ರಜಿಸ್ಟರ್ ಕಮಾಂಡ್

@@NEWS_SUBHEADLINE_BLOCK@@

Lohkarya - Udyam Prakashan    22-Jul-2021   
Total Views |
 
ಸಿ.ಎನ್.ಸಿ. ಮಶಿನ್ ಗಳ ಪ್ರೊಗ್ರಾಮಿಂಗ್ ಮಾಡುವಾಗ ಉಪಲಬ್ಧವಿರುವ ರೆಫರನ್ಸ್ ಪಾಯಿಂಟ್ ಗಳಿಗೆ ಒಂದಕ್ಕೊಂದರ ಅಪ್ಪಣೆ ಮತ್ತು ಸಂಬಂಧದಿಂದಲೇ ಜೋಡಿಸುವುದು ಅತ್ಯಾವಶ್ಯಕವಾಗಿರುತ್ತದೆ. ಇದಕ್ಕೆ ಹಾರ್ಮೋನೈಜ್ ಮಾಡುವುದು ಎಂದು ಹೇಳುತ್ತಾರೆ. ಕಾರ್ಯವಸ್ತು ಇರುವ ರೆಫರನ್ಸ್ ಪಾಯಿಂಟ್ (ಪ್ರೊಗ್ರಮಾಮ್ ಝೀರೋ) ಮತ್ತು ಟೂಲ್ ಗಳ ತುದಿ (ಟಿಪ್) ಇವೆರಡರಲ್ಲಿ ಹಲವಾರು ನಿರ್ಧಾರಿತ ಸಾಮಗ್ರಿಗಳಿಂದಲೇ ಒಟ್ಟಾಗಿ ಜೋಡಣೆಯನ್ನು ಮಾಡುವುದು ಆವಶ್ಯಕವಾಗಿದೆ. ನಿಯಂತ್ರಣೆಯ ವ್ಯವಸ್ಥೆಯಲ್ಲಿ (ಕಂಟ್ರೋಲ್ ಸಿಸ್ಟಮ್) ಟೂಲ್ ಪ್ರತ್ಯಕ್ಷವಾಗಿ ಮಶಿನ್ ನ ಏರಿಯಾದಲ್ಲಿ ನಿಖರವಾಗಿ ಎಲ್ಲಿದೆ, ಎಂಬ ಮಾಹಿತಿಯನ್ನು ನೀಡುವಂತಹ ವ್ಯವಸ್ಥೆಯ ಆವಶ್ಯಕತೆ ಇರುತ್ತದೆ. ಟೂಲ್ ಗಳ ಸದ್ಯದ ಜಾಗವು ಪ್ರೊಗ್ರಾಮ್ ನಿಂದ್ ನಿಯಂತ್ರಿಸುವ ಪ್ರಣಾಳಿಕೆಯ ಮೆಮರಿಯಲ್ಲಿ ಸೇರಿಸಬಹುದು. ಈ ರೀತಿಯಲ್ಲಿ ಮಾಹಿತಿಯನ್ನು ನೀಡಲು G ಕಮಾಂಡ್ ನ ಆವಶ್ಯಕತೆ ಇರುತ್ತದೆ. ಈ ಕಮಾಂಡ್ ಗೆ ಸ್ಥಾನದ ನೊಂದಾಣಿಕೆಯನ್ನು (ಪೋಸಿಶನ್ ರಜಿಸ್ಟರ್) ಎಂದು ಹೇಳಲಾಗುತ್ತದೆ.
fdffgfgff_1  H  
 
ಸ್ಥಾನದ ನೊಂದಾಣಿಕೆಯ ಕಮಾಂಡ್ :

sdfghj_1  H x W 
ನಿಯಂತ್ರಣೆಯ ಪ್ರಣಾಳಿಕೆಯಲ್ಲಿರುವ ಪ್ರಿಪರೇಟರಿ ಕಮಾಂಡ್ ಅಂದರೆ G ಕೋಡ್ ಕಮಾಂಡ್. ಮುಂದೆ ನೀಡಿರುವ ಈ ಎರಡು ಕಮಾಂಡ್ ಟೂಲ್ ಗಳ ಸ್ಥಾನದ ನೊಂದಾಣಿಕೆ ಎಂಬುದಾಗಿ ಬಳಸಲಾಗುತ್ತವೆ.
ಇತ್ತೀಚಿನ ಪ್ರಗತಿ ಹೊಂದಿರುವ ಸಿ.ಎನ್.ಸಿ. ಪ್ರೊಗ್ರಾಮಿಂಗ್ ನಲ್ಲಿ ಮೇಲೆ ತಿಳಿಸಿರುವ ಎರಡೂ ಸ್ಥಾನಗಳ ನೊಂದಾಣಿಕೆಯ ಕಮಾಂಡ್ ಗಳನ್ನು ಪಕ್ಕದಲ್ಲಿ ತೆಗೆದು ಅದರ ಬದಲಾಗಿ ಪ್ರಗತಿ ಹೊಂದಿರುವ ಅಥವಾ ಫ್ಲೆಕ್ಸಿಬಲ್ ಈ ರೀತಿಯ ಆಫ್ ಸೆಟ್ ಹೆಸರಿನಲ್ಲಿ G54 ರಿಂದ G59 ಈ ಕಮಾಂಡ್ ನೀಡಲಾಗಿವೆ. ಆದರೂ ವಿಷಯವನ್ನು ತಿಳಿದುಕೊಳ್ಳಲು ಅಥವಾ ಕೌಶಲ್ಯವನ್ನು ಹೆಚ್ಚಿಸಲು G92 ಮತ್ತು G50 ಯೋಗ್ಯವಾದ ರೀತಿಯಲ್ಲಿ ತಿಳಿದುಕೊಳ್ಳುವುದು ಅತ್ಯಾವಶ್ಯಕವಾಗಿದೆ.
ಸ್ಥಾನದ ನೊಂದಾಣಿಕೆಯ ಕಮಾಂಡ್ ನ ವ್ಯಾಖ್ಯೆ
ಅಕ್ಷದಲ್ಲಿ ಪ್ರೊಗ್ರಾಮ್ ಝೀರೋ ಅದು ಟೂಲ್ ನ ಸದ್ಯದ ಸ್ಥಾನ ಇವೆರಡಲ್ಲಿರುವ ದೂರ ಅಥವಾ

adsfghjk_1  H x 
 
ದಿಕ್ಕು, ಸ್ಥಾನ ನೊಂದಾಣಿಕೆಯ ಕಮಾಂಡ್ ನಿಂದ ಸೆಟ್ ಮಾಡಲಾಗುತ್ತದೆ. ಮಶಿನ್ ಝೀರೋ ಕುರಿತು ಇದರಲ್ಲಿ ಯಾವುದೇ ರೀತಿಯ ಉಲ್ಲೇಖ ಇಲ್ಲ, ಅದರ ಬದಲಿಗೆ ಸದ್ಯದ ಟೂಲ್ ನ ಸ್ಥಾನದ ಕುರಿತು ವಿಚಾರ ಮಾಡಲಾಗುತ್ತದೆ, ಎಂಬುದು ಮೇಲಿನ ವ್ಯಾಖ್ಯೆಯಿಂದ ಗಮನಕ್ಕೆ ಬರುತ್ತದೆ. ವ್ಯಾಖ್ಯೆಯಂತೆ ದೂರ ಒಂದು ದಿಕ್ಕಿನಲ್ಲಿಯೇ ಇರುತ್ತದೆ ಅಥವಾ ಅದು ಪ್ರೊಗ್ರಾಮ್ ಝೀರೋದಿಂದ ಅದು ಟೂಲ್ ನ ಸದ್ಯದ ಸ್ಥಾನ ಎಂಬುದಂತಿರುತ್ತದೆ. ಪ್ರೊಗ್ರಾಮ್ ಝೀರೋದಿಂದ ಟೂಲ್ ಸ್ಥಾನದ ತನಕ ದಿಕ್ಕುಗಳನ್ನುತೋರಿಸಲಾಗಿದೆ.
ಇದರಿಂದಾಗಿ ಪ್ರೊಗ್ರಾಮ್ ನಲ್ಲಿ ಪ್ರತಿಯೊಂದು ಅಕ್ಷಕ್ಕೋಸ್ಕರ ಯೋಗ್ಯವಾದ ಗುರುತು ಇರುತ್ತದೆ.
1. ಪಾಜಿಟಿವ್ (+ve)
2. ನಿಗೆಟಿವ್ (-ve)
3. ಝೀರೋ (0)
ಮೇಲಿನ ಮೂರು ಗುರುತುಗಳಲ್ಲಿ ಒಂದು ಗುರುತು ಇರಲೇಬೇಕು. ಸ್ಥಾನ ನೊಂದಾಣಿಕೆಯು ಕೇವಲ ಎಬ್ಸೋಲ್ಯುಟ್ ಮೊಡ್ ನಲ್ಲಿಯೇ ಕೆಲಸ ನಿರ್ವಹಿಸುತ್ತದೆ. (G90)
ಪ್ರೊಗ್ರಾಮಿಂಗ್ ಫಾರ್ಮೆಟ್
G92 X…Y…Z…
ಮೇಲಿನ ಫಾರ್ಮೆಟ್ ನಲ್ಲಿ ಪ್ರತಿಯೊಂದು ಅಕ್ಷದ ಎದುರಿನಲ್ಲಿ ನೀಡುರುವ ಮೌಲ್ಯ (ವ್ಯಾಲ್ಯೂ) ಪ್ರೊಗ್ರಾಮ್ ಝೀರೋದಿಂದ ಟೂಲ್ ರೆಫರನ್ಸ್ ಬಿಂದುವಿನ ತನಕ ದೂರವಿರುತ್ತದೆ.
 
ಚಿತ್ರ ಕ್ರ.1

sdfghjjyjdtyjtyjry_1 
ಟೂಲ್ ಪೋಜಿಶನ್ ಸೆಟಿಂಗ್
ಟೂಲ್ ಗಳ ಸದ್ಯದ ಸ್ಥಾನ, ನಿಯಂತ್ರಣೆಯ ಮೆಮರಿಯಲ್ಲಿ ನೊಂದಾಯಿಸುವುದು G92 ಕಮಾಂಡ್ ನ ಪ್ರಮುಖವಾದ ಕೆಲಸವಾಗಿರುತ್ತದೆ. G92 ಕಮಾಂಡ್ ಯಾವ ಬ್ಲಾಕ್ ನಲ್ಲಿ ನೀಡಲಾಗಿರುತ್ತದೆಯೋ, ಆ ಬ್ಲಾಕ್ ನಲ್ಲಿ ಮಶಿನ್ ನಲ್ಲಿರುವ ಯಾವುದೇ ಚಟುವಟಿಕೆಗಳು ಆಗಲಾರವು. G92 ಇದರಿಂದಾಗಿ ಉಂಟಾಗುವ ಪರಿಣಾಮವು ಕೇವಲ ಎಬ್ ಸೋಲ್ಯುಟ್ ಪೊಜಿಶನ್ ಮೋಡ್ ನಲ್ಲಿ ಕಂಪ್ಯೂಟರ್ ನ ಸ್ಕ್ರೀನ್ ನಲ್ಲಿ ಕಾಣಬಹುದು.
 
ಚಿತ್ರ ಕ್ರ. 2 : ಮಶಿನ್ ಝೀರೊಗೆ ಸದ್ಯದ ಟೂಲ್ ನ ಪೊಜಿಶನ್ ರಜಿಸ್ಟರ್ ಸೆಟ್ ಮಾಡಲಾಗಿದೆ.

sdfghjjyjdtyjtyjryffghg_1
 
 
ಮಶಿನಿಂಗ್ ಸೆಂಟರ್ ನಲ್ಲಿರುವ ಅಪ್ಲಿಕೇಶನ್
ಸಿ.ಎನ್.ಸಿ. ಮಶಿನಿಂಗ್ ಸೆಂಟರ್ ನಲ್ಲಿ ಕೆಲಸ ಮಾಡುವಾಗ ಮೊದಲು ಪ್ರತಿಯೊಂದು ಅಕ್ಷಕ್ಕೋಸ್ಕರ ಪೊಜಿಶನ್ ರಜಿಸ್ಟರ್ ವ್ಯವಸ್ಥೆ ಮಾಡಬೇಕಾಗುತ್ತದೆ. ಇದಕ್ಕೋಸ್ಕರ ಈ ಕೆಳಗಿನ ಎರಡು ರೀತಿಯನ್ನು ಬಳಸಬೇಕಾಗುತ್ತದೆ.
1. ಟೂಲ್ ಪೊಜಿಶನ್ ಮಶಿನ್ ಝೀರೋನಲ್ಲಿ ಸೆಟ್ ಮಾಡಬೇಕು.
2. ಟೂಲ್ ಪೊಜಿಶನ್ ಮಶಿನ್ ಝೀರೋದಿಂದ ಬದಿಗೆ ಸರಿಸುವುದು.
 
ಚಿತ್ರ ಕ್ರ. 3

fdffgfgff_1  H
 
 
ಟೂಲ್ ಸೆಟ್ ಮಶಿನ್ ಝೀರೋದಲ್ಲಿ
ಇದರಲ್ಲಿ ಮಶಿನ್ ಝೀರೋ ಪೊಜಿಶನ್ ನ ಟೂಲ್ ಬದಲಾಸುವಂತಹ ಪೊಜಿಶನ್ ಇರಬೇಕಾಗುತ್ತದೆ. ವ್ಯವಹಾರದಲ್ಲಿ ಅಥವಾ ಪ್ರತ್ಯಕ್ಷವಾಗ ಕೆಲಸ ಮಾಡುತ್ತಿರುವಾಗ ಇದು ಸಾಧ್ಯವಿಲ್ಲ. ಉದಾಹರಣೆ, ಕೆಳಗಿನ ಪ್ರೊಗ್ರಾಮ್ ಲೈನ್ ನೋಡಿರಿ.
G92x25 Y12 Z10.5
ಇದಕ್ಕೋಸ್ಕರ ಸಿ.ಎನ್.ಸಿ. ಆಪರೇಟರ್ ಗೆ X ಅಕ್ಷ ಮಶಿನ್ ಝೀರೋದಿಂದ ನಿರ್ದೋಷವಾದ 25 ಮಿ.ಮೀ. ಸೇಟ್ ಮಾಡಬೇಕಾಗಬಹುದು. ಈ ಪರಿಸ್ಥಿತಿಯಲ್ಲಿ Y ಅಕ್ಷ ಮಶಿನ್ ಝೀರೋದಿಂದ 12 ಮಿ.ಮೀ.ನಲ್ಲಿ, ಹಾಗೆಯೇ Z ಅಕ್ಷ ಮಶಿನ್ ಝೀರೊದಿಂದ ನಿರ್ದೋಷವಾಗಿ 10.5 ಮಿ.ಮೀ.ನಲ್ಲಿ ಸೆಟ್ ಮಾಡಬೇಕಾಗಬಹುದು. (ಚಿತ್ರ ಕ್ರ. 1)
ಮಶಿನ್ ಝೀರೋದಿಂದ ಬದಿಯಲ್ಲಿ ಟೂಲ್ ಸೆಟ್
ಇದರಲ್ಲಿ ಪ್ರೊಗ್ರಾಮರ್ XY ಟೂಲ್ ಪೋಜಿಶನ್ ಮಶಿನ್ ಟ್ರಾವೆಲ್ ನ ಮಿತಿಯಲ್ಲಿ ಎಲ್ಲಿಯೂ ಸೆಟ್ ಮಾಡಬಹುದು. ಇದೇ ಪೊಜಿಶನ್ ಟೂಲ್ ಬದಲಾಯಿಸುವ ಪೊಜಿಶನ್ ಎಂಬುದಾಗಿ XY ಅಕ್ಷಕ್ಕೋಸ್ಕರ ಬಳಸಬಲ್ಲೆವು. ಮಶಿನ್ ಗೆ ಝೀರೋ ಇದರ ಆವಶ್ಯಕತೆ ಇಲ್ಲದಿರುವುದರಿಂದ ಆಪರೇಟರ್ ಕಾರ್ಯವಸ್ತುವಿನ ಸೆಟಪ್ ಟೇಬಲ್ ನಲ್ಲಿ ಎಲ್ಲಿಯೂ ಮಾಡಬಲ್ಲನು.
ಪ್ರಾರಂಭದ ಟೂಲ್ ಗಳ ಬದಲಾವಣೆ ಪೊಜಿಶನ್ ತನಕ ಟೂಲ್ ತರಲು ಆಪರೇಟರ್ ಪ್ರೊಗ್ರಾಮ್ ಝೀರೋದಿಂದ G92 ಬ್ಲಾಕ್ ನಲ್ಲಿ ಇಟ್ಟಿರುವ ದೂರದ ತನಕ ಕೈಯಿಂದ ಟೂಲ್ ಸರಿಸುತ್ತಾನೆ, ಈ ವಿಷಯವು ತುಂಬಾ ಸುಲಭವಾಗಿದೆ. ಟೂಲ್ ನ ಬದಲಾಯಿಸಿದ ಪೊಜಿಶನ್ ಒಮ್ಮೆ ನಿಗದಿಸಿದ ನಂತರ ಪ್ರೊಗ್ರಾಮ್ ನಲ್ಲಿರುವ ಇತರ ಎಲ್ಲ ಟೂಲ್, ಬದಲಾವಣೆಗೋಸ್ಕರದ ಟೂಲ್ ಬದಲಾವಣೆ ಮಾಡುವ ಪೊಜಿಶನ್ ನಲ್ಲಿ ಬರುತ್ತವೆ. ಈ ರೀತಿಯಲ್ಲಿ ಒಂದು ರೀತಿಯ ನಷ್ಟ ಅಂದರೆ ನಿಯಂತ್ರಣೆಯ ಪ್ರಣಾಳಿಕೆಯ ಪವರ್ ಇರುವ ತನಕ ಟೂಲ್ ನ ಬದಲಾವಣೆಯ ಪೊಜಿಶನ್ ಮೆಮರಿಯಲ್ಲಿ ಸಂಗ್ರಹಿಸಲಾಗುತ್ತದೆ. ಮಶಿನ್ ನ ಪವರ್ ಇಲ್ಲದಂತಾದಲ್ಲಿ ಅಥವಾ ಮಶಿನ್ ಆಫ್ ಆದಲ್ಲಿ ಮತ್ತು ಪುನಃ ಪ್ರಾರಂಭಿಸಿದಲ್ಲಿ ಟೂಲ್ ಬದಲಾವಣೆಯ ಪೊಜಿಶನ್ ಹೇಗಿದೆಯೋ ಹಾಗೆಯೇ ನಿಲ್ಲುವುದಿಲ್ಲ. (ರಿಟೇನ್ ಆಗುವುದಿಲ್ಲ). ಅದು ಮೆಮರಿಯಿಂದ ಇಲ್ಲದಂತಾಗಿರುತ್ತದೆ, ಅದನ್ನು ಮತ್ತೆ ಅದರಲ್ಲಿ ನೊಂದಾಯಿಸಬೇಕಾಗುತ್ತದೆ.
Z ಅಕ್ಷದ ಪೊಜಿಶನ್ ರಜಿಸ್ಟರ್
ವರ್ಟಿಕಲ್ ಮಶಿನ್ ನಲ್ಲಿ ಸ್ವಯಂಚಾಲಿತ ಟೂಲ್ ಬದಲಾವಣೆಯಾಗಲು Z ಅಕ್ಷ ಮಶಿನ್ ಝೀರೋದ ತನಕ ಹಿಂದೆ ಮಾಡಬೇಕಾಗುತ್ತದೆ. ಪೊಜಿಶನ್ ರಜಿಸ್ಟರ್ ಮೌಲ್ಯ ಪ್ರೊಗ್ರಾಮ್ ಝೀರೊದಿಂದ Z ಅಕ್ಷದಲ್ಲಿರುವ ರೆಫರನ್ಸ್ ಟೂಲ್ ಟಿಪ್ ನತಕ ಅಥವಾ Z ಅಕ್ಷ ಮಶಿನ್ ಝೀರೋ ಇರುವಾಗ ಪಡೆಯಬೇಕಾಗುತ್ತದೆ. ಪ್ರತಿಯೊಂದು ಟೂಲ್ ಗೆ Z ಮೌಲ್ಯ ಬೇರೆಯೇ ಇರುತ್ತದೆ.

dfsetghyjk_1  H 
ಚಿತ್ರ ಕ್ರ. 4
ಉದಾಹರಣೆ
ವರ್ಟಿಕಲ್ ಮಶಿನಿಂಗ್ ಸೆಂಟರ್ ನಲ್ಲಿ ಕಾರ್ಯವಸ್ತು ಪ್ರೊಗ್ರಾಮ್ ನಲ್ಲಿ ಪೋಜಿಶನ್ ರಜಿಸ್ಟರ್ ಕಮಾಂಡ್ ಬಳಸಲು ಈ ಮುಂದಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
1. ಮೊದಲು ಯಂತ್ರಣೆಯ ಟೂಲ್ ಬದಲಾಯಿಸಬೇಕು.
2. ಯಾವುದೇ ಟೂಲ್ ನ ಚಟುವಟಿಕೆಯ ಮುಂಚೆ G92 ಅಳವಡಿಸಿಕೊಳ್ಳಬೇಕು.
3. ಯಂತ್ರಣೆಯ ಕೆಲಸ ಪೂರ್ತಿಯಾದ ನಂತರ ಟೂಲ್ G92 ಪೋಜಿಶನ್ ನಲ್ಲ ಬರಲೇಬೇಕು. ಇದಕ್ಕೋಸ್ಕರ ಪ್ರೊಗ್ರಾಮ್ ಈ ಮುಂದೆ ನೀಡಲಾಗಿದೆ.
 
 
hffhjfccfghfgh_1 &nb
ಚಿತ್ರ ಕ್ರ. 5
02501 (ಪ್ರೊಗ್ರಾಮ್ ನಂಬರ್)
N1 G21 (ಸೆಟ್ ಮೆಟ್ರಿಕ್ ಯುನಿಟ್)
N2 G17 G40 G80 G90 T01 (ಟೂಲ್ 1 ತಯಾರು)
N3 M06 (ಟೂಲ್ ನಂಬರ್ 1 ಸ್ಪಿಂಡಲ್ ನಲ್ಲಿ)
N4 G92 x 15 Y10 Z40 (ಕರಂಟ್ XY ಸೆಟ್)
N5 G00 X5 Y1 S800 M03 (ಪೊಜಿಶನ್ ಅಲುಗಾಡಿಸುವುದು)
N6 Z1 M08 (ಮೂವ್ ಟೂ ಕ್ಲಿಯರ್ ಅಬೋವ್)
N7 G01 Z-0.5 F5.0 (ಫೀಡ್ ಟೂ ಡೆಪ್ಥ್)
N8 X5 Y7 F7.0 (ಕಚ್ಚುಗಳ ಯಂತ್ರಣೆ)
N9 G00 Z40 M09 (ರೇಪಿಡ್ ಟೂ Z ಮಶಿನ್ ಝೀರೋ)
N10 X15 Y10 M05 (ರೇಪಿಡ್ ಟೂ XY ಸೆಟ್ ಪೊಜಿಶನ್)
N11 M01 ಪರ್ಯಾಯದ ಸ್ಟಾಪ್ (ಆಪ್ಶನಲ್ ಸ್ಟಾಪ್) ಟೂಲ್ 1 ಕ್ಕೋಸ್ಕರ
ಸ್ಕಿಪ್ ಕಮಾಂಡ್ (G31)
ಸ್ಕಿಪ್ ಕಮಾಂಡ್ ಮತ್ತು ಬ್ಲಾಕ್ ಸ್ಕಿಪ್ ಕಮಾಂಡ್ ಈ ಎರಡು ವಿವಿಧ ಕಮಾಂಡ್ ಗಳಾಗಿವೆ. ಬ್ಲಾಕ್ ಸ್ಕಿಪ್ ಕಮಾಂಡ್ (\) ಈ ಗುರುತಿನ ಮೂಲಕ ತೋರಿಸಲಾಗುತ್ತದೆ. ಈ ಕಮಾಂಡ್ ಫಸ್ಟ್ ಬ್ಲಾಕ್ ಕ್ಯಾರೆಕ್ಟರ್ ಎಂಬುದಾಗಿದೆ. G31 ಈ ಪ್ರೊಗ್ರಾಮೆಬಲ್ ಮೋಶನ್ ಕಮಾಂಡ್ ಆಗಿದೆ. ಈ ಕಮಾಂಡ್ ನ ಬಳಕೆ ಸಿ.ಎನ್.ಸಿ. ಮಶಿನ್ ನಲ್ಲಿರುವ ಪ್ರೊಬಿಂಗ್ ಡಿವೈಸ್ ಗೋಸ್ಕರ ಇರುತ್ತದೆ. ಹಾಗೆಯೇ ಸ್ವಯಂಚಾಲಿತ ಟೂಲ್ ಗಳ ಉದ್ದದ ಮಾಪನ (ಆಟೊಮ್ಯಾಟಿಕ್ ಟೂಲ್ ಲೆಂಥ್ ಮ್ಯಾನೆಜ್ ಮೆಂಟ್) ಮತ್ತು ಪಾರ್ಟ್ ಅಲೈನ್ ಮೆಂಟ್ ಈ ಅಪ್ಲಿಕೇಶನ್ ಗೋಸ್ಕರವೂ ಈ ಕಮಾಂಡ್ ಬಳಸಲಾಗುತ್ತದೆ.
G31 ಕಮಾಂಡ್ ಇದು G01 ರಂತೆಯೇ ಇರುತ್ತದೆ. ಲೀನಿಯರ್ ಇಂಟರ್ ಪೋಲೇಶನ್, ಆರ್ಕ್ ಗೋಸ್ಕರ ಈ ಕಮಾಂಡ್ ಬಳಸಲಾಗುವುದಿಲ್ಲ. ಇದರೊಂದಿಗೆ ಯಾವಾಗಲೂ ಯಂತ್ರಣೆಗೂ ಅದನ್ನು ಬಳಸಲಾಗುವುದಿಲ್ಲ. ಈ ಕಮಾಂಡ್ G40 ಕಟರ್ ತ್ರಿಜ್ಯ ಕ್ಯಾನ್ಸಲ್ ಮೋಡ್ ನಲ್ಲಿಯೇ ಬಳಸಬೇಕಾಗುತ್ತದೆ.
G31 ಸ್ಕಿಪ್ ಫಂಕ್ಷನ್
G31 ಪ್ರೊಗ್ರಾಮ್ ಪಾರ್ಮೆಟ್
G31 X (U)…Z (W)…P…F…
X, Z – G90 ಅಬ್ ಸಲ್ಯುಟ್ ಕಮಾಂಡ್ ನಲ್ಲಿ ಎಂಡ್ ಪಾಯಿಂಟ್ ಕೋಆರ್ಡಿನೆಟ್
G91 ಇನ್ಕ್ರಿಮೆಂಟಲ್ ಕಮಾಂಡ್ ನಲ್ಲಿ ಎಂಡ್ ಪಾಯಿಂಟ್ ಕೋಆರ್ಡಿನೇಟ್
P- P1 ರಿಂದ P4 ನಿರ್ಧರಿಸಿರುವ ಸ್ಕಿಪ್ ಸಿಗ್ನಲ್ ಸೋರ್ಸ್. ಒಂದು ವೇಳೆ P ನಿರ್ಧರಿಸಿದಿದ್ದರೆ ಮೊದಲೇ ನಿರ್ಧರಿಸಿದ P1 ಮೌಲ್ಯ ಪಡೆಯಲಾಗುತ್ತದೆ.
F- G31 ಬ್ಲಾಕ್ ನಲ್ಲಿ ಫೀಡ್ ರೇಟ್
ಕೆಲಸ
G31 ಈ ಕಮಾಂಡ್ G01 ನಂತೆಯೇ ಕೆಲಸ ನಿರ್ವಹಿಸುತ್ತದೆ. ಆದರೆ ಒಂದು ವೇಳೆ ಕೆಲಸ ನಿರ್ವಹಿಸುತ್ತಿರುವಾಗ ಸ್ಕಿಪ್ ಸಿಗ್ನಲ್ ಬಂದಲ್ಲಿ ಆ ಬ್ಲಾಕ್ ನ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಮತ್ತು ಪ್ರೊಗ್ರಾಮ್ ಮುಂದಿನ ಬ್ಲಾಕ್ ಕಡೆಗೆ ಹೋಗುತ್ತದೆ.
ಸ್ಕಿಪ್ ಸಿಗ್ನಲ್ ಟ್ರಿಗರ್ ಆದನಂತರ, ಸಿಸ್ಟಮ್ ಬ್ರೇಕ್ ಪಾಯಿಂಟ್ ನ ಕೋರ್ಡಿನೇಟರ ಒಟ್ಟು ಮಾಡುತ್ತದೆ.
 
 
ಸತೀಶ ಜೋಶಿ ಇವರು ಸಿ.ಎನ್.ಸಿ. ಮಶಿನಿಂಗ್ ಕ್ಷೇತ್ರದಲ್ಲಿ ತಜ್ಞರಾಗಿದ್ದು ಇದರ ಕುರಿತು ಸಲಹೆಗಾರರೆಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರೆಂದೂ ಸೇವೆಯನ್ನು ನಿರ್ವಹಿಸುತ್ತಿರುವಾಗ ಸಿ.ಎನ್.ಸಿ. ಈ ವಿಷಯದ ಲೇಖನವನ್ನು ಮಾಡಿ ಪುಸ್ತಕವನ್ನು ಪ್ರಕಾಶಿಸಿದ್ದಾರೆ. ಇವರು ಕಂಪ್ಯೂಟರ್ ವಿಷಯದ ಕುರಿತು ಮರಾಠಿ ಮತ್ತು ಆಂಗ್ಲಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. 
8625975219
@@AUTHORINFO_V1@@