ಮಹತ್ವದ ಆರ್ಥಿಕ ವರದಿಗಳು

@@NEWS_SUBHEADLINE_BLOCK@@

Lohkarya - Udyam Prakashan    22-Jul-2021   
Total Views |


ನಾವು ಟ್ಯಾಲಿಯಿಂದ ಲಭಿಸಬಲ್ಲ ಮಹತ್ವದ ಆರ್ಥಿಕ ವರದಿಗಳ (ರಿಪೋರ್ಟ್) ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳಲಿದ್ದೇವೆ. ಎಲ್ಲಕ್ಕಿಂತಲೂ ಮಹತ್ವವಾಗಿರುವ ಫೈನಲ್ ಅಕೌಂಟ್ಸ್ ನಿಂದ ಅಂದರೆ ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟದ ಅಕೌಂಟ್ ಈ ಎರಡೂ ವರದಿಗಳಿಂದ ಪ್ರಾರಂಭಿಸಲಿದ್ದೇವೆ.

ವ್ಯವಹಾರದಲ್ಲಿ ಲಾಭ ಮತ್ತು ನಷ್ಟ, ಹಾಗೆಯೇ ವ್ಯವಹಾರದಲ್ಲಿ ಆಸ್ತಿಪಾಸ್ತಿಗಳು ಮತ್ತು ಮರುಪಾವತಿ ಇವುಗಳ ಕಾಲಕ್ಕೆ ತಕ್ಕಂತೆ ಇರುವ ಸ್ಥಿತಿಯನ್ನು ನಿಗದಿತ ಸಮಯದಲ್ಲಿ ತಿಳಿದುಕೊಂಡು ಲೆಕ್ಕಾಚಾರವನ್ನು ಇಡಲು ಒಂದು ಹಣಕಾಸು ವರ್ಷವನ್ನು ನಿಗದಿಸಲಾಗುತ್ತದೆ ಮತ್ತು ಈ ರೀತಿಯ ಲೆಕ್ಕಾಚಾರವನ್ನು ಆಧಾರವಾಗಿಟ್ಟುಕೊಂಡು ವರ್ಷದ ಕೊನೆಯಲ್ಲಿ ಲಾಭ-ನಷ್ಟದ ವರದಿ ಮತ್ತು ಬ್ಯಾಲೆನ್ಸ್ ಶೀಟ್ ಈ ಎರಡೂ ಮಹತ್ವದ ಹಣಕಾಸು ವರದಿಗಳನ್ನು, ಫೈನಲ್ ಅಕೌಂಟ್ ಎಂಬುದಾಗಿ ಹೇಳಲಾಗುತ್ತದೆ ಮತ್ತು ತಯಾರಿಸಲಾಗುತ್ತದೆ, ಈ ವಿಚಾರಗಳನ್ನು ಲೇಖಮಾಲೆಯ ಈ ಹಿಂದಿನ ಭಾಗಗಳಲ್ಲಿ ನಾವು ತಿಳಿದುಕೊಂಡೆವು. ಅಂದರೆ ಟ್ಯಾಲಿ ಅಥವಾ ಇನ್ನಿತರ ಅನೇಕ ಅಕೌಂಟಿಂಗ್ ಸಾಫ್ಟ್ ವೇರ್ ಆನ್ ಲೈನ್ ಪದ್ಧತಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ ಯಾವುದೇ ಹಣಕಾಸು ವ್ಯವಹಾರಗಳ ವೌಚರ್ ಗಳ ಎಂಟ್ರಿ ಮಾಡಿದಲ್ಲಿ, ತಕ್ಷಣವೇ ಆಯಾ ವ್ಯವಹಾರ ಪೂರ್ತಿಯಾಗುವ ತನಕದ ಬ್ಯಾಲೆನ್ಸ್ ಶೀಟ್ ಮತ್ತು ಲಾಭ-ನಷ್ಟ ಅಕೌಂಟ್ ಬಳಕೆಗಾರರಿಗೆ ತಕ್ಷಣ ಲಭಿಸಬಲ್ಲವು. ಇದರಿಂದಾಗಿ ಆಯಾ ದಿನವೇ ಅಥವಾ ಪ್ರತಿ ತಿಂಗಳ ಕೊನೆಯ ದಿನಾಂಕದಂದು ಅಥವಾ ಪ್ರತಿ ಮೂರು ತಿಂಗಳ ಕೊನೆಯಲ್ಲಿ, ಹೀಗೆ ಅಂತಿಮವಾದ ಅಕೌಂಟ್ ತೆಗೆಯುವುದು ಪ್ರಸ್ತುತ ಎಲ್ಲ ಉದ್ಯಮಗಳಲ್ಲಿ ಅಭ್ಯಾಸವಾಗಿದೆ. ಈ ರೀತಿಯ ಮಹತ್ವಪೂರ್ಣವಾದ ವರದಿಗಳು ಎಷ್ಟು ಸೂಕ್ತ ಸಮಯದಲ್ಲಿ ಮತ್ತು ರಿಯಲ್ ಟೈಮ್ ಬೆಸಿಸ್ ನಲ್ಲಿ ಲಭಿಸಬಲ್ಲವೋ, ಅಷ್ಟೇ ಅದಕ್ಕೆ ಆಧಾರವಾಗಿ ಹಣಕಾಸಿನ ಕುರಿತಾದ ನಿರ್ಧಾರಗಳನ್ನು ಪಡೆಯಲು ಉದ್ಯಮಿಗಳು ಅದನ್ನು ಉಪಯೋಗಿಸಬಲ್ಲರು. ‘ಎ ಸ್ಟಿಚ್ ಇನ್ ಟೈಮ್ ಸೆವ್ಜ್ ನೈನ್’ ಈ ಆಂಗ್ಲ ಭಾಷೆಯ ವಾಕ್ಯವು ಎಲ್ಲರಿಗೂ ತಿಳಿದ ಅಂಶವಾಗಿದೆ. ಆದ್ದರಿಂದಲೇ ವರ್ಷದ ಕೊನೆಯಲ್ಲಿ ತಯಾರಿಸಲಾಗುವ ಬ್ಯಾಲೆನ್ಸ್ ಶೀಟ್ ಮತ್ತು ಲಾಭ-ನಷ್ಟ ಅಕೌಂಟ್ ನ ವರದಿಯನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಆದಾಯ ತೆರಿಗೆ ಹಾಗೆಯೇ ಇನ್ನಿತರ ತೆರಿಗೆ ಮತ್ತು ಕಾನೂನುಗಳಿಗೋಸ್ಕರ ತುಂಬಿಸಬೇಕಾಗಿರುವ ರಿಟರ್ನ್ ಗಳನ್ನು ತಯಾರಿಸಲು ಪ್ರಮುಖವಾಗಿ ಉಪಯುಕ್ತವಾಗಿದೆ. ವ್ಯವಸ್ಥಾಪನೆಯ ಉಪಯೋಗಕ್ಕೋಸ್ಕರ ಈ ವರದಿಯನ್ನು ಪ್ರಸ್ತುತ ವರ್ಷದಲ್ಲಿಯೇ ತೆಗೆಯಲಾಗುತ್ತದೆ ಮತ್ತು ಅದನ್ನು ಆಧರಿಸಿ ನಿರ್ಧಾರವನ್ನು ಮಾಡಲಾಗುತ್ತದೆ.

ಉದ್ಯಮದ ಯಾವುದೇ ತಾರೀಕಿನ ಆಸ್ತಿಪಾಸ್ತಿ ಮತ್ತು ಮರುಪಾವತಿ ಇವುಗಳ ಸ್ಥಿತಿಯು ಹೇಗಿದೆ, ಎಂಬುದನ್ನು ಬ್ಯಾಲೆನ್ಸ್ ಶೀಟ್ ತೋರಿಸುತ್ತದೆ. ಆದರೆ ಈ ಸ್ಥಿತಿ ಉಂಟಾಗಲು ಈ ಹಿಂದೆ ಆಗಿರುವ ಲಾಭ ಅಥವಾ ನಷ್ಟಕ್ಕೆ ಕಾರಣವಾದ ಸ್ಥಿತಿಯನ್ನು ಲಾಭ-ನಷ್ಟ ವರದಿಯು ತೋರಿಸುತ್ತದೆ. ಬ್ಯಾಲೆನ್ಸ್ ಶೀಟ್ ಒಂದು ನಿರ್ದಿಷ್ಟ ಕಾಲಾವಧಿಯ ಆಸ್ತಿಪಾಸ್ತಿ ಮತ್ತು ಪಾವತಿಗಳ ಸ್ಥಿತಿಯನ್ನು ತೋರಿಸಬಲ್ಲ ವರದಿಯಾಗಿರುತ್ತದೆ. ಆದರೆ ಲಾಭ – ನಷ್ಟದ ವರದಿಯು ಯಾವುದೇ ವಿಡಿಯೋದಂತೆ ಲಾಭ-ನಷ್ಟಕ್ಕೆ ವರ್ಷವಿಡೀ ಕಾರಣವಾಗಿರುವ ಅಂಶಗಳ ಪ್ರವಾಹವನ್ನು ತೋರಿಸುತ್ತದೆ. ತಪ್ಪಾಗಿರುವ ಬ್ಯಾಲೆನ್ಸ್ ಶೀಟ್ ಯಾವುದೇ ನಿರ್ದಿಷ್ಟ ದಿನಾಂಕದ ಸ್ಥಿತಿಯನ್ನು ತೋರಿಸುತ್ತದೆ. ಅದರ ಶೀರ್ಷಿಕೆಯು ‘xxx ದಿನಾಂಕದ ಬ್ಯಾಲೆನ್ಸ್ ಶೀಟ್’ ಆಗಿರುತ್ತದೆ. ಲಾಭ-ನಷ್ಟದ ವರದಿಯು ಯಾವುದೊಂದು ಲೆಜರ್ ಅಕೌಂಟ್ ನಂತೆ ವಿಶಿಷ್ಟ ಕಾಲಾವಧಿಯಲ್ಲಿ ಬೇರೆಬೇರೆ ಕಾರಣಗಳಿಂದಾಗಿ ಎಷ್ಟು ಆದಾಯವು ಸಿಕ್ಕಿದೆ ಮತ್ತು ಅದನ್ನು ಪಡೆಯಲು ವಿವಿಧ ಅಂಶಗಳಿಗೆ ಎಷ್ಟು ಖರ್ಚಾಗಿದೆ ಎಂಬುದನ್ನೂ ತೋರಿಸುತ್ತದೆ. ಆದ್ದರಿಂದಲೇ ಅದರ ಶೀರ್ಷಿಕೆಯನ್ನು ‘xxx ವರ್ಷ, ‘xxx ತಿಂಗಳು, ‘xxx ತ್ರೈಮಾಸಿಕ ಅಥವಾ ಇನ್ನು ಯಾವುದೇ ಕಾಲಾವಧಿಗೋಸ್ಕರದ ಲಾಭ-ನಷ್ಟದ ವರದಿ ಎಂಬುದಾಗಿ ಬರೆಯಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಲಾಭ-ನಷ್ಟದ ವರದಿಗೋಸ್ಕರ ಪ್ರಾಫಿಟ್ ಎಂಡ್ ಲಾಸ್ ಅಕೌಂಟ್ ಎಂಬ ಸಮರ್ಪಕವಾದ ಶಬ್ದವನ್ನು ಬಳಸಲಾಗುತ್ತದೆ. ಅಕೌಂಟ್ ಆಗಿರುವುದರಿಂದ ಲಾಭ-ನಷ್ಟದ ವರದಿಯು ನಿರ್ಧಾರಿತ ಕಾಲಾವಧಿಗೋಸ್ಕರ ಇರುತ್ತದೆ. ಆದರೆ ಬ್ಯಾಲೆನ್ಸ್ ಶೀಟ್ ನಲ್ಲಿ ಆಸ್ತಿಪಾಸ್ತಿ ಮತ್ತು ಪಾವತಿಸುವ ನಿಗದಿತ ದಿನಾಂಕಕ್ಕೆ ಇರುವ ಅಂಕೆ-ಸಂಖ್ಯೆಗಳನ್ನು ತೋರಿಸಲಾಗುವುದರಿಂದ ಅದು ಮಾತ್ರ ಆ ದಿನಾಂಕಕ್ಕೆ ಸೀಮಿತವಾಗಿರುತ್ತದೆ.

ಈ ಹಿಂದಿನಿಂದಲೂ ನಡೆಯುತ್ತಿರುವ ಪದ್ಧತಿಗೆ ಅನುಸಾರವಾಗಿ ಫೈನಲ್ ಅಕೌಂಟ್ ಆಂಗ್ಲ ‘T’ ಈ ಅಕ್ಷರದ ಆಕಾರದಂತಿರುವ ಫಾರ್ಮೆಟ್ ನಲ್ಲಿ ತಯಾರಿಸಲಾಗುತ್ತದೆ. ಬ್ಯಾಲೆನ್ಸ್ ಶೀಟ್ ನಲ್ಲಿ ಈ ಫಾರ್ಮೆಟ್ ನಲ್ಲಿ ಎಡ ಬದಿಯಲ್ಲಿ ವ್ಯವಹಾರದ ಎಲ್ಲ ಲಯಾಬಿಲಿಟೀಜ್ ಗಳು ಇರುತ್ತದೆ. ಹಾಗೆಯೇ ಬಲ ಬದಿಯಲ್ಲಿ ಎಲ್ಲ ಎಸೆಟ್ (ಆಸ್ತಿಪಾಸ್ತಿ) ತೋರಿಸಲಾಗುತ್ತದೆ. ಲಾಭ-ನಷ್ಟ ವರದಿಯ ಎಡ ಬದಿಯಲ್ಲಿ ವ್ಯವಹಾರದ ಎಲ್ಲ ಖರ್ಚುಗಳಿರುತ್ತವೆ, ಹಾಗೆಯೇ ಬಲ ಬದಿಯಲ್ಲಿ ಎಲ್ಲ ವಿಧದ ಆದಾಯದ ನೊಂದಣಿಗಳನ್ನು ಮಾಡಲಾಗಿರುತ್ತದೆ. ಅಡ್ಡಕ್ಕೆ T ಫಾರ್ಮ್ ನಲ್ಲಿ ಫೈನಲ್ ಅಕೌಂಟ್ ಗಳನ್ನು ಯಾವ ರೀತಿಯಲ್ಲಿ ಮಾಡಲಾಗುತ್ತದೆಯೋ, ಹಾಗೆಯೇ ಅದನ್ನು ಬೇರೆಯೇ ರೀತಿಯಲ್ಲಿ ವರ್ಟಿಕಲ್ ಫಾರ್ಮೇಟ್ ನಲ್ಲಿಯೂ ಬರೆಯಬಹುದು. ಪ್ರಸ್ತುತ ವರ್ಟಿಕಲ್ ಫಾರ್ಮೆಟ್ ಪ್ರಚಲಿತವಾಗಿದೆ. ಕಂಪನಿಗಳ ಕಾನೂನು ಪ್ರಕಾರ ಫೈನಲ್ ಅಕೌಂಟ್ ಮತ್ತು ಆಡಿಟ್ ವರದಿಯಲ್ಲಿ ಯಾವ ಫಾರ್ಮೇಟ್ ನಲ್ಲಿ ಯಾವ ರೀತಿಯ ವರ್ಗೀಕರಣವನ್ನು ಮಾಡಿ, ಯಾವ ಮಾಹಿತಿಯನ್ನು ಯಾವ ರೀತಿಯಲ್ಲಿ ನೀಡಬೇಕು ಈ ಕುರಿತು ಕಾನೂನು ಪ್ರಕಾರದ ವ್ಯವಸ್ಥೆಯನ್ನು ಮಾಡಿರಲಾಗಿರುತ್ತದೆ. ಇದರಿಂದಾಗಿ ಕಂಪನಿಗಳ ಹಣಕಾಸು ವರದಿ ಒಂದು ವಿಶಿಷ್ಟ ಪಾರ್ಮೇಟ್ ನಲ್ಲಿಯೇ ತಯಾರಿಸಲಾಗುತ್ತದೆ. ಪ್ರಸ್ತುತ ಬರವಣಿಗೆಯ ಪದ್ಧತಿಗೆ ಅನುಸಾರವಾಗಿ ಕಂಪನಿಗಳ ಕಾನೂನು ಪ್ರಕಾರ ಸೂಚಿಸಿರುವ ಫೈನಲ್ ಅಕೌಂಟ್ ನ ಫಾರ್ಮೆಟ್ ಇದು ಕೂಡಾ ವರ್ಟಿಕಲ್ ನಲ್ಲಿಯೇ ಇರುತ್ತದೆ.

ವರ್ಟಿಕಲ್ ಪಾರ್ಮೆಟ್ ನಲ್ಲಿ ಫೈನಲ್ ಅಕೌಂಟ್ ನಲ್ಲಿ ವರ್ಟಿಕಲಿ ಎರಡು ಭಾಗಗಳಾಗಿರುತ್ತವೆ ಮತ್ತು ಈ ಬ್ಯಾಲೆನ್ಸ್ ಶೀಟ್ ನಲ್ಲಿ ಮೊದಲ ವರ್ಟಿಕಲ್ ಭಾಗದಲ್ಲಿ ವ್ಯವಹಾರದ ಎಲ್ಲ ಪಾವತಿಗಳನ್ನು ತೋರಿಸಲಾಗುತ್ತದೆ ಮತ್ತು ಕೊನೆಯಲ್ಲಿ ಮೊದಲ ಭಾಗದ ಅಂದರೆ ವ್ಯವಹಾರದ ಎಲ್ಲ ಪಾವತಿಗಳ ಮೊತ್ತವನ್ನು ತೋರಿಸಲಾಗಿರುತ್ತದೆ. ಬ್ಯಾಲೆನ್ಸ್ ಶೀಟ್ ನ ನಂತರ ಬರುವ ಇನ್ನೊಂದು ವರ್ಟಿಕಲ್ ಭಾಗದಲ್ಲಿ ವ್ಯವಹಾರದ ಎಲ್ಲ ಆಸ್ತಿಪಾಸ್ತಿಗಳನ್ನು ತೋರಿಸಲಾಗುತ್ತದೆ ಮತ್ತು ಅಂತಿಮವಾಗಿ ಆ ಭಾಗದ ಅಂದರೆ ವ್ಯವಹಾರದ ಎಲ್ಲ ಅಸ್ತಿಪಾಸ್ತಿಗಳ ಒಟ್ಟು ಮೊತ್ತವನ್ನು ತೋರಿಸಲಾಗುತ್ತದೆ. ಲಾಭ-ನಷ್ಟದ ವರದಿಯ ಕುರಿತು ವರ್ಟಿಕಲ್ ಪದ್ಧತಿಯಲ್ಲಿ ಮೊದಲ ವರ್ಟಿಕಲ್ ಭಾಗದಲ್ಲಿ ಆದಾಯದ ಎಲ್ಲ ಮೂಲಗಳನ್ನು ಮತ್ತು ಅಂತಿಮವಾಗಿ ಲಭಿಸಿರುವ ಎಲ್ಲ ಆದಾಯದ ಮೊತ್ತವನ್ನು ತೋರಿಸಲಾಗುತ್ತದೆ. ಎರಡನೇ ವರ್ಟಿಕಲ್ ಭಾಗದಲ್ಲಿ ಎಲ್ಲ ಖರ್ಚಿನ ವಿವರಗಳನ್ನು ಮತ್ತು ಕೊನೆಯಲ್ಲಿ ಮಾಡಿರುವ ಎಲ್ಲ ರೀತಿಯ ಖರ್ಚುಗಳ ಮೊತ್ತವನ್ನು ತೋರಿಸಲಾಗುತ್ತದೆ. ಅದರ ನಂತರ ಬರುವ ಭಾಗಗಳಲ್ಲಿ ಖರ್ಚನ್ನು ಕಳೆದು ಉಳಿದಿರುವ ಆದಾಯ ಅಂದರೆ ಲಾಭ ಮತ್ತು ಒಂದು ವೇಳೆ ಖರ್ಚಿನ ಮೊತ್ತವು ಹೆಚ್ಚು ಇದ್ದಲ್ಲಿ ಉಂಟಾಗಿರುವ ನಷ್ಟ ಈ ಕುರಿತು ಅನೇಕ ಶೀರ್ಷಿಕೆಗಳಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ.

ಫೈನಲ್ ಅಕೌಂಟ್ ನಲ್ಲಿ ಪ್ರಾರಂಭದಲ್ಲಿಯೇ ಶೀರ್ಷಿಕೆಯ ಒಂದು ಭಾಗವೆಂದು ಬರೆಯಲಾಗಿರುವುದು ಕಂಡುಬರುತ್ತದೆ. ಈ ಸೂಚಿಯಲ್ಲಿರುವ ಅಂಕೆ-ಸಂಖ್ಯೆಗಳನ್ನು ನಗದಿ ರೂಪಾಯಿ ಅಥವಾ ಸಂಕ್ಷಿಪ್ತವಾಗಿ ಸಾವಿರ, ಲಕ್ಷ ಅಥವಾ ಕೋಟಿ ಎಂಬುದಾಗಿ ಬರೆಯಲಾಗುತ್ತದೆ. ಇದು ತುಂಬಾ ಮಹತ್ವದ ಅಂಶವಾಗಿದೆ. ಇದನ್ನು ಗಮನಿಸದೇ ವರದಿಯನ್ನು ಓದಲು ಪ್ರಾರಂಭಿಸಿದಲ್ಲಿ ಅದನ್ನು ತಿಳಿದುಕೊಳ್ಳುವಲ್ಲಿ ತುಂಬಾ ಗೊಂದಲ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗೆಯೇ ಪೈನಲ್ ಅಕೌಂಟ್ ನಲ್ಲಿ ಚಾಲ್ತಿ ವರ್ಷದೊಂದಿಗೆ ಹಿಂದಿನ ವರ್ಷದ ಅಂಕೆ-ಸಂಖ್ಯೆಗಳನ್ನು ತೋರಿಸಲಾಗಿರುತ್ತದೆ. ಇವುಗಳನ್ನು ಪ್ರಸ್ತುತ ವರ್ಷದ ಅಂಕೆ-ಸಂಖ್ಯೆಗಳ ಸಂದರ್ಭವನ್ನು ಅರಿತು ಕೊಂಡಲ್ಲಿ ತುಂಬಾ ಹೆಚ್ಚು ಪ್ರಮಾಣದಲ್ಲಿ ಲಾಭಕಾರಿಯಾಗುತ್ತದೆ.

ಲೇಖಮಾಲೆಯಲ್ಲಿ ಈ ಹಿಂದಿನ ಅಂಕಣದಲ್ಲಿ ಅಕೌಂಟಿಂಗ್ ಮಾಡಲು ವ್ಯವಹಾರದಲ್ಲಿ ಸ್ವತಂತ್ರವಾದ ಅಸ್ತಿತ್ವವಿದೆ, ಎಂಬುದಾಗಿ ತಿಳಿಯಲಾಗುತ್ತದೆ. ಅದೇ ಸಮಯದಲ್ಲಿ ವ್ಯವಹಾರದಲ್ಲಿ ಸ್ವಂತದ್ದು ಎಂಬುದಾಗಿ ಏನೂ ಇರುವುದಿಲ್ಲ, ಎಂಬ ತತ್ವವನ್ನು ಅರಿತಿರಬೇಕು. ಇದರಿಂದಾಗಿ ಒಂದು ವೇಳೆ ವ್ಯವಹಾರದಲ್ಲಿ ಯಾವುದೇ ರೀತಿಯ ಆಸ್ತಿಪಾಸ್ತಿಗಳು ಇದ್ದಲ್ಲಿ ಅದನ್ನು ಪಡೆಯುವಲ್ಲಿ ವ್ಯವಹಾರಕ್ಕೆ ಅಷ್ಟೇ ಮೊತ್ತದ ಪಾವತಿಯೂ ನಿರ್ಮಾಣವಾಗುತ್ತದೆ. ಆದ್ದರಿಂದಲೇ ಯಾವಾಗಲೂ ವ್ಯವಹಾರದ ಎಲ್ಲ ಆಸ್ತಿಪಾಸ್ತಿಗಳ ಒಟ್ಟು ಮೊತ್ತಗಳು ಪಾವತಿಸಬೇಕಾಗಿರುವ ಒಟ್ಟು ಮೊತ್ತದಷ್ಟೇ ಇರುತ್ತದೆ. ಅದರಲ್ಲಿ ಯಾವುದೇ ರೀತಿಯ ವ್ಯತ್ಯಾಸ ಇರುವುದಿಲ್ಲ. ವರ್ಟಿಕಲ್ ಫಾರ್ಮೆಟ್ ನಲ್ಲಿ ಅದಕ್ಕೋಸ್ಕರವೇ ವ್ಯವಹಾರದಲ್ಲಿ ಎಲ್ಲಿಂದ ಅಥವಾ ಯಾರಿಂದ ಹಣವು ಬಂದಿದೆ, ಎಂಬುದನ್ನು ತೋರಿಸಲಾಗುತ್ತದೆ. ಕಾರಣ ಸಂಪನ್ಮೂಲಗಳ ಮೂಲ ಮೊದಲ ಭಾಗದಲ್ಲಿ ಇರುತ್ತವೆ ಮತ್ತು ಸಿಕ್ಕಿರುವ ಹಣವನ್ನು ಯಾವುದೇ ಸಂಪನ್ಮೂಲಗಳಲ್ಲಿ ಹೂಡಿರಲಾಗಿವೆ, ಅಂದರೆ ವ್ಯವಹಾರದ ಆಸ್ತಿಪಾಸ್ತಿಗಳು ಯಾವ ಮತ್ತು ಎಷ್ಟು ಮೊತ್ತದ್ದಾಗಿವೆ ಎಂಬುದನ್ನೂ ತೋರಿಸಲಾಗುತ್ತದೆ.

ವ್ಯವಹಾರವು ಯಾವ ಮಾಲಿಕತ್ವದ್ದಾಗಿದೆ, ಅವರಿಂದ ವ್ಯವಹಾರದಲ್ಲಿ ಹೂಡಿರುವ ಬಂಡವಾಳವನ್ನು ಮಾಲಿಕರು ವ್ಯವಹಾರದಲ್ಲಿ ಹೂಡಿರುವ ಬಂಡವಾಳವೆಂಬುದಾಗಿಯೇ ತಿಳಿಯಲಾಗುತ್ತದೆ. ಇದನ್ನು ವ್ಯವಹಾರದ ದೃಷ್ಟಿಯಲ್ಲಿ ವೀಕ್ಷಿಸಿದಲ್ಲಿ ವ್ಯವಹಾರದಲ್ಲಿ ಇದನ್ನು ಮಾಲಿಕರಿಗೆ ಮರುಪಾವತಿಸಬೇಕಾಗಿರುವ ಮೊತ್ತವಾಗಿರುತ್ತದೆ. ಅಂದರೆ ವ್ಯವಹಾರದಲ್ಲಿ ಯಾವ ಸಂಪನ್ಮೂಲಗಳನ್ನು ಬಳಸಲಾಗಿದೆಯೋ, ಅದರ ಮೂಲವನ್ನು ಮಾಲಿಕರಿಂದ ಲಭಿಸಿರುವ ಬಂಡವಾಳದವೆಂಬುದಾಗಿ ಸ್ವಲ್ಪ ಪ್ರಮಾಣದಲ್ಲಿ ಇರುತ್ತದೆ. ಉಳಿದಿರುವ ಮೂಲ ಹೊರಗಿನ ಸಂಸ್ಥೆ ಅಥವಾ ವ್ಯಕ್ತಿಗಳಿಂದ ವ್ಯವಹಾರಕ್ಕೋಸ್ಕರ ಸಾಲದ ರೂಪದಲ್ಲಿ ಸಿಕ್ಕಿರುವ ನಗದಿಯ ಸ್ಪರೂಪದಲ್ಲಿ ಇರುತ್ತದೆ. ವ್ಯವಹಾರದ ಮಾಲಿಕರು ವ್ಯವಸಾಯವನ್ನು ಮಾಡುತ್ತಾರೆ ಮತ್ತು ಇದರಿಂದಾಗಿ ವ್ಯವಸಾಯವನ್ನು ಮಾಡಿದ್ದರಿಂದ ಸಿಗುವ ಲಾಭ ಅಥವಾ ಆಗಿರುವ ನಷ್ಟ ಅದರ ಸಂಪೂರ್ಣ ಜವಾಬ್ದಾರಿಯು ಮಾಲಿಕರದ್ದೇ ಇರುತ್ತದೆ. ಆದ್ದರಿಂದಲೇ ಲಾಭ-ನಷ್ಟದ ವರದಿಯಲ್ಲಿ ಒಂದು ವೇಳೆ ಲಾಭವಾದಲ್ಲಿ ಅಷ್ಟು ಮೊತ್ತವು ವ್ಯವಹಾರದಲ್ಲಿ ಮಾಲಿಕರಿಗೆ ಮರುಪಾವತಿಸಬೇಕಾದ ಮೊತ್ತವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ನಷ್ಟವಾದಲ್ಲಿ ಅದು ಮಾಲಿಕರಿಂದಾಗಿಯೇ ಆಗಿದೆ, ಎಂಬುದಾಗಿ ತಿಳಿದು ಅಷ್ಟೇ ಮೊತ್ತವನ್ನು ವಸೂಲು ಮಾಡುವ ಅಧಿಕಾರವು ವ್ಯವಹಾರಕ್ಕೆ ಲಭಿಸುತ್ತದೆ. ಅರ್ಥಾತ್ ಆಗಿರುವ ನಷ್ಟವು ವ್ಯವಹಾರದ ನಿಟ್ಟಿನಲ್ಲಿ ವ್ಯವಹಾರಕ್ಕೋಸ್ಕರ ಮಾಲಿಕರಿಂದ ಬರುವ ಮೊತ್ತವಾಗಿರುತ್ತದೆ. ಇನ್ನಿತರ ರೀತಿಯಲ್ಲಿ ಬರಬೇಕಾಗಿರುವ ಮೊತ್ತಗಳು ಕೂಡಾ ವ್ಯವಹಾರದ ಅಸ್ತಿಪಾಸ್ತಿಗಳಾಗಿರುತ್ತವೆ. ಲಾಭ-ನಷ್ಟದ ವರದಿಯಂತೆ ಸಿಗುವ ಲಾಭ ಅಥವಾ ಉಂಟಾಗುವ ನಷ್ಟ, ಅದಕ್ಕೆ ಬ್ಯಾಲೆನ್ಸ್ ಶೀಟ್ ನಲ್ಲಿ ವರ್ಗಾವಣೆ ಮಾಡಲಾಗುತ್ತದೆ ಮತ್ತು ಆ ಮೊತ್ತವನ್ನು ಮಾಲಿಕರ ಬಂಡವಾಳದಲ್ಲಿ ಪಾವತಿಸುವಿಕೆ ಅಥವಾ ವಸೂಲಿ ಮಾಡುವುದು ಎಂಬುದಾಗಿ ತೋರಿಸಲಾಗುತ್ತದೆ.
ವ್ಯವಸಾಯವನ್ನು ಮಾಡಿದಾಗ ಆಗಿರುವ ಒಟ್ಟು ಲೆಕ್ಕಾಚಾರ ಅಂದರೆ ಲಾಭ ಅಥವಾ ನಷ್ಟ ಹಾಗೆಯೇ ಎಲ್ಲ ಆಸ್ತಿಪಾಸ್ತಿ ಮತ್ತು ಪಾವತಿಸುವಿಕೆಗಳ ಸ್ಥಿತಿ ಈ ರೀತಿಯ ಎಲ್ಲ ವಿವರಗಳ ಸೇರ್ಪಡೆಯಾಗುವುದರಿಂದ ಬ್ಯಾಲೆನ್ಸ್ ಶೀಟ್ ನಿಂದ ಅಕೌಂಟಿಂಗ್ ನಲ್ಲಿರುವ ಮೂಲಭೂತ ಸಮೀಕರಣವೆಂದರೆ, ‘ಆಸ್ತಿಪಾಸ್ತಿ = ಮಾಲಿಕರು ಹೂಡಿರುವ ಬಂಡವಾಳ + ಇನ್ನಿತರ ಮರು ಪಾವತಿಗಳು’ ಅಂದರೆ ಎಲ್ಲ ಆಸ್ತಿಪಾಸ್ತಿಗಳ ಒಟ್ಟು ಮೊತ್ತ, ಮಾಲಿಕರು ವ್ಯವಹಾರದಲ್ಲಿ ಹೂಡಿರುವ ಬಂಡವಾಳ ಮತ್ತು ಇನ್ನಿತರ ಪಾವತಿಸುವಿಕೆಗಳು ಇವುಗಳ ಒಟ್ಟು ಮೊತ್ತದಷ್ಟೇ ಇರುತ್ತದೆ, ಎಂಬುದು ಎಲ್ಲರಿಗೂ ತಿಳಿದಿರುವ ಅಂಶವಾಗಿದೆ. ಇದರಿಂದಾಗಿ ವ್ಯವಹಾರದಲ್ಲಿ ಬ್ಯಾಲೆನ್ಸ್ ಶೀಟ್ ಇದು ತುಂಬಾ ಮಹತ್ವದ್ದಾಗಿದೆ. ಮುಂದಿನ ಲೇಖನದಲ್ಲಿ ಫೈನಲ್ ಅಕೌಂಟ್ ನ ಇನ್ನಿತರ ಅಂಶಗಳ ಕುರಿತು ಚರ್ಚೆಯನ್ನು ಮಾಡಲಿದ್ದೇವೆ.

9822475611
[email protected]
ಮುಕುಂದ ಅಭ್ಯಂಕರ್ ಇವರು ಚಾರ್ಟರ್ಡ್ ಅಕೌಂಟಂಟ್ ಆಗಿದ್ದಾರೆ. ಕಳೆದ 30 ವರ್ಷಗಳ ಕಾಲಾವಧಿಯಲ್ಲಿ ಅವರು ಅನೇಕ ಕಂಪನಿಗಳ ಲೆಕ್ಕ ಪರಿಶೋಧನೆಯ (ಆಡಿಟ್) ಮತ್ತು ಹಣಕಾಸುಗಳ ಕುರಿತಾದ ಆಗುಹೋಗುಗಳ ವಿಶ್ಲೇಷಣೆಯ ಕೆಲಸವನ್ನು ಮಾಡುತ್ತಿದ್ದಾರೆ.

Key Words

Financial Management- ಆರ್ಥಿಕ ಯೋಜನೆ
Accounting Reports- ಅಕೌಂಟಿಂಗ್ ಕುರಿತಾದ ವರದಿಗಳು



@@AUTHORINFO_V1@@