ಇಂಡಸ್ಟ್ರಿ 4.0 ಮತ್ತು IoT ಈ ಲೇಖಮಾಲೆಯಲ್ಲಿ ಪ್ರಕಟಿಸಲಾದ ಐದು ಲೇಖನಗಳಲ್ಲಿ ನಾವು ಇಂಡಸ್ಟ್ರಿ 4.0 ಮತ್ತು IoT ಈ ವಿಷಯವನ್ನು ಅರಿತುಕೊಂಡೆವು. ಇವುಗಳ ಅಗತ್ಯವು ಯಾಂತ್ರಿಕ ಉದ್ಯಮಗಳಲ್ಲಿ ಏನಿದೆ ಎಂಬುದನ್ನು ಮತ್ತು ಅದನ್ನು ಕಾರ್ಯಗತಗೊಳಿಸಲು ಉಪಯುಕ್ತವಾಗಿರುವ ಮಾರ್ಗಸೂಚಿಗಳನ್ನು ತಿಳಿದುಕೊಂಡೆವು. ಇನ್ನು ಮುಂದಿನ ಲೇಖನಗಳಲ್ಲಿ ನಾವು ಪ್ರತ್ಯಕ್ಷವಾಗಿ ಉದಾಹರಣೆಗಳೊಂದಿಗೆ ಇಂಡಸ್ಟ್ರಿ 4.0 ಮತ್ತು ಔದ್ಯೋಗಿಕ IoT ಕುರಿತು ಇನ್ನಷ್ಟು ವಿಸ್ತಾರವಾಗಿ ಚರ್ಚಿಸೋಣ. ಈ ಉದಾಹರಣೆಗಳು ಸಾಧ್ಯವಾದಷ್ಟು ಮಟ್ಟಿಗೆ ಭಾರತೀಯ ಕೈಗಾರಿಕೋದ್ಯಮಗಳದ್ದಿರಬೇಕು ಮತ್ತು ಅದರಿಂದಲೂ ಅಲ್ಲಿರುವ ಹೆಚ್ಚಿನ ಇಂತಹ ಲಘು ಮತ್ತು ಮಧ್ಯಮ ಉದ್ಯಮಗಳಿಗೆ ಪ್ರೆರಣೆ ಸಿಗಬೇಕು, ಇದೇ ನಮ್ಮ ಪ್ರಯತ್ನವಾಗಿದೆ.
ಯಾವುದೇ ಒಂದು ಉದ್ಯಮದಲ್ಲಿ IoT ಯನ್ನು ಎರಡು ಹಂತಗಳಲ್ಲಿ ಉಪಯೋಗಿಸಲಾಗುತ್ತದೆ. ಇದರಲ್ಲಿ ಮೊದಲಾಗಿ ಉತ್ಪಾದಿತ ವಸ್ತುಗಳನ್ನು ಅತ್ಯಾಧುನಿಕವಾಗಿ ಮಾಡುವಲ್ಲಿ (ಸ್ಮಾರ್ಟ್ ಪ್ರಾಡಕ್ಟ್) ಮತ್ತು ಎರಡನೆಯದಾಗಿ ಉತ್ಪಾದನೆಪ್ರಕ್ರಿಯೆ ಹೆಚ್ಚು ಲಾಭಕಾರಿಯಾಗಿ ಮಾಡಲು (ಸ್ಮಾರ್ಟ್ ಪ್ರಾಡಕ್ಷನ್). ಈ ಲೇಖನದ್ಲಿ ನಾವು ಸ್ಮಾರ್ಟ್ ಪ್ರಾಡಕ್ಟ್ ನ ಎರಡು ಉದಾಹರಣೆಗಳನ್ನು ನೋಡಲಿದ್ದೇವೆ.
ಉತ್ಪಾದಿತ ವಸ್ತುಗಳಿಗೆ IoT (ಅಂದರೆ ಸ್ಮಾರ್ಟ್ ಪ್ರಾಡಕ್ಟ್)
ಇಂಡಸ್ಟ್ರಿ 4.0 ಗೆ ಅನುಸಾರವಾಗಿ ಸ್ಮಾರ್ಟ್ ಪ್ರಾಡಕ್ಟ್ ಗೋಸ್ಕರ ಸೂಚಿಸಿರುವ 6 ಮಾರ್ಗಸೂಚಿ ತತ್ವಗಳನ್ನು ವಿಸ್ತಾರವಾಗಿ ನೋಡೋಣ.
1. ಸೆನ್ಸರ್ ಎಕ್ಚುಯೇಟರ್ ನ ಸೇರ್ಪಡೆ.
2. ಸಂದೇಶದ ಸಾಗಾಟ ಮತ್ತು ಸಂಪರ್ಕದ ಕ್ಷಮತೆ.
3. ಮಾಹಿತಿಯ ವಿನಿಮಯ ಮತ್ತು ಶೇಖರಣೆ.
4. ನಿರೀಕ್ಷಣೆ- ಪರಿಹಾರ- ಅಂದಾಜು ಇವುಗಳ ಕ್ಷಮತೆ.
5. ಪೂರಕ ಮಾಹಿತಿಗೆ ಆಧರಿಸಿರುವ ಸೇವೆಗಳು.
6. ಅನೇಕ ವಿಧದ ವ್ಯವಸಾಯದ ಯೋಜನೆಗಳು.
ಚಿತ್ರ ಕ್ರ. 1 : ಕಿರ್ಲೋಸ್ಕರ್ IoT ಜನ್ ಸೆಟ್ ಮತ್ತು ಅದರ ಸಿಸ್ಟಮ್
ಸುಲಭವಾಗಿ ವ್ಯಾಖ್ಯೆಯನ್ನು ಮಾಡುವುದಾದಲ್ಲಿ ಈ ತತ್ವಗಳಿಗೆ ಅನುಸಾರವಾಗಿ ಯಾವುದೇ ಒಂದು ಉತ್ಪಾದನೆ (ಪ್ರಾಡಕ್ಟ್) IoT ತಂತ್ರಕ್ಕೆ ಅನುಸಾರವಾಗಿ ಆತ್ಯಾಧುನಿಕವಾಗಿ ಮಾಡುವುದು.
1. ಮೊದಲಾಗಿ ಅದನ್ನು ಸ್ಮಾರ್ಟ್ ಮಾಡುವುದು.
2. ಅದರ ನಂತರ ಅದನ್ನು ಹೊರ ಜಗತ್ತಿನೊಂದಿಗೆ ಜೋಡಿಸುವುದು.
3. ಅದರಿಂದ ತಯಾರಾಗುವ ಮಾಹಿತಿಯನ್ನು ಪರಿಶೀಲಿಸಿ ಅದನ್ನು ಪ್ರಭಾವಶಾಲಿಯಾಗಿ ಮಾಡುವುದು.
4. ಈ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ವ್ಯವಸಾಯವನ್ನು ಮಾಡುವ ಹೊಸ ಹೊಸ ಪರ್ಯಾಯಗಳನ್ನು ಕಾರ್ಯಗತಗೊಳಿಸುವುದು.
ಈ ನಾಲ್ಕು ಹಂತಗಳು ಕಿರ್ಲೋಸ್ಕರ ಮತ್ತು ಮಹಿಂದ್ರಾ ಈ ಭಾರತೀಯ ಉದ್ಯಮಿಗಳು ತಂತಮ್ಮ ಉತ್ಪಾದನೆಗಳಲ್ಲಿ ಹೇಗೆ ಅಳವಡಿಸಿದ್ದಾರೆ, ಎಂಬುದನ್ನು ನಾವು ತಿಳಿದುಕೊಳ್ಳೋಣ. ಇದರಲ್ಲಿ ಒಂದು ಉತ್ಪಾದನೆಯು ಸ್ಥಿರವಾದ ಔದ್ಯೋಗಿಕ ಮಶಿನ್ ಸ್ವರೂಪದ್ದಾಗಿದೆ. ಇನ್ನೊಂದು ಸಂಪರ್ಕವನ್ನು (ಕಂಮ್ಯುನಿಕೇಶನ್) ನೀಡಬಲ್ಲ ಅನೇಕ ಸಾಗಾಣಿಕೆಯ ವಿಧದಲ್ಲಿವೆ.
ಕಿರ್ಲೋಸ್ಕರ್ ನ IoT ಜನ್ ಸೆಟ್
ಕಿರ್ಲೋಸ್ಕರ್ ಉದ್ಯಮ ಸಮೂಹದ ಆಯಿಲ್ ಇಂಜಿನ್ ವಿಭಾಗದ (KOEL) ವಿದ್ಯುತ್ ಜನರೇಟರ್ ಸೆಟ್ ಈ ಉತ್ಪಾದನೆಯು ಭಾರತದಲ್ಲಿ ಕಳೆದ ಅನೇಕ ವರ್ಷಗಳಿಂದ ಮತ್ತು ಇನ್ನಿತರ ದೇಶಗಳಲ್ಲಿಯೂ ಬಳಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಜನ್ ಸೆಟ್ ಗಳ ಪರ್ಯಾಯಗಳಲ್ಲಿ ಇದೊಂದಾಗಿದೆ. ಡಿಸೆಲ್ ಇಂಜಿನ್ ನ ಸಹಾಯದಿಂದ ನಡೆಸಬಲ್ಲ ಜನರೇಟರ್ ಮತ್ತು ಅದರಿಂದ ನಿರ್ಮಿಸಲಾಗುವ ವಿದ್ಯುತ್ತಿನ ನಿಯಂತ್ರಣೆಯಗೋಸ್ಕರ ಆತ್ಯಾವಶ್ಯಕವಾದ ಯಂತ್ರಣೆಯಾಗಿದೆ. ಇದು ಕಳೆದ ಹಲವಾರು ವರ್ಷಗಳಿಂದ ಜನ್ ಸೆಟ್ ಸ್ಪರೂಪದಲ್ಲಿದೆ. ಇದರಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೆನ್ಸರ್ ಮತ್ತು ಸಂದೇಶದ ಸಾಗಾಟದ ಯಂತ್ರಣೆಯನ್ನು ಸೇರ್ಪಡಿಸಿ ಅವರು ಕಿರ್ಲೋಸ್ಕರ್ ರಿಮೋಟ್ ಮಾನಿಟರಿಂಗ್ (KRM) ಅಂದರೆ ದೂರದಿಂದಲೇ ಪರಿಶೀಲನೆಯ ಪ್ರಣಾಳಿಕೆಯನ್ನು ಅಭಿವೃದ್ಧಿ ಮಾಡಿದ್ದಾರೆ. ಮೇಲೆ ತಿಳಿಸಿರುವ ನಾಲ್ಕು ಹಂತಗಳಿಗೆ ಸಂಬಂಧಪಟ್ಟ ಈ IoT ಜನ್ ಸೆಟ್ ಮಾಹಿತಿಯನ್ನು ಅರಿತುಕೊಳ್ಳೋಣ.
1. ಸ್ಮಾರ್ಟ್ ಜನ್ ಸೆಟ್
ಜನ್ ಸೆಟ್ ನ್ನು ಯೋಗ್ಯವಾದ ರೀತಿಯಲ್ಲಿ ನಿಯಂತ್ರಿಸಲು ಸೆನ್ಸರ್ ಗಳು ಹಿಂದಿನಿಂದಲೂ ಲಭ್ಯವಿದ್ದವು. ಅದರಲ್ಲಿ ತಯಾರಾಗುವ ವಿದ್ಯುತ್ತಿನ ರಿಪಿಟ್ಯಾಬಿಲಿಟಿ (ಫ್ರಿಕ್ವೆನ್ಸಿ Hz ನಲ್ಲಿ), ಪವರ್ (ವೋಲ್ಟೇಜ್ V ಮತ್ತು ಕರಂಟ್ A ಯಲ್ಲಿ), ಪವರ್ ಫ್ಯಾಕ್ಟರ್ (PF), ಇಂಜಿನ್ ನ ವೇಗ (RPM) ಇವುಗಳು ಪ್ರಮುಖವಾಗಿ ಒಳಗೊಂಡಿದ್ದವು. ಜನ್ ಸೆಟ್ ನ್ನು ಇನ್ನಷ್ಟು ಸ್ಮಾರ್ಟ್ ಮಾಡುವಲ್ಲಿ ಮತ್ತು ಅದನ್ನು ದೂರದಿಂದಲೇ ದುರಸ್ತಿ ಮಾಡಿ ಪರಿಶೀಲಿಸುವುದು ಸಾಧ್ಯವಾಗಲು ಇದಕ್ಕೋಸ್ಕರ ಅದರಲ್ಲಿ ಇನ್ನಷ್ಟು ಸೆನ್ಸರ್ ಗಳನ್ನು ಬಳಸಲಾಯಿತು. ಜನ್ ಸೆಟ್ ನಲ್ಲಿರುವ ಇಂಧನ ಸಂಗ್ರಹಣೆ, ಇಂಜಿನ್ ನಲ್ಲಿರುವ ಆಯಿಲ್ ನ ಉಷ್ಣಾಂಶ ಮತ್ತು ಒತ್ತಡ (ಪ್ರೆಶರ್), ಜನ್ ಸೆಟ್ ನ ಪ್ರಮುಖ ಬಾಗಿಲಿನ ಸ್ಥಿತಿ (ಆನ್/ ಆಫ್), ಜನ್ ಸೆಟ್ (ಆನ್/ಆಫ್) ಇರುವುದರ ಕುರಿತಾದ ನೊಂದಣಿ, ಈ ರೀತಿಯ ಹಲವಾರು ಮಹತ್ವದ ಅಂಶಗಳ ನೊಂದಾಣಿಕೆಯನ್ನು ಈ ಸೆನ್ಸರ್ ಮಾಡಲಾರಂಭಿಸಿತು. ಇದರಿಂದಾಗಿ ಜನ್ ಸೆಟ್ ನಿಜವಾಗಿಯೂ ಸ್ಮಾರ್ಟ್ ಆಯಿತು ಮತ್ತು ಪ್ರತಿ ಕ್ಷಣಕ್ಕೂ ಬೇಕಾಗಿರುವ ಉಪಯುಕ್ತವಾದ ಮಾಹಿತಿಯನ್ನು ನೀಡುವಲ್ಲಿ ಸಕ್ಷಮವಾಯಿತು.
2. ಸ್ಮಾರ್ಟ್ ಮತ್ತು ಕನೆಕ್ಟೆಡ್ ಜನ್ ಸೆಟ್
IoT ಯಲ್ಲಿ ಮುಂದಿನ ಹಂತವೆಂದರೆ ಸ್ಮಾರ್ಟ್ ಉತ್ಪಾದನೆಗಳನ್ನು ಹೊರ ಜಗತ್ತಿನೊಂದಿಗೆ ಜೋಡಿಸುವುದು. ಕಿರ್ಲೋಸ್ಕರ್ ಸ್ಮಾರ್ಟ್ ಜನ್ ಸೆಟ್ ಹೊರ ಜಗತ್ತಿನೊಂದಿಗೆ ಜೋಡಿಸಲು ಅದರಲ್ಲಿ GSM ಇಥರ್ ನೆಟ್ ನ ಮಾಧ್ಯಮದಿಂದ ಸಂದೇಶದ ಸಾಗಾಣಿಕೆಯನ್ನು ಮಾಡಬಲ್ಲ ಯಂತ್ರಣೆಯನ್ನು ಅಳವಡಿಸಲಾಗಿದೆ. ತಾಂತ್ರಿಕ ಭಾಷೆಯಲ್ಲಿ ಅದನ್ನು IOT ಗೇಟ್ ವೇ ಎಂಬುದಾಗಿ ಕರೆಯುತ್ತಾರೆ. ಈ ಗೇಟ್ ವೆ ಜನ್ ಸೆಟ್ ನಲ್ಲಿರುವ ವಿವಿಧ ಸಂದೇಶಗಳಿಂದ ಲಭಿಸಿರುವ ಮಾಹಿತಿಯನ್ನು ಒಟ್ಟು ಮಾಡಿ ನಿಗದಿತ ಕಾಲಾವಧಿಯ ನಂತರ ಕಿರ್ಲೋಸ್ಕರ್ ಕಂಪನಿಯ ಪ್ರಮುಖ ಸರ್ವರ್ ಗೆ ಕಳುಹಿಸುತ್ತದೆ. ಹಾಗೆಯೇ ಸರ್ವರ್ ನಿಂದ ಕಳಿಸಲಾಗುವ ಯಾವುದೇ ರೀತಿಯ ಸೂಚನೆಯನ್ನು ಜನ್ ಸೆಟ್ ನಲ್ಲಿರುವ ಯೋಗ್ಯ ಭಾಗಕ್ಕೆ ಪೂರೈಸುತ್ತದೆ. ಜನ್ ಸೆಟ್ ಸರ್ವರ್ ನೊಂದಿಗೆ ಜೋಡಿಸಲ್ಪಟ್ಟಂತೆ, ಅದರ ಬಳಕೆಗಾರರು ಮತ್ತು ಕಿರ್ಲೋಸ್ಕರ್ ತಂತ್ರಜ್ಞರೂ ತಮ್ಮ ಮೊಬೈಲ್ ನಲ್ಲಿರುವ ಅಪ್ ನ ಮಾಧ್ಯಮದಿಂದ ಮುಖ್ಯ ಸರ್ವರ್ ಗೆ ಜೋಡಿಸಲ್ಪಟ್ಟಿರುತ್ತಾರೆ. ಚುಟುಕಾಗಿ ಹೇಳುವುದಾದರೆ ಜನ್ ಸೆಟ್ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲ ವ್ಯಕ್ತಿಗಳೂ, ಸಂಸ್ಥೆಗಳೂ ಇಂಟರ್ ನೆಟ್ ನ ಮಾಧ್ಯಮದಿಂದ ಜೋಡಿಸಲ್ಪಟ್ಟಿವೆ.
3. ಕನೆಕ್ಟೆಡ್ ಜನ್ ಸೆಟ್ ನ ಕುರಿತಾದ ಉಪಯುಕ್ತ ಮಾಹಿತಿ
IoT ಗೇಟ್ ವೆ ಮತ್ತು ಮೊಬೈಲ್ ಅಪ್ ನ ಮಾಧ್ಯಮದಿಂದ ಜನ್ ಸೆಟ್, ಅದರ ಗ್ರಾಹಕರು, ಕಿರ್ಲೋಸ್ಕರ್ ನ ಮುಖ್ಯ ಸರ್ವರ್ ಮತ್ತು ಕಂಪನಿಯ ತಂತ್ರಜ್ಞರು ಸೇರಿದಂತೆ ಎಲ್ಲರೂ ಒಂದು ವಿಸ್ತಾರವಾಗಿರುವ ನೆಟ್ ವರ್ಕ್ ನ ಭಾಗವಾಗಿದ್ದಾರೆ. (ಚಿತ್ರ ಕ್ರ. 1). ಇದರಿಂದಾಗಿ ಜನ್ ಸೆಟ್ ಕುರಿತಾದ ಸಂಪೂರ್ಣವಾದ ಮಾಹಿತಿಯು ಕ್ಷಣಮಾತ್ರದಲ್ಲಿ ಸರ್ವರ್ ಗೆ ಮತ್ತು ಎಲ್ಲ ಮೊಬೈಲ್ ಅಫ್ ಬಳಸುವವರಿಗೆ ಲಭ್ಯವಾಗುತ್ತದೆ. ಇದರಿಂದಾಗಿ ಜನ್ ಸೆಟ್ ನ್ನು ದೂರದಿಂದಲೇ ಪರಿಶೀಲಿಸುವುದು ಸಾಧ್ಯವಾಗಿದೆ. ಜನ್ ಸೆಟ್ ಎಷ್ಟು ಗಂಟೆಗಳ ಕಾಲ ಬಳಸಲಾಗಿದೆ, ಅದರಿಂದ ನಿರ್ಮಾಣಗೊಂಡಿರುವ ವಿದ್ಯುತ್, ಜನ್ ಸೆಟ್ ನಲ್ಲಿರುವ ಇಂಧನ, ಆಯಿಲ್ ಇವುಗಳ ಸ್ಥಿತಿ, ಮುಂತಾದ ಎಲ್ಲ ರೀತಿಯ ಅತ್ಯುಪಯುಕ್ತವಾದ ಮಾಹಿತಿಯ ರಿಪೋರ್ಟಿಂಗ್ ಈಗ ನಿರಂತರವಾಗಿ ಆಗಬಲ್ಲದು. ಸಂಭವಿಸಿರುವ ಮತ್ತು ಮುಂದೆ ಆಗಬಲ್ಲಯಾವುದೇ ಮಹತ್ವದ ಘಟನೆಗಳ ಕುರಿತಾದ ಸೂಚನೆ (ಅಲರ್ಟ್) ಸಿಗುತ್ತದೆ. ಉದಾಹರಣೆ, ಇಂಧನದ ಹಂತವು ಕಡಿಮೆಯಾಗುತ್ತಿರುವುದು, ಆಯಿಲ್ ನಲ್ಲಿ ಹೆಚ್ಚಾಗುತ್ತಿರುವ ಉಷ್ಣಾಂಶ, ಜನ್ ಸೆಟ್ ನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಾಗುವ ಕಂಪನಗಳು ಅಥವಾ ಜನ್ ಸೆಟ್ ನಲ್ಲಿ ಯಾರೂ ವಿನಾಕಾರಣವಾಗಿ ನುಗ್ಗುವುದು ಅಥವಾ ಹಸ್ತಕ್ಷೇಪ ಮಾಡುವುದು ಇಂತಹ ಅನೇಕ ಮಹತ್ವದ ಘಟನೆಗಳ ಸೂಚನೆಯನ್ನು ಸೂಕ್ತ ಸಮಯದಲ್ಲಿ ನೊಂದಾಯಿಸಲಾಗುತ್ತದೆ. ಇಷ್ಟೇ ಅಲ್ಲದೇ ವಿದ್ಯುತ್ ಪ್ರವಾಹವು ನಿಂತು ಹೊದಲ್ಲಿ ತಕ್ಷಣ ಜನ್ ಸೆಟ್ ಪ್ರಾರಂಭಗೊಂಡು ಬೇಡಿಕೆಗೆ ಅನುಸಾರವಾಗಿ ವಿದ್ಯುತ್ ಲೋಡ್ ಪೂರೈಸುವ ಯಂತ್ರಣೆಯೂ ಸ್ವಯಂಚಾಲಿತವಾಗಿ ಆಗುತ್ತದೆ.
4. ವ್ಯಾವಸಾಯಿಕ ಪರಿಣಾಮ
IoT ಇದು ಪರಿಪೂರ್ಣವಾಗಿ ಮಾಡಿರುವ ಈ ಜನ್ ಸೆಟ್ ನಿಂದಾಗಿ ಕಿರ್ಲೋಸ್ಕರ್ ನ ಜನ್ ಸೆಟ್ ವ್ಯವಸಾಯದಲ್ಲಿ ಅನೇಕ ಹೊಸ ಅವಕಾಶಗಳು ನಿರ್ಮಾಣವಾಗಿವೆ. ಜನ್ ಸೆಟ್ ನ ಉಸ್ತುವಾರಿ ಮಾಡುವುದು ಹೆಚ್ಚು ಸುಲಭ ಮತ್ತು ಕಾರ್ಯಕ್ಷಮವಾಗಿದೆ. ಉಂಟಾಗಿರುವ ಮತ್ತು ಉದ್ಭವಿಸಲಿರುವ ತೊಡಕುಗಳ ಕುರಿತು ಸಾಕಷ್ಟು ಪ್ರಮಾಣದಲ್ಲಿ ಪೂರ್ವಭಾವಿಯಾಗಿ ಕಲ್ಪನೆಯು ಸೂಕ್ತ ಸಮಯದಲ್ಲಿ ಸಿಗುತ್ತಿರುವುದರಿಂದ ದೋಷಗಳನ್ನು ಹುಡುಕುವುದು ಮತ್ತು ದುರಸ್ತಿಯನ್ನು ಮಾಡುವುದು ಸುಲಭವಾಯಿತು. ಜನ್ ಸೆಟ್ ನ ಬಳಕೆಯು ಹೇಗೆ ಆಗುತ್ತದೆ ಎಂಬುದರ ಕುರಿತು ಅಭ್ಯಾಸ ಮಾಡುವುದು ಸಾಧ್ಯವಾಗಿದ್ದಲ್ಲಿ ಅದರ ವಾರಂಟಿ ಕುರಿತಾದ ಪ್ರಶ್ನೆಗಳನ್ನು ನಿರ್ವಹಿಸುವ ಕೆಲಸವು ಕಂಪನಿಯ ನಿಟ್ಟಿನಲ್ಲಿ ಸುಲಭವಾಗಿದೆ. ಇದರಿಂದ ಕಂಪನಿಯ ಖರ್ಚು ಬೃಹತ್ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅಲ್ಲದೇ ಗ್ರಾಹಕರೊಂದಿಗೆ ಪ್ರಭಾವಶಾಲಿಯಾಗಿ ಸಂಪರ್ಕವನ್ನು ಮಾಡುವುದೂ ಸಾಧ್ಯ. ಒಟ್ಟಾರೆ ಜನ್ ಸೆಟ್ ಇದು ಕೇವಲ ಮಾರಾಟಕ್ಕೆ ಯೋಗ್ಯವಾದ ವಸ್ತುವಾಗಿರದೇ, ಅದು ಗ್ರಾಹಕರಿಗೆ ನಿರಂತರವಾದ ಮತ್ತು ಕಾರ್ಯಕ್ಷಮತೆಯುಳ್ಳ ವಿದ್ಯುತ್ ಸರಬರಾಜನ್ನು ಮಾಡುವ ಸೇವೆಯಾಗಿದೆ. ಈ ಸೇವೆಯನ್ನು ಕೇಂದ್ರೀಕರಿಸಿ ವ್ಯವಸಾಯದ ರೂಪರೇಖೆಯನ್ನು ಬಳಕೆಗಾರರಾದ ಗ್ರಾಹಕರು, ಮಾರಾಟದ ನಂತರದ ಸೇವೆಯನ್ನು ಪೂರೈಸಬಲ್ಲ ಸೇವಾ ಪೂರೈಕೆದಾರರು, ಹಾಗೆಯೇ ಜನ್ ಸೆಟ್ ನಿರ್ಮಾಪಕರಾದ ಕಿರ್ಲೋಸ್ಕರ್ ಇವರೊಂದಿಗೆ ಎಲ್ಲರಿಗೂ ಲಾಭಕಾರಿಯಾಗಿದೆ.
ಮಹಿಂದ್ರಾ ನೋವೋ ಟ್ರ್ಯಾಕ್ಟರ್ ಮತ್ತು ಡಿಜಿಸೆನ್ಸ್
ಟ್ರ್ಯಾಕ್ಟರ್ ಮತ್ತು ಕೃಷಿಗೆ ಸಂಬಂಧಪಟ್ಟ ಯಂತ್ರಗಳಲ್ಲಿ ಮಹಿಂದ್ರಾ ಕೇವಲ ಭಾರತದಲ್ಲಿಯೇ ಅಲ್ಲದೇ ಜಗತ್ತಿನೆಲ್ಲೆಡೆ ಮುಂಚೂಣಿಯಲ್ಲಿರುವ ಹೆಸರಾಂತ ಕಂಪನಿಯಾಗಿದೆ. ಭಾರತದಲ್ಲಿ ಕೃಷಿ ಕ್ಷೇತ್ರದ ವಿಚಾರ ಮಾಡಿದಲ್ಲಿ ಚಿಕ್ಕ ಹಿಡುವಳಿದಾರರಾದ ಕೃಷಿಕರು, ಕಡಿಮೆ ಉತ್ಪಾದನೆಯ ಸಾಮರ್ಥ್ಯ, ರೈತರಿಗೆ ಕಡಿಮೆ ಖರೀದಿಯ ಕ್ಷಮತೆ ಮತ್ತು ಸ್ವಲ್ಪ ಪ್ರಮಾಣದಲ್ಲಿ ಅನಿರ್ದಿಷ್ಟವಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿ ಈ ಘಟಕಗಳಿಂದಾಗಿ ಭಾರತೀಯ ಕೃಷಿ ಕ್ಷೇತ್ರಕ್ಕೆ ತುಂಬಾ ಕಡಿಮೆ ಬೆಲೆಯಲ್ಲಿ, ಗರಿಷ್ಠ ಪ್ರಮಾಣದ ಸೌಲಭ್ಯಗಳಿರುವ ಟ್ರ್ಯಾಕ್ಟರ್ ಗಳನ್ನು ನಿರ್ಮಿಸುವುದು ಆವಶ್ಯಕವಾಗಿತ್ತು. ಇಂತಹ ಕಠಿಣ ಸವಾಲುಗಳನ್ನು ಮಹಿಂದ್ರಾ, ಟಾಫೆ, ಎಸ್ಕಾರ್ಟ್, ಸೋನಾಲಿಕಾ ಇಂತಹ ಭಾರತೀಯ ಕಂಪನಿಗಳು ಕಳೆದ ಅನೇಕ ವರ್ಷಗಳಲ್ಲಿ ಹೊಸ ಹೊಸ ತಂತ್ರಜ್ಞಾನದಿಂದ ಕೂಡಿರುವ ಟ್ರ್ಯಾಕ್ಟರ್ ಗಳ ನಿರ್ಮಾಣವನ್ನು ಮಾಡಿ ಗ್ರಾಹಕರಿಗೆ ನೀಡಿದೆ. ಆದರೂ ಕೂಡಾ ಇದರಲ್ಲಿ ಮಹಿಂದ್ರಾ ಇವರ ಡಿಜಿಸೆನ್ಸ್ ಎಂಬ ಹೆಸರಿನ ಟೆಲಿಮೇಟಿಕ್ಸ್ ಸೌಲಭ್ಯ ಮತ್ತು ‘ನೋವೋ’ ಟ್ರ್ಯಾಕ್ಟರ್ ಮಾಡೆಲ್ ನಲ್ಲಿ ಯಶಸ್ವಿಯಾಗಿ ಬಳಸಲಾಗುತ್ತಿದೆ.
ಚಿತ್ರ ಕ್ರ. 2 : ಮಹಿಂದ್ರಾ ನೋವೋ ಟ್ರ್ಯಾಕ್ಟರ್, ಡಿಜಿಸೆನ್ಸ್ ಮತ್ತು ಅವರ ಸಿಸ್ಟಮ್
ಟೆಲಿಮೇಟಿಕ್ಸ್ IoT ಯ ತಂತ್ರಜ್ಞಾನವು ಉತ್ಪಾದನೆಯಲ್ಲಿರುವ ಉದ್ಯಮಗಳಂತೆಯೇ ಸಾಗಾಣಿಕೆ, ಪೂರೈಕೆಯ ಚೈನ್ (ಸರಪಳಿ), ಆರೋಗ್ಯ, ಆಡಳಿತ, ದಿನನಿತ್ಯ ಬಳಸಲಾಗುತ್ತಿರುವ ವಸ್ತುಗಳು ಇಂತಹ ಅನೇಕ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ, ಎಂಬುದು ನಮ್ಮ ಗಮನಕ್ಕೆ ಬರುತ್ತಿದೆ. ಇದರಲ್ಲಿ ಈ ತಂತ್ರವನ್ನು ವಾಹನಗಳಲ್ಲಿ ಬಳಸಲಾಗುತ್ತಿರುವಾಗ ಅದಕ್ಕೆ ಟೆಲಿಮೆಟಿಕ್ಸ್ ಎಂಬುದಾಗಿ ಕರೆಯಲಾಗುತ್ತದೆ. ಕಾರ್, ಬಸ್, ಟ್ರಕ್, ಟ್ರ್ಯಾಕ್ಟರ್, ಬುಲ್ ಡೋಝರ್ ನಂತಹ ಹೆವಿ ವಾಹನಗಳು, ರೈಲ್ವೆ, ಹಡಗು ಮುಂತಾದ ಅನೇಕ ವಿಧದ ವಾಹನಗಳಲ್ಲಿ ಮಹತ್ವದ ಎಲ್ಲ ಘಟಕಗಳಿಗೋಸ್ಕರ ಸೆನ್ಸರ್ ಗಳನ್ನು ಅಳವಡಿಸುವುದು, ಅದರಿಂದ ನಿರ್ಮಾಣವಾಗುವ ಮಾಹಿತಿಯನ್ನು ದೂರದಲ್ಲಿರುವ ಸರ್ವರ್ ಗೆ ಕಳುಹಿಸುವುದು ಮತ್ತು ಇದರಿಂದಾಗಿ ಅದನ್ನು ವಾಹನಗಳು, ಇಂಟರ್ ನೆಟ್ ನೊಂದಿಗೆ ಮತ್ತು ಅನೇಕ ವಿಧದ ಗ್ರಾಹಕರೊಂದಿಗೆ ಸಂಪರ್ಕವನ್ನು ಕಲ್ಪಿಸುವುದು ಇದೇ ಈ ಟೆಲಿಮೇಟಿಕ್ಸ್ ನಲ್ಲಿ ಅಪೇಕ್ಷಿಸಲಾಗಿದೆ. ಇದರಿಂದ ಆಯಾ ವಾಹನಗಳ ಸ್ಥಿತಿ ಮತ್ತು ಸ್ಥಾನ ಇವುಗಳ ಮೇಲೆ ದೂರದಿಂದಲೇ ನಿಗಾ ವಹಿಸುವುದು ಸಾಧ್ಯವಾಗುತ್ತದೆ. ಯಾವುದೇ ವಾಹನದ ಸಂಪರ್ಕವು ಇನ್ನಿತರ ವಾಹನಗಳೊಂದಿಗೆ, ಯಂತ್ರಗಳೊಂದಿಗೆ ಅಥವಾ ವ್ಯಕ್ತಿಗಳೊಂದಿಗೆ ನೇರವಾಗಿ ಆಗುವುದು ಸಾಧ್ಯವಾಗುತ್ತದೆ ಮತ್ತು ಇದರಿಂದ ಹೊಸ ಹೊಸ ಸೌಲಭ್ಯಗಳು ಉಪಲಬ್ಧವಾಗುತ್ತವೆ.
ಯಾವುದೇ ರೀತಿಯ ದುಬಾರಿಯಾದ ಕಾರ್ ಗಳಲ್ಲಿ ಇದನ್ನು ಸಹಜವಾಗಿ ಅಳವಡಿಸಲಾಗುತ್ತದೆ, ಎಂಬುದು ನಮಗೆ ತಿಳಿದಿರುವ ಅಂಶವಾಗಿದೆ. ಆದರೆ ಇಂತಹ ಸೌಲಭ್ಯವನ್ನು ಟ್ರ್ಯಾಕ್ಟರ್ ನಂತಹ ಕಡಿಮೆ ಬೆಲೆಯ ಮತ್ತು ಅನೇಕ ವಿಧದ ಕಾರಣಗಳಿಗೋಸ್ಕರ ಬಳಸಲಾಗುವ ವಾಹನಗಳಲ್ಲಿ ಅಳವಡಿಸುವುದು ಸವಾಲುಗಳುಳ್ಳದ್ದಾಗಿದೆ ಮತ್ತು ಅದಕ್ಕೋಸ್ಕರವೇ ಇದು ಮಹತ್ತರವಾದ ಅಂಶವಾಗಿದೆ. ಮುಂದಿನ 4 ಅಂಶಗಳಿಂದ ಮಹಿಂದ್ರಾ ಇವರ ‘ನೋವೋ’ ಟ್ರ್ಯಾಕ್ಟರ್ ನಲ್ಲಿರುವ IoT/ ಟೆಲಿಮೆಟಿಕ್ ಯಂತ್ರಣೆಯ ಸಮೀಕ್ಷೆಯನ್ನು ಮಾಡೋಣ.
ಕೋಷ್ಟಕ ಕ್ರ. 1 : ಕಿರ್ಲೋಸ್ಕರ್ IoT ಜನ್ ಸೆಟ್ :
ಮಾರ್ಗಸೂಚಿಗಳ ತತ್ವಗಳಿಗೆ ಅನುಸಾರವಾಗಿ ಮೌಲ್ಯಮಾಪನ
1. ಟ್ರ್ಯಾಕ್ಟರ್ ನಿಂದ ಸ್ಮಾರ್ಟ್ ಟ್ರ್ಯಾಕ್ಟರ್
ಹೆಚ್ಚಿನ ಭಾರತೀಯ ಟ್ರ್ಯಾಕ್ಟರ್ ಗಳು ಪರಿಪೂರ್ಣವಾಗಿ ಯಾಂತ್ರಿಕ, ಅಂದರೆ ಯಾವುದೇ ಸೆನ್ಸರ್ ಅಥವಾ ಮೈಕ್ರೋ ಪ್ರೊಸೆಸರ್/ ನಿಯಂತ್ರಕಗಳು ಅಳವಡಿಕೆ ಇಲ್ಲದಿರುವುದಾಗಿರುತ್ತದೆ. ‘ನೋವೋ’ ಟ್ರ್ಯಾಕ್ಟರ್ ನಲ್ಲಿ ಸುಮಾರು 10 ರಿಂದ 15 ಹೊಸ ಸೆನ್ಸರ್ ಬಳಸಲಾಗಿವೆ. ಇಂಜಿನ್ ನ ವೇಗ, ಆಯಿಲ್ ನ ಉಷ್ಣಾಂಶ ಮತ್ತು ಹಂತ, ಇಂಧನದ ಹಂತ, ಗಿಯರ್ ನ ಸ್ಥಿತಿ, ಕ್ಲಚ್ ಪೆಡಲ್ ಮತ್ತು ಬ್ರೇಕ್ ಪೆಡಲ್ ನ ಸ್ಥಿತಿ, ಹೈಡ್ರಾಲಿಕ್ ಆಯಿಲ್ ನ ಪ್ರೆಶನ್, ಚಾಲಕನ ಹಾಜರಾತಿ, ಟ್ರ್ಯಾಕ್ಟರ್ ನ ವೇಗ, GPS ಗೆ ಅನುಸಾರವಾಗಿ ಅದರ ಸ್ಥಾನ, ಇಂತಹ ಅನೇಕ ಮಹತ್ವದ ಅಂಶಗಳಿಗೆ ಸೆನ್ಸರ್ ಅಳವಡಿಸಿ ಅದರ ಕುರಿತಾದ ನಿಖರವಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈ ಮಾಹಿತಿಯನ್ನು ಇಂಜಿನ್ ಅಥವಾ ಯಾವುದೇ ಮಹತ್ವದ ಯಂತ್ರಣೆಯನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಆದರೆ ಇದರ ಹೊರತಾಗಿ ಪ್ರಾಮುಖ್ಯವಾಗಿ ದೂರದಿಂದಲೇ ಪರಿಶೀಲನೆಯನ್ನು ಮಾಡಲು (ರಿಮೋಟ್ ಮಾನಿಟರಿಂಗ್ ಗೋಸ್ಕರ) ಮಾಡಲಾಗುತ್ತದೆ.
ಕೋಷ್ಟಕ ಕ್ರ. 2 : ಮಹಿಂದ್ರಾ ನೋವೋ ಟ್ರ್ಯಾಕ್ಟರ್ ಮತ್ತು ಡಿಜಿಸೆನ್ಸ್:
ಮಾರ್ಗಸೂಚಿಗಳ ತತ್ವಗಳಿಗೆ ಅನುಸಾರವಾಗಿ ಮೌಲ್ಯಮಾಪನ
2. ಸ್ಮಾರ್ಟ್ ಮತ್ತು ಕನೆಕ್ಟೆಡ್ ಟ್ರ್ಯಾಕ್ಟರ್
ಪ್ರತಿಯೊಂದು ಟ್ರ್ಯಾಕ್ಟರ್ ನಲ್ಲಿ ಒಂದು ವಯರ್ ಲೆಸ್ ಸಂದೇಶ ವಾಹಕ (ಟೆಲಿಮ್ಯಾಟಿಕ್ ಗೇಟ್ ವೆ) ಇರುತ್ತದೆ. ಈ ಟೆಲಿಮ್ಯಾಟಿಕ್ ಗೇಟ್ ಯಿಂದ ಲಭಿಸಿರುವ ಮಾಹಿತಿಯನ್ನು ಸಿಮ್ ಕಾರ್ಡ್ ನ ಮಾಧ್ಯಮದಿಂದ ದೂರದಲ್ಲಿರುವ ಮಹಿಂದ್ರಾ ಕಂಪನಿಯ ಕೇಂದ್ರೀಯ ಸರ್ವರ್ ಗೆ ಕಳುಹಿಸುತ್ತದೆ. ಅದೇ ಸಮಯದಲ್ಲಿ ಡಿಜಿಸೆನ್ಸ್ ಈ ಎಪ್ ನ ಮಾಧ್ಯಮದಿಂದ ಟ್ರ್ಯಾಕ್ಟರ್ ನ ಬಳಕೆಗಾರರು (ಮಾಲಿಕರು, ಚಾಲಕರು), ವಿತರಕರು ಮತ್ತು ಮಹಿಂದ್ರಾ ಕಂಪನಿಯ ತಾಂತ್ರಿಕ ಕೆಲಸವನ್ನು ನಿರ್ವಹಿಸುವ ತಂಡ, ಹೀಗೆ ಎಲ್ಲ ಘಟಕಗಳನ್ನು ಜೋಡಿಸಲಾಗಿದೆ. ಇದರಿಂದಾಗಿ ಯಾವುದೇ ‘ನೋವೋ’ ಟ್ರ್ಯಾಕ್ಟರ್ ನ ಪರಿಪೂರ್ಣವಾದ ಮಾಹಿತಿಯು ಅದರೊಂದಿಗೆ ಸಂಬಂಧಪಟ್ಟ ವ್ಯಕ್ತಿಗಳಿಗೆ ಸಿಗುತ್ತದೆ.
3. ಮಾಹಿತಿಯ ಬಳಕೆ (ಡಿಜಿಸೆನ್ಸ್ ಎಪ್)
ಮೇಲೆ ಉಲ್ಲೇಖಿಸಲಾಗಿರುವ ಎಲ್ಲ ಮಾಹಿತಿ ಟ್ರ್ಯಾಕ್ಟರ್ ಮಾಲಿಕರಿಗೆ ಮತ್ತು ಅದರಲ್ಲಿ ಅಯ್ಕೆ ಮಾಡಲಾಗಿರುವ ಮಾಹಿತಿಯನ್ನು ಟ್ರ್ಯಾಕ್ಟರ್ ವಿತರಕರಿಗೆ ಮತ್ತು ಮಾರಾಟದ ನಂತರದ ಸೇವೆಯನ್ನು ಪೂರೈಸುವ ವ್ಯಕ್ತಿಯ ತನಕ ತಲುಪುತ್ತಿರುತ್ತದೆ. ಟ್ರ್ಯಾಕ್ಟರ್ ನ GPS ಸ್ಥಾನ ಮತ್ತು ಅದರ ಸ್ಥಿತಿ (ಆನ್/ ಆಫ್, ಸ್ಥಿರ/ ಪ್ರವಾಹದಲ್ಲಿ ಈ ರೀತಿಯಲ್ಲಿ) ತಿಳಿಯುವುದರಿಂದ ತಮ್ಮ ಟ್ರ್ಯಾಕ್ಟರ್ ಎಲ್ಲಿದೆ ಮತ್ತು ಅದನ್ನು ಯಾವ ರೀತಿಯಲ್ಲಿ ಬಳಸಲಾಗುತ್ತಿದೆ, ಎಂಬುದು ಮಾಲಿಕರಿಗೆ ತಿಳಿಯುತ್ತದೆ. ಜಿಯೊ ಫೇನ್ಸಿಂಗ್ ನಂತಹ ಸೌಲಭ್ಯದಿಂದಾಗಿ ನಿರ್ಧರಿಸಿರುವ ಪರಿಸರದ ಹೊರಗೆ ಟ್ರ್ಯಾಕ್ಟರ್ ತಲುಪಿದಲ್ಲಿ ಅದರ ಸೂಚನೆಯೂ ಮಾಲಿಕರಿಗೆ ಸಿಗುತ್ತದೆ. ಇಂಧನ, ಆಯಿಲ್ ಮುಂತಾದವುಗಳನ್ನು ಬದಲಾಯಿಸುವುದು, ಟ್ರ್ಯಾಕ್ಟರ್ ನ ನಿಯಮಿತವಾದ ಉಸ್ತುವಾರಿ ಇತ್ಯಾದಿ ಅಂಶಗಳ ಮುನ್ಸೂಚನೆಯನ್ನು ಮಾಲಿಕರಿಗೆ ಮತ್ತು ಸೇವೆಯನ್ನು ಪೂರೈಸುವವರಿಗೆ ನೀಡುತ್ತದೆ. ಈ ಎಲ್ಲ ಮೊಬೈಲ್ ಸೆಟ್ ನಲ್ಲಿರುವ ಸುಲಭವಾದ ಡಿಜಿಸೆನ್ಸ್ ಎಪ್ ನಿಂದ ಸಾಧ್ಯವಾಗುವುದರಿಂದ ಅಲ್ಪಶಿಕ್ಷಿತರಾದ ಅಥವಾ ನಿರಕ್ಷರಸ್ಥರಾದ ಗ್ರಾಹಕರಿಗೂ ತಮ್ಮ ಟ್ರ್ಯಾಕ್ಟರ್ ನ ಉಸ್ತುವಾರಿಯನ್ನು ಎಂದೂ, ಎಲ್ಲಿಂದಲೂ ಮಾಡುವುದು ಸಾಧ್ಯವಾಗಿದೆ.
4. ವ್ಯಾವಸಾಯಿಕ ಪರಿಣಾಮಗಳು
ಸ್ಮಾರ್ಟ್ ನೋವೋ ಟ್ರ್ಯಾಕ್ಟರ್ ಮತ್ತು ಡಿಜಿಸೆನ್ಸ್ ಎಪ್ ನಿಂದಾಗಿ ಮಹಿಂದ್ರಾಗೋಸ್ಕರ ಟ್ರ್ಯಾಕ್ಟರ್ ಇದು ಕೇವಲ ಮಾರಾಟಕ್ಕೆ ಯೋಗ್ಯವಾದ ವಸ್ತುವಾಗಿರದೇ, ಅದನ್ನು ಇನ್ನಿತರ ಮಾಧ್ಯಮಗಳಿಂದಲೂ ಗ್ರಾಹಕರ ತನಕ ತಲುಪಿಸಲಾಗುತ್ತದೆ. ಇದರ ಕುರಿತಾಗಿ ಮಹತ್ವದ ಉದಾಹರಣೆಯೆಂದರೆ, ‘ಟಿನ್ಗೋ’ ಇದು ಬೇಡಿಕೆಗೆ ಅನುಸಾರವಾಗಿ ಟ್ರ್ಯಾಕ್ಟರ್ ಬಾಡಿಗೆಯಲ್ಲಿ ಪೂರೈಸುವ ಮಹಿಂದ್ರಾ ಇವರ ಹೊಸ ಸೇವೆಯಾಗಿದೆ. ಈ ಸೇವೆಯ ಮೂಲಕ ಗ್ರಾಹಕರು ಬೇಕಾದಷ್ಟು ದಿನ ಟ್ರ್ಯಾಕ್ಟರ್, ಸಾಮಗ್ರಿಗಳು ಮತ್ತು ಚಾಲಕರನ್ನು ಬಾಡಿಗೆಯಲ್ಲಿ ಪಡೆದು ಬಳಸಬಲ್ಲರು. ಈ ವ್ಯವಸ್ಥೆಯನ್ನು ಚಿಕ್ಕ ಹಿಡುವಳಿದಾರರಾದ ಕೃಷಿಕರು ಮತ್ತು ಮಹಿಂದ್ರಾ ಇವರಿಬ್ಬರಿಗೂ ಲಾಭಕಾರಿಯಾಗಿದೆ. ಬಾಡಿಗೆಯಲ್ಲಿ ಬಳಸಲು ನೀಡಿರುವ ಟ್ರ್ಯಾಕ್ಟರ್ ನ ಉಸ್ತುವಾರಿಯನ್ನು ದೂರದಿಂದಲೇ ಮಾಡುವುದು, ಕೇವಲ ಟೆಲಿಮೇಟಿಕ್ಸ್ ನಿಂದಾಗಿಯೇ ಸಾಧ್ಯವಾಗಿದೆ. ಈ ಟ್ರಿನಗೋ ಸೇವೆಯ ಹೊರತಾಗಿ, ಖರೀದಿಸುವ ಟ್ರ್ಯಾಕ್ಟರ್ ಗೋಸ್ಕರವೂ ಡಿಜಿಸೆನ್ಸ್ ಉಪಯುಕ್ತವಾಗಿದೆ. ಟ್ರ್ಯಾಕ್ಟರ್ ಎಲ್ಲಿದೆ ಮತ್ತು ಅದನ್ನು ಹೇಗೆ ಬಳಸಲಾಗಿದೆ ಇದನ್ನು ನೋಡುವುದು ಸಾಧ್ಯವಾಗಿದ್ದರಿಂದ ಒಂದಕ್ಕಿಂತ ಹೆಚ್ಚು ಟ್ರ್ಯಾಕ್ಟರ್ ಖರೀದಿಸಿ ಅವುಗಳನ್ನು ಇನ್ನಿತರರಿಗೆ ಬಾಡಿಗೆಯಲ್ಲಿ ನೀಡುವುದು ಸಾಧ್ಯವಾಯಿತು. ಇದರಿಂದಾಗಿ ಕೃಷಿಗೋಸ್ಕರವಲ್ಲದೇ, ಕಟ್ಟಡಗಳ ನಿರ್ಮಾಣ, ಕಾರ್ಖಾನೆಗಳು, ಸರಕು ಸಾಗಾಣಿಕೆ ಇಂತಹ ಕಡೆಗಳಲ್ಲಿಯೂ ಈ ಟ್ರ್ಯಾಕ್ಟರ್ ನ್ನು ಬಾಡಿಗೆಯಲ್ಲಿ ಬೃಹತ್ ಪ್ರಮಾಣದಲ್ಲಿ ಬಳಸಲಾಗುತ್ತಿದೆ. (ಚಿತ್ರ ಕ್ರ. 2).
ಮೂರನೆಯದಾಗಿ ಉಲ್ಲೇಖನೀಯ ಅಂಶವೆಂದರೆ ಡಿಜಿಸೆನ್ಸ್ ಈ ಎಪ್ ಮಹಿಂದ್ರಾ ಇವರು ಕೇವಲ ಟ್ರ್ಯಾಕ್ಟರ್ ಗೆ ಮಾತ್ರವಲ್ಲದೇ, ಅದನ್ನು ಕಾರ್ ಮತ್ತು ಟ್ರಕ್ ಗಳಿಗೋಸ್ಕರವೂ ಅಭಿವೃದ್ಧಿ ಪಡಿಸಿದ್ದಾರೆ. ಎಲ್ಲ ರೀತಿಯ ವಾಹನಗಳನ್ನು ಒಂದೇ ಎಪ್ ನಿಂದ ನಿಯಂತ್ರಿಸುವುದು ಸಾಧ್ಯವಾಗಿದೆ. ಒಂದೇ ವಿಧದ ವಾಹನ ಕ್ಷೇತ್ರದಲ್ಲಿ ಮಾಡಲಾಗಿರುವ ಸುಧಾರಣೆಗಳು ಮತ್ತು ಹೊಸ ತಂತ್ರಜ್ಞಾನದ ಅನುಕರಣೆಯನ್ನು ಮಾಡುವುದು ಇನ್ನಿತರ ವಾಹನ ಕ್ಷೇತ್ರದಲ್ಲಿ ಮಾಡುವುದು ಮಹಿಂದ್ರಾ ಇವರಿಗೆ ಸುಲಭ ಸಾಧ್ಯವಾಯಿತು. ಇದೇ ಇದರಿಂದ ಲಭಿಸಿದ ಲಾಭವೆಂದು ಹೇಳಬಹುದು. IoT ಮತ್ತು ಟೆಲಿಮೆಟಿಕ್ ಈ ತಂತ್ರಜ್ಞಾನದ ಬಳಕೆಯಿಂದಾಗಿ ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವು ಕಾಲೂರಿವೆ ಮತ್ತು ಈ ತಂತ್ರವು ಭವಿಷ್ಯತ್ಕಾಲದಲ್ಲಿ ಹೊಸ ಕ್ರಾಂತಿಯನ್ನು ಮಾಡಲಿದೆ, ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಈ ಎರಡೂ ಉದಾಹರಣೆಗಳ ಸಮೀಕ್ಷೆಯಿಂದಾಗಿ ಅಂತಿಮವಾಗಿ ಇಂಡಸ್ಟ್ರಿ 4.0 ಇದರ ಮಾರ್ಗಸೂಚಿಗಳ ತತ್ವಗಳಿಗೆ ಅನುಸಾರವಾಗಿ ಚುಟುಕಾಗಿ ಮೌಲ್ಯಮಾಪನ ಮಾಡುವುದು ಒಳಿತು.
ಕೋಷ್ಟಕ ಕ್ರ. 1 ರಲ್ಲಿ ತೋರಿಸಿದಂತೆ ಕಿರ್ಲೋಸ್ಕರ್ IoT ಜನ್ ಸೆಟ್, ತಾಂತ್ರಿಕ ಅಂಶಗಳಲ್ಲಿ ಹೆಚ್ಚು ಮುನ್ನಡೆಯನ್ನು (ನಾಲ್ಕನೇ/ ಐದನೇ ಹಂತದಲ್ಲಿ) ಸಾಧಿಸಿದೆ. ಪ್ರಸ್ತುತ ಲಭ್ಯವಿರುವ ಸೇವೆ ಮತ್ತು ವ್ಯವಸಾಯದ ರೂಪರೇಖೆಗಳ ಅಂಶಗಳನ್ನು ಹೋಲಿಸಿದಲ್ಲಿ ಸೀಮಿತ ಪ್ರಮಾಣದಲ್ಲಿ ಮುನ್ನಡೆಯನ್ನು ಸಾಧಿಸಿದೆ ಎನ್ನಬಹುದು. ಇದನ್ನು ಹೋಲಿಸಿದಲ್ಲಿ ಮಹಿಂದ್ರಾ ‘ನೋವೋ’ ಟ್ರ್ಯಾಕ್ಟರ್ ಮತ್ತು ಅದರಲ್ಲಿರುವ ಡಿಜಿಸೆನ್ಸ್ ಸೌಲಭ್ಯದ ಅಭಿವೃದ್ಧಿಯೂ ವಿಭಿನ್ನವಾಗಿದೆ. (ಕೋಷ್ಟಕ ಕ್ರ. 2). ತಾಂತ್ರಿಕ ಅಂಶಗಳ ಕುರಿತು ಭಾರತೀಯ ಕೃಷಿ ಕ್ಷೇತ್ರಕ್ಕೆ ಅನುಸಾರವಾಗಿ ಸೀಮಿತ ಹಂತದ ತನಕ ಆವಶ್ಯಕವಷ್ಟೇ ಸುಧಾರಣೆಗಳನ್ನು ಮಾಡಲಾಗಿದ್ದರೂ ಕೂಡಾ ಸೇವೆ ಮತ್ತು ವ್ಯವಸಾಯದ ರೂಪರೇಖೆಗಳ ಕುರಿತು ಕಂಪನಿಯು ಆಕ್ರಮಣಕಾರಿಯಾದ ಹಂತವನ್ನು ತಲುಪಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಉತ್ಪಾದನಾ ಇಂಡಸ್ಟ್ರಿ 4.0 ನ ನಿಟ್ಟಿನಲ್ಲಿ ಆಧುನಿಕತೆಯನ್ನು ಪರಿಪೂರ್ಣವಾಗಿ ಅವಲಂಬಿಸಲು ತಾಂತ್ರಿಕ ಮತ್ತು ವ್ಯಾವಸಾಯಿಕ ಪದ್ಧತಿಯಲ್ಲಿ ಅಬಿವೃದ್ಧಿಯನ್ನು ಮಾಡುವುದು ಅತ್ಯಾವಶ್ಯಕವಾಗಿದೆ.
ಈ ರೀತಿಯಲ್ಲಿ IoT ತಂತ್ರವನ್ನು ಉತ್ಪಾದಿತ ವಸ್ತುಗಳಲ್ಲಿ ಮಾಡಿರುವ ಸೂಕ್ತ ರೀತಿಯ ಬಳಸುವುದನ್ನು ನಾವು ತಿಳಿದುಕೊಂಡೆವು. IoT ಗೆ ಆಧರಿಸಿರುವ ಸ್ಮಾರ್ಟ್ ಪ್ರಾಡಕ್ಟ್ ನಿಂದಾಗಿ ಆಯಾ ವ್ಯವಸಾಯದ ಕ್ಷೇತ್ರದಲ್ಲಿ ವ್ಯಾಪಕವಾದ ಬದಲಾವಣೆಗಳು ಆಗಬಲ್ಲವು ಮತ್ತು ಆ ವಸ್ತುಗಳ ಗ್ರಾಹಕರು (ಮಾಲಿಕರು ಮತ್ತು ನೇರವಾಗಿ ಬಳಕೆಗಾರರು), ವಿತರಕರು, ಸೇವೆಯನ್ನು ಪೂರೈಸುವವರು ಮತ್ತು ಉತ್ಪಾದಕರು ಈ ಚೈನ್ ನಲ್ಲಿರುವ ಎಲ್ಲರನ್ನೂ ಒಟ್ಟುಗೂಡಿಸುವ ಒಂದು ಅತ್ಯಾಧುನಿಕವಾದ ವ್ಯವಸ್ಥೆಯು ತಯಾರಾಗುತ್ತದೆ, ಎಂಬುದನ್ನು ನಾವು ಇಲ್ಲಿ ಗಮನಿಸಬಹುದು. ಕಿರ್ಲೋಸ್ಕರ್ ಮತ್ತು ಮಹಿಂದ್ರಾ ಇಂತಹ ಬೃಹತ್ ಭಾರತೀಯ ಕಂಪನಿಗಳು ತಮ್ಮ ಉತ್ಪಾದನೆಗಳನ್ನು ಈ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಇದು ಮಾತ್ರ ಯಾವುದೇ ಲಘು ಅಥವಾ ಮಧ್ಯಮ ಭಾರತೀಯ ಕೈಗಾರಿಕೋದ್ಯಮಿಗಳಿಗೆ ಸಾಧ್ಯವಿಲ್ಲದ ಕೆಲಸ. ತಂತಮ್ಮ ಉದ್ಯಮ ಕ್ಷೇತ್ರದ ಬೇಡಿಕೆಗಳನ್ನು ಗಮನದಲ್ಲಿಟ್ಟು ಕೊಂಡು ಅದಕ್ಕೆ ಅನುಸಾರವಾಗಿ ಉತ್ಪಾದನೆಗಳಲ್ಲಿ ಆವಶ್ಯಕವಿರುವ ಸುಧಾರಣೆಗಳನ್ನು ಮಾಡುವುದು, ಇದಕ್ಕೋಸ್ಕರ IoT ಯನ್ನು ಸೂಕ್ತ ರೀತಿಯಲ್ಲಿ ಬಳಸುವ ಯೋಜನೆಯನ್ನು ಹಮ್ಮಿಕೊಳ್ಳುವುದು ಮತ್ತು ಅದರಂತೆ ಹಂತಹಂತವಾಗಿ ಮುನ್ನಡೆಯನ್ನು ಸಾಧಿಸುವ ಆವಶ್ಯಕತೆ ಇದೆ.
ಮುಂದಿನ ಲೇಖನದಲ್ಲಿ ಇನ್ನಿತರ ವಿಷಯಗಳ ಕುರಿತಾದ ಸಮೀಕ್ಷೆಯನ್ನು ಮಾಡೋಣ ಮತ್ತು ಉತ್ಪಾದನೆಯ ಪ್ರಕ್ರಿಯೆಯ ಕುರಿತಾದ ಇಂತಹ ಹಲವಾರು ಯಶಸ್ಸನ್ನು ಪಡೆದಿರುವ ಭಾರತೀಯ ಉದಾಹರಣೆಗಳನ್ನು ನೋಡೋಣ.
ಹೃಷಿಕೇಶ್ ಬರ್ವೆ ಇವರು ಐ.ಐ.ಟಿ. ಮುಂಬಯಿಯಿಂದ ಇನ್ ಸ್ಟ್ರುಮೆಂಟೇಶನ್, ಸಿಸ್ಟಮ್ ಮತ್ತು ಕಂಟ್ರೋಲ್ ಇದರಲ್ಲಿ ಎಮ್.ಟೆಕ್. ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಕಂಟ್ರೋಲ್ ಸಿಸ್ಟಮ್, ಆಟೊಮೇಶನ್, ಮ್ಯಾನ್ಯುಫ್ಯಾಕ್ಚರಿಂಗ್ ಸಿಸ್ಟಮ್ ಹಾಗೆಯೇ ಎನರ್ಜಿ ಮ್ಯಾನೆಜ್ ಮೆಂಟ್ ಇಂತಹ ಕ್ಷೇತ್ರಗಳೊಂದಿಗೆ ಸಂಬಂಧಿಸಿರುವ ಸಂಶೋಧನೆ ಮತ್ತು ಪ್ರೊಡಕ್ಷನ್ ನಲ್ಲಿ ಕೆಲಸ ನಿರ್ವಹಿಸಿರುವ 12 ವರ್ಷಗಳ ಕಾಲಾವಧಿಯ ಅನುಭವವನ್ನು ಹೊಂದಿದ್ದಾರೆ.
7875393889