದಿರೋ?” ಎಂಬುದಾಗಿ ಮೋಹನ್ ಸಿ.ಎಮ್.ಎಮ್.ನ ಟೆಕ್ನಿಶಿಯನ್ ಗೆ ಕೇಳಿದನು. “ಹೌದು ಸರ್, ನಾನು ಅದರ ಪ್ರಿಂಟ್ಔಟ್ ತೆಗೆದಿಟ್ಟಿದ್ದೇನೆ. ಇದರ ಎಲ್ಲ ರೀಡಿಂಗ್ ಇರುವ ಕೋಷ್ಟಕವನ್ನೂ ಮುಂದೆ ಇಟ್ಟುಕೊಂಡಿದ್ದೇನೆ,” ಎಂದು ರಾಜು ಹೇಳುತ್ತಾನೆ.
“ನಾವು ಒಂದು ಗಿಯರ್ ಬಾಕ್ಸ್ ಮತ್ತೆ ಇನ್ನೊಮ್ಮೆ ಪರಿಶೀಲಿಸೋಣವೇ?” ಎಂದು ಮೋಹನ್ ಕೇಳುತ್ತಾರೆ. “ಪೂರ್ತಿ ಪ್ರೊಗ್ರಾಮ್ ಮತ್ತೊಮ್ಮೆ ರನ್ ಮಾಡೋಣ.”
 
ಚಿತ್ರ ಕ್ರ. 3 : ದೊಡ್ಡ ಪ್ರೋಬ್ ನಿಂದ್ ಫೇಸ್ ನ ಅಳತೆ

ghfghghhjhj_1  
 
 
ಸ್ವಲ್ಪ ಸಮಯದ ಬಳಿಕ ಗಿಯರ್ ಬಾಕ್ಸ್ ಅಳವಡಿಸಿ ರಾಜು ಮಶಿನ್ ಪ್ರೋಬ್ ಜೋಡಿಸಿ ಸಂಪೂರ್ಣ ಸ್ಕ್ಯಾನಿಂಗ್ ಮಾಡಲಾರಂಭಿಸಿದನು. ಸುಮಾರು 30 ನಿಮಿಷಗಳಲ್ಲಿ ಎಲ್ಲ ಅಳತೆಗಳನ್ನು ಮಾಡಿದರು. ಮೋಹನ್ ಇದನ್ನು ಜಾಗರೂಕತೆಯಿಂದ ಮತ್ತು ಸೂಕ್ಷ್ಮವಾಗಿ ನೋಡುತ್ತಿದ್ದನು. ಇದೆಲ್ಲವನ್ನು ಮಾಡುತ್ತಿರುವಾಗ ಏನೋ ಅವನಿಗೆ ಗಮನಕ್ಕೆ ಬಂತು. ಆದರೆ ಅಲ್ಲಿ ಮಾಡುತ್ತಿರುವ ಎಲ್ಲ ಅಳತೆಗಳನ್ನು ಪೂರ್ತಿ ಮಾಡುವ ತನಕ ಅವನು ಏನೂ ಮಾತನಾಡಲಿಲ್ಲ. ಅಳತೆಯ ವರದಿಯನ್ನು ಪಡೆದು ಅವರೆಲ್ಲರೂ ಮತ್ತೆ ಒಟ್ಟಾದರು. ಎಲ್ಲ ವರದಿಯು ಮೊದಲಿನಂತೆಯೇ ಕಾಣುತ್ತಿತ್ತು. ಅಲ್ಪಸ್ವಲ್ಪ ಅಂಶಗಳ ಪುನರಾವರ್ತಿಯಾಗಿರುವ ವ್ಯತ್ಯಾಸವು ಕಂಡುಬಂದರೂ ಕೂಡಾ ಇನ್ನುಳಿದ ಅಳತೆಗಳು ಕೋಷ್ಟಕ ಕ್ರ. 2 ರಂತೆ ಸರಿಹೊಂದಾಣಿಸುತ್ತಿದ್ದವು.
“ನೀವು ಪ್ರೊಬ್ ಯಾಕೆ ಬದಲಾಯಿಸುವುದಿಲ್ಲ?” ಎಂದು ಮೋಹನ್ ಕೇಳುತ್ತಾನೆ.
“ಇಲ್ಲ ಸರ್. ಗಿಯರ್ ಬಾಕ್ಸ್ ತುಂಬಾ ದೊಡ್ಡದಾಗಿದೆ ಮತ್ತು ಹೆಚ್ಚಿನ ರೀಡಿಂಗ್ ಫೇಸ್ A ಮತ್ತು B ಯಲ್ಲಿಯೇ ಇದೆ. ಆದ್ದರಿಂದ ಒಂದೇ ಬದಿಯಲ್ಲಿ A ಫೇಸ್ ನ ಎಲ್ಲ ರೀಡಿಂಗ್ ಗಳನ್ನು ನಾವು ಮುಗಿಸುತ್ತೇವೆ. ಪಕ್ಕದಲ್ಲಿರುವ ಅಲ್ಪಸ್ವಲ್ಪ ರೀಡಿಂಗ್ ಕೂಡಾ ಮಾಡುತ್ತೇವೆ. ಮತ್ತೆ ಇನ್ನೊಂದು ಬದಿಯಲ್ಲಿರುವ ಫೇಸ್ B ಯಲ್ಲಿರುವ ರೀಡಿಂಗ್ ಮತ್ತೆ ಪಡೆದು ಆ ಪ್ರೋಬ್ ನಿಲ್ಲಿಸುತ್ತೇವೆ,” ಎಂದು ರಾಜು ಹೇಳುತ್ತಾನೆ.
“ಆದರೆ ನೀವು ಈ ಪ್ರಮುಖವಾದ ಇನ್ ಪುಟ್ ಫೇಸ್ ಮತ್ತು ಔಟ್ ಪುಟ್ ಬೋರ್ ನ ಸ್ಕ್ವೇರ್ ನೆಸ್ ನ ಅಳತೆಯನ್ನು ಯಾವುದರಿಂದ ಮಾಡುತ್ತೀರಿ?” ಎಂದು ಮೋಹನ್ ಕೇಳುತ್ತಾನೆ.
 

mhkhkhk_1  H x  
ಚಿತ್ರ ಕ್ರ. 4 : ದೊಡ್ಡ ಪ್ರೋಬ್ ನ ಬೋರ್ ನ ಅಳತೆ
“ಸರ್ A ಬದಿಯಲ್ಲಿರುವ ಎಲ್ಲ ಫೇಸ್, ಬೋರ್ ನ ರೀಡಿಂಗ್ ಮತ್ತು B ಬದಿಯಲ್ಲಿರುವ ಎಲ್ಲ ಫೇಸ್, ಬೋರ್ ನ ರೀಡಿಂಗ್ ನಿಂದ ಪ್ರೊಗ್ರಾಮ್ ನಿಂದ ಸ್ಕ್ವೇರ್ ನೆಸ್ ನ ವ್ಯಾಲ್ಯೂ ಸಿಗುತ್ತದೆ,” ಹೀಗೆ ರಾಜು ವಿವರಿಸುತ್ತಾನೆ.
“ಈ ಮಶಿನ್ ನಲ್ಲಿರುವ ಪ್ರೊಬ್ ಸುಮಾರು 150 ಮಿ.ಮೀ. ಉದ್ದದ್ದಾಗಿದೆ. ನಿಮ್ಮಲ್ಲಿ ಗರಿಷ್ಠ ಎಷ್ಟು ಉದ್ದದ ಪ್ರೋಬ್ ಇದೆ?”, ಎಂದು ಮೋಹನ್ ಕೇಳುತ್ತಾನೆ.
“ನಮ್ಮಲ್ಲಿ ಎಲ್ಲಕ್ಕಿಂತಲೂ ಉದ್ದದ ಪ್ರೋಬ್ ಅಂದರೆ 250 ಮಿ.ಮೀ. ಉದ್ದದ್ದು ಇದೆ,” ಎನ್ನುತ್ತಾನೆ ಲಕ್ಷ್ಮಣ.
“ಈ ಗಿಯರ್ ಬಾಕ್ಸ್ ನ ಅಗಲ 400 ಮಿ.ಮೀ. ಇದೆ. ನಮಗೆ ಕನಿಷ್ಠ 400 ಮಿ.ಮೀ.ನ ಪ್ರೋಬ್ ಬೇಕಾಗಿದೆ. ಅದು ಈಗ ಎಲ್ಲಿ ಸಿಗಬಲ್ಲದು,” ಇದು ಮೋಹನ್ ನ ಪ್ರಶ್ನೆ.
“ಈ ಇಂಡಸ್ಟ್ರಿಯಲ್ ಇಸ್ಟೇಟ್ ನಲ್ಲಿ ರೈಲ್ವೆಯ ಭಾಗಗಳು ತಯಾರಾಗುತ್ತವೆ. ಅವರಲ್ಲಿ ಬೃಹದಾಕಾರದ ಸಿ.ಎಮ್.ಎಮ್. ಮತ್ತು ಪ್ರೊಬ್ ಗಳಿವೆ. ಠಾಕೂರ್ ಸಾಹೆಬ್ರು ಅವರ ಸ್ನೇಹಿತರಿಗೆ ಕರೆ ಮಾಡಿದರೆ ಸಿಗಬಲ್ಲದು. ಆದರೆ ಇಷ್ಟು ದೊಡ್ಡ ಪ್ರೋಬ್ ಯಾಕೆ? ಅದರಲ್ಲಿ ಕಂಪನಗಳೂ ಹೆಚ್ಚು ಇರಬಲ್ಲವು.” ಎಂದು ಲಕ್ಷ್ಮಣ ಹೇಳುತ್ತಾನೆ.
“ನಾವು ಮೊದಲು ಒಂದು ಉದ್ದದ ಪ್ರೋಬ್ ನಿಂದ ಟ್ರಯಲ್ ಮಾಡೋಣ. ನಂತರ ನೋಡೋಣ ಏನಾದರೂ ಸಿಗಬಲ್ಲದೇ?” ಎಂದು ಮೋಹನ್ ಹೇಳುತ್ತಾನೆ.
“ನಾನು ಸಾಹೆಬ್ರ ಹತ್ತಿರ ಮಾತನಾಡಿ ಪ್ರೋಬ್ ನ ವ್ಯವಸ್ಥೆಯನ್ನು ಮಾಡುತ್ತೇನೆ. ನಮಗೆ ಬಹುಷಃ ಮಧ್ಯಾಹ್ನದ ತನಕ ಸಿಗಬಲ್ಲದು. ಆ ತನಕ ಊಟ ಮಾಡೋಣ,” ಲಕ್ಷ್ಮಣ ಹೇಳುತ್ತಾನೆ.
ಸಾಂಬಾರು-ಅನ್ನದ ಊಟ ಮಾಡಿ ಎಲ್ಲರೂ ಮತ್ತೆ ತಿರುಗಿ ಬಂದರು. ಅಷ್ಟರ ತನಕ ಹೊರ ಪ್ರೋಬ್ ಬಾಕ್ಸ್ ಟೇಬಲ್ ಮೇಲೆ ತಂದಿಡಲಾಗಿತ್ತು.
“ಠಾಕೂರ್ ಸಾಹೆಬ್ರ ಸ್ನೇಹಿತರು ಇಲ್ಲಿ ಎಲ್ಲೆಡೆಯಲ್ಲಿದ್ದಾರೆ. ಆದ್ದರಿಂದ ಎರಡೇ ಶಬ್ದಗಳಲ್ಲಿ ಕೆಲಸವಾಗುತ್ತದೆ ಮಾಹಾರಾಯ್ರೇ!”, ಎಂದು ಹೇಳುತ್ತಾ ಲಕ್ಷ್ಮಣ ಮತ್ತು ರಾಜು ಆ ಪ್ರೋಬ್ ಜಾಗ್ರತೆಯಿಂದ ಪ್ರೋಬ್ ಸ್ಟೇಶನ್ ನಲ್ಲಿ ಅಳವಡಿಸಿದರು. ಮೋಹನ್ ಅವರಿಬ್ಬರೊಂದಿಗೆ ವಿಚಾರ ವಿನಿಮಯವನ್ನು ಮಾಡಿ ಪ್ರೊಗ್ರಾಮ್ ನಲ್ಲಿ ಬೇಕಾಗಿರುವ ಬದಲಾವಣೆಗಳನ್ನು ಮಾಡಿದನು.
“ಈಗ ನೀವು ಮೊದಲು ಪ್ರೋಬ್ ನ ರೀಡಿಂಗ್ ಪರಿಶೀಲಿಸಿ ನೋಡಿ. ಅದರ ನಂತರ ಕೇವಲ 400 ಮಿ.ಮೀ. ಬೋರ್ ನ ಫೇಸ್ ನ ರೀಡಿಂಗ್ ಪಡೆದು ಆ ಪ್ರೋಬ್ ಹಾಗೆಯೇ ಒಳಗೆ ನೇರವಾಗಿ ಕೊಂಡುಹೋಗಿರಿ. ಮುಂಭಾಗದಲ್ಲಿರುವ 100 ಮಿ.ಮೀ. ಬೋರ್ ನ ಸೆಂಟರ್ ಲೈನ್ ತೆಗೆದು ಅದರ ಸ್ಕ್ವೇರ್ ನೆಸ್ ನ ರೀಡಿಂಗ್ ಮಾಡಿರಿ,” ಎಂದು ಮೋಹನ್ ಹೇಳುತ್ತಾರೆ.
“ಏನ್ರೀ, ರೀಡಿಂಗ್ ಏಕ್ ದಮ್ ಓಕೆ ಇದೆ. ಏನಾಗಿತ್ತು?” ರಾಜು ಮಾತ್ರ ಆಶ್ಚರ್ಯದಿಂದ ಕೇಳುತ್ತಾನೆ. (ಕೋಷ್ಟಕ ಕ್ರ. 3)
 

tuyjju_1  H x W 
ಕೋಷ್ಟಕ ಕ್ರ. 3
“ನಾವು ರೀಡಿಂಗ್ ನ ಮೂರು ಸೆಟ್ ಪಡೆಯೋಣ ಮತ್ತು ಪಕ್ಕದಲ್ಲಿರುವ ಟೇಬಲ್ ನಲ್ಲಿ ಚರ್ಚಿಸೋಣ,” ಮೋಹನ್.
ಈಗ ಎಲ್ಲರೂ ಕಾನ್ಫರನ್ಸ್ ರೂಮಲ್ಲಿ ಕಾಪಿ ಕುಡಿಯುತ್ತಾ ಮೋಹನ್ ಅವರಿಗೆ ತನ್ನ ಅನಿಸಿಕೆಗಳನ್ನು ಹೇಳುತ್ತಾನೆ. “ಮೊದಲು ಈ ಗಿಯರ್ ಬಾಕ್ಸ್ ನ ಕೆಲಸವು ಹೇಗೆ ನಡೆಯುತ್ತದೆ, ಎಂಬುದನ್ನು ತಿಳಿದುಕೊಳ್ಳೋಣ. ಇದರ A ಫೇಸ್ ನಲ್ಲಿ ಇರುವ 400 ಮಿ.ಮೀ. ಬೋರ್, ಅದರಲ್ಲಿ ಪವರ್ ಇನ್ ಪುಟ್ ಅಳವಡಿಸಲಾಗಿದೆ. ಇದರಲ್ಲಿ ಹೌಸಿಂಗ್ ಬೇರಿಂಗ್ ನಲ್ಲಿರುವ ಔಟ್ ಪುಟ್ ಶಾಫ್ಟ್ ಮತ್ತು ಅದರಲ್ಲಿ 300 ಮಿ.ಮೀ.ನ ಒಂದು ದೊಡ್ಡ ಗಿಯರ್ ಮತ್ತು ಅದರ ನಂತರ ಚಿಕ್ಕ ಗಿಯರ್ ಅಳವಡಿಸಲ್ಪಡುತ್ತವೆ. B ಫೇಸ್ ನಲ್ಲಿರುವ 100 ಮಿ.ಮೀ. ಬೋರ್ ನಲ್ಲಿ ಈ ಔಟ್ ಪುಟ್ ಶಾಫ್ಟ್ ಒಂದು ಬೇರಿಂಗ್ ನ ಸಹಾಯದಿಂದ ಅಳವಡಿಸಲ್ಪಡಿಸಲಾಗಿರುತ್ತದೆ. ಇದರಿಂದಾಗಿ A ಫೇಸ್ ನಲ್ಲಿ ಅಳವಡಿಸಲ್ಪಡುವ ಹೌಸಿಂಗ್ ಮತ್ತು ಶಾಫ್ಟ್ ಇವುಗಳ ಅಲೈನ್ ಮೆಂಟ್ ಸೂಕ್ತವಾಗಿರಬೇಕು.”
“ಹೌದು, ಇದು ಸಾಮಾನ್ಯವಾಗಿ ನಮಗೆ ತಿಳಿದ ವಿಷಯವೇ ಸರಿ,” ಲಕ್ಷ್ಮಣ ಹೇಳುತ್ತಾನೆ.
“ಪ್ರತ್ಯಕ್ಷವಾಗಿ ಕೆಲಸವನ್ನು ಅರಿತುಕೊಂಡು ಪ್ರತಿಯೊಂದು ಕಾಂಪೋನಂಟ್ ಡಿಸೈನ್ ಮಾಡಲಾಗುತ್ತದೆ,” ಎಂದು ಮೋಹನ್ ಹೇಳಿದಾಕ್ಷಣ, “ಕಾಂಪೋನಂಟ್ ಯಂತ್ರಣೆಯನ್ನು ಹೇಗೆ ಮಾಡುವುದು ಎಂಬುದನ್ನು ನಿರ್ಧರಿಸುವಾಗ ಡ್ರಾಯಿಂಗ್ ಮತ್ತು ಫಾರ್ಮ್ ಟಾಲರನ್ಸ್ ತಿಳಿದುಕೊಂಡು ಅದರಂತೆಯೇ ಮಶಿನಿಂಗ್ ನ ರೀತಿ ಮತ್ತು ವಿವಿಧ ಹಂತಗಳನ್ನು ನಿರ್ಧರಿಸಲಾಗುತ್ತದೆ. ಇವೆಲ್ಲವನ್ನು ಮಾಡುತ್ತಿರುವಾಗ ನೀಡಿರುವ ಟಾಲರನ್ಸ್ ನ ಅರ್ಥ ಮತ್ತು ವ್ಯಾಪ್ತಿ ತಿಳಿದುಕೊಳ್ಳುವುದೂ ಅತ್ಯಾವಶ್ಯಕವಾಗಿರುತ್ತದೆ. ಅದರ ನಂತರ ಪ್ರತ್ಯಕ್ಷವಾಗಿ ಕಾಂಪೋನಂಟ್ ನ ಮಶಿನಿಂಗ್ ಆರಂಭಗೊಳ್ಳುತ್ತದೆ. ಹೆಚ್ಚಿನ ಬೃಹತ್ ಉದ್ಯಮಗಳಲ್ಲಿ ಇದನ್ನೇ ಈ ತನಕ ನಾನು ಹೇಳಿರುವ ಕೆಲಸ ‘ಮ್ಯಾನ್ಯುಫ್ಯಾಕ್ಚರಿಂಗ್ ಇಂಜಿನಿಯರಿಂಗ್’ ವಿಭಾಗವಿರುತ್ತದೆ. ನಾನು ನಿನ್ನೆ ಇಲ್ಲಿಗೆ ಬರುವ ಮುಂಚೆ ವರ್ಸಟೈಲ್ ಇಂಜಿನಿಯರಿಂಗ್ ನಲ್ಲಿ ಹೋಗಿದ್ದೆ. ಅವರಲ್ಲಿ ಮಶಿನಿಂಗ್ ಮಾಡುವಾಗಲೂ ಒಂದೇ ಸೆಟಪ್ ನಲ್ಲಿ A ಫೇಸ್ ಮತ್ತು B ಫೇಸ್ ನಲ್ಲಿರುವ ವರ್ತುಲಾಕಾರದ ಬೋರ್ ಇವುಗಳ ಮಶಿನಿಂಗ್ ಮಾಡಲಾಗುತ್ತದೆ. ಎಲ್ಲಿ ಸಿ.ಎಮ್.ಎಮ್.ನಲ್ಲಿ ಪರೀಕ್ಷೆ ಮಾಡಲಾಗುತ್ತದೆಯೋ, ಸ್ಕ್ವೇರ್ ನೆಸ್ ಗೋಸ್ಕರ ಉದ್ದ ಪ್ರೋಬ್ ನ ಸಹಾಯದಿಂದ ನಿರ್ದೋಷವಾದ ಪರೀಕ್ಷೆಯಾಗುತ್ತದೆ.”
“ಆದರೆ, ನಮ್ಮಲ್ಲಿ ಇಷ್ಟು ಉದ್ದದ ಪ್ರೋಬ್ ಇಲ್ಲದಿದ್ದರಿಂದ ಮತ್ತು ಚಿಕ್ಕ ಪ್ರೋಬ್ ನ ಎಲ್ಲ ಪರೀಕ್ಷೆಗಳನ್ನು ಮಾಡುವುದು ಸಾಧ್ಯವಿಲ್ಲದಿದ್ದರಿಂದ ನಾವು ಈ ಪ್ರೋಗ್ರಾಮ್ ಬಳಸಿದೆವು,” ಎಂದು ಲಕ್ಷ್ಮಣ ಹೇಳುತ್ತಾನೆ. “ನನಗೊಂದು ಅನುಮಾನವಿದೆ. ಎರಡೂ ವಿಧಗಳಲ್ಲಿ ಖಂಡಿತ ವ್ಯತ್ಯಾಸ ಯಾಕೆ ಉಂಟಾಯಿತು? ಚಿಕ್ಕ ಪ್ರೋಬ್ ನಿಂದಲೂ ನಿರ್ದೋಷವವಾದ ಪರೀಕ್ಷೆಯನ್ನು ಮಾಡಲಾಗುತ್ತದೆ ಮತ್ತು ಕಂಪನಗಳೂ ಉಂಟಾಗುವುದಿಲ್ಲ.”
“ಇದೇ ಎರಡೂ ರೀಡಿಂಗ್ ನಲ್ಲಿರುವ ವ್ಯತ್ಯಾಸ ಯಾಕೆ ಉಂಟಾಯಿತು, ಇದರ ಕಾರಣ ಒಂದೇ ಇರಬೇಕು. ಒಂದೇ ಚಿಕ್ಕ ಪ್ರೋಬ್ ನಿಂದ ಎಲ್ಲ ಪರೀಕ್ಷೆಗಳನ್ನು ಮಾಡುವಾಗ ಕಾಂಪೋನಂಟ್ ನ ನಾಲ್ಕೂ ಬದಿಗಳಲ್ಲಿ ತಿರುಗಿಸಿ ಮುಂದಿನ ಫೇಸ್ ನೆಡೆಗೆ ಹೋಗುತ್ತದೆ. ಆಗ ರೀಡಿಂಗ್ ನಲ್ಲಿರುವ ಅನಿಶ್ಚಿತತೆಯು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚುತ್ತದೆ. ಲಿನಿಯರ್ ರೀಡಿಂಗ್ ನಲ್ಲಿ ಅದರಿಂದಾಗಿ ಎಷ್ಟು ಪರಿಣಾಮ ಬೀರುವುದು ಕಂಡುಬರುವುದಿಲ್ಲ. ಆದರೆ ಕ್ಲಿಷ್ಟ್ ಅಳತೆ ಮಾಡುತ್ತಿರುವಾಗ ಈ ಹಂತಗಳ ರೀಡಿಂಗ್ ನ ಮತ್ತು ಅದರಲ್ಲಿರುವ ಅನಿಶ್ಚಿತತೆಯನ್ನು ಒಟ್ಟಾಗಿರುವ ಪರಿಣಾಮವೆಂಬುದಾಗಿ ಅಳತೆಯು ತಪ್ಪಾಗಿರುವುದು ಕಂಡುಬರುತ್ತದೆ,” ಮೋಹನ್ ಸಮಜಾಯಿಸಿ ಹೇಳಿದನು.
“ವ್ಹಾ!” ಹಿಂಭಾಗದಿಂದ ಶಬ್ದವೊಂದು ಬಂತು. ಅನಂತರಾವ್ ಠಾಕೂರ್ ಬಂದಿದ್ದಾರೆ, ಇದು ಮಾತ್ರ ಯಾರಿಗೂ ತಕ್ಷಣ ಗಮನಕ್ಕೆ ಬಂದಿಲ್ಲ. “ಅಂದರೆ ಎಲ್ಲ ಗಿಯರ್ ಬಾಕ್ಸ್ ಗಳು ಓಕೆ ಇವೆ, ಸರ್!” ಅವರು ಹೇಳಿದರು.
“ಈಗ ನಾವು ಎಲ್ಲಕ್ಕಿಂತಲೂ ಮೊದಲು 400 ಮಿ.ಮೀ.ನ ಪ್ರೋಬ್ ಆರ್ಡರ್ ಮಾಡಿರಿ... ಮತ್ತೆ ‘ವರ್ಸಟೈಲ್’ಗೆ ತಿಳಿಸಿರಿ. ನಿಮ್ಮಲ್ಲಿರುವ ಕೆಲಸದಲ್ಲಿ ಯಾವುದೇ ಸಮಸ್ಯೆಗಳಿಲ್ಲ.”
“ಯಸ್ ಸರ್, ನಾನು ಇಂದೇ ಆರ್ಡರ್ ಕೊಡುತ್ತೇನೆ. ಮೋಹನ್ ಇಲ್ಲಿ ಬಂದಿದ್ದರಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿತು. ನಮಗೆ ಒಮ್ಮೆ ಅನಿಸಿತ್ತು, ನಮ್ಮ ಸಿ.ಎಮ್.ಎಮ್. ವಿದೇಶದ್ದಾಗಿದೆ ಮತ್ತು ‘ವರ್ಸಟೈಲ್’ನ ‘ಅಭಿನವ’ ಇವರಿಂದ ಖರೀದಿಸಲಾಗಿದೆ. ಇದರಿಂದಾಗಿ ಹಲವಾರು ತಪ್ಪಾದ ಅಳತೆ ಆಗುತ್ತಿದೆಯೇ? ಆದರೆ ಆ ಪ್ರಶ್ನೆಗೂ ಪರಿಹಾರ ಸಿಕ್ಕಿತು, ಇದು ಒಳ್ಳೆಯ ಕೆಲಸವಾಯಿತು,” ಎಂದು ಲಕ್ಷ್ಮಣ್ ಮೋಹನ್ ಇವನೆಡೆಗೆ ನೋಡಿ ನಗುತ್ತಾ ಹೇಳಿದನು.
“ಸರ್, ನಾವು ನಾಳೆ ರಾತ್ರಿ ವಾಪಸ್ ಹೋಗುತ್ತೇನೆ. ಆದರೆ ಇಂದು ನಾವು ಸಮಸ್ಯೆಯನ್ನು ಪರಿಹರಿಸಿದ್ದೇವೆ. ಆದ್ದರಿಂದ ಇವತ್ತು ಅಥವಾ ನಾಳೆ ಬೆಳಿಗ್ಗೆ ನಾವು ಹೋಗಬಹುದಲ್ಲವೇ?”, ಮೋಹನ್ ಕೇಳಿದನು.
“ಖಂಡಿತ! ಯಾವುದೇ ಅಡಚಣೆ ಇಲ್ಲ. ನಾವು ಇಂದೇ ವಿಜಯ್ ದೇಶ್ ಮುಖ್ ಇವರಿಗೆ ಕರೆ ಮಾಡಿ ಹೇಳುತ್ತೇನೆ, ನಿಮ್ಮ ಅತ್ಮೀಯರು ತಕ್ಷಣ ವಾಪಸ್ ಕಳುಹಿಸುತ್ತೇನೆ. ಇಲ್ಲಿರುವ ಇಂಡಿಸ್ಟ್ರಿಯಲ್ ಇಸ್ಟೇಟ್ ನಲ್ಲಿ ಐದಾರು ಜನರು ಸಿ.ಎಮ್.ಎಮ್. ಬಳಸುವವರಿದ್ದಾರೆ. ಮುಂದೆ ಯಾವಾಗಲಾದರೂ ಒಮ್ಮೆ ಎಲ್ಲರಿಗೂ ಒಂದು ಸೆಮಿನಾರ್ ಮಾಡೋಣ ಮತ್ತು ಅದರಲ್ಲಿ ನೀವು ನಿಮ್ಮ ಅನುಭವದಿಂದ ಒಂದು ಟ್ರೇನಿಂಗ್ ಸೆಶನ್ ಮಾಡಿರಿ... ಏನು ಆಗಬಹುದಲ್ಲವೇ?”
“ಸರ್, ಧನ್ಯವಾದಗಳು,” ಎಂದು ಮೋಹನ್ ನಮ್ರತೆಯಿಂದ ಹೇಳಿದನು. ಒಂದು ಜಟಿಲವಾದ ಪ್ರಶ್ನೆಯನ್ನು ಪರಿಹರಿಸುವ ಸಮಾಧಾನವು ಅವನ ಮುಖದಲ್ಲಿ ಕಾಣುತ್ತಿತ್ತು.
(ತಾಂತ್ರಿಕ ವಿವರಣೆ : ಮೋಮಿನ್ ಎ.ವೈ., ಅಪ್ಲಿಕೇಶನ್ ಎಂಡ್ ಟ್ರೇನಿಂಗ್ ಹೆಡ್, ಎಕ್ಯುರೇಟ್ ಗೇಜಿಂಗ್ ಎಂಡ್ ಇನ್ ಸ್ಟ್ರುಮೆಂಟ್ಸ್ ಪ್ರೈ.ಲಿ.)
ಅಚ್ಯುತ್ ಮೇಢೇಕರ್ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ.
ಅವರಿಗೆ ಉತ್ಪಾದನೆ ಮತ್ತು ಗುಣಮಟ್ಟದ ನಿಯಂತ್ರಣೆಯ ವಲಯದಲ್ಲಿ ಸುಮಾರು 42 ವರ್ಷಗಳ ಅನುಭವವಿದೆ.
9764955599
 
@@AUTHORINFO_V1@@